news
stringlengths 297
35.5k
| class
int64 0
2
|
---|---|
ಬಾಕ್ಸಿಂಗ್: ಸರಿತಾ, ಮನೀಷಾ ಇಂದು ಕಣಕ್ಕೆ
ಬಾಕ್ಸಿಂಗ್: ಸರಿತಾ, ಮನೀಷಾ ಇಂದು ಕಣಕ್ಕೆ
ಪಿಟಿಐ
16 ನವೆಂಬರ್ 2018, 01:15 IST
Updated:
16 ನವೆಂಬರ್ 2018, 01:15 IST
ಅಕ್ಷರ ಗಾತ್ರ :
ಆ
ಆ
ನವದೆಹಲಿ: ಭಾರತದ ಎಲ್.ಸರಿತಾ ದೇವಿ ಮತ್ತು ಮನೀಷಾ ಮೌನ್ ಅವರು ಎಐಬಿಎ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಶುಕ್ರವಾರ ಕಣಕ್ಕೆ ಇಳಿಯುವರು. ಈ ಮೂಲಕ ಆತಿಥೇಯರು ಚಾಂಪಿಯನ್‌ಷಿಪ್‌ನಲ್ಲಿ ಅಭಿಯಾನ ಆರಂಭಿಸುವರು.
36 ವರ್ಷದ ಸರಿತಾ 60 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದು ಅವರಿಗೆ ಮೊದಲ ಸುತ್ತಿನಲ್ಲಿ ಬೈ ಲಭಿಸಿತ್ತು. ಎರಡನೇ ಸುತ್ತಿನಲ್ಲಿ ಅವರಿಗೆ ಸ್ವಿಟ್ಜರ್ಲೆಂಡ್‌ನ ಡಯಾನ ಸಾಂಡ್ರಾ ಬ್ರುಗರ್ ಎದುರಾಳಿ. 2006ರಲ್ಲಿ ಚಿನ್ನ ಗೆದ್ದಿದ್ದ ಸರಿತಾ ಅವರು ಪೋಲೆಂಡ್‌ನಲ್ಲಿ ಈ ವರ್ಷದ ಆರಂಭದಲ್ಲಿ ನಡೆದ ಇಂಡಿಯಾ ಓಪನ್ ಮತ್ತು ಸಿಲೆಸಿಯನ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಇಲ್ಲಿ ಅವರಿಗೆ ನಾಲ್ಕನೇ ಶ್ರೇಯಾಂಕ ಲಭಿಸಿದೆ.
20 ವರ್ಷದ ಮನೀಷಾ 54ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದಾರೆ. 2106ರಲ್ಲಿ ಅವರು ಕಂಚಿನ ಪದಕ ಗಳಿಸಿದ್ದರು. ಮೊದಲ ಬೌಟ್‌ನಲ್ಲಿ ಅವರು ಅಮೆರಿಕದ ಕ್ರಿಸ್ಟಿಯಾನ ಕ್ರೂಜ್ ವಿರುದ್ಧ ಸೆಣಸುವರು. | 2 |
ನೈಸರ್ಗಿಕ ಕಂಡೀಶನರ್ ಮನೆಯಂಗಳದ ದಾಸವಾಳ…
April 4, 2019
Facebook Twitter Google+ LinkedIn StumbleUpon Tumblr Pinterest Reddit VKontakte Odnoklassniki Pocket WhatsApp
ಬೆಂಗಳೂರು, ಏ.04:
ದಾಸವಾಳ ಅಂದರೆ ಬರೀ ಹೂವಿನ ಗಿಡವಲ್ಲ. ಬದಲಿಗೆ ದಾಸವಾಳವೂ ಒಂದು ಔಷಧ ಗಿಡವಾಗಿಯೂ ಪ್ರಸಿದ್ಧ. ಇದರ ಬೇರಿನಿಂದ ಹಿಡಿದು ಎಲೆ, ಹೂವು ಎಲ್ಲವೂ ಅಗಾಧ ಪ್ರಮಾಣದ ಔಷಧೀಯ ಗುಣ ಹೊಂದಿವೆ.
ಸಾಮಾನ್ಯ ರೋಗಗಳಿಂದ ಹಿಡಿದು ದೀರ್ಘಾವಧಿ ಕಾಯಿಲೆಯ ನಿವಾರಣೆಯವರೆಗೂ ಇದು ಸಹಕಾರಿ. ಕೂದಲು, ತ್ವಚೆಯ ಸಮಸ್ಯೆಗೆ ಇದು ರಾಮಬಾಣವೂ ಹೌದು.ಅದೇ ಕಾರಣದಿಂದ ಕೂದಲ ಸೌಂದರ್ಯ ಹಾಗೂ ಆರೋಗ್ಯ ಚಿಕಿತ್ಸೆಯಲ್ಲಿ ಇದರ ಬಳಕೆ ಹೆಚ್ಚು. ನೈಸರ್ಗಿಕ ಕಂಡೀಷನರ್ ನಂತೆ ದಾಸವಾಳವು ಕೂದಲಿಗೆ ಪ್ರಯೋಜನವನ್ನು ಉಂಟುಮಾಡುತ್ತದೆ. ತೆಂಗಿನ ಎಣ್ಣೆಗೆ ಸ್ವಲ್ಪ ದಾಸವಾಳದ ಎಲೆಗಳನ್ನು ಹಾಕಿ ಕುದಿಸಬೇಕು. ಎಣ್ಣೆ ತಣ್ಣಗಾದ ಬಳಿಕ ಇದಕ್ಕೆ ಒಂದೆರಡು ಚಮಚ ಕಡಲೆಹುಡಿಯನ್ನು ಬೆರೆಸಿ ಪೇಸ್ಟ್ ನಂತೆ ತಯಾರಿಸಿಕೊಳ್ಳಬೇಕು. ಈ ಪೇಸ್ಟ್ ಅನ್ನು ತಲೆಬುರುಡೆಗೆ ಹಚ್ಚಿ ಮೂವತ್ತು ನಿಮಿಷಗಳ ನಂತರ ಕೂದಲು ತೊಳೆದುಕೊಳ್ಳಬೇಕು.
ಕೂದಲಿನ ಬೆಳವಣಿಗೆಗೆ ಅತ್ಯುತ್ತಮವಾಗಿರುವ ದಾಸವಾಳದ ಎಣ್ಣೆಯಿಂದ ಕೂದಲಿಗೆ ನೈಸರ್ಗಿಕವಾದ ಕಪ್ಪು ಬಣ್ಣ ಸಿಗುವುದು ಮಾತ್ರವಲ್ಲದೇ ಕೂದಲಿಗೆ ಆದ್ರತೆಯೂ ನೀಡುತ್ತದೆ. ಮಾತ್ರವಲ್ಲ ಕೂದಲಿಗೆ ಉತ್ತಮವಾದ ಪೋಷಣೆಯೂ ಇದರಿಂದ ಸಿಗುವುದಲ್ಲದೇ ಕೂದಲಿನ ಕಾಂತಿಯೂ ಹೆಚ್ಚುತ್ತದೆ.
ನಿಯಮಿತವಾಗಿ ದಾಸವಾಳದ ಎಣ್ಣೆಯನ್ನು ಬಳಕೆ ಮಾಡುವುದರಿಂದ ಕೂದಲಿನ ಬುಡ ಧೃಡವಾಗುತ್ತದೆ. ಹೇರಳವಾಗಿ ಕೂದಲು ಉದುರುವುದು ಕೂಡ ಕಡಿಮೆಯಾಗುತ್ತದೆ.
ಅಕಾಲಿಕವಾಗಿ ಕೂದಲು ಬೆಳ್ಳಗಾಗುವುದನ್ನು ತಡೆಯುವ ಶಕ್ತಿ ದಾಸವಾಳ ಎಣ್ಣೆಗೆ ಇದೆ. ಅಷ್ಟು ಮಾತ್ರವಲ್ಲದೇ ಎಣ‍್ಣೆಯ ಹೊರತಾಗಿ ದಾಸವಾಳ ಹೂವು ಅತ್ಯುತ್ತಮ ಕಂಡೀಶನರ್ ಹೌದು. ನೈಸರ್ಗಿಕವಾದ ಕಂಡೀಶನರ್ ನಿಂದ ಕೂದಲು ಮೃದುವಾಗುತ್ತದೆ ಮತ್ತು ಇದರಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳಿಲ್ಲ. ಆದ್ದರಿಂದ ವಾರಕ್ಕೊಂದು ಬಾರಿಯಾದರೂ ದಾಸವಾಳ ಹೂವನ್ನು ಹಾಕಿ ಸ್ನಾನ ಮಾಡಿದರೆ ಕೂದಲಿಗೆ ಒಳ್ಳೆಯದು. ದಾಸವಾಳ ಹೂವಿನ ಎಣ್ಣೆಯನ್ನು ತಲೆಗೆ ಹಚ್ಚುವುದರಿಂದ ತಲೆ ಹೊಟ್ಟು ನಿವಾರಣೆಯಾಗುತ್ತದೆ.
ಹಿಂದಿನ ದಿನ ರಾತ್ರಿ ನೀರಿನಲ್ಲಿ ನೆನೆ ಹಾಕಿದ ಮೆಂತೆ ಕಾಳಿಗೆ ಸ್ವಲ್ಪ ಆಲೀವ್‌ಎಣ್ಣೆ ಸೇರಿಸಿ ಮಿಕ್ಸರ್‌ನಲ್ಲಿ ಹಾಕಿ ಪೇಸ್ಟ್ ತಯಾರಿಸಬೇಕು. ಹೀಗೆ ತಯಾರಿಸಿದ ಪೇಸ್ಟ್‌ಗೆ ಎರಡು ಚಮಚ ದಾಸವಾಳದ ಎಲೆಯ ಹುಡಿಯನ್ನು ಬೆರೆಸಿ ತಲೆಬುರುಡೆಗೆ ಹಚ್ಚಬೇಕು. ಅರ್ಧ ಗಂಟೆ ಬಿಟ್ಟು ತಣ್ಣೀರಿನಿಂದ ಕೂದಲನ್ನು ತೊಳೆದುಕೊಂಡರೆ ತಲೆ ಹೊಟ್ಟು ನಿವಾರಣೆಯಾಗುತ್ತದೆ ಹಾಗೂ ತಲೆ ತುರಿಕೆ ಇದ್ದರೂ ನಿವಾರಣೆಯಾಗುತ್ತದೆ.ಆರು ಚಮಚಗಳಷ್ಟು ದಾಸವಾಳದ ಎಣ್ಣೆಗೆ ಐದರಿಂದ ಆರು ಚಮಚ ನೆಲ್ಲಿಕಾಯಿ ಹುಡಿ, ಸ್ವಲ್ಪ ಲಿಂಬೆ ರಸವನ್ನು ಬೆರೆಸಿಕೊಂಡು ಮಿಶ್ರಣ ಮಾಡಿ ತಲೆಬುರುಡೆಗೆ ಹಚ್ಚಬೇಕು. ಇದರಿಂದ ಕೂದಲಿನ ಬೇರುಗಳು ಆರೋಗ್ಯವಾಗಿರುವುದು.
#balkaninews #hibiscusflower #hibiscusflowerusefull #hibiscusflowerimages ##hibiscusflowerfacepack
Tags | 1 |
‘ಆಲೂಗಡ್ಡೆ’ಯಿಂದ ಮುಖದ ಅಂದ ಹೆಚ್ಚುತ್ತೆ
19-02-2019 4:35PM IST / No Comments / Posted In: Beauty , Latest News
ಆಲೂಗಡ್ಡೆಯನ್ನು ಸೌಂದರ್ಯ ಪ್ರಸಾಧನವಾಗಿ ನಿತ್ಯ ಬಳಸಬಹುದು. ಯಾಕಂದ್ರೆ ಆಲೂಗಡ್ಡೆಯ ರಸ ನೈಸರ್ಗಿಕವಾಗಿ ಬಿಳಿ ಬಣ್ಣವನ್ನು ಉಂಟು ಮಾಡುವಂತಹ ಗುಣವನ್ನು ಹೊಂದಿದೆ. ಇದು ಚರ್ಮಕ್ಕೆ ಉತ್ತಮ ಬಣ್ಣವನ್ನು ಕೊಡುತ್ತದೆ.
ತ್ವಚೆ ಕಪ್ಪಾಗಿದ್ದರೆ : ಒಂದು ಆಲೂಗಡ್ಡೆಯನ್ನು ಚಿಕ್ಕದಾಗಿ ತುರಿದು, ಇದಕ್ಕೆ ಒಂದು ಚಮಚ ಮೊಸರು ಸೇರಿಸಿ ನುಣ್ಣಗೆ ಅರೆಯಬೇಕು. ಈ ಪೇಸ್ಟ್ ಅನ್ನು ಕಪ್ಪಾಗಿದ್ದ ಚರ್ಮದ ಮೇಲೆ ತೆಳುವಾಗಿ ಹೆಚ್ಚಿ ನಯವಾಗಿ ಮಸಾಜ್ ಮಾಡಬೇಕು. ಸುಮಾರು ಇಪ್ಪತ್ತು ನಿಮಿಷ ಹಾಗೆಯೇ ಬಿಡಬೇಕು. ಬಳಿಕ ಉಗುರು ಬೆಚ್ಚನೆಯ ನೀರಿನಿಂದ ತೊಳೆಯಬೇಕು.
ಒಣ ಚರ್ಮವಾಗಿದ್ದರೆ : ನಿತ್ಯ ಆಲೂಗಡ್ಡೆ ರಸವನ್ನು ಹಚ್ಚಿಕೊಳ್ಳುತ್ತಿದ್ದರೆ, ಚರ್ಮಕ್ಕೆ ಕಾಂತಿ ಬರುತ್ತದೆ. ಒಂದು ಆಲೂಗಡ್ಡೆಯನ್ನು ಚಿಕ್ಕದಾಗಿ ತುರಿದುಕೊಳ್ಳಬೇಕು. ಇದಕ್ಕೆ ಸ್ವಲ್ಪ ಲೋಳೆಸರದ ರಸವನ್ನು ಸೇರಿಸಿ ಚೆನ್ನಾಗಿ ಕಲೆಸಿಕೊಳ್ಳಬೇಕು. ಇದನ್ನು ನುಣ್ಣಗೆ ಅರೆದು ಮುಖಕ್ಕೆ ಹಚ್ಚಿಕೊಂಡು ನಲವತ್ತು ನಿಮಿಷ ಒಣಗಲು ಬಿಡಬೇಕು. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಬೇಕು.
ತ್ವಚೆ ಸುಟ್ಟಂತಾಗಿದ್ದರೆ : ಮಿಕ್ಸಿಗೆ ಆಲೂಗಡ್ಡೆ ಹಾಕಿ ಅದರ ರಸ ತೆಗೆಯಬೇಕು. ಈ ರಸವನ್ನು ಫ್ರಿಜ್ ನಲ್ಲಿ ಇರಿಸಬೇಕು. ಬಿಸಿಲಿನಿಂದ ಚರ್ಮ ಸುಟ್ಟಂತಾದಾಗ ಈ ರಸವನ್ನು ಚರ್ಮದ ಮೇಲೆ ಹಚ್ಚಿಕೊಂಡು ನಯವಾಗಿ ಮಸಾಜ್ ಮಾಡಬೇಕು. 15 ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆಯಬೇಕು. | 1 |
ಮಾಲ್ ಶೌಚಾಲಯಗಳು ಯಾಕೆ ಭಿನ್ನವಾಗಿರುತ್ತೆ ಗೊತ್ತಾ?
13-01-2019 6:47AM IST / No Comments / Posted In: Latest News , Special
ಮಾಲ್ ಗಳಿಗೆ ಸಾಮಾನ್ಯವಾಗಿ ಎಲ್ಲರೂ ಹೋಗಿರ್ತಾರೆ. ಅಲ್ಲಿಯ ಶೌಚಾಲಯವನ್ನೂ ಬಳಕೆ ಮಾಡಿರ್ತಾರೆ. ಮಾಲ್ ಗಳಲ್ಲಿ ಶೌಚಾಲಯಗಳು ವಿಭಿನ್ನವಾಗಿರುತ್ತವೆ. ಗೋಡೆಗಳು ಮಹಡಿಗೆ ಅಂಟಿಕೊಂಡಿರುವುದಿಲ್ಲ. ಮಹಡಿ ಮತ್ತು ಗೋಡೆ ಮಧ್ಯೆ ದೊಡ್ಡ ಗ್ಯಾಪ್ ಇರುತ್ತದೆ.
ಹಾಗೆ ಒಂದು ಶೌಚಾಲಯದಿಂದ ಇನ್ನೊಂದು ಶೌಚಾಲಯದ ಮಧ್ಯೆ ಇರುವ ಗೋಡೆ ಕೂಡ ಮೇಲಿನ ಚಾವಣಿಗೆ ತಾಗಿರುವುದಿಲ್ಲ. ಅಲ್ಲೂ ದೊಡ್ಡ ಗ್ಯಾಪ್ ಇರುತ್ತದೆ. ಇದಕ್ಕೆ ಕಾರಣ ಏನು ಎಂಬುದು ನಿಮಗೆ ಗೊತ್ತಾ?
ಮಾಲ್ ಗಳಲ್ಲಿ ದಿನವಿಡೀ ಶೌಚಾಲಯವನ್ನು ಬಳಸಲಾಗುತ್ತಿರುತ್ತದೆ. ಇದ್ರಿಂದ ಶೌಚಾಲಯ ಕೊಳಕಾಗುತ್ತದೆ. ಮಹಡಿ ಮತ್ತು ಬಾಗಿಲಿನ ಮಧ್ಯೆ ಗ್ಯಾಪ್ ಇದ್ರೆ ಕ್ಲೀನ್ ಮಾಡುವುದು ಸುಲಭ. ಮಾಪ್ ಬಳಸಿ ಸುಲಭವಾಗಿ ಕ್ಲೀನ್ ಮಾಡಬಹುದು.
ಟಾಯ್ಲೆಟ್ ಒಳಗೆ ವ್ಯಕ್ತಿ ಅನಾರೋಗ್ಯಕ್ಕೊಳಗಾದ್ರೆ, ಪ್ರಜ್ಞೆ ತಪ್ಪಿದ್ರೆ, ಕುಸಿದು ಬಿದ್ರೆ ತಕ್ಷಣ ಹೊರಗಿರುವವರಿಗೆ ತಿಳಿಯುತ್ತದೆ. ಬಾಗಿಲು ಹಾಗೂ ಮಹಡಿ ಮಧ್ಯೆ ಜಾಗವಿಲ್ಲದೆ ಹೋದ್ರೆ ಒಳಗೆ ಏನಾಗುತ್ತಿದೆ ಎಂಬುದು ತಿಳಿಯುವುದಿಲ್ಲ.
ಕೆಲವೊಮ್ಮೆ ಮಕ್ಕಳು ಶೌಚಾಲಯದ ಬಾಗಿಲನ್ನು ಹಾಕಿಕೊಳ್ತಾರೆ. ಅವ್ರಿಗೆ ಬಾಗಿಲು ತೆಗೆಯಲು ಬರುವುದಿಲ್ಲ. ಹೊರಗೆ ಯಾರೂ ಇಲ್ಲವೆಂದಾದ್ರೆ ಬಾಗಿಲಿನಡಿಯಿಂದ ನುಸುಳಿ ಸುಲಭವಾಗಿ ಹೊರಗೆ ಬರಬಹುದಾಗಿದೆ. | 1 |
”ಪಾಕ್ ವಿರುದ್ಧದ ಪಂದ್ಯ ಒಂದು ಸಾಮಾನ್ಯ ಮ್ಯಾಚ್”
16-06-2017 11:38AM IST / No Comments / Posted In: Latest News , Sports
ಚಾಂಪಿಯನ್ಸ್ ಟ್ರೋಫಿಯಲ್ಲಿ ಬಾಂಗ್ಲಾದೇಶವನ್ನು ಬಗ್ಗು ಬಡಿದಿರುವ ಟೀಂ ಇಂಡಿಯಾ ಚಿತ್ತ ಈಗ ಫೈನಲ್ ಮೇಲಿದೆ. ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾ ಅಂತಿಮ ಹಣಾಹಣಿ ನಡೆಸಲಿದೆ. ಭಾರತ –ಪಾಕಿಸ್ತಾನ ಹಣಾಹಣಿ ನೋಡಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಆದ್ರೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇದೊಂದು ಸಾಮಾನ್ಯ ಪಂದ್ಯದಂತೆ ಪರಿಗಣಿಸಿರುವುದಾಗಿ ಹೇಳಿದ್ದಾರೆ.
ಜೂನ್ 18ರಂದು ಭಾರತ-ಪಾಕ್ ಸೆಣೆಸಲಿದೆ. ಈ ಬಗ್ಗೆ ಮಾತನಾಡಿದ ಕೊಹ್ಲಿ ನಾವು ಈ ಪಂದ್ಯವನ್ನು ಸಾಮಾನ್ಯ ಪಂದ್ಯದಂತೆ ಪರಿಗಣಿಸಿದ್ದೇವೆ. ಈ ಪಂದ್ಯದ ಬಗ್ಗೆ ಯಾವುದೇ ಒತ್ತಡವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬಾಂಗ್ಲಾದೇಶದ ವಿರುದ್ಧದ ಗೆಲುವಿನ ಬಗ್ಗೆ ಮಾತನಾಡಿದ ಕೊಹ್ಲಿ, ಇದು ಉತ್ತಮ ಆಟಕ್ಕೆ ಉದಾಹರಣೆ. 9 ವಿಕೆಟ್ ಗಳಿಂದ ಗೆಲುವು ಸಾಧಿಸುವ ನಿರೀಕ್ಷೆ ಇರಲಿಲ್ಲ. ಆದ್ರೆ ಟೀಂ ಸಾಮರ್ಥ್ಯವನ್ನು ತೋರಿಸಿದೆ ಎಂದಿದ್ದಾರೆ.
ಟೂರ್ನಿಯಲ್ಲಿ ಈಗಾಗಲೇ ಪಾಕ್ ಸೋಲಿಸಿದ್ದ ಭಾರತ ಐ.ಸಿ.ಸಿ. ಟೂರ್ನಿಗಳಲ್ಲಿ ಎಂದಿಗೂ ಪಾಕ್ ಎದುರು ಸೋಲು ಕಂಡಿಲ್ಲ. ಹಾಗಾಗಿ ಭಾನುವಾರದ ಪಂದ್ಯದಲ್ಲಿಯೂ ಗೆಲ್ಲುವ ನಿರೀಕ್ಷೆಯಲ್ಲಿದೆ. ಇನ್ನು ಭಾನುವಾರದ ಹೈವೋಲ್ಟೇಜ್ ಮ್ಯಾಚ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. | 2 |
Bangalore, First Published 19, Jun 2019, 8:46 AM IST
Highlights
ಕಿರುತೆರೆಯ ಬಹುಜನಪ್ರಿಯ ರಿಯಾಲಿಟಿ ಶೋ ‘ಕನ್ನಡದ ಕೋಟ್ಯಧಿಪತಿ’ ಮತ್ತೆ ಶುರುವಾಗುತ್ತಿದೆ. ‘ಕಲರ್ಸ್ ಕನ್ನಡ’ ವಾಹಿನಿಯಲ್ಲಿ ಜೂನ್ 22 ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 8 ಗಂಟೆಗೆ ‘ಕನ್ನಡದ ಕೋಟ್ಯಧಿಪತಿ’ ಪ್ರಸಾರವಾಗಲಿದೆ. ಈ ಸಲ ನಿರೂಪಕರ ಸೀಟಿಗೆ ಮತ್ತೆ ಪುನೀತ್ ರಾಜ್‌ಕುಮಾರ್ ಬಂದಿದ್ದಾರೆ.
‘ಕನ್ನಡದ ಕೋಟ್ಯಧಿಪತಿ’ಯ ನಾಲ್ಕನೇ ಸೀಸನ್ ಇದು. ಆದರೆ ಕಲರ್ಸ್ ಕನ್ನಡ ವಾಹಿನಿಗೆ ಇದು ಮೊಟ್ಟಮೊದಲ ಸೀಸನ್. ಜತೆಗೆ ಇದರ ಆರಂಭದ ಎರಡು ಆವೃತ್ತಿಗಳಿಗೆ ನಿರೂಪಕರಾಗಿದ್ದ ಪುನೀತ್ ರಾಜ್‌ಕುಮಾರ್ ಅವರಿಗೆ ಇದು ಮೂರನೇ ಸೀಸನ್. ಕನ್ನಡದ ಕೋಟ್ಯಧಿಪತಿ ಶೋಗೆ ಈಗಾಗಲೇ ಭರದ ಸಿದ್ಧತೆ ಸಾಗಿದೆ. ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದಲ್ಲಿರುವ ಸ್ಟುಡಿಯೋದಲ್ಲಿ ಅದರ ಚಿತ್ರೀಕರಣಕ್ಕೆ ಭವ್ಯವಾದ ಸೆಟ್ ಹಾಕಲಾಗಿದೆ. ಈಗಾಗಲೇ ಹಲವು ಎಪಿಸೋಡ್ ಶೂಟ್ ಕೂಡ ಆಗಿದೆ. ಈ ಶೋ ಪ್ರಸಾರದ ಸಿದ್ಧತೆ ಕುರಿತು ಕಲರ್ಸ್ ಕನ್ನಡದ ಮುಖ್ಯಸ್ಥರ ಅದೇ ಸೆಟ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿತು. ಅಲ್ಲಿ ಶೋ ಕುರಿತು ಪುನೀತ್ ರಾಜ್‌ಕುಮಾರ್ ಹಲವು ಸಂಗತಿ ಹಂಚಿಕೊಂಡರು.
'ಕಷ್ಟಗಾಲದಲ್ಲಿ ಬರೋದೇ ಫ್ರೆಂಡ್ಸ್' ಇದು ಕನ್ನಡದ ಕೋಟ್ಯಧಿಪತಿ!
ಅಪ್ಪಾಜಿಗೆ ಈ ಶೋ ಅಂದ್ರೆ ತುಂಬಾ ಇಷ್ಟ...
ನನಗೆ ಈ ಪಯಣ ಶುರುವಾಗಿದ್ದು 2011 ರಿಂದ. ಈ ಶೋ ಆಫರ್ ಬಂದಾಗ ತಕ್ಷಣವೇ ನನಗೆ ನೆನಪಾಗಿದ್ದು ಅಪ್ಪಾಜಿ. ಯಾಕಂದ್ರೆ, ಅವರಿಗೆ ಹಿಂದಿಯ ‘ಕೌನ್ ಬನೇಗಾ ಕರೋಡ್‌ಪತಿ’ ಶೋ ಅಂದ್ರೆ ತುಂಬಾ ಇಷ್ಟ. ಅದರ ಪ್ರತಿ ಎಪಿಸೋಡ್ ನೋಡಿ ಖುಷಿ ಪಡುತ್ತಿದ್ದರು. ಅದೇನೋ ಅವರಿಗೆ ಸೋಜಿಗ. ಕಂಪ್ಯೂಟರ್ ಸ್ಕ್ರೀನ್ ಮೇಲೆ ಬರುತ್ತಿದ್ದ ಪ್ರಶ್ನೆಗಳು, ಅವುಗಳಿಗೆ ಸ್ಪರ್ಧಿಗಳು ಉತ್ತರಿಸುತ್ತಿದ್ದ ರೀತಿ ಎಲ್ಲವೂ ಅವರಿಗೆ ಖುಷಿಯೇ. ಯಾರು ಗೆಲ್ತಾರೆ, ಯಾರು ಸೋಲ್ತಾರೆ ಎನ್ನುವ ಕುತೂಹಲಕ್ಕಿಂತ ಆ ಶೋನಿಂದ ಜ್ಞಾನ ಹೆಚ್ಚಾಗುತ್ತದೆ ಎನ್ನುವುದೇ ಅವರ ಆಸಕ್ತಿಗೆ ಕಾರಣವಾಗಿತ್ತು. ಹಾಗಂತ ಅವರು ನನಗೆ ಹೇಳುತ್ತಿದ್ದರು. ಅದೇ ನನಗೂ ಸ್ಫೂರ್ತಿ ಆಗಿತ್ತು. ಅವರ ಮಾತು ನಿಜ. ಇದೊಂದು ಬರೀ ಮನರಂಜನೆಯ ಶೋ ಅಲ್ಲ, ಜ್ಞಾನ ನೀಡುವ ಶೋ.
ಅಮ್ಮನ ಮಾತೇ ಧೈರ್ಯ ತುಂಬಿತು..
ಕನ್ನಡದ ಕೋಟ್ಯಧಿಪತಿ ಶೋಗೆ ನಿರೂಪಕನಾಗುವ ಅವಕಾಶ ಬಂದಾಗ ಒಂದೆಡೆ ಖುಷಿ ಮತ್ತೊಂದೆಡೆ ಭಯ ಎರಡು ಇದ್ದವು. ನೆಚ್ಚಿನ ನಟ ಅಮಿತಾಬ್ ಬಚ್ಚನ್ ಮೇಲಿನ ಅಭಿಮಾನಕ್ಕೆ ಆ ಕಾರ್ಯಕ್ರಮಕ್ಕೆ ನಾನು ಖಾಯಂ ವೀಕ್ಷಕ ಎನ್ನುವುದೇನೋ ನಿಜ, ಆದರೆ ಅದರ ನಿರೂಪಕನಾಗುವುದು ಅಷ್ಟುಸುಲಭವಲ್ಲ ಅನ್ನೋದು ನನಗಿದ್ದ ಭಯ. ಕೊನೆಗೆ ಅಮ್ಮ ಧೈರ್ಯ ತುಂಬಿದರು. ‘ನೀನ್ ಹೋದ್ರೆ ಚಚ್ಚಿ ಹಾಕ್ತೀಯಾ ಬಿಡು...’ ಅಂತ ಧೈರ್ಯ ಕೊಟ್ಟರು. ಹಾಗೆಯೇ ಶಿವಣ್ಣ ಸಾಥ್ ಕೊಟ್ಟರು. ರಾಘಣ್ಣ ಜತೆಗೆ ನಿಂತರು. ಅವರೆಲ್ಲರ ಬೆಂಬಲದಿಂದಾಗಿ ನಾನು ಮೊದಲು ಈ ಶೋ ನಿರೂಪಕನಾದೆ. ಹೊರಗಡೆ ಇದ್ದಾಗ ಏನೋ ಭಯ, ಆದ್ರೆ ಶೋ ಸ್ಟೇಜ್‌ಗೆ ಬಂದಾಗ ಅದೇನೋ ಎನರ್ಜಿ ಬರುತ್ತೆ. ಇಲ್ಲಿ ಪಾಸಿಟಿವ್ ವೈಬ್ರೇಷನ್ ಇರುತ್ತೆ.
ಪ್ರತಿಯೊಬ್ಬರು ಗೆಲ್ಲಬೇಕೆನ್ನುವುದು ನನ್ನಾಸೆ..
ಶೋ ನಿರೂಪಕ ನಾನು. ಹಾಟ್ ಸೀಟ್ ಮೇಲೆ ಕುಳಿತುಕೊಳ್ಳುವ ಕಂಟೆಸ್ಟ್‌ಗಳಿಗೆ ಒಂದಷ್ಟುಕಾಲೆಳೆಯಬೇಕು, ಕನ್‌ಫä್ಯಸ್ ಮೂಡುವಂತೆ ಮಾಡ್ಬೇಕೆನ್ನುವುದು ಶೋನ ಟ್ರಿಕ್ಸ್ ಆಗಿದ್ದರೂ, ನಾನಿಲ್ಲಿ ಅದಕ್ಕೆ ಹೆಚ್ಚು ಒತ್ತು ಕೊಡುವುದಿಲ್ಲ. ಆದಷ್ಟುಸ್ಪರ್ಧಿಗಳು ಆಪ್ತವಾಗಿಯೇ ಆಟ ಮುನ್ನಡೆಸಬೇಕು ಎನ್ನುವುದರ ಕಡೆಯೇ ಆದ್ಯತೆ ನೀಡುತ್ತೇನೆ. ಇಲ್ಲಿಗೆ ಬರುವ ಪ್ರತಿಯೊಬ್ಬ ಸ್ಪರ್ಧಿಯೂ ಗೆಲ್ಲಬೇಕೆನ್ನುವುದು ನನ್ನಾಸೆ. ಕೆಲವರು ಕ್ಲಿಷ್ಟಪ್ರಶ್ನೆಗಳಿಗೂ ಉತ್ತರಿಸಿ, ಇನ್ನಾವುದೋ ಸರಳ ಪ್ರಶ್ನೆಗೆ ಉತ್ತರಿಸಲಾಗದೆ ಸ್ಪರ್ಧೆಯಿಂದ ಎದ್ದು ಹೊರಟಾಗ ಬೇಸರ ಎನಿಸುತ್ತೆ. ಯಾಕಂದ್ರೆ ಇಲ್ಲಿಗೆ ಬರುವವರೆಲ್ಲ ಏನೇನೋ ಕನಸು ಹೊತ್ತು ಬರುತ್ತಾರೆ. ಅವರು ಕನಸು ನನಸಾಗಬೇಕೆನ್ನುವ ಆಸೆಗಳು ಅವರ ಕಣ್ಣಲ್ಲಿ ಕಾಣುತ್ತವೆ. ಅದನ್ನು ಕಂಡಾಗ ನನಗೆ ಅವರು ಗೆಲ್ಲಬೇಕು ಅಂತಲೇ ಎನಿಸುತ್ತೆ.
ಭರದ ಸಿದ್ಧತೆ, ಸ್ಪರ್ಧಿಗಳ ಆಯ್ಕೆ
ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮವನ್ನು ಸೋನಿ ಪಿಕ್ಚರ್ಸ್ ಪ್ರೊಡಕ್ಷನ್ ಹೌಸ್ ಮತ್ತು ಸ್ಟುಡಿಯೋ ನೆಕ್ಟ್ ಸ್ಟುಡಿಯೋ ನಿರ್ಮಾಣ ಮಾಡುತ್ತಿದೆ. ಸಂತೂರ್ ಸೋಪ್ ಸೇರಿದಂತೆ ಹಲವು ಸಂಸ್ಥೆಗಳು ಸಾಥ್ ನೀಡಿವೆ. ಆ ಮೂಲಕ ಕಾರ್ಯಕ್ರಮದ ಒಂದು ಹಂತದ ಸ್ವರೂಪ ಸಿದ್ಧವಾಗಿದೆ. ‘ಕನ್ನಡದ ಕೋಟ್ಯಧಿಪತಿ ಶೋ ರೂಪುರೇಷೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ ಸ್ಪರ್ಧಿಗಳ ಕತೆಗಳು, ಅವರ ಅಗತ್ಯಗಳು, ಕೋಟಿ ರೂಪಾಯಿ ಗೆಲ್ಲಲು ಅವರು ಪಡುವ ಪ್ರಯತ್ನ ಮತ್ತು ಬುದ್ಧಿವಂತಿಕೆ ಇತ್ಯಾದಿಗಳನ್ನು ತೋರಿಸುವ ವಿಧಾನ ಹೊಸದಾಗಿರುತ್ತದೆ. ಈಗಾಗಲೇ ರಾಜ್ಯದ ಐದು ನಗರಗಳಲ್ಲಿ ಆಡಿಷನ್ ನಡೆಸಿ ಸ್ಫರ್ಧಿಗಳನ್ನು ಆಯ್ಕೆ ಮಾಡಿದ್ದೇವೆ. ಸ್ಟುಡಿಯೋ ನೆಕ್ಷಾ…$್ಟಸಿದ್ಧಪಡಿಸಿದ ಪ್ರಶ್ನೆಗಳ ಮೂಲಕ ಸ್ಪರ್ಧಿಗಳ ಆಯ್ಕೆ ನಡೆದಿದೆ. ಸ್ಪರ್ಧಿಗಳ ಸಂಖ್ಯೆ ಎಷ್ಟಾಗುತ್ತೋ ಖಚಿತವಾಗಿಲ್ಲ. ಅದು ಆಟದ ಮೇಲೆ ನಿಂತಿರುತ್ತದೆ. ಅನೇಕ ಹೊಸ ಸಂಗತಿಗಳ ಮೂಲಕ ಇದನ್ನು ವೀಕ್ಷಕರಿಗೆ ನೀಡುತ್ತಿದ್ದೇವೆ. ಅದೆಲ್ಲಕ್ಕಿಂತ ಮುಖ್ಯವಾಗಿ ಪುನೀತ್ ರಾಜ್ ಕುಮಾರ್ ಶೋ ನಿರೂಪಕರಾಗಿದ್ದು ಖುಷಿ ತಂದಿದೆ. ಅವರು ಕಾರ್ಯಕ್ರಮ ನಡೆಸಿಕೊಡುವ ರೀತಿಯೇ ಅತ್ಯಾಕರ್ಷಕ. ಹಾಗಾಗಿ ಈ ಶೋ ವಿಶೇಷವಾಗಿರುತ್ತೆ ಎನ್ನುವ ನಂಬಿಕೆಯಿದೆ’ ಎನ್ನುತ್ತಾರೆ ಕಲರ್ಸ್ ಕನ್ನಡದ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್.
- ಶೋಗೆ ಸ್ಟುಡಿಯೋ ನೆಕ್ಟ್ ಸಂಸ್ಥೆಯೇ ಪ್ರಶ್ನೆಗಳನ್ನು ತಯಾರಿಸುತ್ತಿದೆ. ಅದರ ತಂಡವೇ ಕನ್ನಡಕ್ಕೆ ಪೂರಕವಾಗಿ ನಿಗೂಢವಾಗಿ ಪ್ರಶ್ನೆಗಳ ಪಟ್ಟಿತಯಾರಿಸುತ್ತಿದೆ. ಅದರ ಚಾನೆಲ್ ಹಸ್ತಕ್ಷೇಪವೇ ಇರುವುದಿಲ್ಲ.
- ವೂಟ್ ಮತ್ತು ಮೈ ಜಿಯೋ ಆ್ಯಪ್‌ಗಳಲ್ಲೂ ಪ್ರಸಾರ ಪ್ರಾರಂಭಿಸಲಾಗಿದೆ. ಆ ಮೂಲಕ ಕಾರ್ಯಕ್ರಮ ವೀಕ್ಷಿಸುವ ಜನರು ಕೂಡ ಶೋ ಕ್ವೀಜ್‌ನಲ್ಲಿ ಭಾಗವಿಹಿಸಬಹುದು.
Last Updated 19, Jun 2019, 8:46 AM IST | 0 |
ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್: ಆರನೇ ಚಿನ್ನಕ್ಕೆ ಮುತ್ತಿಕ್ಕಿದ ಮೇರಿಕೋಮ್
ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್: ದಾಖಲೆ ಬರೆದ ಭಾರತದ ಬಾಕ್ಸರ್
ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್: ಆರನೇ ಚಿನ್ನಕ್ಕೆ ಮುತ್ತಿಕ್ಕಿದ ಮೇರಿಕೋಮ್
ಪ್ರಜಾವಾಣಿ ವಾರ್ತೆ
Published:
24 ನವೆಂಬರ್ 2018, 16:45 IST
Updated:
24 ನವೆಂಬರ್ 2018, 19:51 IST
ಅಕ್ಷರ ಗಾತ್ರ :
ಆ
ಆ
ನವದೆಹಲಿ: ಭಾರತದ ಎಂ.ಸಿ.ಮೇರಿ ಕೋಮ್, ಶನಿವಾರ ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಜಯಿಸಿ ಚಾರಿತ್ರಿಕ ಸಾಧನೆ ಮಾಡಿದ್ದಾರೆ.
ಶನಿವಾರ ನಡೆದ 48 ಕೆ.ಜಿ.ವಿಭಾಗದ ಫೈನಲ್‌ನಲ್ಲಿ ಮಣಿಪುರದ ಮೇರಿ 5–0 ಪಾಯಿಂಟ್ಸ್‌ನಿಂದ ಉಕ್ರೇನ್‌ನ ಹನಾ ಒಖೋಟಾ ಅವರನ್ನು ಸೋಲಿಸಿದ್ದಾರೆ. ಈ ಮೂಲಕ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಆರನೇ ಚಿನ್ನದ ಪದಕವನ್ನು ಕೊರಳಿಗೇರಿಸಿಕೊಂಡು ದಾಖಲೆ ನಿರ್ಮಿಸಿದ್ದಾರೆ.
ಚಾಂಪಿಯನ್‌ಷಿಪ್‌ನಲ್ಲಿ ಆರು ಚಿನ್ನ ಮತ್ತು ಒಂದು ಬೆಳ್ಳಿ ಪದಕ ಗೆದ್ದ ಏಕೈಕ ಮಹಿಳಾ ಬಾಕ್ಸರ್ ಎಂಬ ಹಿರಿಮೆಗೆ ಮೇರಿ ಭಾಜನರಾಗಿದ್ದಾರೆ. ಜೊತೆಗೆ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಅತಿ ಹೆಚ್ಚು ಪದಕಗಳನ್ನು ಗೆದ್ದ ಕ್ಯೂಬಾದ ಫೆಲಿಕ್ಸ್ ಸೇವನ್ ಅವರ ದಾಖಲೆಯನ್ನೂ ಸರಿಗಟ್ಟಿದ್ದಾರೆ.
ತಾವು ಗೆದ್ದ ಪ್ರಶಸ್ತಿಯನ್ನು ದೇಶಕ್ಕೆ ಅರ್ಪಿಸುವುದಾಗಿ ಅವರು ತಿಳಿಸಿದರು.
ಫೆಲಿಕ್ಸ್ ಅವರು 1986 ರಿಂದ 1989ರ ಅವಧಿಯಲ್ಲಿ ಪುರುಷರ ಹೆವಿವೇಟ್ ವಿಭಾಗದಲ್ಲಿ ಒಟ್ಟು ಆರು ಚಿನ್ನ ಮತ್ತು ಒಂದು ಬೆಳ್ಳಿಯ ಪದಕ ಜಯಿಸಿದ್ದರು.
2002ರಲ್ಲಿ ಮೊದಲ ಬಾರಿ ಮೇರಿ, ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದಿದ್ದರು. ಆಗ ಅವರು 45 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿದ್ದರು. 2005, 2006 ಮತ್ತು 2008ರಲ್ಲಿ 46 ಕೆ.ಜಿ ವಿಭಾಗದಲ್ಲಿ ಚಿನ್ನ ಗಳಿಸಿದ್ದರು. 2010ರಲ್ಲಿ 48 ಕೆ.ಜಿ ವಿಭಾಗದಲ್ಲಿ ಕಣಕ್ಕೆ ಇಳಿದು ಮೊದಲಿಗರಾಗಿದ್ದರು.
A proud moment for Indian sports.
Congratulations to Mary Kom for winning a Gold in the Women’s World Boxing Championships. The diligence with which she’s pursued sports and excelled at the world stage is extremely inspiring. Her win is truly special. @MangteC
— Narendra Modi (@narendramodi) November 24, 2018
Heartiest congratulations to #MaryKom for creating history, by clinching record 6th World Boxing Championship Gold #WWCHs2018 pic.twitter.com/DFzvuJBa3b
— Sushil Kumar (@WrestlerSushil) November 24, 2018
The moment. Mary, World Champion for the sixth time. #boxing pic.twitter.com/HwLKuCFH7W | 2 |
ಪಾನ್ ಬೀಡಾದ ಸಿಹಿ 'ಗುಲ್ಕಂದ್' ಆರೋಗ್ಯದ ಕೀಲಿಕೈ!
Wellness
|
Updated: Friday, November 27, 2015, 11:47 [IST]
ಗುಲ್ಕಂದ್ ಎಂದರೆ ಪಾನ್ ಬೀಡಾದಲ್ಲಿ ಸಿಹಿ ಮತು ಸುವಾಸನೆ ಮೂಡಿಸಲು ಸೇರಿಸುವ ಒಂದು ಪದಾರ್ಥ. ಇದರ ಹೊರತಾಗಿ ಗುಲ್ಕಂದ್ ಬಳಕೆ ಇನ್ನೆಲ್ಲೂ ಸಾಮಾನ್ಯವಾಗಿ ಕೇಳಿಬರುವುದಿಲ್ಲ. ಆದರೆ ಪ್ರತ್ಯೇಕವಾಗಿ ಪರಿಗಣಿಸಿದಾಗ ಇದೊಂದು ಉತ್ತಮ ಔಷಧಿಯ ರೂಪದಲ್ಲಿಯೂ ಬಳಸಬಹುದು. ಮುಖ್ಯವಾಗಿ ಅಜೀರ್ಣ, ನಾರಿಲ್ಲದ ಕಳಪೆ ಆಹಾರದ ಸೇವನೆ ಮೊದಲಾದ ಕಾರಣಗಳಿಂದ ಉಂಟಾಗುವ ಮಲಬದ್ಧತೆ ಮತ್ತು ಆಮ್ಲೀಯತೆಯನ್ನು ತಕ್ಷಣ ಕಡಿಮೆಮಾಡುತ್ತದೆ.
ಅತಿಯಾದ ಮದ್ಯಪಾನ, ಮಾನಸಿಕ ಒತ್ತಡ, ಉದ್ವೇಗ, ಅತಿಯಾದ ಧೂಮಪಾನ ಮೊದಲಾದ ಕಾರಣಗಳಿಂದಲೂ ಉಂಟಾಗುವ ಆಮ್ಲೀಯತೆಯನ್ನು ಗುಲ್ಕಂದ್ ನಿವಾರಿಸಲು ಸಮರ್ಥವಾಗಿದೆ. ಇನ್ನುಳಿದಂತೆ ಆಮ್ಲೀಯತೆಗೆ ಅತಿ ಖಾರದ, ಅತಿಯಾದ ಎಣ್ಣೆ ಇರುವ ಆಹಾರಗಳು, ಆಹಾರವನ್ನು ಕ್ಲುಪ್ತಕಾಲಕ್ಕೆ ಸೇವಿಸದೇ ಇರುವುದು, ಅತಿ ಹೆಚ್ಚಾಗಿ ತಿನ್ನುವುದು, ಬೇಗಬೇಗನೇ ತಿನ್ನುವುದು ಮೊದಲಾದವೆಲ್ಲಾ ಕಡಿಮೆ ಪ್ರಕೋಪದ ಆಮ್ಲೀಯತೆ ಮತ್ತು ಹುಳಿತೇಗಿಗೆ ಕಾರಣವಾಗುತ್ತವೆ. ಈ ಉರಿಗೂ ಗುಲ್ಕಂದ್ ಸೇವನೆ ಉತ್ತಮ ಪರಿಹಾರ ನೀಡುತ್ತದೆ. ಬನ್ನಿ, ಇದರ ಇತರ ಆರೋಗ್ಯಕರ ಗುಣಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ:
ಆಮ್ಲೀಯತೆಗೆ ಸೂಕ್ತ ಔಷಧಿಯಾಗಿದೆ
ಗುಲ್ಕಂದ್ ಎಂದರೆ ಯಾವುದೋ ಸ್ವರ್ಗದಿಂದ ಇಳಿದುಬಂದ ಔಷಧಿಯಲ್ಲ. ಗುಲಾಬಿ ಹೂವಿನ ದಳಗಳನ್ನು ಸಕ್ಕರೆಯ ಪಾಕದಲ್ಲಿ ಕರಗಿಸಿ ಮಾಡಿರುವ ದ್ರವ್ಯ. ಆಮ್ಲೀಯತೆಗೆ ತಕ್ಷಣ ಪರಿಹಾರ ನೀಡುವ ಈ ಅದ್ಭುತ ಔಷಧಿ ಆಯುರ್ವೇದದ ಔಷಧಿಗಳಲ್ಲಿಯೇ ಅತ್ಯಂತ ಸಿಹಿಯುಳ್ಳದ್ದಾಗಿದೆ. ಊಟದ ಬಳಿಕ ಒಂದು ಚಮಚ ಗುಲ್ಕಂದ್ ಅನ್ನು ಹಾಗೇ ಅಥವಾ ನೀರಿನೊಂದಿಗೆ ಬೆರೆಸಿ ಕುಡಿಯಬಹುದು.
ಜಡತ್ವವನ್ನು ಕಡಿಮೆಗೊಳಿಸುತ್ತದೆ
ಸಾಮಾನ್ಯವಾಗಿ ಊಟವಾದ ಬಳಿಕ ಜಡತ್ವ ಆವರಿಸುತ್ತದೆ. ಕೊಂಚ ಹೊತ್ತಿಗಾದರೆ ಪರವಾಗಿಲ್ಲ, ಇಡಿಯ ದಿನ ಈ ಜಡತ್ವ ಆವರಿಸಿದ್ದರೆ? ಇದಕ್ಕೆ ಗುಲ್ಕಂದ್ ಉತ್ತಮ ಪರಿಹಾರವಾಗಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ
ಜಡತ್ವವನ್ನು ಕಡಿಮೆಗೊಳಿಸುತ್ತದೆ
ಜೊತೆಗೇ ತುರಿಕೆ, ಸ್ನಾಯುಗಳ ನೋವು, ಸುಸ್ತು, ಬಿಸಿ ಮತ್ತು ಸೆಖೆಯಲ್ಲಿ ಅತಿ ಹೆಚ್ಚು ಹೊತ್ತು ಕಳೆಯುವ ಮೂಲಕ ದಣಿದ ಶರೀರ ಮೊದಲಾದವುಗಳಿಗೂ ಗುಲ್ಕಂದ್ ಉತ್ತಮವಾಗಿದೆ. ಅಲ್ಲದೇ ನೀರಿನಲ್ಲಿ ಕದಡಿ ಕುಡಿಯುವ ಮೂಲಕ ರಕ್ತವನ್ನು ಶುದ್ಧೀಕರಿಸುತ್ತದೆ ಹಾಗೂ ಕಣ್ಣಿನ ದೃಷ್ಟಿ ಮತ್ತು ಸ್ಮರಣಶಕ್ತಿಯನ್ನೂ ಹೆಚ್ಚಿಸುತ್ತದೆ.
ಕ್ಯಾನ್ಸರ್ ಚಿಕಿತ್ಸೆಯ ಅಡ್ಡಪರಿಣಾಮಗಳಿಂದ ರಕ್ಷಿಸುತ್ತದೆ
ಕೆಲವು ಬಗೆಯ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆಯ ರೂಪದಲ್ಲಿ ರೇಡಿಯೋಥೆರಪಿ ಮತ್ತು ಖೀಮೋಥೆರಪಿಗಳನ್ನು ನಡೆಸಿದ ಬಳಿಕ ಹಲವಾರು ಅಡ್ಡಪರಿಣಾಮಗಳು ಎದುರಾಗುತ್ತವೆ. (ತಲೆ ಬೋಳಾಗುವುದು ಇದರಲ್ಲಿ ಒಂದು). ಗುಲ್ಕಂದ್ ಈ ಅಡ್ಡಪರಿಣಾಮಗಳಿಗೆ ಅಡ್ಡಗೋಡೆಯಾಗಿ ನಿಂತು ಶರೀರವನ್ನು ರಕ್ಷಿಸುತ್ತದೆ.
ಕರುಳಿನ ಹುಣ್ಣಿನಿಂದ ರಕ್ಷಿಸುತ್ತದೆ
ಕೆಲವೊಮ್ಮೆ ಆಹಾರದಲ್ಲಿ ಆಮ್ಲೀಯತೆ ಹೆಚ್ಚುವ ಕಾರಣ ಜೀರ್ಣಾಂಗಗಳ ಒಳಪದರ ಅಪಾರವಾಗಿ ಬಾಧೆಗೊಳಗಾಗುತ್ತವೆ. ಅದರಲ್ಲೂ ಸೂಕ್ಷ್ಮಭಾಗಗಳು ಹೆಚ್ಚು ಪ್ರಭಾವಕ್ಕೆ ಒಳಗಾಗುತ್ತವೆ. ಜಠರದಿಂದ ಸಣ್ಣಕರುಳಿಗೆ ಆಹಾರ ದಾಟುವ ಸ್ಥಳದಲ್ಲಿ (duodenun) ಈ ಪ್ರಭಾವ ಅತಿಯಾಗಿರುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ
ಕರುಳಿನ ಹುಣ್ಣಿನಿಂದ ರಕ್ಷಿಸುತ್ತದೆ
ಜೊತೆಗೆ ಈ ಸ್ಥಳದಲ್ಲಿ ಹುಣ್ಣುಗಳಾಗುವ ಸಾಧ್ಯತೆ ಹೆಚ್ಚುತ್ತದೆ. (duodenal ulcer) ಬಳಿಕ ಕರುಳುಗಳ ಒಳಭಾಗ ಮತ್ತು ಜೀರ್ಣಾಂಗಗಳ ಅಷ್ಟೂ ಒಳಭಾಗದಲ್ಲಿ ಹುಣ್ಣುಗಳಾಗುವ ಸಾಧ್ಯತೆ ಇರುತ್ತದೆ. ಗುಲ್ಕಂದ್ ಈ ಆಮ್ಲವನ್ನು ನಿರ್ಜೀವಗೊಳಿಸಿ ಈ ಎಲ್ಲಾ ತೊಂದರೆಗಳಿಂದ ರಕ್ಷಿಸುತ್ತದೆ.
ಅತಿಮೂತ್ರದಿಂದ ರಕ್ಷಿಸುತ್ತದೆ
ಕೆಲವರಲ್ಲಿ ಮೂತ್ರಕೋಶದ ಸಾಮರ್ಥ್ಯ ಕೆಲವು ಕಾರಣಗಳಿಂದ ಕಡಿಮೆಗಾಗಿದ್ದು ಪದೇ ಪದೇ ಮೂತ್ರಕ್ಕೆ ಅವಸರವಾಗುತ್ತದೆ. ಇವರಿಗೆ ಗುಲ್ಕಂದ್ ಉತ್ತಮವಾಗಿದೆ. ಇದು ಮೂತ್ರಕೋಶದ ಸಾಮರ್ಥ್ಯ ಹೆಚ್ಚಿಸಿ ಈ ತೊಂದರೆಯಿಂದ ಕಾಪಾಡುತ್ತದೆ. ಮಹಿಳೆಯರಿಗೆ ಕಾಡುವ ಮಾಸಿಕ ರಜಾದಿನಗಳ ನೋವು, ಬಿಳಿಸೆರಗು ಮೊದಲಾದ ತೊಂದರೆಗಳಿಂದಲೂ ರಕ್ಷಿಸುತ್ತದೆ.
ಜೀರ್ಣಕ್ರಿಯೆ ಹೆಚ್ಚಿಸುತ್ತದೆ
ಊಟದ ಬಳಿಕ ಗುಲ್ಕಂದ್ ಸೇವಿಸುವ ಮೂಲಕ ಜೀರ್ಣಕ್ರಿಯೆಯನ್ನು ಹೆಚ್ಚಿಸಬಹುದು. ಇದರ ಪರಿಣಾಮವಾಗಿ ವಾಂತಿ, ವಾಕರಿಕೆ ಮೊದಲಾದ ತೊಂದರೆಗಳನ್ನು ನಿವಾರಿಸಬಹುದು. ಅಲ್ಲದೇ ಬೆವರಿನಲ್ಲಿ ದುರ್ಗಂಧ ಮತ್ತು ಮೊಡವೆಗಳು ಮೂಡುವ ಸಾಧ್ಯತೆಯೂ ಕಡಿಮೆಯಾಗುತ್ತದೆ.
ಬಾಯಿಹುಣ್ಣಿಗೂ ಉತ್ತಮವಾಗಿದೆ
ಬಾಯಿಯ ಒಳಭಾಗ, ಅಂದರೆ ನಾಲಿಗೆಯ ಮೇಲೆ, ತುಟಿ ಮತ್ತು ಕೆನ್ನೆಗಳ ಒಳಭಾಗದ ಚರ್ಮದಲ್ಲಿ ಆವರಿಸುವ ಹುಣ್ಣುಗಳು (mouth ulcers) ಗುಲ್ಕಂದ್ ನೀರನ್ನು ಮುಕ್ಕಳಿಸಿ ಸೇವಿಸುವ ಮೂಲಕ ಕಡಿಮೆಯಾಗುತ್ತವೆ. ಅಲ್ಲದೇ ಒಸಡು ಮತ್ತು ಹಲ್ಲುಗಳು ಸಹಾ ದೃಢಗೊಳ್ಳುತ್ತವೆ. ಅಲ್ಲದೇ ಇದನ್ನು ಸೇವಿಸುವ ಮೂಲಕ ಪುರುಷತ್ವ ಹೆಚ್ಚುತ್ತದೆ. ಉತ್ತಮ ಕಾಮೋತ್ತೇಜಕವೂ ಆಗಿರುವ ಗುಲ್ಕಂದ್ ದಂಪತಿಯರಿಗೂ ಉತ್ತಮವಾಗಿದೆ.
ಹೃದಯ ಬಡಿತದ ಏರುಪೇರು ಸರಿಪಡಿಸುತ್ತದೆ
ಹೃದಯದ ಹಲವಾರು ತೊಂದರೆಗಳಿಗೂ ಗುಲ್ಕಂದ್ ಉತ್ತಮವಾಗಿದೆ. ಇದು ಹೃದಯದ ತೊಂದರೆಗೆ ನೀಡಿರುವ ಔಷಧಿಗಳ ಪರಿಣಾಮ ಸರಿಯಾಗಿ ಆಗುವಲ್ಲಿ ಸಹಕರಿಸುತ್ತದೆ. ಜೊತೆಗೇ ಹೃದಯ ಬಡಿತದ ಏರುಪೇರುಗಳನ್ನು, ಅತಿ ರಕ್ತದ ಒತ್ತಡ ಮತ್ತು ಅತಿಯಾದ ಒತ್ತಡದ ಮೂಲಕ ಸಂಭವಿಸುವ ಹೃದಯಾಘಾತವನ್ನೂ ತಪ್ಪಿಸುತ್ತದೆ.
ಮೂಗಿನಿಂದ ರಕ್ತ ಬರುವುದನ್ನು ತಪ್ಪಿಸುತ್ತದೆ
ಕೆಲವರಿಗೆ ಸಾಮಾನ್ಯವಾಗಿ ಸೆಖೆಗಾಲದಲ್ಲಿ ಮೂಗಿನೊಳಗಿನಿಂದ ರಕ್ತ ಬರುತ್ತದೆ. ಇದಕ್ಕೆ ಕಾರಣವೇನೆಂದರೆ ಮೂಗಿನ ಒಳಭಾಗದ ಚರ್ಮ (ಕೂದಲು ಇರುವ ಚರ್ಮ ಮುಗಿಯುವಲ್ಲಿ) ಅತಿ ತೆಳುವಾಗಿದ್ದು ಸೆಖೆಯ ಕಾರಣ ಸುಲಭವಾಗಿ ಹರಿಯುತ್ತದೆ. ಗುಲ್ಕಂದ್ ಸೇವನೆಯಿಂದ ಈ ಭಾಗದಲ್ಲಿ ಉತ್ತಮ ಪೋಷಣೆ ದೊರೆತು ರಕ್ತ ಹರಿಯುವ ಸಾಧ್ಯತೆ ಕಡಿಮೆಯಾಗುತ್ತದೆ. ಅಲ್ಲದೇ ಹಸ್ತ ಮತ್ತು ಪಾದಗಳಲ್ಲಿ ಉರಿ, ಸೂಜಿ ಚುಚ್ಚಿದಂತಾಗುವುದು, ಮಾನಸಿಕ ಒತ್ತಡ ಮೊದಲಾದ ತೊಂದರೆಗಳಿಂದ ಕಾಪಾಡುತ್ತದೆ. ಅಲ್ಲದೇ ನರವ್ಯವಸ್ಥೆಯನ್ನು ಉತ್ತಮಪಡಿಸಲೂ ನೆರವಾಗುತ್ತದೆ.
ಮಲಬದ್ಧತೆಯಿಂದ ರಕ್ಷಿಸುತ್ತದೆ
ನಾರು ಇಲ್ಲದ ಅಹಾರದ ಸೇವನೆಯಿಂದ ಬಹಿರ್ದೆಶೆ ಬಹಳ ತಡವಾಗಿ ಆಗುತ್ತಿದ್ದರೆ ಗುಲ್ಕಂದ್ ಸೇರಿಸಿದ ನೀರನ್ನು ಕುಡಿಯುವ ಮೂಲಕ ಬಹಿರ್ದೆಶೆ ಸುಲಭವಾಗುತ್ತದೆ.
ಆಹಾರಗಳ ಸಿಹಿಯನ್ನೂ ಹೆಚ್ಚಿಸುತ್ತದೆ
ಮೇಲಿನ ಎಲ್ಲಾ ಪರಿಣಾಮಗಳನ್ನು ಒಂದೆರಡು ಬಾರಿ ಸೇವಿಸುವ ಮೂಲಕ ಪಡೆಯಲು ಸಾಧ್ಯವಿಲ್ಲ. ನಿಯಮಿತವಾಗಿ ಸೇವಿಸುವ ಮೂಲಕ ಮಾತ್ರ ಪಡೆಯಬಹುದು. ಆದ್ದರಿಂದ ಇದನ್ನು ಹಾಗೇ ಸೇವಿಸುವ ಬದಲು ಹೇಗೂ ಸಕ್ಕರೆ ಸೇರಿಸಬೇಕಾದ ಸಿಹಿ ಮತ್ತು ಇತರ ಪದಾರ್ಥಗಳಲ್ಲಿ ಸಕ್ಕರೆಯ ಅಥವಾ ಬೆಲ್ಲದ ಬದಲಿಗೆ ಸೇರಿಸಿ ಸೇವಿಸುವ ಮೂಲಕ ಉತ್ತಮ ಪರಿಣಾಮ ಪಡೆಯಬಹುದು. ಇನ್ನೊಂದು ವಿಧಾನವೆಂದರೆ ರಾತ್ರಿ ಕುಡಿಯುವ ಹಾಲಿನಲ್ಲಿ ಗುಲ್ಕಂದ್ ಸೇರಿಸಿ ಕುಡಿಯುವುದು.
ಗುಲ್ಕಂದ್ ಸೇವನೆಯ ಮಿತಿ
ಇದರಲ್ಲಿ ಸಕ್ಕರೆ ಅಪಾರ ಪ್ರಮಾಣದಲ್ಲಿರುವ ಕಾರಣ ಇದರ ಸೇವನೆ ಮಧುಮೇಹಿಗಳಿಗೆ ಸಲ್ಲದು. ಅತಿ ಹೆಚ್ಚು ಪೋಷಕಾಂಶ ಮತ್ತು ಶಕ್ತಿ ನೀಡುವ ಕಾರಣ ಸ್ಥೂಲದೇಹಿಗಳಿಗೂ ಇದು ಸೂಕ್ತವಲ್ಲ. ಆದರೆ ಸ್ಥೂಲದೇಹಿಗಳು ತಮ್ಮ ನಿತ್ಯದ ಸಕ್ಕರೆಯ ಬದಲಿಗೆ ಅಲ್ಪ ಪ್ರಮಾಣದಲ್ಲಿ ಸೇವಿಸಿದರೆ ಮಾತ್ರ ಉಪಯುಕ್ತವಾಗಬಲ್ಲುದು.
Image courtesy - en.wikipedia.org | 1 |
#Gomonster Samsung M30s: ಹೊಸ ಸ್ಮಾರ್ಟ್‌ಫೋನ್ ನ ವಿಶೇಷತೆಗಳೇನು ನೋಡಿ! WATCH LIVE TV
ಅಲ್ಲಮನಿಗಾಗಿ ಮೃದಂಗ ಕಲಿತ ಧನಂಜಯ
ಅಲ್ಲಮ ಚಿತ್ರಕ್ಕಾಗಿ ಧನಂಜಯ ವಿಶೇಷ ತಯಾರಿಗಳನ್ನು ಮಾಡಿಕೊಂಡಿದ್ದರಂತೆ
| Updated:
Jan 23, 2017, 04:00AM IST
- ಹರೀಶ್ ಬಸವರಾಜ್
ಭಾರತೀಯ ಅಂತರರಾಷ್ಟ್ರೀಯ ಸಿನಿಮೋತ್ಸವದ ಐಸಿಎಫ್‌ಟಿ ಯುನೆಸ್ಕೊ ಗಾಂಧಿ ಪದಕ ವಿಭಾಗಕ್ಕೆ ನಾಮನಿರ್ದೇಶನಗೊಂಡಿದ್ದ ಕನ್ನಡ ಚಿತ್ರ ಅಲ್ಲಮ ಜ.26ರಂದು ಪ್ರೇಕ್ಷಕರ ಎದುರಿಗೆ ಬರಲಿದೆ. ಇದರಲ್ಲಿನ ಅಲ್ಲಮನ ಪಾತ್ರ ಈಗಾಗಲೇ ಚರ್ಚೆಗೆ ಗ್ರಾಸವಾಗಿದ್ದು, ಈ ಕ್ಯಾರೆಕ್ಟರ್‌ಗಾಗಿ ತಾವು ಮಾಡಿಕೊಂಡಿದ್ದ ತಯಾರಿಯನ್ನು ಈ ವೇಳೆ ಧನಂಜಯ ನೆನಪಿಸಿಕೊಳ್ಳುತ್ತಾರೆ.
'ಜಯನಗರ 4ನೇ ಬ್ಲಾಕ್' ಕಿರುಚಿತ್ರ ನೋಡಿದ ನಾಗಾಭರಣ, ಧನಂಜಯ ಅವರನ್ನು ಅಲ್ಲಮನ ಪಾತ್ರಕ್ಕೆ ಆಯ್ಕೆ ಮಾಡಿದ್ದರಂತೆ. ಈ ಸಿನಿಮಾದ ಶೂಟಿಂಗ್ ಆರಂಭಗೊಳ್ಳುವುದಕ್ಕೂ ಮುನ್ನ ಬಾಕ್ಸರ್, ರಾಟೆ, ಬದ್ಮಾಶ್‌ನಂತಹ ಪಕ್ಕಾ ಮಾಸ್ ಮತ್ತು ಕಮರ್ಷಿಯಲ್ ಸಿನಿಮಾಗಳಲ್ಲಿ ನಟಿಸಿದ್ದರು ಧನಂಜಯ. ಅಲ್ಲಮ ಆರಂಭವಾಗುವ ಹೊತ್ತಿಗೆ ಒಂದಿಷ್ಟು ತಯಾರಿಗಳನ್ನು ಮಾಡಿಕೊಳ್ಳಬೇಕಿತ್ತು, ಅದರಲ್ಲಿ ಮೃದಂಗ ನುಡಿಸುವುದು ಸಹ ಒಂದು. ಭರಣ ಅವರ ಆದೇಶದಂತೆ ಧನಂಜಯ ಒಂದಿಷ್ಟು ದಿನ ಮೃದಂಗ ಬಾರಿಸುವುದನ್ನು ಕಲಿತಿದ್ದಾರೆ. ಅಷ್ಟೇ ಅಲ್ಲದೆ ಸಿಕ್ಸ್ ಪ್ಯಾಕ್ ಮಾಡಿ ಬಾಕ್ಸರ್ ಆಗಿದ್ದ ಧನಂಜಯ ಕೆಲವೇ ದಿನಗಳಲ್ಲಿ ಯೋಗ ಮಾಡಿ 'ಅಲ್ಲಮ'ರಾದರಂತೆ.
'ಈ ಸಿನಿಮಾ ಒಪ್ಪಿಕೊಳ್ಳಲು ಕಾರಣ, ನಿರ್ದೇಶಕ ನಾಗಭರಣ ಮತ್ತು ನಿರ್ಮಾಪಕ ಹರಿಖೋಡೆ ಅವರ ಕಾಂಬಿನೇಷನ್.ನಾಗಭರಣ ಅವರೊಂದಿಗೆ ಕೆಲಸ ಮಾಡಬೇಕು ಎನ್ನುವ ಆಸೆಯೂ ಇತ್ತು. ಅದು ಈ ಸಿನಿಮಾ ಮೂಲಕ ಈಡೇರಿತು. ಕಮರ್ಷಿಯಲ್ ಸಿನಿಮಾಗಳಲ್ಲಿ ಎಲ್ಲರೂ ನಟಿಸುತ್ತಾರೆ. ಆದರೆ ಅದರ ಜತೆ ಕ್ಲಾಸಿಕಲ್ ಸಿನಿಮಾದಲ್ಲಿಯೂ ನಟಿಸಬೇಕು ಎನ್ನುವ ಹಂಬಲವಿತ್ತು' ಎನ್ನುತ್ತಾರೆ ಧನಂಜಯ.
'ಸಿನಿಮಾ ಆರಂಭಕ್ಕೂ ಮುನ್ನ ನಾಗಾಭರಣ ಒಂದಿಷ್ಟು ಪುಸ್ತಕಗಳನ್ನು ಕೊಟ್ಟಿದ್ದರು. ಅದನ್ನು ನಾನು ಓದಿ ಅದರ ಸಾಕಷ್ಟು ಅಂಶಗಳನ್ನು ತಿಳಿದುಕೊಳ್ಳಬೇಕಿತ್ತು. ಅಲ್ಲದೆ ಬರಹಗಾರರು ಸ್ಕ್ರಿಪ್ಟ್ ಬಗ್ಗೆ ಚರ್ಚೆ ಮಾಡಿದ್ದನ್ನು ಅವರು ರೆಕಾರ್ಡ್ ಮಾಡಿ ನನಗೆ ಕೊಟ್ಟಿದ್ದರು. ಅದನ್ನು ಪ್ರಯಾಣ ಮಾಡುವಾಗ, ಬಿಡುವಿನ ವೇಳೆಯಲ್ಲಿ ಕೇಳುತ್ತಾ ಕೇಳುತ್ತಾ ಅರ್ಥ ಮಾಡಿಕೊಳ್ಳಲು ಪ್ರಯತ್ನಪಟ್ಟಿದ್ದೆ. ಇನ್ನು ಪೂರ್ತಿ ಸ್ಕ್ರಿಪ್ಟನ್ನು ಮೊದಲೇ ಕೊಟ್ಟಿದ್ದರು. ಅದನ್ನು ಮೊದಲೇ ಓದಿಕೊಂಡು ಅಭ್ಯಾಸ ಮಾಡಿಕೊಂಡಿದ್ದೆ' ಎಂದು ತಯಾರಿಯ ವಿವರ ನೀಡುತ್ತಾರೆ.
'ಅಲ್ಲಮ ಸಿನಿಮಾ ಯುವಕರಿಗೆ ಕನೆಕ್ಟ್ ಆಗುತ್ತದೆ. ಈ ಸಿನಿಮಾ ಸೆಟ್‌ನಲ್ಲಿದ್ದ ಸಾಕಷ್ಟು ಮಂದಿ ಯುವಕರಿಗೆ ಅಲ್ಲಮನ ಬಗ್ಗೆ ಗೊತ್ತಿರಲಿಲ್ಲ, ಸಿನಿಮಾ ಮುಗಿಯವ ಹೊತ್ತಿಗೆ ಎಲ್ಲರೂ ಅಲ್ಲಮರ ಅಭಿಮಾನಿಗಳಾಗಿಬಿಟ್ಟರು' ಎಂದು ಹೇಳಲು ಈ ನಟ ಮರೆಯುವುದಿಲ್ಲ. ಧಾರವಾಡದಲ್ಲಿ ನಡೆಯುತ್ತಿರುವ ಸಾಹಿತ್ಯ ಸಂಭ್ರಮದ ವೇಳೆ ಶನಿವಾರ ಅಲ್ಲಮ ಸಿನಿಮಾವನ್ನು ಸ್ಕ್ರೀನಿಂಗ್ ಮಾಡಲಾಯಿತಂತೆ. ಆಗ ಅಲ್ಲಿದ್ದವರೆಲ್ಲ ಎದ್ದು ನಿಂತು ಚಪ್ಪಾಳೆ ತಟ್ಟಿ ಅಭಿನಂದಿಸಿದ್ದಾರೆ. ಬರೀ ಶಿಳ್ಳೆಗಳನ್ನು ಕೇಳುತ್ತಿದ್ದ ಧನಂಜಯ, ಬಹಳ ದಿನಗಳ ನಂತರ ಚಪ್ಪಾಳೆ ಕೇಳಿ ಥ್ರಿಲ್ ಆಗಿದ್ದಾರೆ.
'ಇಂತಹ ಕ್ಲಾಸಿಕ್ ಸಿನಿಮಾಗಳು ತಯಾರಾಗುವುದೇ ಕಡಿಮೆ. ಆ ಪ್ರಯತ್ನದಲ್ಲಿ ನಾನು ಭಾಗವಾಗುವುದೇ ದೊಡ್ಡ ಖುಷಿ. ಇಂಥ ಅವಕಾಶ ಸಿಕ್ಕಾಗ ಎಷ್ಟು ಸಾಧ್ಯವೋ ಅಷ್ಟು ತೊಡಗಿಸಿಕೊಳ್ಳಬೇಕು. ಆ ಅದೃಷ್ಟ ನನಗೆ ಒದಗಿ ಬಂದಿದ್ದು ಸಂಭ್ರಮದ ವಿಷಯ'
-ಧನಂಜಯ, ನಟ | 0 |
Bengaluru, First Published 8, Oct 2018, 1:00 PM IST
Highlights
ಬಾಲಿವುಡ್ ನಟ ರಣವೀರ್ ಸಿಂಗ್‌ನಂಥಾ ಲುಕ್ ಮತ್ತು ದೇಹಧಾರ್ಡ್ಯ ಹೊಂದಿರುವ ಧೀರೇನ್ ಸಿದ್ಧರಾಗಿಯೇ ಚಿತ್ರರಂಗಕ್ಕೆ ಬರುತ್ತಿದ್ದಾರೆ. ಇವರ ಹಿನ್ನೆಲೆಯೇ ಇವರ ದೊಡ್ಡ ಶಕ್ತಿ. ನಟ ರಾಮ್ ಕುಮಾರ್ ಪುತ್ರ ಇವರು.
ಬೆಂಗಳೂರು (ಅ. 08): ಚೂಪಾದ ಹುರಿ ಮೀಸೆ, ಭಾರಿ ಗಡ್ಡ, ಗಮನ ಸೆಳೆಯುವ ಹೇರ್ ಸ್ಟೈಲ್ ಜೊತೆಗೆ ಫೋಟೋಶೂಟ್ ಮಾಡಿಸಿಕೊಂಡಾಗಲೇ ಧೀರೇನ್ ರಾಮ್‌ಕುಮಾರ್ ಚಿತ್ರರಂಗಕ್ಕೆ ಆಗಮಿಸುತ್ತಿದ್ದಾರೆ ಅನ್ನುವುದು ಸಾಬೀತಾಗಿತ್ತು.
ಇದೀಗ ಚಿತ್ರರಂಗ ಪ್ರವೇಶಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಪ್ರಖ್ಯಾತ ನಿರ್ಮಾಪಕ ಜಯಣ್ಣ- ಭೋಗೇಂದ್ರ ಅವರು ರಾಮ್‌ಕುಮಾರ್ ಪುತ್ರನನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಯಶ್ ಅಭಿನಯದ ‘ಮೈ ನೇಮ್ ಇಸ್ ಕಿರಾತಕ’ ಚಿತ್ರದ ನಿರ್ದೇಶಕ ಅನಿಲ್ ಕುಮಾರ್ ಈ ಚಿತ್ರವನ್ನೂ ನಿರ್ದೇಶಿಸುತ್ತಿದ್ದಾರೆ. ಯಶ್ ಸಿನಿಮಾ ಮುಗಿದ ಕೂಡಲೇ ಈ ಚಿತ್ರ ಆರಂಭವಾಗಲಿದೆ.
ಬಾಲಿವುಡ್ ನಟ ರಣವೀರ್ ಸಿಂಗ್‌ನಂಥಾ ಲುಕ್ ಮತ್ತು ದೇಹಧಾರ್ಡ್ಯ ಹೊಂದಿರುವ ಧೀರೇನ್ ಸಿದ್ಧರಾಗಿಯೇ ಚಿತ್ರರಂಗಕ್ಕೆ ಬರುತ್ತಿದ್ದಾರೆ. ಇವರ ಹಿನ್ನೆಲೆಯೇ ಇವರ ದೊಡ್ಡ ಶಕ್ತಿ. ತಾತ ಡಾ.ರಾಜ್ ಕುಮಾರ್, ತಂದೆ ರಾಮ್‌ಕುಮಾರ್, ಮಾವಂದಿರಾದ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಎಲ್ಲರೂ ಕನ್ನಡ ಚಿತ್ರರಂಗದ ಆಸ್ತಿಗಳು. ಇದೀಗ ಅವರ ದಾರಿಯಲ್ಲೇ ಧೀರೇನ್ ಬಂದಿದ್ದಾರೆ.
ಧೀರೇನ್ ಅವರು ರಾಮ್‌ಕುಮಾರ್- ಪೂರ್ಣಿಮಾ ಅವರ ಪುತ್ರ. ಈಗ ಸ್ಯಾಂಡಲ್‌ವುಡ್‌ನಲ್ಲಿ ಬಿಗ್ ಬ್ಯಾನರ್ ಮೂಲಕ ಸಿನಿಮಾ ಜಗತ್ತಿಗೆ ಕಾಲಿಡುತ್ತಿದ್ದು, ಅದಕ್ಕೆ ತೆರೆ ಮರೆಯಲ್ಲಿ ಸಿದ್ಧತೆ ಶುರುವಾಗಿದೆ. ಈ ಹಿಂದೆ ಧೀರೇನ್ ರಾಮ್‌ಕುಮಾರ್ ಸಿನಿಮಾ ಎಂಟ್ರಿ ಕುರಿತು ಈ ಹಿಂದೆಯೇ ಚರ್ಚೆ ಆಗಿತ್ತು.
ಅದಕ್ಕೆ ಕಾರಣವಾಗಿದ್ದು ಧೀರೇನ್ ಮಾಡಿಸಿದ್ದ ಚೆಂದದ ಫೋಟೋಶೂಟ್. ಆನಂತರ ಏನಾಯಿತು ಎನ್ನುವ ಹೊತ್ತಿಗೀಗ ಗಾಂಧಿನಗರದ ಬಹು ದೊಡ್ಡ ಚಿತ್ರ ನಿರ್ಮಾಣ ಸಂಸ್ಥೆ ಜಯಣ್ಣ ಕಂಬೈನ್ಸ್ ಮೂಲಕ ಧೀರೇನ್ ಸಿನಿಮಾ ಎಂಟ್ರಿಗೆ ತಯಾರಿ ನಡೆಯುತ್ತಿದೆ.
ಧೀರೇನ್ ಚಿತ್ರರಂಗಕ್ಕೆ ಬರಬೇಕು ಅಂತಲೇ ನಟನೆ ತರಬೇತಿ ಪಡೆದುಕೊಂಡಿದ್ದರು. ಅಲ್ಲದೇ ಸಿಕ್ಸ್ ಪ್ಯಾಕ್ ಮಾಡಿಸಿಕೊಂಡು ಸಿದ್ಧರಾಗಿದ್ದರು. ಈಗ ಡಾನ್ಸ್, ಫೈಟು, ಜಿಮ್ ವರ್ಕೌಟ್ ಜತೆಗೆ ನಟನೆಯಲ್ಲೂ ಪಕ್ಕಾ ಆಗಿದ್ದಾರೆ. ಹಾಗಾಗಿಯೇ ನಿರ್ಮಾಪಕ ಜಯಣ್ಣ ಸಿನಿಮಾ ನಿರ್ಮಾಣಕ್ಕೂ ರೆಡಿ ಆಗಿದ್ದಾರೆ. ಧೀರೇನ್ ಲುಕ್‌ಗೆ, ಗೆಟಪ್ಗೆ ತಕ್ಕಂತೆ ಪಕ್ಕಾ ಯೂತ್‌ಫುಲ್ ಕತೆಯನ್ನು ನಿರ್ದೇಶಕ ಅನಿಲ್ ರೆಡಿ ಮಾಡುತ್ತಿದ್ದಾರೆ.
ಈ ಸಿನಿಮಾ ಸೆಟ್ಟೇರುವುದಕ್ಕೆ ಇನ್ನಷ್ಟು ಸಮಯ ಬೇಕಿದೆ. ಕಾರಣ ಯಶ್ ನಟನೆಯ ಮೈ ನೇಮ್ ಈಸ್ ಕಿರಾತಕ ಮುಗಿಯಬೇಕಿದೆ. ನಿರ್ದೇಶಕ ಅನಿಲ್ ಮತ್ತು ಜಯಣ್ಣ ಈಗ ಅದರ ಒತ್ತಡದಲ್ಲಿದ್ದಾರೆ. ಅದು ಮುಗಿದ ನಂತರವೇ ಈ ಸಿನಿಮಾ ಕೆಲಸ. ಹಾಗಂತ ಈ ಸಿನಿಮಾದ ಮುಹೂರ್ತಕ್ಕಾಗಿ ಅಲ್ಲಿಯವರೆಗೂ ಕಾಯುವ ಅವಶ್ಯಕತೆಯಿಲ್ಲ, ಸದ್ಯದಲ್ಲೇ ಈ ಚಿತ್ರವನ್ನು ಅಧಿಕೃತವಾಗಿ ಅನೌನ್ಸ್ ಮಾಡುವ ಯೋಚನೆಯಲ್ಲಿ ನಿರ್ಮಾಪಕರು ಇದ್ದಾರೆ ಎನ್ನಲಾಗಿದೆ.
Last Updated 8, Oct 2018, 1:00 PM IST | 0 |
ಕಳಚಿ ಬಿತ್ತು ಕರಣ್ ಜೋಹರ್ ಮುಖವಾಡ..!
02-09-2016 12:14PM IST / No Comments / Posted In: Latest News , Entertainment
ಬಹುಷಃ ಇದು ಈ ವರ್ಷದ ಬಾಲಿವುಡ್ ನಲ್ಲಿ ನಡೆದ ಅತಿ ದೊಡ್ಡ ವಿವಾದ. ಖ್ಯಾತ ನಿರ್ದೇಶಕ ಕರಣ್ ಜೋಹರ್ ಹಾಗೂ ಅಜಯ್ ದೇವಗನ್ ನಡುವಣ ಮುಸುಕಿನ ಗುದ್ದಾಟ ಈಗ ಬಯಲಾಗಿದೆ. ಅಸಲಿಗೆ ವಿವಾದ ಶುರುವಾಗಿದ್ದು ಅಜಯ್ ದೇವಗನ್ ರ ‘ಶಿವಾಯ್’ ಹಾಗೂ ಕರಣ್ ಜೋಹರ್ ನಿರ್ದೇಶನದ ‘ಏ ದಿಲ್ ಹೈ ಮುಷ್ಕಿಲ್’ ಸಿನಿಮಾಗಳಿಂದ.
ಇವೆರಡೂ ಚಿತ್ರಗಳು ಒಟ್ಟೊಟ್ಟಿಗೆ ಅಕ್ಟೋಬರ್ 28ರಂದು ರಿಲೀಸ್ ಆಗ್ತಿವೆ. ಬಾಕ್ಸ್ ಆಫೀಸ್ ಫೈಟ್ ಗೂ ಮುನ್ನವೇ ಕರಣ್, ದೇವಗನ್ ವಿರುದ್ಧ ಷಡ್ಯಂತ್ರ ಮಾಡಿದ್ದಾರಂತೆ. ‘ಏ ದಿಲ್ ಹೈ ಮುಷ್ಕಿಲ್’ ಚಿತ್ರವನ್ನು ಹೊಗಳಲು ಮತ್ತು ದೇವಗನ್ ರ ‘ಶಿವಾಯ್’ ಚಿತ್ರದ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಲು ಕಮಾಲ್ ಆರ್.ಖಾನ್ ಗೆ ಕರಣ್ ಜೋಹರ್ 25 ಲಕ್ಷ ರೂಪಾಯಿ ಕೊಟ್ಟಿದ್ದಾರಂತೆ. ಈ ವಿಚಾರವನ್ನು ಕಮಾಲ್ ಖಾನ್, ನಿರ್ಮಾಪಕ ಕುಮಾರ್ ಮಂಗತ್ ಪಾಠಕ್ ಅವರ ಬಳಿ ಬಾಯ್ಬಿಟ್ಟಿದ್ದಾರೆ. ಅವರಿಬ್ಬರ ಫೋನ್ ಸಂಭಾಷಣೆ ಈಗ ಇಂಟರ್ನೆಟ್ ನಲ್ಲಿ ಹರಿದಾಡುತ್ತಿದ್ದು ಭಾರೀ ವಿವಾದ ಎಬ್ಬಿಸಿದೆ.
‘ಶಿವಾಯ್’ ಬಗ್ಗೆ ಕೆಟ್ಟದಾಗಿ ಮಾತನಾಡಲೆಂದೇ ತಾವು ಕರಣ್ ಜೋಹರ್ ಬಳಿ 25 ಲಕ್ಷ ರೂಪಾಯಿ ಪಡೆದಿದ್ದಾಗಿ ಕಮಾಲ್ ಖಾನ್ ಒಪ್ಪಿಕೊಂಡಿದ್ದಾರೆ. ಇತ್ತೀಚೆಗಷ್ಟೆ ಟ್ವಿಟ್ಟರ್ ನಲ್ಲಿ ಶಿವಾಯ್ ಬಗ್ಗೆ ಕೆಟ್ಟ ಟೀಕೆ ಮಾಡಿದ್ದ ಕಮಾಲ್ ಖಾನ್, ಕರಣ್ ಜೋಹರ್ ಅವರ ‘ಏ ದಿಲ್ ಹೈ ಮುಷ್ಕಿಲ್’ ಚಿತ್ರದ ಜೊತೆ ಸಂಘರ್ಷಕ್ಕಿಳಿಯದಂತೆ ಅಜಯ್ ದೇವಗನ್ ಗೆ ಸಲಹೆ ನೀಡಿದ್ದರು.
ನಿಮ್ಮ 'ಕನ್ನಡ ದುನಿಯಾ' ದ ತಾಜಾ ಸುದ್ದಿಗಳನ್ನು ಮೊಬೈಲ್ ನಲ್ಲಿ ಪಡೆಯಲು ಈ ಆಪ್ 'ಡೌನ್ ಲೋಡ್' ಮಾಡಿಕೊಳ್ಳಿ
Related News | 0 |
ಮಧುಮೇಹ ಇರುವ ವ್ಯಕ್ತಿಗಳು ರಾತ್ರಿ ಪಾಳಿಯಲ್ಲಿ ಕೆಲಸ ಮಾಡಬಾರದು!
Wellness
|
Published: Thursday, April 6, 2017, 23:41 [IST]
ಭೂ ಮೇಲಿರುವ ಪ್ರತಿಯೊಬ್ಬ ಮನುಷ್ಯ ಕೂಡ ಹೊಟ್ಟೆಪಾಡಿಗಾಗಿ ಏನಾದರೂ ಕೆಲಸ ಮಾಡಲೇಬೇಕಾಗುತ್ತದೆ. ಪ್ರತಿದಿನ ಶ್ರಮ ವಹಿಸದೆ ಇದ್ದರೆ ಹೊಟ್ಟೆ ತುಂಬುವುದು ಕಷ್ಟವಾಗುತ್ತದೆ. ಅವರವರ ಸಾಮರ್ಥ್ಯ ಹಾಗೂ ಶಿಕ್ಷಣಕ್ಕೆ ಅನುಗುಣವಾಗಿ ಏನಾದರೊಂದು ವೃತ್ತಿ ಮಾಡಿಕೊಂಡಿರುತ್ತಾರೆ. ಕೆಲವೊಂದು ಅನಾರೋಗ್ಯಗಳು ವೃತ್ತಿಗೆ ತೊಂದರೆಯುಂಟು ಮಾಡುತ್ತದೆ.
ಇದರಲ್ಲಿ ಪ್ರಮುಖವಾಗಿ ಮಧುಮೇಹ(ಡಯಾಬಿಟಿಸ್) ಇರುವವವರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾರೆ. ಅದರಲ್ಲೂ ಎರಡನೇ ಹಂತ(ಟೈಪ್ 2)ದ ಮಧುಮೇಹ ಇರುವವರಿಗೆ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ತುಂಬಾ ಕಷ್ಟವಾಗುತ್ತದೆ. ಅದರಲ್ಲೂ ಎರಡನೇ ಹಂತದ ಮಧುಮೇಹ ಇರುವ ವ್ಯಕ್ತಿಗಳು ರಾತ್ರಿ ಪಾಲಿಯಲ್ಲಿ ಕೆಲಸ ಮಾಡಬಾರದು ಎಂದು ಅಧ್ಯಯನಗಳು ಹೇಳಿವೆ.
ರಾತ್ರಿ ಪಾಲಿಯಲ್ಲಿ ಕೆಲಸ ಮಾಡುವಂತಹ ಎರಡನೇ ಹಂತದ ಮಧುಮೇಹ ರೋಗಿಗಳು ಗ್ಲೈಸೆಮಿಕ್ ಮಟ್ಟವು ಸರಾಸರಿ ಶೇ. 8.2ರಷ್ಟು ಇರುತ್ತದೆ. ಇದು ದಿನದಲ್ಲಿ ಕೆಲಸ ಮಾಡುವ ವ್ಯಕ್ತಿಗಳಲ್ಲಿ ಸರಾಸರಿ ಶೇ. 7.6 ರಷ್ಟಿರುತ್ತದೆ. ಕೆಲಸ ಮಾಡದೆ ಇರುವವರಲ್ಲಿ ಇದು 7.5 ರಷ್ಟು ಇರುತ್ತದೆ. ಮಧುಮೇಹ ನಿಯಂತ್ರಿಸುವ ನೈಸರ್ಗಿಕ 'ಜ್ಯೂಸ್'-ಶೀಘ್ರ ಪರಿಹಾರ
ಮಧುಮೇಹ ಇರುವಂತಹ ಹೆಚ್ಚಿನ ಜನರು ಶೇ.7ಕ್ಕಿಂತ ಕಡಿಮೆ ಎಐಸಿಗಾಗಿ ಶ್ರಮಿಸಬೆಕು ಎಂದು ಹಾರ್ಮೊನು ಹೆಲ್ತ್ ನೆಟ್ ವರ್ಕ್ ಹೇಳಿದೆ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವಂತಹ ವ್ಯಕ್ತಿಗಳ ಮಧುಮೇಹ ಮಟ್ಟವನ್ನು ನಿಯಂತ್ರಿಸುವ ಕಠಿಣತೆಗಳ ಬಗ್ಗೆ ಅಧ್ಯಯನವು ಜಾಗೃತಿಯನ್ನು ಮೂಡಿಸಿದೆ ಎಂದು ಥಾಯ್ಲೆಂಡ್ ನ ಮಹಿಡೊಲ್ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕ ಸಿರಿಮೊನ್ ರೆಯುತ್ರಕುಲ್ ತಿಳಿಸಿದರು.
ದಿನದಲ್ಲಿ ಕೆಲಸ ಮಾಡುವವರು ಅಥವಾ ನಿರುದ್ಯೋಗಿಗಳಿಗಿಂತ ರಾತ್ರಿ ಪಾಲಿಯಲ್ಲಿ ಕೆಲಸ ಮಾಡುವವರು ನಿದ್ರೆಯ ಸಮಯದ ತೊಂದರೆ ಹಾಗೂ ನಿದ್ರಾ ಕ್ರಮದಲ್ಲಿ ಆಗುವಂತಹ ಬದಲಾವಣೆಗಳಿಂದ ಸಮಸ್ಯೆಯಾಗುತ್ತದೆ ಎಂದು ಅಧ್ಯಯನವು ಹೇಳಿದೆ. ಈ ಅಧ್ಯಯನದ ವರದಿಯನ್ನು ಒರ್ಲಾಂಡೊದಲ್ಲಿ ನಡೆದ 2017ರ 99ನೇ ವಾರ್ಷಿಕ ಎಂಡೋ ಸಭೆಯಲ್ಲಿ ಪ್ರಸ್ತುತಪಡಿಸಲಾಯಿತು. ಈ ಅಧ್ಯಯನಕ್ಕಾಗಿ ರಾತ್ರಿ ಪಾಲಿಯಲ್ಲಿ ಕೆಲಸ ಮಾಡುವ ಸುಮಾರು 260 ಮಂದಿ ಹಾಗೂ ದಿನದಲ್ಲಿ ಕೆಲಸ ಮಾಡು 94 ಮತ್ತು 104 ಮಂದಿ ನಿರುದ್ಯೋಗಿಗಳನ್ನು ಸೇರಿಸಿಕೊಳ್ಳಲಾಯಿತು.
ದಿನದಲ್ಲಿ ಕೆಲಸ ಮಾಡುವವರು ಮತ್ತು ನಿರುದ್ಯೋಗಿಗಳಿಗಿಂತ ರಾತ್ರಿ ಪಾಲಿಯಲ್ಲಿ ಕೆಲಸ ಮಾಡುವಂತವರ ನಿದ್ರೆಯ ಅವಧಿ ತುಂಬಾ ಕಡಿಮೆಯಿರುತ್ತದೆ. ಇವರ ಕ್ಯಾಲರಿ ಸೇವನೆಯು ಹೆಚ್ಚಿರುತ್ತದೆ ಮತ್ತು ಬಿಎಂಐ ಕೂಡ ಹೆಚ್ಚಿರುತ್ತದೆ. ಎರಡನೇ ಹಂತದ ಮಧುಮೇಹ ಹೊಂದಿರುವ ವ್ಯಕ್ತಿಗಳು ರಾತ್ರಿ ಪಾಲಿಯಲ್ಲಿ ಕೆಲಸ ಮಾಡುತ್ತಾ ಇದ್ದರೆ ಅವರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಬೇಕು. ಆರೋಗ್ಯಕರ ಆಹಾರ, ನಿಯಮಿತ ವ್ಯಾಯಾಮ ಮತ್ತು ವೈದ್ಯರು ಸೂಚಿಸಿದಂತಹ ಮಾತ್ರೆಗಳನ್ನು ಸರಿಯಾಗಿ ತೆಗೆದುಕೊಳ್ಳುತ್ತಾ ಇರಬೇಕು ಎಂದು ರೆಯುತ್ರಕುಲ್ ತಿಳಿಸಿದರು.... | 1 |
ಬಾಂಗ್ಲಾದೇಶ ಎದುರಿನ ಟೆಸ್ಟ್: ರಷೀದ್ ಆಲ್‌ರೌಂಡ್ ಆಟ, ಅಫ್ಗಾನಿಸ್ತಾನ ಮೇಲುಗೈ
ಬಾಂಗ್ಲಾದೇಶ ಎದುರಿನ ಟೆಸ್ಟ್
ಬಾಂಗ್ಲಾದೇಶ ಎದುರಿನ ಟೆಸ್ಟ್: ರಷೀದ್ ಆಲ್‌ರೌಂಡ್ ಆಟ, ಅಫ್ಗಾನಿಸ್ತಾನ ಮೇಲುಗೈ
ಪ್ರಜಾವಾಣಿ ವಾರ್ತೆ
Published:
06 ಸೆಪ್ಟೆಂಬರ್ 2019, 22:16 IST
Updated:
06 ಸೆಪ್ಟೆಂಬರ್ 2019, 22:16 IST
ಅಕ್ಷರ ಗಾತ್ರ :
ಆ
ಆ
ಚಿತ್ತಗಾಂಗ್ (ಎಎಫ್‌ಪಿ): ಸ್ಪಿನ್ ಪರಿಣತ ರಷೀದ್ ಖಾನ್ ಬ್ಯಾಟ್‌ನಿಂದಲೂ, ಚೆಂಡಿನಿಂದಲೂ ಉತ್ತಮ ಪ್ರದರ್ಶನ ನೀಡಿದರು. ಆತಿಥೇಯ ಬಾಂಗ್ಲಾದೇಶ ವಿರುದ್ಧ ಏಕೈಕ ಟೆಸ್ಟ್‌ನ ಎರಡನೇ ದಿನವಾದ ಶುಕ್ರವಾರ ಅವರ ಆಲ್‌ರೌಂಡ್ ಆಟದ ನೆರವಿನಿಂದ ಅಫ್ಗಾನಿಸ್ತಾನ ಉತ್ತಮ ಸ್ಥಿತಿಗೆ ತಲುಪಿತು.
ಕೆಳಕ್ರಮಾಂಕದಲ್ಲಿ 61 ಎಸೆತಗಳಲ್ಲಿ 51 ರನ್‌ಗಳ ಉಪಯುಕ್ತ ಅರ್ಧಶತಕ ಹೊಡೆದ ಪರಿಣಾಮ ಬಾಂಗ್ಲಾದೇಶದ ಮೊತ್ತ 342 ರನ್‌ಗಳಿಗೆ ಬೆಳೆಯಿತು. ನಂತರ 47 ರನ್ನಿಗೆ 4 ವಿಕೆಟ್ ಪಡೆದರು. ದಿನದಾಟದ ಕೊನೆಗೆ ಆತಿಥೇಯರು 8 ವಿಕೆಟ್‌ಗೆ 194 ರನ್ ಗಳಿಸಿ ಪರದಾಡುತಿತ್ತು.
ಬಾಂಗ್ಲಾದೇಶದ ಪರ ಮೊಮಿನುಲ್ ಹಕ್ ಪ್ರತಿರೋಧ ತೋರಿದ್ದು, 71 ಎಸೆತಗಳ ಇನಿಂಗ್ಸ್‌ನಲ್ಲಿ 52 ರನ್ ಹೊಡೆದರು. ಮೊಸಾದಿಕ್ ಹುಸೇನ್ 44 ರನ್‌ಗಳೊಡನೆ ಅಜೇಯರಾಗುಳಿದು ಬಾಂಗ್ಲಾ. ‘ಕ್ರಿಕೆಟ್ ಶಿಶು’ಗಳ ಎದುರು ಅಲ್ಪಮೊತ್ತಕ್ಕೆ ಕುಸಿಯದಂತೆ ನೋಡಿಕೊಂಡರು. ಮೊಸಾದಿಕ್ ಅವರು ಮುರಿಯದ 9ನೇ ವಿಕೆಟ್‌ಗೆ ತೈಜುಲ್ ಇಸ್ಲಾಂ (ಔಟಾಗದೇ 11) ಜೊತೆ 48 ರನ್ ಸೇರಿಸಿದ್ದಾರೆ.
ಬಾಂಗ್ಲಾದೇಶ, ಪ್ರವಾಸಿ ತಂಡದ ಮೊತ್ತ ದಾಟಬೇಕಾದರೆ ಉಳಿದಿರುವ ಎರಡು ವಿಕೆಟ್‌ಗಳಿಂದ ಇನ್ನೂ 148 ರನ್ ಗಳಿಸಬೇಕಾಗಿದೆ.
ಸ್ಕೋರುಗಳು: ಅಫ್ಗಾನಿಸ್ತಾನ: 1ನೇ ಇನಿಂಗ್ಸ್: 117 ಓವರುಗಳಲ್ಲಿ 342 (ರಹಮತ್ ಶಾ 102, ಅಸ್ಗರ್ ಆಫ್ಗನ್ 92, ಅಫ್ಸರ್ ಝಝೈ 41, ರಶೀದ್ ಖಾನ್ 51; ತೈಜುಲ್ ಇಸ್ಲಾಂ 116ಕ್ಕೆ4, ಶಕೀಬ್ ಅಲ್ ಹಸನ್ 64ಕ್ಕೆ2, ನಯೀಮ್ ಹಸನ್ 43ಕ್ಕೆ2);
ಬಾಂಗ್ಲಾದೇಶ: 1ನೇ ಇನಿಂಗ್ಸ್: 67 ಓವರುಗಳಲ್ಲಿ 8 ವಿಕೆಟ್‌ಗೆ 194 (ಲಿಟ್ಟನ್ ದಾಸ್ 33, ಮೊಮಿನುಲ್ ಹಕ್ 52, ಮೊಸಾದೆಕ್ ಹುಸೇನ್ ಬ್ಯಾಟಿಂಗ್ 44, ತೈಜುಲ್ ಇಸ್ಲಾಂ ಬ್ಯಾಟಿಂಗ್ 11; ಮೊಹಮದ್ ನಬಿ 53ಕ್ಕೆ2, ರಷೀದ್ ಖಾನ್ 47ಕ್ಕೆ4). | 2 |
#Gomonster Samsung M30s: ಹೊಸ ಸ್ಮಾರ್ಟ್‌ಫೋನ್ ನ ವಿಶೇಷತೆಗಳೇನು ನೋಡಿ! WATCH LIVE TV
ಈ ವೀಕೆಂಡ್‌ಗೆ ಕಿಕ್ ಕೊಡಲು ಬರ್ತಿರೋದು ಯಾರು?
ಈ ವಾರದ ವೀಕೆಂಡ್ ಅತಿಥಿಯಾಗಿ ಉತ್ತರ ಕರ್ನಾಟಕದ ಪ್ರತಿಭೆ, ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ಕಾಣಿಸಿಕೊಳ್ಳುತ್ತಿದ್ದಾರೆ.
ವಿಕ ಸುದ್ದಿಲೋಕ | Updated:
Apr 11, 2017, 01:16PM IST
ಫೋಟೋ ಕೃಪೆ: ಜೀ ಕನ್ನಡ ವಾಹಿನಿ
ರಮೇಶ್ ಅರವಿಂದ್ ನಡೆಸಿಕೊಡುವ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ಇಲ್ಲಿಯವರೆಗೂ ಹಲವಾರು ಸಾಧಕರು ಬಂದು ತಮ್ಮ ಜೀವನದ ಕತೆಯನ್ನು ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ. ಈ ವಾರದ ವೀಕೆಂಡ್ ಅತಿಥಿಯಾಗಿ ಉತ್ತರ ಕರ್ನಾಟಕದ ಪ್ರತಿಭೆ, ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ಕಾಣಿಸಿಕೊಳ್ಳುತ್ತಿದ್ದಾರೆ.
ತಮ್ಮ ಮಾತುಗಾರಿಕೆಯನ್ನೇ ಬಂಡವಾಳ ಮಾಡಿಕೊಂಡಿರುವ ಪ್ರಾಣೇಶ್, ಜ್ಯೂನಿಯರ್ ಬೀಚಿ ಅಂತಲೇ ಕರೆಯಿಸಿಕೊಳ್ಳುತ್ತಾರೆ. ಕರ್ನಾಟಕದಲ್ಲಷ್ಟೇ ಅಲ್ಲದೆ ದೇಶ-ವಿದೇಶಗಳಲ್ಲೂ ತಮ್ಮ ಹಾಸ್ಯ ಭಾಷಣದ ಮೂಲಕ ಜನರನ್ನು ನಗೆಗಡಲಲ್ಲಿ ತೇಲಿಸಿದ ಖ್ಯಾತಿ ಪ್ರಾಣೇಶ್ ಅವರಿಗೆ ಸಲ್ಲುತ್ತದೆ.
ಪ್ರೇಕ್ಷಕರ ಅಭಿಲಾಷೆಯ ಮೇರೆಗೆ ಜೀ ಕನ್ನಡ ವಾಹಿನಿ, ಬೀಚಿ ಪ್ರಾಣೇಶ್ ಅವರನ್ನು ಸಾಧಕರ ಸೀಟ್‌ನಲ್ಲಿ ಕುಳಿತುಕೊಳ್ಳಲು ಆಮಂತ್ರಿಸಿದೆ. ಪ್ರಾಣೇಶ್ ಭಾಗವಹಿಸಿರುವ ಎಪಿಸೋಡ್‌ಗಳು ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿವೆ. ಇದಕ್ಕೂ ಮುನ್ನ ಈ ವಿಡಿಯೋ ತುಣುಕನ್ನು ನೋಡಿ ಎಂಜಾಯ್ ಮಾಡಿ. | 0 |
ಬಿಗ್ ಬಾಸ್ ನಿರೂಪಕನಾಗಿ ಕಾಣಿಸಿಕೊಳ್ಳಬೇಕು ಅಂದ್ರೆ ಹುಚ್ಚ ವೆಂಕಟ್'ಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ ಕಿಚ್ಚ ಸುದೀಪ್
Highlights
ನಾನು ಈಗಷ್ಟೆ ಕಾರ್ಯಕ್ರಮವನ್ನು ನೋಡಿದೆ, ಅದರಲ್ಲಿ ಹಚ್ಚು ವೆಂಕಟ್ ಮಾಡಿರುವುದು ಅಕ್ಷಮ್ಯ ತಪ್ಪು, ನಾನು ಖಂಡಿತ ನ್ಯಾಯದ ಪರ ನಿಲ್ಲುತ್ತೇನೆ ಎಂದಿದ್ದಾರೆ.
ಬೆಂಗಳೂರು(ನ.16): ನಿನ್ನೇ ಬಿಗ್ ಬಾಸ್ ಮನೆಗೆ ಅತಿಥಿಯಾಗಿ ಎಂಟ್ರಿ ಕೊಟ್ಟಿದ್ದ 'ಹುಚ್ಚ' ವೆಂಕಟ್, ಕಳೆದ ಸೀಜನ್'ನಲ್ಲಿ ಮಾಡಿದಂತೆ ಈ ಬಾರಿಯೂ ಸರ್ಧಿಯೊಬ್ಬರ ಮೇಲೆ ಕೈ ಮಾಡಿ ಬಿಗ್ ಮನೆಯಿಂದ ಹೊರ ದಬ್ಬಿಸಿಕೊಂಡಿದ್ದಾರೆ.
ಕಳೆದ ಸೀಜನ್'ನಲ್ಲಿ ರವಿ ಮುರೂರು ಅವರ ಮೇಲೆ ಹಲ್ಲೆ ನಡೆಸಿದ್ದ 'ಹುಚ್ಚ' ವೆಂಕಟ್, ಸೀಜನ್4ರ ಸ್ಪರ್ಧಿ ಪ್ರಥಮ್'ಗೆ ರಕ್ತ ಬರುವಂತೆ ಹೊಡೆದು ಮನೆಯಿಂದ ಹೊರ ಬಂದಿದ್ದಾರೆ.
ಹುಚ್ಚ ವೆಂಕಟ್'ರನ್ನು ಬಿಗ್ ಬಾಸ್ ಮನೆಗೆ ಕೆಲವೊಂದು ಶರತ್ತುಗಳನ್ನು ವಿಧಿಸಿ, ಜೊತೆಗೆ ಗಾರ್ಡ್'ಗಳ ಜೊತೆ ಬಿಗ್ ಮನೆಯೊಳಗೆ ಎಂಟ್ರಿ ಪಡೆದಿದ್ದರು. ಆದರೆ ಕೊನೆಯಲ್ಲಿ ಪ್ರಥಮ್ ಮೇಲೆ ಕೈ ಮಾಡಿದ್ದರು.
ಇದಕ್ಕೆ ಟ್ವೀಟರ್ ಮೂಲಕ ಪ್ರತಿಕ್ರಿಯೆ ನೀಡಿರುವ ಬಿಗ್ ಬಾಸ್ ನಿರೂಪಕ ಕಿಚ್ಚ ಸುದೀಪ್, ನಾನು ಈಗಷ್ಟೆ ಕಾರ್ಯಕ್ರಮವನ್ನು ನೋಡಿದೆ, ಅದರಲ್ಲಿ ಹಚ್ಚು ವೆಂಕಟ್ ಮಾಡಿರುವುದು ಅಕ್ಷಮ್ಯ ತಪ್ಪು, ನಾನು ಖಂಡಿತ ನ್ಯಾಯದ ಪರ ನಿಲ್ಲುತ್ತೇನೆ ಎಂದಿದ್ದಾರೆ.
'ನ್ಯಾಯ ಸಿಕ್ಕಿದ ನಂತರವೇ ಈ ಕಾರ್ಯಕ್ರಮದ ನಿರೂಪಕನಾಗಿ ಕಾಣಿಸಿಕೊಳ್ಳುವೆ, ಇದು ನನ್ನ ಪ್ರೇಕ್ಷಕರಿಗೆ ನಾನು ನೀಡುವ ಭರವಸೆ' ಎಂದಿರುವ ಕಿಚ್ಚ ಸುದೀಪ್, ಹುಚ್ಚ ವೆಂಕಟ್ ಬಿಗ್ ಬಾಸ್ ಮನೆಯೊಳಗೆ ಹೋಗಿ ಸ್ಪರ್ಧಿಗಳ ಮೇಲೆ ದೈಹಿಕ ಹಲ್ಲೆ ನಡೆಸಿರುವುದು ತಪ್ಪು, ಆತನಿಗೆ ಶಿಕ್ಷೆ ಆಗಲೇ ಬೇಕು ಎಂದು ಸುದೀಪ್ ಆಗ್ರಹಿಸಿದ್ದಾರೆ.
Just saw th episode and this act by Huccha Venkat is inexcusable... I shall stand by wat needs to be done...
— Kichcha Sudeepa (@KicchaSudeep) November 15, 2016
@KicchaSudeep A scripted & TRP gimmicks.Trying to attract TRP using HV n making people fool. No doubt #BBK4 is just a flop show frm the Day1
— Bharath Suryaprakash (@bhsngr) November 15, 2016
This is my promise to my viewers and the contestants tat I shall only appear again to host only after justice is done.
— Kichcha Sudeepa (@KicchaSudeep) November 15, 2016
Last Updated 11, Apr 2018, 12:53 PM IST | 0 |
ಬೇಸಿಗೆಯಲ್ಲಿ ಕಣ್ಣಿನ ಸೋಂಕು ಕಾಡಬಹುದು
ಬೇಸಿಗೆಯಲ್ಲಿ ಕಣ್ಣಿನ ಸೋಂಕು ಕಾಡಬಹುದು
LK ¦ Apr 25, 2018 05:41:17 PM (IST)
ಹಲವು ಕಾರಣಗಳಿಂದಾಗಿ ಜನ ನಗರದತ್ತ ಮುಖ ಮಾಡುತ್ತಿದ್ದಾರೆ. ಆದರೆ ನಗರದಲ್ಲಿ ಇರುವವರೆಲ್ಲರೂ ಸುರಕ್ಷಿತವಾಗಿದ್ದಾರಾ? ಆರೋಗ್ಯವಾಗಿದ್ದಾರಾ? ಎಂಬ ಪ್ರಶ್ನೆ ಹಾಕಿ ನೋಡಿದರೆ ಹೆಚ್ಚುತ್ತಿರುವ ತಾಪಮಾನ, ವಾಯು ಮಾಲಿನ್ಯ ಇವುಗಳನ್ನೆಲ್ಲ ಗಮನಿಸಿದರೆ ನಗರದಲ್ಲಿ ಆರೋಗ್ಯಕಾರಿ ವಾತಾವರಣ ಇಲ್ಲ ಎಂಬುದನ್ನು ತೋರ್ಪಡಿಸುತ್ತದೆ.
ಹಾಗೆಂದು ನಗರ ಬಿಟ್ಟು ಹೊರ ಹೋಗಿ ಬದುಕಲು ಸಾಧ್ಯವಿಲ್ಲ. ಬದಲಿಗೆ ನಾವೇ ಒಂದಿಷ್ಟು ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಆರೋಗ್ಯಕರ ವಾತಾವರಣ ನಿರ್ಮಿಸಿಕೊಳ್ಳುವುದು ಅನಿವಾರ್ಯವಾಗಿದೆ.
ಸಾಮಾನ್ಯವಾಗಿ ಬೇಸಿಗೆಯಲ್ಲಿ ವಾಂತಿ, ಭೇದಿ, ತಲೆನೋವು, ತುರಿಕೆ ಹೀಗೆ ಹತ್ತು ಹಲವು ಸಮಸ್ಯೆಗಳು ಕಾಣಿಸುತ್ತಿವೆ. ಈ ಸೋಂಕುಗಳ ಪೈಕಿ ಕಣ್ಣಿನ ಸೋಂಕು ಅಪಾಯಕಾರಿಯಾಗಿದೆ.
ಈ ಕಣ್ಣಿನ ಸೋಂಕನ್ನು ಲಘುವಾಗಿ ಪರಿಗಣಿಸದೆ ವೈದ್ಯರ ಬಳಿಗೆ ತೆರಳಿ ಪರೀಕ್ಷಿಸಿ ಔಷಧಿ ಪಡೆಯುವುದು ಉತ್ತಮ. ಏಕೆಂದರೆ ಕೆಲವೊಮ್ಮೆ ಸೋಂಕುಗಳು ವಿವಿಧ ರೋಗಗಳಿಗೆ ಕಾರಣವಾಗಲಿವೆ.
ಹಾಗೆ ನೋಡಿದರೆ ಈ ಸೋಂಕುಗಳು ಪರಿಸರದಲ್ಲಿನ ಮಾಲಿನ್ಯದ ಪರಿಣಾಮದಿಂದ ಆಗುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಸೋಂಕುಗಳ ಬಗ್ಗೆ ತಿಳಿಯದೆ ಸ್ವಯಂ ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಒಳ್ಳೆಯದಲ್ಲ.
ಬೇಸಿಗೆಯಲ್ಲಿ ಕಣ್ಣಿನ ಸೋಂಕು ಹೆಚ್ಚಾಗಿ ಕಾಣಿಸುತ್ತದೆ. ಇದಕ್ಕೆ ಸಕಾಲದಲ್ಲಿ ಚಿಕಿತ್ಸೆ ಪಡೆಯದೇ ಹೋದರೆ ಸೋಂಕುಗಳು, ಕಣ್ಣಿನ ಕಾರ್ನಿಯಾ ಮೇಲೆ ಪರಿಣಾಮ ಬೀರಿ ದೃಷ್ಟಿಗೆ ಧಕ್ಕೆ ತರಲಿವೆ. ಸೋಂಕುಗಳಿಂದ ನೋವು, ಕಣ್ಣು ಕೆಂಪಾಗುವುದು, ತುರಿಕೆ, ಇರಿಸು ಮುರಿಸಿನ ಸಮಸ್ಯೆ ಕಾಣಿಸುತ್ತದೆ.
ಕಣ್ಣಿನ ಸಮಸ್ಯೆ ಕಾಣಿಸಿಕೊಂಡಾಗಲೆಲ್ಲ ಕೆಲವರು ಕಣ್ಣಿಗೆ ಐ ಡ್ರಾಪ್ಸ್ ಹಾಕುತ್ತಾರೆ. ಇದು ಒಳ್ಳೆಯದಲ್ಲ. ವೈದ್ಯರ ಸಲಹೆಯಿಲ್ಲದೆ ಯಾವುದೇ ಡ್ರಾಪ್ಸ್ ಗಳನ್ನು ಬಳಸಬಾರದು. ಇದರಿಂದ ಅಡ್ಡ ಪರಿಣಾಮಗಳಾಗುವ ಸಾಧ್ಯತೆಯಿದ್ದು, ದೃಷ್ಟಿಪಠಲ, ಗ್ಲುಕೋಮಾ, ಕಾರ್ನಿಯಾಗೆ ಧಕ್ಕೆಯಾಗುವ ಸಾಧ್ಯತೆಯಿದೆ.
ಬೆಂಗಳೂರಿನಂತಹ ನಗರಗಳಲ್ಲಿ ಪ್ರತಿನಿತ್ಯ ಸುಮಾರು 10 ಮಂದಿ ರೋಗಿಗಳ ಪೈಕಿ ನಾಲ್ಕು ಮಂದಿಗೆ ಸೋಂಕು ಸಮಸ್ಯೆ ಇರುವುದು ಪತ್ತೆಯಾಗಿದೆ. ಆದರೆ, ಸೂಕ್ತ ನೀರಿನ ಬಳಕೆಯಿಂದ ಈ ಸಮಸ್ಯೆಯನ್ನು ಬಗೆ ಹರಿಸಬಹುದು ಎನ್ನುತ್ತಾರೆ ವೈದ್ಯರು.
ಕಣ್ಣಿನ ಸೋಂಕುಗಳನ್ನು ತಡೆಗಟ್ಟಲು ನಾವೇ ಕೆಲವೊಂದು ಕ್ರಮಗಳನ್ನು ಅನುಸರಿಸುವುದು ಒಳ್ಳೆಯದು. ಅದೇನೆಂದರೆ ಪರಿಸರವನ್ನು ಶುಚಿಯಾಗಿಡುವ ಮೂಲಕ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳುವುದು, ಕಾಸ್ಮೆಟಿಕ್ ಬಳಕೆಯನ್ನು ಆದಷ್ಟು ತಪ್ಪಿಸುವುದು ಮುಖ್ಯವಾಗಿ ಮೇಕ್ ಅಪ್ ಬಳಕೆಯನ್ನು ಗಣನೀಯವಾಗಿ ಕುಗ್ಗಿಸುವುದು, ನಿಯಮಿತವಾಗಿ ಕಣ್ಣನ್ನು ತಣ್ಣನೆಯ ನೀರಿನಿಂದ ಸ್ವಚ್ಛತೆ ಮಾಡುವುದರಿಂದ ಸೋಂಕನ್ನು ಸ್ವಲ್ಪಮಟ್ಟಿಗೆ ತಡೆಯಬಹುದು.
ಹವಾನಿಯಂತ್ರಿತ ವ್ಯವಸ್ಥೆಗೆ ಹತ್ತಿರದಲ್ಲಿ ಕೂರುವುದನ್ನು ಆದಷ್ಟು ಕಡಿಮೆ ಮಾಡಬೇಕು. ವುಲ್ಲನ್ ಹೊದಿಕೆಗಳ ಬಳಕೆಯನ್ನು ತಪ್ಪಿಸಬೇಕು, ಸಾಕು ಪ್ರಾಣಿಗಳನ್ನು ಶುಚಿಯಾಗಿಡಬೇಕು, ಆಟ ಆಡುವಾಗ ಅವುಗಳಿಂದ ದೂರ ಇರಬೇಕು. ಮನೆಯೊಳಗೆ ಕಾರ್ಪೆಟ್ ಬಳಕೆ ತಪ್ಪಿಸಬೇಕು. ಯಾವುದೇ ಕಾರಣಕ್ಕೂ ಸ್ವಯಂ ಚಿಕಿತ್ಸೆಯನ್ನು ಮಾಡದೆ ವೈದ್ಯರ ಬಳಿಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳಬೇಕು.
ಮನರಂಜನೆ | 1 |
Bengaluru, First Published 20, Nov 2018, 5:40 PM IST
Highlights
ಬೆಳಗಾವಿಯಲ್ಲಿ ನಡೆಯುತ್ತಿರುವ ಕರ್ನಾಟಕ ಹಾಗೂ ಮುಂಬೈ ನಡುವಿನ ರಣಜಿ ಪಂದ್ಯ ಮೊದಲ ದಿನವೇ ಕುತೂಹಲ ಕೆರಳಿಸಿದೆ. ಮೊದಲ ದಿನದಾಟದಲ್ಲಿ ಕನ್ನಡಿಗರ ಹೋರಾಟ ಹೇಗಿತ್ತು? ಇಲ್ಲಿದೆ ಹೈಲೈಟ್ಸ್.
ಬೆಳಗಾವಿ(ನ.20): ಮುಂಬೈ ವಿರುದ್ಧದ ರಣಜಿ ಪಂದ್ಯದ ಮೊದಲ ದಿನದಲ್ಲಿ ಕರ್ನಾಟಕ ದಿಟ್ಟ ಹೋರಾಟ ನೀಡಿದೆ. ಕೆವಿ ಸಿದ್ದಾರ್ಥ್ ಭರ್ಜರಿ ಶತಕ ಹಾಗೂ ಕೊನೈನ ಅಬ್ಬಾಸ್ ಅರ್ಧಶತಕದ ನೆರವಿನಿಂದ ಕರ್ನಾಟಕ ಮೊದಲ ದಿನದಲ್ಲಿ 4 ವಿಕೆಟ್ ನಷ್ಟಕ್ಕೆ 211 ರನ್ ಸಿಡಿಸಿದೆ.
ಬೆಳಗಾವಿಯ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಕರ್ನಾಟಕ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಶಿಶಿರ್ ಭವಾನೆ ಕೇವಲ 5 ರನ್ ಸಿಡಿಸಿ ಔಟಾದರು. ಇನ್ನು ಡಿ ನಿಶ್ಚಲ್ 27 ರನ್ ಸಿಡಿಸಿ ಔಟಾದರು.
59 ರನ್‌ಗೆ ಎರಡು ವಿಕೆಟ್ ಕಳೆದುಕೊಂಡ ಕರ್ನಾಟಕಕ್ಕೆ ಕೊನೈನ ಅಬ್ಬಾಸ್, ಕೆವಿ ಸಿದ್ಧಾರ್ಥ್ ಜೊತೆಯಾಟದಿಂದ ಚೇತರಿಸಿಕೊಂಡಿತು. ಅತ್ಯುತ್ತಮ ಹೋರಾಟ ನೀಡಿದ ಕೆವಿ ಸಿದ್ದಾರ್ಥ್ ಆಕರ್ಷಕ ಶತಕ ಸಿಡಿಸಿ ಮಿಂಚಿದರು.
ಸಿದ್ದಾರ್ಥ್‌ಗೆ ಉತ್ತಮ ಸಾಥ್ ನೀಡಿದ ಅಬ್ಬಾಸ್ 64 ರನ್ ಸಿಡಿಸಿ ಔಟಾದರು. ಸ್ಟುವರ್ಟ್ ಬಿನ್ನಿ ಕೇವಲ 3 ರನ್ ಸಿಡಿಸಿ ಪೆವಿಲಿಯನ್ ಸೇರಿದರು. ಆದರೆ ಸಿದ್ದಾರ್ಥ್ ಜೊತೆ ಬ್ಯಾಟಿಂಗ್ ಮುಂದುವರಿಸಿದ ಶ್ರೇಯಸ್ ಗೋಪಾಲ್ ತಂಡಕ್ಕೆ ಆಸರೆಯಾಗಿದ್ದಾರೆ.
ಮಂದ ಬೆಳಕಿನ ಕಾರಣ 2 ಓವರ್ ಮೊದಲೇ ಆಟ ನಿಲ್ಲಿಸಲಾಯಿತು. ದಿನದಾಟದ ಅಂತ್ಯದಲ್ಲಿ ಕರ್ನಾಟಕ 4 ವಿಕೆಟ್ ನಷ್ಟಕ್ಕೆ 263 ರನ್ ಸಿಡಿಸಿದೆ. ಸಿದ್ದಾರ್ಥ್ ಅಜೇಯ 104 ಹಾಗೂ ಶ್ರೇಯಸ್ ಗೋಪಾಲ್ ಅಜೇಯ 47 ರನ್ ಸಿಡಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ಮುಂಬೈ ಪರ ಶಿವಂ ದುಬೆ 4 ವಿಕೆಟ್ ಕಬಳಿಸಿ ಮಿಂಚಿದರು.
Last Updated 20, Nov 2018, 5:43 PM IST | 2 |
11 ಅಕ್ಟೋಬರ್ 2018, 01:00 IST
Updated:
11 ಅಕ್ಟೋಬರ್ 2018, 01:00 IST
ಅಕ್ಷರ ಗಾತ್ರ :
ಆ
ಆ
ದಿನೇಶ್ ಬಾಬು ಅವರ ನೆಚ್ಚಿನ ಶಿಷ್ಯ ಶಿವಪ್ರಭು ವಿಶಿಷ್ಟವಾದ ಗುರುಕಾಣಿಕೆ ಸಲ್ಲಿಸಲು ಸಜ್ಜಾಗಿದ್ದಾರೆ. ದಿನೇಶ್ ಬಾಬು ನಿರ್ದೇಶಿಸಿದ್ದ ‘ಅಮೃತವರ್ಷಿಣಿ’ 1997ರಲ್ಲಿ ತೆರೆಕಂಡು ಭರ್ಜರಿ ಯಶಸ್ಸು ಕಂಡಿತ್ತು. ಈಗ ಶಿವಪ್ರಭು ಅದೇ ಶೀರ್ಷಿಕೆಯನ್ನಿಟ್ಟುಕೊಂಡು ಹೊಸ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಇದೇ ತಿಂಗಳ 19ಕ್ಕೆ ಚಿತ್ರದ ಮುಹೂರ್ತವೂ ನಡೆಯಲಿದೆ.
ಶಿವಪ್ರಭು
‘ಅಮೃತವರ್ಷಿಣಿ ಮತ್ತು ಸುಪ್ರಭಾತ ಈ ಎರಡೂ ನನ್ನ ನೆಚ್ಚಿನ ಸಿನಿಮಾಗಳು. ನಾನು ಮಾಡಿಕೊಂಡಿರುವ ಕಥೆಗೂ ಅಮೃತವರ್ಷಿಣಿ ಎಂಬ ಹೆಸರೇ ಸರಿಯಾಗಿ ಹೊಂದಿಕೊಳ್ಳುತ್ತದೆ. ಹಳೆಯ ಸಿನಿಮಾದ ಹೆಸರನ್ನೇ ಯಾಕೆ ಇಟ್ಟುಕೊಂಡಿರಿ ಎಂದು ಕೇಳುವವರೂ ಸಿನಿಮಾವನ್ನು ನೋಡಿದ ಮೇಲೆ ಇದೇ ಸರಿಯಾದ ಹೆಸರು ಎಂದು ಹೇಳುತ್ತಾರೆ’ ಎನ್ನುತ್ತಾರೆ ಶಿವಪ್ರಭು. ಇದೇ ಕಾರಣದಿಂದ ‘ತುಂತುರು ಅಲ್ಲಿ ನೀರ ಹಾಡು’ ಎಂಬ ಅಡಿಶೀರ್ಷಿಕೆಯನ್ನೂ ಇಟ್ಟುಕೊಂಡಿದ್ದಾರೆ.
‘ನನಗೆ ಹೊಡೆದು, ಬೈದು, ಕಾಸು ಕೊಟ್ಟು, ಊಟ ಕೊಟ್ಟು ತಿದ್ದಿದವರು ದಿನೇಶ್ ಬಾಬು. ಅವರ ಬಳಿ ಹತ್ತು ವರ್ಷ ಕೆಲಸ ಮಾಡಿದ್ದೇನೆ. ಹಾಗಾಗಿ ಈಗ ನಾನು ಮಾಡುತ್ತಿರುವ ಸಿನಿಮಾ ಅವರಿಗೆ ನಾನು ನೀಡುವ ಗುರುಕಾಣಿಕೆ’ ಎಂದು ತುಸು ಭಾವುಕವಾಗಿಯೇ ನೆನೆಯುತ್ತಾರೆ ಶಿವಪ್ರಭು.
‘ಪರಬ್ರಹ್ಮ’ ಚಿತ್ರ ನಿರ್ಮಿಸಿದ್ದ ಸುಂದರ್ ಜತೆಗೆ ಸ್ವತಃ ಶಿವಪ್ರಭು ಅವರೂ ಈ ಚಿತ್ರಕ್ಕೆ ಹಣ ಹೂಡುತ್ತಿದ್ದಾರೆ. ಅವರಿಗೆ ಹಲವು ಆಪ್ತಸ್ನೇಹಿತರ ಬೆಂಬಲವೂ ದೊರಕಿದೆ.
ಯಶಸ್ ಸೂರ್ಯ ಈ ಚಿತ್ರದ ನಾಯಕ. ಯಶಸ್ ಸೂರ್ಯ ಅವರಿಗೆ ಶಿವಪ್ರಭು ಹತ್ತು ವರ್ಷಗಳ ಹಿಂದೆಯೇ ಒಂದು ರೂಪಾಯಿ ಅಡ್ವಾನ್ಸ್ ಕೊಟ್ಟು ‘ನಿಮ್ಮ ಜತೆ ಒಂದು ಸಿನಿಮಾ ಮಾಡುತ್ತೇನೆ’ ಎಂದು ಮಾತುಕೊಟ್ಟಿದ್ದರಂತೆ. ಆದರೆ ಕಾಲ ಕೂಡಿಬಂದಿರಲಿಲ್ಲ. ಈಗ ಇಬ್ಬರೂ ಒಟ್ಟಾಗಿದ್ದಾರೆ. ಜತೆಗೆ ‘ಮಾರ್ಚ್ 22’, ‘ಕೃಷ್ಣ ತುಳಸಿ’ ಚಿತ್ರಗಳಲ್ಲಿ ನಟಿಸಿದ್ದ ಮೇಘಶ್ರೀ ನಾಯಕಿಯಾಗಿ ನಟಿಸಲಿದ್ದಾರೆ.
ಚಿತ್ರದ ಶೀರ್ಷಿಕೆಯನ್ನಷ್ಟೇ ಅಲ್ಲ, ಹಿಂದಿನ ಅಮೃತವರ್ಷಿಣಿ ಚಿತ್ರದ ಹಾಡುಗಳ ಟ್ಯೂನ್ ಅನ್ನೂ ಈ ಚಿತ್ರದ ಹಿನ್ನೆಲೆ ಸಂಗೀತದಲ್ಲಿ ಅಲ್ಲಲ್ಲಿ ಬಳಸಿಕೊಳ್ಳುವ ಯೋಚನೆಯೂ ಅವರಿಗಿದೆ. ಹಾಗೆಯೇ ಜೆಸ್ಸಿಗಿಫ್ಟ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಲಿದ್ದಾರೆ. ಒಂದೊಂದು ಹಾಡೂ ಜನರಿಗೆ ಇಷ್ಟವಾಗುವಂತೆ ನೋಡಿಕೊಳ್ಳುವ ಮುತುವರ್ಜಿಯನ್ನೂ ನಿರ್ದೇಶಕರು ಅವರ ಹೆಗಲಿಗೇರಿಸಿದ್ದಾರೆ. ಒಟ್ಟಾರೆ ಅದೇ ಅಮೃತವರ್ಷಿಣಿಯ ನೆನಪಿನಲ್ಲಿ ಹೊಸ ರುಚಿಯ ಸಿನಿಮಾ ಮಾಡುವುದು ಅವರ ಉದ್ದೇಶ.
ಕಥೆ ಹೇಳಿದರೆ ಸ್ವಾರಸ್ಯ ಇರಲ್ಲ
ಇದು ಯಾವ ಬಗೆಯ ಚಿತ್ರ ಎಂದು ಕೇಳಿದರೆ ‘ಕಥೆ ಹೇಳಿದರೆ ಸ್ವಾರಸ್ಯ ಇರುವುದಿಲ್ಲ’ ಎಂದು ನಗುತ್ತಾರೆ. ‘ಲವ್ ಸ್ಟೋರಿಯಂತೂ ಹೌದು, ಜತೆಗೆ ಸಸ್ಪೆನ್ಸ್ ನಿರೀಕ್ಷೆ ಮಾಡುತ್ತೀರಾದರೆ ಅದೂ ಇದೆ, ಆ್ಯಕ್ಷನ್ ಬೇಕೆನ್ನುವವರಿಗೆ ನಾಲ್ಕು ಫೈಟ್‌ಗಳಿವೆ. ಮರ್ಡರ್ ಮಿಸ್ಟರಿಯ ಅಂಶಗಳನ್ನೂ ಒಳಗೊಂಡಿದೆ’ ಎಂದು ಭಿನ್ನ ಅಭಿರುಚಿಯ ಪ್ರೇಕ್ಷಕರನ್ನು ಒಟ್ಟಿಗೇ ಚಿತ್ರಮಂದಿರಕ್ಕೆ ಕರೆತರುವ ಯೋಚನೆಯನ್ನು ಹಂಚಿಕೊಳ್ಳುತ್ತಾರೆ.
ಮಂಗಳೂರು, ಸಕಲೇಶಪುರ, ಚಿಕ್ಕಮಗಳೂರುಗಳಲ್ಲಿ 35 ದಿನಗಳ ಒಂದೇ ಶೆಡ್ಯೂಲ್‌ನಲ್ಲಿ ಚಿತ್ರೀಕರಣ ಮಾಡಲು ಸಿದ್ಧತೆ ನಡೆಸಿದ್ದಾರೆ. ಮಳೆ, ಮಂಜು, ಹಸಿರು ಈ ಚಿತ್ರದ ಹಿನ್ನೆಲೆಯಲ್ಲಿ ಬಹುಮುಖ್ಯ ಪಾತ್ರ ವಹಿಸಿಕೊಳ್ಳಲಿವೆಯಂತೆ.
‘ಚಿತ್ರದ ಮುಹೂರ್ತ ಸಮಾರಂಭದಲ್ಲಿ ದೊಡ್ಡದೊಂದು ಅಚ್ಚರಿ ಇರಲಿದೆ. ಅದು ಹಿಂದೆಂದೂ ಆಗದೇ ಇರುವ ರೀತಿಯ ಅಚ್ಚರಿ’ ಎಂದು ಕುತೂಹಲದ ಒಗ್ಗರಣೆ ಹಾಕುವ ಶಿವಪ್ರಭು ‘ಅಂಥದ್ದೇನು ಅಚ್ಚರಿ?’ ಎಂದರೆ ಕಾದುನೋಡಿ ಎಂದು ನಗುತ್ತಾರೆ ಶಿವಪ್ರಭು. | 0 |
ಅಪ್ಪೆ ಟೀಚರ್ ಮುಹೂರ್ತ ಫಿಕ್ಸ್
Highlights
ಹಲವು ಸ್ಯಾಂಡಲ್ವುಡ್, ಕೋಸ್ಟಲ್'ವುಡ್, ಕೊಂಕಣಿ ಚಿತ್ರಗಳು, ಕನ್ನಡ ಧಾರಾವಾಹಿಗಳಲ್ಲಿ ಸಹಾಯಕ ನಿರ್ದೇಶಕರಾಗಿ ದುಡಿದಿರುವ ಕಿಶೋರ್ ಮೂಡಬಿದ್ರೆ ಅವರು ಮೊತ್ತಮೊದಲ ಬಾರಿಗೆ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಅಪ್ಪೆ ಟೀಚರ್'ಗೆ ಕಥೆ, ಚಿತ್ರಕಥೆ ಮತ್ತು ನಿರ್ದೇಶನ ಕಿಶೋರ್ ಅವರದ್ದೆಯೇ. ಚಿತ್ರವು ಪಕ್ಕಾ ಕಾಮಿಡಿ ಕಥೆ ಹೊಂದಿದ್ದು, ಒಂದೇ ಹಂತದಲ್ಲಿ ಚಿತ್ರೀಕರಣ ನಡೆಯುವ ನಿರೀಕ್ಷೆ ಇದೆ.
ಮಂಗಳೂರು(ನ. 11): ದಿನೇದಿನೇ ಸಮೃದ್ಧಿಯಾಗಿ ಬೆಳೆಯುತ್ತಿರುವ ಕೋಸ್ಟಲ್'ವುಡ್'ಗೆ ಈಗ ಹೊಚ್ಚಹೊಸ ಚಿತ್ರವೊಂದು ಸೇರ್ಪಡೆಯಾಗುತ್ತಿದೆ. ಕಿಶೋರ್ ಮೂಡಬಿದ್ರೆ ನಿರ್ದೇಶನದ "ಅಪ್ಪೆ ಟೀಚರ್" ಸೆಟ್ಟೇರಿದೆ. ಇಂದು ಇಲ್ಲಿಯ ಪುರಭವನದಲ್ಲಿ ಅಪ್ಪೆ ಟೀಚರ್'ನ ಮುಹೂರ್ತ ನೆರವೇರಿತು. ತುಳು ಭಾಷೆಯ ಈ ಚಿತ್ರಕ್ಕೆ ಸುನೀಲ್ ಮತ್ತು ನಿರೀಕ್ಷಾ ಶೆಟ್ಟಿ ನಾಯಕ-ನಾಯಕಿಯಾಗಿದ್ದಾರೆ. ತುಳುವಿನ ಖ್ಯಾತ ಕಲಾವಿದರು ಚಿತ್ರದಲ್ಲಿದ್ದಾರೆ. ಜೊತೆಗೆ ಸಾಕಷ್ಟು ಹೊಸ ಮುಖಗಳನ್ನು ಪರಿಚಯಿಸಲಾಗುತ್ತಿದೆ. ಹಲವು ಸ್ಯಾಂಡಲ್ವುಡ್, ಕೋಸ್ಟಲ್'ವುಡ್, ಕೊಂಕಣಿ ಚಿತ್ರಗಳು, ಕನ್ನಡ ಧಾರಾವಾಹಿಗಳಲ್ಲಿ ಸಹಾಯಕ ನಿರ್ದೇಶಕರಾಗಿ ದುಡಿದಿರುವ ಕಿಶೋರ್ ಮೂಡಬಿದ್ರೆ ಅವರು ಮೊತ್ತಮೊದಲ ಬಾರಿಗೆ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಅಪ್ಪೆ ಟೀಚರ್'ಗೆ ಕಥೆ, ಚಿತ್ರಕಥೆ ಮತ್ತು ನಿರ್ದೇಶನ ಕಿಶೋರ್ ಅವರದ್ದೆಯೇ. ಚಿತ್ರವು ಪಕ್ಕಾ ಕಾಮಿಡಿ ಕಥೆ ಹೊಂದಿದ್ದು, ಒಂದೇ ಹಂತದಲ್ಲಿ ಚಿತ್ರೀಕರಣ ನಡೆಯುವ ನಿರೀಕ್ಷೆ ಇದೆ.
ಚಿತ್ರ: ಅಪ್ಪೆ ಟೀಚರ್
ಭಾಷೆ: ತುಳು
ತಾರಾಗಣ: ಸುನೀಲ್, ನಿರೀಕ್ಷಾ ಶೆಟ್ಟಿ, ನವೀನ್ ಪಡೀಲ್, ಅರವಿಂದ್ ಬೋಳಾರ, ಭೋಜರಾಜ್ ವಾಮಂಜೂರು, ಉಮೇಶ್ ಮಿಜರ್, ಗೋಪಿನಾಥ್ ಭಟ್, ಉಷಾ ಭಂಡಾರಿ, ಸತೀಶ್ ಬಂಡಾಳೆ, ಸ್ಟಾನಿ ಅಲ್ವಾರೆಸ್, ಲೂಸಿ ಆರನ್ನಾ, ರೋವನ್ಸ್ ಲಂಡನ್, ಸಂದೀಪ್ ಶೆಟ್ಟಿ ಮಣಿಬೆಟ್ಟು, ರಘು ಪಾಂಡೇಶ್ವರ್, ಲತೀಫ್ ಸಣೂರು, ರಂಜನ್ ಬೋಳಾರ, ಮಿಮಿಕ್ರಿ ಶರಣ್, ದಿನೇಶ್ ಕಾಮತ್, ಕಾಮಿಡಿ ಕಿಲಾಡಿ ಹಿತೇಶ್, ಅನೀಶ್, ವಸಂತ್ ಅಮಿನ್, ಸುಜಾತಾ ಶಕ್ತಿನಗರ್, ಸುಜಾತಾ ಮುದ್ರಾಡಿ, 'ಒಂದು ಮೊಟ್ಟೆಯ ಕಥೆ' ಖ್ಯಾತಿಯ ಶೈಲಶ್ರೀ ಮತ್ತಿತರರು.
ಸಂಗೀತ: ವಾಣಿಲ್ ವೆಗಾಸ್
ಕ್ಯಾಮೆರಾ: ಉದಯ್ ಲೀಲಾ
ಸಂಕಲನ: ಪ್ರದೀಪ್ ನಾಯಕ್
ನಿರ್ಮಾಣ: ರತ್ನಾಕರ್ ಕಾಮತ್, ರವಿಶಂಕರ್ ಪೈ
ನಿರ್ದೇಶನ: ಕಿಶೋರ್ ಮೂಡಬಿದ್ರೆ
ಸಹ-ನಿರ್ದೇಶಕರು: ರಾಮದಾಸ್ ಶಶಿತ್ಲು, ಮಣಿ ಕಾರ್ತಿಕೇಯನ್, ಸ್ವಾತಿಕ್ ಹೆಬ್ಬಾರ್, ಸಂದೀಪ್ ಬೇದ್ರಾ ಮತ್ತು ಕರುಣಾಕರ್ ಆಚಾರ್.
Last Updated 11, Apr 2018, 12:59 PM IST | 0 |
ಶುಚಿತ್ವ ಕಾಪಾಡಿ.. ರೋಗ ತಡೆಯಿರಿ..
ಶುಚಿತ್ವ ಕಾಪಾಡಿ.. ರೋಗ ತಡೆಯಿರಿ..
Mar 14, 2017 01:02:44 PM (IST)
ಬೇಸಿಗೆ ಬಂತೆಂದರೆ ರೋಗಗಳು ಕೂಡ ನಮ್ಮನ್ನರಸಿ ಬರುತ್ತವೆ. ಅದರಲ್ಲೂ ಬೇಸಿಗೆ ಕಾಲ ಎಂದರೆ ಸಾಂಕ್ರಾಮಿಕ ರೋಗ ಹರಡುವುದಕ್ಕೊಂದು ಪ್ರಸಕ್ತ ಕಾಲ ಎಂದರೆ ತಪ್ಪಾಗಲಾರದು. ಹೀಗಾಗಿ ನಾವೆಷ್ಟು ಜಾಗರೂಕತೆಯಿಂದ ಇರುತ್ತೇವೆಯೋ ಅಷ್ಟೇ ಒಳ್ಳೆಯದು ಎಂಬುವುದರಲ್ಲಿ ಎರಡು ಮಾತಿಲ್ಲ.
ಬೇಸಿಗೆಯಲ್ಲಿ ನೀರಿಗೆ ತೊಂದರೆ ಹೀಗಾಗಿ ಶುಚಿತ್ವ ಕಾಪಾಡುವುದು ಕಷ್ಟವೇ. ಚರಂಡಿಯಲ್ಲಿ ತುಂಬಿಕೊಂಡ ತ್ಯಾಜ್ಯಗಳು, ಹರಿಯದೆ ನಿಂತ ನೀರು, ಶುಚಿತ್ವ ಕಾಣದ ಸಾರ್ವಜನಿಕ ಸ್ಥಳಗಳೆಲ್ಲವೂ ರೋಗ ಹರಡುವ ತಾಣಗಳಾಗಿ ಮಾರ್ಪಾಡಾಗಿ ಬಿಡುತ್ತವೆ. ಸೊಳ್ಳೆ, ನೊಣಗಳ ಸಂಖ್ಯೆ ಹೆಚ್ಚಾಗಿ ಇವು ಸಾಂಕ್ರಾಮಿಕ ರೋಗಗಳನ್ನು ಹರಡುವಲ್ಲಿಯೂ ತಮ್ಮ ಪಾತ್ರ ವಹಿಸುತ್ತವೆ. ಬೇಸಿಗೆಯಲ್ಲಿ ಎಲ್ಲೆಂದರಲ್ಲಿ ತಿನ್ನುವುದು, ಕುಡಿಯುವುದು ಕೂಡ ಅಪಾಯವೇ. ಯಾವಾಗ ಏನಾಗುತ್ತದೆ ಎಂಬುದನ್ನು ಊಹಿಸುವುದು ಕಷ್ಟವೇ. ಅದರಲ್ಲೂ ಸಾಂಕ್ರಾಮಿಕ ರೋಗಗಳು ಬಂದರಂತು ಅವು ಇಡೀ ಮನೆಯವರಿಗೆ ಹರಡಿ ಎಲ್ಲರನ್ನೂ ರೋಗಿಗಳನ್ನಾಗಿ ಮಾಡಿ ಬಿಡುತ್ತದೆ.
ಶುಚಿತ್ವದ ಕೊರತೆ, ಕಲುಷಿತ ನೀರು ಸೇರಿದಂತೆ ಹಲವು ಕಾರಣಗಳಿಂದಾಗಿ ಹಲವೆಡೆ, ಜಾಂಡೀಸ್, ಚಿಕೂನ್ ಗುನ್ಯಾ, ಹೆಚ್1ಎನ್1, ಟೈಪಾಯಿಡ್, ಮಲೇರಿಯಾ ಮೊದಲಾದ ಕಾಯಿಲೆಗಳು ಕಾಣಿಸಿಕೊಳ್ಳುತ್ತಿದ್ದು, ಜನರನ್ನು ಬೇಸ್ತು ಬೀಳಿಸಿದೆ. ಪಟ್ಟಣ ಪ್ರದೇಶದಲ್ಲಿ ಎಲ್ಲೆಂದರಲ್ಲಿ ರಸ್ತೆ ಬದಿಯಲ್ಲಿ ಹಣ್ಣು, ತಿಂಡಿ, ಉಪಹಾರ ಕ್ಯಾಂಟೀನ್ ಗಳು ಇರುವುದರಿಂದ ಅವರು ಸ್ವಚ್ಛತೆ ವಹಿಸದೆ ಹೋದರೆ ರೋಗಗಳಿಗೆ ಆಹ್ವಾನ ನೀಡಿದಂತೆಯೇ. ಹೀಗಾಗಿ ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ನಗರಪಾಲಿಕೆಗಳು ಈ ಬಗ್ಗೆ ಗಮನಹರಿಸುವುದು ಅಗತ್ಯವಾಗಿದೆ.
ಈಗಾಗಲೇ ಮೈಸೂರು ನಗರದಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಮೈಸೂರು ಮಹಾನಗರ ಪಾಲಿಕೆಯಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕರ್ನಾಟಕ ಪೌರ ನಿಗಮ ಕಾಯ್ದೆ 1976 ಸೆಕ್ಷನ್ 343 ರಂತೆ ನಗರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಹೋಟೆಲ್, ಕ್ಯಾಂಟಿನ್, ದರ್ಶಿನಿ, ಫಾಸ್ಟ್ ಫುಡ್ ಉದ್ದಿಮೆದಾರರು ಗ್ರಾಹಕರಿಗೆ ಬಿಸಿಯಾದ ನೀರು, ಶುಚಿಯಾದ ಆಹಾರವನ್ನು ಸರಬರಾಜು ಮಾಡಬೇಕು, ತಟ್ಟೆ ಮತ್ತು ಲೋಟಗಳನ್ನು ಸೋಪಿನ ನೀರು ಮತ್ತು ಬಿಸಿ ನೀರಿನಲ್ಲಿ ತೊಳೆದು ಶುಚಿಗೊಳಿಸಬೇಕು, ನೆಲ ಮತ್ತು ಟೇಬಲ್ಗಳನ್ನು ಕ್ರಿಮಿನಾಶಕ ಉಪಯೋಗಿಸಿ, ಶುಚಿಗೊಳಿಸಬೇಕು. ಅಡುಗೆ ಮನೆ ಯಾವಾಗಲೂ ಶುಚಿಯಾಗಿರುವಂತೆ ನೋಡಿಕೊಳ್ಳಬೇಕು. ಆಹಾರ ಪದಾರ್ಥಗಳ ತಯಾರಿಕೆಗೆ ಉಪಯೋಗಿಸುವ ದಿನಸಿ ಪದಾರ್ಥ ಉತ್ತಮ ಗುಣಮಟ್ಟದ್ದಾಗಿರಬೇಕು. ಹೋಟೆಲ್ನ ಸುತ್ತಮುತ್ತಲ ಆವರಣ ಶುಚಿಯಾಗಿರುವಂತೆ ನೋಡಿಕೊಳ್ಳಬೇಕು. ಸಪ್ಲೆಯರ್ಸ್ ಆರೋಗ್ಯವಂತರಾಗಿರಬೇಕು ಹಾಗೂ ಗ್ರಾಹಕರಿಗೆ ಊಟ ತಿಂಡಿ ಸರಬರಾಜು ಮಾಡುವ ಸಂದರ್ಭಗಳಲ್ಲಿ ಕಡ್ಡಾಯವಾಗಿ ಎಪ್ರಾನ್ ಮತ್ತು ಗ್ಲೌಸ್ ಹಾಕಿ ಕೊಂಡಿರಬೇಕು. ಶೌಚಾಲಯ ವ್ಯವಸ್ಥೆ ಉತ್ತಮವಾಗಿರಬೇಕು. ನೀರಿನ ಸೌಲಭ್ಯವಿರಬೇಕು ಹಾಗೂ ಆಗಿಂದಾಗ್ಯೆ ಶುಚಿಗೊಳಿಸಬೇಕು. ಸಿದ್ದಪಡಿಸಿದ ತಿಂಡಿ ಪದಾರ್ಥಗಳನ್ನು ಕಡ್ಡಾಯವಾಗಿ ಗ್ಲಾಸ್ ಕೇಸ್ ಒಳಗಡೆ ಇಡಬೇಕು. ಫುಟ್ಪಾತ್ ನಲ್ಲಿ ತಿಂಡಿ ಪದಾರ್ಥ ಮಾರಾಟ ಮಾಡುವವರು, ಕೊಯ್ದು ಹಣ್ಣು ಹಂಪಲುಗಳನ್ನು ಸೊಳ್ಳೆ, ನೊಣ ಹಾಗೂ ಧೂಳು ಬೀಳದಂತೆ ಗಾಜಿನ ಪೆಟ್ಟಿಗೆಯಲ್ಲಿ ಕಡ್ಡಾಯವಾಗಿ ಇಟ್ಟು ಮಾರಾಟ ಮಾಡುವಂತೆ ಸೂಚನೆ ನೀಡಿದ್ದು, ತಪ್ಪಿದಲ್ಲಿ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದ್ದಾರೆ.
ಇದೇ ರೀತಿ ಎಲ್ಲೆಡೆಯೂ ಕ್ರಮಗಳನ್ನು ಕೈಗೊಂಡಿದ್ದೇ ಆದರೆ ಬೇಸಿಗೆಯಲ್ಲಿ ಹರಡುವ ಸಾಂಕ್ರಾಮಿಕ ರೋಗಗಳನ್ನು ತಡೆಯಲು ಸಾಧ್ಯವಾಗುತ್ತದೆ. ಜತೆಗೆ ನಮ್ಮ ಮನೆ ಸುತ್ತಮುತ್ತಲೂ ಸ್ವಚ್ಛತೆಯಿಂದ ಕೂಡಿರುವಂತೆ ನೋಡಿಕೊಳ್ಳುವುದು ಕೂಡ ಅಗತ್ಯವಾಗಿದೆ. ನಾವೆಷ್ಟು ಸ್ವಚ್ಛತೆಯನ್ನು ಕಾಪಾಡಿಕೊಳ್ಳುತ್ತೇವೆಯೋ ಅಷ್ಟೇ ರೋಗಗಳಿಂದ ದೂರವಾಗಿ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂಬುವುದರಲ್ಲಿ ಎರಡು ಮಾತಿಲ್ಲ. ಈ ಬಾರಿಗೆ ಕುಡಿಯುವ ನೀರಿಗೆ ಸಮಸ್ಯೆಯುಂಟಾಗಿರುವುದರಿಂದ ನೀರನ್ನು ಉಪಯೋಗಿಸುವಾಗಲೂ ಎಚ್ಚರಿಕೆ ಅಗತ್ಯ. ಶುದ್ದೀಕರಣಗೊಂಡ ನೀರನ್ನು ಬಳಸುವುದು, ಅಥವಾ ಕುದಿಸಿ ಆರಿಸಿ ಕುಡಿಯುವುದು ಆರೋಗ್ಯದ ದೃಷ್ಠಿಯಿಂದ ಉತ್ತಮ.
ಮನರಂಜನೆ | 1 |
ಜಾಲತಾಣದಲ್ಲಿ ಸದ್ದು ಮಾಡ್ತಿದೆ ಸಲ್ಮಾನ್ ತೆಗೆದಿರೋ ಫೋಟೋ
19-08-2018 5:13PM IST / No Comments / Posted In: Latest News , Entertainment
ಬಾಲಿವುಡ್ ನ ಹಾಸ್ಯ ನಟ ಸುನೀಲ್ ಗ್ರೋವರ್ ಅವರ ಫೋಟೋ ಒಂದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ಸದ್ದು ಮಾಡ್ತಿದೆ. ಅದು ಬಾಲಿವುಡ್ ನ ಸುಲ್ತಾನ್ ಸಲ್ಮಾನ್ ಖಾನ್ ಅಭಿನಯದ ಭಾರತ್ ಸಿನಿಮಾದ ಸೆಟ್ ನಲ್ಲಿ ತೆಗೆದಿರುವಂತಾ ಫೋಟೋ. ಈ ಫೋಟೋದಲ್ಲಿ ಸುನೀಲ್ ಗ್ರೋವರ್ ಒಂದು ಆಂಗಲ್ ನಿಂದ ನೋಡೋದಕ್ಕೆ ಶಾರುಕ್ ಖಾನ್ ರೀತಿಯಲ್ಲೇ ಪೋಸ್ ಕೊಟ್ಟಿದ್ದಾರೆ.
ಸುನೀಲ್ ಗ್ರೋವರ್ ರನ್ನ ಈ ರೇಂಜಿಗೆ ಫೋಟೋದಲ್ಲಿ ಸೆರೆ ಹಿಡಿದಿದ್ದು ಯಾರು ಅನ್ನೋದನ್ನ ತಿಳಿದುಕೊಂಡ್ರೆ ನೀವು ನಿಜಕ್ಕೂ ಶಾಕ್ ಆಗ್ತೀರಿ. ಯಾಕಂದ್ರೆ ಇಲ್ಲಿ ಸುನೀಲ್ ಗ್ರೋವರ್ ಗೆ ಕ್ಯಾಂಡಿಡ್ ಫೋಟೋಗ್ರಾಫರ್ ಆಗಿ ಕೆಲಸ ಮಾಡಿರೋದು ಸಲ್ಮಾನ್ ಖಾನ್. ಯುರೋಪ್ ನ ಮಾಲ್ಟಾಗೆ ಭಾರತ್ ಚಿತ್ರೀಕರಣಕ್ಕಾಗಿ ತೆರಳಿರುವ ಸಲ್ಮಾನ್ ಬಿಹೈಂಡ್ ದ ಸ್ಕ್ರೀನ್ ಚಿತ್ರದ ಸಹ ನಟರಿಗೆ ಬೆಸ್ಟ್ ಫೋಟೋಗ್ರಾಫರ್ ಆಗಿ ಕೆಲಸ ಮಾಡಿದ್ದಾರೆ.
ಸುನೀಲ್ ಗ್ರೋವರ್ ಅವರ ಚಿತ್ರವನ್ನು ಸೆರೆ ಹಿಡೀತಿರೋ ತಮ್ಮದೇ ಫೋಟೋವನ್ನ ಸಲ್ಮಾನ್ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಒಂದು ಒಳ್ಳೆ ಫೋಟೋ ತೆಗಿಬೇಕು ಅಂದ್ರೆ ತುಂಬಾನೇ ಫೋಕಸ್ ಮಾಡಬೇಕಾಗುತ್ತೆ ಅಂತ ಸಲ್ಮಾನ್ ಈ ಫೋಟೋಗೆ ಮೆಸೇಜ್ ಹಾಕಿದ್ದಾರೆ. ಫೋಟೋ ನೋಡಿದ ಸಲ್ಲು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸ್ವಾತಂತ್ರ್ಯ ದಿನದ ಸಲುವಾಗಿ ಸಲ್ಮಾನ್ ಅಪ್ಕಮಿಂಗ್ ಸಿನಿಮಾ ಭಾರತ್ ಸಿನಿಮಾದ ಫಸ್ಟ್ ಲುಕ್ ಟೀಸರ್ ಕೂಡ ಬಿಡುಗಡೆಯಾಗಿದೆ. 2019ರ ಈದ್ ಮಿಲಾದ್ ಹಬ್ಬಕ್ಕೆ ಭಾರತ್ ಸಿನಿಮಾ ತೆರೆಗೆ ಬರಲಿದೆ. | 0 |
ಕಾಬಿಲ್ ಟೀಸರ್ :ಮತ್ತೊಮ್ಮೆ ವಿಭಿನ್ನವಾಗಿ ಹೃತಿಕ್
Highlights
ಇದು ಬಾಲಿವುಡ್ ಸಖತ್ ಗಮನ ಸೆಳೆಯುತ್ತಿದೆ.ಈ ಚಿತ್ರದಲ್ಲಿ ಹೃತಿಕ್ ರೋಶನ್ ಎದುರು ಯಾಮಿ ಗೌತಮ್ ನಟಿಸುತ್ತಿದ್ದು ನಿರ್ದೇಶಕ ಸಂಜಯ್ ಗುಪ್ತಾ ಹೊಸತನ್ನ ಮೆಚ್ಚುಗೆಗಳು ವ್ಯಕ್ತವಾಗಿದೆ..
ಬಾಲಿವುಡ್ ನ ಸ್ಟಾರ್ ನಟ ಹೃತಿಕ್ ರೋಶನ್ ನಟನೆಯ ಬಹು ನೀರಿಕ್ಷೆಯ ಕಾಬಿಲ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ.
ಆದರೆ ಕಾಬಿಲ್ ಟೀಸರ್ ನ್ನ ನಿರ್ದೇಶಕ ಸಂಜಯ್ ಗುಪ್ತಾ ವಿಭಿನ್ನವಾಗಿ ಕಟ್ ಮಾಡಿಸಿ ರಿಲೀಸ್ ಮಾಡಿದ್ದಾರೆ.
ಟೀಸರ್ ನಲ್ಲಿ ದೃಶ್ಯಗಳೇ ಇಲ್ಲದೇ ಬರೀ ಕಾರುಗಳ ಲೈಟ್ ಗಳನ್ನ ಜೂಮ್ ಔಟ್ ಮಾಡಿ. ಹೃತಿಕ್ ರೋಷನ್ ಅವರ ಹಿನ್ನೆಲೆ ಸಂಭಾಷಣೆ ಮಾತ್ರ ಕೇಳುತ್ತದೆ.
ಇದು ಬಾಲಿವುಡ್ ಸಖತ್ ಗಮನ ಸೆಳೆಯುತ್ತಿದೆ.ಈ ಚಿತ್ರದಲ್ಲಿ ಹೃತಿಕ್ ರೋಶನ್ ಎದುರು ಯಾಮಿ ಗೌತಮ್ ನಟಿಸುತ್ತಿದ್ದು ನಿರ್ದೇಶಕ ಸಂಜಯ್ ಗುಪ್ತಾ ಹೊಸತನ್ನ ಮೆಚ್ಚುಗೆಗಳು ವ್ಯಕ್ತವಾಗಿದೆ.. | 0 |
#Gomonster Samsung M30s: ಹೊಸ ಸ್ಮಾರ್ಟ್‌ಫೋನ್ ನ ವಿಶೇಷತೆಗಳೇನು ನೋಡಿ! WATCH LIVE TV
ಯಾವತ್ತೂ ನಮಗೆ ಬೇಕಾದುದನ್ನು ಪಡೆಯಲು ಸಾಧ್ಯವಿಲ್ಲ: ರೋಹಿತ್
ಅಸಂಖ್ಯಾತ ಮುಂಬಯಿ ಅಭಿಮಾನಿಗಳಿಗೆ ನಿರಾಸೆಯುಂಟಾಗಿದೆ. ತದಾ ಬೆನ್ನಲ್ಲೇ ತಂಡದ ಸಾಮಾನ್ಯ ಪ್ರದರ್ಶನಕ್ಕೆ ನಾಯಕ ರೋಹಿತ್ ಶರ್ಮಾ ಬೇಸರ ತೋಡಿಕೊಂಡಿದ್ದಾರೆ.
ವಿಜಯ ಕರ್ನಾಟಕ | Updated:
May 22, 2018, 03:04PM IST
ಮುಂಬಯಿ: ಇಂಡಿಯನ್ ಪ್ರೀಮಿಯರ್ ಲೀಗ್ 2018ನೇ ಆವೃತ್ತಿಯ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಪ್ಲೇ-ಆಫ್ ಹಂತಕ್ಕೆ ಪ್ರವೇಶಿಸುವಲ್ಲಿ ಮುಂಬಯಿ ಇಂಡಿಯನ್ಸ್ ಎಡವಿದೆ.
ಇದರೊಂದಿಗೆ ಅಸಂಖ್ಯಾತ ಮುಂಬಯಿ ಅಭಿಮಾನಿಗಳಿಗೆ ನಿರಾಸೆಯುಂಟಾಗಿದೆ. ತದಾ ಬೆನ್ನಲ್ಲೇ ತಂಡದ ಸಾಮಾನ್ಯ ಪ್ರದರ್ಶನಕ್ಕೆ ನಾಯಕ ರೋಹಿತ್ ಶರ್ಮಾ ಬೇಸರ ತೋಡಿಕೊಂಡಿದ್ದಾರೆ.
ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ ನಡೆದ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಮುಂಬಯಿ ಮುಗ್ಗರಿಸಿತ್ತು. ಈ ಮೂಲಕ ಟೂರ್ನಿಯಿಂದಲೇ ಮುಗ್ಗರಿಸಿತ್ತು.
''ಪಂದ್ಯಾವಳಿಯಲ್ಲಿ ತಮ್ಮ ತಂಡದ ಪ್ರದರ್ಶನದ ಬಗ್ಗೆ ಬೇಸರವಿದೆ. ನನಗನಿಸುತ್ತದೆ ಇದುವೇ ಜೀವನ ಮತ್ತು ಕ್ರೀಡೆ. ಯಾವತ್ತೂ ನಮಗೆ ಬೇಕಾದುದನ್ನು ಪಡೆಯಲು ಸಾಧ್ಯವಿಲ್ಲ. ನಾವು ಕಠಿಣವಾಗಿ ಹೋರಾಡಿದ್ದೆವು. ಆದರೆ ನನಗನಿಸುತ್ತದೆ ಆ ದಿನದಲ್ಲಿ ಎದುರಾಳಿ ತಂಡವು ನಮಗಿಂತಲೂ ಉತ್ತಮವಾಗಿತ್ತು'' ಎಂದರು.
Disappointing to be out of the tournament, I guess that’s life and sport. We can’t always get what we want. We did… https://t.co/Wp2jk1FhOR
— Rohit Sharma (@ImRo45) 1526911201000
ಅದೇ ಹೊತ್ತಿಗೆ ಮುಂದಿನ ವರ್ಷದಲ್ಲಿ ಇನ್ನಷ್ಟು ಉತ್ತಮ ನಿರ್ವಹಣೆ ಭರವಸೆಯನ್ನು ರೋಹಿತ್ ಟ್ವಿಟರ್‌ನಲ್ಲಿ ಅಭಿಮಾನಿಗಳ ಜತೆ ಹಂಚಿಕೊಂಡಿದ್ದಾರೆ.
ಐಪಿಎಲ್ 11ರಲ್ಲಿ ಆಡಿರುವ 14 ಪಂದ್ಯಗಳ ಪೈಕಿ ಆರರಲ್ಲಿ ಮಾತ್ರ ಗೆಲುವು ದಾಖಲಿಸಿರುವ ಮುಂಬಯಿ ಒಟ್ಟು 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಐದನೇ ಸ್ಥಾನದೊಂದಿಗೆ ಪಯಣ ಕೊನೆಗೊಳಿಸಿದೆ. | 2 |
ಕೊಹ್ಲಿ–ಎಬಿಡಿ ಚಿತ್ರಗಳಿಗೆ ಕ್ಷೀರಾಭಿಷೇಕ
ಭಾನುವಾರ 35ನೇ ಜನ್ಮದಿನ ಆಚರಿಸಿಕೊಂಡ ಡಿವಿಲಿಯರ್ಸ್
ಕೊಹ್ಲಿ–ಎಬಿಡಿ ಚಿತ್ರಗಳಿಗೆ ಕ್ಷೀರಾಭಿಷೇಕ
ಪ್ರಜಾವಾಣಿ ವಾರ್ತೆ
Published:
19 ಫೆಬ್ರವರಿ 2019, 01:59 IST
Updated:
19 ಫೆಬ್ರವರಿ 2019, 01:59 IST
ಅಕ್ಷರ ಗಾತ್ರ :
ಆ
ಆ
ಬೆಂಗಳೂರು: ಇಂಡಿಯನ್ ಪ್ರೀಮಿ ಯರ್ ಲೀಗ್ (ಐಪಿಎಲ್) ಸಮೀಪಿಸುತ್ತಿದ್ದಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಅಭಿಮಾನಿಗಳ ಉತ್ಸಾಹ ಇಮ್ಮಡಿಯಾಗಿದೆ.
ನಾಯಕ ವಿರಾಟ್ ಕೊಹ್ಲಿ ಮತ್ತು ಸ್ಫೋಟಕ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ಅವರ ಭಾವಚಿತ್ರಕ್ಕೆ ಅವರು ಕ್ಷೀರಾಭಿಷೇಕ ಮಾಡಿದ್ದಾರೆ.
ಭಾನುವಾರ ಎಬಿ ಡಿವಿಲಿಯರ್ಸ್ ಅವರ 35ನೇ ಜನ್ಮದಿನ. ಇದರ ನಿಮಿತ್ತ ಒಂಡೆಡೆ ಸೇರಿದ ಅಭಿಮಾನಿಗಳು ಡಿವಿ ಲಿಯರ್ಸ್ ಮತ್ತು ಕೊಹ್ಲಿ ಜೊತೆಯಾಗಿ ಇರುವ ಚಿತ್ರಕ್ಕೆ ಪ್ಯಾಕೆಟ್ ಹಾಲನ್ನು ಸುರಿದರು. ಈ ವಿಡಿಯೊ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.
ಕೊಹ್ಲಿ ಮತ್ತು ಡಿವಿಲಿಯರ್ಸ್ ಆರ್‌ಸಿಬಿ ತಂಡದ ಬೆನ್ನೆಲೆಬು. ಅನೇಕ ಪಂದ್ಯಗಳನ್ನು ಗೆಲ್ಲಿಸಿಕೊಡುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದಾರೆ. ಗುಜರಾತ್ ಲಯನ್ಸ್ ವಿರುದ್ಧದ ಪಂದ್ಯದಲ್ಲಿ 229 ರನ್‌ಗಳ ಜೊತೆಯಾಟದ ಮೂಲಕ ಟೂರ್ನಿಯಲ್ಲಿ ದಾಖಲೆ ಬರೆದಿದ್ದಾರೆ. | 2 |
ಇದು ಲೈಂಗಿಕ ಶಕ್ತಿ ಹೆಚ್ಚಿಸುವ ಪವರ್ ಫುಲ್ 'ಗಿಡಮೂಲಿಕೆಗಳ ಔಷಧಿ'
Wellness
|
Updated: Saturday, December 30, 2017, 10:50 [IST]
ಮಾಕಾ, ನಮಗೆ ಇದು ಅಪರಿಚಿತವಾದ ಹೆಸರು. ಆದರೆ ಇದರ ಬಗ್ಗೆ ಅರಿತವರು ಇದನ್ನು ಗಡ್ಡೆಗಳ ರಾಜನೆಂದು ಯಾವುದೇ ತಕರಾರಿಲ್ಲದೇ ಒಪ್ಪುತ್ತಾರೆ. lepidium Meyenii ಎಂಬ ವೈಜ್ಞಾನಿಕ ಹೆಸರಿನ ಈ ಗಡ್ಡೆ ದಕ್ಷಿಣ ಅಮೇರಿಕಾದ ಪೆರು ಮತ್ತು ಬೊಲಿವಿಯಾ ದೇಶದ ಮೂಲದ್ದಾಗಿದ್ದು ನೋಡಲಿಕ್ಕೆ ಬಿಳಿ ಮೂಲಂಗಿಯೊಂದು ಬೀಟ್ರೂಟಿನ ವೇಷ ಧರಿಸಿದಂತೆ ಕಾಣುತ್ತದೆ. ಇದರ ರುಚಿ ರುಚಿಯಾದ ಬಾದಾಮಿ ಅಥವಾ ಬಟರ್ ಸ್ಕಾಚ್ಐಸ್ ಕ್ರೀಮ್ ನಂತಿರುತ್ತದೆ.
ಈ ಗಡ್ಡೆಯಲ್ಲಿಯೂ ಕೆಲವಾರು ವಿಧಗಳಿದ್ದು ರುಚಿಯೂ ಕೊಂಚ ಭಿನ್ನವಾಗಿರುತ್ತದೆ. ಇವುಗಳು ಕಪ್ಪು, ಹಳದಿ, ಕೆಂಪು ಬಣ್ಣಗಳಲ್ಲಿಯೂ ಲಭ್ಯವಿವೆ. ಇವುಗಳನ್ನು ಸಂಸ್ಕರಿಸಿ ಪುಡಿಯನ್ನು ಮಾತ್ರೆಗಳ ರೂಪದಲ್ಲಿ ಅಥವಾ ಒಣಗಿದ ಗಡ್ಡೆಗಳ ರೂಪದಲ್ಲಿ ಹೆಚ್ಚು ಕಾಲ ಕೆಡದಿರುವಂತೆ ಡಬ್ಬಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಇದೊಂದು ಗಿಡಮೂಲಿಕೆಯಾದುದರಿಂದ ಯಾವುದೇ ಗ್ರಂಥಿಗೆ ಅಂಗಡಿಯಲ್ಲಿ ಪಡೆಯಬಹುದು.
ದಿನನಿತ್ಯ 'ಲೈಂಗಿಕ ಕ್ರಿಯೆ' ಆರೋಗ್ಯಕ್ಕೆ ಬಹಳ ಒಳ್ಳೆಯದಂತೆ!
ಆದರೆ ಇದನ್ನೇಕೆ ಇಷ್ಟೊಂದು ಕಾಳಜಿಯಿಂದ ಮಾರಲಾಗುತ್ತಿದೆ ಹಾಗೂ ಸೇವಿಸುವಂತೆ ಪ್ರಚಾರ ಮಾಡಲಾಗುತ್ತಿದೆ? ಈ ಗಡ್ಡೆಯ ಸೇವನೆಯಿಂದ ಲೈಂಗಿಕ ಶಕ್ತಿ ಹೆಚ್ಚುತ್ತದೆ, ಮಾನಸಿಕ ಹಾಗೂ ದೈಹಿಕ ದಾರ್ಢ್ಯತೆಯೂ ಹೆಚ್ಚುತ್ತದೆ. ವಿಶೇಷವಾಗಿ ಲೈಂಗಿಕ ಶಕ್ತಿ ಹೆಚ್ಚಿಸುವಲ್ಲಿ ಇದು ಅದ್ಭುತಗಳನ್ನೇ ಸಾಧಿಸಬಲ್ಲುದು. ಆದ್ದರಿಂದ ಇದರ ಸೇವನೆಯ ಅವಕಾಶ ಒದಗಿಬಂದರೆ ಇದನ್ನು ಖಂಡಿತಾ
ಕಳೆದುಕೊಳ್ಳಬಾರದು. ಮಾಕಾ ದಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ನುಗಳು, ಖನಿಜಗಳು, ಕ್ಯಾಲ್ಸಿಯಂ, ಪೊಟ್ಯಾಶಿಯಂ, ಕಬ್ಬಿಣ, ಅಯೋಡಿನ್, ಬಿ ವಿಟಮಿನ್ನುಗಳು ಹಾಗೂ ಪ್ರೋಟೀನುಗಳು ಹೆಚ್ಚಿನ ಪ್ರಮಾಣದಲ್ಲಿವೆ. ಲೈಂಗಿಕ ಶಕ್ತಿ ಹೆಚ್ಚಿಸಲು ಈ ಗಡ್ಡೆಯನ್ನು ನಿತ್ಯವೂ 1.5 ರಿಂದ 3 ಗ್ರಾಂ ನಷ್ಟು ಸೇವಿಸಬೇಕು. ಇದರಿಂದ ಹಲವಾರು ಪ್ರಯೋಜನಗಳಿವೆ. ಬನ್ನಿ, ಯಾವ ರೀತಿಯ ಪ್ರಯೋಜನಗಳಿವೆ ಎಂಬುದನ್ನು ನೋಡೋಣ...
ಉತ್ತಮ ಲೈಂಗಿಕ ಶಕ್ತಿ
ಲೈಫ್ ಎ ಎಂಬ ಸಂಶೋಧನಾ ಸಂಸ್ಥೆ ಈ ಗಡ್ಡೆಯ ಕುರಿತು ಹಲವಾರು ಸಂಶೋಧನೆಗಳನ್ನು ನಡೆಸಿದ್ದು ನಿತ್ಯವೂ ಮೂರು ಗ್ರಾಂ ನಷ್ಟು ಮಾಕಾ ಪೌಡರ್ ಸೇವನೆಯಿಂದ ಲೈಂಗಿಕ ಶಕ್ತಿ ಅಪಾರವಾಗಿ ಹೆಚ್ಚುತ್ತದೆ ಎಂದು ಕಂಡುಕೊಂಡಿದೆ. ಪುರುಷರಲ್ಲಿಯೂ ಮಹಿಳೆಯರಲ್ಲಿಯೂ ಇದು ಸಮಾನವಾಗಿ ಕಾರ್ಯನಿರ್ವಹಿಸುವ ಮೂಲಕ ಅಫಲವತ್ತತೆ, ನಿರಾಸಕ್ತಿ ಮೊದಲಾದವುಗಳನ್ನು ನಿವಾರಿಸುತ್ತದೆ. ಪುರುಷರಲ್ಲಿ ನಿಮಿರು ದೌರ್ಬಲ್ಯವನ್ನು ಅಪಾರವಾಗಿ ಕಡಿಮೆ ಮಾಡುವ ಈ ಅದ್ಭುತ ಮೂಲಿಕೆ ವೀರ್ಯಾಣುಗಳ ಸಂಖ್ಯೆ ವೃದ್ಧಿಸಲೂ ನೆರವಾಗುತ್ತದೆ.
ಪುರುಷರಲ್ಲಿ ಫಲವತ್ತತೆ ಹೆಚ್ಚಿಸುತ್ತದೆ
ಮಾಕಾ ಪುಡಿಯನ್ನು ನಿತ್ಯವೂ ಸೇವಿಸುವ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಹೆಚ್ಚುವ ಹಾಗೂ ಇದರಲ್ಲಿ ಆರೋಗ್ಯರಕ ವೀರ್ಯಾಣುಗಳ ಸಂಖ್ಯೆ ಹೆಚ್ಚಿರುವಂತೆ ನೋಡಿಕೊಳ್ಳುವ ಮೂಲಕ ಫಲವತ್ತತೆ ಹೆಚ್ಚುತ್ತದೆ. ವೀರ್ಯಾಣುಗಳ ಗುಣಮಟ್ಟ ಉತ್ತಮವಾದಷ್ಟೂ ಇವು ಗರ್ಭನಾಳದಲ್ಲಿ ಅಂಡಾಣುವೊಡನೆ ಮಿಲಗೊಳ್ಳುವ ಸಾಧ್ಯತೆ ಹೆಚ್ಚುತ್ತದೆ. ತನ್ಮೂಲಕ ಸಂತಾನಹೀನ ಪುರುಷರಿಗೆ ಈ ಮೂಲಿಗೆ ಅದ್ಭುತವಾದ ವರದಾನವಾಗಿದೆ.
ಸ್ಮರಣಶಕ್ತಿ ಹಾಗೂ ಏಕಾಗ್ರತೆಯನ್ನು ಹೆಚ್ಚಿಸುತ್ತದೆ
ಮಾಕಾ ಪುಡಿಯ ಸೇವನೆಯ ಕುರಿತು ನಡೆಸಿದ ಇನ್ನೊಂದು ಸಂಶೋಧನೆಯಲ್ಲಿ ಇದು ಸ್ಮರಣಶಕ್ತಿ ಹಾಗೂ ಕಲಿಯುವಿಕೆಯನ್ನು ಉತ್ತಮಗೊಳಿಸುವುದನ್ನು ಕಂಡುಕೊಳ್ಳಲಾಗಿದೆ. ವಿಶೇಷವಾಗಿ ಕಪ್ಪು ಮಾಕಾ ಗಡ್ಡೆಯ ಪುಡಿಯ ಸೇವನೆಯಿಂದ ಸ್ಮರಣಶಕ್ತಿ ಹಾಗೂ ಮೆದುಳಿನ ಕ್ಷಮತೆ ಹೆಚ್ಚುತ್ತದೆ. ಒಂದು ವೇಳೆ ನೀವು ಮಾನಸಿಕವಾಗಿ ಬಹಳಷ್ಟು ಕುಗ್ಗಿದ್ದರೆ ಹಾಗೂ ಕೆಲಸದಲ್ಲಿ ಏಕಾಗ್ರತೆ ಸಾಧಿಸಲು ಹೆಣಗಾಡುತ್ತಿದ್ದರೆ ನಿಮಗೆ ಮಾಕಾ ಪುಡಿಯ ಅಗತ್ಯವಿದೆ. ಇದು ಹಿರಿಯರ ಜೊತೆಗೇ ಮಕ್ಕಳಿಗೂ ಸೂಕ್ತವಾಗಿದ್ದು ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ, ತನ್ಮೂಲಕ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಲು ನೆರವಾಗುತ್ತದೆ.
ಮಾನಸಿಕ ಒತ್ತಡ ಹಾಗೂ ಉದ್ವೇಗವನ್ನು ಕಡಿಮೆ ಮಾಡುತ್ತದೆ
ಒಂದು ಅಧ್ಯಯನದಲ್ಲಿ ಕಂಡುಕೊಂಡಂತೆ ಮಾಕಾ ಸೇವನೆಯಿಂದ ಮಾನಸಿಕ ಒತ್ತಡ ಹಾಗೂ ಉದ್ವೇಗ ಕಡಿಮೆಯಾಗುತ್ತದೆ. ಅಲ್ಲದೇ ದೈಹಿಕ ದಾರ್ಢ್ಯತೆಯನ್ನೂ ಹೆಚ್ಚಿಸಿ ಖಿನ್ನತೆಯ ವಿರುದ್ಧ ಹೋರಾಡಲು ನೆರವಾಗುತ್ತದೆ. ಒಂದು ವೇಳೆ ನಿಮ್ಮ ಮನೋಭಾವ ಪದೇಪದೇ ಬದಲಾಗುತ್ತಿದ್ದರೆ ಹಾಗೂ ಮಾನಸಿಕ ಕಿರಿಕಿರಿ ಅನುಭವಿಸುತ್ತಿದ್ದರೆ ನಿಮಗೆ ಮಾಕಾ ಸೇವನೆ ಅಗತ್ಯವಾಗಿದೆ.
ಸಂಧಿವಾತ ಹಾಗೂ ಉರಿಯೂತವನ್ನು ನಿವಾರಿಸುತ್ತದೆ
ಸಂಧಿವಾತದಿಂದ ಬಳಲುತ್ತಿರುವವರು ಮಾಕಾ ಸೇವನೆಯನ್ನು ಪ್ರಯತ್ನಿಸಬೇಕು. ಇದರಿಂದ ಸಂಧಿವಾತ ಹಾಗೂ ಗಂಟುಗಳಲ್ಲಿ ಉಂಟಾಗಿರುವ ಉರಿಯೂತವನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ. ಒಂದು ಸಂಶೋಧನೆಯಲ್ಲಿ ಕಂಡುಕೊಂಡಂತೆ ಮಾಕಾ ಸೇವನೆಯಿಂದ ಮೂಳೆಗಳ ಗಂಟುಗಳಲ್ಲಿ ಉಂಟಾಗಿರುವ ಸಂಧಿವಾತ, ಈ ಭಾಗ ಪೆಡಸಾಗುವುದು ಹಾಗೂ ಉರಿಯನ್ನು ಇಲ್ಲವಾಗಿಸುತ್ತದೆ. ಇದಕ್ಕಾಗಿ 1,500ಮಿಲಿಗ್ರಾಂ ಮಾಕಾ ಪುಡಿಯನ್ನು 300 ಮಿಲಿಗ್ರಾಂ cat's claw (Uncaria tomentosa ಅಥವಾ Uncaria guianensis) ಎಂಬ ಮೂಲಿಕೆಯ ಪುಡಿಯೊಂದಿಗೆ ಬೆರೆಸಿ ನಿತ್ಯವೂ ಸತತವಾಗಿ ಎರಡು ತಿಂಗಳ ಕಾಲ ಸೇವಿಸಬೇಕು. ಇದರಿಂದ ಸಂಧಿವಾತ, ಉರಿ, ಪೆಡಸಾಗಿರುವುದು ಎಲ್ಲವೂ ಗುಣವಾಗುತ್ತವೆ.
ಮಹಿಳೆಯರಲ್ಲಿ ರಸದೂತಗಳ ಪ್ರಭಾವವನ್ನು ಸರಿಯಾಗಿಸುತ್ತದೆ
ಇನ್ನೊಂದು ಅಧ್ಯಯನದಲ್ಲಿ ಕಂಡುಕೊಂಡಂತೆ ಮಾಕಾ ಸೇವನೆಯಿಂದ ಮಹಿಳೆಯರಲ್ಲಿ ಎದುರಾಗುವ ರಸದೂತಗಳ ಏರಿಳಿತದ ಪ್ರಭಾವ ಕಡಿಮೆಯಾಗುತ್ತದೆ. ವಿಶೇಷವಾಗಿ ನಲವತ್ತು ವರ್ಷ ದಾಟಿದ ಮಹಿಳೆಯರು ನಿತ್ಯವೂ ಎರಡು ಗ್ರಾಂ ಮಾಕಾ ಪುಡಿಯವನ್ನು ಸೇವಿಸುವ ಮೂಲಕ ರಜೋನಿವೃತ್ತಿಯ ಸೂಚನೆಗಳಿಂದ ಬಿಡುಗಡೆ ಪಡೆಯಬಹುದು. ಅಲ್ಲದೇ ಈ ಸಮಯದಲ್ಲಿ ಎದುರಾಗುವ ರಾತ್ರಿಯ ಹೊತ್ತಿನ ಬೆವರುವಿಕೆ ಹಾಗೂ ದೇಹದ ಕೆಲವು ಭಾಗಗಳು ಬಿಸಿಯಾಗುವುದು ಮೊದಲಾದವುಗಳನ್ನೂ ಇಲ್ಲವಾಗಿಸಬಹುದು. ಅಷ್ಟೇ ಅಲ್ಲ, ಒಂದು ವೇಳೆ ಗರ್ಭಾಶಯದಲ್ಲಿ ಗಡ್ಡೆಗಳಾಗಿದ್ದರೆ ಇವುಗಳನ್ನು ಗುಣಪಡಿಸಲೂ ನೆರವಾಗುತ್ತದೆ.
ತಾರುಣ್ಯವನ್ನು ಕಾಪಾಡುತ್ತದೆ
ಮಾಕಾ ಸೇವನೆಯ ಜೊತೆಗೇ ಮಾಕಾಪುಡಿಯನ್ನು ಮುಖಲೇಪದಂತೆ ಮುಖಕ್ಕೆ ಹಚ್ಚಿಕೊಳ್ಳುವ ಮೂಲಕ ತಾರುಣ್ಯ ಹಾಗೂ ಕಾಂತಿಯುಕ್ತ ತ್ವಚೆಯನ್ನು ಹೆಚ್ಚು ವಯಸ್ಸಿನವರೆಗೆ ಕಾಪಾಡಿಕೊಳ್ಳಬಹುದು. ನಿತ್ಯದ ಮಾಕಾದಲ್ಲಿರುವ ಕಾರ್ಬೋಹೈಡ್ರೇಟುಗಳು ಹಾಗೂ ಇತರ ಪೋಷಕಾಂಶಗಳ ಸೇವನೆಯಿಂದ ನಿತ್ಯದ ಚಟುವಟಿಕೆಗಳಿಗೆ ಅಗತ್ಯವಾದ ಶಕ್ತಿಯನ್ನು ಪಡೆಯುವುದರ ಜೊತೆಗೇ ಸೂರ್ಯನ ವಿಕಿರಣಗಳಿಂದ ರಕ್ಷಣೆಯನ್ನೂ ಪಡೆಯಬಹುದು. | 1 |
ಹದಿಹರೆಯದಲ್ಲಿ ಅತಿಯಾಗಿ ಪೋರ್ನ್ ವೀಕ್ಷಿಸಿದ್ರೆ ಅಪಾಯ
23-10-2018 5:40AM IST / No Comments / Posted In: Latest News , Health
ಟೆಕ್ನಾಲಜಿ ಮುಂದುವರಿದಿರೋದ್ರಿಂದ ಈಗ ಇಂಟರ್ನೆಟ್ ಎಲ್ಲರ ಬೆರಳ ತುದಿಯಲ್ಲೇ ಇದೆ. ಕಂಪ್ಯೂಟರ್, ಸ್ಮಾರ್ಟ್ ಫೋನ್ ಎಲ್ಲದರಲ್ಲೂ ಅಶ್ಲೀಲ ವಿಡಿಯೋಗಳದ್ದೇ ಹಾವಳಿ.
ಹದಿಹರೆಯದವರಿಗಂತೂ ಪೋರ್ನ್ ದೃಶ್ಯ ವೀಕ್ಷಣೆ ಚಟವಾಗಿಬಿಟ್ಟಿದೆ. ಅತಿಯಾಗಿ ಇಂತಹ ಅಶ್ಲೀಲ ದೃಶ್ಯಗಳನ್ನು ವೀಕ್ಷಿಸುವುದರಿಂದ ಅವರ ವರ್ತನೆ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತಿದೆ. ಅವರು ಲೈಂಗಿಕ ಹಿಂಸಾ ಪ್ರವೃತ್ತಿಗಿಳಿಯುವ ಸಾಧ್ಯತೆ ಹೆಚ್ಚು ಅನ್ನೋದು ಸಂಶೋಧನೆಯಲ್ಲಿ ದೃಢಪಟ್ಟಿದೆ.
ಜೊತೆಗೆ ಅವರ ಮಾನಸಿಕ ಸ್ಥಿತಿ ಮೇಲೆ ಕೂಡ ಅದು ಪರಿಣಾಮ ಬೀರುತ್ತದೆ. ಸೂಕ್ತ ಲೈಂಗಿಕ ಶಿಕ್ಷಣದ ಮೂಲಕ ಅವರನ್ನು ಸರಿದಾರಿಗೆ ತರಬಹುದು. ಹಾಗಾಗಿ ಮಕ್ಕಳು ಹಾಗೂ ಹದಿಹರೆಯದವರು ಪೋರ್ನ್ ಸೈಟ್ ಗಳಿಂದ ದೂರವಿರುವಂತೆ ನೋಡಿಕೊಳ್ಳುವುದು ಉತ್ತಮ. ಬ್ರಿಟನ್ ಸರ್ಕಾರ, ಮಕ್ಕಳು ಹಾಗೂ ಹದಿಹರೆಯದವರಿಗೆ ಪೋರ್ನ್ ಸೈಟ್ ಗಳಿಗೆ ಆಕ್ಸೆಸ್ ದೊರೆಯದಂತೆ ಮಾಡಲು ಕ್ರಮ ಕೈಗೊಳ್ಳುತ್ತಿದೆ. | 1 |
ಟೆನ್ನಿಸ್
ಎರಡನೇ ಸುತ್ತಿಗೆ ಸಿಂಧು, ಸೈನಾ
ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್: ಸಮೀರ್ ವರ್ಮಾಗೆ ಜಯ; ಶ್ರೀಕಾಂತ್‌ಗೆ ಆಘಾತ
ಎರಡನೇ ಸುತ್ತಿಗೆ ಸಿಂಧು, ಸೈನಾ
ಪ್ರಜಾವಾಣಿ ವಾರ್ತೆ
Published:
25 ಏಪ್ರಿಲ್ 2019, 01:18 IST
Updated:
25 ಏಪ್ರಿಲ್ 2019, 01:19 IST
ಅಕ್ಷರ ಗಾತ್ರ :
ಆ
ಆ
ವುಹಾನ್ (ಪಿಟಿಐ): ಸೈನಾ ನೆಹ್ವಾಲ್ ಮತ್ತು ಪಿ.ವಿ.ಸಿಂಧು ಅವರು ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಎರಡನೇ ಸುತ್ತಿಗೆ ಪ್ರವೇಶಿಸಿದರು.
ಬುಧವಾರ ನಡೆದ ಪಂದ್ಯದಲ್ಲಿ ಪಿ.ವಿ.ಸಿಂಧು ಜಪಾನ್‌ನ ಸಯಾಕ ಟಕಹಾಶಿ ಅವರನ್ನು 21–14 21–7 ರಿಂದ ಮಣಿಸಿದರೆ, ಸೈನಾ ಚೀನಾದ ಹಾನ್ ಯೂ ವಿರುದ್ಧ 12–21, 21–11, 21–17ರಿಂದ ಗೆದ್ದರು.
ಆಕರ್ಷಕ ಸರ್ವ್ ಮತ್ತು ಡ್ರಾಪ್ ಶಾಟ್‌ಗಳಿಂದ ಗಮನ ಸೆಳೆದ ಸಿಂಧು, ಆರಂಭದಿಂದಲೂ ಪ್ರಾಬಲ್ಯ ಮೆರೆದರು. ಕೇವಲ 28 ನಿಮಿಷಗಳಲ್ಲಿ ಪಂದ್ಯವನ್ನು ಗೆದ್ದುಕೊಂಡು ಎರಡನೇ ಸುತ್ತಿಗೆ ಪ್ರವೇಶ ಪಡೆದರು. ಮುಂದಿನ ಹಂತದಲ್ಲಿ ಇಂಡೊನೇಷ್ಯಾದ ಚೊಯಿರುನ್ನಿಸಾ ವಿರುದ್ಧ ಸೆಣಸಲಿದ್ದಾರೆ.
ಸೈನಾಗೆ ಪ್ರಯಾಸದ ಗೆಲುವು: ವಿಶ್ವದ ಒಂಬತ್ತನೇ ಶ್ರೇಯಾಂಕಿತೆ ಸೈನಾ ನೆಹ್ವಾಲ್, ಆರಂಭದ ಗೇಮ್ ಅನ್ನು ಎದುರಾಳಿ ಹಾನ್ ಯೂ ಅವರಿಗೆ ಒಪ್ಪಿಸಿದರು. 12–21ರಿಂದ ಹಿನ್ನಡೆ ಅನುಭವಿಸಿ ಸೈನಾ ಪಂದ್ಯವನ್ನು ಕೈ ಚೆಲ್ಲುವ ಹಂತಕ್ಕೆ ತಲುಪಿದ್ದರು. ಆದರೆ, ಎರಡನೇ ಗೇಮ್‌ನಲ್ಲಿ ತಿರುಗೇಟು ಕೊಟ್ಟ ಸೈನಾ, 21–11ರಿಂದ ಮುನ್ನಡೆ ಪಡೆದರು. ಮೂರನೇ ಗೇಮ್‌ನಲ್ಲಿ ಎದುರಾಳಿಯಿಂದ ಪ್ರಬಲ ಪೈಪೋಟಿ ಎದುರಾಯಿತು. ಆದರೂ, 21–17ರಿಂದ ಗೆದ್ದು ಮುಂದಿನ ಸುತ್ತಿಗೆ ಪ್ರವೇಶ ಪಡೆದರು. ದಕ್ಷಿಣ ಕೊರಿಯಾದ ಕಿಮ್ ಗ ಯುನ್ ವಿರುದ್ಧ ಸೆಣಸಲಿದ್ದಾರೆ.
ಸಮೀರ್ ವರ್ಮಾಗೆ ಜಯ: ಪುರುಷರ ಸಿಂಗಲ್ಸ್‌ನಲ್ಲಿ ಸಮೀರ್ ವರ್ಮಾ ಅವರು ಜಪಾನ್‌ನ ಕಜುಮಸಾ ಸಕಾಯ್ ಅವರನ್ನು 21–13, 17–21, 21–18ರಿಂದ ಮಣಿಸಿ ಮುಂದಿನ ಸುತ್ತಿಗೆ ಪ್ರವೇಶ ಪಡೆದರು. ಎರಡನೇ ಗೇಮ್ ಅನ್ನು ಕೈ ಚೆಲ್ಲಿದ ವರ್ಮಾ, ಮೂರನೇ ಗೇಮ್‌ನಲ್ಲಿ ಪ್ರಾಬಲ್ಯ ಸಾಧಿಸಿದರು. 67 ನಿಮಿಷಗಳ ಪೈಪೋಟಿಯ ಆಟ ಅಭಿಮಾನಿಗಳ ಗಮನ ಸೆಳೆಯಿತು. ಎರಡನೇ ಸುತ್ತಿನಲ್ಲಿ ಹಾಂಕಾಂಗ್‌ನ ಆಂಗಸ್ ಎನ್ ಕಾ ಲಾಂಗ್ ವಿರುದ್ಧ ಸೆಣಸಲಿದ್ದಾರೆ.
ಶ್ರೀಕಾಂತ್‌ಗೆ ಆಘಾತ: ಕಿದಂಬಿ ಶ್ರೀಕಾಂತ್ 16–21, 20–22 ರಲ್ಲಿ ಇಂಡೊನೇಷ್ಯಾದ ಶ್ರೇಸರ್‌ಹಿರೇನ್ ರುಸ್ತಾವಿಟೋ ಅವರಿಗೆ ಮಣಿದರು. ಕೇವಲ 44 ನಿಮಿಷಗಳಲ್ಲಿ ಶ್ರೀಕಾಂತ್ ಪಂದ್ಯವನ್ನು ಎದುರಾಳಿಗೆ ಒಪ್ಪಿಸಿದರು.
ಡಬಲ್ಸ್‌ನಲ್ಲಿ ನಿರಾಸೆ: ಪುರುಷರ ಡಬಲ್ಸ್‌ನಲ್ಲಿ ಎಂ.ಆರ್.ಅರ್ಜುನ್ ಮತ್ತು ರಾಮಚಂದ್ರ್ ಶ್ಲೋಕ್ ಅವರು ಚೀನಾದ ಜಿತಾಂಹ್ ಹಿ ಮತ್ತು ತಾನ್ ಕಿಯಾಂಗ್ ವಿರುದ್ಧ 18–21, 15–21ರಿಂದ ಸೋತರು. ಮಹಿಳೆಯರ ಡಬಲ್ಸ್‌ನಲ್ಲಿ ಥಾಯ್ಲೆಂಡ್‌ನ ಜೊಂಗ್‌ಕೊಲ್ಪನ್ ಕಿತಿತಾರಕುಲ್– ರಾವಿಂದಾ ಪ್ರಜೋಂಗ್ಜಾಯ್ ಜೋಡಿಗೆ ಮೇಘನಾ ಜಕ್ಕಂಪುಡಿ–ಪೂರ್ವಿಶಾ ಎಸ್.ಶ್ಯಾಮ್ ಜೋಡಿ 21–13, 21–16ರಿಂದ ಮಣಿದರೆ, ಪೂಜಾ ದಂಡಾ–ಸಂಜನಾ ಸಂತೋಷ್ ಜೋಡಿ ಶ್ರೀಲಂಕಾದ ತಿಲಿನಿ ಪ್ರಮೋದಿಕಾ– ಕವಿದಿ ಸಿರಿಮನ್ನಾಗಿ ಅವರಿಗೆ ಮಣಿಯಿತು. | 2 |
Guwahati, First Published 4, Mar 2019, 9:46 AM IST
Highlights
ಹಾಲಿ ವಿಶ್ವ ಚಾಂಪಿಯನ್ನರ ವಿರುದ್ಧ ಏಕದಿನ ಸರಣಿ ಗೆದ್ದ ಸಂಭ್ರಮದಲ್ಲಿರುವ ಭಾರತ, ಟಿ20 ಮಾದರಿಯಲ್ಲೂ ಪ್ರಾಬಲ್ಯ ಮೆರೆಯುವ ವಿಶ್ವಾಸದಲ್ಲಿದೆ.
ಗುವಾಹಟಿ[ಮಾ.04]: 2020ರ ಐಸಿಸಿ ಟಿ20 ವಿಶ್ವಕಪ್‌ಗೆ ಭಾರತ ಮಹಿಳಾ ತಂಡ ಸಿದ್ಧತೆ ಆರಂಭಿಸಿದೆ. ಸೋಮವಾರದಿಂದ ಇಲ್ಲಿ ಇಂಗ್ಲೆಂಡ್ ವಿರುದ್ಧ ಆರಂಭಗೊಳ್ಳಲಿರುವ 3 ಪಂದ್ಯಗಳ ಟಿ20 ಸರಣಿ, ಸೂಕ್ತ ಆಟಗಾರ್ತಿಯರನ್ನು ಗುರುತಿಸಲು ನೆರವಾಗಲಿದೆ. ಹಾಲಿ ವಿಶ್ವ ಚಾಂಪಿಯನ್ನರ ವಿರುದ್ಧ ಏಕದಿನ ಸರಣಿ ಗೆದ್ದ ಸಂಭ್ರಮದಲ್ಲಿರುವ ಭಾರತ, ಟಿ20 ಮಾದರಿಯಲ್ಲೂ ಪ್ರಾಬಲ್ಯ ಮೆರೆಯುವ ವಿಶ್ವಾಸದಲ್ಲಿದೆ. ನ್ಯೂಜಿಲೆಂಡ್‌ನಲ್ಲಿ ಐತಿಹಾಸಿಕ ಏಕದಿನ ಸರಣಿ ಗೆದ್ದ ಬಳಿಕ ಟಿ20ಯಲ್ಲಿ 0-3 ಅಂತರದಲ್ಲಿ ವೈಟ್‌ವಾಶ್ ಮುಖಭಂಗ ಅನುಭವಿಸಿತ್ತು. ಆ ಸೋಲಿನ ಕಹಿಯನ್ನು ಮರೆಯಲು ಭಾರತ ಪಣ ತೊಟ್ಟಿದೆ.
ತವರಿನಲ್ಲಿ ಕೊನೆಯ ಏಕದಿನ ಪಂದ್ಯವಾಡಿದ ಗೇಲ್ ಹೇಳಿದ್ದಿಷ್ಟು...
ಕಾಯಂ ನಾಯಕಿ ಹರ್ಮನ್‌ಪ್ರೀತ್ ಕೌರ್ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ, ಸರಣಿಯಲ್ಲಿ ಭಾರತ ತಂಡವನ್ನು ಸ್ಮೃತಿ ಮಂಧನಾ ಮುನ್ನಡೆಸಲಿದ್ದಾರೆ. ರಾಷ್ಟ್ರೀಯ ತಂಡವನ್ನು ಸ್ಮೃತಿ ಮುನ್ನಡೆಸುತ್ತಿರುವುದು ಇದೇ ಮೊದಲು. ಕರ್ನಾಟಕದ ವೇದಾ ಕೃಷ್ಣಮೂರ್ತಿ ತಂಡಕ್ಕೆ ವಾಪಸಾಗಿದ್ದು, ಅವರ ಹೆಗಲ ಮೇಲೆ ನಿರೀಕ್ಷೆಯ ಭಾರವಿದೆ. ಹಿರಿಯ ಆಟಗಾರ್ತಿ ಮಿಥಾಲಿ ರಾಜ್ ತಂಡದಲ್ಲಿದ್ದಾರೆ. ಆಸ್ಪ್ರೇಲಿಯಾದಲ್ಲಿ ನಡೆಯಲಿರುವ ವಿಶ್ವಕಪ್‌ಗೂ ಮುನ್ನ ಮಿಥಾಲಿ ಟಿ20 ಮಾದರಿಗೆ ನಿವೃತ್ತಿ ಘೋಷಿಸುವ ನಿರೀಕ್ಷೆ ಇದ್ದು ಅವರ ಅನುಭವವನ್ನು ತಂಡ ಯಾವ ರೀತಿ ಉಪಯೋಗಿಸಿಕೊಳ್ಳಲಿದೆ ಎನ್ನುವ ಕುತೂಹಲವಿದೆ.
ಬೆಂಗಳೂರಲ್ಲಿ ‘ಈ ಸಲ ಕಪ್ ನಮ್ದೇ’ ಕೆಫೆ!
ಹರ್ಲೀನ್ ಡಿಯೋಲ್ ಹಾಗೂ ಭಾರತಿ ಫುಲ್ಮಾಲಿ ತಂಡಕ್ಕೆ ಸೇರ್ಪಡೆಗೊಂಡಿರುವ ಹೊಸ ಆಟಗಾರ್ತಿಯರಾಗಿದ್ದು, ಮೊದಲ ಯತ್ನದಲ್ಲೇ ಆಯ್ಕೆಗಾರರ ಗಮನ ಸೆಳೆಯುವ ವಿಶ್ವಾಸದಲ್ಲಿದ್ದಾರೆ. ಎಡಗೈ ವೇಗಿ ಕೋಮಲ್ ಜಂಜಾಡ್ ತಂಡಕ್ಕೆ ಪಾದಾರ್ಪಣೆ ಮಾಡಲಿದ್ದು, ಶಿಖಾ ಪಾಂಡೆ ಬೌಲಿಂಗ್ ವಿಭಾಗವನ್ನು ಮುನ್ನಡೆಸಲಿದ್ದಾರೆ. ತಂಡದಲ್ಲಿ ಐವರು ಸ್ಪಿನ್ನರ್‌ಗಳಿರುವುದು ವಿಶೇಷ.
ಪಂದ್ಯ ಆರಂಭ: ಬೆಳಗ್ಗೆ 11ಕ್ಕೆ, ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 1 | 2 |
ಕುಡ್ಲದಲ್ಲಿ ಮಲ್ಟಿಪ್ಲೆಕ್ಸ್‌ಗಳ ಅವಾಂತರ; ಟಿಕೆಟ್ ಜತೆಗೆ ಜಂಕ್‌ಫುಡ್ ಕಡ್ಡಾಯ!
Vijaya Karnataka| May 10, 2019, 08.00 AM IST
* ಬಿ. ರವೀಂದ್ರ ಶೆಟ್ಟಿ
ಕುಡ್ಲದಲ್ಲಿ ಸಿಂಗಲ್ ಥಿಯೇಟರ್‌ಗಳು ಸರದಿಯಂತೆ ಬಾಗಿಲು ಮುಚ್ಚುತ್ತಿವೆ. ಮಲ್ಟಿಪ್ಲೆಕ್ಸ್‌ಗಳ ಜಮಾನ ಶುರುವಾಗಿದೆ. ಆದರೆ ಈ ಮಲ್ಪಿಪ್ಲೆಕ್ಸ್‌ಗಳಲ್ಲಿ ಜನಸಾಮಾನ್ಯರು ಸಿನಿಮಾ ವೀಕ್ಷಿಸುವುದು ಮಾತ್ರ ಅಸಾಧ್ಯದ ಸಂಗತಿ ಎಂಬಂತಾಗಿದೆ. ಈ ಥಿಯೇಟರ್‌ಗಳಲ್ಲಿ ಪ್ರೇಕ್ಷ ಕರ ಜೇಬಿಗೆ ಬೇರೆ ಬೇರೆ ರೀತಿಯಲ್ಲಿ ಕನ್ನ ಹಾಕುತ್ತಾ ಬರುತ್ತಿವೆ. ಮಲ್ಟಿಪ್ಲೆಕ್ಸ್‌ಗಳು ಸರಕಾರ ನಿಗದಿ ಮಾಡಿದ ದರಕ್ಕಿಂತಲೂ ಹೆಚ್ಚಿನ ಟಿಕೆಟ್ ದರ ವಸೂಲಿ ಮಾಡುವುದು ಒಂದು ಕಡೆಯಾದರೆ, ಅಲ್ಲಿ ಮಾರಾಟ ಮಾಡುವ ಪಾಪ್‌ಕಾರ್ನ್, ನಾನಾ ಅನಾರೋಗ್ಯಕರ ತಂಪು ಪಾನೀಯ, ಜಂಕ್‌ಫುಡ್‌ಗಳಿಗೆ ದುಬಾರಿ ಬಿಲ್ ಮಾಡುತ್ತಿರುವುದು ನಮಗೆಲ್ಲರಿಗೂ ತಿಳಿದೇ ಇದೆ.
ಫುಡ್ ಬೇಡವಾದರೆ ಟಿಕೆಟ್ ಇಲ್ಲ :
ಮಂಗಳೂರಿನ ಕೆಲವು ಮಲ್ಟಿಪ್ಲೆಕ್ಸ್ ಥಿಯೇಟರ್‌ಗಳು ಇದಕ್ಕಿಂತಲೂ ಒಂದು ಹೆಚ್ಚು ಮುಂದೆ ಹೋಗಿ, ಟಿಕೆಟ್ ಜತೆಗೆ ಫುಡ್ ಖರೀದಿ ಕಡ್ಡಾಯ ಮಾಡಿವೆ. ಟಿಕೆಟ್ ಮತ್ತು ಫುಡ್ ಸೇರಿಸಿಯೇ ಆಫರ್ ನೀಡುತ್ತಿದೆ. ಫುಡ್ ಬೇಡ ಎಂದರೆ ಟಿಕೆಟ್ ನೀಡೋದಿಲ್ಲ ಎಂದೂ ಕಡ್ಡಿ ಮುರಿದಂತೆ ಹೇಳುವ ಮಲ್ಟಿಪ್ಲೆಕ್ಸ್ ಥಿಯೇಟರ್ ಕುಡ್ಲದಲ್ಲಿವೆ.
ಇಲ್ಲ ನಾವು ಆನ್‌ಲೈನ್ ಬುಕ್ ಮಾಡುತ್ತೇವೆ. ಆಗ ಫುಡ್ ಖರೀದಿಸುವ ಪ್ರಮೇಯವಿಲ್ಲ ಎಂದು ನೀವು ಬಯಸಿದರೆ ಫುಡ್ ಖರೀದಿಸಬೇಕಾಗಿಲ್ಲ. ಆದರೆ ಆನ್‌ಲೈನ್ ಬುಕ್ಕಿಂಗ್‌ಗೆ ಬೇರೆ ಬೇರೆ ನಿರ್ವಹಣೆ ಹೆಸರಲ್ಲಿ ಟಿಕೆಟೊಂದರ ಮೇಲೆ 20-30 ರೂ. ಹೆಚ್ಚುವರಿ ಚಾರ್ಜ್ ಮಾಡುವುದು ವಾಡಿಕೆ. ಹೇಗಾದರೂ ಮಾಡಿ ನಿಮ್ಮ ಜೇಬಿಗೆ ಕನ್ನ ಹಾಕುವುದು ಗ್ಯಾರಂಟಿ.
ಹಾಗೆ ನೋಡಿದರೆ ಪ್ರಾದೇಶಿಕ ಭಾಷೆಯ ಚಿತ್ರಗಳಿಗೆ ಪ್ರೈಮ್ ಟೈಂನಲ್ಲಿ ಅವಕಾಶ ನೀಡಬೇಕು. ಆದರೆ ಆ ನಿಯಮವನ್ನು ಪಾಲಿಸುವುದಿಲ್ಲ. ಇಲ್ಲಿ ಮಲ್ಟಿಪ್ಲೆಕ್ಸ್‌ಗಳು ಹೇಳಿದ್ದೇ ಶಾಸನ. ಎಷ್ಟೋ ತುಳು ಸಿನಿಮಾಗಳ ಟಿಕೆಟ್‌ಗಳನ್ನು ಫುಡ್ ಖರೀದಿಸದ ಕಾರಣಕ್ಕೆ ನಿರಾಕರಿಸಿದ ಉದಾಹರಣೆಯೂ ಇದೆ.
ಪಾಪ್‌ಕಾರ್ನ್‌ನಲ್ಲಿಯೇ ಲಾಭ :
ಮಲ್ಟಿಪ್ಲಕ್ಸ್‌ಗಳಿಗೆ ಟಿಕೆಟ್‌ಗಿಂತ ಹೆಚ್ಚಿನ ಲಾಭವಿರೋದು ಪಾಪ್‌ಕಾರ್ನ್, ತಂಪುಪಾನೀಯದಂತಹ ಜಂಕ್‌ಫುಡ್‌ನಿಂದ. ಹೊರಗಿನಿಂದ ಆಹಾರ ತೆಗೆದುಕೊಂಡು ಹೋಗುವಂತೆಯೇ ಇಲ್ಲ. ಇಷ್ಟೇ ಅಲ್ಲ ಮಲ್ಟಿಪ್ಲೆಕ್ಸ್‌ಗಳಲ್ಲಿ ಉಚಿತವಾಗಿ ಪಾರ್ಕಿಂಗ್ ವ್ಯವಸ್ಥೆಯೂ ಇಲ್ಲ. ಮಂಗಳೂರಿನ ಬಹುತೇಕ ಮಲ್ಟಿಪ್ಲೆಕ್ಸ್‌ಗಳಲ್ಲಿ ಪಾರ್ಕಿಂಗ್ ಶುಲ್ಕವನ್ನೂ ಪಾವತಿಸಬೇಕಿದೆ. ಒಟ್ಟಿನಲ್ಲಿ ಚಿತ್ರಪ್ರೇಮಿಗಳು ಸಂಕಷ್ಟ ಪಡುವಂತಾಗಿದೆ. ಪರಿಣಾಮ ಮಲ್ಟಿಪ್ಲೆಕ್ಸ್‌ಗಳಿಂದ ಸಿನಿಮಾಸಕ್ತರು ದೂರ ಸರಿಯುವುದು ಗ್ಯಾರಂಟಿ. | 0 |
ಹ್ಯಾರಿ, ಡೆಲೆ ಮಿಂಚು: ಇಂಗ್ಲೆಂಡ್ ಜಯಭೇರಿ
ಸ್ವೀಡನ್‌ಗೆ ಸೋಲುಣಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಇಂಗ್ಲಿಷ್ ಪಡೆ
ಹ್ಯಾರಿ, ಡೆಲೆ ಮಿಂಚು: ಇಂಗ್ಲೆಂಡ್ ಜಯಭೇರಿ
ಎಎಫ್‌ಸಿ
08 ಜುಲೈ 2018, 01:38 IST
Updated:
08 ಜುಲೈ 2018, 01:46 IST
ಅಕ್ಷರ ಗಾತ್ರ :
ಆ
ಆ
ಸಮಾರ. ರಷ್ಯಾ: ಫಿಫಾ ವಿಶ್ವಕಪ್ ಟೂರ್ನಿ ಆರಂಭಕ್ಕೆ ಮುನ್ನ ಇಂಗ್ಲೆಂಡ್ ತಂಡವು ತನ್ನ ಅಭ್ಯಾಸದ ಸಂದರ್ಭದಲ್ಲಿ ಕಬಡ್ಡಿ ಆಡಿ ದೊಡ್ಡ ಸುದ್ದಿ ಮಾಡಿತ್ತು. ಕಬಡ್ಡಿ ಆಟದಲ್ಲಿ ಕಂಡು ಬರುವ ಜಿಗುಟುತನ, ದಿಟ್ಟ ಹೋರಾಟವನ್ನೇಲ್ಲ ಫುಟ್‌ಬಾಲ್‌ನಲ್ಲಿ ಬಳಸಿಕೊಂಡ ಇಂಗ್ಲಿಷ್ ಪಡೆಯು ಈಗ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದೆ.
ಶನಿವಾರ ರಾತ್ರಿ ಸಮಾರ ಕ್ರೀಡಾಂಗಣದಲ್ಲಿ ನಡೆದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಹ್ಯಾರಿ ಮಗೈರ್ ಮತ್ತು ಡೆಲೆ ಅಲ್ಲಿ ಅವರು ಹೊಡೆದ ತಲಾ ಒಂದು ಗೋಲಿನ ನೆರವಿನಿಂದ ಇಂಗ್ಲೆಂಡ್ ತಂಡವು 2–0 ಗೋಲುಗಳಿಂದ ಸ್ವೀಡನ್ ತಂಡವನ್ನು ಸೋಲಿಸಿತು.
ಟೂರ್ನಿಯುದ್ದಕ್ಕೂ ಮಿಂಚಿದ್ದ ಹ್ಯಾರಿ ಕೇನ್ ಈ ಪಂದ್ಯದಲ್ಲಿ ಗೋಲು ಗಳಿಸಲಿಲ್ಲ. ಸ್ವೀಡನ್ ತಂಡದ ರಕ್ಷಣಾ ಆಟಗಾರರು ಅವರನ್ನು ಕಟ್ಟಿಹಾಕಲು ಮಾಡಿದ್ದ ಯೋಜನೆಯ ಸಫಲರಾದರು. ಆದರೆ ಇದನ್ನು ಮೊದಲೇ ಊಹಿಸಿದ್ದ ಇಂಗ್ಲೆಂಡ್ ಕೋಚ್ ಗರೆತ್ ಸೌತ್ ಗೇಟ್ ಬೇರೆಯದೇ ತಂತ್ರ ಹೆಣೆದಿದ್ದರು. ಅದನ್ನು ಹ್ಯಾರಿ ಮಗೈರ್ (33ನೇ ನಿಮಿಷ) ಕಾರ್ಯಗತ ಗೊಳಿಸಿದರು. ಎದುರಾಳಿ ತಂಡದ ಆಟಗಾರರು ಹ್ಯಾರಿ ಕೇನ್ ಅವರ ಸುತ್ತುವರಿದಿದ್ದನ್ನು ಮನಗಂಡ ಮಗೈರ್ ಚೆಂಡನ್ನು ಗೋಲ್‌ಪೋಸ್ಟ್‌ಗೆ ಸೇರಿಸುವಲ್ಲಿ ಯಶಸ್ವಿಯಾದರು.
ಇಂಗ್ಲೆಂಡ್ ಆಟಗಾರರು ಚುಟುಕು ಪಾಸ್‌ಗಳ ಮೂಲಕ ಸ್ವೀಡನ್ ತಂಡದ ಒತ್ತಡ ಹೆಚ್ಚಿಸಿದರು. ಫಿಫಾ ರ‍್ಯಾಂಕಿಂಗ್‌ನಲ್ಲಿ 12ನೇ ಸ್ಥಾನದಲ್ಲಿರುವ ಇಂಗ್ಲೆಂಡ್ ತಂಡದ ಸ್ಟ್ರೈಕರ್‌ಗಳು ಮತ್ತಷ್ಟು ಚುರುಕಿನಿಂದ ದಾಳಿ ನಡೆಸಿದರು. ಈ ಹಂತದಲ್ಲಿ ಒರಟು ಆಟ ಪ್ರದರ್ಶಿಸಿದ ಸ್ವೀಡನ್ ತಂಡದ ಇಬ್ಬರು ಆಟಗಾರರು ಹಳದಿ ಕಾರ್ಡ್ ದರ್ಶನ ಮಾಡಬೇಕಾಯಿತು.
59ನೇ ನಿಮಿಷದಲ್ಲಿ ಡೆಲೆ ಅಲಿ ಅವರು ಕಾಲ್ಚಳಕ ಮೆರೆದರು. ಮೂವರು ರಕ್ಷಣಾ ಆಟಗಾರರು ಮತ್ತು ಗೋಲ್‌ಕೀಪರ್ ಕಣ್ಣು ತಪ್ಪಿಸಿದ ಅವರು ಚೆಂಡನ್ನು ಗುರಿ ಮುಟ್ಟಿಸಿದರು. ಇದರೊಂದಿಗೆ ಇಂಗ್ಲೆಂಡ್ 2–0 ಮುನ್ನಡೆ ಸಾಧಿಸಿತು. ನಂತರದ ಅವಧಿಯಲ್ಲಿ ಸ್ವೀಡನ್ ತಂಡವು ಗೋಲು ಗಳಿಸಲು ಮಾಡಿದ ಪ್ರಯತ್ನಗಳಿಗೆ ಅಡ್ಡಗಾಲು ಹಾಕುವಲ್ಲಿಯೂ ಇಂಗ್ಲೆಂಡ್ ರಕ್ಷಣಾ ಪಡೆ ಸಫಲವಾಯಿತು. ಇಂಗ್ಲೆಂಡ್ ತಂಡದ ಗೋಲ್‌ಕೀಪರ್ ಪಿಕ್‌ಫೋರ್ಡ್ ಅವರ ಅಮೋಘ ಆಟವು ಮೇಲುಗೈ ಸಾಧಿಸಿತು. ತಮ್ಮ ಎರಡೂ ಬದಿಗೆ ಅವರು ಡೈವ್ ಮಾಡಿ ಚೆಂಡನ್ನು ಹಿಡಿತಕ್ಕೆ ಪಡೆಯುತ್ತಿದ್ದ ರೀತಿಯು ಆಕರ್ಷಕವಾಗಿತ್ತು. ಇದರಿಂದಾಗಿ ಸ್ವೀಡನ್ ತಂಡಕ್ಕೆ ಗೋಲು ಹೊಡೆಯಲು ಸಾಧ್ಯವಾಗಲಿಲ್ಲ.
ಪ್ರೀ ಕ್ವಾರ್ಟರ್‌ಫೈನಲ್‌ನಲ್ಲಿ ಸ್ವೀಡನ್ ತಂಡವು ಸ್ವಿಟ್ಜರ್‌ಲೆಂಡ್ ತಂಡವನ್ನು ಮಣಿಸಿ ನಾಲ್ಕರ ಘಟ್ಟಕ್ಕೆ ಪ್ರವೇಶಿಸಿತ್ತು. ಆದರೆ ನಾಲ್ಕರ ಘಟ್ಟಕ್ಕೆ ಹೋಗುವ ತಂಡದ ಆಸೆ ಕಮರಿತು. ಪಂದ್ಯದ ನಂತರ ತಂಡದ ಆಟಗಾರರು ಕಣ್ಣೀರು ಸುರಿಸುತ್ತ ಕುಸಿದು ಕುಳಿತರು.
ಸ್ವೀಡನ್ ಅಭಿಮಾನಿಗಳು ನಿರಾಸೆ ವ್ಯಕ್ತಪಡಿಸಿದ ಬಗೆ -ರಾಯಿಟರ್ಸ್ ಚಿತ್ರ | 2 |
|
Updated: Wednesday, August 23, 2017, 10:13 [IST]
ಹಸಿರು ಬೀನ್ಸ್ ಕಾಳುಗಳಲ್ಲಿ ಹಲವು ಪೋಷಕಾಂಶಗಳು ಸಾಂದ್ರೀಕೃತ ಸ್ಥಿತಿಯಲ್ಲಿದ್ದು ದೇಹದ ಹಲವು ಅಗತ್ಯತೆಗಳನ್ನು ಪೂರೈಸುತ್ತವೆ. ವಿಶೇಷವಾಗಿ ಕ್ಯಾರೋಟಿಯಾಯ್ಡುಗಳು ಆಂಟಿ ಆಕ್ಸಿಡೆಂಟುಗಳ ರೂಪದಲ್ಲಿ ಕಾರ್ಯನಿರ್ವಹಿಸುತ್ತವೆ. ಇಂದು ನಾವು ನಾರಿಲ್ಲದ ಹುರುಳಿಕಾಯಿ (String beans) ನ ಬೀಜಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಿದ್ದೇವೆ. ಈ ಬೀಜಗಳಲ್ಲಿ ಮೂರು ವಿಧದ ಕ್ಯಾರೋಟಿನಾಯ್ಡುಗಳು-ಅಂದರೆ ಬೀಟಾ ಕ್ಯಾರೋಟಿನ್, ಲ್ಯೂಟಿನ್ ಮತ್ತು ಜಿಯಾಕ್ಸಾಂಥಿನ್ ಹೆಚ್ಚಿನ ಪ್ರಮಾಣದಲ್ಲಿವೆ. ಜೀರ್ಣಕ್ರಿಯೆಯಲ್ಲಿ ಬೀಟ್ಯಾ ಕ್ಯಾರೋಟಿನ್ ವಿಟಮಿನ್ ಎ ಆಗಿ ಪರಿವರ್ತಿತವಾಗುತ್ತದೆ.
ಎದೆ ಹಾಲುಣಿಸುವ ತಾಯಿ 'ಬೀನ್ಸ್' ಸೇವಿಸಬಹುದೇ?
ಇದು ನಮ್ಮ ಸಾಮಾನ್ಯ ಇರುಳಿನ ದೃಷ್ಟಿಗೆ ಅತ್ಯಂತ ಅಗತ್ಯವಾಗಿದೆ. ಲ್ಯೂಟಿನ್ ಮತ್ತು ಜಿಯಾಕ್ಸಾಂಥಿನ್ ಪ್ರಖರ ನೀಲಿ ಕಿರಣಗಳಿಂದ ನಮ್ಮ ಕಣ್ಣುಗಳನ್ನು ರಕ್ಷಿಸುತ್ತವೆ. ಕ್ಯಾರೋಟಿನಾಯ್ಡುಗಳನ್ನು ಸೇವಿಸುವ ಮೂಲಕ ನಿತ್ಯದ ಅಗತ್ಯದ ವಿಟಮಿನ್ ಎ ಲಭಿಸುವ ಕಾರಣ ಇದನ್ನು ನಿತ್ಯವೂ ಸೇವಿಸಲು ಸಲಹೆ ಮಾಡಲಾಗುತ್ತದೆ. ಅಂದರೆ ನಿತ್ಯವೂ ಒಂದು ಕಪ್ ನಷ್ಟು ಹುರುಳಿಕಾಯಿಯ ಬೀಜಗಳನ್ನು ಸೇವಿಸುವ ಮೂಲಕ ದೈನಂದಿನ ಅಗತ್ಯದ ವಿಟಮಿನ್ ಎ ನ ಸುಮಾರು 29% ರಷ್ಟು ಪ್ರಮಾಣ ದೊರಕುತ್ತದೆ.
ಹಚ್ಚ ಹಸಿರು ಬೀನ್ಸ್‌ನಲ್ಲಿ ಅಡಗಿದೆ ತೂಕ ಇಳಿಸುವ ರಹಸ್ಯ!
ಈ ಬೀಜಗಳಲ್ಲಿ ಸಂಕೀರ್ಣ ನಾರುಗಳು, ವಿವಿಧ ವಿಟಮಿನ್ನುಗಳು, ಖನಿಜಗಳು ಹಾಗೂ ಆಂಟಿ ಆಕ್ಸಿಡೆಂಟುಗಳು ಹೆಚ್ಚಿನ ಪ್ರಮಾಣದಲ್ಲಿವೆ. ಅಲ್ಲದೇ ಇದರಲ್ಲಿ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಇಲ್ಲವೇ ಇಲ್ಲದ ಕಾರಣ ಎಲ್ಲಾ ವಯಸ್ಸಿನವರಿಗೆ ಸೂಕ್ತವಾದ ಆಹಾರವಾಗಿದೆ. ಇಂದಿನ ಲೇಖನದಲ್ಲಿ ಈ ಬೀಜಗಳನ್ನು ನಿತ್ಯವೂ ಸೇವಿಸುವ ಮೂಲಕ ದೇಹ ಪಡೆಯುವ ಪ್ರಯೋಜನಗಳ ಬಗ್ಗೆ ವಿವರಿಸಲಾಗಿದೆ...
ದೃಢವಾದ ಮೂಳೆಗಳಿಗಾಗಿ ವಿಟಮಿನ್ ಕೆ
ನಮ್ಮ ಆಹಾರದಲ್ಲಿ ಎಷ್ಟು ಕ್ಯಾಲ್ಸಿಯಂ ಇದ್ದರೂ ಇದನ್ನು ಮೂಳೆಗಳು ನೇರವಾಗಿ ಹೀರಿಕೊಳ್ಳಲು ಸಾಧ್ಯವಿಲ್ಲ ಆದ್ದರಿಂದ ಇದನ್ನು ಹೀರಿಕೊಳ್ಳಲು ಸಾಧ್ಯವಾಗಿಸಲು ಕೆಲವು ಪ್ರೋಟೀನುಗಳ ಅಗತ್ಯವಿದ್ದು ಈ ಅಗತ್ಯತೆಯನ್ನು ವಿಟಮಿನ್ ಕೆ ಪೂರೈಸುತ್ತದೆ. ಅಲ್ಲದೇ ವಿಟಮಿನ್ ಕೆ ಮೂಳೆಗಳ ಜೀವರಾಸಾಯನಿಕ ವ್ಯವಸ್ಥೆಯನ್ನು ನಿಯಂತ್ರಿಸುವ ಹಾಗೂ ಮೂಳೆಗಳಿಂದ ಖನಿಜಗಳು ನಷ್ಟಗೊಳ್ಳುವುದನ್ನು ತಡೆಯುತ್ತದೆ. ಪ್ರತಿದಿನ ಒಂದು ಕಪ್ ಹಸಿರು ಬೀನ್ಸ್ ಬೀಜ ಸೇವಿಸುವ ಮೂಲಕ ಇಪ್ಪತ್ತು ಮೈಕ್ರೋಗ್ರಾಂ ವಿಟಮಿನ್ ಪಡೆಯಬಹುದು.
ವಿಟಮಿನ್ ಸಿ
ದೇಹವನ್ನು ಹೇಗೋ ಪ್ರವೇಶಿಸಿ ಜೀವಕೋಶಗಳಿಗೆ ಹಾನಿ ಎಸಗುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳನ್ನು ವಿಟಮಿನ್ ಸಿ ನಿಷ್ಕ್ರಿಯಗೊಳಿಸುತ್ತದೆ. ಅಲ್ಲದೇ ವಿಟಮಿನ್ ಸಿ ಪ್ರೋಟೀನುಗಳು, ಕಾರ್ಬೋಹೈಡ್ರೇಟುಗಳು ಮತ್ತು ಡಿ ಎನ್ ಎ ಗಳನ್ನು ಈ ಫ್ರೀ ರ್‍ಯಾಡಿಕಲ್ ಗಳ ಧಾಳಿಯಿಂದ ರಕ್ಷಿಸುತ್ತದೆ. ಹಸಿರು ಬೀನ್ಸ್ ಸೇವನೆಯ ಇದು ಅತ್ಯುತ್ತಮ ಪ್ರಯೋಜನವಾಗಿದೆ.
ಕಡಿಮೆ ಕ್ಯಾಲೋರಿಗಳು
ತಾಜಾ ಹಸಿರು ಬೀನ್ಸ್ ಗಳು ಅತಿ ಅಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು ತೂಕ ಇಳಿಸಿಕೊಳ್ಳಲು ಯತ್ನಿಸುತ್ತಿರುವ ವ್ಯಕ್ತಿಗಳಿಗೆ ಅತ್ಯಂತ ಸೂಕ್ತವಾದ ಆಹಾರವಾಗಿದೆ.
ಹೆಚ್ಚಿನ ಪ್ರಮಾಣದ ನಾರು
ಈ ಕಾಳುಗಳಲ್ಲಿ ಅತಿಹೆಚ್ಚಿನ ಪ್ರಮಾಣದ ಕರಗುವ ನಾರು ಇದ್ದು ಜೀರ್ಣಕ್ರಿಯೆಯಲ್ಲಿ ತೊಂದರೆ ಇರುವ ವ್ಯಕ್ತಿಗಳಿಗೂ ಸೂಕ್ತವಾಗಿದೆ. ಇದರ ನಾರು ಮಲಬದ್ಧತೆಯಾಗದಂತೆ ತಡೆಯುತ್ತದೆ ಹಾಗೂ ಮೂಲವ್ಯಾಧಿ ಹಾಗೂ ಕರುಳುಗಳ ಒಳಗಣ ಗಂಟುಗಳ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗಳಿಗೂ ಸುರಕ್ಷಿತವಾಗಿ ಸೇವಿಸಬಹುದಾದ ಆಹಾರವಾಗಿದೆ.
ಫೋಲೇಟುಗಳು
ಜೀವಕೋಶಗಳ ಭಾಗವಾಗುವಿಕೆ ಹಾಗೂ ಡಿ ಎನ್ ಎ ಗಳ ಸಂಶ್ಲೇಷಣೆ ಗೆ ಫೋಲೇಟುಗಳು ತುಂಬಾ ಅಗತ್ಯವಾಗಿವೆ. ವಿಶೇಷವಾಗಿ ಗರ್ಭಧರಿಸಬಯಸುವ ಮಹಿಳೆಯರು ಹಾಗೂ ಪ್ರಥಮ ತ್ರೈಮಾಸಿಕ ಅವಧಿಯಲ್ಲಿರುವ ಗರ್ಭಿಣಿಯರಿಗೆ ಈ ಫೋಲೇಟುಗಳು ಇತರರಿಗಿಂತ ಹೆಚ್ಚು ಅಗತ್ಯವಿವೆ.
ಸೋಂಕುಗಳಿಂದ ರಕ್ಷಿಸುತ್ತದೆ
ಹಸಿರು ಬೀಜಗಳಲ್ಲಿ ಇತರ ವಿಟಮಿನ್ನುಗಳಾದ ನಿಯಾಸಿನ್ ಹಾಗೂ ಥೈಯಾಮಿನ್ ಗಳೂ ಉತ್ತಮ ಪ್ರಮಾಣದಲ್ಲಿದ್ದು ಇವು ದೇಹವನ್ನು ವಿವಿಧ ಸೋಂಕುಗಳಿಂದ ರಕ್ಷಿಸುತ್ತದೆ.
ಜೀವಕೋಶಗಳಲ್ಲಿ ಹಾಗೂ ಇಡಿಯ ದೇಹದಲ್ಲಿ ನೀರನ್ನು ಹಿಡಿದಿಡುತ್ತದೆ
ಹಸಿರು ಬೀಜಗಳಲ್ಲಿರುವ ಪೊಟ್ಯಾಷಿಯಂ ಜೀವಕೋಶಗಳ ಇಬ್ಭಾಗವಾಗುವಿಕೆಯಲ್ಲಿ ನೆರವಾಗುವ ಜೊತೆಗೇ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ ಹಾಗೂ ಹರಿವು ಸುಲಲಿತವಾಗಿರುವಂತೆ ನೋಡಿಕೊಳ್ಳುತ್ತದೆ.
ವಿಟಮಿನ್ ಎ ಪರಿಣಾಮಗಳು
ಹಸಿರು ಬೀಜಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ವಿಟಮಿನ್ ಎ ಹಲವು ಆಂಟಿ ಆಕ್ಸಿಡೆಂಟುಗಳನ್ನು ಒದಗಿಸುವಲ್ಲಿ ನೆರವಾಗುತ್ತದೆ. ಇವು ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸಿ ವೃದ್ಧಾಪ್ಯವನ್ನು ದೂರವಿಡುತ್ತದೆ. ಹಸಿರು ಬೀನ್ಸ್ ತಿನ್ನುವ ಮೂಲಕ ನಾವು ಪಡೆಯಬಹುದಾದ ಪ್ರಯೋಜನಗಳಲ್ಲಿ ಇದು ಅತಿ ಮುಖ್ಯವಾಗಿದೆ. | 1 |
ಗಣರಾಜ್ಯೋತ್ಸವದಂದು ಬಿಡುಗಡೆಯಾಗಿದ್ದ ‘ಪದ್ಮಾವತ್’ ಹೆಸರಲ್ಲಿವೆ ಈ ಮೂರು ದಾಖಲೆಗಳು…!
26-01-2019 7:15PM IST / No Comments / Posted In: Latest News , Entertainment
ನವ ವಿವಾಹಿತ ತಾರಾದಂಪತಿ ರಣವೀರ್ ಸಿಂಗ್, ದೀಪಿಕಾ ಪಡುಕೋಣೆ ಮತ್ತು ಶಾಹಿದ್ ಕಪೂರ್ ಅಭಿನಯದ ಪದ್ಮಾವತ್ ಚಿತ್ರ ಗಲ್ಲಾಪೆಟ್ಟಿಗೆಯನ್ನು ಭರ್ಜರಿ ಕೊಳ್ಳೆ ಹೊಡೆದದ್ದಲ್ಲದೆ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆದಿದೆ.
ಕಳೆದ ವರ್ಷ ಜನವರಿಯಲ್ಲಿ ಬಿಡುಗಡೆಯಾಗಿದ್ದ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಬಹು ವಿವಾದಿತ ಪದ್ಮಾವತ್ ಚಿತ್ರ ಬಿಡುಗಡೆಗೆ ಮುಂಚೆಯೇ ಭಾರೀ ಸದ್ದು ಮಾಡಿತ್ತು.
ರಜಪೂತ ರಾಣಿ ಪದ್ಮಾವತಿ ಬದುಕಿನ ಕಥಾಹಂದರವನ್ನೊಳಗೊಂಡ ಚಿತ್ರದ ಬಗ್ಗೆ ಎಡ-ಬಲ-ಮಧ್ಯಮ ಪಂಥಗಳ ಚಿಂತಕರು ಬಿಸಿ ಬಿಸಿ ಚರ್ಚೆ ನಡೆಸಿದ್ದರು. ಈ ಚಿತ್ರ ಬಿಡುಗಡೆಯೇ ಆಗಬಾರದೆಂದು ಭಾರೀ ವಿರೋಧ ವ್ಯಕ್ತವಾಗಿತ್ತು.
ಆದರೆ ಬಿಡುಗಡೆಯಾದ ಬಳಿಕ ಈ ಚಿತ್ರ ಬಾಕ್ಸಾಫೀಸ್ ನಲ್ಲಿ ಮೂರು ದಾಖಲೆಗಳನ್ನು ಬರೆದಿದೆ. ಆ ಮೂರು ದಾಖಲೆಗಳಿವು.
1. ಗಣರಾಜ್ಯೋತ್ಸವದಂದು ಬಿಡುಗಡೆಯಾದ ಚಿತ್ರಗಳಲ್ಲಿ ಗಣರಾಜ್ಯೋತ್ಸವದ ದಿನ ಅತ್ಯಂತ ಹೆಚ್ಚು ಗಳಿಕೆ- 24 ಕೋಟಿ ರೂ.
2. ಗಣರಾಜ್ಯೋತ್ಸವದಂದು ಬಿಡುಗಡೆಯಾದ ಚಿತ್ರಗಳಲ್ಲಿ ಮೊದಲ ವಾರ ಅತ್ಯಂತ ಹೆಚ್ಚು ಹಣ ಗಳಿಸಿದ ಚಿತ್ರ-114 ಕೋಟಿ ರೂ.
3. ಗಣರಾಜ್ಯೋತ್ಸವದಂದು ಬಿಡುಗಡೆಯಾದ ಚಿತ್ರಗಳಲ್ಲಿ ಅತ್ಯಂತ ಹೆಚ್ಚು ಹಣ ಗಳಿಸಿದ ಚಿತ್ರ- 302 ಕೋಟಿ ರೂ. | 0 |
Bengaluru, First Published 18, Sep 2018, 3:54 PM IST
Highlights
ಅಲಿಯಾ ಭಟ್ ತಾಯಿ ಸೋನಿಯಾ ರಾಜ್ದಾನ್ ಅವರಿಬ್ಬರ ಸಂಬಂಧದ ಕುರಿತಾಗಿ ಮಾತನಾಡುತ್ತಾ ರಣಬೀರ್ ಕಪೂರ್ ನನ್ನು ಬಹಳ ಮೆಚ್ಚಿಕೊಂಡಿದ್ದಾರೆ.
ಚಿತ್ರರಂಗದಲ್ಲಿ ಗಾಸಿಪ್ಪುಗಳು ಆಗಾಗ ಹುಟ್ಟಿಕೊಳ್ಳುತ್ತವೆ. ಕೆಲವು ಸ್ಟ್ರಾಂಗು ಆಗುತ್ತವೆ. ಮತ್ತೆ ಕೆಲವು ಅಲ್ಲಲ್ಲೇ ಬಿದ್ದು ಹೋಗುತ್ತವೆ. ಆದರೆ ಈಗೀಗ ರಣಬೀರ್ ಕಪೂರ್ ಮತ್ತು ಅಲಿಯಾ ಭಟ್ ಸಂಬಂಧದ ಕುರಿತಂತೆ ಹಬ್ಬಿರುವ ಗಾಸಿಪ್ಪು ನಿಜವಾಗುವ ಲಕ್ಷಣ ಗೋಚರಿಸುತ್ತಿದೆ.
ಸದ್ಯಕ್ಕೆ ಅಯನ್ ಮುಖರ್ಜಿ ನಿರ್ದೇಶನದ ‘ಬ್ರಹ್ಮಾಸ್ತ್ರ’ ಚಿತ್ರದ ಚಿತ್ರೀಕರಣಕ್ಕಾಗಿ ರಣಬೀರ್, ಅಲಿಯಾ ಇಬ್ಬರೂ ಬೆಲ್‌ಗ್ರೇಡ್‌ನಲ್ಲಿದ್ದಾರೆ. ಸಂದರ್ಭ ಹೀಗಿರುವಾಗ ಮಬ್ಬು ಕವಿದ ಕಂಜೆಯಲ್ಲಿ ಅಯನ್, ರಣಬೀರ್, ಅಲಿಯಾ ಜೊತೆಯಾಗಿ ಒಂದು ಫೋಟೋ ತೆಗೆದು ಸೋಷಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದೇ ತಡ ಅಭಿಮಾನಿಗಳೆಲ್ಲಾ ಖುಷ್. ಅದಕ್ಕೆ ತಕ್ಕಂತೆ ಅಲಿಯಾ ಭಟ್ ತಾಯಿ ಸೋನಿಯಾ ರಾಜ್ದಾನ್ ಅವರಿಬ್ಬರ ಸಂಬಂಧದ ಕುರಿತಾಗಿ ಮಾತನಾಡುತ್ತಾ ರಣಬೀರ್ ಕಪೂರ್‌ನನ್ನು ಬಹಳ ಮೆಚ್ಚಿಕೊಂಡಿದ್ದಾರೆ. ಲವ್ಲೀ ಲವ್ಲೀ ಬಾಯ್ ರಣಬೀರ್ ಎಂದು ಕರೆದಿದ್ದಾರೆ. ಇತ್ತೀಚೆಗೆ ರಿಶಿ ಕಪೂರ್ ನಮ್ಮ ಕುಟುಂಬಕ್ಕೆ ಅಲಿಯಾ ಅಂದ್ರೆ ಇಷ್ಟ ಎಂದಿದ್ದರು. ಹಾಗಾಗಿ ಬಾಲಿವುಡ್ ಪ್ರಖ್ಯಾತ ನಟ, ನಟಿ ಜೋಡಿಯಾಗುವ ಕಾಲ ಬಹುಶಃ ದೂರವಿಲ್ಲ
Last Updated 19, Sep 2018, 9:29 AM IST | 0 |
Bangalore, First Published 17, Jun 2019, 8:36 AM IST
Highlights
ಅಪ್ಪಂದಿರ ದಿನದಂದು ನಟ ವರುಣ್ ಧವನ್‌ಗೆ ತಂದೆ ಕಪಾಳಮೋಕ್ಷ!| ವೈರಲ್ ವಿಡಿಯೋ
ಮುಂಬೈ[ಜೂ.17]: ವಿಶ್ವ ಅಪ್ಪಂದಿರ ದಿನಾಚರಣೆ ಪ್ರಯುಕ್ತ ಬಾಲಿವುಡ್‌ನ ಬಹುಬೇಡಿಕೆಯ ನಟರ ಪೈಕಿ ಒಬ್ಬರಾದ ವರುಣ್ ಧವನ್ ಅವರು ತಮ್ಮ ತಂದೆ ಕುರಿತಾದ ತಮಾಷೆಯ ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.
ಈ ವಿಡಿಯೋದಲ್ಲಿ ವರುಣ್ ಧವನ್ ಅವರಿಗೆ ಅವರ ತಂದೆ ಡೇವಿಡ್ ಧವನ್ ಅವರು ತಮಾಷೆಯಾಗಿ 2 ಬಾರಿ ಕಪಾಳಕ್ಕೆ ತಟ್ಟುತ್ತಾರೆ. | 0 |
ಶುಕ್ರವಾರ ತೆರೆಕಾಣುತ್ತಿರುವ ಸಿನಿಮಾಗಳು
ಶುಕ್ರವಾರ ತೆರೆಕಾಣುತ್ತಿರುವ ಸಿನಿಮಾಗಳು
ಪ್ರಜಾವಾಣಿ ವಾರ್ತೆ
Published:
21 ಡಿಸೆಂಬರ್ 2018, 01:09 IST
Updated:
21 ಡಿಸೆಂಬರ್ 2018, 01:09 IST
ಅಕ್ಷರ ಗಾತ್ರ :
ಆ
ಮಾರಿ–2 (ತಮಿಳು)
ಹಲವು ತಿಂಗಳು ಬ್ರೇಕ್ ತೆಗೆದುಕೊಂಡಿದ್ದ ನಟ ಧನುಷ್ ಮಾರಿ–2 ಮೂಲಕ ಮೋಡಿ ಮಾಡಲು ತೆರೆಗೆ ಬರುತ್ತಿದ್ದಾರೆ. ಧನುಷ್ ಅಭಿನಯದ ಮಾರಿ ಸಿನಿಮಾವು ಹೊಸ ಕ್ರೇಜ್ ಹುಟ್ಟುಹಾಕಿತ್ತು. ಧನುಷ್‌ಗೆ ಜೋಡಿಯಾಗಿ ಸಾಯಿ ಪಲ್ಲವಿ ಕಾಣಿಸಿಕೊಂಡಿದ್ದಾರೆ. ಬಾಲಾಜಿ ನಿರ್ದೇಶನದ ಈ ಸಿನಿಮಾದಲ್ಲಿ ವರಲಕ್ಷ್ಮಿ ಶರತ್‌ಕುಮಾರ್ ಹಾಗೂ ಟೊವಿನೊ ಥಾಮಸ್ ಸಹ ಬಣ್ಣ ಹಚ್ಚಿದ್ದಾರೆ.
ಅಂತರಿಕ್ಷಂ 9000ಕೆಎಂಪಿಎಚ್ (ತೆಲುಗು)
‘ಅಂತರಿಕ್ಷಂ 9000ಕೆಎಂಪಿಎಚ್’ ಬಾಹ್ಯಕಾಶದ ಥ್ರಿಲ್ಲರ್ ಕಥೆಯ ಸಿನಿಮಾ. ಆಂಧ್ರಪ್ರದೇಶದ ನೆಲ್ಲೂರು ಬಳಿಯ ಶ್ರೀಹರಿಕೋಟ ಬಾಹ್ಯಕಾಶ ಕೇಂದ್ರದಲ್ಲಿ ಈ ಸಿನಿಮಾದ ಬಹುತೇಕ ಚಿತ್ರೀಕರಣ ನಡೆದಿದ್ದು, ನಾಯಕ ನಟನಾಗಿ ಟಾಲಿವುಡ್‌ನ ಮೆಗಾಸ್ಟಾರ್ ಚಿರಂಜೀವಿ ಕುಟುಂಬದ ಕುಡಿಯಾದ ವರುಣ್ ತೇಜ್ ಕಾಣಿಸಿಕೊಂಡಿದ್ದಾರೆ. ವರುಣ್ ಜೊತೆ ಅದಿತಿ ರಾವ್ ಹೈದರಿ, ಲಾವಣ್ಯ ತ್ರಿಪಾಟಿ ಬಣ್ಣ ಹಚ್ಚಿದ್ದಾರೆ. ಸಂಕಲ್ ಪಿ. ರೆಡ್ಡಿ ನಿರ್ದೇಶನದ ಈ ಸಿನಿಮಾವನ್ನು ಫರ್ಸ್ಟ್ ಫ್ರೇಮ್ ಎಂಟರ್‌ಟೈನ್‌ಮೆಂಟ್ಸ್ ಕಂಪನಿ ನಿರ್ಮಿಸಿದೆ.
ಪಡಿ ಪಡಿ ಲೇಚೇ ಮನಸು (ತೆಲುಗು)
ಹನು ರಾಘವಪುಡಿ ನಿರ್ದೇಶನದ ಈ ಸಿನಿಮಾ ರೋಮ್ಯಾಂಟಿಕ್ ಕಥಾಹಂದರದಿಂದ ಕೂಡಿದೆ. ಟಾಲಿವುಡ್‌ನ ಕ್ಯೂಟ್ ಗರ್ಲ್ ಸಾಯಿಪಲ್ಲವಿ ನಟ ಶ್ರಾವಂದ್ ಅವರಿಗೆ ಜೋಡಿಯಾಗಿ ಅಭಿನಯಿಸಿದ್ದಾರೆ. ಸಿನಿಮಾದ ಆಡಿಯೊ ಲಾಂಚ್ ಕಾರ್ಯಕ್ರಮದಲ್ಲಿ ತೆಲುಗಿನ ಸ್ಟೈಲಿಷ್ ಸ್ಟಾರ್ ಅಲ್ಲುಅರ್ಜುನ್ ಪಾಲ್ಗೊಂಡು ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಅಡಂಗ ಮರು (ತಮಿಳು)
ಈ ಸಿನಿಮಾ 2016ರಲ್ಲಿ ತೆರೆಕಂಡ ತನಿ ಒರುವನ್ ಸಿನಿಮಾದ ಮುಂದುವರೆದ ಭಾಗ. ಕಾರ್ತಿಕ್ ತಂಗವೇಲು ನಿರ್ದೇಶನದ ಈ ಸಿನಿಮಾದಲ್ಲಿ ನಟ ಜಯಂ ರವಿ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಅವರ ಜೊತೆ ಮುಖ್ಯಭೂಮಿಕೆಯಲ್ಲಿ ರಾಶಿ ಖನ್ನಾ ಹಾಗೂ ಸಂಪತ್ ರಾಜ್ ಇದ್ದಾರೆ.
ಕನಾ (ತಮಿಳು)
ಬಾಲಕಿಯೊಬ್ಬಳ ಕ್ರಿಕೆಟ್ ಆಸಕ್ತಿಯನ್ನೇ ಪ್ರಧಾನವಾಗಿರಿಸಿಕೊಂಡು ಅರುಣ್ ರಾಜ ಕಾಮರಾಜ ಅವರು ಸುಂದರವಾಗಿ ಕಥೆ ಎಣೆದು ನಿರ್ದೇಶಿಸಿರುವ ಸಿನಿಮಾವಿದು. ಐಶ್ವರ್ಯಾ ರಾಜ್ ನಾಯಕಿಯಾಗಿ ನಟಿಸಿರುವ ಈ ಸಿನಿಮಾದಲ್ಲಿ ಆಕೆಯ ತಂದೆ ಪಾತ್ರದಲ್ಲಿ ಕಟ್ಟಪ್ಪ ಖ್ಯಾತಿಯ ಸತ್ಯರಾಜ್ ಕಾಣಿಸಿಕೊಂಡಿದ್ದಾರೆ.
0 Post Comments (+) | 0 |
ಕಬಡ್ಡಿ: ಡೆಲ್ಲಿ-ಪ್ಯಾಂಥರ್ಸ್ ಪಂದ್ಯ ಡ್ರಾ
ಕಬಡ್ಡಿ: ಡೆಲ್ಲಿ-ಪ್ಯಾಂಥರ್ಸ್ ಪಂದ್ಯ ಡ್ರಾ
ಪಿಟಿಐ
21 ಡಿಸೆಂಬರ್ 2018, 01:12 IST
Updated:
21 ಡಿಸೆಂಬರ್ 2018, 01:12 IST
ಅಕ್ಷರ ಗಾತ್ರ :
ಆ
ಆ
ಪಂಚಕುಲಾ: ರೋಚಕ ಅಂತ್ಯ ಕಂಡ ಪಂದ್ಯದಲ್ಲಿ ದಬಂಗ್ ಡೆಲ್ಲಿ ಮತ್ತು ಜೈಪುರ ಪಿಂಕ್ ಪ್ಯಾಂಥರ್ಸ್ ತಂಡಗಳು 37–37ರಿಂದ ಡ್ರಾ ಸಾಧಿಸಿದವು.
ಗುರುವಾರ ರಾತ್ರಿ ಇಲ್ಲಿನ ತವು ದೇವಿಲಾಲ್ ಕ್ರೀಡಾಂಗಣದಲ್ಲಿ ನಡೆದ ಪ್ರೊ ಕಬಡ್ಡಿ ಪಂದ್ಯದಲ್ಲಿ ಉಭಯ ತಂಡಗಳು ಆರಂಭದಿಂದಲೇ ಸಮಬಲದ ಪೈಪೋಟಿ ನಡೆಸಿದ್ದವು. ದೀಪಕ್ ಹೂಡಾ ಎಂಟು ಪಾಯಿಂಟ್ ಗಳಿಸಿ ಜೈಪುರ ತಂಡದಲ್ಲಿ ಮಿಂಚಿದರು. ಡೆಲ್ಲಿ ಪರ ಚಂದ್ರನ್ ರಂಜಿತ್ ಸೂಪರ್ ಟೆನ್ (11 ಪಾಯಿಂಟ್) ಮೂಲಕ ಗಮನ ಸೆಳೆದರು.
ಅವರಿಗೆ ಉತ್ತಮ ಸಹಕಾರ ನೀಡಿದ ಪವನ್ ಕಡಿಯಾನ್ (ಒಂಬತ್ತು ಪಾಯಿಂಟ್) ಕೂಡ ಪ್ರೇಕ್ಷಕರ ಮನಸೂರೆಗೈದರು.
ಸೆಲ್ವಮಣಿ ಒಂದೇ ರೇಡ್‌ನಲ್ಲಿ ನಾಲ್ಕು ಪಾಯಿಂಟ್ ಗಳಿಸಿದ್ದು ಪಂದ್ಯಕ್ಕೆ ಮಹತ್ವದ ತಿರುವು ತಂದುಕೊಟ್ಟಿತು. ಸಂದೀಪ್ ಧುಳ್ ಆರು ಟ್ಯಾಕಲ್ ಪಾಯಿಂಟ್‌ಗಳನ್ನು ಕಲೆ ಹಾಕಿದರು.
ಆರಂಭದಲ್ಲಿ ದಬಂಗ್ ಡೆಲ್ಲಿ 5–0ಯಿಂದ ಮುನ್ನಡೆದಿತ್ತು. ಐದನೇ ನಿಮಿಷದಲ್ಲಿ ಸೂಪರ್ ಟ್ಯಾಕಲ್ ಮೂಲಕ ಜೈಪುರ ತಂಡದವರು ಪಾಯಿಂಟ್ ಗಳಿಸಲು ಆರಂಭಿಸಿದರು. ನಂತರ ಪಂದ್ಯ ಪ್ರತಿ ಕ್ಷಣವೂ ರೋಚಕವಾಗುತ್ತ ಸಾಗಿತು. | 2 |
ವೈದ್ಯರಿಗೊಂದು ಸಲಾಮ್
ವೈದ್ಯರಿಗೊಂದು ಸಲಾಮ್
Jul 01, 2016 11:58:26 AM (IST)
ಭಾರತರತ್ನ ಡಾ.ಬಿದನ್ ಚಂದ್ರ ರಾಯ್ ಅವರ ಜಯಂತಿಯಾದ ಜುಲೈ 1ನ್ನು ಭಾರತದಲ್ಲಿ ವೈದ್ಯರ ದಿನಾಚರಣೆಯನ್ನಾಗಿ ಆಚರಿಸುತ್ತಾ ಬರಲಾಗುತ್ತಿದೆ. ಸದಾ ರೋಗಿಗಳ ಶುಶ್ರೂಷೆಯಲ್ಲಿ ತೊಡಗಿ ಆರೋಗ್ಯ ಸೇವೆ ಮಾಡುವ ವೈದ್ಯರಿಗೆ ಸಲಾಂ ಎನ್ನಲೇ ಬೇಕು. ಇತ್ತೀಚಿಗಿನ ದಿನಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳು ವೈದ್ಯರ ಕರ್ತವ್ಯಕ್ಕೆ ಚ್ಯುತಿ ತರುತ್ತಿವೆ ಎನ್ನುವ ಮಾತುಗಳೂ ಇವೆ. ಮತ್ತೊಂದೆಡೆ ವೈದ್ಯರು ಭಯದ ವಾತಾವರಣದಲ್ಲಿ ಕೆಲಸ ಪರಿಸ್ಥಿತಿಯನ್ನು ಸೃಷ್ಟಿಮಾಡಿದೆ.
ವೈದ್ಯ ವೃತ್ತಿ ಎನ್ನುವುದು ಪವಿತ್ರವಾದ ವೃತ್ತಿ. ಅದಕ್ಕೆ ತನ್ನದೇ ಆದ ಗೌರವ, ಜವಬ್ದಾರಿ ಎಲ್ಲವೂ ಇದೆ. ವೈದ್ಯರು ಒಂದು ಕ್ಷಣ ಎಚ್ಚರ ತಪ್ಪಿದರೂ ಅದರಿಂದ ಭಾರೀ ಅನಾಹುತ ಸಂಭವಿಸಿ ಬಿಡುತ್ತದೆ. ಹೀಗಾಗಿ ಪವಿತ್ರ ವೃತ್ತಿಯಾಗಿರುವ ವೈದ್ಯ ವೃತ್ತಿಯನ್ನು ಮಾಡುವ ಎಲ್ಲಾ ವೈದ್ಯರು ಒಂದೆಡೆ ಕಲೆತು ವೈದ್ಯರ ದಿನಾಚರಣೆ ಸಂದರ್ಭ ಮನನ ಮಾಡಿಕೊಳ್ಳಲೊಂದು ಅವಕಾಶ ದೊರೆತಂತಾಗಿದೆ. ಹಾಗೆನೋಡಿದರೆ ವೈದ್ಯರ ದಿನಾಚರಣೆಯನ್ನು ಭಾರತದಲ್ಲಿ ಜುಲೈ 1ರಂದು ಆಚರಿಸಿದರೆ, ಅಮೆರಿಕದಲ್ಲಿ ಮಾರ್ಚ್ 30ರಂದು ವೈದ್ಯ ದಿನಾಚರಣೆಯನ್ನು ಆಚರಿಸುತ್ತಾರೆ. ಏಕೆಂದರೆ ಮಾರ್ಚ್ 30, 1842 ರಂದು ಡಾ.ಕ್ರಾಫರ್ಡ್ ಡಬ್ಲ್ಯು ಲಾಂಗ್ ಎನ್ನುವವರು ಮೊದಲ ಬಾರಿಗೆ ಅರಿವಳಿಕೆಯನ್ನು (ಅನೆಸ್ತೀಸಿಯ) ಪರಿಣಾಮಕಾರಿಯಾಗಿ ಬಳಸಿ ಒಂದು ಶಸ್ತ್ರಚಿಕಿತ್ಸೆಯನ್ನು ಮಾಡಿದರಂತೆ. ಈ ಮಹತ್ವದ ದಿನವನ್ನು ಅವರು ರಾಷ್ಟ್ರೀಯ ವೈದ್ಯ ದಿನಾಚರಣೆಯನ್ನಾಗಿ ಆಚರಿಸುತ್ತಿದ್ದಾರೆ. ಅಂದು ಅಲ್ಲಿ ರೋಗಿಗಳು ಮತ್ತು ಸಾರ್ವಜನಿಕರು ವೈದ್ಯರಿಗೆ ಕೆಂಪು ಗುಲಾಬಿ ಹೂವು ನೀಡಿ ಶುಭಾಶಯ ಹೇಳುತ್ತಾರಂತೆ. ಕಾರಣ ಕೆಂಪು ಗುಲಾಬಿ ಪ್ರೀತಿ, ತ್ಯಾಗ, ಧೈರ್ಯ, ಸಾಹಸ ಹಾಗೂ ಸೇವೆಯ ಪ್ರತೀಕವಂತೆ.
ಭಾರತದಲ್ಲಿ ಜುಲೈ1ನ್ನು ವೈದ್ಯರ ದಿನಾಚರಣೆಯನ್ನಾಗಿ ಆಚರಿಸುವುದರ ಹಿಂದೆ ಹಲವು ಮಹತ್ವದ ವಿಚಾರಗಳಿವೆ. ಅದು ಮೇಲ್ನೋಟಕ್ಕೆ ಡಾ.ಬಿದನ್ ಚಂದ್ರ ರಾಯ್ ಅವರ ಜನ್ಮದಿನವಾದರೂ ಆ ದಿನವನ್ನು ಆಯ್ಕೆ ಮಾಡಿಕೊಳ್ಳಲು ಹಲವು ಕಾರಣಗಳಿವೆ. ಡಾ.ಬಿದನ್ ಚಂದ್ರ ರಾಯ್ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಮಾಹಾತ್ಮ ಗಾಂಧೀಜಿಯವರ ಖಾಸಗಿ ವೈದ್ಯರೂ ಹೌದು. ಅವರು ಲಂಡನ್ ನಿಂದ ಎಫ್.ಆರ್.ಸಿ.ಎಸ್ ಹಾಗೂ ಎಂ.ಆರ್.ಸಿ.ಪಿ ಪದವಿಗಳೆರಡನ್ನೂ ಪಡೆದ ತಜ್ಞವೈದ್ಯ, ಶಸ್ತ್ರಚಿಕಿತ್ಸಕರಾಗಿದ್ದದ್ದು ಮತ್ತೊಂದು ವಿಶೇಷ. ಇವರು ಅನೇಕ ಆಸ್ಪತ್ರೆ ಹಾಗೂ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸುವುದರೊಂದಿಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳಾಗಿ ಜನಸೇವೆಯೊಂದಿಗೆ ಪ್ರತಿ ದಿನ ಸುಮಾರು 2 ಗಂಟೆಗಳ ಕಾಲ ರೋಗಿಗಳಿಗೆ ಉಚಿತ ಚಿಕಿತ್ಸೆಯನ್ನು ನೀಡುತ್ತಿದ್ದರು ಎಂದರೆ ಅವರ ಸೇವಾ ಮನೋಭಾವನೆ ಹೇಗಿದ್ದಿರಬಹುದೆಂಬುದು ಅರ್ಥವಾಗಿ ಬಿಡುತ್ತದೆ.
ಇಂತಹ ಮಹಾನ್ ವ್ಯಕ್ತಿ ಜುಲೈ 1, 1882ರಲ್ಲಿ ಜನಿಸಿ ಜುಲೈ 1, 1962ರಂದು ವಿಧಿವಶರಾದರು. ಆದರೆ ಅವರು ಜುಲೈ 1ರಂದು ಜನಿಸಿ, ಜುಲೈ 1ರಂದೇ ಇಹಲೋಕ ತ್ಯಜಿಸಿದ್ದು ವಿಶೇಷ. ಅವರ ನೆನಪು ಚಿರವಾಗಿರಲೆಂದೇ ವೈದ್ಯರ ದಿನಾಚರಣೆಯನ್ನು ಅಸ್ತಿತ್ವಕ್ಕೆ ತರಲಾಗಿದೆ.
ಇವತ್ತು ವೈದ್ಯಲೋಕ ಅಗಾಧವಾಗಿ ಬೆಳೆದಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕಾಣಸಿಗುವ ಆರೋಗ್ಯ ಕೇಂದ್ರದಿಂದ ಆರಂಭವಾಗಿ ಸೂಪರ್ ಸ್ಪೆಷಾಲಿಟಿ, ಹೈಟೆಕ್ ಆಸ್ಪತ್ರೆಗಳು ನಮ್ಮ ದೇಶದಲ್ಲಿವೆ. ವೈದ್ಯಕೀಯ ಕಾಲೇಜುಗಳು ಪ್ರತಿವರ್ಷ ಲಕ್ಷಾಂತರ ವೈದ್ಯರನ್ನು ತಯಾರು ಮಾಡಿ ಕಳುಹಿಸುತ್ತಿದೆ. ಹೀಗಾಗಿ ವೈದ್ಯಕೀಯ ಕ್ಷೇತ್ರ ವಿಶಾಲವಾಗುತ್ತಿದೆ. ಮತ್ತೊಂದೆಡೆ ಹಣ ಮಾಡುವ ದಂಧೆಯಾಗಿಯೂ ಬದಲಾಗುತ್ತಿದೆ ಎಂದರೆ ತಪ್ಪಾಗಲಾರದು.
ಸಾಮಾನ್ಯ ಜನರಿಗೆ ಆರೋಗ್ಯ ಸೇವೆ ಮರೀಚಿಕೆಯಾಗುತ್ತಿದೆ. ಇದರ ನಡುವೆ ಬಡವರ ಸೇವೆ ಮಾಡುತ್ತಾ ತಮ್ಮ ವೃತ್ತಿಧರ್ಮ ಪಾಲಿಸುತ್ತಿರುವ ವೈದ್ಯರೂ ಇಲ್ಲದಿಲ್ಲ. ಬಡ, ಅನಾಥ, ವೃದ್ಧಾಶ್ರಮಗಳಿಗೆ ತೆರಳಿ ಚಿಕಿತ್ಸೆ ನೀಡುವವರು ಒಂದು ಕಡೆಯಾದರೆ, ಮತ್ತೊಂದೆಡೆ ರೋಗಿಗಳಿಗೆ ಹೊರೆಯಾಗದಂತೆ ಆರೋಗ್ಯ ಸೇವೆ ನೀಡುವ ವೈದ್ಯರೂ ಇದ್ದಾರೆ. ಇಂತಹ ವೈದ್ಯರಿಗೆ ಪ್ರತಿಯೊಬ್ಬರೂ ಕೃತಜ್ಞತೆಯನ್ನು ಸಲ್ಲಿಸಲೇ ಬೇಕು.
ಡಾ.ನಾ.ಸೋಮೇಶ್ವರ್ ಹೇಳುವಂತೆ ವೈದ್ಯಕೀಯ ಒಂದು ವೃತ್ತಿಯಲ್ಲ, ಅದು ಅರಿವು, ಮಾನವೀಯತೆ, ಶ್ರದ್ಧೆ ಹಾಗೂ ಸೇವಾಮನೋಭಾವ ಮೇಳೈಸಿರುವ ಸೇವೆ. ವೈದ್ಯನಾದವನಿಗೆ ಹದ್ದಿನ ಕಣ್ಣುಗಳು, ಸಿಂಹದ ಹೃದಯ ಹಾಗೂ ಹೆಣ್ಣಿನ ಕೋಮಲ ಕರಗಳಿರಬೇಕಾಗುತ್ತದೆ. ಆಗ ಮಾತ್ರ ಅವನು ವೃತ್ತಿಗೆ ನ್ಯಾಯವನ್ನು ಒದಗಿಸಬಲ್ಲನು.
ವೈದ್ಯನು ಸದಾ ಜಾಗೃತನಾಗಿರಬೇಕು. ಅವನು ಮಾಡಬಹುದಾದ ಒಂದು ಸಣ್ಣ ತಪ್ಪು ಒಂದು ಜೀವಕ್ಕೆ (ತನ್ಮೂಲಕ ಒಂದು ಕುಟುಂಬಕ್ಕೆ) ಎರವಾಗಬಹುದು. ಹಾಗಾಗಿ ಪ್ರತಿ ಕ್ಷಣದಲ್ಲಿಯೂ ಮೈಯೆಲ್ಲ ಕಣ್ಣಾಗಿಟ್ಟುಕೊಂಡಿರಬೇಕಾಗುತ್ತದೆ. ವೈದ್ಯನು ಸದಾ ಒತ್ತಡದಲ್ಲಿರುವುದು ಅನಿವಾರ್ಯ.
ವೈದ್ಯನು ತಾನು ಎಷ್ಟೇ ಒತ್ತಡದಲ್ಲಿರಲಿ, ಅದನ್ನು ತೋರಿಸಿಕೊಳ್ಳುವ ಹಾಗಿಲ್ಲ. ರೋಗಿಗೆ ಚಿಕಿತ್ಸೆಯನ್ನು ಹಾಗೂ ನೋವಿನಲ್ಲಿ ಪಾಲ್ಗೊಂಡು ಸಾಂತ್ವಾನವನ್ನು ನೀಡಬೇಕಾಗುತ್ತದೆ. ವೈದ್ಯ ದಿನಾಚರಣೆಯಂದು ವೈದ್ಯರು ಸಮಾಜದಲ್ಲಿ ತಮ್ಮ ಸ್ಥಾನವನ್ನು ಅರಿತುಕೊಳ್ಳಬೇಕು. ಸೇವೆಯ ಪ್ರತಿಜ್ಞೆಯನ್ನು ಸ್ವೀಕರಿಸಿರುವುದನ್ನು ನೆನಪಿಸಿಕೊಂಡು ವೃತ್ತಿಗೆ ನ್ಯಾಯವನ್ನು ಒದಗಿಸಬೇಕು.
ಇಂದು ವೈದ್ಯಕೀಯ ವೃತ್ತಿ ಕವಲುಹಾದಿಯಲ್ಲಿ ನಿಂತಿದ್ದು, ಸೇವೆಯಾಗಿ ಉಳಿಯದೇ ಉದ್ಯಮವಾಗಿದೆ. ಆದರೆ ಆ ವೃತ್ತಿಗೆ ಅಂದು-ಇಂದು-ಮುಂದು ತನ್ನದೇ ಗೌರವ ಇದ್ದೇ ಇರುತ್ತೆ ಅದನ್ನು ಮನಗಂಡು ವೈದ್ಯರು ಕಾರ್ಯನಿರ್ವಹಿಸಬೇಕು ಹಾಗಾದಲ್ಲಿ ವೈದ್ಯೋ ನಾರಾಯಣೋ ಹರಿಃ ಮಾತಿಗೆ ಅರ್ಥಬರುತ್ತದೆ.
ಮನರಂಜನೆ | 1 |
ಮೆಸ್ಸಿ, ರೋಜೊ ಮತ್ತು 90 ನಿಮಿಷಗಳು..
ಪುಟಿದೆದ್ದ ಲಯೋನೆಲ್; ಪ್ರೀಕ್ವಾರ್ಟರ್‌ಫೈನಲ್‌ಗೆ ಅರ್ಜೆಂಟೀನಾ
ಮೆಸ್ಸಿ, ರೋಜೊ ಮತ್ತು 90 ನಿಮಿಷಗಳು..
ಪ್ರಜಾವಾಣಿ ವಾರ್ತೆ
Published:
27 ಜೂನ್ 2018, 18:39 IST
Updated:
28 ಜೂನ್ 2018, 00:00 IST
ಅಕ್ಷರ ಗಾತ್ರ :
ಆ
ಆ
ಸೇಂಟ್ ಪೀಟರ್ಸ್‌ಬರ್ಗ್ (ಎಎಫ್‌ಪಿ): ವಿಶ್ವ ಫುಟ್‌ಬಾಲ್‌ನ ದಿಗ್ಗಜ ಅರ್ಜೆಂಟೀನಾದ ಲಯೊನೆಲ್ ಮೆಸ್ಸಿ ಅವರ ಬದುಕಿನ ಅತ್ಯಂತ ಉದ್ವೇಗಕಾರಿ 90 ನಿಮಿಷಗಳು ಮಂಗಳವಾರ ರಾತ್ರಿ ಕಳೆದುಹೋದವು.
ವಿಶ್ವಕಪ್ ಟೂರ್ನಿಯ ಗುಂಪು ಹಂತದ ಅಂತಿಮ ಪಂದ್ಯದಲ್ಲಿ ನೈಜೀರಿಯಾ ಎದುರು ಸೆಣಸಿದ ಸಂದರ್ಭದಲ್ಲಿ ಅನುಭವಿಸಿದ ಆತಂಕ, ಉದ್ವೇಗವನ್ನು ತಮ್ಮ ಬದುಕಿನಲ್ಲಿ ಎಂದಿಗೂ ಅನುಭವಿಸರಲಿಲ್ಲ. ಮುಂದೆಯೂ ಇಂತಹದನ್ನು ನಿರೀಕ್ಷಿಸಲಾರೆ ಎಂದು ಮೆಸ್ಸಿ ಅವರೇ ಹೇಳಿದ್ದಾರೆ.
ಸೇಂಟ್ ಪೀಟರ್ಸ್‌ಬರ್ಗ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದ ಮೊದಲಾರ್ಧದಲ್ಲಿ 1–0ಯಿಂದ ಮುನ್ನಡೆ ಸಾಧಿಸಿದ್ದ ಅರ್ಜೆಂಟೀನಾ 51ನೇ ನಿಮಿಷದ ನಂತರ ಆತಂಕಕ್ಕೆ ಒಳಗಾಯಿತು. ಪೆನಾಲ್ಟಿ ಅವಕಾಶದಲ್ಲಿ ವಿಕ್ಟರ್ ಮೋಸೆಸ್ ಗಳಿಸಿದ ಗೋಲಿನ ಮೂಲಕ ನೈಜೀರಿಯಾ ಸಮಬಲ ಸಾಧಿಸಿದ್ದರಿಂದ ಮೆಸ್ಸಿ ಬಳಗದ ಕನಸು ಭಗ್ನವಾಗುವ ಆತಂಕ ಎದುರಾಗಿತ್ತು.
ಆದರೆ 86ನೇ ನಿಮಿಷದಲ್ಲಿ ಮಾರ್ಕೋಸ್ ರೋಜೊ ಗಳಿಸಿದ ಗೋಲಿನ ಬಲದಿಂದ ಅರ್ಜೆಂಟೀನಾ ಗೆಲುವು ಸಾಧಿಸಿತು. ಈ ಜಯ ಅರ್ಜೆಂಟೀನಾ ತಂಡವನ್ನು ಪ್ರೀ ಕ್ವಾರ್ಟರ್ ಫೈನಲ್ ಘಟ್ಟಕ್ಕೆ ತಲುಪಿಸಿತು.
ಮೆಸ್ಸಿ ಮೊದಲ ಗೋಲು: ಮೆಸ್ಸಿ ಅವರು ಮೊದಲ ಎರಡು ಪಂದ್ಯಗಳಲ್ಲಿ ಒಂದೂ ಗೋಲು ಗಳಿಸಿರಲಿಲ್ಲ. ಐಸ್‌ಲ್ಯಾಂಡ್ ಎದುರಿನ ಪಂದ್ಯದಲ್ಲಿ ಪೆನಾಲ್ಟಿ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಲು ಮೆಸ್ಸಿ ವಿಫಲರಾದ ಕಾರಣ ಪಂದ್ಯ ಡ್ರಾ ಆಗಿತ್ತು. ಕ್ರೊವೇಷ್ಯಾ ಎದುರಿನ ಪಂದ್ಯದಲ್ಲಿ ಮೂರು ಗೋಲು ಬಿಟ್ಟುಕೊಟ್ಟ ಅರ್ಜೆಂಟೀನಾಗ ಗೋಲಿನ ಖಾತೆ ತೆರೆಯಲೂ ಆಗಿರಲಿಲ್ಲ. ಮಂಗಳವಾರ ಐದು ಬದಲಾವಣೆಗಳೊಂದಿಗೆ ಕಣಕ್ಕೆ ಇಳಿದ ತಂಡ ಯಶಸ್ಸು ಕಂಡಿತು. ಪಂದ್ಯದ 14ನೇ ನಿಮಿಷದಲ್ಲಿಯೇ ಮೆಸ್ಸಿ ಜಾದೂ ನಡೆಯಿತು.
ಈವರ್ ಬನೇಗಾ ಅವರು ನೀಡಿದ ಚೆಂಡನ್ನು ತೊಡೆಯಲ್ಲಿ ತಡೆದು ನಿಯಂತ್ರಿಸಿದ ಮೆಸ್ಸಿ, ಎದುರಾಳಿ ರಕ್ಷಣಾ ವಿಭಾಗವನ್ನು ಗಲಿಬಿಲಿಗೊಳಿಸಿ ಚೆಂಡನ್ನು ಗುರಿ ಮುಟ್ಟಿಸಿದರು. ಬಲಗಾಲಿನಿಂದ ಒದ್ದ ಚೆಂಡನ್ನು ತಡೆಯಲು ಗೋಲ್‌ಕೀಪರ್ ನಡೆಸಿದ ಶ್ರಮಕ್ಕೆ ಫಲ ಸಿಗಲಿಲ್ಲ.
ಮುನ್ನಡೆಯ ನಂತರ ಪೆನಾಲ್ಟಿ ಅವಕಾಶ ಲಭಿಸಿದರೂ ಅದರಲ್ಲಿ ಗೋಲು ಗಳಿಸಲು ಅರ್ಜೆಂಟೀನಾಗೆ ಸಾಧ್ಯವಾಗಲಿಲ್ಲ. ಈ ನಡುವೆ ಮೋಸೆಸ್ ಗಳಿಸಿದ ಗೋಲು ಅರ್ಜೆಂಟೀನಾಗೆ ಆಘಾತ ನೀಡಿತು. ಆದರೆ ಗ್ಯಾಬ್ರಿಯೆಲ್ ಮೆರ್ಕಾಡೊ ಅವರ ಕ್ರಾಸ್‌ನಿಂದ ರೋಜೊ ಗಳಿಸಿದ ಗೋಲು ತಂಡದಲ್ಲಿ ಸಂಭ್ರಮ ಉಕ್ಕಿಸಿತು. | 2 |
Bangalore, First Published 8, Jun 2019, 9:46 AM IST
Highlights
ಮೆಟ್ರೋ ಕಾಮಗಾರಿ ನಡೆಯುತ್ತಿದ್ದ ರಸ್ತೆಯಲ್ಲಿ ಕಾರು ಚಲಿಸಿದ್ದರಿಂದ ಕಿರುತೆರೆ ನಟಿಯ ಕಾರಿಗೆ ಸಿಮೆಂಟ್ ಕಲ್ಲೊಂದು ಬಿದ್ದು ಅಪಾಯದಿಂದ ಪಾರಾಗಿದ್ದಾರೆ.
ಖ್ಯಾತ ಮಲಯಾಳಂ ನಟಿ ಅರ್ಚನಾ ಕವಿ ಏರ್‌ಪೋರ್ಟ್‌ಗೆ ತೆರಳುತ್ತಿದ್ದ ದಾರಿಯಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿದ್ದು ಚೆಲಿಸುತ್ತಿದ್ದ ಕಾರಿನ ಮೇಲೆ ಸಿಮೆಂಟ್ ಕಲ್ಲೊಂದು ಬಿದ್ದು ಕಾರಿನ ಗಾಜು ಪುಡಿ ಪುಡಿಯಾಗಿದೆ.
ಅರ್ಚನಾ ತಮ್ಮ ಟ್ಟಿಟ್ಟರ್ ಖಾತೆಯಲ್ಲಿ ನಡೆದ ಘಟನೆ ಹಾಗೂ ಫೋಟೋ ಶೇರ್ ಮಾಡಿಕೊಂಡು 'ದೊಡ್ಡ ಅಘಾತದಿಂದ ಪಾರಾದೆವು. ಏರ್‌ಪೋರ್ಟ್ ಮಾರ್ಗದಲ್ಲಿ ಕಾರು ಚಲಿಸುತ್ತಿದ್ದು ಮೆಟ್ರೋ ಕಾಮಗಾರಿಯಿಂದ ಸಿಮೆಂಟ್ ಕಲ್ಲು ಬಿದ್ದು ಗಾಜಿನ್ನು ಪುಡಿ ಮಾಡಿದೆ. ಯಾರಿಗೂ ಇದರಿಂದ ತೊಂದರೆ ಆಗಿಲ್ಲ. ಆದರೆ ಇಂತಹದ್ದೊಂದು ಕೆಲಸ ಎಂದೂ ಆಗಬಾರದು. ನಾನು ಕೊಚ್ಚಿನ್ ಮೆಟ್ರೋ ಹಾಗೂ ಕೊಚ್ಚಿನ್ ಪೊಲೀಸ್ ಬಳಿ ಮನವಿ ಮಾಡಿಕೊಳ್ಳುತ್ತೇನೆ. ಇದಕ್ಕೆ ಡ್ರೈವರ್‌ಗೆ ಪರಿಹಾರ ನೀಡಬೇಕು ' ಎಂದು ಬರೆದುಕೊಂಡಿದ್ದಾರೆ.
We had a narrow (providential) escape. A concrete slab fell on our moving car while we were on the way to the airport. I would request @kochimetro and @KochiPolice to look into the matter and compensate the driver. Also see to it that such things don't happen in future. pic.twitter.com/knDdqC3bwN
— Archana Kavi (@archana_kavi) June 5, 2019
ಅರ್ಚನಾ ಟ್ವೀಟ್ ಮಾಡುತ್ತಿದ್ದಂತೆ ವೈರಲ್ ಆಗಿದ್ದು ತಕ್ಷಣವೇ ಮೆಟ್ರೋ ಅಧಿಕಾರಿಗಳು 'ಈ ಘಟನೆಯನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಕಾರು ಚಾಲಕನನ್ನು ಸಂಪರ್ಕಿಸಲು ಪ್ರಯತ್ನ ಮಾಡುತ್ತಿದ್ದೇವೆ. ಈ ಪ್ರಾಜೆಕ್ಟ್ ಸುರಕ್ಷಿತವಾಗಿ ನಡೆಯುವಂತೆ ನೋಡಿಕೊಳ್ಳುತ್ತೇವೆ' ಎಂದು ಸ್ಪಂದಿಸಿದ್ದಾರೆ.
Last Updated 8, Jun 2019, 9:46 AM IST | 0 |
ಆಟಗಾರನಿಗೆ ಒದ್ದ ರೆಫ್ರಿ 6 ತಿಂಗಳು ಸಸ್ಪೆಂಡ್..!
Highlights
ಜರ್ಮನ್ ಮೂಲದ ಪ್ಯಾರಿಸ್ ಸೇಂಟ್ ಹಾಗೂ ಫ್ರಾನ್ಸ್'ನ ನ್ಯಾನ್'ಟಿಸ್ ನಡುವೆ ಜ.14ರಂದು ಪಂದ್ಯ ನಡೆಯುವ ಸಂದರ್ಭದಲ್ಲಿ ಚಾಪ್ರಾನ್, ನ್ಯಾನ್'ಟಿಸ್ ತಂಡದ ಡಿಯಾಗೊ ಕಾರ್ಲೊಸ್ ಅವರನ್ನು ಒದ್ದಿದ್ದರು. ಮರುದಿನ ಚಾಪ್ರಾನ್ ಆಟಗಾರರನ ಕ್ಷಮೆ ಕೋರಿದ್ದರು.
ಪ್ಯಾರೀಸ್(ಫೆ.02): ಫುಟ್ಬಾಲ್ ಪಂದ್ಯದ ವೇಳೆ ಆಟಗಾರನ ಕಾಲಿನಿಂದ ಒದ್ದ ಅಪರಾಧಕ್ಕಾಗಿ ಫ್ರಾನ್ಸ್'ನ ರೆಫ್ರಿ ಟೋನಿ ಚಾಪ್ರಾನ್ ಅವರನ್ನು ಮುಂದಿನ 6 ತಿಂಗಳು ಕಾಲ ನಿಷೇಧಿಸಲಾಗಿದೆ.
ಜರ್ಮನ್ ಮೂಲದ ಪ್ಯಾರಿಸ್ ಸೇಂಟ್ ಹಾಗೂ ಫ್ರಾನ್ಸ್'ನ ನ್ಯಾನ್'ಟಿಸ್ ನಡುವೆ ಜ.14ರಂದು ಪಂದ್ಯ ನಡೆಯುವ ಸಂದರ್ಭದಲ್ಲಿ ಚಾಪ್ರಾನ್, ನ್ಯಾನ್'ಟಿಸ್ ತಂಡದ ಡಿಯಾಗೊ ಕಾರ್ಲೊಸ್ ಅವರನ್ನು ಒದ್ದಿದ್ದರು. ಮರುದಿನ ಚಾಪ್ರಾನ್ ಆಟಗಾರರನ ಕ್ಷಮೆ ಕೋರಿದ್ದರು.
ವಿಚಾರಣೆ ನಡೆಸಿದ ಫ್ರೆಂಚ್ ಫುಟ್ಬಾಲ್ ಫೆಡರೇಶನ್ ಈ ಕ್ರಮಕ್ಕೆ ಮುಂದಾಗಿದೆ. ಫ್ರೆಂಚ್ ಕಪ್ ಸೇರಿದಂತೆ ಹಲವು ಪ್ರತಿಷ್ಠಿತ ಟೂರ್ನಿಗಳ 400ಕ್ಕೂ ಅಧಿಕ ಪಂದ್ಯಗಳಲ್ಲಿ ಚಾಪ್ರಾಲ್ ರೆಫ್ರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.
Last Updated 11, Apr 2018, 1:11 PM IST | 2 |
#Gomonster Samsung M30s: ಹೊಸ ಸ್ಮಾರ್ಟ್‌ಫೋನ್ ನ ವಿಶೇಷತೆಗಳೇನು ನೋಡಿ! WATCH LIVE TV
ಭಾವಮಾಧ್ಯಮದ ಸಿನಿಮಾ ಸಂಭ್ರಮ
ನಿರ್ದೇಶಕ ಉಮಾಶಂಕರ್ ಅವರ ಚಿತ್ರಗಳ ಸಿನಿಮೋತ್ಸವ ಜ20ರಿಂದ 26ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ...
| Updated:
Jan 20, 2017, 05:00AM IST
ನಿರ್ದೇಶಕ ಉಮಾಶಂಕರ್ ಅವರ ಚಿತ್ರಗಳ ಸಿನಿಮೋತ್ಸವ ಜ.20ರಿಂದ 26ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ. ಜತೆಗೆ ಸಿನಿಮಾ ಕುರಿತು ವಿಶೇಷ ಕಮ್ಮಟವನ್ನು ಆಯೋಜನೆ ಮಾಡಿದ್ದಾರೆ ನಿರ್ದೇಶಕರು.
ಸದಭಿರುಚಿಯ ಸಿನಿಮಾಗಳ ಮೂಲಕ ಗುರುತಿಸಿಕೊಂಡವರು ನಿರ್ದೇಶಕ ಉಮಾಶಂಕರ್. ಜ.20ರಿಂದ 26ರವರೆಗೂ ಇವರ ನಿರ್ದೇಶನದ ಚಿತ್ರಗಳ ಸಿನಿಮೋತ್ಸವ ಬೆಂಗಳೂರಿನಲ್ಲಿ ನಡೆಯುತ್ತಿದ್ದು, ಸಾಲದ ಮಗು ಮತ್ತು ಮುನ್ಸೀಫ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಏಳು ದಿನಗಳ ಕಾಲ ನಡೆಯುವ ಸಿನಿಮಾ ಸಂಭ್ರಮದಲ್ಲಿ ಪ್ರತಿ ದಿನವೂ ಚಿತ್ರ ಪ್ರದರ್ಶನ ಮತ್ತು ಸಿನಿಮಾ ಕುರಿತಾದ ಕಮ್ಮಟ ಕೂಡ ನಡೆಯಲಿದೆ.
ಬೆಂಗಳೂರಿನ ಸವಿತಾ ಚಿತ್ರಮಂದಿರದಲ್ಲಿ ಆಯೋಜನೆಯಾದ ಸಿನಿಮೋತ್ಸವದಲ್ಲಿ ಸಿನಿಮಾ ಕತೆಯ ಆಯ್ಕೆ, ಚಿತ್ರಕತೆ ರಚನೆ, ವಿನ್ಯಾಸ, ನಿರ್ದೇಶನ ಮತ್ತು ಸಿನಿಮಾಟೋಗ್ರಫಿಯ ಕುರಿತಾದ ಸಂವಾದಕ್ಕೂ ಅವಕಾಶ ಕಲ್ಪಿಸಲಾಗಿದೆ. ಈ ಸಿನಿಮೋತ್ಸವವನ್ನು ಗಿರೀಶ್ ಕಾಸರವಳ್ಳಿ ಉದ್ಘಾಟಿಸಲಿದ್ದು, ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ರಾಜೇಂದ್ರಸಿಂಗ್ ಬಾಬು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ ಎನ್.ಆರ್.ವಿಶುಕುಮಾರ್, ನಟ ಅಚ್ಯುತ್‌ಕುಮಾರ್, ಕಮ್ಮಟದ ನಿರ್ದೇಶಕ ಜಿ.ಎಸ್.ಭಾಸ್ಕರ್ ಮೊದಲಾದವರು ಪಾಲ್ಗೊಳ್ಳಲಿದ್ದಾರೆ.
ಕವಿ ಕೋಟಿಗಾನಹಳ್ಳಿ ರಾಮಯ್ಯ, ಪತ್ರಕರ್ತ ಜೋಗಿ ಮತ್ತು ರಘುನಾಥ್ ಚ.ಹ, ಸಿನಿಮಾಟೋಗ್ರಾಫರ್ ಎಚ್.ಎಂ.ರಾಮಚಂದ್ರ, ಕಲಾ ನಿರ್ದೇಶಕ ಶಶಿಧರ್ ಅಡಪ, ನಿರ್ದೇಶಕರಾದ ಪಿ.ಶೇಷಾದ್ರಿ, ಬಿ.ಸುರೇಶ ಮತ್ತು ಬಿ.ಎಸ್.ಲಿಂಗದೇವರು, ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಸೇರಿದಂತೆ ಹಲವು ತಂತ್ರಜ್ಞರು ಸಿನಿಮಾದ ಬಗ್ಗೆ ಮಾತಾನಾಡಲಿದ್ದಾರೆ. | 0 |
|
Updated: Saturday, March 4, 2017, 17:54 [IST]
ಮಧುಮೇಹವೆಂಬ ಕಾಯಿಲೆ ಹೊರನೋಟಕ್ಕೆ ಸಿಹಿ ಎಂದೆನಿಸಿದರೂ ಅದು ಮಾಡುವ ವೇದನೆ ಮಾತ್ರ ಅಪರಿಮಿತವಾದುದು. ಮೊದಲೆಲ್ಲಾ ವಯಸ್ಸಾದವರನ್ನು ಕಾಡುತ್ತಿದ್ದ ಈ ಕಾಯಿಲೆ ಈಗ ಹದಿಹರೆಯದವರಿಗೂ ಸಿಂಹ ಸ್ವಪ್ನವಾಗಿದೆ. ಬೇಕಾಬಿಟ್ಟಿ ಆಹಾರ ಸೇವನೆ, ವ್ಯಾಯಾಮದ ಕೊರತೆ ಮೊದಲಾದ ಕಾರಣಗಳಿಂದ ಇಂದು ಮಧುಮೇಹ ತನ್ನ ಕಬಂಧ ಬಾಹುವನ್ನು ಎಲ್ಲೆಡೆ ಚಾಚಿದೆ. ಮನೆ ಔಷಧ: ಮಧುಮೇಹವನ್ನು ನಿಯಂತ್ರಿಸುವ 'ಆಹಾರ ಪಥ್ಯ'
ಮಧುಮೇಹಿಯು ಈ ರೋಗ ಇರುವಿಕೆಯ ಸಮಯದಲ್ಲಿ ಹಲವಾರು ಸಮಸ್ಯೆಗಳನ್ನು ಕಂಡುಕೊಳ್ಳಬಹುದು. ಆಗಾಗ್ಗೆ ಮೂತ್ರವಿಸರ್ಜನೆ, ಅತಿಯಾದ ಬಾಯಾರಿಕೆ, ಹೆಚ್ಚು ಹಸಿವಾಗುವುದು, ತೂಕ ಇಳಿಕೆ ಇಲ್ಲವೇ ಏರಿಕೆ, ಲೈಂಗಿಕ ಅತೃಪ್ತಿ, ಗಾಯಗಳು ನಿಧಾನವಾಗಿ ಒಣಗುವುದು ಮೊದಲಾದವು ಇವುಗಳಲ್ಲಿ ಅತಿ ಸಾಮಾನ್ಯವಾದುದಾಗಿದೆ. ಮಧುಮೇಹದ ಲಕ್ಷಣಗಳನ್ನು ನೀವು ಸರಿಯಾಗಿ ನಿಯಂತ್ರಿಸಿಲ್ಲ ಎಂದಾದಲ್ಲಿ ಇದು ಪ್ರಾಣಾಂತಿಕವಾಗುವ ಸಂಭವ ಕೂಡ ಇದೆ. ಮಧುಮೇಹ ನಿಯಂತ್ರಿಸುವ ಪವರ್-ಮೆಂತೆ ಕಾಳಿನಲ್ಲಿದೆ!
ಹಾಗಿದ್ದರೆ ಮಧುಮೇಹಿಗಳು ಕೆಲವೊಂದು ಸೂತ್ರಗಳನ್ನು ಪಾಲಿಸುವುದರ ಮೂಲಕ ಇದರ ಹೆಚ್ಚುವರಿ ಪರಿಣಾಮಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಬಹುದಾಗಿದೆ. ಅವರು ಏನು ತಿನ್ನಬೇಕು ಏನು ತಿನ್ನಬಾರದು ಎಂಬುದನ್ನು ಅರಿತುಕೊಂಡು ಆಹಾರವನ್ನು ಆಯ್ಕೆಮಾಡಿಕೊಳ್ಳಬೇಕು. ಹಾಗಿದ್ದರೆ ಇಂದಿನ ಲೇಖನದಲ್ಲಿ ಅವರು ಯಾವ ರೀತಿಯ ಆಹಾರ ಪದಾರ್ಥಗಳನ್ನು ಸೇವಿಸಬಾರದು ಎಂಬುದನ್ನು ಕಂಡುಕೊಳ್ಳೋಣ.
ಬಿಳಿ ಬ್ರೆಡ್
ಬಿಳಿ ಬ್ರೆಡ್ ಹೆಚ್ಚು ಪ್ರಮಾಣದ ಕಾರ್ಬೋಹೈಡ್ರೇಟ್ಸ್ ಅನ್ನು ಒಳಗೊಂಡಿದ್ದು ಮಧುಮೇಹಿಗಳಿಗೆ ಇದು ಉತ್ತಮವಲ್ಲ, ಇದು ರಕ್ತದ ಸಕ್ಕರೆ ಪ್ರಮಾಣವನ್ನು ಹೆಚ್ಚಿಸುತ್ತದೆ. ಬಿಳಿ ಬ್ರೆಡ್: ಹಣ ಕೊಟ್ಟು ಕಾಯಿಲೆ ಖರೀದಿಸಬೇಡಿ!
ಪಾಸ್ತಾ
ನೀವು ಮಧುಮೇಹಿಯಾಗಿದ್ದು ಪಾಸ್ತಾವನ್ನು ಇಷ್ಟಪಡುವವರಾಗಿದ್ದಲ್ಲಿ, ಇದನ್ನು ನೀವು ತ್ಯಜಿಸಲೇ ಬೇಕು. ಏಕೆಂದರೆ ಪಾಸ್ತಾವು ಹೆಚ್ಚು ಪ್ರಮಾಣದ ಕೊಬ್ಬುಗಳನ್ನು ಒಳಗೊಂಡಿದ್ದು ಇದು ರಕ್ತದ ಸಕ್ಕರೆ ಪ್ರಮಾಣವನ್ನು ಹೆಚ್ಚಿಸಲಿದೆ.
ಸುಗಂಧಿತ ಮೊಸರು
ಬೇರೆ ಬೇರೆ ಸುಗಂಧ ಮತ್ತು ಸಿಹಿಯಿಂದ ಕೂಡಿರುವ ಮೊಸರಿನಲ್ಲಿ ಸಕ್ಕರೆ ಪ್ರಮಾಣ ಹೆಚ್ಚಿರುತ್ತದೆ, ಇದನ್ನು ಕೃತಕ ಸಕ್ಕರೆಯಿಂದ ಮಾಡಿದ್ದರೂ ಕೂಡ ಮಧುಮೇಹಿಗಳು ಇದನ್ನು ಸೇವಿಸಬಾರದು. ಇದರಿಂದ ಮಧುಮೇಹವು ವಿಪರೀತ ಹಂತವನ್ನು ತಲುಪುತ್ತದೆ.
ಉಪಹಾರ ಸಿರಿಯಲ್
ಹೆಚ್ಚಿನ ವೈವಿಧ್ಯತೆಯ ಬ್ರೇಕ್‌ಫಾಸ್ಟ್ ಸಿರಿಯಲ್ ಸಿಹಿ ಮತ್ತು ಸುಗಂಧಿತವಾಗಿರುತ್ತದೆ ಇದು ನಿಮ್ಮ ರಕ್ತದ ಸಕ್ಕರೆ ಪ್ರಮಾಣವನ್ನು ಹೆಚ್ಚಿಸಲಿದೆ, ನೀವು ಮಧುಮೇಹಿಯಾಗಿದ್ದಲ್ಲಿ ಅವನ್ನು ಸಂಪೂರ್ಣವಾಗಿ ನಿಲ್ಲಿಸಿ. ಮಧುಮೇಹಿಗಳೇ, ನಿಮ್ಮ ಬೆಳಗಿನ ಉಪಹಾರ ಹೀಗಿರಬೇಕು....
ಜೇನು
ಕೆಲವು ಮಧುಮೇಹಿಗಳು ಸಕ್ಕರೆಯ ಬದಲಿಗೆ ಜೇನನ್ನು ಬಳಸಿಕೊಳ್ಳಬಹುದು ಎಂಬುದಾಗಿ ನಂಬಿದ್ದಾರೆ. ಅದಾಗ್ಯೂ ಜೇನು ಕೂಡ ಹೆಚ್ಚು ಪ್ರಮಾಣದ ಸಕ್ಕರೆಯನ್ನು ಒಳಗೊಂಡಿದೆ ಮತ್ತು ಸುಕ್ರೋಸ್ ಪ್ರಮಾಣ ಜೇನಲ್ಲಿ ಅಧಿಕವಾಗಿದೆ. ಇದು ಮಧುಮೇಹದ ರೋಗಲಕ್ಷಣವನ್ನು ವಿಪರೀತವಾಗಿಸಲಿದೆ.
ಒಣ ಹಣ್ಣುಗಳು
ಒಣ ಹಣ್ಣುಗಳನ್ನು ಒಣಗಿಸುವ ಪ್ರಕ್ರಿಯೆಯಲ್ಲಿ ಸಕ್ಕರೆ ಪ್ರಮಾಣವನ್ನು ಬಳಸಿರುವುದರಿಂದ ಸಕ್ಕರೆ ಕಾಯಿಲೆ ಇರುವವರು ಇದನ್ನು ಸೇವಿಸಲೇಬಾರದು.
ಫ್ರೆಂಚ್ ಫ್ರೈಸ್
ಫ್ರೆಂಚ್ ಫ್ರೈಸ್ ಸಕ್ಕರೆ ಅಂಶವನ್ನು ಒಳಗೊಂಡಿರದೇ ಇದ್ದರೂ, ಇದು ಕೊಬ್ಬು ಮತ್ತು ಕಾರ್ಬೋಹೈಡ್ರೇಟ್ ಅಂಶವನ್ನು ಒಳಗೊಂಡಿದೆ. ಇದು ನಿಮ್ಮ ರಕ್ತದ ಸಕ್ಕರೆ ಪ್ರಮಾಣವನ್ನು ಹೆಚ್ಚಿಸಲಿದ್ದು, ಮಧುಮೇಹದ ರೋಗಲಕ್ಷಣವನ್ನು ವಿಪರೀತವಾಗಿಸಲಿದೆ. | 1 |
| news18-kannada Updated:September 26, 2019, 10:35 AM IST
ಸಾಂದರ್ಭಿಕ ಚಿತ್ರ
zahir
| news18-kannada Updated: September 26, 2019, 10:35 AM IST
ಸರ್ಕಾರಿ ಉದ್ಯೋಗಗಳ ಹುಡುಕಾಟದಲ್ಲಿ ಇರುವವರಿಗೆ ಇಲ್ಲಿದೆ ಸುವರ್ಣಾವಕಾಶ. ಹಲವು ಬ್ಯಾಂಕ್ಗಳು ತಮ್ಮ ಖಾಲಿ ಹುದ್ದೆಗಳ ನೇಮಕಾತಿ ಪ್ರಕಟಣೆ ಹೊರಡಿಸಿದ್ದು, ಸಾವಿರಾರು ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ.
ಇತ್ತೀಚೆಗೆ ಐಬಿಪಿಎಸ್ ಕ್ಲರ್ಕ್ ನೇಮಕಾತಿ ಪರೀಕ್ಷೆಗೆ (IBPS Clerk Exam) ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಈ ವಿಭಾಗದಲ್ಲಿ ದೇಶಾದ್ಯಂತ 12 ಸಾವಿರ ಕ್ಲರ್ಕ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಇದಲ್ಲದೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸಹ ಭರ್ತಿ ಪ್ರಕಟಣೆ ಹೊರಡಿಸಿದ್ದು, ಎಸ್‌ಬಿಐನ 700 ಹುದ್ದೆಗಳನ್ನು ನೇಮಕಾತಿ ನಡೆಯಲಿದೆ. ಅದೇ ರೀತಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ಬಿ ಗ್ರೇಡ್ 199 ಹುದ್ದೆಗಳಿಗೆ ಖಾಲಿ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಈ ಮೂರು ಸಂಸ್ಥೆಗಳನ್ನು ಒಳಗೊಂಡಂತೆ ಒಟ್ಟು 12899 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಎಲ್ಲಾ ನೇಮಕಾತಿಗಳ ಬಗ್ಗೆ ಹೆಚ್ಚಿನ ಮಾಹಿತಿ ಕೆಳಗಿನಂತಿವೆ.
IBPS 12 ಸಾವಿರ ಕ್ಲರ್ಕ್ ಹುದ್ದೆಗಳು:ಐಬಿಪಿಎಸ್ ಕ್ಲರ್ಕ್ ನೇಮಕಾತಿ ಪರೀಕ್ಷೆಗೆ (IBPS Clerk Registration) ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದೆ. ಆಸಕ್ತರು ಅಧಿಕೃತ ವೆಬ್‌ಸೈಟ್ www.ibps.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಐಬಿಪಿಎಸ್ ಕ್ಲರ್ಕ್ ಭರ್ತಿ ಮೂಲಕ ದೇಶದ ವಿವಿಧ ಬ್ಯಾಂಕುಗಳಲ್ಲಿ 12 ಸಾವಿರಕ್ಕೂ ಹೆಚ್ಚಿನ ಹುದ್ದೆಗಳಲ್ಲಿ ನೇಮಕಾತಿ ನಡೆಯಲಿದೆ.
ಈ ಹುದ್ದೆಗಳ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.
SBIನ 700 ಹುದ್ದೆಗಳಿಗೆ ಅರ್ಜಿ ಆಹ್ವಾನ:
ಎಸ್‌ಬಿಐ 700 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಈ ನೇಮಕಾತಿಯನ್ನು ಪಂಜಾಬ್, ಹರಿಯಾಣ ಮತ್ತು ಹಿಮಾಚಲ ಪ್ರದೇಶದಲ್ಲಿ ಮಾಡಲಾಗುತ್ತಿದೆ. ಪಂಜಾಬ್‌ನಲ್ಲಿ 400, ಹರಿಯಾಣದಲ್ಲಿ 150 ಮತ್ತು ಹಿಮಾಚಲ ಪ್ರದೇಶದ 150 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಈ ಹುದ್ದೆಗಳಗ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗಿದ್ದು, ಆಸಕ್ತರು 6 ಅಕ್ಟೋಬರ್ 2019 ರೊಳಗೆ sbi.co.in/career ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
Loading...
ಈ ಹುದ್ದೆಗಳ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಧೋನಿ ನಿವೃತ್ತಿ ಘೋಷಿಸದಿರಲು ಟೀಂ ಇಂಡಿಯಾದ ಈ ಆಟಗಾರನೇ ಕಾರಣ..!
RBI Grade B ಹುದ್ದೆಗಳ ನೇಮಕಾತಿ:
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) 199 ಹುದ್ದೆಗಳ ನೇಮಕಾತಿ ಆದೇಶ ಹೊರಡಿಸಿದೆ. ಈಗಾಗಲೇ ಈ ಹುದ್ದೆಗಳ ಆನ್‌ಲೈನ್ ಅರ್ಜಿ ಪ್ರಕ್ರಿಯೆ ಪ್ರಾರಂಭವಾಗಿದ್ದು, ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 11 ರೊಳಗೆ ಅರ್ಜಿ ಸಲ್ಲಿಸಬಹುದು. ಆರ್ಬಿಐನ ಅಧಿಕೃತ ವೆಬ್‌ಸೈಟ್ rbi.org.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.
ಈ ಹುದ್ದೆಗಳ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ. | 1 |
(ವಿಡಿಯೋ)ರಿಷಿಕಾ ಕಾರಿನಲ್ಲಿ ಪ್ರಥಮ್ ಮಾಡಿದ್ದೇನು? ಪ್ರಥಮ್ ಜೊತೆ ರಿಷಿಕಾ ಹೋಗಿದ್ದು ಎಲ್ಲಿಗೆ?
Highlights
ಪ್ರಥಮ್, ಬೊಲ್ಡ್ ನಟಿ ರಿಷಿಕಾ ಸಿಂಗ್ ಜೊತೆ ಕಾರಲ್ಲಿ ಲಾಂಗ್ ಡ್ರೈವ್ ಹೋಗಿ ಬಂದಿದ್ದಾರೆ.
ಇದು ನನ್ನ ಗೆಲುವು ಅಲ್ಲಾ .ಇದು ಕನ್ನಡಿಗರ ಗೆಲುವು ಎನ್ನುತ್ತಲೆ ಬಿಗ್ ಬಾಸ್ ವಿನ್ನರ್ ಆದ ಪ್ರಥಮ್, ಬೊಲ್ಡ್ ನಟಿ ರಿಷಿಕಾ ಸಿಂಗ್ ಜೊತೆ ಕಾರಲ್ಲಿ ಲಾಂಗ್ ಡ್ರೈವ್ ಹೋಗಿ ಬಂದಿದ್ದಾರೆ. ಬಿಗ್ ಬಾಸ್ ಶೋನಲ್ಲಿ ರಿಷಿಕಾ ನಿನ್ನ ಜೊತೆ ಒಂದು ಲಾಂಗ್ ಡ್ರೈವ್ ಹೋಗುಬೇಕು ಅಂತಾ ಅಂದಿದ್ರು. ಅದರಂತೆ ಈಗ ಪ್ರಥಮ್ ಹಾಗು ರಿಷಿಕಾ ಸಿಂಗ್ ಬೆಂಗಳೂರು ಟೂ ಮೈಸೂರು ಲಾಂಗ್ ಡ್ರೈವ್ ಹೋಗಿದ್ದಾರೆ.
ನೂರಕ್ಕು ಹೆಚ್ಚು ಕಿ ಲೋ ಮೀಟರ್ ಲಾಂಗ್ ಡ್ರೈವ್ ಮಾಡಿರೋ ಪ್ರಥಮ್ ಹಾಗೂ ರಿಷಿಕಾ ಸಿಂಗ್ ದಾರಿ ಮಧ್ಯೆ, ತರ್ಲೆ ತಮಾಷೆ ಅಂತಾ ಮಸ್ತ್ ಮಜಾ ಮಾಡಿದ್ದಾರೆ. ಫೇಸ್ ಬುಕ್ ಲೈವ್ ನಲ್ಲಿ ಸಾಕಷ್ಟು ಅಭಿಮಾನಿಗಳ ಜೊತೆ ಪ್ರಥಮ್ ಮತ್ತು ರಿಷಿಕಾ ಸಿಂಗ್ ಚಾಟ್ ಮಾಡಿದ್ದಾರೆ. ಒಟ್ಟಿನಲ್ಲಿ ಬಿಗ್ ಬಾಸ್ ಮನೆಯಿಂದ ಹೊರಗಡೆ ಬಂದ ಪ್ರಥಮ್ ರಿಷಿಕಾ ಜೊತೆ ಕಾರಿನಲ್ಲಿ ಲಾಂಗ್ ಡ್ರೈವ್ ಹೋಗಿರೋದು ಹಲವು ಗಾಸಿಪ್ ಗಳಿಗೆ ಕಾರಣವಾಗಿರೋದಂತು ನಿಜ.
Last Updated 11, Apr 2018, 12:57 PM IST | 0 |
|
Updated: Tuesday, January 31, 2017, 16:43 [IST]
ಒತ್ತಡವಿಲ್ಲದ ಉದ್ಯೋಗವಿಲ್ಲ ಎಂಬುದೊಂದು ಹೊಸ ಗಾದೆ. ಈ ಜಗತ್ತಿನಲ್ಲಿರುವ ಪ್ರತಿಯೊಬ್ಬರಿಗೂ ಕೆಲವಾರು ಒತ್ತಡಗಳು ಇದ್ದೇ ಇರುತ್ತವೆ. ಆದರೆ ಉದ್ಯೋಗದಲ್ಲಿರುವವರು ಮೇಲಧಿಕಾರಿಗಳ ಒತ್ತಡವನ್ನು ಇತರರಿಗಿಂತ ಹೆಚ್ಚೇ ಎದುರಿಸಬೇಕಾಗುತ್ತದೆ.
ಒಂದು ವೇಳೆ ನಿಮಗೂ ಇಂತಹ ಒತ್ತಡವೇನಾದರೂ ಇದ್ದು ದಿನ ಕಳೆಯುವುದೇ ದುಸ್ತರವಾಗಿದ್ದರೆ, ಅಲ್ಲದೇ ಈ ಒತ್ತಡ ನಿಮ್ಮ ಆರೋಗ್ಯವನ್ನೇ ಬಾಧಿಸಿ ಮಾನಸಿಕವಾಗಿಯೂ ದೈಹಿಕವಾಗಿಯೂ ಜರ್ಝರಿತವಾಗಿಸುತ್ತಿದ್ದರೆ ಜೀವನವೇ ಬೇಸರ ಎನಿಸಬಹುದು. ಒತ್ತಡವನ್ನು ಚಿಟಿಕೆ ಹೊಡೆದಷ್ಟು ಸುಲಭವಾಗಿ ನಿಯಂತ್ರಿಸಿ!
ಮಾನಸಿಕ ಒತ್ತಡ ಹಲವು ದೈಹಿಕ ಕಾಯಿಲೆಗಳಿಗೂ ಕಾರಣವಾಗಿದೆ. ಕೆಲವು ಮಾರಕ ಕ್ಯಾನ್ಸರ್ ಗಳ ಹುಟ್ಟಿಗೂ ಈ ಒತ್ತಡವೇ ಮೂಲ ಕಾರಣವಾಗಬಹುದು. ಈ ಒತ್ತಡವನ್ನು ಎದುರಿಸದ ಹೊರತು ಬೇರೆ ಮಾರ್ಗವಿಲ್ಲ. ಆದರೆ ಒತ್ತಡವನ್ನು ಎದುರಿಸಿ ನಿಭಾಯಿಸುವುದರಲ್ಲಿಯೇ ನಿಮ್ಮ ಚಾಕಚಕ್ಯತೆ ಅಡಗಿದೆ.
ಈ ಚಾಕಚಕ್ಯತೆಯನ್ನು ಜಪಾನೀಯರು ನೂರಾರು ವರ್ಷಗಳಿಂದ ಅನುಸರಿಸಿಕೊಂಡು ಬರುತ್ತಿದ್ದಾರೆ. ಈ ವಿಧಾನದಿಂದ ಎಂತಹ ಒತ್ತಡವಿದ್ದರೂ ಇದನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯ. ಈ ವಿಧಾನದ ಪರಿಣಾಮವನ್ನು ಕಂಡುಕೊಂಡ ತಜ್ಞರು ಮಾನಸಿಕ ಒತ್ತಡದಿಂದ ಬಳಲಿ ಕಾರ್ಯಕ್ಷಮತೆಯನ್ನೇ ಉಡುಗಿಸಿಕೊಂಡ ವ್ಯಕ್ತಿಗಳು ಅನುಸರಿಸುವಂತೆ ಮಾಡಿ ನಿಜಕ್ಕೂ ಇದು ಪರಿಣಾಮಕಾರಿ ಎಂದು ಕಂಡುಕೊಂಡಿದ್ದಾರೆ. ಯೋಗ ಟಿಪ್ಸ್: ಒತ್ತಡವನ್ನು ಹದ್ದು ಬಸ್ತಿನಲ್ಲಿಡುವ 'ನೌಕಾಸನ'
ಈ ವಿಧಾನದಲ್ಲಿ ವ್ಯಕ್ತಿ ತನ್ನ ಹಸ್ತದ ಕೆಲವು ನಿರ್ದಿಷ್ಟ ಭಾಗಗಳಲ್ಲಿ ಕೊಂಚ ಒತ್ತಡ ನೀಡುವ ಮೂಲಕ ಒತ್ತಡವನ್ನು ಕಡಿಮೆಗೊಳಿಸಬಹುದು. ಆಧುನಿಕ ವಿಜ್ಞಾನದ ಹುಚ್ಚುಹೊಳೆಯಲ್ಲಿ ಪುರಾತನ ವಿಧಾನಗಳು ಕೊಚ್ಚಿ ಹೋಗುತ್ತಿರುವ ಈ ಸಮಯದಲ್ಲಿಯೂ ವಿಶ್ವದ ಕೆಲವು ದೇಶಗಳಲ್ಲಿ ಪುರಾತನ ವಿಧಾನಗಳನ್ನು ಇಂದಿಗೂ ಜೀವಂತವಿರಿಸಲಾಗಿದೆ. ಜಪಾನೀಯರ ಶಿಸ್ತು, ಪ್ರಾಮಾಣಿಕತೆಗೆ ತಲೆಬಾಗಲೇಬೇಕು!
ಭಾರತದಲ್ಲಿ ಯೋಗಾಭ್ಯಾಸ, ಚೀನಾದಲ್ಲಿ ಕುಂಗ್ ಫೂ ಇದ್ದಂತೆ ಜಾಪಾನ್ ನಲ್ಲಿ ಈ ವಿಧಾನವನ್ನು ಇಂದಿಗೂ ಆಚರಿಸಿಕೊಂಡು ಬರಲಾಗುತ್ತಿದ್ದು ಮಾನಸಿಕ ಒತ್ತಡವನ್ನು ಕೆಲವೇ ನಿಮಿಷಗಳಲ್ಲಿ ಕಡಿಮೆಗೊಳಿಸಲು ನೆರವಾಗುತ್ತದೆ. ಒತ್ತಡ ನಿವಾರಣೆಗೆ ಕೆಲವು ಗುಳಿಗೆಗಳು ಇವೆಯಾದರೂ, ಇವು ಅಡ್ಡಪರಿಣಾಮದಿಂದ ಹೊರತಾಗಿಲ್ಲ.
ಆದರೆ ಜಪಾನ್ ಈ ವಿಧಾನದಲ್ಲಿ ಕೆಲವು ನಿರ್ದಿಷ್ಟ ಭಾಗಗಳಿಗೆ ಒತ್ತಡ ನೀಡುವ ಮೂಲಕ ಮೆದುಳಿಗೆ ಕೆಲವು ಹಾರ್ಮೋನುಗಳು ಧಾವಿಸುವಂತೆ ಮಾಡಿ ಒತ್ತಡವನ್ನು ನೈಸರ್ಗಿಕವಾಗಿ ಕಡಿಮೆಗೊಳಿಸಲಾಗುತ್ತದೆ. ಅಲ್ಲದೇ ಈ ವಿಧಾನದಿಂದ ಮೆದುಳಿಗೆ ಹರಿಯುವ ರಕ್ತದ ಪ್ರಮಾಣ ಹೆಚ್ಚುವ ಮೂಲಕ ಒತ್ತಡ ಕಡಿಮೆಯಾಗುವ ಜೊತೆಗೇ ಮೆದುಳಿನ ಕ್ಷಮತೆಯೂ ಹೆಚ್ಚುತ್ತದೆ. ಈ ವಿಧಾನವನ್ನು ಹಂತಹಂತವಾಗಿ ಕೆಳಗೆ ವಿವರಿಸಲಾಗಿದೆ: ಕೆಲಸದ ಒತ್ತಡ ಗರ್ಭಧಾರಣೆ ಮೇಲೆ ಪರಿಣಾಮಬೀರುವುದೇ? * ಕುರ್ಚಿಯ ಮೇಲೆ ಕುಳಿತುಕೊಂಡು ಬೆನ್ನು ನೆಟ್ಟಗಾಗಿಸಿ ಕೆಲವು ಆಳವಾದ ಉಸಿರುಗಳನ್ನೆಳೆದುಕೊಳ್ಳಿ.
* ಈಗ ಬಲಗೈಯ ಹೆಬ್ಬೆರಳು ಮತ್ತು ತೋರುಬೆರಳುಗಳಿಂದ ಎಡಗೈಯ ಕಿರುಬೆರಳಿನ ತುದಿಯನ್ನು ಕೊಂಚವೇ ಒತ್ತಡದಲ್ಲಿ ಒತ್ತಿ
* ಕೊಂಚ ಹೊತ್ತಿನ ಬಳಿಕ ಎಡಗೈಯ ಹೆಬ್ಬೆರಳು ಮತ್ತು ತೋರುಬೆರಳುಗಳಿಂದ ಬಲಗೈಯ ಕಿರುಬೆರಳಿನ ತುದಿಯನ್ನು ಕೊಂಚವೇ ಒತ್ತಡದಲ್ಲಿ ಒತ್ತಿ
* ಪ್ರತಿ ಬೆರಳಿಗೆ ಸುಮಾರು ಐದು ನಿಮಿಷಗಳಂತೆ ಈ ವಿಧಾನವನ್ನು ಎಲ್ಲಾ ಬೆರಳುಗಳಿಗೆ ಅನುಸರಿಸಿ.
* ಈ ಕ್ರಿಯೆಯನ್ನು ದಿನಕ್ಕೆ ಎರಡು ಬಾರಿ, ಅಂದರೆ ಬೆಳಿಗ್ಗೆ ಎದ್ದ ಬಳಿಕ ಮತ್ತು ರಾತ್ರಿ ಮಲಗುವ ಮುನ್ನ ಸುಮಾರು ಮೂರು ತಿಂಗಳ ಕಾಲ ಅನುಸರಿಸಿ. | 1 |
ಫೇಸ್‌ಬುಕ್ ಲೈವ್‌ನಲ್ಲಿ 'ಚಮಕ್' ನೀಡ್ತಾರಂತೆ ರಶ್ಮಿಕಾ, ಸುನಿ
Highlights
ಸರಳವಾದ ಕಥೆಗಳನ್ನೇ ಪ್ರೇಕ್ಷಕರ ಮುಂದೆ ಸೃಜನಾತ್ಮಕವಾಗಿ ಇಡುವ 'ಸಿಂಪಾಲ್ಲಾಗೊಂದು ಲವ್ ಸ್ಟೋರಿ' ಖ್ಯಾತಿಯ ಸಿಂಪಲ್ ಸುನಿ ಅವರ ನಿರ್ದೇಶನದ 'ಚಮಕ್' ಈ ವಾರ ಬಿಡುಗಡೆಯಾಗಲಿದೆ. ಗಣೇಶ್, ರಶ್ಮಿಕಾ ನಟಿಸಿರುವ ಈ ಚಿತ್ರದ ಬಗ್ಗೆ ಫೇಸ್‌ಬುಕ್ ಲೈವ್‌ಗೆ ಬಂದು ಮಾತನಾಡಲಿದ್ದಾರಂತೆ ನಟಿ ರಶ್ಮಿಕಾ ಮಂದಣ್ಣ ಮತ್ತು ಸುನಿ.
ಬೆಂಗಳೂರು: ಸರಳವಾದ ಕಥೆಗಳನ್ನೇ ಪ್ರೇಕ್ಷಕರ ಮುಂದೆ ಸೃಜನಾತ್ಮಕವಾಗಿ ಇಡುವ 'ಸಿಂಪಾಲ್ಲಾಗೊಂದು ಲವ್ ಸ್ಟೋರಿ' ಖ್ಯಾತಿಯ ಸಿಂಪಲ್ ಸುನಿ ಅವರ ನಿರ್ದೇಶನದ 'ಚಮಕ್' ಈ ವಾರ ಬಿಡುಗಡೆಯಾಗಲಿದೆ. ಗಣೇಶ್, ರಶ್ಮಿಕಾ ನಟಿಸಿರುವ ಈ ಚಿತ್ರದ ಬಗ್ಗೆ ಫೇಸ್‌ಬುಕ್ ಲೈವ್‌ಗೆ ಬಂದು ಮಾತನಾಡಲಿದ್ದಾರಂತೆ ನಟಿ ರಶ್ಮಿಕಾ ಮಂದಣ್ಣ ಮತ್ತು ಸುನಿ.
ಈ ಬಗ್ಗೆ ಫೇಸ್‌ಬುಕ್ ಸ್ಟೇಟಸ್ ಹಾಕಿರುವ ರಶ್ಮಿಕಾ, ಸಂಜೆ 7.30ಕ್ಕೆ ಲೈವ್ ಬರುವುದಾಗಿ ಹೇಳಿದ್ದಾರೆ.
ಡೈಲಾಗ್ಸ್ ಮೂಲಕವೇ ಎಲ್ಲರ ಮನ ಗೆದ್ದ ಸುನಿಯೊಂದಿಗೆ ಗೋಲ್ಡನ್ ಸ್ಟಾರ್ ಗಣೇಶ್ ಈ ಚಿತ್ರದಲ್ಲಿ ಕಾರ್ಯನಿರ್ವಹಿಸಿದ್ದು, ಈ ಚಿತ್ರ 'ಮುಂಗಾರು ಮಳೆ' ದಾಖಲೆ ಮುರಿಯಬಹುದೆಂಬ ನಿರೀಕ್ಷೆ ಚಿತ್ರದ ಅಭಿಮಾನಿಗಳಲ್ಲಿದೆ. | 0 |
ದೀಪಕ್ ಚಾಹರ್ ದಾಖಲೆ
ಐಪಿಎಲ್‌ನ ಒಂದೇ ಪಂದ್ಯದಲ್ಲಿ ಅತಿಹೆಚ್ಚು ಡಾಟ್ ಬಾಲ್
ದೀಪಕ್ ಚಾಹರ್ ದಾಖಲೆ
ಪಿಟಿಐ
11 ಏಪ್ರಿಲ್ 2019, 01:30 IST
Updated:
11 ಏಪ್ರಿಲ್ 2019, 01:30 IST
ಅಕ್ಷರ ಗಾತ್ರ :
ಆ
ಆ
ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್‌ನ ಮಧ್ಯಮ ವೇಗಿ ದೀಪಕ್ ಚಾಹರ್ ಐಪಿಎಲ್ ಟೂರ್ನಿಯ ಒಂದೇ ಪಂದ್ಯದಲ್ಲಿ ಅತಿ ಹೆಚ್ಚು ಡಾಟ್ ಬಾಲ್ ಹಾಕಿದ ಬೌಲರ್ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು.
ಕೋಲ್ಕತ್ತ ನೈಟ್ ರೈಡರ್ಸ್ ಎದುರಿನ ಪಂದ್ಯದಲ್ಲಿ ಅವರು 20 ರನ್ ನೀಡಿ ಮೂರು ವಿಕೆಟ್ ಪಡೆದಿದ್ದರು. ಇದರಲ್ಲಿ 20 ಡಾಟ್ ಬಾಲ್‌ಗಳು ಇದ್ದವು. ಸನ್‌ರೈಸರ್ಸ್ ಹೈದರಾಬಾದ್ ತಂಡದ ರಶೀದ್ ಖಾನ್ ಮತ್ತು ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಅಂಕಿತ್ ರಜಪೂತ್ ತಲಾ 18 ಡಾಟ್‌ಬಾಲ್ ಹಾಕಿದ್ದು ಈ ಹಿಂದಿನ ದಾಖಲೆಯಾಗಿತ್ತು.
26 ವರ್ಷದ ಚಾಹರ್ ಪರಿಣಾಮಕಾರಿ ದಾಳಿಯ ಮೂಲಕ ನೈಟ್ ರೈಡರ್ಸ್ ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳನ್ನು ಕಾಡಿದ್ದರು. ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಲಿನ್ ಅವರನ್ನು ಮೊದಲ ಓವರ್‌ನಲ್ಲೇ ಎಲ್‌ಬಿಡಬ್ಲ್ಯು ಬಲೆಯಲ್ಲಿ ಕೆಡವಿದ್ದರು. ಇನಿಂಗ್ಸ್‌ನ ಮೂರು ಮತ್ತು ಐದನೇ ಓವರ್‌ಗಳಲ್ಲಿ ಕ್ರಮವಾಗಿ ನಿತೀಶ್ ರಾಣಾ ಮತ್ತು ರಾಬಿನ್ ಉತ್ತಪ್ಪ ಅವರನ್ನು ಔಟ್ ಮಾಡಿದ್ದರು. 19ನೇ ಓವರ್‌ನಲ್ಲಿ ಐದು ಡಾಟ್ ಬಾಲ್ ಹಾಕಿ ಮಿಂಚಿದ್ದರು. | 2 |
ಅಗರಬತ್ತಿ ಬಳಸುವ ಮುನ್ನ ಎಚ್ಚರವಹಿಸಿ
February 1, 2019
Facebook Twitter Google+ LinkedIn StumbleUpon Tumblr Pinterest Reddit VKontakte Odnoklassniki Pocket WhatsApp
ಬೆಂಗಳೂರು,ಫೆ, 01:
ಅಗರಬತ್ತಿ , ಮಾರುಕಟ್ಟೆಯಲ್ಲಿ ಅನೇಕ ಫ್ಲೇವರ್ ಗಳಲ್ಲಿ ಲಭಿಸುತ್ತದೆ. ಇದರ ಫಮ ನಮ್ಮನ್ನು ಆಕರ್ಷಿಸದೆ ಇರದು. ಯಾವುದೇ ಪೂಜೆ –ಪುನಸ್ಕಾರಗಳಲ್ಲಿ ಧೂಪವನ್ನು ಹಾಕುವುದು ಸರ್ವೇ ಸಾಮಾನ್ಯ. ಅಗರಬತ್ತಿಯಿಂದ ಪೂಜೆಯ ಸಮಯದಲ್ಲಿ ಬಳಸದೇ ಇದ್ದರೇ ಆ ಪ್ರಾರ್ಥನೆ ಅಸಂಪೂರ್ಣವಾಗುತ್ತದೆ.
ಇಷ್ಟೆಲ್ಲಾ ಆಕರ್ಷಿಸುವ ಅಗರಬತ್ತಿ. ತನ್ನ ಧೂಪದ ಹೊಗೆಯೊಂದಿಗೆ ಅನೇಕ ಅನಾರೋಗ್ಯಕ್ಕೆ ಕಾರಣವಾಗಿದೆ.
ಮೊದಲಿಗೆ ಇದನ್ನು ಆಸ್ವಾದಿಸಿದಾಗ ಶೀತ, ಕೆಮ್ಮು, ನೆಗಡಿ, ದಮ್ಮು ಎಂಬ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳು ಆರಂಭವಾಗುತ್ತದೆ. ಮೆಗ್ನಿಷಿಯಂ ಮತ್ತು ಕಬ್ಬಿಣದಂಶ ಇರುವುದರಿಂದ ಕಣ್ಣು ಉರಿ ಕಾಣಿಸಿಕೊಳ್ಳುತ್ತದೆ. ಊದಿನ ಕಡ್ಡಿಯ ಹೊಗೆಯು ಮಕ್ಕಳು ಮತ್ತು ವೃದ್ದರಲ್ಲಿ , ತೆಳು ಚರ್ಮವಿರುವುದರಿಂದ ಅಲರ್ಜಿ ಕಂಡು ಬರುವ ಸಾಧ್ಯತೆ ಹೆಚ್ಚು,
ಊದಿನ ಕಡ್ಡಿಯಲ್ಲಿರುವ ವಿಷಕಾರಿ ಅಂಶವು ಮೂತ್ರದ ಮೂಲಕ ಹೊರಹಾಕುವ ಸಂದರ್ಭ ಒದಗುವುದರಿಂದ ಮೂತ್ರಪಿಂಡದ ಮೇಲೆ ಒತ್ತಡ ಅಧಿಕವಾಗಿ, ಕಿಡ್ನಿ ಹಾಳಾಗುವ ಸಾಧ್ಯತೆ ಅಧಿಕವಾಗಿರುತ್ತದೆ.
ಹೀಗೆ ಅನೇಕ ಖಾಯಿಲೆಗಳಿಗೆ ಅಗರಬತ್ತಿ ನಾಂದಿ ಹಾಡುತ್ತದೆ. ಸಾಮಾನ್ಯವಾಗಿ ಬೆರಣಿ ಮತ್ತು ನೈಸರ್ಗಿಕ ಪದಾರ್ಥಗಳಿಂದ ತಯಾರಾದ , ಉನ್ನತ ಗುಣಮಟ್ಟದ ಊದಿನಕಡ್ಡಿಯನ್ನು ಬಳಸಿ, ರಾಸಾಯನಿಕ ಪದಾರ್ಥದಿಂದ ತಯಾರಾದ, ಅಗರಬತ್ತಿಯನ್ನು ತ್ಯಜಿಸುವುದರಿಂದ, ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. | 1 |
ಚೊಚ್ಚಲ ಪಂದ್ಯದಲ್ಲೇ ಹ್ಯಾಟ್ರಿಕ್ ವಿಕೆಟ್ ಕಿತ್ತ ಲಂಕಾ ಸ್ಪಿನ್ನರ್
Highlights
ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಪಾದಾರ್ಪಣಾ ಪಂದ್ಯದಲ್ಲೇ ಹ್ಯಾಟ್ರಿಕ್ ವಿಕೆಟ್ ಕಿತ್ತ ವಿಶ್ವದ ಮೂರನೇ ಬೌಲರ್ ಎಂಬ ಹಿರಿಮೆಯೂ ಹಸರಂಗಾ ಡಿಸಿಲ್ವಾ ಪಾಲಾಯಿತು.
ಗಾಲೆ(ಜು.04): ಹ್ಯಾಟ್ರಿಕ್ ವಿಕೆಟ್ ಪಡೆಯುವುದು ಪ್ರತಿಯೊಬ್ಬ ಬೌಲರ್'ನ ಕನಸಾಗಿರುತ್ತದೆ. ಅದರಲ್ಲೂ ಪಾದಾರ್ಪಣೆ ಪಂದ್ಯದಲ್ಲೇ ಆ ಸಾಧನೆ ಸಾಕಾರವಾದರೆ ಹೇಗಿರಬಹುದು? ಅದು ಆ ಕ್ರಿಕೆಟಿಗ ಜೀವನದಲ್ಲಿ ಎಂದೆಂದೂ ಮರೆಯಲಾರದ ಕ್ಷಣವೆನಿಸುವುದರಲ್ಲಿ ಆಶ್ಚರ್ಯವೇಯಿಲ್ಲ.
ಹೌದು ಪಾದಾರ್ಪಣ ಪಂದ್ಯದಲ್ಲೇ ಹ್ಯಾಟ್ರಿಕ್ ವಿಕೆಟ್ ಪಡೆದ ಶ್ರೀಲಂಕಾದ ಮೊದಲ ಹಾಗೂ ವಿಶ್ವದ ಮೂರನೇ ಬೌಲರ್ ಎನ್ನುವ ಶ್ರೇಯಕ್ಕೆ ಶ್ರೀಲಂಕಾದ ವನಿಡು ಹಸರಂಗಾ ಡಿಸಿಲ್ವಾ ಪಾತ್ರರಾಗಿದ್ದಾರೆ.
ಗಾಲೆಯಲ್ಲಿ ಜಿಂಬಾಬ್ವೆ ವಿರುದ್ಧ ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್'ಗೆ ಪಾದಾರ್ಪಣೆ ಮಾಡಿದ ಹಸರಂಗಾ ಡಿಸಿಲ್ವಾ, ಶ್ರೀಲಂಕಾ ಪರ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ ಐದನೇ ಆಟಗಾರ ಎನ್ನುವ ಖ್ಯಾತಿಗೂ ಭಾಜನರಾದರು. ಈ ಮೊದಲು ಶ್ರೀಲಂಕಾ ಪರ ಚಮಿಂಡಾ ವಾಸ್, ಲಸಿತ್ ಮಾಲಿಂಗಾ, ಫರ್ವೇಜ್ ಮಹರೂಪ್ ಮತ್ತು ತಿಸಾರ ಪೆರೇರ ಏಕದಿನ ಕ್ರಿಕೆಟ್'ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.
ಸತತ ಮೂರು ಎಸೆತಗಳಲ್ಲಿ ಜಿಂಬಾಬ್ವೆಯ ಮಾಲ್ಕಮ್ ಮಾರ್ಷಲ್, ಡೊನಾಲ್ಡ್ ತಿರಿಪನೋ ಹಾಗೂ ತೆಂಡೈ ಚಟಾರ ಅವರನ್ನು 19 ವರ್ಷದ ಹಸರಂಗಾ ಡಿಸಿಲ್ವಾ ಪೆವಿಲಿಯನ್ ಹಾದಿ ತೋರಿಸಿದರು.
ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಪಾದಾರ್ಪಣಾ ಪಂದ್ಯದಲ್ಲೇ ಹ್ಯಾಟ್ರಿಕ್ ವಿಕೆಟ್ ಕಿತ್ತ ವಿಶ್ವದ ಮೂರನೇ ಬೌಲರ್ ಎಂಬ ಹಿರಿಮೆಯೂ ಹಸರಂಗಾ ಡಿಸಿಲ್ವಾ ಪಾಲಾಯಿತು. ಈ ಮೊದಲು ಬಾಂಗ್ಲಾದೇಶದ ತೈಜುಲ್ ಇಸ್ಲಾಮ್ ಹಾಗೂ ದಕ್ಷಿಣ ಆಫ್ರಿಕಾದ ಕಗಿಸೋ ರಬಾಡ ತಾವಾಡಿದ ಚೊಚ್ಚಲ ಏಕದಿನ ಪಂದ್ಯದಲ್ಲೇ ಹ್ಯಾಟ್ರಿಕ್ ಸಾಧನೆ ಮಾಡಿ ಸಂಭ್ರಮಿಸಿದ್ದರು.
Last Updated 11, Apr 2018, 12:47 PM IST | 2 |
ಮಾಂಗಲ್ಯಕ್ಕೂ ಫ್ಯಾಷನ್ ಟ್ರೆಂಡ್
17-10-2018 8:10AM IST / No Comments / Posted In: Beauty , Latest News
ಮಹಿಳೆಯರು ಆಭರಣ ಪ್ರಿಯರು. ಮದುವೆ, ಹಬ್ಬ- ಹರಿದಿನಗಳಲ್ಲಿ ಸರ್ವಾಲಂಕಾರ ಭೂಷಿತರಾಗಿ ಕಂಗೊಳಿಸುತ್ತಾರೆ. ಅಲಂಕಾರಕ್ಕಾಗಿ ಬೇರೆ ಬೇರೆ ಆಭರಣಗಳನ್ನು ಧರಿಸಿದರೂ ಹಿಂದೂ ಸಂಪ್ರದಾಯದಲ್ಲಿ ಮದುವೆಯಾದ ಹೆಣ್ಣಿಗೆ ಮಾಂಗಲ್ಯವೇ ಭೂಷಣ. ಮಾಂಗಲ್ಯವಿಲ್ಲದ ಅವಳ ಅಲಂಕಾರ ಅಪೂರ್ಣ.
ಮೊದಲೆಲ್ಲಾ ಬರೀ ಕರಿಮಣಿಗಳನ್ನು ದಾರದಲ್ಲಿ ಪೋಣಿಸಿ ಮಧ್ಯದಲ್ಲಿ 2 ತಾಳಿ ಬೊಟ್ಟುಗಳಿರುವ ಸರ ಧರಿಸುತ್ತಿದ್ದರು. ಕಾಲ ಕ್ರಮೇಣ ಮಹಿಳೆಯರ ಅಭಿರುಚಿಗೆ ತಕ್ಕಂತೆ ಮಾಂಗಲ್ಯ ಸರಗಳಲ್ಲಿಯೂ ಸಾಕಷ್ಟು ಬದಲಾವಣೆಯಾಗಿವೆ. ಕರಿಮಣಿ ನಡುವೆ ಬಂಗಾರದ ಗುಂಡು ಪೋಣಿಸಿ ಮಾಂಗಲ್ಯ, ನಂತರ ಬರೀ ಬಂಗಾರದ ಚೈನ್ ಮಧ್ಯೆ ಒಂದೊಂದು ಕರಿಮಣಿ, ಕರಿಮಣಿ ಸರಗಳ ಮಧ್ಯೆ ಬಂಗಾರದ ಚೈನ್ ಹೀಗೆ ಬಗೆ ಬಗೆಯ ವಿನ್ಯಾಸದ ಮಾಂಗಲ್ಯ ಸರಗಳು ಮಹಿಳೆಯರ ಗಮನ ಸೆಳೆದಿದ್ದವು.
ಆಧುನಿಕ ಭಾರತೀಯ ನಾರಿಯರ ಗಮನ ಸೆಳೆಯುವ ಗಿಡ್ಡದಾಗಿರುವ ನೆಕ್ ಲೆಸ್ ಮಾದರಿಯ ಮಾಂಗಲ್ಯ ಸರಗಳು ಇಂದಿನ ಟ್ರೆಂಡ್. ಉದ್ದನೆಯ ಮಾಂಗಲ್ಯವನ್ನು ಸದಾ ಹಾಕಲು ಇಚ್ಛಿಸದ ಮಹಿಳೆಯರು ಸಾಂಪ್ರದಾಯಿಕ ಉಡುಗೆಗೂ, ಆಧುನಿಕ ಉಡುಗೆಗೂ ಸೈ ಎನ್ನುವ ನವೀನ ಮಾದರಿಯ ಚಿಕ್ಕದಾದ ಸ್ಟೈಲಿಶ್ ಮಾಂಗಲ್ಯಗಳಿಗೆ ಮಾರು ಹೋಗುತ್ತಿದ್ದಾರೆ. | 1 |
ಮಾಸ
ಮೇಷ ಸೋದರ ಸಂಬಂಧಿಗಳ ಆಗಮನದಿಂದ ಹಬ್ಬದ ವಾತಾವರಣ. ಮಕ್ಕಳ ಮದುವೆ ಕಾರ್ಯಕ್ಕೆ ಹೊಸ ತಿರುವು. ಅಚ್ಚರಿಯಿಂದ ಕೂಡಿದ ದಿನವಾಗಿ ಪರಿಣಮಿಸುವುದು. ಸಮಾಧಾನ ಚಿತ್ತ ಕಾಪಾಡಿಕೊಳ್ಳಿ.
ವೃಷಭ ಸ್ವತ್ತು ವಿವಾದಗಳಲ್ಲಿ ಬಂಧುಗಳೊಡನೆ ಸೌಹಾರ್ದ ಮಾತುಕತೆಯಿಂದ ಲಾಭಕರ ನಿರ್ಧಾರ. ಪಿತ್ರಾರ್ಜಿತ ಆಸ್ತಿ ದೊರಕುವುದು. ಬಂಧುಗಳ ಜತೆಗಿನ ವಿರಸ ಶಮನವಾಗಿ ತಿಳಿ ವಾತಾವರಣ ಮೂಡುವುದು.
ಮಿಥುನ ಪ್ರತಿಭಾ ಪ್ರದರ್ಶನದ ಅವಕಾಶದೊಂದಿಗೆ ಉತ್ತಮ ಆದಾಯ ಮತ್ತು ಗೌರವ ಪ್ರಾಪ್ತಿ. ಮುಂದಿನ ದಿನಗಳಲ್ಲಿ ಉತ್ತಮ ಅವಕಾಶ. ಪ್ರಯಾಣದಲ್ಲಿ ಸುಖಾನುಭವ. ಉತ್ತಮ ಆರೋಗ್ಯ.
ಕಟಕ ಸನ್ನಡತೆಯಿಂದ ಜನಪ್ರಿಯತೆ ಹೆಚ್ಚಿಸಿಕೊಳ್ಳುವಿರಿ. ಸಮಾಜ ಸೇವೆಯು ಹೆಚ್ಚಿನ ಕೆಲಸ ಕಾರ್ಯಗಳೊಂದಿಗೆ ಗೌರವ ತಂದುಕೊಡಲಿದೆ. ಆರೋಗ್ಯದ ಬಗ್ಗೆ ಗಮನವಿರಲಿ. ವಿದ್ಯಾರ್ಥಿಗಳಿಗೆ ಶುಭ ಫಲ.
ಸಿಂಹ ವ್ಯವಹಾರದಲ್ಲಿ ಕೌಶಲ್ಯದಿಂದ ಹೆಚ್ಚಿನ ಲಾಭ. ಹೊಸ ಉದ್ಯಮದ ಆರಂಭದ ಬಗ್ಗೆ ಚಿಂತನೆಗಳು ಸಾಕಾರಗೊಳ್ಳುವವು. ಇಚ್ಛೆಯಂತೆ ಭೂಮಿ ಅಥವಾ ಮನೆ ಖರೀದಿ ಭಾಗ್ಯ ನಿಮ್ಮದಾಗಲಿದೆ.
ಕನ್ಯಾ ಸತ್ಕಾರ್ಯಗಳಿಗೆ ಸಹಾಯ ಕೋರಿ ಬರುವವರಿಗೆ ಸಹಾಯ ಹಸ್ತ ಚಾಚುವಿರಿ. ಹೋಟೇಲ್, ದರ್ಶಿನಿ, ಮುಂತಾದವುಗಳ ವ್ಯವಹಾರದಲ್ಲಿ ಹಿನ್ನಡೆ. ಹಿತೈಷಿಗಳ ಸಹಕಾರದ ಭರವಸೆ ಪಡೆದುಕೊಳ್ಳುವಿರಿ.
ತುಲಾ ಬೃಹತ್ ಯೋಜನೆಗಳಿಗೆ ಸನ್ನಿವೇಶಗಳು ಅನುಕೂಲಕರವಾಗಿ ಪರಿಣಮಿಸಲಿವೆ. ಹೊಸ ಅವಕಾಶ ಅರಸಿ ಬರಲಿವೆ. ವಿವಾಹಾಕಾಂಕ್ಷಿಗಳಿಗೆ ಮಾತುಕತೆಯಿಂದ ತೃಪ್ತಿಕರ ಸಮಾಚಾರ ಕೇಳಿಬರಲಿದೆ.
ವೃಶ್ಚಿಕ ಹೊಸ ಉದ್ಯಮ ನಡೆಸುವ ಯೋಜನೆ ಕೈಗೂಡುವ ಸಾಧ್ಯತೆ. ಆರೋಗ್ಯದಲ್ಲಿ ಹಿನ್ನಡೆ ಸಾಧ್ಯತೆ. ನಡೆಸಲಿಚ್ಛಿಸುವ ವ್ಯವಹಾರಗಳ ವಿಚಾರದಲ್ಲಿ ಸ್ಪಷ್ಟ ಚಿತ್ರಣ ಮೂಡಿಬರಲಿದೆ.
ಧನು ಪ್ರಯೋಗಶೀಲರಿಗೆ ಅನಿರೀಕ್ಷಿತ ಫಲಿತಾಂಶ. ಉನ್ನತ ಅಧಿಕಾರಿಗಳಿಗೆ ಅಚ್ಚರಿ ಮೂಡಿಸುವ ಕಾರ್ಯ ಮಾಡಲಿದ್ದೀರಿ. ಉದ್ಯಮಿಗಳಿಗೆ ಶ್ರಮಕ್ಕೆ ತಕ್ಕ ಪ್ರತಿಫಲ ದೊರಕುವುದು.
ಮಕರ ವ್ಯಾಪಾರದಲ್ಲಿ ಹಣದ ಹರಿವು ಸುಗಮವಾಗಿ ವ್ಯವಹಾರದಲ್ಲಿ ಉನ್ನತಿಯತ್ತ ಸಾಗಲಿದ್ದೀರಿ. ಯಾಂತ್ರೀಕೃತ ವಾಹನ, ಯಂತ್ರೋಪಕರಣಗಳ ವ್ಯಾಪಾರಿಗಳಿಗೆ ಉತ್ತಮ ವ್ಯವಹಾರದಿಂದಾಗಿ ಲಾಭ.
ಕುಂಭ ಹೊಸ ಉದ್ಯಮಕ್ಕೆ ಕಾಲಿಡುವ ಧಾವಂತದಿಂದ ಕೆಲಸ ಮಾಡಲಿದ್ದೀರಿ. ಗುರಿ ತಲುಪುವ ಹಾದಿಯಲ್ಲಿ ಸ್ನೇಹಿತರ ಸಹಕಾರ ದೊರಕಲಿದೆ. ಯಶಸ್ಸಿನ ದಿನ. ಸಂಗಾತಿಯಿಂದ ಸಂತಸದ ವಿಚಾರ ಕೇಳಲಿದ್ದೀರಿ.
ಮೀನ ವೈಯಕ್ತಿಕ ಜೀವನದಲ್ಲಿನ ವಿಚಾರ ಸ್ಪಷ್ಟಪಡಿಸಿಕೊಳ್ಳುವ ದಿಕ್ಕಿನಲ್ಲಿ ಗಣ್ಯರೊಂದಿಗೆ ಮುಖಾಮುಖಿ ಸಂಭಾಷಣೆ. ದುಡುಕು ಸ್ವಭಾವದಿಂದ ತೊಂದರೆ. ವಾತ ಸಂಬಂಧಿ ಕಾಯಿಲೆ ಉಲ್ಬಣವಾದೀತು.
ಮೇಷ ಅಶ್ವಿನಿ, ಭರಣಿ, ಕೃತ್ತಿಕಾ 1ನೇ ಪಾದ: ಅಪರಿಚಿತ ವ್ಯಕ್ತಿಗಳ ಮಾತಿಗೆ ಮರುಳಾಗದಿರಿ. ಅವರ ಮಾತುಗಳನ್ನು ಕೇಳಿ ಹೆಚ್ಚಿನ ಮೊತ್ತದ ಹಣವನ್ನು ಹೂಡಿಕೆ ಮಾಡದಿರಿ. ಹಿರಿಯರ ಸಲಹೆ ಮತ್ತು ಮಾರ್ಗದರ್ಶನಗಳು ನಿಮ್ಮ ವ್ಯವಹಾರಗಳಿಗೆ ನೆರವಾಗುವುವು. ಯಾರನ್ನೇ ಆಗಲಿ ತಿರಸ್ಕಾರದಿಂದ ಕಾಣದಿರಿ ಅಥವಾ ಹಂಗಿಸಲು ಹೋಗಬೇಡಿರಿ. ಹೊಸ ಸ್ನೇಹಿತರ ಪರಿಚಯ ದೊರೆತು ಸಂತಸವಾಗುವುದು. ಅನಿರೀಕ್ಷಿತವಾಗಿ ಸ್ವಲ್ಪ ಧನ ಹರಿದು ಬಂದು ನಿಮಗೆ ಅತೀವ ಸಂತಸವಾಗಬಹುದು. ಕೆಲವರಿಗೆ ಸ್ಥಿರಾಸ್ಥಿಯನ್ನು ಹೊಂದುವ ಯೋಗವಿದೆ.
ವೃಷಭ ಕೃತ್ತಿಕಾ 2,3,4, ರೋಹಿಣಿ, ಮೃಗಶಿರಾ 1,2: ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಂಡು ಉತ್ತಮ ಫಲಿತಾಂಶವನ್ನು ಪಡೆಯಬಹುದು. ನಿಮ್ಮ ಕೆಲವು ಉತ್ತಮ ಕೆಲಸಗಳು ಈಗ ಬೆಳಕಿಗೆ ಬಂದು ಅದು ನಿಮ್ಮ ಯೋಜನೆಗಳಿಗೆ ಸಹಾಯವಾಗುತ್ತದೆ. ಗಳಿಸಿದ ಸಂಪತ್ತು ಹಲವಾರು ಹೂಡಿಕೆಗಳಿಂದ ದುಪ್ಪಟ್ಟಾಗುವ ಸಾಧ್ಯತೆಗಳಿವೆ. ಆತ್ಮೀಯರ ಭೇಟಿಯಿಂದ ಸಂತಸವಾಗುತ್ತದೆ ಹಾಗೂ ಹಳೆಯ ನೆನಪುಗಳನ್ನು ಮೆಲುಕು ಹಾಕುವರು. ಅನಿರೀಕ್ಷಿತ ಧನಾಗಮನದಿಂದ ನಿಮಗೇ ಅಚ್ಚರಿಯಾಗುವುದು.
ಮಿಥುನ ಮೃಗಶಿರಾ 3,4, ಆರಿದ್ರಾ, ಪುನರ್ವಸು 1,2,3: ಆಹಾರ ದೋಷಗಳಿಂದ ಅನಾರೋಗ್ಯ ಉಂಟಾಗುತ್ತದೆ. ಇದಕ್ಕೆ ವೈದ್ಯಕೀಯ ಸಲಹೆ ಬಹಳ ಮುಖ್ಯ. ವೃತ್ತೀಯ ಸ್ಥಳಗಳಲ್ಲಿ ಪ್ರೇಮಾಂಕುರವಾಗುತ್ತದೆ. ಕೋರ್ಟ್ ಕಚೇರಿ ಕೆಲಸಗಳಲ್ಲಿ ಸ್ವಲ್ಪ ಇದ್ದ ಹಿನ್ನಡೆ ಈಗ ಸರಿಯಾಗುವುದು. ನಿಮ್ಮ ಒಳ್ಳೆಯ ಗುಣಗಳಿಂದ ಸಾರ್ವಜನಿಕವಾಗಿ ಮನ್ನಣೆಯನ್ನು ಗಳಿಸುವಿರಿ. ಆರ್ಥಿಕ ಸ್ಥಿತಿಯಲ್ಲಿ ಸ್ವಲ್ಪ ಸುಧಾರಣೆಯನ್ನು ಕಾಣಬಹುದು. ನೀವು ತೀರಿಸಬೇಕೆಂದಿರುವ ಸಾಲಗಳನ್ನು ಪಟ್ಟಿ ತಯಾರಿಸಿ ತೀರಿಸುವ ಬಗ್ಗೆ ಯೋಚಿಸಿರಿ. ಸಂಸಾರದಲ್ಲಿ ಬಂದಿದ್ದ ಸ್ವಲ್ಪ ಬಿಗುಮಾನಗಳು ಈಗ ದೂರವಾಗುತ್ತವೆ.
ಕಟಕ ಪುನರ್ವಸು 4, ಪುಷ್ಯ, ಆಶ್ಲೇಷ: ಧನಾದಾಯ ಸ್ವಲ್ಪ ವೃದ್ಧಿಯಾಗಿರುತ್ತದೆ. ಸರ್ಕಾರಿ ಮಟ್ಟದ ಕೆಲಸದಲ್ಲಿ ಜಯವಿರುತ್ತದೆ. ವಿದ್ಯುತ್ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಉತ್ತಮ ಆದಾಯವಿರುತ್ತದೆ. ಬೆಳ್ಳಿಯ ಸಗಟು ವ್ಯಾಪಾರಿಗಳಿಗೆ ವ್ಯಾಪಾರ ವೃದ್ಧಿಯಾಗಿ ಲಾಭಾಂಷ ಹೆಚ್ಚಾಗುವುದು. ವೃತ್ತಿಯಲ್ಲಿ ಅವಧಿ ಮೀರಿ ಮಾಡಿದ್ದ ಕೆಲಸಕ್ಕೆ ಈಗ ಧನಲಾಭವಾಗುತ್ತದೆ. ನಿರುದ್ಯೋಗಿಗಳಿಗೆ ಅನಿರೀಕ್ಷಿತವಾಗಿ ಉದ್ಯೋಗವಿರುತ್ತದೆ. ಲೇವಾದೇವಿ ವ್ಯವಹಾರ ಮಾಡುವುದು ಈಗ ಸಾಧುವಲ್ಲ.
ಸಿಂಹ ಮಖ, ಪೂರ್ವ ಫಲ್ಗುಣಿ, ಉತ್ತರ ಫಲ್ಗುಣಿ 1: ಮನೆಯಲ್ಲಿ ಚಿಕ್ಕ ಪುಟ್ಟ ವಿವಾದಗಳು ಕಂಡು ಬರುತ್ತವೆ. ನಿಮ್ಮ ವ್ಯವಹಾರ ಅಭಿವೃದ್ಧಿಗೆ ಚಿಂತನೆಯನ್ನು ನಡೆಸುವಿರಿ. ವಿದ್ಯಾರ್ಥಿಗಳಿಗೆ ಸಾಮಾಜಿಕ ಮನ್ನಣೆ ಮತ್ತು ತರಬೇತಿಗಳು ದೊರೆಯುವುವು. ನೀವು ಆತ್ಮವಿಶ್ವಾಸದಿಂದ ಈ ಹಿಂದೆ ಮಾಡಿದ್ದ ಕೆಲಸಗಳು ಈಗ ಫಲವನ್ನು ಕೊಡುವುವು. ಸಂಗಾತಿಯ ಆರೋಗ್ಯದ ಕಡೆ ಸ್ವಲ್ಪ ನಿಗಾ ವಹಿಸುವುದು ಒಳ್ಳೆಯದು. ವ್ಯವಹಾರಿಕ ಒತ್ತಡಗಳು ನಿಮ್ಮನ್ನು ಗೊಂದಲಕ್ಕೆ ದೂಡುವುವು. ಆದ್ದರಿಂದ ಸಮಚಿತ್ತದಿಂದ ಅಲೋಚಿಸಿರಿ.
ಕನ್ಯಾ ಉತ್ತರ ಫಲ್ಗುಣಿ 2,3,4, ಹಸ್ತ, ಚಿತ್ತಾ 1,2: ಮನೆಯಲ್ಲಿ ಅತಿಥಿ ಸತ್ಕಾರ ನಡೆಯುವ ಸಂದರ್ಭವಿದೆ. ನ್ಯಾಯಾಲಯದ ವ್ಯಾಜ್ಯಗಳು ನಿಮ್ಮ ಕೈಮೀರಿದಂತೆ ಕಂಡರೂ ಅಂತಿಮ ಜಯ ನಿಮ್ಮದಾಗಿರುತ್ತದೆ. ಹಮ್ಮಿಕೊಂಡ ಕಾರ್ಯಗಳಲ್ಲಿ ಸ್ವಲ್ಪ ನಿಧಾನಗತಿಯ ಪ್ರಗತಿ ಇರುತ್ತದೆ. ಆರ್ಥಿಕ ಸ್ಥಿತಿಯು ಚೇತರಿಕೆಯ ಹಾದಿಯಲ್ಲಿರುತ್ತದೆ. ಆದರೆ ಸಾಲ ಮಾಡುವಾಗ ಸ್ವಲ್ಪ ಎಚ್ಚರವಿರಲಿ. ಅತಿಯಾಗಿ ಸಾಲ ಮಾಡುವುದು ಬೇಡ. ಈ ಹಿಂದೆ ಹೂಡಿದ ಹಣಗಳು ಈಗ ಇಡಿಗಂಟಾಗಿ ಒದಗಿ ಬರುತ್ತವೆ ಮತ್ತು ನಿಮ್ಮ ಅವಶ್ಯಕತೆಯನ್ನು ಪೂರೈಸುತ್ತವೆ.
ತುಲಾ ಚಿತ್ತಾ 3,4, ಸ್ವಾತಿ, ವಿಶಾಖೆ 1,2,3: ಬೇರೆಯವರ ವಿಷಯದಲ್ಲಿ ಮಧ್ಯಸ್ಥಿಕೆಯನ್ನು ವಹಿಸಲು ಹೋಗಿ ನೀವು ತೊಂದರೆಗೆ ಸಿಲುಕಬೇಡಿರಿ ಮತ್ತು ನೆಮ್ಮದಿಯನ್ನು ಕಳೆದುಕೊಳ್ಳಬೇಡಿರಿ. ನಿಮ್ಮ ತಾಳ್ಮೆಯ ನಡೆಯು ಸಂಗಾತಿ ಮತ್ತು ಅವರ ಬಂಧುಗಳಲ್ಲಿ ಸಂತಸವನ್ನು ತರುತ್ತದೆ. ದಿನಸಿ ಸಗಟು ಮತ್ತು ಚಿಲ್ಲರೆಯ ವ್ಯಾಪಾರಿಗಳಿಗೆ ವ್ಯವಹಾರ ವೃದ್ಧಿಸುತ್ತದೆ. ಕೈಗಾರಿಕಾ ವಲಯದಲ್ಲಿ ಸ್ವಂತ ಉದ್ದಿಮೆಯನ್ನು ಸ್ಥಾಪಿಸಬೇಕೆನ್ನುವವರಿಗೆ ಉತ್ತಮ ಅವಕಾಶಗಳಿವೆ. ವಾಹನಗಳನ್ನು ಖರೀದಿಸಬೇಕೆನ್ನುವವರಿಗೆ ಸಾಕಷ್ಟು ಸೌಕರ್ಯವಿರುತ್ತದೆ.
ವೃಶ್ಚಿಕ ವಿಶಾಖ 4, ಅನುರಾಧ, ಜ್ಯೇಷ್ಠ : ಹಠ ಹಿಡಿದು ಕೆಲಸ ಮಾಡಿದರೂ ಆದಾಯದಲ್ಲಿ ಸ್ವಲ್ಪ ಏರಿಕೆ ಇರುತ್ತದೆ. ಎಲ್ಲಾ ಕೆಲಸವನ್ನೂ ಬೇರೆಯವರಿಗೆ ವಹಿಸುವುದು ತರವಲ್ಲ. ನೀವು ಅವುಗಳ ಮೇಲ್ವಿಚಾರಣೆಯನ್ನು ಸರಿಯಾಗಿ ಮಾಡಿರಿ. ಆಗ ಹಣ ಸೋರಿಕೆಯನ್ನು ತಡೆಗಟ್ಟಬಹುದು. ವಿದ್ಯಾರ್ಥಿಗಳು ಅವರ ಓದಿನಲ್ಲಿ ಹೆಚ್ಚು ಶ್ರಮವಹಿಸಬೇಕಾದ ಅನಿವಾರ್ಯತೆಯಿದೆ ಎಚ್ಚರವಿರಲಿ. ವೃತ್ತಿಯಲ್ಲಿ ಬೆಳವಣಿಗೆಯು ಬರುವ ಸಾಧ್ಯತೆಗಳಿವೆ. ಅನಿರೀಕ್ಷಿತವಾದ ಒತ್ತಡಗಳು ಎದುರಾದರೂ ಅದನ್ನು ನಿಭಾಯಿಸುವ ಶಕ್ತಿ ಇರುತ್ತದೆ.
ಧನು ಮೂಲ, ಪೂರ್ವಾಷಾಢ, ಉತ್ತರಾಷಾಡ 1: ಧಾರ್ಮಿಕ ಚಟುವಟಿಕೆಗಳನ್ನು ನಡೆಸುವವರಿಗೆ ಸಾಕಷ್ಠು ವಂತಿಕೆ ದೊರೆಯುವುದು. ಸಭೆ ಸಮಾರಂಭಗಳಲ್ಲಿ ಗೌರವ ದೊರೆಯುವ ಸಾಧ್ಯತೆಗಳಿರುತ್ತವೆ. ಬಂಧುಗಳಿಗೆ ವಾಗ್ದಾನ ನೀಡುವಾಗ ಎಚ್ಚರವಿರಲಿ. ಇಲ್ಲವಾದಲ್ಲಿ ಅವರ ಸಾಲವನ್ನು ನೀವೇ ಕಟ್ಟಬೇಕಾದ ಸ್ಥಿತಿ ಬರಬಹುದು. ಆರ್ಥಿಕ ಸ್ಥಿತಿಯು ಸಾಮಾನ್ಯವಾಗಿರುತ್ತದೆ. ಲೇವಾದೇವಿ ವ್ಯವಹಾರವು ಕಠಿಣ ಪರಿಸ್ಥಿತಿಯನ್ನು ತರಬಹುದು. ವಿದೇಶಗಳಲ್ಲಿ ಓದಬೇಕೆನ್ನುವವರ ಆಸೆ ಪೂರೈಸುತ್ತದೆ.
ಮಕರ ಉತ್ತರಾಷಾಡ 2,3,4, ಶ್ರವಣ, ಧನಿಷ್ಠ 1, 2: ಕಲಾವಿದರಿಗೆ ಉತ್ತಮ ಸಂಭಾವನೆ ದೊರೆಯುವ ಎಲ್ಲಾ ಸಾಧ್ಯತೆಗಳಿವೆ. ಹೋಟೆಲ್ ಉದ್ಯಮಿಗಳು ಮತ್ತು ಆಹಾರ ವಸ್ತುಗಳನ್ನು ಮಾರುವವರು ತಮ್ಮ ಮೇಲಿರುವ ವ್ಯಾಜ್ಯಗಳಲ್ಲಿ ಸ್ವಲ್ಪ ಶಾಂತವಾಗಿರುವುದು ಒಳ್ಳೆಯದು. ಮಹಿಳಾ ಉದ್ಯಮಿಗಳಿಗೆ ಸಹೋದ್ಯೋಗಿಗಳಿಂದ ಅಸಹಕಾರ ದೊರೆತು ಸ್ವಲ್ಪ ವಿಚಲಿತರಾಗುವರು. ಆದರೆ ನಂತರ ಸರಿಯಾಗುವುದು. ಆರ್ಥಿಕ ಸ್ಥಿತಿಯು ಉತ್ತಮವಾಗುವುದು. ಹಲವಾರು ಮೂಲಗಳಿಂದ ಹಣ ಹರಿದು ಬರುತ್ತದೆ.
ಕುಂಭ ಧನಿಷ್ಠ 3,4, ಶತಭಿಷ, ಪೂರ್ವಾಭಾದ್ರ 1,2,3: ಯಶಸ್ವಿಯಾಗಿ ಮಾಡಿದ ಸಂಕಲ್ಪದಿಂದಲೇ ನಿಮ್ಮ ಕಾರ್ಯದಲ್ಲಿ ಅರ್ಧ ಯಶಸ್ಸನ್ನು ಸಾಧಿಸುವಿರಿ. ನಿಮ್ಮ ಮೇಲಧಿಕಾರಿಗಳ ಸಹಾಯದಿಂದ ಕ್ಲಷ್ಠಿ ಸಮಸ್ಯೆಗಳು ಸರಾಗವಾಗಿ ಪರಿಹಾರವಾಗುವುದು. ಹಣಕಾಸಿನ ಸ್ಥಿತಿಯು ಉತ್ತಮವಾಗಿರುತ್ತದೆ. ವಿಪರೀತ ಕೆಲಸದ ಒತ್ತಡದಿಂದ ಸ್ವಲ್ಪ ದೇಹಾಲಸ್ಯವಾಗುವುದು. ಸ್ವಲ್ಪ ವಿಶ್ರಾಂತಿ ಸಹ ಅಗತ್ಯ. ನಿಮ್ಮ ಒಳ್ಳೆಯ ತನವನ್ನು ಕೆಲವರು ಬಳಸಿಕೊಂಡು ಮುಜುಗರಕ್ಕೆ ಒಳಗಾಗುವಂತೆ ಮಾಡುವರು. ಅತೀ ಶೀಘ್ರದಲ್ಲಿ ಕುಟುಂಬದಲ್ಲಿ ಶುಭ ಸಮಾಚಾರಗಳು ಕೇಳಿ ಬರುತ್ತವೆ.
ಮೀನ ಪೂರ್ವಾಭಾದ್ರ 4, ಉತ್ತರಾಭಾದ್ರ, ರೇವತಿ : ವೃತ್ತಿಯಲ್ಲಿ ಸ್ವಲ್ಪ ಉತ್ತಮ ಪರಿಶ್ರಮ ಅಗತ್ಯ. ನಿಮ್ಮ ಸಹೋದ್ಯೋಗಿಗಳೊಂದಿಗೆ ತಾಳ್ಮೆಯಿಂದ ವ್ಯವಹರಿಸುವುದು ಮುಖ್ಯ. ಪ್ರವಾಸದ ವೇಳೆ ಕೆಲವು ವಸ್ತುಗಳು ಕಳುವಾಗುವ ಸಾಧ್ಯತೆಗಳಿವೆ. ಉನ್ನತ ಅಧಿಕಾರಿಗಳ ಕೃಪೆಯಿಂದ ವೃತ್ತಿಯಲ್ಲಿ ಅನುಕೂಲವಾಗುವುದು. ನಿಮ್ಮ ಮಕ್ಕಳಿಗಾಗಿ ಸಾಕಷ್ಠು ಹಣ ಖರ್ಚಾಗುವ ಸಾಧ್ಯತೆ ಇದೆ. ಆರೋಗ್ಯದ ಬಗ್ಗೆ ಸ್ವಲ್ಪ ಗಮನವಿರಲಿ. ಆಸ್ಥಿ ವಿವಾದಗಳನ್ನು ಮಾತಿನಿಂದ ಬಗೆಹರಿಸಿಕೊಳ್ಳುವುದೇ ಒಳ್ಳೆಯದು. ಈಗ ಹಳೇ ಸ್ನೇಹಿತರಿಂದ ನಿಮಗೆ ಸ್ವಲ್ಪ ಅನುಕೂಲ ಒದಗುತ್ತದೆ.
ಮೇಷ ಮಂದಮಾರುತದಂತೆ ನಿಮ್ಮೊಡಲೊಳಗೆ ಅವಿತು ಕುಳಿತ ಅಶುಭಗಳೆಲ್ಲಾ ಹೊರಬೀಳಲಿವೆ. ವಿಚಲಿತರಾಗದಿರಿ. ವಾತಾವರಣದ ಬದಲಾವಣೆಯಿಂದ ಮನೆಯಲ್ಲಿ ಪ್ರಗತಿಯಾಗಲಿದೆ. ನಿಧಾನವಾಗಿ ಗುರಿ ತಲುಪುವುದು ಕ್ಷೇಮ. ಶುಭ: 1, 12, 11 ಅಶುಭ: 6, 8, 18
ವೃಷಭ ಕ್ರಮಿಸದೇ ಇರಲು ಬಯಸಿದ ದಾರಿಯನ್ನು ಕ್ರಮಿಸಬೇಕಾದ ಪ್ರಸಂಗ ಬಂದೊದಗಬಹುದು. ನಿರಾಸಕ್ತಿ ಯಾವುದಕ್ಕೂ ಪರಿಹಾರವಲ್ಲ. ಕಣ್ಣಿನ ತೊಂದರೆಯನ್ನು ನಿರ್ಲಕ್ಷಿಸದಿರಿ. ಮಂಗಳಕಾರ್ಯವನ್ನು ಮುಂದೆ ಹಾಕಿ. ಶುಭ: 3, 16, 19 ಅಶುಭ: 12, 21, 23
ಮಿಥುನ ಬಯಕೆಯೂ, ಕಾಲವೂ ಸರಿಯಾಗಿ ಮೇಳೈಸಿದೆ. ಆಸೆಗಳ ಶುಭಾರಂಭ ಮಾಡಿ. ಪ್ರಚಾರಕ್ಕಿಂತ ಮೊದಲು ಕೆಲಸಕ್ಕೆ ಆದ್ಯತೆ ಕೊಡಿ. ತಿಂಗಳಾಂತ್ಯದಲ್ಲಿ ಶುಭ ಫಲಗಳಿವೆ. ಸಂಗಾತಿಯೊಡನೆ ಹೆಚ್ಚಿನ ಕಾಲ ಕಳೆಯಿರಿ. ಕುಟುಂಬದಲಿ ಸಂತಸ. ಶುಭ : 13, 23, 6 ಅಶುಭ: 4, 7, 24
ಕಟಕ ದೈವಾರಾಧನೆಯ ಅಗತ್ಯ ಮುಂದುವರೆಯಲಿದೆ. ಕುಟುಂಬ, ಸಂಪತ್ತು ಮತ್ತು ಮನೆಯ ರಕ್ಷಣೆಯ ಜವಾಬ್ದಾರಿ ನಿಮ್ಮ ಮೇಲಿದೆ. ವ್ಯಾವಹಾರಿಕವಾಗಿ ಲಾಭವೂ ಇಲ್ಲ, ನಷ್ಟವೂ ಇಲ್ಲ. ತಾಳ್ಮೆ ಇರಲಿ. ದೇವರ ಸ್ಮರಣೆ ಮಾಡಿ. ಶುಭ: 4, 8, 12 ಅಶುಭ: 14, 9, 20
ಸಿಂಹ ಶುಭಫಲಗಳು ಬಾಗಿಲಲ್ಲಿ ನಿಂತಿವೆ. ನೀವೇ ಧೈರ್ಯದಿಂದ ಕರೆತನ್ನಿ. ಇಲ್ಲದಿರುವುದರ ಕುರಿತ ಬೇಸರಕ್ಕಿಂತ ಮುಂದೆ ಇರುವುದರ ಬಗ್ಗೆ ಸಂತಸವಿರಲಿ. ಪ್ರಾತಃಕಾಲದಲ್ಲಿ ಬೇಗನೆದ್ದು ಇಷ್ಟದೇವರನ್ನು ನೆನೆಯಿರಿ. ಶುಭ: 5, 20, 10 ಅಶುಭ: 4, 12, 13, 24
ಕನ್ಯಾ ಲಾಭ ನಷ್ಟಗಳ ಬಗ್ಗೆ ತಲೆಕೆಡಿಸಿಕೊಳ್ಳದೇ ಮುಂದಿರುವ ಆಪತ್ತಿನಿಂದ ಪಾರಾಗುವುದು ಹೇಗೆಂದು ವಿಚಾರ ಮಾಡಿ. ಸದ್ಯಕ್ಕೆ ನಿಮ್ಮ ಎಣಿಕೆಯಂತೆ ಯಾವುದೂ ನಡೆಯದು. ಪ್ರವಾಹದ ವಿರುದ್ಧ ಈಜು ಬೇಡ. ಶುಭ: 6, 18, 24 ಅಶುಭ: 5, 11, 21
ತುಲಾ ವ್ಯಾವಹಾರಿಕ ಪರಾಮರ್ಶೆಗೆ ಸುಸಮಯ. ಹೊಸ ವ್ಯವಹಾರವನ್ನು ಪ್ರಾರಂಭಿಸಲು ಇದು ಸರಿಯಾದ ಸಮಯ. ಇದರಿಂದ ಸಮಾಜದಲ್ಲಿ ಹೆಚ್ಚಿನ ಮನ್ನಣೆಯನ್ನೂ, ಗೌರವವನ್ನೂ ಗಳಿಸಬಲ್ಲಿರಿ. ಶುಭ: 7, 13, 21 ಅಶುಭ: 6, 14, 19
ವೃಶ್ಚಿಕ ಸರ್ವಮಂಗಳೆಯ ಆರಾಧನೆ ನಿಮಗೆ ಶುಭ ತರಲಿದೆ. ಜೀವನದ ಪ್ರಮುಖ ನಿರ್ಧಾರಗಳನ್ನು ಒಬ್ಬಂಟಿಯಾಗಿ ತೆಗೆದುಕೊಳ್ಳುವ ಪ್ರಸಂಗ ಬರಬಹುದು. ಸಂಗಾತಿಯ ಅಭಿಪ್ರಾಯಕ್ಕೆ ಕಾಯಬೇಡಿ. ಶುಭ: 8, 16, 24 ಅಶುಭ: 6, 17, 21
ಧನು ಅದೃಷ್ಟದೇವತೆಯ ಕೃಪಾದೃಷ್ಟಿಯ ಅಗತ್ಯ ನಿಮಗೆ ತುಂಬಾ ಇದೆ. ಆಸ್ತಿಗಳಿಕೆಗಾಗಿ ನೀವು ಮಾಡಿಕೊಂಡ ಸಾಲ- ಶೂಲವಾಗುವ ಸಾಧ್ಯತೆಯಿದೆ. ಖರ್ಚು ಗಣನೀಯವಾಗಿ ಕಡಿಮೆ ಮಾಡಿ. ಆರೋಗ್ಯವನ್ನು ಕಾಪಾಡಿಕೊಳ್ಳಿ. ಶುಭ: 9, 18, 27 ಅಶುಭ: 3, 13, 21
ಮಕರ ದಿನವೂ, ಜನರೂ, ಕಾಲವೂ ನಿಮ್ಮದೇ ಆಗಿರುವಾಗ ಹೆದರಿಕೆಯ ಮಾತೆಲ್ಲಿ. ಸ್ವಾತಂತ್ರ್ಯವನ್ನು ಅತಿಯಾಗಿ ಬಳಸಿಕೊಳ್ಳದೇ ಆತ್ಮವಿಶ್ವಾಸದಲ್ಲಿ ನಂಬಿಕೆಯಿಟ್ಟು ನಡೆಯಿರಿ. ಒಳ್ಳೆಯವರಾಗಲು ಹೋಗಿ ಎಡವದಿರಿ. ಶುಭ ಸಂಖ್ಯೆ: 11, 1, 20 ಅಶುಭ ಸಂಖ್ಯೆ : 8, 6, 13, 22
ಕುಂಭ ಮಿತ್ರರ ಉಪಟಳಗಳು ಕುಟುಂಬವನ್ನೇ ಬಾಧಿಸಬಹುದು. ಕೆಲ ದಿನಗಳ ಮಟ್ಟಿಗೆ ಏಕಾಂತದ ಅಗತ್ಯ. ದೇವತೆಯ ಆರಾಧನೆಯಿಂದ ಶುಭಫಲವಿದೆ. ಮಾಡದ ತಪ್ಪುಗಳನ್ನು ನಿಮ್ಮ ಹೆಗಲಿಗೆ ಹಾಕಿಕೊಳ್ಳಬೇಡಿ. ಶುಭ : 10, 21, 28 ಅಶುಭ: 8, 3, 21
ಮೀನ ನಿಮ್ಮ ಒಳ್ಳೆಯತನವನ್ನು ಸಮಾಜಕ್ಕೂ ಹಂಚಿ. ಸಹಾಯ ಕೇಳಿ ಬರುವವರ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸಿ. ಈಗಷ್ಟೇ ಹೊಸ ಹೊಸ ಆಲೋಚನೆಗಳನ್ನು ಜಾರಿಗೆ ತರುತ್ತಿದ್ದೀರಿ. ಹೆಚ್ಚು ನಿಧಾನ ಮಾಡಬೇಡಿ. ಶುಭ: 12, 22, 3, 6 ಅಶುಭ: 8, 13, 21
ಮೇಷ ವರ್ಷಾರಂಭದಲ್ಲಿ ಕಳೆದ ಸಂವತ್ಸರದಂತೆ ಸಿಹಿ ಫಲಗಳನ್ನೇ ಕಾಣುವಿರಿ. ಅಭೀಷ್ಟಾರ್ಥಾಗಮನದಿಂದಲೂ ಸ್ನೇಹ, ಸಹಾಯ, ಸೌಭಾಗ್ಯ ವರ್ಧನೆಯಿಂದಲೂ ಜೀವನ ಆಶಾದಾಯಕವಾಗಲಿದೆ. ವರ್ಷದ ಉತ್ತರಾರ್ಧದಲ್ಲಿ ಅಷ್ಟಮಕ್ಕೆ ಹೋಗುವ ಗುರುವಿನ ಪ್ರಭಾವದಿಂದಾಗಿ ಖರ್ಚು, ದುಃಖ, ನೋವುಗಳನ್ನು ಎದುರಿಸ ಬೇಕಾದರೂ ಭಾಗ್ಯದ ಶನಿಯಿಂದ ಸುಖ-ದುಃಖಗಳ ಮಿಶ್ರಫಲವನ್ನು ಹೊಂದುವಿರಿ. ತಂದೆ-ತಾಯಿ ಅಥವಾ ಪೋಷಕರ ಶುಶ್ರೂಷೆ, ಚಿಕಿತ್ಸೆ ಸಂಭವದಿಂದ ಆರ್ಥಿಕ ಸ್ಥಿತಿಯಲ್ಲಿ ಏರು– ಪೇರು ಕಾಣುವಿರಿ. ರಾಜಕೀಯ ಧುರೀಣರಿಗೆ ಬಿಡುವಿಲ್ಲದ ಕೆಲಸ ಕಾರ್ಯಗಳು ಅನಾರೋಗ್ಯಕ್ಕೆ ಕಾರಣವಾದೀತು. ಕಾರ್ಯಕ್ಷೇತ್ರದಲ್ಲಿ ಏನನ್ನೋ ಸಾಧಿಸಿದ ಹೆಮ್ಮೆ ನಿಮ್ಮದಾಗಲಿದೆ. ಮಹಾಗಣಪತಿಯನ್ನು ಅನನ್ಯ ಭಾವದಿಂದ ಆರಾಧಿಸಿ.
ವೃಷಭ ಹಲವು ಬಗೆಯ ಆರ್ಥಿಕ ಒತ್ತಡಗಳಿಂದ, ಅನಾರೋಗ್ಯ ಮತ್ತು ಶತ್ರು ಪೀಡೆಗಳಿಂದ ಬೇಸತ್ತಿರುವ ನಿಮಗೆ ವರ್ಷದ ಉತ್ತರಾರ್ಧದಲ್ಲಿ ಸತ್ಫಲಗಳನ್ನು ಅನುಭವಿಸುವ ಯೋಗವಿದೆ. ಅಕ್ಟೋಬರ್ ನಂತರ ಅವಿವಾಹಿತರಿಗೆ ವಿವಾಹ ಭಾಗ್ಯ. ಪಿತ್ರಾರ್ಜಿತವಾಗಿ ಬಂದ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಕೃಷಿ ಕ್ಷೇತ್ರದಲ್ಲಿ ಇರುವವರಿಗೆ ಅಧಿಕ ಲಾಭ, ತರಕಾರಿ ಮಾರಾಟಗಾರರಿಗೆ ಕುಬೇರನ ಅನುಗ್ರಹವು ಸಿಗಲಿದೆ. ಶೀತ– ಕಫದಂತಹ ಬೇನೆಯನ್ನು ನಿರ್ಲಕ್ಷಿಸಬೇಡಿ. ಮಿತ್ರ-ಶತ್ರು, ಬಂಧು-ಬಾಂಧವರಲ್ಲಿ ಯಾವುದೇ ವಿಚಾರದಲ್ಲೂ ವಿರೋಧವನ್ನು ವ್ಯಕ್ತಪಡಿಸಬೇಡಿ. ಕಾರ್ಯ ಕ್ಷೇತ್ರದಲ್ಲಿ ಶಾಂತ ಚಿತ್ತದಿಂದ ಕಾರ್ಮಿಕರ ಮಾತುಗಳನ್ನು ಆಲಿಸಿ ಸೂಕ್ತ ಕ್ರಮ ಕೈಗೊಳ್ಳುವುದು ಒಳ್ಳೆಯದು. ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮ ಮಾಡಲು ತೀರ್ಮಾನಿಸುವಿರಿ. ತಾಯಿ ರಾಜರಾಜೇಶ್ವರಿಯ ದರ್ಶನ, ಸೇವೆಯನ್ನು ಮಾಡುವುದರಿಂದ ಯಶಸ್ಸಿದೆ.
ಮಿಥುನ ಕಳೆದ ವರ್ಷವಿಡೀ ಸುಖದ ಸಾಗರದಲ್ಲಿ ಪ್ರಯಾಣಿಸಿದ ನೀವು ಈ ವರ್ಷವೂ ಪ್ರಯಾಣವನ್ನು ಮುಂದುವರಿಸುವಿರಿ. ಪಂಚಮದ ಗುರುವಿನ ಅನುಗ್ರಹದಿಂದಾಗಿ ಅಪೇಕ್ಷಿತ ದಂಪತಿಗಳಿಗೆ ಪುತ್ರಲಾಭ, ಇತರರಿಗೆ ಧಾರ್ವಿಕ ಕೃತ್ಯಗಳಿಂದ ಪುಣ್ಯ ಸಂಪಾದನೆ. ಎಣಿಕೆಯ ಕಾರ್ಯಗಳೆಲ್ಲ ದೈಹಿಕ ಶ್ರಮವಿಲ್ಲದೆ ಪೂರ್ಣಗೊಳ್ಳುವುದರಿಂದ ವರ್ಷದ ಮೊದಲ ಮೂರು ತಿಂಗಳು ಬಹು ಸಂತೋಷದಿಂದ ಕಳೆಯಲಿದ್ದೀರಿ. ಧನಾಗಮನಕ್ಕೇನೂ ಕೊರತೆಯಿರದು. ಆದರೆ ಸಂಗ್ರಹ ಪೂರ್ತಿ ಸೋರಿ ಹೋಗಬಹುದು. ಎಚ್ಚರಿಕೆ ಹೆಜ್ಜೆ ಹೆಜ್ಜೆಗೂ ಅಗತ್ಯವಿದೆ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಉತ್ತಮ ಪ್ರಗತಿಯಿದೆ. ಗಣಿತ ಶಿಕ್ಷಕರಿಗೆ, ಸಂಗೀತ ಸಾಧಕರಿಗೆ, ಕ್ರೀಡಾಪಟುಗಳಿಗೆ, ಚಿತ್ರಕಾರರಿಗೆ, ಪತ್ರಿಕೋದ್ಯಮಿಗಳಿಗೆ ಪುರಸ್ಕಾರಗಳನ್ನು ಪಡೆಯುವ ಕಾಲ ಒದಗಿ ಬರಲಿದೆ. ಸುಬ್ರಹ್ಮಣ್ಯನ ಕೃಪೆಗೆ ಪಾತ್ರರಾಗಿ ಇಷ್ಟಾರ್ಥಗಳನ್ನು ಸಂಪಾದಿಸಿಕೊಳ್ಳಿರಿ.
ಕಟಕ ತ್ತಲೆಯ ಪ್ರಪಂಚದಲ್ಲಿರುವ ನಿಮ್ಮ ಜೀವನಕ್ಕೆ ದೂರದಲ್ಲೊಂದು ಸುಜ್ಯೋತಿ ಕಾಣಲಿದೆ. ಮೇಲಧಿಕಾರಿಗಳ ಕಿರುಕುಳದಿಂದ ಹೊರಬರುವ ಕಾಲ ಸಮೀಪದಲ್ಲಿದೆ. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಫಲ ಸಿಗದಿದ್ದಲ್ಲಿ ದುಡುಕು ನಿರ್ಧಾರ ತೆಗೆದುಕೊಳ್ಳಬೇಡಿ. ಆಗಸ್ಟ್ ತಿಂಗಳಲ್ಲಿ ಪಿತ್ರಾರ್ಜಿತ ಆಸ್ತಿಗಳು ಅಥವಾ ಆರ್ಥಿಕ ಲಾಭಗಳು ದೊರಕಲಿವೆ. ಅಕ್ಟೋಬರ್ ತಿಂಗಳ ಕೊನೆಯಲ್ಲಿ ನೇತ್ರ ತಪಾಸಣೆ ಮಾಡಿಸಬೇಕಾದೀತು. ರೈತಾಪಿ ವರ್ಗದವರಿಗೆ, ಚಾಲಕ ವೃತ್ತಿಯವರಿಗೆ ಮತ್ತು ಕೈಗಾರಿಕೋದ್ಯಮಿಗಳಿಗೆ ದುಪ್ಪಟ್ಟು ಲಾಭ ಪಡೆಯುವ ಅವಕಾಶವಿದೆ. ತಂದೆ– ತಾಯಿಗೆ ತೀರ್ಥ ಯಾತ್ರೆ ಯೋಗವಿದೆ. ನಿಮ್ಮ ಚಾಣಾಕ್ಷತನದ ನಿರ್ಧಾರಗಳು ನಿಮ್ಮನ್ನು ಊರಿನ ತೂಕದ ವ್ಯಕ್ತಿಯನ್ನಾಗಿ ಮಾಡಲಿದೆ. ದುರ್ಗಾಪರಮೇಶ್ವರಿಯನ್ನು ಆರಾಧಿಸಿ ಶುಭ ಫಲಗಳನ್ನು ಪಡೆಯುವಿರಿ.
ಸಿಂಹ ಪಂಚಮದ ಶನಿಯಿಂದಾಗಿ ಕಷ್ಟ ಕಾರ್ಪಣ್ಯಗಳನ್ನು ಎದುರಿಸುತ್ತಿರುವ ನಿಮಗೆ ಈ ವರ್ಷವು ಮಿಶ್ರ ಫಲವನ್ನು ಕೊಡಲಿದೆ. ಆನುವಂಶಿಕವಾದ ಬಹುಕಾಲದ ಬೇಡಿಕೆಯೊಂದು ಈಡೇರುವುದರಿಂದ ಕೊಂಚ ನೆಮ್ಮದಿ ಸಿಗಲಿದೆ. ಪ್ರವಾಸ, ಪುಣ್ಯಕ್ಷೇತ್ರ ದರ್ಶನಗಳು ಜರುಗಲಿವೆ. ಪ್ರಯಾಣದಲ್ಲಿ ವಂಚನೆ, ಚೌರ್ಯ, ನಷ್ಟದ ಪ್ರಸಂಗಗಳಿದ್ದು ಎಚ್ಚರಿಕೆಯಿಂದಿರಿ. ಕಿರಾಣಿ ಅಂಗಡಿ, ಇಟ್ಟಿಗೆ, ಕಬ್ಬಿಣ, ಯಂತ್ರಸಾಮಗ್ರಿಗಳ ಮಾರಾಟ ಏರುಗತಿಯಲ್ಲಿ ನಡೆದೀತು. ವಾಹನ ಖರೀದಿಯ ನಿಮ್ಮ ಆಲೋಚನೆ ನೆರವೇರಲಿದೆ. ನೀವು ಹಿಂದೆ ಮಾಡಿದ ತಪ್ಪುಗಳು ಪುನರಾವರ್ತನೆಯಾಗದಂತೆ ಎಚ್ಚರ ವಹಿಸಿದರೆ ಲೇಸು. ವರ್ಷದ ಕೊನೆಯ ತನಕ ಭಾಗ್ಯ ವೃದ್ಧಿಯಿದ್ದರೂ ರಕ್ತಸಂಬಂಧಿ ಕಾಯಿಲೆಯ ಲಕ್ಷಣ ಕಾಣಿಸೀತು. ದಾಂಪತ್ಯದಲ್ಲಿ ನೆಮ್ಮದಿ ಕಾಪಾಡಿಕೊಳ್ಳಿ. ದೈವಚಿಂತನೆಯನ್ನು ಬಿಡದಿರಿ.
ಕನ್ಯಾ ಈ ವರ್ಷದ ಮೊದಲಾರ್ಧದಲ್ಲಿ ನೀವು ಮಾಡಿದ ಕೆಲಸಕ್ಕೆ ದುಪ್ಪಟ್ಟು ಸಂಪಾದನೆಯಾಗುವ ಯೋಗವಿದೆ. ಮಾತುಗಾರರಿಗೆ, ವಾಗ್ಮಿಗಳಿಗೆ, ಬೋಧಕ ವರ್ಗದವರಿಗೆ ವೃತ್ತಿಯಲ್ಲಿ ಮುಂಬಡ್ತಿ ಅಥವಾ ಸನ್ಮಾನಗಳು ದೊರಕಲಿದೆ. ಕೈತಪ್ಪಿ ಹೋದ ಹಣ ಕೈ ಸೇರುವುದು. ವಾತ-ಪಿತ್ಥಗಳ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ. ಕರ-ಕುಶಲ ವಸ್ತುಗಳ ತಯಾರಿಕೆಯಲ್ಲಿ ಆಸಕ್ತಿ ಹೆಚ್ಚುವುದು, ಜೊತೆಗೆ ಲಾಭವೂ ಇದೆ. ತಂದೆ-ತಾಯಿಯ ಆರೋಗ್ಯದ ಕಡೆಗೆ ಗಮನ ಕೊಡುವುದು ಅನಿವಾರ್ಯವಾಗುವುದು. ವಿದ್ಯಾರ್ಥಿಗಳಿಗೆ ಶ್ರೇಯಸ್ಸು, ಮೇಧಾಶಕ್ತಿ ಹೆಚ್ಚಲಿದೆ. ಉನ್ನತ ವ್ಯಾಸಂಗಕ್ಕೆ ವಿದೇಶಯಾನದ ಅವಕಾಶವಿದೆ. ನಿಮ್ಮ ಸರ್ವತೋಮುಖ ಅಭಿವೃದ್ಧಿಗೆ ಸೋದರ ವರ್ಗದವರ ಬೆಂಬಲ ಸಿಗಲಿದೆ. ಹನುಮ ಸಮೇತನಾದ ಶ್ರೀರಾಮನ ಪರಿವಾರವನ್ನು ಆರಾಧಿಸಿ ಶ್ರೇಯೋವಂತರಾಗಿರಿ.
ತುಲಾ ಕಳೆದ ವರ್ಷದಲ್ಲಿ ನೀವು ಅನುಭವಿಸಿದ ಸಮಸ್ತ ಸಮಸ್ಯೆಗಳಿಗೆ ಮುಕ್ತಿ ಸಿಗಲಿದೆ. ಖರ್ಚು, ವೆಚ್ಚಗಳು ವರ್ಷದ ಮೊದಲಾರ್ಧದವರೆಗೆ ಹಿಂದಿನಂತೆಯೇ ನಡೆಯಲಿವೆ. ಅಪವಾದದ ಆರೋಪ ಹೊತ್ತಿರುವ ನಿಮಗೆ ನ್ಯಾಯ ಸಿಗಲಿದೆ. ಮನೆಯಲ್ಲಿ ಮಂಗಳ ಕಾರ್ಯ ಜರುಗುವುದು. ವ್ಯಾಪಾರಿಗಳಿಗೆ ಲಾಭದಾಯಕ ಬೆಳವಣಿಗೆ. ಸೇವಕ ವರ್ಗದವರಿಗೆ, ಆರಕ್ಷಕರಿಗೆ, ತಾಂತ್ರಿಕರಿಗೆ ಉದ್ಯೋಗದಲ್ಲಿ ಸನ್ಮಾನ ಅಥವಾ ಮುಂಬಡ್ತಿ ದೊರಕಲಿದೆ. ಬಂಧು-ಬಾಂಧವರಲ್ಲಿ ತಾಳ್ಮೆಯಿಂದ ವರ್ತಿಸಿ. ಧಾರ್ಮಿಕ ವಿಚಾರದಲ್ಲಿ ಆಸಕ್ತಿ ತೋರಿದಷ್ಟೂ ಸುಖ-ಶಾಂತಿ ಹೆಚ್ಚುವುದು. ಋಣ ಬಾಧೆಯು ಕಾಡಬಹುದು. ಗೃಹ ನಿರ್ಮಾಣ ಆಲೋಚನೆಯು ಕಾರ್ಯರೂಪಕ್ಕೆ ಬರುವುದು. ಮಹಾಗಣಪತಿಯನ್ನು ಭಾವ ಪೂರ್ವಕವಾಗಿ ಪೂಜಿಸಿ ಪುಣ್ಯ ಸಂಪಾದನೆ ಮಾಡಿ.
ವೃಶ್ಚಿಕ ಶನಿಯ ಪ್ರಭಾವದಿಂದ ಜೀವನದಲ್ಲಿ ಬೇಸರಗೊಂಡಿರುವ ನಿಮಗೆ ಹಂತ ಹಂತವಾಗಿ ಜೀವನೋಲ್ಲಾಸ ಬರಲಿದೆ. ಮನದಾಳದಲ್ಲಿ ಅಡಗಿರುವ ನಿಮ್ಮ ಚಿಂತೆಯೊಂದಕ್ಕೆ ಉತ್ತರ ದೊರಕಲಿದೆ. ಅಧಿಕಾರ ವರ್ಗಕ್ಕೆ ಕೈ ಕೆಳಗಿನವರ ಸಹಕಾರವಿಲ್ಲದೆ ಕಾರ್ಯಸಾಧನೆಯಲ್ಲಿ ತಲೆತಗ್ಗಿಸುವಂತಾದೀತು. ವ್ಯಯದ ಗುರು ಶತ್ರುಗಳನ್ನು ಉಂಟು ಮಾಡಿಯಾನು. ಒಂದು ಹೆಜ್ಜೆ ಇಡಬೇಕಾದರೇ ಹತ್ತು ಬಾರಿ ಯೋಚನೆ ಮಾಡುವುದು ಒಳ್ಳೆಯದು. ಸಹೋದರರ ಅಥವಾ ದಾಯಾದಿಗಳ ಭಿನ್ನಾಭಿಪ್ರಾಯದಿಂದ ನ್ಯಾಯಾಲಯದ ಮೆಟ್ಟಿಲು ಹತ್ತ ಬೇಕಾಗುವುದು. ಮಡದಿ ಮಕ್ಕಳ ಆರೋಗ್ಯದಲ್ಲಿ ಗಮನ ಹರಿಸುವುದು ಅಗತ್ಯ. ಚಿನ್ನಾಭರಣ, ಮುತ್ತು-ರತ್ನಗಳ ಮಾರಾಟ ಮಾಡುವವರಿಗೆ ಬಿಡುವಿಲ್ಲದ ವ್ಯಾಪಾರವಾಗಲಿದೆ. ಆಂಜನೇಯನನ್ನು ಧ್ಯಾನಿಸಿ. ಮಾನಸಿಕ ಧೈರ್ಯ ಮೂಡುವುದು.
ಧನು ಸಾಡೇಸಾತಿನ ಬೇನೆಯಿಂದ ಬಳಲಿರುವ ನಿಮಗೆ ವರ್ಷದ ಮೊದಲಾರ್ಧದಲ್ಲಿ ಗುರುವಿನ ಅನುಗ್ರಹ ಸಿಗಲಿದೆ. ಲಾಭದ ಗುರು ಸರ್ವ ಕ್ಷೇತ್ರದಲ್ಲಿಯೂ ನಿಮ್ಮನ್ನು ವಿಜಯರನ್ನಾಗಿ ಮಾಡುತ್ತಾನೆ. ಮೀನುಗಾರರು, ಹೈನುಗಾರಿಕೆಯವರು, ಪಶು ಸಂಗೋಪನೆಯವರು ವೃತ್ತಿಯಲ್ಲಿ ಕಾಳಜಿ ವಹಿಸುವುದು ಒಳಿತು. ಧಾರ್ಮಿಕ ಕಾರ್ಯಗಳಲ್ಲಿ ಹಣ ವ್ಯಯವಾಗುವುದು. ವೈದ್ಯಕೀಯ ವೃತ್ತಿಯನ್ನು ಅನುಸರಿಸುವವರಿಗೆ ಆಯ-ವ್ಯಯ ಸಮತೋಲನದಲ್ಲಿದ್ದರೂ ಅಪವಾದದ ಭೀತಿ ಎದುರಾಗುವುದು. ಆನುವಂಶಿಕ ಆಸ್ತಿಯನ್ನು ಅನುಭವಿಸುವ ಯೋಗ ಬರಲಿದೆ. ಶತ್ರುಗಳು ಮಿತ್ರರಾಗಲು ಬಯಸಿ ಬರುತ್ತಾರೆ. ಲಾಟರಿಯಂತಹ ಯೋಜನೆಗಳು ಕಣ್ಣಾ-ಮುಚ್ಚಾಲೆಯಾಟ ನಡೆಸಿದರೂ ನಿಮಗೆ ಜಯವಿದೆ. ‘ಸತ್ಯ ವಾಕ್ಯಕೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು’ ಎಂಬ ಮಾತನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು
ಮಕರ ಕಳೆದ ಸಂವತ್ಸರದಂತೆಯೇ ಈ ಸಂವತ್ಸರದಲ್ಲೂ ಕೂಡ ಸುಖ-ದುಃಖದ ಸಮ ಫಲವನ್ನು ಹೊಂದುವಿರಿ. ಉದ್ಯೋಗಾನ್ವೇಷಿಗಳಿಗೆ ವಿದ್ಯೆಗೆ ತಕ್ಕಂತೆ ಉದ್ಯೋಗಗಳು ದೊರಕಲಿವೆ. ಉದ್ಯೋಗಸ್ಥರಿಗೆ ವಿದೇಶ ಪ್ರವಾಸದ ಯೋಗವಿದೆ. ಉಪಾಹಾರ ಮಂದಿರ, ತಂಪುಪಾನೀಯದ ಅಂಗಡಿಯವರಿಗೆ ಈ ಸಂವತ್ಸರವು ಸುಗ್ಗಿ ಹಬ್ಬದಂತಾಗುವುದು. ಗುತ್ತಿಗೆದಾರರಿಗೆ ಬಿಡುವಿಲ್ಲದಂತಾದೀತು. ಜೂನ್– ಜುಲೈನಲ್ಲಿ ಕನ್ಯಾನ್ವೇಷಿಗಳಿಗೆ ಸುಸಮಯವಿದ್ದು ವಿವಾಹ ನಿಶ್ಚಿತಾರ್ಥ ನಡೆಯುವುದು. ಬಂಧುಗಳ ಸಲಹೆ-ಸಹಕಾರ ನೂತನ ಕಾರ್ಯಗಳಿಗೆ ಉತ್ತಮ ಫಲ ಕೊಡುವುದು. ಶ್ರಮ ಜೀವಿಗಳಾದ ನಿಮಗೆ ಗುರು-ಹಿರಿಯರ ಆಶೀರ್ವಾದವಿದ್ದರೆ ಶ್ರಮಕ್ಕೆ ತಕ್ಕ ಪ್ರತಿಫಲವನ್ನು ಅಪೇಕ್ಷಿಸಬಹುದು. ರಾಜಕೀಯ ವ್ಯಕ್ತಿಗಳಿಗೆ ಜನ ಬೆಂಬಲ ಸಿಗುವುದು. ದಾನ ಧರ್ಮದ ಮಾರ್ಗದಲ್ಲಿ ನಡೆಯುವುದರಿಂದ ಗುರಿ ತಲುಪಬಹುದು.
ಕುಂಭ ನಿಮಗೀವರ್ಷ ಸ್ವರ್ಗಕ್ಕೆ ಮೂರೇ ಗೇಣು ಎಂಬುವ ಅನುಭವ ಸಿಗಲಿದೆ. ಸಾಹಿತಿಗಳಿಗೆ, ಸಂಶೋಧಕರಿಗೆ ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಗೌರವ ಸಿಗಲಿದೆ. ಕಟ್ಟಡ ರಚನೆಯಂತಹ ಕಾರ್ಯಗಳು ಭರದಿಂದ ಸಾಗಲಿವೆ. ವ್ಯವಹಾರದಲ್ಲಿ ಲಾಭವಿದ್ದು ಶತ್ರುಗಳ ಕಾಟದಿಂದ ಬಂದ ಲಾಭ ಲಂಚಕೋರರ ಪಾಲಾಗಲಿದೆ. ಸಿನಿಮಾ ನಟರಿಗೆ ಈ ವರ್ಷವು ಹಲವು ಪಾಠವನ್ನು ಕಲಿಸಿ ಗೌರವಾನ್ವಿತ ವ್ಯಕ್ತಿಯನ್ನಾಗಿ, ಕೀರ್ತಿವಂತನನ್ನಾಗಿ, ಧನವಂತನನ್ನಾಗಿ ಮಾಡುವುದು. ಚಿನ್ನಾಭರಣ, ಭೂಮಿ, ವಾಹನ ಖರೀದಿಗೆ ಈ ವರ್ಷ ಸುಸಮಯ. ಹಿಂದಿನ ಕುಟುಂಬ ಕಲಹಗಳು ರಾಜಿಯಲ್ಲಿ ತೀರ್ಮಾನಗೊಳ್ಳಲಿವೆ. ಸ್ನೇಹಪರ ಸ್ವಭಾವದಿಂದಾಗಿ ವೈಯಕ್ತಿಕ ಸ್ಥಾನ– ಮಾನ ಲಭಿಸುವುದು. ಊರಿನ ಅಭಿವೃದ್ಧಿಗೆ ನಿಮ್ಮಿಂದ ಅಡಿಪಾಯ ಹಾಕುವಂತಹ ಕೆಲಸ ಕಾರ್ಯಗಳು ಜರುಗುವವು. ಸುಬ್ರಹ್ಮಣ್ಯನನ್ನು ಆರಾಧಿಸಿ ಇಷ್ಟಾರ್ಥಗಳನ್ನು ಪಡೆಯಿರಿ.
ಮೀನ ಸುಖದ ಅಂಗಳದಲ್ಲಿರುವ ನೀವು ಈ ವರ್ಷದ ಅರ್ಧದವರೆಗೆ ರಾಜಪುತ್ರರಂತೆ ಇರುವಿರಿ. ಗೃಹೋಪಯೋಗಿ ವಸ್ತುಗಳ ಮಾರಾಟಗಾರರಿಗೆ, ಶಿಲ್ಪಿಗಳಿಗೆ, ಸಮುದ್ರೋತ್ಪನ್ನಗಳ ಮಾರಾಟಗಾರರಿಗೆ ವೃತ್ತಿಯಲ್ಲಿ ಲಾಭ. ಸಂಘ– ಸಂಸ್ಥೆಗಳ ಪದಾಧಿಕಾರ ದೊರಕುವುದು. ಸುಖ ಸಂಪತ್ತಿನ ಜೊತೆಯಲ್ಲಿ ಚಿಂತೆಯು ನಿದ್ದೆಗೆಡಿಸುತ್ತದೆ. ಪಿತೃವರ್ಗದಲ್ಲಿ ಆರೋಗ್ಯ ನಷ್ಟದಿಂದಾಗಿ ಆಸ್ಪತ್ರೆಯ ತಿರುಗಾಟದ ಕ್ಲೇಶ. ಅವಿವಾಹಿತರಿಗೆ ಕಂಕಣ ಭಾಗ್ಯ. ಸೇವಕ ವರ್ಗದವರಿಗೆ ಆದಾಯ ಹೆಚ್ಚಿದಂತೆ ಕೆಲಸದ ವಿಸ್ತೀರ್ಣವೂ ಹೆಚ್ಚುವುದು. ಪರ್ವತಾರೋಹಿಗಳಿಗೆ, ಕ್ರೀಡಾಪಟುಗಳಿಗೆ, ಸಾಧನೆಯ ಅವಕಾಶ ಸಿಕ್ಕಿದರೂ ಅನಾರೋಗ್ಯ ಎದುರಾಗಬಹುದು. ವೃತ್ತಿಗಿಂತ ಪ್ರವೃತ್ತಿಯಲ್ಲಿ ಆಸಕ್ತಿ ಹೆಚ್ಚಲಿದೆ. ಮಕ್ಕಳ ವಿದ್ಯಾಭ್ಯಾಸದ ಪ್ರಗತಿಯಿಂದ ಹರ್ಷ. ಮಲ್ಲಿಕಾರ್ಜುನನ ಸೇವೆಯಿಂದ ಆರೋಗ್ಯ ಭಾಗ್ಯ ಮತ್ತು ನೆಮ್ಮದಿ. | 2 |
ಕರೀನಾಗೆ ತನ್ನ ಮಗ ತೈಮೂರ್'ನನ್ನು ಕ್ರಿಕೆಟರ್'ನನ್ನಾಗಿ ಮಾಡುವ ಆಸೆಯಂತೆ
Highlights
ಸಾಮಾಜಿಕ ಜಾಲತಾಣಗಳಲ್ಲಿ ಸೈಪ್-ಕರೀನಾ ಮಗು ತೈಮೂರ್ ಸತ್ತೆ ಹೋಗಲಿ ಎಂಬರ್ಥದಲ್ಲೆಲ್ಲಾ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದು ಈಗ ಇತಿಹಾಸ.
ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ್ದ ಸೈಪ್ ಅಲಿಖಾನ್ ಹಾಗೂ ಕರೀನಾ ಕಪೂರ್ ಖಾನ್ ದಂಪತಿಗೆ ಗಂಡು ಮಗು ಜನಿಸಿದ್ದು, ಆ ಮಗುವಿಗೆ ತೈಮೂರ್ ಅಲಿಖಾನ್ ಪಟೌಡಿ ಎಂದು ಹೆಸರಿಟ್ಟಿದ್ದು ಗೊತ್ತೇ ಇದೆ.
ಆನಂತರದ ದಿನಗಳಲ್ಲಿ ತಾರಾಜೋಡಿಯು ತಮ್ಮ ಮಗುವಿಗೆ ಭಾರತದ ಮೇಲೆ ದಂಡೆತ್ತಿ ಬಂದ ದಾಳಿಕೋರ ತೈಮೂರ್ ಹೆಸರಿಟ್ಟಿದ್ದು ಸಾಕಷ್ಟು ವಿವಾದಕ್ಕೆ ಎಡೆಮಾಡಿಕೊಟ್ಟಿದ್ದು ಮಾತ್ರ ವಿಪರ್ಯಾಸ. ತೈಮೂರ್ 14ನೇ ಶತಮಾನದಲ್ಲಿ ಭಾರತದ ಮೇಲೆ ದಂಡೆತ್ತಿ ಬಂದ ಪರ್ಶಿಯಾದ ದಾಳಿಕೋರ.
ಸಾಮಾಜಿಕ ಜಾಲತಾಣಗಳಲ್ಲಿ ಸೈಪ್-ಕರೀನಾ ಮಗು ತೈಮೂರ್ ಸತ್ತೆ ಹೋಗಲಿ ಎಂಬರ್ಥದಲ್ಲೆಲ್ಲಾ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದು ಈಗ ಇತಿಹಾಸ.
ಆದರೆ ಹೊಸ ವಿಷಯ ಏನಪ್ಪಾ ಅಂದ್ರೆ ಸೈಫ್-ಕಪೂರ್ ಜೋಡಿ ತೈಮೂರ್'ನನ್ನು ತಾತಾ ಮನ್ಸೂರ್ ಅಲಿ ಖಾನ್ ಪಟೌಡಿಯಂತೆ ಶ್ರೇಷ್ಟ ಕ್ರಿಕೆಟರ್ ಮಾಡುವ ಆಸೆಯಿದೆಯಂತೆ. ಈ ಬಗ್ಗೆ ಕರೀನಾ ತನ್ನ ತಂದೆ ರಣ್'ದೀರ್ ಕಪೂರ್ ಬಳಿ ತೈಮೂರ್'ನನ್ನು ಆತನ ತಾತನಂತೆ ಶ್ರೇಷ್ಟ ಕ್ರಿಕೆಟ್ ಆಟಗಾರರನ್ನಾಗಿ ಮಾಡುವ ಆಸೆಯನ್ನು ವ್ಯಕ್ತಪಡಿಸಿದ್ದಾರೆಂದು ಇಂಡಿಯಾ ಟುಡೇ ವರದಿ ಮಾಡಿದೆ. ಮುಂದೊಂದು ದಿನ ತೈಮೂರ್ ಬ್ಲೂ ಜೆರ್ಸಿ ತೊಟ್ಟು ಅಖಾಡಕ್ಕಿಳಿಯುತ್ತಾನಾ ಕಾಲವೇ ಉತ್ತರಿಸಬೇಕಿದೆ.
Last Updated 11, Apr 2018, 12:46 PM IST | 0 |
#Gomonster ಸವಾಲು ಸ್ವೀಕರಿಸಿದ ಅರ್ಜುನ್: Samsung Galaxy M30s ಜತೆ ಪರ್ವಾತಾರೋಹಣ WATCH LIVE TV
ಭಾರಿ ನಿರೀಕ್ಷೆ ಮೂಡಿಸಿರುವ 'ವೀಕೆಂಡ್ ವಿತ್ ರಮೇಶ್' ಮೊದಲ ಸಂಚಿಕೆ!
ಇದೀಗ ಶುರುವಾಗಲಿರುವುದು ವೀಕೆಂಡ್ ವಿತ್ ರಮೇಶ್ ಸೀಸನ್ 4. ಇದುವರೆಗಿನ 65 ಸಾಧಕರಲ್ಲಿ ಝೀ ಕನ್ನಡಕ್ಕೆ ಅತಿ ಹೆಚ್ಚು ಟಿಆರ್‌ಪಿ ಬಂದಿರುವುದು ದರ್ಶನ್ ಎಪಿಸೋಡಿಗೆ ಎಂಬ ಸಂಗತಿ ಇದೀಗ ಜಗಜ್ಜಾಹೀರಾಗಿದೆ.
ವಿಜಯ ಕರ್ನಾಟಕ | Updated:
Apr 19, 2019, 03:07PM IST
ನಾಳೆ, ಏಪ್ರಿಲ್ 20ರ ಶನಿವಾರ ರಾತ್ರಿ 9-30ಕ್ಕೆ 'ವೀಕೆಂಡ್ ವಿತ್ ರಮೇಶ್' ರಿಯಾಲಿಟಿ ಶೋ ಪ್ರಸಾರವಾಗಲಿದೆ. ಪ್ರತೀ ಶನಿವಾರ ಮತ್ತು ಭಾನುವಾರ ರಾತ್ರಿ 9-30 ರಿಂದ 10-30ರವರೆಗೆ ಝೀ ಕನ್ನಡ ವಾಹಿನಿಯಲ್ಲಿ ವೀಕೆಂಡ್ ವಿತ್ ರಮೇಶ್ ಪ್ರಸಾರವಾಗಲಿದೆ. ಮೊದಲ ಶೋನಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೆಂದ್ರ ಹೆಗ್ಗಡೆ ಕಾಣಿಸಿಕೊಳ್ಳಲಿದ್ದಾರೆ. ಅಂದರೆ, ನಾಳೆ ರಾತ್ರಿ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಧರ್ಮಸ್ಥಳದ ವೀರೆಂದ್ರ ಹೆಗ್ಗಡೆಯವರ ಸಾಧನೆಯ ಯಾನ ತೆರೆದುಕೊಳ್ಳಲಿದೆ.
ವೀಕೆಂಡ್ ವಿತ್ ರಮೇಶ್ ಶೋನ ಮೊದಲ ಸಂಚಿಕೆಗೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಬಂದಿದ್ದು, ಮುಂದಿನ ಸಂಚಿಕೆಯಲ್ಲಿ ಇಂಫೋಸಿಸ್ ಸುಧಾಮೂರ್ತಿ, ನಾರಾಯಣಮೂರ್ತಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಆ ಬಳಿಕ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ರಜನಿಕಾಂತ್ ಅವರನ್ನು ಕರೆತರುವ ಪ್ರಯತ್ನ ಜಾರಿಯಲ್ಲಿದೆ ಎನ್ನಲಾಗಿದೆ.
"ಝೀ ಕನ್ನಡ ಇವತ್ತು ಅಷ್ಟೆತ್ತರಕ್ಕೆ ಬೆಳೆದಿದೆ. ಈ ಗೆಲುವು ಆರಂಭವಾಗಿದ್ದು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಿಂದ. ಇದುವರೆಗೆ 65 ಜನ ಸಾಧಕರು ಇಲ್ಲಿಗೆ ಬಂದಿದ್ದಾರೆ. ಸಾಧಕರ ಕತೆಯನ್ನು ಸಾಧಕರಿಗೇ ಎಕ್ಸೈಟ್ ಆಗುವ ಹಾಗೆ ಹೇಳುವುದು ನಮ್ಮ ಉದ್ದೇಶ. ಇದು ನಾವೇ ಕಟ್ಟಿದ ನಮ್ಮ ಸ್ವಂತ ಶೋ. ಯಾವುದೋ ಇಂಟರ್‌ನ್ಯಾಷನಲ್ ಫಾರ್ಮಾಟ್ ಅಲ್ಲ. ಈಗ ಈ ಶೋ ಕನ್ನಡದ ಸಂಸ್ಕೃತಿಯ ಭಾಗವಾಗಿಬಿಟ್ಟಿದೆ" ಎಂದಿದ್ದಾರೆ ಜೀ ಕನ್ನಡದ ಬಿಸಿನೆಸ್ ಹೆಡ್ ರಾಘವೇಂದ್ರ ಹುಣಸೂರು.
ವೀಕೆಂಡ್ ವಿತ್ ರಮೇಶ್ ಶೋನ ಎರಡನೇ ವಾರ ನಟಿ ಪ್ರೇಮಾ ಮತ್ತು ರಾಘವೇಂದ್ರ ರಾಜ್‌ಕುಮಾರ್ ಎಪಿಸೋಡ್‌ಗಳು ಪ್ರಸಾರವಾಗಲಿವೆಯಂತೆ. ಇದೀಗ ಶುರುವಾಗಲಿರುವುದು ವೀಕೆಂಡ್ ವಿತ್ ರಮೇಶ್ ಸೀಸನ್ 4. ಇದುವರೆಗಿನ 65 ಸಾಧಕರಲ್ಲಿ ಝೀ ಕನ್ನಡಕ್ಕೆ ಅತಿ ಹೆಚ್ಚು ಟಿಆರ್‌ಪಿ ಬಂದಿರುವುದು ದರ್ಶನ್ ಎಪಿಸೋಡಿಗೆ ಎಂಬ ಸಂಗತಿ ಇದೀಗ ಜಗಜ್ಜಾಹೀರಾಗಿದೆ. ಈ ಸಂಗತಿಯನ್ನು ರಾಘವೇಂದ್ರ ಹುಣಸೂರು ಬಹಿರಂಗ ಪಡಿಸಿದ್ದಾರೆ. ಒಟ್ಟಿನಲ್ಲಿ, ಜನಮೆಚ್ಚಿದ್ದ ವೀಕೆಂಡ್ ವಿತ್ ರಮೇಶ್ ರಿಯಾಲಿಟಿ ಶೋ ಮತ್ತೆ ನಾಳೆಯಿಂದ ಪ್ರಾರಂಭವಾಗಲಿದೆ. | 0 |
ಆಸ್ಟ್ರೇಲಿಯಾದಲ್ಲೂ ಶ್ರೀಕಾಂತ್ ಚಾಂಪಿಯನ್; ಒಲಿಂಪಿಕ್ ಸಾಮ್ರಾಟನಿಗೆ ಮಣ್ಣುಮುಕ್ಕಿಸಿದ ಭಾರತೀಯ
Highlights
ಆಂಧ್ರಪ್ರದೇಶದ ಕಿದಂಬಿ ಶ್ರೀಕಾಂತ್ ವಿಶ್ವದ ಬಹುತೇಕ ದಿಗ್ಗಜರನ್ನು ಸೋಲಿಸಿದಂತಾಗಿದೆ. ಈ ಮುಂಚೆ ಸಿಂಗಾಪುರ ಮತ್ತು ಇಂಡೋನೇಷ್ಯಾ ಸೂಪರ್ ಸೀರೀಸ್ ಟೂರ್ನಿಗಳನ್ನು ಜಯಿಸಿದ್ದ ಶ್ರೀಕಾಂತ್ ಅವರು ವಿಶ್ವದ ನಂಬರ್ ಒನ್ ಆಟಗಾರ ಸೋನ್ ವ್ಯಾನ್ ಹೋ ಅವರನ್ನು ಎರಡು ಬಾರಿ ಮಣಿಸಿದ್ದಾರೆ.
ಸಿಡ್ನಿ(ಜೂನ್ 25): ಭಾರತದ ಕಿದಂಬಿ ಶ್ರೀಕಾಂತ್ ಆಸ್ಟ್ರೇಲಿಯನ್ ಓಪನ್ ಸೂಪರ್ ಸೀರೀಸ್ ಚಾಂಪಿಯನ್ ಆಗಿದ್ದಾರೆ. ಈ ಮೂಲಕ ಸತತ ಮೂರು ಸೂಪರ್ ಸೀರೀಸ್ ಟೂರ್ನಿಗಳು ಭಾರತೀಯನ ಪಾಲಾಗಿವೆ. ಇಂದು ನಡೆದ ಪುರುಷರ ಸಿಂಗಲ್ಸ್ ಫೈನಲ್'ನಲ್ಲಿ ಚೀನಾದ ಪ್ರಬಲ ಎದುರಾಳಿ ಚೆನ್ ಲೋಂಗ್ ಅವರನ್ನು 22-20, 21-16 ನೇರ ಗೇಮ್'ಗಳಿಂದ ರೋಚಕ ಗೆಲುವು ಸಾಧಿಸಿದ್ದಾರೆ. ಕೆ.ಶ್ರೀಕಾಂತ್ ಅವರ ವೃತ್ತಿಜೀವನದಲ್ಲಿ ಚೆನ್ ಲೋಂಗ್ ವಿರುದ್ಧ ಗೆಲುವು ಸಾಧಿಸಿದ್ದು ಇದೇ ಮೊದಲು. ಒಲಿಂಪಿಕ್ ಚಾಂಪಿಯನ್ ಚೆನ್ ಲೋಂಗ್ ಈ ಮೊದಲು ಆಡಿದ್ದ ಎಲ್ಲಾ ಐದು ಪಂದ್ಯಗಳಲ್ಲೂ ಜಯಭೇರಿ ಸಾಧಿಸಿದ್ದರು. ಆದರೆ, ಇತ್ತೀಚಿನ ದಿನಗಳಿಂದ ಅದ್ಭುತ ಫಾರ್ಮ್'ನಲ್ಲಿರುವ ಕಿಡಂಬಿ ಶ್ರೀಕಾಂತ್ ಅವರನ್ನ ತಡೆಯುವ ಶಕ್ತಿ ಚೆನ್ ಲೋಂಗ್'ಗಿರಲಿಲ್ಲ.
ಆಂಧ್ರಪ್ರದೇಶದ ಕಿದಂಬಿ ಶ್ರೀಕಾಂತ್ ವಿಶ್ವದ ಬಹುತೇಕ ದಿಗ್ಗಜರನ್ನು ಸೋಲಿಸಿದಂತಾಗಿದೆ. ಈ ಮುಂಚೆ ಸಿಂಗಾಪುರ ಮತ್ತು ಇಂಡೋನೇಷ್ಯಾ ಸೂಪರ್ ಸೀರೀಸ್ ಟೂರ್ನಿಗಳನ್ನು ಜಯಿಸಿದ್ದ ಶ್ರೀಕಾಂತ್ ಅವರು ವಿಶ್ವದ ನಂಬರ್ ಒನ್ ಆಟಗಾರ ಸೋನ್ ವ್ಯಾನ್ ಹೋ ಅವರನ್ನು ಎರಡು ಬಾರಿ ಮಣಿಸಿದ್ದಾರೆ. ಚೀನಾದ ಟಾಪ್ ಆಟಗಾರ ಶೀ ಯುಕಿ ಅವರನ್ನೂ ಎರಡು ಬಾರಿ ಸೋಲಿ ಪಾರಮ್ಯ ಮೆರೆದಿರುವ ಕಿಡಂಬಿ ಶ್ರೀಕಾಂತ್ ವಿಶ್ವದ ನಂಬರ್ ಒನ್ ಆಟಗಾರನಾಗುವ ನಿರೀಕ್ಷೆ ಹುಟ್ಟಿಸಿದ್ದಾರೆ.
Last Updated 11, Apr 2018, 1:10 PM IST | 2 |
ರಾಕೆಟ್ ಹುಡುಗಿ ರಿಟರ್ನ್ಸ್
Team Udayavani, Apr 19, 2018, 6:16 PM IST
ಅ
ಅ
ಅ
ಐಶಾನಿ ಶೆಟ್ಟಿ ಈಗ ಖುಷಿಯಾಗಿದ್ದಾರೆ. ಸಡನ್ ಆಗಿ ಐಶಾನಿ ಶೆಟ್ಟಿ ಅಂದರೆ ನೆನಪಾಗೋದು ಕಷ್ಟ. ಆದರೆ, “ವಾಸ್ತು ಪ್ರಕಾರ’ ಹಾಗು “ರಾಕೆಟ್’ ಚಿತ್ರಗಳನ್ನೊಮ್ಮೆ ನೆನಪಿಸಿಕೊಂಡರೆ ಐಶಾನಿ ಶೆಟ್ಟಿ ಗೊತ್ತಾಗುತ್ತಾರೆ. ಅವರಿಗೇಕೋ ಸಿನಿಮಾ “ವಾಸ್ತು’ ಸರಿಯಾಗಲಿಲ್ಲ. ಆದರೂ “ರಾಕೆಟ್’ ಏರಿದರು. ಆದರೆ, ಅವರಂದುಕೊಂಡಷ್ಟು ಎತ್ತರಕ್ಕೆ “ರಾಕೆಟ್’ ಹಾರಲಿಲ್ಲ. ಅದ್ಯಾವದನ್ನೂ ಲೆಕ್ಕಿಸದೆ, ತನ್ನ ಪಾಡಿಗೊಂದು ಕಿರುಚಿತ್ರ ನಿರ್ದೇಶಿಸಿಬಿಟ್ಟರು. ಅದೀಗ ಸದ್ದಿಲ್ಲದೆಯೇ ದಾದಾ ಸಾಹೇಬ್ ಫಾಲ್ಕೆ ಅಕಾಡೆಮಿ ಫಿಲ್ಮ್ ಫೆಸ್ಟಿವಲ್‌ಗೆ ಆಯ್ಕೆಯಾಗಿದೆ. ಹಾಗಾಗಿ, ಐಶಾನಿ ಶೆಟ್ಟಿ ಅವರಿಗೀಗ ಖುಷಿಗೆ ಪಾರವೇ ಇಲ್ಲ.
ಐಶಾನಿ ಶೆಟ್ಟಿ ಸ್ವತಃ ಕಥೆ ಬರೆದು, ಚಿತ್ರಕಥೆಯನ್ನೂ ಮಾಡಿಕೊಂಡು ನಿರ್ದೇಶಿಸಿದ ಚಿತ್ರದ ಹೆಸರು “ಕಾಜಿ’. ಕೇವಲ 17 ನಿಮಿಷದ ಈ ಕಿರುಚಿತ್ರ, ಈಗಾಗಲೇ ಕ್ಯಾಲಿಫೋರ್ನಿಯಾದಲ್ಲಿ ನಡೆದ ಕಿರುಚಿತ್ರೋತ್ಸವದಲ್ಲೂ ಆಯ್ಕೆಯಾಗಿ ಪ್ರದರ್ಶನ ಕಂಡಿದೆ. ಆ ಖುಷಿಯಲ್ಲಿದ್ದ ಐಶಾನಿ ಶೆಟ್ಟಿಗೆ, ದೆಹಲ್ಲಿಯಲ್ಲಿ ನಡೆಯುತ್ತಿರುವ 8ನೇ ದಾದಾ ಸಾಹೇಬ್ ಫಾಲ್ಕೆ ಅಕಾಡೆಮಿ ಫಿಲ್ಮ್ ಫೆಸ್ಟಿವಲ್‌ಗೆ ಆಯ್ಕೆ ಆಗಿರುವುದರಿಂದ ಎಂದಿಗಿಂತ ಖುಷಿಯಾಗಿದ್ದಾರೆ ಐಶಾನಿ ಶೆಟ್ಟಿ.
“ನನಗೆ ನಟನೆ ಜೊತೆಗೆ ಕಥೆ ಬರೆಯುವುದು, ನಿರ್ದೇಶನ ಮಾಡುವ ಬಗ್ಗೆ ಹೆಚ್ಚು ಆಸಕ್ತಿ ಇತ್ತು. ಹಾಗಾಗಿ “ಕಾಜಿ’ ಚಿತ್ರಕ್ಕೆ ನಾನೇ ಕಥೆ ಬರೆದು, ಚಿತ್ರಕಥೆ ರಚಿಸಿ ನಿರ್ದೇಶಿಸಿದ್ದೆ. ಅದೊಂದು ನೈಜ ಘಟನೆಗಳ ತುಣುಕುಗಳನ್ನೆಲ್ಲಾ ಇಟ್ಟುಕೊಂಡು ಹೆಣೆದ ಕಥೆ.
ಸಮಾಜದ ವಾಸ್ತವತೆ, ಬಡತನ, ದಾರಿದ್ರé ಹೀಗೆ ಒಂದಷ್ಟು ಸಮಾಜದೊಳಗಿರುವ ಕರಾಳ ಚಿತ್ರಣವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದೇನೆ. ಒಂದು ಕುಟುಂಬದಲ್ಲಿ ಬಡತನ ಎಂಬುದು ಹಾಸು ಹೊದ್ದು ಮಲಗಿದರೆ, ಹೇಗೆಲ್ಲಾ ಆ ಕುಟುಂಬ ಯಾತನೆ ಅನುಭವಿಸುತ್ತದೆ ಎಂಬುದನ್ನು ತೋರಿಸಿದ್ದೇನೆ. ಹಿತ ಚಂದ್ರಶೇಖರ್ ಮುಖ್ಯ ಪಾತ್ರಧಾರಿ. ಅವರ ಜೊತೆ ಮಧುರ ಚನ್ನಿಗ ಸುಬ್ಬಣ್ಣ ಮತ್ತು ಇಂಚರ ಎಂಬ ಮಕ್ಕಳು ಕೂಡ ಮುಖ್ಯವಾಗಿ ಕಾಣಿಸಿಕೊಂಡಿದ್ದಾರೆ. ಕನಕಪುರ ಸುತ್ತಮುತ್ತ ಸುಮಾರು ಮೂರು ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇನೆ ಎಂದು ವಿವರ ಕೊಡುತ್ತಾರೆ ನಿರ್ದೇಶಕಿ ಐಶಾನಿ ಶೆಟ್ಟಿ. ಚಿತ್ರಕ್ಕೆ ಪ್ರೀತಂ ತಗ್ಗಿನ ಮನೆ ಛಾಯಾಗ್ರಹಣವಿದೆ. “ಒಂದು ಮೊಟ್ಟೆಯ ಕಥೆ’ ಚಿತ್ರಕ್ಕೆ ಸಂಗೀತ ನೀಡಿದ್ದ ಮಿದುನ್ ಮುಕುಂದನ್ ಈ ಚಿತ್ರಕ್ಕೂ ಸಂಗೀತ ನೀಡಿದ್ದಾರೆ.
ಎಲ್ಲವೂ ಸರಿ, ಐಶಾನಿ ಶೆಟ್ಟಿ ಯಾಕೆ ಇಷ್ಟು ದಿನ ಸುದ್ದಿಯೇ ಇರಲಿಲ್ಲ? ಈ ಪ್ರಶ್ನೆಗೆ, ಪರೀಕ್ಷೆ ಎಂಬ ಉತ್ತರ ಕೊಡುತ್ತಾರೆ ಅವರು. ಅಂತಿಮ ವರ್ಷದ ಮಾಸ್ಟರ್ ಡಿಗ್ರಿ ಪರೀಕ್ಷೆ ಗುರುವಾರ (ಇಂದು) ಮುಗಿಯಲಿದ್ದು, ಐಶಾನಿ ಶೆಟ್ಟಿ, ಇನ್ನು ಮುಂದೆ ಫ್ರೀ ಬರ್ಡ್. “ಪರೀಕ್ಷೆ ಇದ್ದ ಕಾರಣ, ಚಿತ್ರರಂಗದಿಂದ ದೂರ ಇರಬೇಕಾಗಿ ಬಂತು. ಈಗ ಪರೀಕ್ಷೆ ಮುಗಿದಿರುವುದರಿಂದ ಒಂದಷ್ಟು ಕಥೆಗಳು ಹುಡುಕಿ ಬರುತ್ತಿವೆ. ಕಥೆ ಕೇಳುತ್ತಿದ್ದೇನೆ. ಈ ಮಧ್ಯೆ “ನಡುವೆ ಅಂತರವಿರಲಿ’ ಎಂಬ ಚಿತ್ರದಲ್ಲಿ ನಟಿಸಿದ್ದೇನೆ. ಕಥೆ ಚೆನ್ನಾಗಿದ್ದರಿಂದ ನಟಿಸಿದೆ. ಆ ಚಿತ್ರಕ್ಕೆ ಪ್ರಖ್ಯಾತ್ ಎಂಬ ಹೊಸ ಪ್ರತಿಭೆ ಹೀರೋ. ರವೀನ್ ನಿರ್ದೇಶನ ಮಾಡಿದ್ದಾರೆ. ಜೂನ್ ಹೊತ್ತಿಗೆ ಈ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ’ ಎನ್ನುತ್ತಾರೆ ಐಶಾನಿ.
ಅದೆಲ್ಲಾ ಓಕೆ, ನಟನೆ ಜೊತೆಗೆ ನಿರ್ದೇಶನವೂ ಮುಂದುವರೆಯುತ್ತಾ? ಎಂಬ ಪ್ರಶ್ನೆ ಬರಬಹುದು. ಅದನ್ನು ಇಷ್ಟಕ್ಕೆ ಬಿಡಲು ಸಾಧ್ಯವೇ? ಎಂಬ ಉತ್ತರ ಪ್ರಶ್ನೆಯ ರೂಪದಲ್ಲಿ ಕೇಳಿಬರುತ್ತದೆ. ಅವರಿಗೆ ಕಥೆ ಬರೆಯೋದು, ನಿರ್ದೇಶನ ಮಾಡೋದು ಅಂದರೆ ಇಷ್ಟ. ಕ್ರಿಯೇಟಿವ್ ಫೀಲ್ಡ್‌ನಲ್ಲಿ ಏನಾದರೊಂದು ಸಾಧನೆ ಮಾಡುವ ಬಯಕೆ ಅವರದು. “ನಿರ್ದೇಶನ ಸುಲಭವಲ್ಲ. ಅಲ್ಲಿ ಕಲಿಯುವುದು ತುಂಬಾ ಇದೆ. ಕನ್ನಡದಲ್ಲಿ ಮಹಿಳಾ ನಿರ್ದೇಶಕರು ಕಡಿಮೆ. ಮುಂದೆ ಆ ಬಗ್ಗೆಯೂ ಗಮನಹರಿಸುತ್ತೇನೆ’ ಎನ್ನತ್ತಾರೆ ಐಶಾನಿ.
ಇನ್ನೂ ವಿವಾಹವಾಗಿಲ್ಲವೇ? ಇಂದೇ ಕನ್ನಡ ಮ್ಯಾಟ್ರಿಮನಿಯಲ್ಲಿ ನೋಂದಾಯಿಸಿ - ನೋಂದಣಿ ಉಚಿತ!
Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.
To report any comment you can email us at udayavani.response@manipalgroup.info . We will review the request and delete the comments. | 0 |
“ಉದಯವಾಣಿ’ ಮತ್ತು ಮಂಡಳಿ ಒಂದು ಕುಟುಂಬದಂತೆ
Team Udayavani, Jul 4, 2018, 11:50 AM IST
ಅ
ಅ
ಅ
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು “ಉದಯವಾಣಿ’ ಪತ್ರಿಕೆ ಮಂಗಳವಾರ ಅಭಿನಂದಿಸಿತು. ಪತ್ರಿಕೆಯ ಬೆಂಗಳೂರು ಆವೃತ್ತಿಯ ಮಾರುಕಟ್ಟೆ ವಿಭಾಗದ ಸಹ ಉಪಾಧ್ಯಕ್ಷ ಅನಂತಕೃಷ್ಣ ಪೇಟ ತೊಡಿಸಿ, ಶಾಲು ಹೊದಿಸಿ ಸನ್ಮಾನಿಸಿದರು. ಅಧ್ಯಕ್ಷ ಎಸ್.ಎ.ಚಿನ್ನೇಗೌಡ, ಉಪಾಧ್ಯಕ್ಷರಾದ ಕೆ. ಮಂಜು, ಶಿಲ್ಪಾ ಶ್ರೀನಿವಾಸ್, ಕಾರ್ಯದರ್ಶಿ ಭಾ.ಮ.ಹರೀಶ್, ಖಜಾಂಚಿ ಕೆ.ಎಂ.ವೀರೇಶ್ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ನಂತರ ಮಾತನಾಡಿದ ಮಂಡಳಿ ಎಸ್.ಎ.ಚಿನ್ನೇಗೌಡ, “ಉದಯವಾಣಿ’ ಪತ್ರಿಕೆಯು ಕನ್ನಡ ಚಿತ್ರರಂಗಕ್ಕೆ ನೀಡುತ್ತಿರುವ ಪ್ರೋತ್ಸಾಹವನ್ನು ಯಾವತ್ತೂ ಮರೆಯುವಂತಿಲ್ಲ. ಸಿನಿಮಾಗಳ, ಹೊಸ ಪ್ರತಿಭೆಗಳ ಬೆನ್ನುತಟ್ಟುತ್ತಿದೆ. ಪತ್ರಿಕೆ ಹಾಗೂ ಮಂಡಳಿ ನಡುವೆ ಅವಿನಾಭಾವ ಸಂಬಂಧವಿದೆ. ಅನೇಕ ವರ್ಷಗಳಿಂದ ಮಂಡಳಿ ಹಾಗೂ ಪತ್ರಿಕೆ ಒಂದು ಕುಟುಂಬದಂತೆ ಕಾರ್ಯನಿರ್ವಹಿಸುತ್ತಾ ಬಂದಿದೆ.
ಮಂಡಳಿಯ ನಿರ್ಧಾರವನ್ನು ಪತ್ರಿಕೆ ಬೆಂಬಲಿಸುತ್ತಾ, ಜನರಿಗೆ ತಲುಪಿಸಿದೆ. ಮುಂದೆಯೂ ಅದು ಮುಂದುವರಿಯುತ್ತದೆ ಎಂಬ ವಿಶ್ವಾಸ ನನಗಿದೆ. ಕುಟುಂಬ ಎಂದ ಮೇಲೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು, ಗೊಂದಲಗಳು ಸಹಜ. ಅವೆಲ್ಲವನ್ನು ಸೌಹಾರ್ದಯುತವಾಗಿ ಮಾತುಕತೆಯ ಮೂಲಕ ಬಗೆಹರಿಸಿಕೊಂಡು ಮುಂದುವರಿಯೋಣ’ ಎಂದರು.
ಉಪಾಧ್ಯಕ್ಷರಾದ ಕೆ.ಮಂಜು ಮಾತನಾಡಿ, ಪತ್ರಿಕೆ ಅಂದಿನಿಂದ ಇಂದಿನವರೆಗೆ ಚಿತ್ರರಂಗಕ್ಕೆ ಬೆಂಬಲವಾಗಿದೆ. ಇವತ್ತು ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರು ಕಷ್ಟದಲ್ಲಿದ್ದಾರೆ, ಸಿನಿಮಾಗಳು ಗೆಲ್ಲುತ್ತಿಲ್ಲ. ಹೀಗಿರುವಾಗ ಪತ್ರಿಕೆ ನಿರ್ಮಾಪಕರಿಗೆ, ಕನ್ನಡ ಸಿನಿಮಾಗಳಿಗೆ ಮತ್ತಷ್ಟು ಪ್ರೋತ್ಸಾಹ ನೀಡಿ ಚಿತ್ರರಂಗವನ್ನು ಬೆಳೆಸಬೇಕು ಎಂದರು. ಕಾರ್ಯದರ್ಶಿ ಭಾ.ಮ. ಹರೀಶ್, ಖಜಾಂಚಿ ಕೆ.ಎಂ.ವೀರೇಶ್ ಕೂಡಾ ಪತ್ರಿಕೆ ಹಾಗೂ ಮಂಡಳಿಯ ಸಂಬಂಧದ ಬಗ್ಗೆ ಮಾತನಾಡಿದರು.
ಇನ್ನೂ ವಿವಾಹವಾಗಿಲ್ಲವೇ? ಇಂದೇ ಕನ್ನಡ ಮ್ಯಾಟ್ರಿಮನಿಯಲ್ಲಿ ನೋಂದಾಯಿಸಿ - ನೋಂದಣಿ ಉಚಿತ!
Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.
To report any comment you can email us at udayavani.response@manipalgroup.info . We will review the request and delete the comments. | 0 |
ಕ್ಷಣಾರ್ಧದಲ್ಲಿ ತಲೆನೋವು ನಿವಾರಿಸುವ ಮನೆಮದ್ದುಗಳು
Wellness
|
Updated: Tuesday, April 10, 2018, 13:11 [IST]
ತಲೆನೋವಿನ ಸಮಸ್ಯೆಯು ಯಾರಿಗೂ ಬೇಡ ಎನ್ನುವುದು ಅನುಭವಿಸಿದ ಪ್ರತಿಯೊಬ್ಬರ ಬಾಯಿಯಿಂದಲೂ ಬರುವಂತಹ ಮಾತು. ಮಕ್ಕಳಿಂದ ಹಿಡಿದು ವಯಸ್ಕರ ತನಕ ಪ್ರತಿಯೊಬ್ಬರು ತಲೆನೋವಿನ ಸಮಸ್ಯೆಗೆ ಒಂದಲ್ಲಾ ಒಂದು ದಿನ ಒಳಗಾಗಿರುವರು. ಇಂತಹ ಸಮಸ್ಯೆಗೆ ನಾವು ಹೋಗಿ ತೆಗೆದುಕೊಳ್ಳುವುದು ಮಾತ್ರೆಗಳನ್ನು. ಆದರೆ ಈ ಮಾತ್ರೆಗಳು ನಿರಂತರವಾಗಿ ನಮ್ಮ ದೇಹದೊಳಗೆ ಹೋದರೆ ಆಗ ಅದರಿಂದ ಬೇರೆಯೇ ರೀತಿಯ ಪರಿಣಾಮಗಳು ನಮ್ಮ ಮೇಲಾಗುವುದು.
ತಲೆನೋವಿನಲ್ಲೂ ಹಲವಾರು ವಿಧಗಳು ಇವೆ. ತಲೆನೋವು ಕೆಲವೊಂದು ಸಲ ಕುತ್ತಿಗೆ, ಭುಜಗಳು ಮತ್ತು ತಲೆಬುರುಡೆ ಮೇಲೆ ಬೀಳುವ ಒತ್ತಡದಿಂದ ಬರುವುದು. ತಲೆನೋವಿನ ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುವುದು. ಕೆಫಿನ್, ಆಲ್ಕೋಹಾಲ್ ಮತ್ತು ಕೃತಕ ಸಿಹಿ ಇರುವಂತಹ ಆಹಾರ ಕಡೆಗಣಿಸಿದರೆ ತುಂಬಾ ಒಳ್ಳೆಯದು.
ತಲೆನೋವಿಗೊಳಗಾಗಿದ್ದರೆ ಆಗ ನೀವು ಟಿವಿ, ಮೊಬೈಲ್ ಮತ್ತು ಕಂಪ್ಯೂಟರ್ ನಿಂದ ದೂರವಿರಬೇಕು. ಈ ಸಾಧನಗಳು ನಿಮ್ಮ ತಲೆನೋವನ್ನು ಮತ್ತಷ್ಟು ಹೆಚ್ಚು ಮಾಡುವುದು. ಸರಿಯಾದ ಸಮಯದಲ್ಲಿ ಆಹಾರ ಸೇವನೆ ಮಾಡಿಕೊಂಡು, ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯಬೇಕು. ಆದರೆ ತಲೆನೋವಿಗೆ ಇರುವಂತಹ ಕೆಲವೊಂದು ಮನೆಮದ್ದುಗಳನ್ನು ನಿಮಗೆ ಈ ಲೇಖನ ಮೂಲಕ ತಿಳಿಸಿಕೊಡಲಾಗಿದೆ...
ಶುಂಠಿ
ಶುಂಠಿಯಲ್ಲಿ ಪ್ರಭಾವಿಯಾಗಿರುವ ಜಿಂಜರೋಲ್ ಎನ್ನುವುದು ಔಷಧೀಯ ಗುಣ ಹೊಂದಿದೆ. ಇಷ್ಟು ಮಾತ್ರವಲ್ಲದೆ ಇದರಲ್ಲಿ ಉರಿಯೂತ ಶಮನಕಾರಿ ಮತ್ತು ಆ್ಯಂಟಿಆಕ್ಸಿಡೆಂಟ್ ಸಮೃದ್ಧವಾಗಿದೆ. ಶುಂಠಿಯು ತಲೆನೋವಿಗೆ ತುಂಬಾ ಪರಿಣಾಮಕಾರಿ ಔಷಧಿ. ಯಾಕೆಂದರೆ ಇದರಲ್ಲಿ ಇರುವ ಉರಿಯೂತ ಶಮನಕಾರಿ ಗುಣವು ತಲೆಯಲ್ಲಿನ ರಕ್ತನಾಳಗಳ ಉರಿಯೂತ ಕಡಿಮೆ ಮಾಡುವುದು. ಬಿಸಿನೀರಿಗೆ ಶುಂಠಿ ಹಾಕಿ, ಅದನ್ನು ಸೋಸಿಕೊಂಡು ಕುಡಿಯಿರಿ. ಶುಂಠಿ ರಸ ಮತ್ತು ಲಿಂಬೆರಸವನ್ನು ಸಮಪ್ರಮಾಣದಲ್ಲಿ ಬೆರೆಸಿಕೊಂಡು ಕುಡಿಯಿರಿ. ದಿನದಲ್ಲಿ ಒಂದು ಅಥವಾ ಎರಡು ಸಲ ಇದನ್ನು ಕುಡಿಯಿರಿ.
ಪುದೀನಾ ಎಣ್ಣೆ
ತಲೆನೋವಿಗೆ ಕಾರಣವಾಗಿರುವಂತಹ ಕಟ್ಟಿದ ರಕ್ತನಾಳಗಳನ್ನು ಪುದೀನಾ ಎಣ್ಣೆಯು ತೆರೆಯುವುದು. ಇದರಲ್ಲಿ ಇರುವಂತಹ ಮೆಂಥಾಲ್ ದೇಹದಲ್ಲಿ ಸರಿಯಾಗಿ ರಕ್ತಸಂಚಾರವಾಗಲು ನೆರವಾಗುವುದು. ಪುದೀನಾ ಎಣ್ಣೆಯಲ್ಲಿ ಇರುವಂತಹ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಜೀರ್ಣಕ್ರಿಯೆ ಸಮಸ್ಯೆಯ ನಿವಾರಣೆ ಮಾಡುವುದು. ಮೂರು ಹನಿ ಪುದೀನಾ ಎಣ್ಣೆ, ಒಂದು ಚಮಚ ಬಾದಾಮಿ ಎಣ್ಣೆ ಮಿಶ್ರಣ ಮಾಡಿಕೊಂಡು ಅದನ್ನು ಹಣೆ ಮತ್ತು ಕುತ್ತಿಗೆಗೆ ಭಾಗಕ್ಕೆ ಸರಿಯಾಗಿ ಮಸಾಜ್ ಮಾಡಿ. ಜಜ್ಜಿಕೊಂಡು ಪುದೀನಾ ಎಲೆಗಳನ್ನು ಹಣೆಗೆ ಹಚ್ಚಿಕೊಳ್ಳಬಹುದು.
ಲ್ಯಾವೆಂಡರ್ ಎಣ್ಣೆ
ಲ್ಯಾವೆಂಡರ್ ಎಣ್ಣೆಯ ಸುಗಂಧವು ತಲೆನೋವು ನಿವಾರಿಸುವುದು. ಇದು ಮೆದುಳಿನ ಕ್ರಿಯೆ, ನಿದ್ರೆ ಸುಧಾರಿಸುವುದು, ಗಾಯ ಗುಣಪಡಿಸುವುದು, ಚರ್ಮದ ಬಣ್ಣ ಮರಳಿ ತರುವುದು, ಮಧುಮೇಹದ ಸಮಸ್ಯೆ ಕಡಿಮೆ ಮಾಡಿ, ನೋವು ನಿವಾರಿಸುವುದು. ಎರಡು ಹನಿ ಲ್ಯಾವೆಂಡರ್ ಎಣ್ಣೆಯನ್ನು ಎರಡು ಕಪ್ ಕುದಿಯುವ ನೀರಿಗೆ ಹಾಕಿಕೊಂಡು ಅದರ ಹಬೆ ಉಸಿರಿನ ಮೂಲಕ ಎಳೆದುಕೊಳ್ಳಿ. ಮೂರು ಚಮಚ ಪುದೀನಾ ಎಣ್ಣೆ, ಬಾದಾಮಿ ಎಣ್ಣೆ ಅಥವಾ ಆಲಿವ್ ತೈಲವನ್ನು ಮಿಶ್ರಣ ಮಾಡಿ ಕೊಂಡು ತಲೆಗೆ ಮಸಾಜ್ ಮಾಡಿಕೊಳ್ಳಿ.
ಲವಂಗ
ಶಮನ ನೀಡುವುದು ಮತ್ತು ನೋವು ನಿವಾರಣೆ ಮಾಡುವ ಮೂಲಕ ಲವಂಗವನ್ನು ತಲೆನೋವು ನಿವಾರಣೆಗೆ ಬಳಸಿಕೊಳ್ಳಬಹುದು. ಲವಂಗದಿಂದ ಜೀರ್ಣಕ್ರಿಯೆ ಸುಧಾರಿಸುವುದು, ಕ್ಯಾನ್ಸರ್ ವಿರುದ್ಧ ಹೋರಾಗುವುದು, ಯಕೃತ್ ನ್ನು ರಕ್ಷಿಸುವುದು, ಪ್ರತಿರೋಧಕ ಶಕ್ತಿ ಹೆಚ್ಚಿಸುವುದು ಮತ್ತು ಮಧುಮೇಹ ನಿಯಂತ್ರಣದಲ್ಲಿಡುವುದು. ಎರಡು ಹನಿ ಲವಂಗದ ಎಣ್ಣೆಗೆ ಒಂದು ಚಮಚ ತೆಂಗಿನೆಣ್ಣೆ ಮತ್ತು ಕಲ್ಲುಪ್ಪು ಹಾಕಿಕೊಳ್ಳಿ. ಇದರಿಂದ ತಲೆ ಹಾಗೂ ಹಣೆಗೆ ಮಸಾಜ್ ಮಾಡಿಕೊಳ್ಳಿ.
ತುಳಸಿ ಎಲೆಗಳು
ತಲೆನೋವು ನಿವಾರಣೆ ಮಾಡುವಲ್ಲಿ ತುಳಸಿ ಎಲೆಗಳು ಮತ್ತೊಂದು ಪರಿಣಾಮಕಾರಿ ನೈಸರ್ಗಿಕ ಸಾಮಗ್ರಿ. ಸುವಾಸನೆಯುಳ್ಳ ಈ ಎಲೆಯನ್ನು ತಲೆನೋವಿಗೆ ಬಳಸಬಹುದು ಮತ್ತು ಇದರಲ್ಲಿ ಸಂಕೋಚನ ಗುಣವಿದೆ.
ತುಳಸಿ ಎಲೆಗಳ ಎಣ್ಣೆಯು ಸ್ನಾಯುಗಳಿಗೆ ಆರಾಮ ನೀಡುವುದು ಮತ್ತು ಒತ್ತಡದಿಂದ ಆಗಿರುವಂತಹ ತಲೆನೋವು ನಿವಾರಿಸಲು ಪ್ರಮುಖ ಪಾತ್ರ ವಹಿಸುವುದು. ಸ್ವಲ್ಪ ತುಳಸಿ ಎಲೆಗಳನ್ನು ಕುದಿಯುವ ನೀರಿಗೆ ಹಾಕಿಕೊಳ್ಳಿ. ಇದರ ಬಳಿಕ ನೀರನ್ನು ಸೋಸಿಕೊಳ್ಳಿ. ಸ್ವಲ್ಪ ಜೇನುತುಪ್ಪ ಬೆರೆಸಿಕೊಂಡು ಕುಡಿಯಿರಿ. ಇದರಿಂದ ಒತ್ತಡದಿಂದ ಉಂಟಾಗಿರುವ ತಲೆನೋವು ಮಾಯವಾಗುವುದು.
ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡಿ
15 ರಿಂದ 20 ನಿಮಿಷ ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡಿದರೆ ತಲೆನೋವು ಕಡಿಮೆಯಾಗುತ್ತದೆ. ಬೇಸಿಗೆಯ ಬಿಸಿಲಿಗೆ ತಲೆನೋವು ಬಂದಾಗ ಈ ರೀತಿ ಮಾಡಿದರೆ ಕೊಬ್ಬರಿ ಎಣ್ಣೆ ತಂಪು ಮಾದುವುದರ ಮೂಲಕ ತಲೆನೋವನ್ನು ಕಡಿಮೆ ಮಾಡುತ್ತದೆ.
ಬೆಳ್ಳುಳ್ಳಿ ರಸ ಕುಡಿಯಿರಿ
ಕೆಲವು ಬೆಳ್ಳುಳ್ಳಿ ತೆಗೆದುಕೊಂಡು ಅದರಿಂದ ರಸ ತೆಗೆಯಿರಿ.1 ಚಮಚದಷ್ಟು ರಸ ಕುಡಿಯಿರಿ.ಇದು ನೋವು ನಿವಾರಕದಂತೆ ಕೆಲಸಮಾಡುತ್ತದೆ ಮತ್ತು ತಲೆನೋವು ಸಂಪೂರ್ಣ ಕಡಿಮೆ ಆಗುತ್ತದೆ.
ವೀಳ್ಯದೆಲೆ ತಿನ್ನಿ
ವೀಳ್ಯದೆಲೆ ನೋವು ನಿವಾರಕ ಗುಣಗಳನ್ನು ಹೊಂದಿದೆ ಎಂದು ಪರಿಗಣಿಸಲಾಗಿದೆ.ಇದು ನಿಮಗೆ ತಲೆನೋವಿನಿಂದ ಹೊರಬರಲು ಸಹಕರಿಸುತ್ತದೆ.ಅಡಿಕೆ ಎಲೆಗಳನ್ನು ತೆಗೆದುಕೊಂಡು ಪೇಸ್ಟ್ ಮಾಡಿ ಅದನ್ನು ಹಣೆಗೆ ಹಚ್ಚಿ.ಇದರಿಂದ ನಿಮಗಿದ್ದ ತಲೆನೋವು ಖಂಡಿತ ಗುಣವಾಗುತ್ತದೆ. | 1 |
ಕೋಲ್ಕತ್ತಾ ಟೆಸ್ಟ್`ನಲ್ಲಿ ಭಾರತದ ಮೇಲುಗೈ
Highlights
ನಿನ್ನೆ 236/7 ರನ್ ಗಳಿಸಿದ್ದ ಭಾರತ ಬೆಳಗ್ಗೆ ಬ್ಯಾಟಿಂಗ್ ಮುಂದುವರೆಸಿತು. ವೇಗದ ಗತಿಯಲ್ಲಿ ರನ್ ಗಳಿಸಿದ ಸಹಾ ಅರ್ಧಶತಕ ಸಿಡಿಸಿದರು.
ಕೋಲ್ಕತ್ತಾ(ಅ.01): ಕೋಲ್ಕತ್ತಾದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ಮೇಲುಗೈ ಸಾಧಿಸಿದೆ. ಮೊದಲ ಇನ್ನಿಂಗ್ಸ್`ನಲ್ಲಿ ಭಾರತ 316 ರನ್ ಗಳಿಸಿದರೆ, ಪ್ರತಿಯಾಗಿ ಬ್ಯಾಟಿಂಗ್ ಆರಂಭಿಸಿರುವ ನ್ಯೂಜಿಲೆಂಡ್ 2ನೇ ದಿನದಾಟದಂತ್ಯಕ್ಕೆ 128 ರನ್`ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.
ನಿನ್ನೆ 236/7 ರನ್ ಗಳಿಸಿದ್ದ ಭಾರತ ಬೆಳಗ್ಗೆ ಬ್ಯಾಟಿಂಗ್ ಮುಂದುವರೆಸಿತು. ವೇಗದ ಗತಿಯಲ್ಲಿ ರನ್ ಗಳಿಸಿದ ಸಹಾ ಅರ್ಧಶತಕ ಸಿಡಿಸಿದರು. ಭಾರತ 316 ರನ್`ಗೆ ಆಲೌಟ್ ಆಯಿತು. ಬಳಿಕ ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಮತ್ತೆ ಪೆವಿಲಿಯನ್ ಪರೇಡ್ ನಡೆಸಿತು. ಭುವಿ ವೇಗದ ದಾಳಿಗೆ ತತ್ತರಿಸಿದ ನ್ಯೂಜಿಲೆಂಡ್ ದಾಂಡಿಗರು ಕ್ಋಇಸ್ ಕಚ್ಚಿ ನಿಲ್ಲಲು ಸಾಧ್ಯವಾಗಲಿಲ್ಲ. ಕರಾರುವಾಕ್ ಬೌಲಿಂಗ್ ದಾಳಿ ನಡೆಸಿದ ಭುವನೇಶ್ವರ್ ಕುಮಾರ್ 5 ವಿಕೆಟ್ ಉರುಳಿಸಿದರು.
ಸಂಕ್ಷಿಪ್ತ ಸ್ಕೋರ್:
ಭಾರತ ಮೊದಲ ಇನ್ನಿಂಗ್ಸ್ - 316
ಚೆತೇಶ್ವರ್ ಪೂಜಾರ - 87
ಅಜಿಂಕ್ಯ ರಹಾನೆ - 77
ವೃದ್ಧಿಮಾನ್ ಸಹಾ - 54
ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್ - 128/7(2ನೇ ದಿನದಾಟದಂತ್ಯಕ್ಕೆ)
ರಾಸೆ ಟೇಲರ್ - 36
ರೋಕಿ - 35
ಭುವನೇಶ್ವರ್ ಕುಮಾರ್ : 33/5
Last Updated 11, Apr 2018, 1:13 PM IST
Download App | 2 |
|
Published: Monday, July 18, 2016, 12:58 [IST]
ಏನಾದರೂ ಬರಲಿ, ಆದರೆ ತಲೆನೋವು ಮಾತ್ರ ಬರುವುದು ಬೇಡ ಎಂದು ಅದನ್ನು ಅನುಭವಿಸಿದರೂ ಹೇಳುವುದುಂಟು. ದೇಹದಲ್ಲಿ ತೀವ್ರ ನೋವನ್ನು ಉಂಟುಮಾಡುವಂತಹ ನೋವೆಂದರೆ ಅದು ತಲೆನೋವು.
ತಲೆನೋವು ಆರಂಭವಾದ ಮೇಲೆ ಯಾವುದೇ ಕೆಲಸಕಾರ್ಯವನ್ನು ಮಾಡಲು ಸಾಧ್ಯವಾಗುವುದಿಲ್ಲ ಮತ್ತು ಸರಿಯಾಗಿ ಆಹಾರ ಸೇವಿಸಲು ತಲೆನೋವು ಬಿಡಲ್ಲ. ತಲೆನೋವು ಕೆಲವೊಮ್ಮೆ ಹಾಸಿಗೆಯಿಂದ ಏಳದಂತೆ ಮಾಡಿಬಿಡುವುದುಂಟು.
ಸಾಮಾನ್ಯವಾಗಿ ತಲೆನೋವು ಕಾಣಿಸಿಕೊಳ್ಳಲು ಹಲವಾರು ಕಾರಣಗಳಿರಬಹುದು. ಜ್ವರ, ಸಾಮಾನ್ಯ ಶೀತ, ನಿಶ್ಯಕ್ತಿ, ಸರಿಯಾಗಿ ಪೋಷಕಾಂಶಗಳನ್ನು ತಿನ್ನದೆ ಇರುವುದು, ಒತ್ತಡ ಮತ್ತು ಕಂಪ್ಯೂಟರ್ ಮುಂದೆ ಹೆಚ್ಚಿನ ಸಮಯ ಕಳೆಯುವುದು ತಲೆನೋವಿಗೆ ಕಾರಣವಾಗಿರಬಹುದು. ಈ ಯಮಯಾತನೆಯಿಂದ ಮುಕ್ತಿ ಪಡೆಯಲು ನಾವು ನೋವುನಿವಾರಕ ಮಾತ್ರೆಗಳ ಮೊರೆ ಹೋಗುತ್ತೇವೆ.
ಆದರೆ ಇದು ಸ್ವಲ್ಪ ಸಮಯ ತಲೆನೋವನ್ನು ಶಮನ ಮಾಡಿದರೂ ಅದರಿಂದ ಆಗುವಂತಹ ಅಡ್ಡಪರಿಣಾಮವನ್ನು ಹೇಳಲು ಸಾಧ್ಯವಿಲ್ಲ. ಇದಕ್ಕಾಗಿಯೇ ಮನೆಯಲ್ಲೇ ಇರುವ ಸಾಮಗ್ರಿಯನ್ನು ಬಳಸಿ ಮದ್ದು ಮಾಡಿದರೆ ಅದು ಯಾವುದೇ ಅಡ್ಡ ಪರಿಣಾಮ ಬೀರಲ್ಲ. ಕೇವಲ ಒಂದು ಗಂಟೆಯಲ್ಲಿ ತಲೆನೋವನ್ನು ಓಡಿಸಬಲ್ಲ ಜ್ಯೂಸ್‌ನ ಬಗ್ಗೆ ನಾವಿಲ್ಲಿ ನಿಮಗೆ ಹೇಳಲಿದ್ದೇವೆ. ನೈಸರ್ಗಿಕವಾದ 10 ನೋವು ನಿವಾರಕ ಔಷಧಿಗಳು
ಜ್ಯೂಸ್ ತಯಾರಿಸಲು ಬೇಕಾಗುವ ಸಾಮಗ್ರಿಗಳು
*ಲಿಂಬೆಹಣ್ಣಿನ ರಸ -1/2 ಕಪ್
*ಜೇನುತುಪ್ಪ 1 ಚಮಚ
*ಲ್ಯಾವೆಂಡರ್ ಎಸೆನ್ಶಿಯಲ್ ಎಣ್ಣೆ- 1 ಚಮಚ ಜೀವ ಹಿಂಡುವ ಮೈಗ್ರೇನ್ ತಲೆ ನೋವಿಗೆ ತ್ವರಿತ ಮನೆಮದ್ದು
ಯಾವುದೇ ದೊಡ್ಡ ಆರೋಗ್ಯ ಸಮಸ್ಯೆ ಇಲ್ಲದಿದ್ದರೆ ಲಿಂಬೆರಸ, ಜೇನುತುಪ್ಪ ಮತ್ತು ಲ್ಯಾವೆಂಡರ್ ಎಸೆನ್ಶಿಯಲ್ ಎಣ್ಣೆಯು ಪರಿಣಾಮಕಾರಿಯಾಗಿ ತಲೆನೋವನ್ನು ಒಂದು ಗಂಟೆಯ ಒಳಗಡೆ ನಿವಾರಿಸುತ್ತದೆ.
ಈ ಜ್ಯೂಸ್ ನಲ್ಲಿರುವ ವಿಟಮಿನ್ ಸಿ ಮತ್ತು ಆ್ಯಂಟಿಆಕ್ಸಿಡೆಂಟ್ ರಕ್ತನಾಳದೊಳಗೆ ಪ್ರವೇಶಿಸಿ ತಲೆಯ ಭಾಗದಲ್ಲಿರುವ ಒತ್ತಡವನ್ನು ಕಡಿಮೆ ಮಾಡುವುದು. ಇದರಿಂದ ನೋವು ನಿಧಾನವಾಗಿ ತಗ್ಗುವುದು.
ಆಂಟಿಸ್ಪಾಸ್ಮೊಡಿಕ್ ಗುಣವನ್ನು ಹೊಂದಿರುವ ಮನೆಯಲ್ಲಿ ತಯಾರಿಸಿ ಈ ಜ್ಯೂಸ್ ಸಾಮಾನ್ಯ ಶೀತ ಮತ್ತು ಒತ್ತಡಕ್ಕೆ ಸಂಬಂಧಿಸಿದ ತಲೆನೋವನ್ನು ಬೇಗನೆ ನಿವಾರಿಸುವುದು.
ಜ್ಯೂಸ್ ತಯಾರಿಸುವ ಮತ್ತು ಕುಡಿಯುವ ವಿಧಾನ
*ಮೇಲೆ ತಿಳಿಸಿದಷ್ಟು ಪ್ರಮಾಣದ ಸಾಮಾಗ್ರಿಗಳನ್ನು ಒಂದು ಕಪ್‌ಗೆ ಹಾಕಿಕೊಳ್ಳಿ.
*ಇದನ್ನು ಸರಿಯಾಗಿ ಮಿಶ್ರಣ ಮಾಡಿ 1-2 ನಿಮಿಷ ಕಾಲ ಬಿಸಿ ಮಾಡಿ ಉಗುರು ಬೆಚ್ಚಗೆ ಆದ ಬಳಿಕ ತೆಗೆಯಿರಿ. ಬಳಿಕ ಜ್ಯೂಸ್ ಅನ್ನು ಕುಡಿಯಬಹುದಾಗಿದೆ.
ತಲೆನೋವು ಕಾಣಿಸಿಕೊಂಡಾಗ ಇದನ್ನು ಕುಡಿಯಿರಿ. | 1 |
ಕ್ರೀಮ್ ಬಿಸ್ಕತ್ ಮಾಡುವ ವಿಧಾನ
21-03-2018 10:11AM IST / No Comments / Posted In: Featured News , Recipies
ಬೇಕಾಗುವ ಪದಾರ್ಥಗಳು :
ಮೂರು ಚಟಾಕು ಮೈದಾ ಹಿಟ್ಟು, 4 ಚಟಾಕು ಸಕ್ಕರೆ, ನಾಲ್ಕು ಚಮಚ ಬೆಣ್ಣೆ, 2 ಕಪ್ ಕಸ್ಟರ್ಡ್ ಪೌಡರ್, ವೆನಿಲಾ ಎಸೆನ್ಸ್ ಹಾಗೂ 1 ಮೊಟ್ಟೆ.
ತಯಾರಿಸುವ ವಿಧಾನ :
ಕ್ರೀಮ್ ತಯಾರು ಮಾಡಿಕೊಳ್ಳಲು ಬೆಣ್ಣೆಯನ್ನು ಸ್ವಲ್ಪ ಬೀಸಿದ ಸಕ್ಕರೆಯೊಂದಿಗೆ ಚಿನ್ನಾಗಿ ಉಜ್ಜಿ. ಮಿಶ್ರಣಕ್ಕೆ ಸ್ವಲ್ಪ ಎಸೆನ್ಸ್ ಹಾಕಿ. ಕ್ರೀಮ್ ಸಿದ್ಧವಾಗುತ್ತದೆ. ಈ ಮಿಶ್ರಣವನ್ನು ಮೈದಾ ಹಾಗೂ ಕಸ್ಟರ್ಡ್ ಪೌಡರಿನ ಮಿಶ್ರಣಕ್ಕೆ ಬೆರೆಸಿ. ಮೊಟ್ಟೆಯೊಳಗಿನ ತಿರುಳನ್ನು ಹಾಕಿ ಚೆನ್ನಾಗಿ ಬೆರೆಸಿದರೆ ಮುದ್ದೆಯಂತಾಗುತ್ತದೆ.
ಒಂದು ಮಣೆಯ ಮೇಲೆ ಈ ಮುದ್ದೆಯನ್ನು ಒತ್ತಿ ಒಂದು ನಿರ್ದಿಷ್ಟ ಉದ್ದ ಮತ್ತು ದಪ್ಪ ಗಾತ್ರಕ್ಕೆ ಕುಯ್ದು ಓವನ್ ನಲ್ಲಿ ಬೇಯಿಸಿ. ಆರಿದ ಮೇಲೆ ಎರಡು ಬಿಸ್ಕತ್ ಗಳ ಮಧ್ಯೆ ಕ್ರೀಮ್ ಸವರಿ ಮುಚ್ಚಿ. ಕ್ರೀಮ್ ಬಿಸ್ಕತ್ ತಯಾರಾಗುತ್ತದೆ. | 1 |
ಚಳಿಗಾಲದಲ್ಲಿ ಚರ್ಮಕ್ಕೆ ವಿಶೇಷ ಆರೈಕೆ….
09-12-2018 4:06AM IST / No Comments / Posted In: Beauty , Latest News
ಒಣ ಚರ್ಮದವರಿಗೆ ಚಳಿಗಾಲ ಶಾಪ. ಯಾಕಪ್ಪ ಚಳಿಗಾಲ ಬಂತು ಎಂದು ಗೋಳಾಡುವವರಿದ್ದಾರೆ. ಶೀತ ಹೆಚ್ಚಾದಂತೆ ಚರ್ಮ ಒಡೆದು ರಕ್ತ ಬರುವುದುಂಟು. ಕೇವಲ ಒಣ ಚರ್ಮ ಹೊಂದಿರುವವರಿಗೊಂದೇ ಅಲ್ಲ, ಆಯ್ಲಿ ಸ್ಕಿನ್ ಹೊಂದಿರುವವರೂ ಚಳಿಗಾಲದಲ್ಲಿ ಕಿರಿಕಿರಿ ಅನುಭವಿಸುತ್ತಾರೆ.
ಚಳಿಗಾಲದಲ್ಲಿ ಚರ್ಮಕ್ಕೆ ವಿಶೇಷ ಆರೈಕೆ ಅಗತ್ಯ. ಮನೆಯಲ್ಲಿರುವ ವಸ್ತುಗಳನ್ನು ಬಳಸಿಕೊಂಡು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಒಣ ಚರ್ಮದಿಂದ ಮುಕ್ತಿ ಹೊಂದಿ, ಚಳಿಗಾಲದಲ್ಲಿ ನೆಮ್ಮದಿಯಿಂದಿರಬಹುದು.
ಚಳಿಗಾಲದಲ್ಲಿ ಬಾದಾಮಿ ಎಣ್ಣೆ ಬಳಕೆ ಉತ್ತಮ. ರಾತ್ರಿ ಎಣ್ಣೆ ಹಚ್ಚಿ ಮಲಗಿದರೆ, ಬೆಳಿಗ್ಗೆ ಚರ್ಮ ಒಣಗುವುದಿಲ್ಲ. ಕಾಂತಿಯುತವಾಗಿರುತ್ತದೆ. ಸೋಪ್ ಬದಲು ಸಾಸಿವೆ ಎಣ್ಣೆಯನ್ನು ಬಳಸುವುದು ಒಳ್ಳೆಯದು. ಸ್ನಾನದ ನಂತರ ಮೃದು ಬಟ್ಟೆಯಲ್ಲಿ ಮೈ ಒರೆಸಿಕೊಳ್ಳಿ. ನಂತರ ಎಣ್ಣೆ ಅಥವಾ ಲೋಷನ್ ಹಚ್ಚಿಕೊಳ್ಳಿ. ಶೀತ ಎಂಬ ಕಾರಣಕ್ಕೆ ಅತೀ ಬಿಸಿ ನೀರನ್ನು ಬಳಸಬೇಡಿ. ಅತೀ ತಣ್ಣನೆಯ ನೀರನ್ನೂ ಕೂಡ ಬಳಸಬಾರದು. | 1 |
ರ‍್ಯಾಂಕಿಂಗ್: ಅಗ್ರ ಹತ್ತರಲ್ಲಿ ಜೊಕೊವಿಚ್
153 ಸ್ಥಾನಗಳ ಪ್ರಗತಿ ಕಂಡ ಸೆರೆನಾ
ರ‍್ಯಾಂಕಿಂಗ್: ಅಗ್ರ ಹತ್ತರಲ್ಲಿ ಜೊಕೊವಿಚ್
ಎಎಫ್‌ಪಿ
17 ಜುಲೈ 2018, 00:14 IST
Updated:
17 ಜುಲೈ 2018, 00:14 IST
ಅಕ್ಷರ ಗಾತ್ರ :
ಆ
ಆ
ಲಂಡನ್ : ಈ ಸಲದ ವಿಂಬಲ್ಡನ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಸರ್ಬಿಯಾದ ನೊವಾಕ್ ಜೊಕೊವಿಚ್ ಅವರು ಸೋಮವಾರ ಬಿಡುಗಡೆಯಾದ ಎಟಿಪಿ ರ‍್ಯಾಂಕಿಂಗ್ ಪಟ್ಟಿಯ ಅಗ್ರ ಹತ್ತರಲ್ಲಿ ಸ್ಥಾನ ಗಳಿಸಿದ್ದಾರೆ.
ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ನೊವಾಕ್ ಅವರು ದಕ್ಷಿಣ ಆಫ್ರಿಕಾದ ಕೆವಿನ್ ಆ್ಯಂಡರ್ಸನ್ ಅವರನ್ನು 6–2, 6–2, 7–6ರಿಂದ ಮಣಿಸಿ ನಾಲ್ಕನೇ ಬಾರಿಗೆ ವಿಂಬಲ್ಡನ್ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದರು.
ಇದರಿಂದಾಗಿ 11 ಸ್ಥಾನಗಳ ಬಡ್ತಿ ಹೊಂದಿರುವ ಅವರು ರ‍್ಯಾಂಕಿಂಗ್ ಪಟ್ಟಿಯ 10ನೇ ಸ್ಥಾನದಲ್ಲಿದ್ದಾರೆ. ಎಂಟು ತಿಂಗಳ ನಂತರ ಮತ್ತೆ ಅವರು ಅಗ್ರ ಹತ್ತರಲ್ಲಿ ಸ್ಥಾನ ಪಡೆದಿದ್ದಾರೆ. ಅವರು ತಮ್ಮ ಖಾತೆಯಲ್ಲಿ 3355 ಪಾಯಿಂಟ್ಸ್ ಹೊಂದಿದ್ದಾರೆ.
ವಿಂಬಲ್ಡನ್ ಟೂರ್ನಿಯಲ್ಲಿ ಅಮೋಘ ಆಟ ಆಡಿ ಫೈನಲ್ ಪ್ರವೇಶಿಸಿದ್ದ ಕೆವಿನ್ ಆ್ಯಂಡರ್ಸನ್ ಅವರು ಐದನೇ ಸ್ಥಾನಕ್ಕೆ ಬಡ್ತಿ ಹೊಂದಿದ್ದಾರೆ. ಅವರು ಮೂರು ಸ್ಥಾನ ಮೇಲಕ್ಕೇರಿದ್ದಾರೆ. ಅವರ ಖಾತೆಯಲ್ಲಿ 4655 ಪಾಯಿಂಟ್ಸ್‌ಗಳಿವೆ.
9310 ಪಾಯಿಂಟ್ಸ್‌ಗಳೊಂದಿಗೆ ಸ್ಪೇನ್‌ನ ರಫೇಲ್ ನಡಾಲ್ ಅವರು ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಸ್ವಿಟ್ಜರ್‌ಲೆಂಡ್‌ನ ರೋಜರ್ ಫೆಡರರ್ ಅವರು 7080 ಪಾಯಿಂಟ್ಸ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
28ನೇ ಸ್ಥಾನದಲ್ಲಿ ಸೆರೆನಾ: ವಿಂಬಲ್ಡನ್ ಟೂರ್ನಿಯ ಮಹಿಳೆಯರ ವಿಭಾಗದ ಫೈನಲ್ ಪಂದ್ಯದಲ್ಲಿ ಸೋತ ಸೆರೆನಾ ವಿಲಿಯಮ್ಸ್ ಅವರು ಡಬ್ಲ್ಯುಟಿಎ ರ‍್ಯಾಂಕಿಂಗ್‌ನಲ್ಲಿ 28ನೇ ಸ್ಥಾನಕ್ಕೇರಿದ್ದಾರೆ. ಅವರು ಒಟ್ಟು 153 ಸ್ಥಾನಗಳ ಪ್ರಗತಿ ಕಂಡಿದ್ದಾರೆ.
ಫೈನಲ್‌ನಲ್ಲಿ ಗೆದ್ದ ಏಂಜಲಿಕ್ ಕೆರ್ಬರ್ ಅವರು ಆರು ಸ್ಥಾನಗಳಷ್ಟು ಪ್ರಗತಿ ಕಂಡಿದ್ದಾರೆ. ಸದ್ಯ ಅವರು ನಾಲ್ಕನೇ ಸ್ಥಾನಕ್ಕೆ ಏರಿದ್ದಾರೆ. ಸಿಮೊನಾ ಹಲೆಪ್ ಅವರು ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.
**
ಸರ್ಬಿಯಾದ ನೊವಾಕ್ ಎಂಟು ತಿಂಗಳ ನಂತರ ಮತ್ತೆ ಅಗ್ರ ಹತ್ತರಲ್ಲಿ ಸ್ಥಾನ ಪಡೆದಿದ್ದಾರೆ. ಅವರು ತಮ್ಮ ಖಾತೆಯಲ್ಲಿ 3355 ಪಾಯಿಂಟ್ಸ್ ಹೊಂದಿದ್ದಾರೆ. | 2 |
ಕರ್ನಾಟಕ ಚುನಾವಣಾ ಪರಿಣಾಮ : ಬೆಂಗಳೂರಿನ ಆರ್'ಸಿಬಿ ಪಂದ್ಯ ಸ್ಥಳಾಂತರ
Highlights
ಅಂದು ಕೋಲ್ಕತ್ತಾದಲ್ಲಿ ನಡೆಯಬೇಕಿದ್ದ ಪಂದ್ಯ 21ರಂದು ಬೆಂಗಳೂರಿನಲ್ಲಿ ನಡೆಯಲಿದೆ.
ಬೆಂಗಳೂರು(ಮಾ.28): ಮೇ.12ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಐಪಿಎಲ್'ನ ಆರ್'ಸಿಬಿ ಹಾಗೂ ಡೆಲ್ಲಿ ಡೇರ್'ಡೇವಿಲ್ಸ್ ಪಂದ್ಯ ಕರ್ನಾಟಕ ಚುನಾವಣಾ ಪ್ರಯುಕ್ತ ಕೋಲ್ಕತ್ತಾಗೆ ಸ್ಥಳಾಂತರಗೊಂಡಿದೆ. ಅಂದು ಕೋಲ್ಕತ್ತಾದಲ್ಲಿ ನಡೆಯಬೇಕಿದ್ದ ಪಂದ್ಯ 21ರಂದು ಬೆಂಗಳೂರಿನಲ್ಲಿ ನಡೆಯಲಿದೆ.
Last Updated 11, Apr 2018, 12:56 PM IST | 2 |
‘ಮೊಡವೆ’ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಇಲ್ಲಿದೆ ಮನೆ ಮದ್ದು
19-02-2019 7:25PM IST / No Comments / Posted In: Beauty , Latest News
ಹದಿ ಹರೆಯದವರನ್ನು ಕಾಡೋ ಮೊಡವೆ ಸಮಸ್ಯೆಗೆ ಇಂಥಹದ್ದೇ ಕಾರಣ ಎಂದು ಹೇಳಲು ಕಷ್ಟ. ಈಗಿನ ಫಾಸ್ಟ್ ಲೈಫ್, ಜಂಕ್ ಫುಡ್ ಒಂದು ಕಾರಣವೂ ಹೌದು. ಮೊಡವೆಗಳನ್ನು ನಿಯಂತ್ರಿಸಲು ಇಲ್ಲಿವೆ ಟಿಪ್ಸ್.
1. ಲೋಳೆಸರದ ಒಳಭಾಗವನ್ನು ತೆಗೆದು ಪ್ರತಿ ದಿನ ರಾತ್ರಿ ಮುಖಕ್ಕೆ ಹಚ್ಚಿದರೆ ಸಣ್ಣ ಸಣ್ಣ ಕಪ್ಪು ಮೊಡವೆಗಳು ಗುಣವಾಗುತ್ತದೆ.
2. ರಕ್ತದ ದೋಷದಿಂದ ಆಗುವ ಕೆಂಪು ಮೊಡವೆಗೆ ಸೋಗದೆ ಬೇರಿನ ಶರಬತ್ತನ್ನು ನಿಯಮಿತವಾಗಿ ಸೇವಿಸಬೇಕು.
3. ಶ್ರೀಗಂಧವನ್ನು ಗುಲಾಬಿ ನೀರಿನಲ್ಲಿ ಕಲಸಿ ಕೀವಾಗಿರುವ ಕೆಂಪಗಿನ ಮೊಡವೆಗೆ ಹಚ್ಚಬೇಕು.
4. ದಪ್ಪ ಮೊಡವೆಗಳಿಂದ ನೋವು ಮತ್ತು ತುರಿಕೆ ಹೆಚ್ಚಿದ್ದರೆ, ಇಂಗನ್ನು ಬೆಚ್ಚಗಿರುವ ನೀರಿನಲ್ಲಿ ತೇದು ಮೊಡವೆ ಸುತ್ತಲೂ ಲೇಪಿಸಿದರೆ ತುರಿಕೆ ಕಡಿಮೆಯಾಗುತ್ತದೆ.
5. ಜೀರಿಗೆ ಕಷಾಯವನ್ನು ನಿಯಮಿತವಾಗಿ ಸೇವಿಸಿದರೆ ಪಿತ್ತ ಹಾಗೂ ರಕ್ತದಿಂದ ಆಗುವ ಮೊಡವೆ ನಿವಾರಣೆಯಾಗುತ್ತದೆ.
6. ಒಂದು ಬಟ್ಟಲು ಹಾಲಿಗೆ 5 ಚಮಚ ನಿಂಬೆ ರಸ ಮತ್ತು ಒಂದು ಚಮಚ ಗ್ಲಿಸರಿನ್ ಕಲಸಿ ಮುಖಕ್ಕೆ ಲೇಪನ ಮಾಡಿದರೆ ಮೊಡವೆ ಕಡಿಮೆಯಾಗುತ್ತದೆ.
7. ಮೊಡವೆಗಳು ದಪ್ಪವಾಗಿ ನೋವಿದ್ದರೆ ನಿಂಬೆ ರಸಕ್ಕೆ ಕರಿಮೆಣಸಿನ ಪುಡಿ ಸೇರಿಸಿ ಹಚ್ಚಿದರೆ ಮೊಡವೆ ಬೇಗ ಮಾಯವಾಗುತ್ತದೆ.
8. ಬೆಟ್ಟದ ನೆಲ್ಲಿಕಾಯಿಯ ರಸವನ್ನು ಖಾಲಿ ಹೊಟ್ಟೆಗೆ ನೀರಿನ ಜೊತೆ ಸೇವಿಸಿದರೆ ರಕ್ತ ಶುದ್ಧವಾಗಿ ಮೊಡವೆ ಕಡಿಮೆಯಾಗುತ್ತದೆ. | 1 |
ಬಾಸ್ಕೆಟ್‌ಬಾಲ್: ಭಾರತಕ್ಕೆ ಸೋಲು
ಏಜೆನ್ಸೀಸ್| Sep 16, 2012, 04.41 AM IST
ಟೊಕಿಯೊ: ಎಫ್‌ಐಬಿಎ ಏಷ್ಯಕಪ್ ಬಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಭಾರತ ತಂಡ ಸತತ ಎರಡನೇ ಸೋಲನುಭವಿಸಿದೆ.
ಬಿ ಗುಂಪಿನಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ ಕತಾರ್ ವಿರುದ್ಧ 63-84 ಅಂತರದಲ್ಲಿ ಸೋಲನುಭವಿಸಿತು. ಮೊದಲ ಹಂತದಲ್ಲಿ ಭಾರತ 6-15ರಲ್ಲಿ ಹಿನ್ನಡೆ ಸಾಧಿಸಿತ್ತು. ಉತ್ತಮ ತಿರುಗೇಟು ನೀಡಿದ ಭಾರತದ ದ್ವಿತೀಯ ಹಂತದಲ್ಲಿ 16-19 ಅಂತರ ಕಾಯ್ದುಕೊಂಡಿತು.
ಆದರೆ ಪಶ್ಚಿಮ ಏಷ್ಯಾದ ಬಲಿಷ್ಠ ರಾಷ್ಟ್ರ ಕತಾರ್ , ವಿಶ್ವದಲ್ಲಿ 36ನೇ ರ‌್ಯಾಂಕ್ ಹೊಂದಿದ್ದು ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಆಟ ಪ್ರದರ್ಶಿಸಿತು. 27-19, 26-19ರಲ್ಲಿ ಮುನ್ನಡೆ ಕಂಡುಕೊಂಡಿತು.
ವಿಶ್ವದಲ್ಲಿ 58ನೇ ರ‌್ಯಾಂಕ್ ಹೊಂದಿರುವ ಭಾರತ ತಂಡ ಮುಂದಿನ ಹೋರಾಟದಲ್ಲಿ ಚೀನಾವನ್ನು ಎದುರಿಸಲಿದೆ. ಮೊದಲಿನ ಪಂದ್ಯದಲ್ಲಿ ಭಾರತ ತಂಡ ಇರಾನ್ ವಿರುದ್ಧ ಹೀನಾಯ ಸೋಲನುಭವಿಸಿತ್ತು.
2010ರಲ್ಲಿ ಕತಾರ್‌ನಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸಲು ಭಾರತ ಅರ್ಹತೆ ಪಡೆದಿರಲಿಲ್ಲ. 2008ರಲ್ಲಿ ಉತ್ತಮ ಹೋರಾಟ ನೀಡಿದ್ದ ಭಾರತ ಚಾಂಪಿಯನ್‌ಷಿಪ್‌ನಲ್ಲಿ 5ನೇ ಸ್ಥಾನ ಪಡೆದಿತ್ತು. | 2 |
kannadakkagi ondannu otti
ಪತ್ರಕರ್ತನ ಪಾತ್ರದಲ್ಲಿ ಅವಿನಾಶ್ ಷಠಮರ್ಶನ್
ದಯವಿಟ್ಟ ಗಮನಿಸಿ ಸಿನಿಮಾ ಮೂಲಕ ಗಮನ ಸೆಳೆದಿದ್ದ ನಟ ಅವಿನಾಶ್ ಷಠಮರ್ಶನ್, ಕನ್ನಡಕ್ಕಾಗಿ ಒಂದನ್ನು ಒತ್ತಿ ಎಂಬ ಸಿನಿಮಾದಲ್ಲಿ ಪತ್ರಕರ್ತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ವಿಜಯ ಕರ್ನಾಟಕ | Updated:
May 11, 2018, 12:59PM IST
ದಯವಿಟ್ಟ ಗಮನಿಸಿ ಸಿನಿಮಾ ಮೂಲಕ ಗಮನ ಸೆಳೆದಿದ್ದ ನಟ ಅವಿನಾಶ್ ಷಠಮರ್ಶನ್, ಕನ್ನಡಕ್ಕಾಗಿ ಒಂದನ್ನು ಒತ್ತಿ ಎಂಬ ಸಿನಿಮಾದಲ್ಲಿ ಪತ್ರಕರ್ತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಮೂಲತಃ ರಂಗಭೂಮಿ ನಟರಾಗಿರುವ ಅವಿನಾಶ್ ಸಾಕಷ್ಟು ನಾಟಕಗಳನ್ನು ಬರೆದು ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ದಯವಿಟ್ಟು ಗಮನಿಸಿ ಸಿನಿಮಾದಲ್ಲಿ ಸ್ವಾಮಿಜಿಯ ಪಾತ್ರದಲ್ಲಿ ನಟಿಸಿ ಸ್ಯಾಂಡಲ್‌ವುಡ್ ಗಮನ ಸೆಳೆದಿದ್ದರು. ಈಗ ಕನ್ನಡಕ್ಕಾಗಿ ಒಂದನ್ನು ಒತ್ತಿ ಸಿನಿಮಾದಲ್ಲಿ ಪತ್ರಕರ್ತನಾಗಿ ನಟಿಸುತ್ತಿದ್ದಾರೆ. ವಿಶೇಷ ಎಂದರೆ ಅವಿನಾಶ್ ಮೂಲತಃ ಪತ್ರಿಕೋದ್ಯಮ ವಿದ್ಯಾರ್ಥಿ. ಮೈಸೂರಿನ ಮಹಾಜನ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿದ್ಯಾಭ್ಯಾಸ ಮಾಡಿರುವ ಇವರು, ತದ ನಂತರ ನಟನೆಯನ್ನು ವೃತ್ತಿಯನ್ನಾಗಿ ತೆಗೆದುಕೊಂಡಿದ್ದಾರೆ.
ಸಾಕಷ್ಟು ನಾಟಕಗಳಲ್ಲಿ ನಟಿಸಿರುವ ಇವರು ಮುಂಬೈನಲ್ಲಿ ಕೆಲ ವರ್ಷಗಳ ಹಿಂದೆ ನಡೆದಿದ್ದ, ರಾಷ್ಟ್ರೀಯ ನಾಟಕ ಸ್ಪರ್ಧೆಯಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ. ಅದು ಥ್ಯಾಂಕ್ಯೂ ಮಿಸ್ಟರ್ ಗ್ಲಾಡ್ ಎಂಬ ನಾಟಕದ ಪಾತ್ರವಾಗಿತ್ತು. ಇದಾದ ಮೇಲೆ, ಸಾಕಷ್ಟು ಕಡೆಗಳಲ್ಲಿ ಇವರ ಅಭಿನಯಕ್ಕೆ ಮೆಚ್ಚುಗೆಗಳು ವ್ಯಕ್ತವಾಗಿದೆ. ಈಗ ಕನ್ನಡಕ್ಕಾಗಿ ಒಂದನ್ನು ಒತ್ತಿಚಿತ್ರದ ಮೂಲಕ ನಾಯಕರಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ಇದರ ಜತೆಗೆ ರಂಗಭೂಮಿಯನ್ನು ಆಧಾರವಾಗಿಟ್ಟುಕೊಂಡು ಸೈಡ್‌ವಿಂಗ್ ಎಂಬ ಚಿತ್ರವನ್ನು ಅವರು ನಿರ್ದೇಶನ ಮಾಡುತ್ತಿದ್ದಾರೆ. ಇದು ಕೊನೆಯ ಹಂತದ ಚಿತ್ರೀಕರಣದಲ್ಲಿದೆ.
ಕುಶಾಲ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ಕೃಷಿ ತಾಪಂಡ, ರಂಗಾಯಣ ರಘು, ಚಿಕ್ಕಣ್ಣ ಸೇರಿದಂತೆ ಸಾಕಷ್ಟು ಮಂದಿ ನಟಿಸಿದ್ದಾರೆ. ಇದೊಂದು ಪ್ರಯಾಣವನ್ನು ಆಧರಿಸಿದ ಚಿತ್ರವಾಗಿದ್ದು, ತನ್ನ ಮೇಕಿಂಗ್‌ನಿಂದಾಗಿ ಈಗಾಗಲೇ ಸದ್ದು ಮಾಡುತ್ತಿದೆ.
"ನಿಜ ಜೀವನದಲ್ಲಿಯೂ ನಾನು ಪತ್ರಿಕೋದ್ಯಮವನ್ನು ಓದಿಕೊಂಡಿದ್ದೇನೆ. ಈಗ ಸಿನಿಮಾದಲ್ಲಿಯೂ ಜರ್ನಲಿಸ್ಟ್ ಕ್ಯಾರೆಕ್ಟರ್ ಮಾಡಿದ್ದು, ನನಗೆ ಖುಷಿಯಾಯಿತು. ರಿಯಲ್ ಲೈಫ್‌ನ ಕ್ಯಾರೆಕ್ಟರ್, ರೀಲ್‌ನಲ್ಲಿಯೂ ನಟಿಸಲು ಒಂಥಾರ ಸ್ಪೇಷಲ್ ಅನುಭವವನ್ನು ನೀಡುತ್ತದೆ."-ಅವಿನಾಶ್ ಶಠಮರ್ಷನ್, ನಟ | 0 |
‘PIN’ ಕೋಡ್ ಕುರಿತು ಇಲ್ಲಿದೆ ಒಂದಿಷ್ಟು ಮಾಹಿತಿ
28-04-2019 4:08PM IST / No Comments / Posted In: Latest News , Special
ಪೋಸ್ಟ್ ಆಫೀಸ್, ಕೊರಿಯರ್ ಸೇರಿದಂತೆ ಕೆಲವು ಸಂದರ್ಭಗಳಲ್ಲಿ ಅಡ್ರೆಸ್ ಬರೆಯುವಾಗ ಪಿನ್ ಕೋಡ್ ಬರೆಯುವುದನ್ನು ಕೇಳಿದ್ದಿರಿ. ಈ ‘ಪಿನ್ ಕೋಡ್’ ಕುರಿತಂತೆ ನಿಮಗೊಂದಿಷ್ಟು ಮಾಹಿತಿ ಇಲ್ಲಿದೆ ನೋಡಿ.
‘ಪಿನ್ ಕೋಡ್’ ಎಂದರೆ ‘ಪೋಸ್ಟಲ್ ಇಂಡೆಕ್ಸ್ ನಂಬರ್’. ಈ ‘ಪಿನ್ ಕೋಡ್’ ನಲ್ಲಿ ಆರು ಅಂಕಿಗಳಿರುತ್ತವೆ. ಭಾರತೀಯ ಅಂಚೆ ಇಲಾಖೆ ಇದನ್ನು ಬಳಸುತ್ತಿದೆ. ಇದರಿಂದ ಸುಲಭವಾಗಿ ನಿಮ್ಮ ಅಂಚೆ ಪತ್ರಗಳನ್ನು ನಿಗದಿತ ಸ್ಥಳಕ್ಕೆ ತಲುಪಿಸಬಹುದಾಗಿದೆ. 1972ರ ಆಗಸ್ಟ್ 15ರಂದು ಇದನ್ನು ಪರಿಚಯಿಸಲಾಯಿತು.
ಪ್ರಸ್ತುತ ದೇಶದಲ್ಲಿ 9 ಪಿನ್ ಕೋಡ್ ವಲಯಗಳಿವೆ. 8 ಭೌಗೋಳಿಕ ವಲಯಗಳಾದರೆ 1 ಆರ್ಮಿ ಪೋಸ್ಟಲ್ ಸರ್ವೀಸ್. ಅದು ಸೈನ್ಯಕ್ಕೆ ಮಾತ್ರ ಮೀಸಲಾಗಿದೆ. ಪಿನ್ ಕೋಡ್ 6 ಡಿಜಿಟ್ ಗಳಲ್ಲಿ ಮೊದಲ ಸಂಖ್ಯೆ ರೀಜನ್(ವಲಯ) ಪ್ರತಿಬಿಂಬಿಸುತ್ತದೆ. ಎರಡನೇ ಸಂಖ್ಯೆ ಉಪ ವಲಯವನ್ನು, ಅಥವಾ ಪೋಸ್ಟಲ್ ಸರ್ಕಲ್/ ರಾಜ್ಯವನ್ನು ಸೂಚಿಸುತ್ತದೆ. ಮೂರನೇ ಸಂಖ್ಯೆ ಸಾರ್ಟಿಂಗ್ ಅಥವಾ ಕಂದಾಯ ಜಿಲ್ಲಾ ವಿಭಾಗವನ್ನು ಸೂಚಿಸುತ್ತದೆ. ಕೊನೆಯ ಮೂರು ಸಂಖ್ಯೆಗಳು ಡೆಲವರಿ ಪೋಸ್ಟ್ ಆಫೀಸ್ ಗಳನ್ನು ಸೂಚಿಸುತ್ತವೆ.
1,2 ಉತ್ತರ ವಲಯ, 3,4 ಪಶ್ಚಿಮ ವಲಯ, 5,6 ದಕ್ಷಿಣ ವಲಯ, 7,8 ಪೂರ್ವ ವಲಯ ಹಾಗೂ 9 ಆರ್ಮಿ ಪೋಸ್ಟಲ್ ಸರ್ವೀಸ್ ಆಗಿರುತ್ತವೆ. ಇವುಗಳಲ್ಲಿ ಉತ್ತರ ವಲಯದಲ್ಲಿ ದೆಹಲಿ, ಹರಿಯಾಣ, ಪಂಜಾಬ್, ಹಿಮಾಚಲ ಪ್ರದೇಶ, ಜಮ್ಮು ಕಾಶ್ಮೀರ, ಉತ್ತರಾಂಚಲ್ ರಾಜ್ಯಗಳಿವೆ. ಪಶ್ಚಿಮ ವಲಯದಲ್ಲಿ ರಾಜಸ್ತಾನ, ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ, ಛತ್ತೀಸ್ ಘಡ, ದಕ್ಷಿಣ ವಲಯದಲ್ಲಿ ಆಂಧ್ರ ಪ್ರದೇಶ, ಕರ್ನಾಟಕ, ಕೇರಳ, ತಮಿಳುನಾಡು, ಪೂರ್ವ ವಲಯದಲ್ಲಿ ಪಶ್ಚಿಮ ಬಂಗಾಳ, ಒರಿಸ್ಸಾ, ಬಿಹಾರ ಜಾರ್ಖಂಡ್ ಹಾಗೂ ಈಶಾನ್ಯ ರಾಜ್ಯಗಳು ಬರುತ್ತವೆ. | 1 |
Bengaluru, First Published 19, Aug 2018, 2:39 PM IST
Highlights
ಟ್ರೆಂಟ್‌ಬ್ರಿಡ್ಜ್ ಪಂದ್ಯದ ಮೊದಲ ದಿನದಾಟದಲ್ಲಿ ದಿಟ್ಟ ಹೋರಾಟ ನೀಡಿದ ಟೀಂ ಇಂಡಿಯಾಗೆ ಇದೀಗ ಮತ್ತೆ ಮಳೆರಾಯ ಕಾಟ ನೀಡಿದ್ದಾನೆ. 2ನೇ ದಿನದಾಟ ಆರಂಭಕ್ಕೂ ಮುನ್ನ ತುಂತುರ ಮಳೆಗೆ ಪಂದ್ಯ ತಡವಾಗಿ ಆರಂಭವಾಗಲಿದೆ
ನಾಟಿಂಗ್‌ಹ್ಯಾಮ್(ಆ.19): ಇಂಗ್ಲೆಂಡ್ ವಿರುದ್ದದ 3ನೇ ಟೆಸ್ಟ್ ಪಂದ್ಯದ ಮೊದಲ ದಿನ 307 ರನ್ ಸಿಡಿಸಿದ ಟೀಂ ಇಂಡಿಯಾ ದ್ವಿತೀಯ ದಿನದಾಟಕ್ಕೆ ಸಜ್ಜಾಗಿದೆ. ಆದರೆ ಎರಡನೇ ದಿನದಾಟ ವಿಳಂಭವಾಗಲಿದೆ. ಟ್ರೆಂಟ್‌ಬ್ರಿಡ್ಜ್ ಟೆಸ್ಟ್ ಪಂದ್ಯಕ್ಕೆ ಇದೀಗ ಮಳೆ ಅಡ್ಡಿಯಾಗಿದೆ.
ದ್ವಿತೀಯ ದಿನದಾಟ ತಡವಾಗಿ ಆರಂಭವಾಗಲಿದೆ. ಸದ್ಯ ತುಂತುರ ಮಳೆಯಿಂದಾಗಿ ಪಿಚ್ ಕವರ್ ಮಾಡಲಾಗಿದೆ. ಮಳ ಬಳಿಕ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ ಮುಂದುವರಿಸಲಿದೆ. ಆದರೆ ಮಳೆಯಿಂದಾಗಿ ಪಿಚ್ ಬೌಲರ್‌ಗಳಿಗೆ ಹೆಚ್ಚು ನೆರವು ನೀಡೋ ಸಾಧ್ಯತೆ ಇದೆ.
ಮೊದಲ ದಿನದಾಟದಲ್ಲಿ ನಾಯಕ ವಿರಾಟ್ ಕೊಹ್ಲಿ 97 ರನ್ ಸಿಡಿಸಿದರೆ, ಅಜಿಂಕ್ಯ ರಹಾನೆ 81 ರನ್ ಕಾಣಿಕೆ ನೀಡಿದ್ದರು. ಈ ಮೂಲಕ ಭಾರತ 6 ವಿಕೆಟ್ ನಷ್ಟಕ್ಕೆ 307 ರನ್ ದಾಖಲಿಸಿತ್ತು. ಯುವ ಕ್ರಿಕಟಿಗ ರಿಷಭ್ ಪಂತ್ ಅಜೇಯ 22 ರನ್ ಸಿಡಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಆರಂಭಿಕ 2 ಪಂದ್ಯ ಸೋತಿರುವ ಟೀಂ ಇಂಡಿಯಾಗೆ ಇದೀಗ 3ನೇ ಪಂದ್ಯ ಮಾಡು ಇಲ್ಲವೇ ಮಡಿ ಪಂದ್ಯ. ಈ ಪಂದ್ಯ ಗೆದ್ದು ಸರಣಿ ಉಳಿಸಿಕೊಳ್ಳಲು ವಿರಾಟ್ ಕೊಹ್ಲಿ ಸೈನ್ಯ ಕಠಿಣ ಹೋರಾಟ ನೀಡಲಿದೆ.
Last Updated 9, Sep 2018, 10:05 PM IST | 2 |
ಜುಲೈ 20ರಿಂದ ಪ್ರೊ ಕಬಡ್ಡಿ ಟೂರ್ನಿ
ಆಗಸ್ಟ್ 31ರಿಂದ ಸೆಪ್ಟೆಂಬರ್ 6ರವರೆಗೆ ಬೆಂಗಳೂರಿನಲ್ಲಿ 11 ಪಂದ್ಯಗಳು
ಜುಲೈ 20ರಿಂದ ಪ್ರೊ ಕಬಡ್ಡಿ ಟೂರ್ನಿ
ಪಿಟಿಐ
22 ಜೂನ್ 2019, 01:15 IST
Updated:
22 ಜೂನ್ 2019, 01:15 IST
ಅಕ್ಷರ ಗಾತ್ರ :
ಆ
ಆ
ಮುಂಬೈ: ಪ್ರೊ ಕಬಡ್ಡಿ ಲೀಗ್ ಟೂರ್ನಿಯ ಏಳನೇ ಆವೃತ್ತಿಯು ಜುಲೈ 20ರಿಂದ ಆರಂಭವಾಗಲಿದೆ. ಅಕ್ಟೋಬರ್ 19ರಂದು ಫೈನಲ್ ಪಂದ್ಯ ನಡೆಯಲಿದೆ.
ಮೊದಲ ಪಂದ್ಯದಲ್ಲಿ ಯು ಮುಂಬಾ ಹಾಗೂ ತೆಲುಗು ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಆಗಸ್ಟ್ 31ರಿಂದ ಸೆಪ್ಟೆಂಬರ್ 6ರವರೆಗೆ ಬೆಂಗಳೂರಿನಲ್ಲಿ 11 ಪಂದ್ಯಗಳು ನಡೆಯಲಿವೆ. ತವರಿನ ತಂಡದ ನಾಲ್ಕು ಪಂದ್ಯಗಳು ಇಲ್ಲಿ ಆಯೋಜನೆಯಾಗಿವೆ.
ಮೊದಲ ದಿನದ ಎರಡನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಬೆಂಗಳೂರು ಬುಲ್ಸ್ ತಂಡವು ಪಾಟ್ನಾ ಪೈರೇಟ್ಸ್ ವಿರುದ್ಧ ಕಣಕ್ಕಿಳಿಯಲಿದೆ. ಪ್ರತಿಯೊಂದು ತಂಡವು ಪ್ರತಿ ತಂಡವನ್ನು ಎರಡು ಬಾರಿ ಎದುರಿಸಲಿದ್ದು, ಅಗ್ರ ಆರು ಸ್ಥಾನ ಪಡೆಯುವ ತಂಡಗಳು ಪ್ಲೇ ಆಫ್‌ಗೆ ಅರ್ಹತೆ ಪಡೆಯಲಿವೆ.
ಹೋದ ಎರಡು ಆವೃತ್ತಿಗಳಲ್ಲಿಯೂ ಬೆಂಗಳೂರಿನಲ್ಲಿ ಪಂದ್ಯಗಳು ನಡೆದಿರಲಿಲ್ಲ. 2017ರಲ್ಲಿ ನಾಗಪುರ ಮತ್ತು 2018ರಲ್ಲಿ ಪುಣೆ ಬೆಂಗಳೂರು ಬುಲ್ಸ್ ತಂಡದ ಕ್ರೀಡಾಂಗಣಗಳಾಗಿದ್ದವು. ಬುಲ್ಸ್ ತಂಡವು ಹೋದ ವರ್ಷ ಚಾಂಪಿಯನ್ ಆಗಿತ್ತು.
ಈ ಬಾರಿ ಸಂಜೆ 7.30ರಿಂದ ಪಂದ್ಯಗಳು ಆರಂಭವಾಗಲಿವೆ. ನೂತನ ಕೋಚ್‌ಗಳೂ ಈ ಟೂರ್ನಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಪುಣೇರಿ ಪಲ್ಟನ್ ಪರ ಅನೂಪ್‌ಕುಮಾರ್ ಹಾಗೂ ಹರ್ಯಾಣ ಸ್ಟೀಲರ್ಸ್ ಪರ ರಾಕೇಶ್‌ಕುಮಾರ್ ಕೋಚಿಂಗ್ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಜುಲೈ 27ರಿಂದ ಆಗಸ್ಟ್ 2ರವರೆಗೆ ಮುಂಬೈ ಲೆಗ್ ಪಂದ್ಯಗಳು ನಡೆಯಲಿದ್ದು, ಅಕ್ಟೋಬರ್ 19ಕ್ಕೆ ಫೈನಲ್ ಪಂದ್ಯ ನಡೆಯಲಿದೆ. | 2 |
ಹಾಟ್ ಅವತಾರದಲ್ಲಿ ಯೋಗ ಮಾಡಿದ ನಟಿ ರಾಖಿ ಸಾವಂತ್
21-06-2018 12:35PM IST / No Comments / Posted In: Latest News , Entertainment
ಅಂತರಾಷ್ಟ್ರೀಯ ಯೋಗ ದಿನವನ್ನು ಎಲ್ಲೆಡೆ ಆಚರಿಸಲಾಗ್ತಿದೆ. ದೇಶದ ಮೂಲೆ ಮೂಲೆಗಳಲ್ಲೂ ಯೋಗ ಶಿಬಿರಗಳನ್ನು ಆಯೋಜಿಸಲಾಗಿದೆ. ಬಾಲಿವುಡ್ ಸ್ಟಾರ್ ಗಳು ಯೋಗ ದಿನವನ್ನು ಆಚರಿಸಿ ಯೋಗಾಸನದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ತಿದ್ದಾರೆ.
ವಿವಾದದ ರಾಣಿ ರಾಖಿ ಸಾವಂತ್ ಕೂಡ ಈ ಅವಕಾಶವನ್ನು ತಪ್ಪಿಸಿಕೊಂಡಿಲ್ಲ. ರಾಖಿ ಸಾವಂತ್ ಹಾಟ್ ಅವತಾರದಲ್ಲಿ ಯೋಗ ಮಾಡಿದ್ದಾಳೆ. ಅದ್ರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ. ಫಿಟ್ನೆಸ್ ಗೆ ಮಹತ್ವ ನೀಡುವ ರಾಖಿ ಯೋಗ ಹಾಗೂ ವ್ಯಾಯಾಮವನ್ನು ಪ್ರತಿನಿತ್ಯ ಮಾಡ್ತಾಳಂತೆ.
ಇಷ್ಟೇ ಅಲ್ಲ ಬಾಲಿವುಡ್ ನ ಫಿಟ್ನೆಸ್ ರಾಣಿ ಶಿಲ್ಪಾ ಶೆಟ್ಟಿ, ಕಂಗನಾ, ಮಲೈಕಾ ಅರೋರಾ ಸೇರಿದಂತೆ ಅನೇಕ ಕಲಾವಿದರು ಯೋಗದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. | 0 |
ಬಿಗ್‌ಬಾಸ್ ಸೀಸನ್-6 ಶುರು
Team Udayavani, Oct 22, 2018, 11:50 AM IST
ಅ
ಅ
ಅ
ಕಲರ್ಸ್ ವಾಹಿನಿಯ ಬಿಗ್‌ಬಾಸ್ ಸೀಸನ್-6 ರಿಯಾಲಿಟಿ ಶೋಗೆ ಭಾನುವಾರ ಚಾಲನೆ ಸಿಕ್ಕಿದೆ. ಹದಿನೆಂಟು ಮಂದಿ ಸ್ಪರ್ಧಿಗಳು ಬಿಗ್‌ಬಾಸ್ ಮನೆ ಪ್ರವೇಶಿಸಿದ್ದಾರೆ.ಈ ಮೂಲಕ ಈ ಬಾರಿ ಬಿಗ್‌ಬಾಸ ಮನೆಯನ್ನು ಯಾರು ಪ್ರವೇಶಿಸಲಿದ್ದಾರೆಂಬ ಕುತೂಹಲಕ್ಕೆ ತೆರೆಬಿದ್ದಿದೆ. ವಿವಿಧ ಕ್ಷೇತ್ರಗಳ ಒಟ್ಟು ಹದಿನೆಂಟು ಮಂದಿ ಸ್ಪರ್ಧಿಗಳು ಬಿಗ್‌ಬಾಸ್ ಮನೆ ಪ್ರವೇಶಿಸಿದ್ದಾರೆ. ಈ ಶೋ ಕಲರ್ಸ್ ಸೂಪರ್‌ನಲ್ಲಿ ಪ್ರತಿ ದಿನ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ.
ನಟಿ ಸೋನು ಪಾಟೀಲ್, ಆ್ಯಂಡ್ರ್ಯೂ, ಕಿರುತೆರೆ ನಟಿ ಜಯಶ್ರೀ, ರಾಕೇಶ್, “ಒಗ್ಗರಣೆ ಡಬ್ಬಿ’ಯ ಮುರುಳಿ, ಅಕ್ಷತಾ, ಕ್ರಿಕೆಟರ್ ರಕ್ಷಿತಾ, ರ್ಯಾಪಿಡ್ ರಶ್ಮಿ, ಅಡಮ್, ಕವಿತಾ, ಬಾಡಿ ಬಿಲ್ಡರ್, ನಟ ರವಿ, ಶಶಿ, ರೀಮಾ, ಗಾಯಕ ನವೀನ್ ಸಜ್ಜು, ಸ್ನೇಹಾ, ಆನಂದ್, ನೈನಾ ಹಾಗೂ ಧನರಾಜ್ ಈ ಬಾರಿ ಬಿಗ್‌ಬಾಸ್ ಸೀಸನ್-6 ರ ಸ್ಪರ್ಧಿಗಳಾಗಿ ಮನೆ ಪ್ರವೇಶಿಸಿದ್ದಾರೆ. ಸುದೀಪ್ ಈ ಶೋನ ನಿರೂಪಕರಾಗಿದ್ದು, ಬೆಂಗಳೂರಿನ ಇನ್ನೋವೇಟಿವ್ ಫಿಲಂ ಸಿಟಿಯೊಳಗೆ ಬಿಗ್‌ಬಾಸ್ ಮನೆ ನಿರ್ಮಿಸಲಾಗಿದೆ.
ಇನ್ನೂ ವಿವಾಹವಾಗಿಲ್ಲವೇ? ಇಂದೇ ಕನ್ನಡ ಮ್ಯಾಟ್ರಿಮನಿಯಲ್ಲಿ ನೋಂದಾಯಿಸಿ - ನೋಂದಣಿ ಉಚಿತ!
Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.
To report any comment you can email us at udayavani.response@manipalgroup.info . We will review the request and delete the comments. | 0 |
ಪ್ರಜಾವಾಣಿ ವಾರ್ತೆ
Published:
25 ಜೂನ್ 2018, 01:00 IST
Updated:
25 ಜೂನ್ 2018, 01:46 IST
ಅಕ್ಷರ ಗಾತ್ರ :
ಆ
ಆ
ಜೂನ್ 17 ಭಾನುವಾರ ವಿಶ್ವ ಅಪ್ಪಂದಿರ ದಿನಾಚರಣೆ. ನಟ ವಿಜಯ್ ಅವರಿಗೆ ಅಂದು ಸಿಕ್ಕ ಉಡುಗೊರೆ ವಿಶೇಷವಾಗಿತ್ತು. ಅಂದೇ ವಿಜಯ್ ಅವರ ಪುತ್ರ ಸಾಮ್ರಾಟ್ ವಿಜಯ್ ಹುಟ್ಟಹಬ್ಬ ಕೂಡ. ಸಾಮ್ರಾಟ್ ವಿಜಯ್ ಮೊದಲ ಬಾರಿ ನಟಿಸುತ್ತಿರುವ ‘ಕುಸ್ತಿ’ ಚಿತ್ರದ ಟೀಸರ್ ಬಿಡುಗಡೆ ಇಬ್ಬರ ಸಂಭ್ರಮವನ್ನು ಹೆಚ್ಚಿಸಿತ್ತು.
ಎರಡು ನಿಮಿಷದ ಟೀಸರ್‌ನಲ್ಲಿ ಅಖಾಡದಲ್ಲಿನ ಕುಸ್ತಿಯ ತುಣುಕುಗಳೇ ರಾರಾಜಿಸಿವೆ. ಸಾಮ್ರಾಟ್ ವಿಜಯ್ ಕಟ್ಟಮಸ್ತಾದ ಎದುರಾಳಿ ಹುಡುಗನನ್ನು ನೆಲಕ್ಕೆ ಉರುಳಿಸುತ್ತಾನೆ. ಮತ್ತೊಬ್ಬ ಅಲ್ಲಿಗೆ ಬಂದು ‘ನಿನ್ನೆ ಮೊನ್ನೆ ಕುಸ್ತಿ ಕಲಿತು ಗೆದ್ದೆ ಅಂತ ಫೋಸ್ ಕೊಡಬೇಡ. ಅಖಾಡ ಏನು ನಿಮ್ಮ ಅಪ್ಪನದಲ್ಲ, ಎದ್ದು ನಡಿ’ ಅಂತ ಜೋರಾಗಿ ಮಾತಾಡುತ್ತಾನೆ.
ಎದುರಾಳಿಯನ್ನು ನೆಲಕ್ಕೊತ್ತಿ ಹಿಡಿದಿರುವ ಸಾಮ್ರಾಟ್ ರೋಷದಿಂದ ‘ಅಪ್ಪನ ಸುದ್ದಿಗೆ ಬರಬೇಡ. ನಿನ್ನಂಥ ಸಾವಿರ ಪೈಲ್ವಾನ್‍ಗಳಿಗೆ ನಮ್ಮಪ್ಪ ಒಬ್ಬನೇ ಉಸ್ತಾದ್’ ಎನ್ನುತ್ತಾನೆ. ಇದು ಟ್ರೈಲರ್‌ನಲ್ಲಿನ ದೃಶ್ಯತುಣುಕುಗಳು. ಈ ಚಿತ್ರದಲ್ಲಿ ವಿಜಯ್, ಉಸ್ತಾದ್ ಪಾತ್ರವನ್ನು ಮಾಡುತ್ತಿದ್ದಾರೆ. ಅಮೀರ್‌ಖಾನ್ ಅವರ ‘ದಂಗಲ್’ ಚಿತ್ರದ ಒಂದು ದೃಶ್ಯ ನೋಡಿ ಈ ಸಿನಿಮಾ ಮಾಡಲು ಸ್ಫೂರ್ತಿ ಬಂತು. ಹಾಗಂತ ಸುಲ್ತಾನ್, ದಂಗಲ್ ಚಿತ್ರದ ಕತೆಗೂ ಈ ಚಿತ್ರದ ಕತೆಗೂ ಸಂಬಂಧವಿಲ್ಲ’ ಎನ್ನುತ್ತಾರೆ ವಿಜಯ್.
ನಟನೆಯೆಡೆಗೆ ಮಗನ ಉತ್ಸಾಹ ನೋಡಿ ಖುಷಿಯಾಗಿರುವ ಅವರು ‘ಅವನು ಈಗ ಶ್ರಮ ಪಟ್ಟರೆ ಮುಂದೆ ಜನರು ಶಿಳ್ಳೆ ಹೊಡೆಯುತ್ತಾರೆ’ ಎಂದು ಕಿವಿಮಾತು ಹೇಳಿದ್ದಾರೆ. ‘ಚೌಕಬಾರ’ ಕಿರುಚಿತ್ರ, ‘ಚೂರಿಕಟ್ಟೆ’ ಎಂಬ ಸಿನಿಮಾ ನಿರ್ದೇಶನ ಮಾಡಿದ್ದ ರಾಘು ಶಿವಮೊಗ್ಗ ಅವರು ‘ಕುಸ್ತಿ’ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರಕ್ಕಾಗಿ ವಿಜಯ್ ಎಂಟು ತಿಂಗಳು ಕುಸ್ತಿ ತರಬೇತಿಯನ್ನೂ ಪಡೆದುಕೊಂಡಿದ್ದಾರೆ.
ಇಬ್ಬರು ನಾಯಕಿಯರು, ಇತರೆ ಪಾತ್ರಗಳಿಗಾಗಿ ಆಯ್ಕೆ ನಡೆಯುತ್ತಿದೆ. ಅಪ್ಪನೊಂದಿಗೆ ಕೇಕ್ ಕತ್ತರಿಸಿದ ಸಾಮ್ರಾಟ್ ವಿಜಯ್, ‘ತರಬೇತಿ ಪಡೆಯುವಾಗ ಮಾಸ್ಟರ್ ಮೇಲೆ ಕೋಪ ಬಂದಿತ್ತು. ಇವತ್ತು ಟೀಸರ್ ನೋಡಿದಾಗ ಎಲ್ಲವು ಮರೆತುಹೋಯಿತು’ ಎಂದು ಮುಗ್ಧವಾಗಿ ಹೇಳಿದರು. ಐದು ಹಾಡುಗಳಿಗೆ ನವೀನ್ ಸಜ್ಜು ಸಂಗೀತ ಸಂಯೋಜಿಸುತ್ತಿದ್ದಾರೆ. ಶಾಂತಿಸಾಗರ್ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ. ದುನಿಯಾ ಟಾಕೀಸ್ ಮೂಲಕ ನಿರ್ಮಾಣವಾಗುತ್ತಿರುವ ಚಿತ್ರದ ಚಿತ್ರೀಕರಣ ಆಗಸ್ಟ್‌ನಲ್ಲಿ ಶುರುವಾಗಲಿದೆ.
0 Post Comments (+) | 0 |
Bengaluru, First Published 9, Oct 2018, 9:51 AM IST
Highlights
4ನೇ ಆವೃತ್ತಿಯ ಪ್ರಿಮೀಯರ್ ಬ್ಯಾಡ್ಮಿಂಟನ್ ಲೀಗ್ ಹರಾಜು ಪ್ರಕ್ರಿಯೆ ಮುಗಿದಿದೆ. ಕರ್ನಾಟಕ ಅಶ್ವಿನಿ ಪೊನ್ನಪ್ಪ 32 ಲಕ್ಷ ರೂಪಾಯಿಗೆ ಹರಾಜಾದರೆ, ಸೈನಾ ನೆಹ್ವಾಲ್, ಪಿವಿ ಸಿಂಧೂ ಗರಿಷ್ಠ ಮೊತ್ತಕ್ಕೆ ಹರಾಜಾದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ನವದೆಹಲಿ(ಅ.09): ಡಿ. 22 ರಿಂದ ಜ. 13 ರವರೆಗೆ ನಡೆಯಲಿರುವ 4ನೇ ಆವೃತ್ತಿಯ ಪ್ರಿಮೀಯರ್ ಬ್ಯಾಡ್ಮಿಂಟನ್ ಲೀಗ್ ಗಾಗಿ ಸೋಮವಾರ ನಡೆದ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಭಾರತದ ತಾರಾ ಶಟ್ಲರ್‌ಗಳಾದ ಪಿ.ವಿ. ಸಿಂಧು, ಸೈನಾ ನೆಹ್ವಾಲ್, ಕಿದಂಬಿ ಶ್ರೀಕಾಂತ್ ₹ 80 ಲಕ್ಷ ಮೊತ್ತಕ್ಕೆ ಬಿಕರಿಯಾಗಿದ್ದಾರೆ.
ಕನ್ನಡತಿ ಅಶ್ವಿನಿ ಪೊನ್ನಪ್ಪ 23 ಲಕ್ಷ ರೂಪಾಯಿ ಬೆಲೆಗೆ ಹರಾಜಾಗಿದ್ದಾರೆ. ವಿಶ್ವ ಚಾಂಪಿಯನ್ ಸ್ಪೇನ್‌ನ ಕ್ಯಾರೋಲಿನಾ ಮರಿನ್ ಗರಿಷ್ಠ ಮೊತ್ತಕ್ಕೆ ಪುಣೆ ಸೆವೆನ್
ಏಸಸ್ ತಂಡದ ಪಾಲಾಗಿದ್ದಾರೆ. ಈ ಬಾರಿಯ ಟೂರ್ನಿಯ ಒಟ್ಟು ಮೊತ್ತ 60 ಕೋಟಿಯಾಗಿದ್ದು, ಪ್ರಶಸ್ತಿ ಮೊತ್ತ 6 ಕೋಟಿಯಾಗಿದೆ ಎಂದು ಪಿಬಿಎಲ್ ವ್ಯವಸ್ಥಾಪಕ ನಿರ್ದೇಶಕ ಅತುಲ್ ಪಾಂಡೆ ಹೇಳಿದ್ದಾರೆ.
ಹರಾಜು ಪ್ರಕ್ರಿಯೆಯಲ್ಲಿ ಐಕಾನ್ ಅಲ್ಲದ ಶಟ್ಲರ್ ಆದ ಭಾರತದ ಡಬಲ್ಸ್ ತಾರೆ ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ ಹೈದರಾಬಾದ್ ಹಂಟರ್ಸ್‌ಗೆ ₹ 52 ಲಕ್ಷಕ್ಕೆ
ಮಾರಾಟವಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಸಾತ್ವಿಕ್ ಮೂಲ ಬೆಲೆ ₹ 15 ಲಕ್ಷವಿತ್ತು.
ಐಕಾನ್ ಅಲ್ಲದ ಶಟ್ಲರ್‌ಗಳ ಪಟ್ಟಿಯಲ್ಲಿ ಇಂಡೋನೇಷ್ಯಾದ ಟಾಮಿ ಸುಗಿರ್ತೊ ₹ 70 ಲಕ್ಷಕ್ಕೆ ಡೆಲ್ಲಿ ಡ್ಯಾಶರ್ಸ್ ಪಾಲಾಗಿದ್ದಾರೆ. ವಿಶ್ವ ನಂ.11 ಆಟಗಾರ ಸುಗಿರ್ತೊ ಮೂಲ ಬೆಲೆ ₹ 40 ಲಕ್ಷ ನಿಗದಿಯಾಗಿತ್ತು. 2015ರ ಬಳಿಕ ಎಲ್ಲ ಆಟಗಾರರು ಮೊದಲ ಬಾರಿಗೆ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಮತ್ತು ರೈಟ್ ಟು ಮ್ಯಾಚ್ ಕಾರ್ಡ್ (ಆರ್‌ಟಿಎಮ್) ನ್ನು ಈ ಬಾರಿ ಬಳಸದೇ ಪ್ರಕ್ರಿಯೆ ನಡೆಸಲಾಯಿತು.
ಈ ಬಾರಿ 9ನೇ ತಂಡವಾಗಿ ಟೂರ್ನಿಗೆ ನಟಿ ತಾಪ್ಸಿ ಪನ್ನು ಒಡೆತನದ ಪುಣೆ ಸೆವೆನ್ ಏಸಸ್ ಸೇರ್ಪಡೆಯಾಗಿದೆ. ಪುಣೆ ತಂಡದಲ್ಲಿ ಸ್ಪೇನ್‌ನ ತಾರಾ ಶಟ್ಲರ್ ಕ್ಯಾರೋಲಿನಾ ಮರಿನ್ ಆಡಲಿದ್ದಾರೆ. ಕಳೆದ 2 ಆವೃತ್ತಿಗಳಲ್ಲಿ ಸಿಂಧು, ಚೆನ್ನೈ ಸ್ಮಾಶರ್ಸ್ ಪರ ಆಡಿದ್ದರು. ಈ ಬಾರಿ ಸಿಂಧು ಹೈದರಾಬಾದ್ ಪರ ಆಡುವ ಉತ್ಸಾಹದಲ್ಲಿದ್ದಾರೆ.
ಇನ್ನು ಪುರುಷರ ವಿಭಾಗದಲ್ಲಿ ಮಾಜಿ ವಿಶ್ವ ಚಾಂಪಿಯನ್ ವಿಕ್ಟರ ಅಕ್ಸೆಲ್ಸನ್, ಅಹ್ಮದಬಾದ್ ಸ್ಮಾಶ್ ಮಾಸ್ಟರ್ಸ್‌ನ್ನು ಪ್ರತಿನಿಧಿಸಿದರೆ, ಶ್ರೀಕಾಂತ್ ಬೆಂಗಳೂರು
ತಂಡದಲ್ಲಿ ಆಡಲಿದ್ದಾರೆ. ಎಚ್. ಎಸ್. ಪ್ರಣಯ್ ಡೆಲ್ಲಿ ಡ್ಯಾಶರ್ಸ್ ತಂಡ ಸೇರಿಕೊಂಡಿದ್ದಾರೆ. ಕೊರಿಯಾದ ಮಿಶ್ರ ಡಬಲ್ಸ್ ಸ್ಪೆಷಲಿಸ್ಟ್ ಈಮ್ ಹೀ ವಾನ್ 30 ಲಕ್ಷಕ್ಕೆ ಹೈದರಾಬಾದ್ ತಂಡಕ್ಕೆ ಬಿಕರಿಯಾಗಿದ್ದಾರೆ. ವಾನ್ ಮೂಲ ಬೆಲೆ ಕೇವಲ 7 ಲಕ್ಷವಾಗಿತ್ತು. | 2 |
ಕಪಿಲ್ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ
Highlights
ಮೇಡಮ್ ಟುಸ್ಸಾಡ್ಸ್ ಲಂಡನ್ನಿನ ಅತಿದೊಡ್ಡ ಪ್ರೇಕ್ಷಣೀಯ ಸ್ಥಳವಾಗಿದ್ದು, ಇಲ್ಲಿ ಜಗತ್ತಿನ ಖ್ಯಾತನಾಮರ ಮೇಣದ ಪ್ರತಿಮೆಗಳು ನೋಡಲು ಸಿಗುತ್ತವೆ.
ನವದೆಹಲಿ(ಮೇ.11): ಟೀಂ ಇಂಡಿಯಾವು ಚಾಂಪಿಯನ್ಸ್ ಟ್ರೋಫಿಯಲ್ಲಿ ಕೇವಲ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮೇಲೆ ಅವಲಂಬಿತವಾಗಿಲ್ಲ ಎಂದು ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ ಅಭಿಪ್ರಾಯಪಟ್ಟಿದ್ದಾರೆ.
ಇಲ್ಲಿನ ಪ್ರತಿಷ್ಠಿತ ಮೇಡಮ್ ಟುಸ್ಸಾಡ್ಸ್'ನಲ್ಲಿ ತಮ್ಮ ಮೇಣದ ಪ್ರತಿಮೆಯನ್ನು ಅನಾವರಣಗೊಳಿಸಿ ಮಾತನಾಡಿದ ಅವರು, ಒಂದು ವೇಳೆ ತಂಡಕ್ಕೆ ಗಾಯಾಳುಗಳ ಸಮಸ್ಯೆ ಕಾಡದಿದ್ದರೆ, ಭಾರತ ಚಾಂಪಿಯನ್ಸ್ ಟ್ರೋಫಿಯನ್ನು ಉಳಿಸಿಕೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೇಡಮ್ ಟುಸ್ಸಾಡ್ಸ್ ಲಂಡನ್ನಿನ ಅತಿದೊಡ್ಡ ಪ್ರೇಕ್ಷಣೀಯ ಸ್ಥಳವಾಗಿದ್ದು, ಇಲ್ಲಿ ಜಗತ್ತಿನ ಖ್ಯಾತನಾಮರ ಮೇಣದ ಪ್ರತಿಮೆಗಳು ನೋಡಲು ಸಿಗುತ್ತವೆ. ಜಗತ್ತಿನಾದ್ಯಂತ ಮೇಡಮ್ ಟುಸ್ಸಾಡ್ಸ್ ಸಂಸ್ಥೆಯ ಸುಮಾರು 23 ಶಾಖೆಗಳಿದ್ದು, 23ನೇ ಶಾಖೆ ನವದೆಹಲಿಯ ಕಾನಟ್ ಪ್ಲೇಸ್'ನಲ್ಲಿ ತಲೆಯೆತ್ತಿದೆ.
ಇಲ್ಲಿ ಮಹಾತ್ಮ ಗಾಂಧಿ, ಬಾಲಿವುಡ್ ಬಾದ್'ಶಾ ಅಮಿತಾಭ್ ಬಚ್ಚನ್, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್, ಜಾಕಿ ಚಾನ್ ಸೇರಿದಂತೆ ವಿಶ್ವದ ಖ್ಯಾತನಾಮರ ವಿವಿಧ ಭಂಗಿಯ ಮೇಣದ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ.
ಹರ್ಯಾಣದ ಹರಿಕೇನ್ ಎಂದೇ ಗುರುತಿಸಲಾಗುವ, ಭಾರತಕ್ಕೆ ಚೊಚ್ಚಲ ಏಕದಿನ ವಿಶ್ವಕಪ್ (1983) ಗೆದ್ದುಕೊಟ್ಟ ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ ಬೌಲಿಂಗ್ ಮಾಡುತ್ತಿರುವ ಭಂಗಿಯ ಮೇಣದ ಮೂರ್ತಿಯನ್ನು ಅನಾವರಣಗೊಳಿಸಲಾಗಿದ್ದು ಅವರ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸಿಕ್ಕಂತಾಗಿದೆ.
ಮರ್ಲಿನ್ ಎಂಟರ್'ಟೈನ್'ಮೆಂಟ್ಸ್ ಪ್ರೈವೇಟ್ ಲಿಮಿಟೆಡ್ ಕಪಿಲ್ ದೇವ್ ಅವರ ಮೇಣದ ಪ್ರತಿಮೆಯನ್ನು ನಿರ್ಮಿಸಿದೆ. | 2 |
“ಬೀರ್‌ಬಲ್’ ಜೊತೆಯಾದ ರುಕ್ಮಿಣಿ ವಸಂತ್
Team Udayavani, Oct 30, 2017, 4:15 PM IST
ಅ
ಅ
ಅ
“ಶ್ರೀನಿವಾಸ ಕಲ್ಯಾಣ’ ಚಿತ್ರವನ್ನು ಮಾಡಿದ್ದ ಎಂ.ಜಿ. ಶ್ರೀನಿವಾಸ್ ಅಲಿಯಾಸ್ ಆರ್ಜೆ ಶ್ರೀನಿ, ಈಗ ಹೊಸ ಚಿತ್ರದೊಂದಿಗೆ ವಾಪಸ್ಸು ಬಂದಿದ್ದಾರೆ. ಈಗ ಶ್ರೀನಿ, “ಬೀರ್ಬಲ್’ ಟ್ರಯಾಲಜಿ ಮಾಡುವುದಕ್ಕೆ ಹೊರಟಿದ್ದಾರೆ. ಈ “ಬೀರ್‌ಬಲ್’ ಟ್ರಯಾಲಜಿಯ ಮೊದಲ ಭಾಗವಾದ “ಫೈಂಡಿಂಗ್ ವಜ್ರಮುನಿ’ ಚಿತ್ರದ ಮುಹೂರ್ತ ಇಂದು ಬೆಳಿಗ್ಗೆ ರಾಜರಾಜೇಶ್ವರಿ ನಗರದ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನಡೆಯಿತು.
ನಟ ನೀನಾಸಂ ಸತೀಶ್ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರು. “ಫೈಂಡಿಂಗ್ ವಜ್ರಮುನಿ’ ನಂತರ “ಅವರನ್ ಬಿಟ್ ಇವರನ್ ಬಿಟ್ ಅವರ್ಯಾರು’ ಮತ್ತು “ತುರೇ ಮಣೆ’ ಚಿತ್ರಗಳು ಬಿಡುಗಡೆಯಾಗಲಿವೆ. ಈ ಮೂರು ಚಿತ್ರಗಳಲ್ಲಿ ಬೀರ್‌ಬಲ್ ಎಂಬ ಲಾಯರ್‌ನ ಕಥೆ ಹೇಳುವುದಕ್ಕೆ ಶ್ರೀನಿ ಹೊರಟಿದ್ದು, ಆ ಲಾಯರ್‌ನ ಮೂರು ಸಾಹಸಗಳನ್ನು ಮೂರು ವಿಭಿನ್ನ ಚಿತ್ರಗಳ ಮೂಲಕ ಹೇಳುವ ಪ್ರಯತ್ನ ಮಾಡುತ್ತಿದ್ದಾರೆ.
ಇಲ್ಲಿ ಬೀರ್‌ಬಲ್ ಎಂಬ ಲಾಯರ್ ಪಾತ್ರವನ್ನು ಅವರೇ ಮಾಡುತ್ತಿದ್ದು, ನಾಯಕಿಯಾಗಿ ರುಕ್ಮಿಣಿ ವಸಂತ್ ಆಯ್ಕೆಯಾಗಿದ್ದಾರೆ. ಇನ್ನು ಈ ಚಿತ್ರವನ್ನು ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಬ್ಯಾನರ್‌ನಡಿ ಟಿ.ಆರ್. ಚಂದ್ರಶೇಖರ್ ನಿರ್ಮಿಸುತ್ತಿದ್ದಾರೆ. ಈಗಾಗಲೇ ಅವರು “ಜಾನ್ ಸೀನ’ ಮತ್ತು “ಚಮಕ್’ ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ. ಇದು ಅವರ ಬ್ಯಾನರ್‌ನ ಮೂರನೆಯ ಚಿತ್ರ.
ಇನ್ನೂ ವಿವಾಹವಾಗಿಲ್ಲವೇ? ಇಂದೇ ಕನ್ನಡ ಮ್ಯಾಟ್ರಿಮನಿಯಲ್ಲಿ ನೋಂದಾಯಿಸಿ - ನೋಂದಣಿ ಉಚಿತ!
Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.
To report any comment you can email us at udayavani.response@manipalgroup.info . We will review the request and delete the comments. | 0 |
ಸದ್ಯದಲ್ಲೇ ತೆರೆಮೇಲೆ ಬರಲಿದ್ದಾರೆ ಯಶ್
Highlights
ವರ್ಷದ ಕೊನೆಯಲ್ಲಿ ಚಿತ್ರರಂಗದಲ್ಲಿ ಸಂಭ್ರಮ ಹುಟ್ಟಿಸಿದ ಚಿತ್ರ ‘ಮಫ್ತಿ’. ಶಿವಣ್ಣನ ಖದರ್, ಶ್ರೀಮುರಳಿಯ ಪವರ್ ನೋಡಿದ ಪ್ರೇಕ್ಷಕ ಫಿದಾ ಆಗಿದ್ದಾನೆ.
ಬೆಂಗಳೂರು (ಡಿ.26): ವರ್ಷದ ಕೊನೆಯಲ್ಲಿ ಚಿತ್ರರಂಗದಲ್ಲಿ ಸಂಭ್ರಮ ಹುಟ್ಟಿಸಿದ ಚಿತ್ರ ‘ಮಫ್ತಿ’. ಶಿವಣ್ಣನ ಖದರ್, ಶ್ರೀಮುರಳಿಯ ಪವರ್ ನೋಡಿದ ಪ್ರೇಕ್ಷಕ ಫಿದಾ ಆಗಿದ್ದಾನೆ.
‘ಮಫ್ತಿ’ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಸಂದರ್ಭ ಹೀಗಿರುವಾಗ ಚೊಚ್ಛಲ ಚಿತ್ರದಲ್ಲಿ ಸೆಂಚುರಿ ಬಾರಿಸಿರುವ ನಿರ್ದೇಶಕ ನರ್ತನ್ ಮೇಲೆ ಎಲ್ಲರ ಕಣ್ಣು ಬಿದ್ದಿದೆ. ಅವರ ಮುಂದಿನ ಚಿತ್ರ ಯಾರಿಗಾಗಿ ಎಂಬ ಕುತೂಹಲ ಎಲ್ಲರನ್ನೂ ಕಾಡುತ್ತಿದೆಯಾದರೂ ಅದಕ್ಕೆ ಉತ್ತರ ಸಿಕ್ಕಿದೆ. ನರ್ತನ್ ಮುಂದಿನ ಚಿತ್ರಕ್ಕೆ ಹೀರೋ ಬೇರೆ ಯಾರೂ ಅಲ್ಲ ಮಾಸ್ಟರ್ ಪೀಸ್ ಯಶ್. ಈ ಹೊತ್ತಿನಲ್ಲಿ ನರ್ತನ್ ಜೊತೆ ನಿರ್ಮಾಪಕ ಜಯಣ್ಣ ಮತ್ತೊಂದು ಸಿನಿಮಾ ಮಾಡಲು ಉತ್ಸುಕರಾಗಿದ್ದಾರೆ. ಆ ಚಿತ್ರಕ್ಕೆ ಯಶ್ ನಾಯಕನಾಗುವ ಎಲ್ಲಾ ಲಕ್ಷಣಗಳೂ ಕಾಣುತ್ತಿವೆ. ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆದಿದ್ದು, ಯಶ್'ರಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ನರ್ತನ್ ಕತೆ ರೆಡಿ ಮಾಡುತ್ತಿದ್ದಾರೆ ಎನ್ನಲಾಗಿದೆ. ನರ್ತನ್‌ಗೆ ‘ಮಾಸ್ಟರ್‌ಪೀಸ್’ ಚಿತ್ರದಲ್ಲಿ ಯಶ್ ಜೊತೆ ಕೆಲಸ ಮಾಡಿದ್ದರು. ನರ್ತನ್ ಕೆಲಸ ಯಶ್ ಮೆಚ್ಚಿಕೊಂಡಿದ್ದರು. ಹೀಗಾಗಿ ಈ ಸ್ನೇಹ ಕೆಲಸ ಮಾಡುವ ಸಾಧ್ಯತೆ ಇದ್ದು, ಅಲ್ಲದೇ ಜಯಣ್ಣ ಮತ್ತು ಯಶ್ ಬಾಂಧವ್ಯವೂ ಚೆನ್ನಾಗಿರುವುದರಿಂದ ನರ್ತನ್ ನಿರ್ದೇಶನದಲ್ಲಿ ಯಶ್ ಮುಂದಿನ ಚಿತ್ರ ಸೆಟ್ಟೇರುವ ಲಕ್ಷಣ ಕಾಣುತ್ತಿದೆ.
Last Updated 11, Apr 2018, 1:11 PM IST | 0 |
ಮಾಸ
ಮೇಷ ಸೋದರ ಸಂಬಂಧಿಗಳ ಆಗಮನದಿಂದ ಹಬ್ಬದ ವಾತಾವರಣ. ಮಕ್ಕಳ ಮದುವೆ ಕಾರ್ಯಕ್ಕೆ ಹೊಸ ತಿರುವು. ಅಚ್ಚರಿಯಿಂದ ಕೂಡಿದ ದಿನವಾಗಿ ಪರಿಣಮಿಸುವುದು. ಸಮಾಧಾನ ಚಿತ್ತ ಕಾಪಾಡಿಕೊಳ್ಳಿ.
ವೃಷಭ ಸ್ವತ್ತು ವಿವಾದಗಳಲ್ಲಿ ಬಂಧುಗಳೊಡನೆ ಸೌಹಾರ್ದ ಮಾತುಕತೆಯಿಂದ ಲಾಭಕರ ನಿರ್ಧಾರ. ಪಿತ್ರಾರ್ಜಿತ ಆಸ್ತಿ ದೊರಕುವುದು. ಬಂಧುಗಳ ಜತೆಗಿನ ವಿರಸ ಶಮನವಾಗಿ ತಿಳಿ ವಾತಾವರಣ ಮೂಡುವುದು.
ಮಿಥುನ ಪ್ರತಿಭಾ ಪ್ರದರ್ಶನದ ಅವಕಾಶದೊಂದಿಗೆ ಉತ್ತಮ ಆದಾಯ ಮತ್ತು ಗೌರವ ಪ್ರಾಪ್ತಿ. ಮುಂದಿನ ದಿನಗಳಲ್ಲಿ ಉತ್ತಮ ಅವಕಾಶ. ಪ್ರಯಾಣದಲ್ಲಿ ಸುಖಾನುಭವ. ಉತ್ತಮ ಆರೋಗ್ಯ.
ಕಟಕ ಸನ್ನಡತೆಯಿಂದ ಜನಪ್ರಿಯತೆ ಹೆಚ್ಚಿಸಿಕೊಳ್ಳುವಿರಿ. ಸಮಾಜ ಸೇವೆಯು ಹೆಚ್ಚಿನ ಕೆಲಸ ಕಾರ್ಯಗಳೊಂದಿಗೆ ಗೌರವ ತಂದುಕೊಡಲಿದೆ. ಆರೋಗ್ಯದ ಬಗ್ಗೆ ಗಮನವಿರಲಿ. ವಿದ್ಯಾರ್ಥಿಗಳಿಗೆ ಶುಭ ಫಲ.
ಸಿಂಹ ವ್ಯವಹಾರದಲ್ಲಿ ಕೌಶಲ್ಯದಿಂದ ಹೆಚ್ಚಿನ ಲಾಭ. ಹೊಸ ಉದ್ಯಮದ ಆರಂಭದ ಬಗ್ಗೆ ಚಿಂತನೆಗಳು ಸಾಕಾರಗೊಳ್ಳುವವು. ಇಚ್ಛೆಯಂತೆ ಭೂಮಿ ಅಥವಾ ಮನೆ ಖರೀದಿ ಭಾಗ್ಯ ನಿಮ್ಮದಾಗಲಿದೆ.
ಕನ್ಯಾ ಸತ್ಕಾರ್ಯಗಳಿಗೆ ಸಹಾಯ ಕೋರಿ ಬರುವವರಿಗೆ ಸಹಾಯ ಹಸ್ತ ಚಾಚುವಿರಿ. ಹೋಟೇಲ್, ದರ್ಶಿನಿ, ಮುಂತಾದವುಗಳ ವ್ಯವಹಾರದಲ್ಲಿ ಹಿನ್ನಡೆ. ಹಿತೈಷಿಗಳ ಸಹಕಾರದ ಭರವಸೆ ಪಡೆದುಕೊಳ್ಳುವಿರಿ.
ತುಲಾ ಬೃಹತ್ ಯೋಜನೆಗಳಿಗೆ ಸನ್ನಿವೇಶಗಳು ಅನುಕೂಲಕರವಾಗಿ ಪರಿಣಮಿಸಲಿವೆ. ಹೊಸ ಅವಕಾಶ ಅರಸಿ ಬರಲಿವೆ. ವಿವಾಹಾಕಾಂಕ್ಷಿಗಳಿಗೆ ಮಾತುಕತೆಯಿಂದ ತೃಪ್ತಿಕರ ಸಮಾಚಾರ ಕೇಳಿಬರಲಿದೆ.
ವೃಶ್ಚಿಕ ಹೊಸ ಉದ್ಯಮ ನಡೆಸುವ ಯೋಜನೆ ಕೈಗೂಡುವ ಸಾಧ್ಯತೆ. ಆರೋಗ್ಯದಲ್ಲಿ ಹಿನ್ನಡೆ ಸಾಧ್ಯತೆ. ನಡೆಸಲಿಚ್ಛಿಸುವ ವ್ಯವಹಾರಗಳ ವಿಚಾರದಲ್ಲಿ ಸ್ಪಷ್ಟ ಚಿತ್ರಣ ಮೂಡಿಬರಲಿದೆ.
ಧನು ಪ್ರಯೋಗಶೀಲರಿಗೆ ಅನಿರೀಕ್ಷಿತ ಫಲಿತಾಂಶ. ಉನ್ನತ ಅಧಿಕಾರಿಗಳಿಗೆ ಅಚ್ಚರಿ ಮೂಡಿಸುವ ಕಾರ್ಯ ಮಾಡಲಿದ್ದೀರಿ. ಉದ್ಯಮಿಗಳಿಗೆ ಶ್ರಮಕ್ಕೆ ತಕ್ಕ ಪ್ರತಿಫಲ ದೊರಕುವುದು.
ಮಕರ ವ್ಯಾಪಾರದಲ್ಲಿ ಹಣದ ಹರಿವು ಸುಗಮವಾಗಿ ವ್ಯವಹಾರದಲ್ಲಿ ಉನ್ನತಿಯತ್ತ ಸಾಗಲಿದ್ದೀರಿ. ಯಾಂತ್ರೀಕೃತ ವಾಹನ, ಯಂತ್ರೋಪಕರಣಗಳ ವ್ಯಾಪಾರಿಗಳಿಗೆ ಉತ್ತಮ ವ್ಯವಹಾರದಿಂದಾಗಿ ಲಾಭ.
ಕುಂಭ ಹೊಸ ಉದ್ಯಮಕ್ಕೆ ಕಾಲಿಡುವ ಧಾವಂತದಿಂದ ಕೆಲಸ ಮಾಡಲಿದ್ದೀರಿ. ಗುರಿ ತಲುಪುವ ಹಾದಿಯಲ್ಲಿ ಸ್ನೇಹಿತರ ಸಹಕಾರ ದೊರಕಲಿದೆ. ಯಶಸ್ಸಿನ ದಿನ. ಸಂಗಾತಿಯಿಂದ ಸಂತಸದ ವಿಚಾರ ಕೇಳಲಿದ್ದೀರಿ.
ಮೀನ ವೈಯಕ್ತಿಕ ಜೀವನದಲ್ಲಿನ ವಿಚಾರ ಸ್ಪಷ್ಟಪಡಿಸಿಕೊಳ್ಳುವ ದಿಕ್ಕಿನಲ್ಲಿ ಗಣ್ಯರೊಂದಿಗೆ ಮುಖಾಮುಖಿ ಸಂಭಾಷಣೆ. ದುಡುಕು ಸ್ವಭಾವದಿಂದ ತೊಂದರೆ. ವಾತ ಸಂಬಂಧಿ ಕಾಯಿಲೆ ಉಲ್ಬಣವಾದೀತು.
ಮೇಷ ಅಶ್ವಿನಿ, ಭರಣಿ, ಕೃತ್ತಿಕಾ 1ನೇ ಪಾದ: ಅಪರಿಚಿತ ವ್ಯಕ್ತಿಗಳ ಮಾತಿಗೆ ಮರುಳಾಗದಿರಿ. ಅವರ ಮಾತುಗಳನ್ನು ಕೇಳಿ ಹೆಚ್ಚಿನ ಮೊತ್ತದ ಹಣವನ್ನು ಹೂಡಿಕೆ ಮಾಡದಿರಿ. ಹಿರಿಯರ ಸಲಹೆ ಮತ್ತು ಮಾರ್ಗದರ್ಶನಗಳು ನಿಮ್ಮ ವ್ಯವಹಾರಗಳಿಗೆ ನೆರವಾಗುವುವು. ಯಾರನ್ನೇ ಆಗಲಿ ತಿರಸ್ಕಾರದಿಂದ ಕಾಣದಿರಿ ಅಥವಾ ಹಂಗಿಸಲು ಹೋಗಬೇಡಿರಿ. ಹೊಸ ಸ್ನೇಹಿತರ ಪರಿಚಯ ದೊರೆತು ಸಂತಸವಾಗುವುದು. ಅನಿರೀಕ್ಷಿತವಾಗಿ ಸ್ವಲ್ಪ ಧನ ಹರಿದು ಬಂದು ನಿಮಗೆ ಅತೀವ ಸಂತಸವಾಗಬಹುದು. ಕೆಲವರಿಗೆ ಸ್ಥಿರಾಸ್ಥಿಯನ್ನು ಹೊಂದುವ ಯೋಗವಿದೆ.
ವೃಷಭ ಕೃತ್ತಿಕಾ 2,3,4, ರೋಹಿಣಿ, ಮೃಗಶಿರಾ 1,2: ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಂಡು ಉತ್ತಮ ಫಲಿತಾಂಶವನ್ನು ಪಡೆಯಬಹುದು. ನಿಮ್ಮ ಕೆಲವು ಉತ್ತಮ ಕೆಲಸಗಳು ಈಗ ಬೆಳಕಿಗೆ ಬಂದು ಅದು ನಿಮ್ಮ ಯೋಜನೆಗಳಿಗೆ ಸಹಾಯವಾಗುತ್ತದೆ. ಗಳಿಸಿದ ಸಂಪತ್ತು ಹಲವಾರು ಹೂಡಿಕೆಗಳಿಂದ ದುಪ್ಪಟ್ಟಾಗುವ ಸಾಧ್ಯತೆಗಳಿವೆ. ಆತ್ಮೀಯರ ಭೇಟಿಯಿಂದ ಸಂತಸವಾಗುತ್ತದೆ ಹಾಗೂ ಹಳೆಯ ನೆನಪುಗಳನ್ನು ಮೆಲುಕು ಹಾಕುವರು. ಅನಿರೀಕ್ಷಿತ ಧನಾಗಮನದಿಂದ ನಿಮಗೇ ಅಚ್ಚರಿಯಾಗುವುದು.
ಮಿಥುನ ಮೃಗಶಿರಾ 3,4, ಆರಿದ್ರಾ, ಪುನರ್ವಸು 1,2,3: ಆಹಾರ ದೋಷಗಳಿಂದ ಅನಾರೋಗ್ಯ ಉಂಟಾಗುತ್ತದೆ. ಇದಕ್ಕೆ ವೈದ್ಯಕೀಯ ಸಲಹೆ ಬಹಳ ಮುಖ್ಯ. ವೃತ್ತೀಯ ಸ್ಥಳಗಳಲ್ಲಿ ಪ್ರೇಮಾಂಕುರವಾಗುತ್ತದೆ. ಕೋರ್ಟ್ ಕಚೇರಿ ಕೆಲಸಗಳಲ್ಲಿ ಸ್ವಲ್ಪ ಇದ್ದ ಹಿನ್ನಡೆ ಈಗ ಸರಿಯಾಗುವುದು. ನಿಮ್ಮ ಒಳ್ಳೆಯ ಗುಣಗಳಿಂದ ಸಾರ್ವಜನಿಕವಾಗಿ ಮನ್ನಣೆಯನ್ನು ಗಳಿಸುವಿರಿ. ಆರ್ಥಿಕ ಸ್ಥಿತಿಯಲ್ಲಿ ಸ್ವಲ್ಪ ಸುಧಾರಣೆಯನ್ನು ಕಾಣಬಹುದು. ನೀವು ತೀರಿಸಬೇಕೆಂದಿರುವ ಸಾಲಗಳನ್ನು ಪಟ್ಟಿ ತಯಾರಿಸಿ ತೀರಿಸುವ ಬಗ್ಗೆ ಯೋಚಿಸಿರಿ. ಸಂಸಾರದಲ್ಲಿ ಬಂದಿದ್ದ ಸ್ವಲ್ಪ ಬಿಗುಮಾನಗಳು ಈಗ ದೂರವಾಗುತ್ತವೆ.
ಕಟಕ ಪುನರ್ವಸು 4, ಪುಷ್ಯ, ಆಶ್ಲೇಷ: ಧನಾದಾಯ ಸ್ವಲ್ಪ ವೃದ್ಧಿಯಾಗಿರುತ್ತದೆ. ಸರ್ಕಾರಿ ಮಟ್ಟದ ಕೆಲಸದಲ್ಲಿ ಜಯವಿರುತ್ತದೆ. ವಿದ್ಯುತ್ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಉತ್ತಮ ಆದಾಯವಿರುತ್ತದೆ. ಬೆಳ್ಳಿಯ ಸಗಟು ವ್ಯಾಪಾರಿಗಳಿಗೆ ವ್ಯಾಪಾರ ವೃದ್ಧಿಯಾಗಿ ಲಾಭಾಂಷ ಹೆಚ್ಚಾಗುವುದು. ವೃತ್ತಿಯಲ್ಲಿ ಅವಧಿ ಮೀರಿ ಮಾಡಿದ್ದ ಕೆಲಸಕ್ಕೆ ಈಗ ಧನಲಾಭವಾಗುತ್ತದೆ. ನಿರುದ್ಯೋಗಿಗಳಿಗೆ ಅನಿರೀಕ್ಷಿತವಾಗಿ ಉದ್ಯೋಗವಿರುತ್ತದೆ. ಲೇವಾದೇವಿ ವ್ಯವಹಾರ ಮಾಡುವುದು ಈಗ ಸಾಧುವಲ್ಲ.
ಸಿಂಹ ಮಖ, ಪೂರ್ವ ಫಲ್ಗುಣಿ, ಉತ್ತರ ಫಲ್ಗುಣಿ 1: ಮನೆಯಲ್ಲಿ ಚಿಕ್ಕ ಪುಟ್ಟ ವಿವಾದಗಳು ಕಂಡು ಬರುತ್ತವೆ. ನಿಮ್ಮ ವ್ಯವಹಾರ ಅಭಿವೃದ್ಧಿಗೆ ಚಿಂತನೆಯನ್ನು ನಡೆಸುವಿರಿ. ವಿದ್ಯಾರ್ಥಿಗಳಿಗೆ ಸಾಮಾಜಿಕ ಮನ್ನಣೆ ಮತ್ತು ತರಬೇತಿಗಳು ದೊರೆಯುವುವು. ನೀವು ಆತ್ಮವಿಶ್ವಾಸದಿಂದ ಈ ಹಿಂದೆ ಮಾಡಿದ್ದ ಕೆಲಸಗಳು ಈಗ ಫಲವನ್ನು ಕೊಡುವುವು. ಸಂಗಾತಿಯ ಆರೋಗ್ಯದ ಕಡೆ ಸ್ವಲ್ಪ ನಿಗಾ ವಹಿಸುವುದು ಒಳ್ಳೆಯದು. ವ್ಯವಹಾರಿಕ ಒತ್ತಡಗಳು ನಿಮ್ಮನ್ನು ಗೊಂದಲಕ್ಕೆ ದೂಡುವುವು. ಆದ್ದರಿಂದ ಸಮಚಿತ್ತದಿಂದ ಅಲೋಚಿಸಿರಿ.
ಕನ್ಯಾ ಉತ್ತರ ಫಲ್ಗುಣಿ 2,3,4, ಹಸ್ತ, ಚಿತ್ತಾ 1,2: ಮನೆಯಲ್ಲಿ ಅತಿಥಿ ಸತ್ಕಾರ ನಡೆಯುವ ಸಂದರ್ಭವಿದೆ. ನ್ಯಾಯಾಲಯದ ವ್ಯಾಜ್ಯಗಳು ನಿಮ್ಮ ಕೈಮೀರಿದಂತೆ ಕಂಡರೂ ಅಂತಿಮ ಜಯ ನಿಮ್ಮದಾಗಿರುತ್ತದೆ. ಹಮ್ಮಿಕೊಂಡ ಕಾರ್ಯಗಳಲ್ಲಿ ಸ್ವಲ್ಪ ನಿಧಾನಗತಿಯ ಪ್ರಗತಿ ಇರುತ್ತದೆ. ಆರ್ಥಿಕ ಸ್ಥಿತಿಯು ಚೇತರಿಕೆಯ ಹಾದಿಯಲ್ಲಿರುತ್ತದೆ. ಆದರೆ ಸಾಲ ಮಾಡುವಾಗ ಸ್ವಲ್ಪ ಎಚ್ಚರವಿರಲಿ. ಅತಿಯಾಗಿ ಸಾಲ ಮಾಡುವುದು ಬೇಡ. ಈ ಹಿಂದೆ ಹೂಡಿದ ಹಣಗಳು ಈಗ ಇಡಿಗಂಟಾಗಿ ಒದಗಿ ಬರುತ್ತವೆ ಮತ್ತು ನಿಮ್ಮ ಅವಶ್ಯಕತೆಯನ್ನು ಪೂರೈಸುತ್ತವೆ.
ತುಲಾ ಚಿತ್ತಾ 3,4, ಸ್ವಾತಿ, ವಿಶಾಖೆ 1,2,3: ಬೇರೆಯವರ ವಿಷಯದಲ್ಲಿ ಮಧ್ಯಸ್ಥಿಕೆಯನ್ನು ವಹಿಸಲು ಹೋಗಿ ನೀವು ತೊಂದರೆಗೆ ಸಿಲುಕಬೇಡಿರಿ ಮತ್ತು ನೆಮ್ಮದಿಯನ್ನು ಕಳೆದುಕೊಳ್ಳಬೇಡಿರಿ. ನಿಮ್ಮ ತಾಳ್ಮೆಯ ನಡೆಯು ಸಂಗಾತಿ ಮತ್ತು ಅವರ ಬಂಧುಗಳಲ್ಲಿ ಸಂತಸವನ್ನು ತರುತ್ತದೆ. ದಿನಸಿ ಸಗಟು ಮತ್ತು ಚಿಲ್ಲರೆಯ ವ್ಯಾಪಾರಿಗಳಿಗೆ ವ್ಯವಹಾರ ವೃದ್ಧಿಸುತ್ತದೆ. ಕೈಗಾರಿಕಾ ವಲಯದಲ್ಲಿ ಸ್ವಂತ ಉದ್ದಿಮೆಯನ್ನು ಸ್ಥಾಪಿಸಬೇಕೆನ್ನುವವರಿಗೆ ಉತ್ತಮ ಅವಕಾಶಗಳಿವೆ. ವಾಹನಗಳನ್ನು ಖರೀದಿಸಬೇಕೆನ್ನುವವರಿಗೆ ಸಾಕಷ್ಟು ಸೌಕರ್ಯವಿರುತ್ತದೆ.
ವೃಶ್ಚಿಕ ವಿಶಾಖ 4, ಅನುರಾಧ, ಜ್ಯೇಷ್ಠ : ಹಠ ಹಿಡಿದು ಕೆಲಸ ಮಾಡಿದರೂ ಆದಾಯದಲ್ಲಿ ಸ್ವಲ್ಪ ಏರಿಕೆ ಇರುತ್ತದೆ. ಎಲ್ಲಾ ಕೆಲಸವನ್ನೂ ಬೇರೆಯವರಿಗೆ ವಹಿಸುವುದು ತರವಲ್ಲ. ನೀವು ಅವುಗಳ ಮೇಲ್ವಿಚಾರಣೆಯನ್ನು ಸರಿಯಾಗಿ ಮಾಡಿರಿ. ಆಗ ಹಣ ಸೋರಿಕೆಯನ್ನು ತಡೆಗಟ್ಟಬಹುದು. ವಿದ್ಯಾರ್ಥಿಗಳು ಅವರ ಓದಿನಲ್ಲಿ ಹೆಚ್ಚು ಶ್ರಮವಹಿಸಬೇಕಾದ ಅನಿವಾರ್ಯತೆಯಿದೆ ಎಚ್ಚರವಿರಲಿ. ವೃತ್ತಿಯಲ್ಲಿ ಬೆಳವಣಿಗೆಯು ಬರುವ ಸಾಧ್ಯತೆಗಳಿವೆ. ಅನಿರೀಕ್ಷಿತವಾದ ಒತ್ತಡಗಳು ಎದುರಾದರೂ ಅದನ್ನು ನಿಭಾಯಿಸುವ ಶಕ್ತಿ ಇರುತ್ತದೆ.
ಧನು ಮೂಲ, ಪೂರ್ವಾಷಾಢ, ಉತ್ತರಾಷಾಡ 1: ಧಾರ್ಮಿಕ ಚಟುವಟಿಕೆಗಳನ್ನು ನಡೆಸುವವರಿಗೆ ಸಾಕಷ್ಠು ವಂತಿಕೆ ದೊರೆಯುವುದು. ಸಭೆ ಸಮಾರಂಭಗಳಲ್ಲಿ ಗೌರವ ದೊರೆಯುವ ಸಾಧ್ಯತೆಗಳಿರುತ್ತವೆ. ಬಂಧುಗಳಿಗೆ ವಾಗ್ದಾನ ನೀಡುವಾಗ ಎಚ್ಚರವಿರಲಿ. ಇಲ್ಲವಾದಲ್ಲಿ ಅವರ ಸಾಲವನ್ನು ನೀವೇ ಕಟ್ಟಬೇಕಾದ ಸ್ಥಿತಿ ಬರಬಹುದು. ಆರ್ಥಿಕ ಸ್ಥಿತಿಯು ಸಾಮಾನ್ಯವಾಗಿರುತ್ತದೆ. ಲೇವಾದೇವಿ ವ್ಯವಹಾರವು ಕಠಿಣ ಪರಿಸ್ಥಿತಿಯನ್ನು ತರಬಹುದು. ವಿದೇಶಗಳಲ್ಲಿ ಓದಬೇಕೆನ್ನುವವರ ಆಸೆ ಪೂರೈಸುತ್ತದೆ.
ಮಕರ ಉತ್ತರಾಷಾಡ 2,3,4, ಶ್ರವಣ, ಧನಿಷ್ಠ 1, 2: ಕಲಾವಿದರಿಗೆ ಉತ್ತಮ ಸಂಭಾವನೆ ದೊರೆಯುವ ಎಲ್ಲಾ ಸಾಧ್ಯತೆಗಳಿವೆ. ಹೋಟೆಲ್ ಉದ್ಯಮಿಗಳು ಮತ್ತು ಆಹಾರ ವಸ್ತುಗಳನ್ನು ಮಾರುವವರು ತಮ್ಮ ಮೇಲಿರುವ ವ್ಯಾಜ್ಯಗಳಲ್ಲಿ ಸ್ವಲ್ಪ ಶಾಂತವಾಗಿರುವುದು ಒಳ್ಳೆಯದು. ಮಹಿಳಾ ಉದ್ಯಮಿಗಳಿಗೆ ಸಹೋದ್ಯೋಗಿಗಳಿಂದ ಅಸಹಕಾರ ದೊರೆತು ಸ್ವಲ್ಪ ವಿಚಲಿತರಾಗುವರು. ಆದರೆ ನಂತರ ಸರಿಯಾಗುವುದು. ಆರ್ಥಿಕ ಸ್ಥಿತಿಯು ಉತ್ತಮವಾಗುವುದು. ಹಲವಾರು ಮೂಲಗಳಿಂದ ಹಣ ಹರಿದು ಬರುತ್ತದೆ.
ಕುಂಭ ಧನಿಷ್ಠ 3,4, ಶತಭಿಷ, ಪೂರ್ವಾಭಾದ್ರ 1,2,3: ಯಶಸ್ವಿಯಾಗಿ ಮಾಡಿದ ಸಂಕಲ್ಪದಿಂದಲೇ ನಿಮ್ಮ ಕಾರ್ಯದಲ್ಲಿ ಅರ್ಧ ಯಶಸ್ಸನ್ನು ಸಾಧಿಸುವಿರಿ. ನಿಮ್ಮ ಮೇಲಧಿಕಾರಿಗಳ ಸಹಾಯದಿಂದ ಕ್ಲಷ್ಠಿ ಸಮಸ್ಯೆಗಳು ಸರಾಗವಾಗಿ ಪರಿಹಾರವಾಗುವುದು. ಹಣಕಾಸಿನ ಸ್ಥಿತಿಯು ಉತ್ತಮವಾಗಿರುತ್ತದೆ. ವಿಪರೀತ ಕೆಲಸದ ಒತ್ತಡದಿಂದ ಸ್ವಲ್ಪ ದೇಹಾಲಸ್ಯವಾಗುವುದು. ಸ್ವಲ್ಪ ವಿಶ್ರಾಂತಿ ಸಹ ಅಗತ್ಯ. ನಿಮ್ಮ ಒಳ್ಳೆಯ ತನವನ್ನು ಕೆಲವರು ಬಳಸಿಕೊಂಡು ಮುಜುಗರಕ್ಕೆ ಒಳಗಾಗುವಂತೆ ಮಾಡುವರು. ಅತೀ ಶೀಘ್ರದಲ್ಲಿ ಕುಟುಂಬದಲ್ಲಿ ಶುಭ ಸಮಾಚಾರಗಳು ಕೇಳಿ ಬರುತ್ತವೆ.
ಮೀನ ಪೂರ್ವಾಭಾದ್ರ 4, ಉತ್ತರಾಭಾದ್ರ, ರೇವತಿ : ವೃತ್ತಿಯಲ್ಲಿ ಸ್ವಲ್ಪ ಉತ್ತಮ ಪರಿಶ್ರಮ ಅಗತ್ಯ. ನಿಮ್ಮ ಸಹೋದ್ಯೋಗಿಗಳೊಂದಿಗೆ ತಾಳ್ಮೆಯಿಂದ ವ್ಯವಹರಿಸುವುದು ಮುಖ್ಯ. ಪ್ರವಾಸದ ವೇಳೆ ಕೆಲವು ವಸ್ತುಗಳು ಕಳುವಾಗುವ ಸಾಧ್ಯತೆಗಳಿವೆ. ಉನ್ನತ ಅಧಿಕಾರಿಗಳ ಕೃಪೆಯಿಂದ ವೃತ್ತಿಯಲ್ಲಿ ಅನುಕೂಲವಾಗುವುದು. ನಿಮ್ಮ ಮಕ್ಕಳಿಗಾಗಿ ಸಾಕಷ್ಠು ಹಣ ಖರ್ಚಾಗುವ ಸಾಧ್ಯತೆ ಇದೆ. ಆರೋಗ್ಯದ ಬಗ್ಗೆ ಸ್ವಲ್ಪ ಗಮನವಿರಲಿ. ಆಸ್ಥಿ ವಿವಾದಗಳನ್ನು ಮಾತಿನಿಂದ ಬಗೆಹರಿಸಿಕೊಳ್ಳುವುದೇ ಒಳ್ಳೆಯದು. ಈಗ ಹಳೇ ಸ್ನೇಹಿತರಿಂದ ನಿಮಗೆ ಸ್ವಲ್ಪ ಅನುಕೂಲ ಒದಗುತ್ತದೆ.
ಮೇಷ ಮಂದಮಾರುತದಂತೆ ನಿಮ್ಮೊಡಲೊಳಗೆ ಅವಿತು ಕುಳಿತ ಅಶುಭಗಳೆಲ್ಲಾ ಹೊರಬೀಳಲಿವೆ. ವಿಚಲಿತರಾಗದಿರಿ. ವಾತಾವರಣದ ಬದಲಾವಣೆಯಿಂದ ಮನೆಯಲ್ಲಿ ಪ್ರಗತಿಯಾಗಲಿದೆ. ನಿಧಾನವಾಗಿ ಗುರಿ ತಲುಪುವುದು ಕ್ಷೇಮ. ಶುಭ: 1, 12, 11 ಅಶುಭ: 6, 8, 18
ವೃಷಭ ಕ್ರಮಿಸದೇ ಇರಲು ಬಯಸಿದ ದಾರಿಯನ್ನು ಕ್ರಮಿಸಬೇಕಾದ ಪ್ರಸಂಗ ಬಂದೊದಗಬಹುದು. ನಿರಾಸಕ್ತಿ ಯಾವುದಕ್ಕೂ ಪರಿಹಾರವಲ್ಲ. ಕಣ್ಣಿನ ತೊಂದರೆಯನ್ನು ನಿರ್ಲಕ್ಷಿಸದಿರಿ. ಮಂಗಳಕಾರ್ಯವನ್ನು ಮುಂದೆ ಹಾಕಿ. ಶುಭ: 3, 16, 19 ಅಶುಭ: 12, 21, 23
ಮಿಥುನ ಬಯಕೆಯೂ, ಕಾಲವೂ ಸರಿಯಾಗಿ ಮೇಳೈಸಿದೆ. ಆಸೆಗಳ ಶುಭಾರಂಭ ಮಾಡಿ. ಪ್ರಚಾರಕ್ಕಿಂತ ಮೊದಲು ಕೆಲಸಕ್ಕೆ ಆದ್ಯತೆ ಕೊಡಿ. ತಿಂಗಳಾಂತ್ಯದಲ್ಲಿ ಶುಭ ಫಲಗಳಿವೆ. ಸಂಗಾತಿಯೊಡನೆ ಹೆಚ್ಚಿನ ಕಾಲ ಕಳೆಯಿರಿ. ಕುಟುಂಬದಲಿ ಸಂತಸ. ಶುಭ : 13, 23, 6 ಅಶುಭ: 4, 7, 24
ಕಟಕ ದೈವಾರಾಧನೆಯ ಅಗತ್ಯ ಮುಂದುವರೆಯಲಿದೆ. ಕುಟುಂಬ, ಸಂಪತ್ತು ಮತ್ತು ಮನೆಯ ರಕ್ಷಣೆಯ ಜವಾಬ್ದಾರಿ ನಿಮ್ಮ ಮೇಲಿದೆ. ವ್ಯಾವಹಾರಿಕವಾಗಿ ಲಾಭವೂ ಇಲ್ಲ, ನಷ್ಟವೂ ಇಲ್ಲ. ತಾಳ್ಮೆ ಇರಲಿ. ದೇವರ ಸ್ಮರಣೆ ಮಾಡಿ. ಶುಭ: 4, 8, 12 ಅಶುಭ: 14, 9, 20
ಸಿಂಹ ಶುಭಫಲಗಳು ಬಾಗಿಲಲ್ಲಿ ನಿಂತಿವೆ. ನೀವೇ ಧೈರ್ಯದಿಂದ ಕರೆತನ್ನಿ. ಇಲ್ಲದಿರುವುದರ ಕುರಿತ ಬೇಸರಕ್ಕಿಂತ ಮುಂದೆ ಇರುವುದರ ಬಗ್ಗೆ ಸಂತಸವಿರಲಿ. ಪ್ರಾತಃಕಾಲದಲ್ಲಿ ಬೇಗನೆದ್ದು ಇಷ್ಟದೇವರನ್ನು ನೆನೆಯಿರಿ. ಶುಭ: 5, 20, 10 ಅಶುಭ: 4, 12, 13, 24
ಕನ್ಯಾ ಲಾಭ ನಷ್ಟಗಳ ಬಗ್ಗೆ ತಲೆಕೆಡಿಸಿಕೊಳ್ಳದೇ ಮುಂದಿರುವ ಆಪತ್ತಿನಿಂದ ಪಾರಾಗುವುದು ಹೇಗೆಂದು ವಿಚಾರ ಮಾಡಿ. ಸದ್ಯಕ್ಕೆ ನಿಮ್ಮ ಎಣಿಕೆಯಂತೆ ಯಾವುದೂ ನಡೆಯದು. ಪ್ರವಾಹದ ವಿರುದ್ಧ ಈಜು ಬೇಡ. ಶುಭ: 6, 18, 24 ಅಶುಭ: 5, 11, 21
ತುಲಾ ವ್ಯಾವಹಾರಿಕ ಪರಾಮರ್ಶೆಗೆ ಸುಸಮಯ. ಹೊಸ ವ್ಯವಹಾರವನ್ನು ಪ್ರಾರಂಭಿಸಲು ಇದು ಸರಿಯಾದ ಸಮಯ. ಇದರಿಂದ ಸಮಾಜದಲ್ಲಿ ಹೆಚ್ಚಿನ ಮನ್ನಣೆಯನ್ನೂ, ಗೌರವವನ್ನೂ ಗಳಿಸಬಲ್ಲಿರಿ. ಶುಭ: 7, 13, 21 ಅಶುಭ: 6, 14, 19
ವೃಶ್ಚಿಕ ಸರ್ವಮಂಗಳೆಯ ಆರಾಧನೆ ನಿಮಗೆ ಶುಭ ತರಲಿದೆ. ಜೀವನದ ಪ್ರಮುಖ ನಿರ್ಧಾರಗಳನ್ನು ಒಬ್ಬಂಟಿಯಾಗಿ ತೆಗೆದುಕೊಳ್ಳುವ ಪ್ರಸಂಗ ಬರಬಹುದು. ಸಂಗಾತಿಯ ಅಭಿಪ್ರಾಯಕ್ಕೆ ಕಾಯಬೇಡಿ. ಶುಭ: 8, 16, 24 ಅಶುಭ: 6, 17, 21
ಧನು ಅದೃಷ್ಟದೇವತೆಯ ಕೃಪಾದೃಷ್ಟಿಯ ಅಗತ್ಯ ನಿಮಗೆ ತುಂಬಾ ಇದೆ. ಆಸ್ತಿಗಳಿಕೆಗಾಗಿ ನೀವು ಮಾಡಿಕೊಂಡ ಸಾಲ- ಶೂಲವಾಗುವ ಸಾಧ್ಯತೆಯಿದೆ. ಖರ್ಚು ಗಣನೀಯವಾಗಿ ಕಡಿಮೆ ಮಾಡಿ. ಆರೋಗ್ಯವನ್ನು ಕಾಪಾಡಿಕೊಳ್ಳಿ. ಶುಭ: 9, 18, 27 ಅಶುಭ: 3, 13, 21
ಮಕರ ದಿನವೂ, ಜನರೂ, ಕಾಲವೂ ನಿಮ್ಮದೇ ಆಗಿರುವಾಗ ಹೆದರಿಕೆಯ ಮಾತೆಲ್ಲಿ. ಸ್ವಾತಂತ್ರ್ಯವನ್ನು ಅತಿಯಾಗಿ ಬಳಸಿಕೊಳ್ಳದೇ ಆತ್ಮವಿಶ್ವಾಸದಲ್ಲಿ ನಂಬಿಕೆಯಿಟ್ಟು ನಡೆಯಿರಿ. ಒಳ್ಳೆಯವರಾಗಲು ಹೋಗಿ ಎಡವದಿರಿ. ಶುಭ ಸಂಖ್ಯೆ: 11, 1, 20 ಅಶುಭ ಸಂಖ್ಯೆ : 8, 6, 13, 22
ಕುಂಭ ಮಿತ್ರರ ಉಪಟಳಗಳು ಕುಟುಂಬವನ್ನೇ ಬಾಧಿಸಬಹುದು. ಕೆಲ ದಿನಗಳ ಮಟ್ಟಿಗೆ ಏಕಾಂತದ ಅಗತ್ಯ. ದೇವತೆಯ ಆರಾಧನೆಯಿಂದ ಶುಭಫಲವಿದೆ. ಮಾಡದ ತಪ್ಪುಗಳನ್ನು ನಿಮ್ಮ ಹೆಗಲಿಗೆ ಹಾಕಿಕೊಳ್ಳಬೇಡಿ. ಶುಭ : 10, 21, 28 ಅಶುಭ: 8, 3, 21
ಮೀನ ನಿಮ್ಮ ಒಳ್ಳೆಯತನವನ್ನು ಸಮಾಜಕ್ಕೂ ಹಂಚಿ. ಸಹಾಯ ಕೇಳಿ ಬರುವವರ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸಿ. ಈಗಷ್ಟೇ ಹೊಸ ಹೊಸ ಆಲೋಚನೆಗಳನ್ನು ಜಾರಿಗೆ ತರುತ್ತಿದ್ದೀರಿ. ಹೆಚ್ಚು ನಿಧಾನ ಮಾಡಬೇಡಿ. ಶುಭ: 12, 22, 3, 6 ಅಶುಭ: 8, 13, 21
ಮೇಷ ವರ್ಷಾರಂಭದಲ್ಲಿ ಕಳೆದ ಸಂವತ್ಸರದಂತೆ ಸಿಹಿ ಫಲಗಳನ್ನೇ ಕಾಣುವಿರಿ. ಅಭೀಷ್ಟಾರ್ಥಾಗಮನದಿಂದಲೂ ಸ್ನೇಹ, ಸಹಾಯ, ಸೌಭಾಗ್ಯ ವರ್ಧನೆಯಿಂದಲೂ ಜೀವನ ಆಶಾದಾಯಕವಾಗಲಿದೆ. ವರ್ಷದ ಉತ್ತರಾರ್ಧದಲ್ಲಿ ಅಷ್ಟಮಕ್ಕೆ ಹೋಗುವ ಗುರುವಿನ ಪ್ರಭಾವದಿಂದಾಗಿ ಖರ್ಚು, ದುಃಖ, ನೋವುಗಳನ್ನು ಎದುರಿಸ ಬೇಕಾದರೂ ಭಾಗ್ಯದ ಶನಿಯಿಂದ ಸುಖ-ದುಃಖಗಳ ಮಿಶ್ರಫಲವನ್ನು ಹೊಂದುವಿರಿ. ತಂದೆ-ತಾಯಿ ಅಥವಾ ಪೋಷಕರ ಶುಶ್ರೂಷೆ, ಚಿಕಿತ್ಸೆ ಸಂಭವದಿಂದ ಆರ್ಥಿಕ ಸ್ಥಿತಿಯಲ್ಲಿ ಏರು– ಪೇರು ಕಾಣುವಿರಿ. ರಾಜಕೀಯ ಧುರೀಣರಿಗೆ ಬಿಡುವಿಲ್ಲದ ಕೆಲಸ ಕಾರ್ಯಗಳು ಅನಾರೋಗ್ಯಕ್ಕೆ ಕಾರಣವಾದೀತು. ಕಾರ್ಯಕ್ಷೇತ್ರದಲ್ಲಿ ಏನನ್ನೋ ಸಾಧಿಸಿದ ಹೆಮ್ಮೆ ನಿಮ್ಮದಾಗಲಿದೆ. ಮಹಾಗಣಪತಿಯನ್ನು ಅನನ್ಯ ಭಾವದಿಂದ ಆರಾಧಿಸಿ.
ವೃಷಭ ಹಲವು ಬಗೆಯ ಆರ್ಥಿಕ ಒತ್ತಡಗಳಿಂದ, ಅನಾರೋಗ್ಯ ಮತ್ತು ಶತ್ರು ಪೀಡೆಗಳಿಂದ ಬೇಸತ್ತಿರುವ ನಿಮಗೆ ವರ್ಷದ ಉತ್ತರಾರ್ಧದಲ್ಲಿ ಸತ್ಫಲಗಳನ್ನು ಅನುಭವಿಸುವ ಯೋಗವಿದೆ. ಅಕ್ಟೋಬರ್ ನಂತರ ಅವಿವಾಹಿತರಿಗೆ ವಿವಾಹ ಭಾಗ್ಯ. ಪಿತ್ರಾರ್ಜಿತವಾಗಿ ಬಂದ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಕೃಷಿ ಕ್ಷೇತ್ರದಲ್ಲಿ ಇರುವವರಿಗೆ ಅಧಿಕ ಲಾಭ, ತರಕಾರಿ ಮಾರಾಟಗಾರರಿಗೆ ಕುಬೇರನ ಅನುಗ್ರಹವು ಸಿಗಲಿದೆ. ಶೀತ– ಕಫದಂತಹ ಬೇನೆಯನ್ನು ನಿರ್ಲಕ್ಷಿಸಬೇಡಿ. ಮಿತ್ರ-ಶತ್ರು, ಬಂಧು-ಬಾಂಧವರಲ್ಲಿ ಯಾವುದೇ ವಿಚಾರದಲ್ಲೂ ವಿರೋಧವನ್ನು ವ್ಯಕ್ತಪಡಿಸಬೇಡಿ. ಕಾರ್ಯ ಕ್ಷೇತ್ರದಲ್ಲಿ ಶಾಂತ ಚಿತ್ತದಿಂದ ಕಾರ್ಮಿಕರ ಮಾತುಗಳನ್ನು ಆಲಿಸಿ ಸೂಕ್ತ ಕ್ರಮ ಕೈಗೊಳ್ಳುವುದು ಒಳ್ಳೆಯದು. ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮ ಮಾಡಲು ತೀರ್ಮಾನಿಸುವಿರಿ. ತಾಯಿ ರಾಜರಾಜೇಶ್ವರಿಯ ದರ್ಶನ, ಸೇವೆಯನ್ನು ಮಾಡುವುದರಿಂದ ಯಶಸ್ಸಿದೆ.
ಮಿಥುನ ಕಳೆದ ವರ್ಷವಿಡೀ ಸುಖದ ಸಾಗರದಲ್ಲಿ ಪ್ರಯಾಣಿಸಿದ ನೀವು ಈ ವರ್ಷವೂ ಪ್ರಯಾಣವನ್ನು ಮುಂದುವರಿಸುವಿರಿ. ಪಂಚಮದ ಗುರುವಿನ ಅನುಗ್ರಹದಿಂದಾಗಿ ಅಪೇಕ್ಷಿತ ದಂಪತಿಗಳಿಗೆ ಪುತ್ರಲಾಭ, ಇತರರಿಗೆ ಧಾರ್ವಿಕ ಕೃತ್ಯಗಳಿಂದ ಪುಣ್ಯ ಸಂಪಾದನೆ. ಎಣಿಕೆಯ ಕಾರ್ಯಗಳೆಲ್ಲ ದೈಹಿಕ ಶ್ರಮವಿಲ್ಲದೆ ಪೂರ್ಣಗೊಳ್ಳುವುದರಿಂದ ವರ್ಷದ ಮೊದಲ ಮೂರು ತಿಂಗಳು ಬಹು ಸಂತೋಷದಿಂದ ಕಳೆಯಲಿದ್ದೀರಿ. ಧನಾಗಮನಕ್ಕೇನೂ ಕೊರತೆಯಿರದು. ಆದರೆ ಸಂಗ್ರಹ ಪೂರ್ತಿ ಸೋರಿ ಹೋಗಬಹುದು. ಎಚ್ಚರಿಕೆ ಹೆಜ್ಜೆ ಹೆಜ್ಜೆಗೂ ಅಗತ್ಯವಿದೆ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಉತ್ತಮ ಪ್ರಗತಿಯಿದೆ. ಗಣಿತ ಶಿಕ್ಷಕರಿಗೆ, ಸಂಗೀತ ಸಾಧಕರಿಗೆ, ಕ್ರೀಡಾಪಟುಗಳಿಗೆ, ಚಿತ್ರಕಾರರಿಗೆ, ಪತ್ರಿಕೋದ್ಯಮಿಗಳಿಗೆ ಪುರಸ್ಕಾರಗಳನ್ನು ಪಡೆಯುವ ಕಾಲ ಒದಗಿ ಬರಲಿದೆ. ಸುಬ್ರಹ್ಮಣ್ಯನ ಕೃಪೆಗೆ ಪಾತ್ರರಾಗಿ ಇಷ್ಟಾರ್ಥಗಳನ್ನು ಸಂಪಾದಿಸಿಕೊಳ್ಳಿರಿ.
ಕಟಕ ತ್ತಲೆಯ ಪ್ರಪಂಚದಲ್ಲಿರುವ ನಿಮ್ಮ ಜೀವನಕ್ಕೆ ದೂರದಲ್ಲೊಂದು ಸುಜ್ಯೋತಿ ಕಾಣಲಿದೆ. ಮೇಲಧಿಕಾರಿಗಳ ಕಿರುಕುಳದಿಂದ ಹೊರಬರುವ ಕಾಲ ಸಮೀಪದಲ್ಲಿದೆ. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಫಲ ಸಿಗದಿದ್ದಲ್ಲಿ ದುಡುಕು ನಿರ್ಧಾರ ತೆಗೆದುಕೊಳ್ಳಬೇಡಿ. ಆಗಸ್ಟ್ ತಿಂಗಳಲ್ಲಿ ಪಿತ್ರಾರ್ಜಿತ ಆಸ್ತಿಗಳು ಅಥವಾ ಆರ್ಥಿಕ ಲಾಭಗಳು ದೊರಕಲಿವೆ. ಅಕ್ಟೋಬರ್ ತಿಂಗಳ ಕೊನೆಯಲ್ಲಿ ನೇತ್ರ ತಪಾಸಣೆ ಮಾಡಿಸಬೇಕಾದೀತು. ರೈತಾಪಿ ವರ್ಗದವರಿಗೆ, ಚಾಲಕ ವೃತ್ತಿಯವರಿಗೆ ಮತ್ತು ಕೈಗಾರಿಕೋದ್ಯಮಿಗಳಿಗೆ ದುಪ್ಪಟ್ಟು ಲಾಭ ಪಡೆಯುವ ಅವಕಾಶವಿದೆ. ತಂದೆ– ತಾಯಿಗೆ ತೀರ್ಥ ಯಾತ್ರೆ ಯೋಗವಿದೆ. ನಿಮ್ಮ ಚಾಣಾಕ್ಷತನದ ನಿರ್ಧಾರಗಳು ನಿಮ್ಮನ್ನು ಊರಿನ ತೂಕದ ವ್ಯಕ್ತಿಯನ್ನಾಗಿ ಮಾಡಲಿದೆ. ದುರ್ಗಾಪರಮೇಶ್ವರಿಯನ್ನು ಆರಾಧಿಸಿ ಶುಭ ಫಲಗಳನ್ನು ಪಡೆಯುವಿರಿ.
ಸಿಂಹ ಪಂಚಮದ ಶನಿಯಿಂದಾಗಿ ಕಷ್ಟ ಕಾರ್ಪಣ್ಯಗಳನ್ನು ಎದುರಿಸುತ್ತಿರುವ ನಿಮಗೆ ಈ ವರ್ಷವು ಮಿಶ್ರ ಫಲವನ್ನು ಕೊಡಲಿದೆ. ಆನುವಂಶಿಕವಾದ ಬಹುಕಾಲದ ಬೇಡಿಕೆಯೊಂದು ಈಡೇರುವುದರಿಂದ ಕೊಂಚ ನೆಮ್ಮದಿ ಸಿಗಲಿದೆ. ಪ್ರವಾಸ, ಪುಣ್ಯಕ್ಷೇತ್ರ ದರ್ಶನಗಳು ಜರುಗಲಿವೆ. ಪ್ರಯಾಣದಲ್ಲಿ ವಂಚನೆ, ಚೌರ್ಯ, ನಷ್ಟದ ಪ್ರಸಂಗಗಳಿದ್ದು ಎಚ್ಚರಿಕೆಯಿಂದಿರಿ. ಕಿರಾಣಿ ಅಂಗಡಿ, ಇಟ್ಟಿಗೆ, ಕಬ್ಬಿಣ, ಯಂತ್ರಸಾಮಗ್ರಿಗಳ ಮಾರಾಟ ಏರುಗತಿಯಲ್ಲಿ ನಡೆದೀತು. ವಾಹನ ಖರೀದಿಯ ನಿಮ್ಮ ಆಲೋಚನೆ ನೆರವೇರಲಿದೆ. ನೀವು ಹಿಂದೆ ಮಾಡಿದ ತಪ್ಪುಗಳು ಪುನರಾವರ್ತನೆಯಾಗದಂತೆ ಎಚ್ಚರ ವಹಿಸಿದರೆ ಲೇಸು. ವರ್ಷದ ಕೊನೆಯ ತನಕ ಭಾಗ್ಯ ವೃದ್ಧಿಯಿದ್ದರೂ ರಕ್ತಸಂಬಂಧಿ ಕಾಯಿಲೆಯ ಲಕ್ಷಣ ಕಾಣಿಸೀತು. ದಾಂಪತ್ಯದಲ್ಲಿ ನೆಮ್ಮದಿ ಕಾಪಾಡಿಕೊಳ್ಳಿ. ದೈವಚಿಂತನೆಯನ್ನು ಬಿಡದಿರಿ.
ಕನ್ಯಾ ಈ ವರ್ಷದ ಮೊದಲಾರ್ಧದಲ್ಲಿ ನೀವು ಮಾಡಿದ ಕೆಲಸಕ್ಕೆ ದುಪ್ಪಟ್ಟು ಸಂಪಾದನೆಯಾಗುವ ಯೋಗವಿದೆ. ಮಾತುಗಾರರಿಗೆ, ವಾಗ್ಮಿಗಳಿಗೆ, ಬೋಧಕ ವರ್ಗದವರಿಗೆ ವೃತ್ತಿಯಲ್ಲಿ ಮುಂಬಡ್ತಿ ಅಥವಾ ಸನ್ಮಾನಗಳು ದೊರಕಲಿದೆ. ಕೈತಪ್ಪಿ ಹೋದ ಹಣ ಕೈ ಸೇರುವುದು. ವಾತ-ಪಿತ್ಥಗಳ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ. ಕರ-ಕುಶಲ ವಸ್ತುಗಳ ತಯಾರಿಕೆಯಲ್ಲಿ ಆಸಕ್ತಿ ಹೆಚ್ಚುವುದು, ಜೊತೆಗೆ ಲಾಭವೂ ಇದೆ. ತಂದೆ-ತಾಯಿಯ ಆರೋಗ್ಯದ ಕಡೆಗೆ ಗಮನ ಕೊಡುವುದು ಅನಿವಾರ್ಯವಾಗುವುದು. ವಿದ್ಯಾರ್ಥಿಗಳಿಗೆ ಶ್ರೇಯಸ್ಸು, ಮೇಧಾಶಕ್ತಿ ಹೆಚ್ಚಲಿದೆ. ಉನ್ನತ ವ್ಯಾಸಂಗಕ್ಕೆ ವಿದೇಶಯಾನದ ಅವಕಾಶವಿದೆ. ನಿಮ್ಮ ಸರ್ವತೋಮುಖ ಅಭಿವೃದ್ಧಿಗೆ ಸೋದರ ವರ್ಗದವರ ಬೆಂಬಲ ಸಿಗಲಿದೆ. ಹನುಮ ಸಮೇತನಾದ ಶ್ರೀರಾಮನ ಪರಿವಾರವನ್ನು ಆರಾಧಿಸಿ ಶ್ರೇಯೋವಂತರಾಗಿರಿ.
ತುಲಾ ಕಳೆದ ವರ್ಷದಲ್ಲಿ ನೀವು ಅನುಭವಿಸಿದ ಸಮಸ್ತ ಸಮಸ್ಯೆಗಳಿಗೆ ಮುಕ್ತಿ ಸಿಗಲಿದೆ. ಖರ್ಚು, ವೆಚ್ಚಗಳು ವರ್ಷದ ಮೊದಲಾರ್ಧದವರೆಗೆ ಹಿಂದಿನಂತೆಯೇ ನಡೆಯಲಿವೆ. ಅಪವಾದದ ಆರೋಪ ಹೊತ್ತಿರುವ ನಿಮಗೆ ನ್ಯಾಯ ಸಿಗಲಿದೆ. ಮನೆಯಲ್ಲಿ ಮಂಗಳ ಕಾರ್ಯ ಜರುಗುವುದು. ವ್ಯಾಪಾರಿಗಳಿಗೆ ಲಾಭದಾಯಕ ಬೆಳವಣಿಗೆ. ಸೇವಕ ವರ್ಗದವರಿಗೆ, ಆರಕ್ಷಕರಿಗೆ, ತಾಂತ್ರಿಕರಿಗೆ ಉದ್ಯೋಗದಲ್ಲಿ ಸನ್ಮಾನ ಅಥವಾ ಮುಂಬಡ್ತಿ ದೊರಕಲಿದೆ. ಬಂಧು-ಬಾಂಧವರಲ್ಲಿ ತಾಳ್ಮೆಯಿಂದ ವರ್ತಿಸಿ. ಧಾರ್ಮಿಕ ವಿಚಾರದಲ್ಲಿ ಆಸಕ್ತಿ ತೋರಿದಷ್ಟೂ ಸುಖ-ಶಾಂತಿ ಹೆಚ್ಚುವುದು. ಋಣ ಬಾಧೆಯು ಕಾಡಬಹುದು. ಗೃಹ ನಿರ್ಮಾಣ ಆಲೋಚನೆಯು ಕಾರ್ಯರೂಪಕ್ಕೆ ಬರುವುದು. ಮಹಾಗಣಪತಿಯನ್ನು ಭಾವ ಪೂರ್ವಕವಾಗಿ ಪೂಜಿಸಿ ಪುಣ್ಯ ಸಂಪಾದನೆ ಮಾಡಿ.
ವೃಶ್ಚಿಕ ಶನಿಯ ಪ್ರಭಾವದಿಂದ ಜೀವನದಲ್ಲಿ ಬೇಸರಗೊಂಡಿರುವ ನಿಮಗೆ ಹಂತ ಹಂತವಾಗಿ ಜೀವನೋಲ್ಲಾಸ ಬರಲಿದೆ. ಮನದಾಳದಲ್ಲಿ ಅಡಗಿರುವ ನಿಮ್ಮ ಚಿಂತೆಯೊಂದಕ್ಕೆ ಉತ್ತರ ದೊರಕಲಿದೆ. ಅಧಿಕಾರ ವರ್ಗಕ್ಕೆ ಕೈ ಕೆಳಗಿನವರ ಸಹಕಾರವಿಲ್ಲದೆ ಕಾರ್ಯಸಾಧನೆಯಲ್ಲಿ ತಲೆತಗ್ಗಿಸುವಂತಾದೀತು. ವ್ಯಯದ ಗುರು ಶತ್ರುಗಳನ್ನು ಉಂಟು ಮಾಡಿಯಾನು. ಒಂದು ಹೆಜ್ಜೆ ಇಡಬೇಕಾದರೇ ಹತ್ತು ಬಾರಿ ಯೋಚನೆ ಮಾಡುವುದು ಒಳ್ಳೆಯದು. ಸಹೋದರರ ಅಥವಾ ದಾಯಾದಿಗಳ ಭಿನ್ನಾಭಿಪ್ರಾಯದಿಂದ ನ್ಯಾಯಾಲಯದ ಮೆಟ್ಟಿಲು ಹತ್ತ ಬೇಕಾಗುವುದು. ಮಡದಿ ಮಕ್ಕಳ ಆರೋಗ್ಯದಲ್ಲಿ ಗಮನ ಹರಿಸುವುದು ಅಗತ್ಯ. ಚಿನ್ನಾಭರಣ, ಮುತ್ತು-ರತ್ನಗಳ ಮಾರಾಟ ಮಾಡುವವರಿಗೆ ಬಿಡುವಿಲ್ಲದ ವ್ಯಾಪಾರವಾಗಲಿದೆ. ಆಂಜನೇಯನನ್ನು ಧ್ಯಾನಿಸಿ. ಮಾನಸಿಕ ಧೈರ್ಯ ಮೂಡುವುದು.
ಧನು ಸಾಡೇಸಾತಿನ ಬೇನೆಯಿಂದ ಬಳಲಿರುವ ನಿಮಗೆ ವರ್ಷದ ಮೊದಲಾರ್ಧದಲ್ಲಿ ಗುರುವಿನ ಅನುಗ್ರಹ ಸಿಗಲಿದೆ. ಲಾಭದ ಗುರು ಸರ್ವ ಕ್ಷೇತ್ರದಲ್ಲಿಯೂ ನಿಮ್ಮನ್ನು ವಿಜಯರನ್ನಾಗಿ ಮಾಡುತ್ತಾನೆ. ಮೀನುಗಾರರು, ಹೈನುಗಾರಿಕೆಯವರು, ಪಶು ಸಂಗೋಪನೆಯವರು ವೃತ್ತಿಯಲ್ಲಿ ಕಾಳಜಿ ವಹಿಸುವುದು ಒಳಿತು. ಧಾರ್ಮಿಕ ಕಾರ್ಯಗಳಲ್ಲಿ ಹಣ ವ್ಯಯವಾಗುವುದು. ವೈದ್ಯಕೀಯ ವೃತ್ತಿಯನ್ನು ಅನುಸರಿಸುವವರಿಗೆ ಆಯ-ವ್ಯಯ ಸಮತೋಲನದಲ್ಲಿದ್ದರೂ ಅಪವಾದದ ಭೀತಿ ಎದುರಾಗುವುದು. ಆನುವಂಶಿಕ ಆಸ್ತಿಯನ್ನು ಅನುಭವಿಸುವ ಯೋಗ ಬರಲಿದೆ. ಶತ್ರುಗಳು ಮಿತ್ರರಾಗಲು ಬಯಸಿ ಬರುತ್ತಾರೆ. ಲಾಟರಿಯಂತಹ ಯೋಜನೆಗಳು ಕಣ್ಣಾ-ಮುಚ್ಚಾಲೆಯಾಟ ನಡೆಸಿದರೂ ನಿಮಗೆ ಜಯವಿದೆ. ‘ಸತ್ಯ ವಾಕ್ಯಕೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು’ ಎಂಬ ಮಾತನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು
ಮಕರ ಕಳೆದ ಸಂವತ್ಸರದಂತೆಯೇ ಈ ಸಂವತ್ಸರದಲ್ಲೂ ಕೂಡ ಸುಖ-ದುಃಖದ ಸಮ ಫಲವನ್ನು ಹೊಂದುವಿರಿ. ಉದ್ಯೋಗಾನ್ವೇಷಿಗಳಿಗೆ ವಿದ್ಯೆಗೆ ತಕ್ಕಂತೆ ಉದ್ಯೋಗಗಳು ದೊರಕಲಿವೆ. ಉದ್ಯೋಗಸ್ಥರಿಗೆ ವಿದೇಶ ಪ್ರವಾಸದ ಯೋಗವಿದೆ. ಉಪಾಹಾರ ಮಂದಿರ, ತಂಪುಪಾನೀಯದ ಅಂಗಡಿಯವರಿಗೆ ಈ ಸಂವತ್ಸರವು ಸುಗ್ಗಿ ಹಬ್ಬದಂತಾಗುವುದು. ಗುತ್ತಿಗೆದಾರರಿಗೆ ಬಿಡುವಿಲ್ಲದಂತಾದೀತು. ಜೂನ್– ಜುಲೈನಲ್ಲಿ ಕನ್ಯಾನ್ವೇಷಿಗಳಿಗೆ ಸುಸಮಯವಿದ್ದು ವಿವಾಹ ನಿಶ್ಚಿತಾರ್ಥ ನಡೆಯುವುದು. ಬಂಧುಗಳ ಸಲಹೆ-ಸಹಕಾರ ನೂತನ ಕಾರ್ಯಗಳಿಗೆ ಉತ್ತಮ ಫಲ ಕೊಡುವುದು. ಶ್ರಮ ಜೀವಿಗಳಾದ ನಿಮಗೆ ಗುರು-ಹಿರಿಯರ ಆಶೀರ್ವಾದವಿದ್ದರೆ ಶ್ರಮಕ್ಕೆ ತಕ್ಕ ಪ್ರತಿಫಲವನ್ನು ಅಪೇಕ್ಷಿಸಬಹುದು. ರಾಜಕೀಯ ವ್ಯಕ್ತಿಗಳಿಗೆ ಜನ ಬೆಂಬಲ ಸಿಗುವುದು. ದಾನ ಧರ್ಮದ ಮಾರ್ಗದಲ್ಲಿ ನಡೆಯುವುದರಿಂದ ಗುರಿ ತಲುಪಬಹುದು.
ಕುಂಭ ನಿಮಗೀವರ್ಷ ಸ್ವರ್ಗಕ್ಕೆ ಮೂರೇ ಗೇಣು ಎಂಬುವ ಅನುಭವ ಸಿಗಲಿದೆ. ಸಾಹಿತಿಗಳಿಗೆ, ಸಂಶೋಧಕರಿಗೆ ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಗೌರವ ಸಿಗಲಿದೆ. ಕಟ್ಟಡ ರಚನೆಯಂತಹ ಕಾರ್ಯಗಳು ಭರದಿಂದ ಸಾಗಲಿವೆ. ವ್ಯವಹಾರದಲ್ಲಿ ಲಾಭವಿದ್ದು ಶತ್ರುಗಳ ಕಾಟದಿಂದ ಬಂದ ಲಾಭ ಲಂಚಕೋರರ ಪಾಲಾಗಲಿದೆ. ಸಿನಿಮಾ ನಟರಿಗೆ ಈ ವರ್ಷವು ಹಲವು ಪಾಠವನ್ನು ಕಲಿಸಿ ಗೌರವಾನ್ವಿತ ವ್ಯಕ್ತಿಯನ್ನಾಗಿ, ಕೀರ್ತಿವಂತನನ್ನಾಗಿ, ಧನವಂತನನ್ನಾಗಿ ಮಾಡುವುದು. ಚಿನ್ನಾಭರಣ, ಭೂಮಿ, ವಾಹನ ಖರೀದಿಗೆ ಈ ವರ್ಷ ಸುಸಮಯ. ಹಿಂದಿನ ಕುಟುಂಬ ಕಲಹಗಳು ರಾಜಿಯಲ್ಲಿ ತೀರ್ಮಾನಗೊಳ್ಳಲಿವೆ. ಸ್ನೇಹಪರ ಸ್ವಭಾವದಿಂದಾಗಿ ವೈಯಕ್ತಿಕ ಸ್ಥಾನ– ಮಾನ ಲಭಿಸುವುದು. ಊರಿನ ಅಭಿವೃದ್ಧಿಗೆ ನಿಮ್ಮಿಂದ ಅಡಿಪಾಯ ಹಾಕುವಂತಹ ಕೆಲಸ ಕಾರ್ಯಗಳು ಜರುಗುವವು. ಸುಬ್ರಹ್ಮಣ್ಯನನ್ನು ಆರಾಧಿಸಿ ಇಷ್ಟಾರ್ಥಗಳನ್ನು ಪಡೆಯಿರಿ.
ಮೀನ ಸುಖದ ಅಂಗಳದಲ್ಲಿರುವ ನೀವು ಈ ವರ್ಷದ ಅರ್ಧದವರೆಗೆ ರಾಜಪುತ್ರರಂತೆ ಇರುವಿರಿ. ಗೃಹೋಪಯೋಗಿ ವಸ್ತುಗಳ ಮಾರಾಟಗಾರರಿಗೆ, ಶಿಲ್ಪಿಗಳಿಗೆ, ಸಮುದ್ರೋತ್ಪನ್ನಗಳ ಮಾರಾಟಗಾರರಿಗೆ ವೃತ್ತಿಯಲ್ಲಿ ಲಾಭ. ಸಂಘ– ಸಂಸ್ಥೆಗಳ ಪದಾಧಿಕಾರ ದೊರಕುವುದು. ಸುಖ ಸಂಪತ್ತಿನ ಜೊತೆಯಲ್ಲಿ ಚಿಂತೆಯು ನಿದ್ದೆಗೆಡಿಸುತ್ತದೆ. ಪಿತೃವರ್ಗದಲ್ಲಿ ಆರೋಗ್ಯ ನಷ್ಟದಿಂದಾಗಿ ಆಸ್ಪತ್ರೆಯ ತಿರುಗಾಟದ ಕ್ಲೇಶ. ಅವಿವಾಹಿತರಿಗೆ ಕಂಕಣ ಭಾಗ್ಯ. ಸೇವಕ ವರ್ಗದವರಿಗೆ ಆದಾಯ ಹೆಚ್ಚಿದಂತೆ ಕೆಲಸದ ವಿಸ್ತೀರ್ಣವೂ ಹೆಚ್ಚುವುದು. ಪರ್ವತಾರೋಹಿಗಳಿಗೆ, ಕ್ರೀಡಾಪಟುಗಳಿಗೆ, ಸಾಧನೆಯ ಅವಕಾಶ ಸಿಕ್ಕಿದರೂ ಅನಾರೋಗ್ಯ ಎದುರಾಗಬಹುದು. ವೃತ್ತಿಗಿಂತ ಪ್ರವೃತ್ತಿಯಲ್ಲಿ ಆಸಕ್ತಿ ಹೆಚ್ಚಲಿದೆ. ಮಕ್ಕಳ ವಿದ್ಯಾಭ್ಯಾಸದ ಪ್ರಗತಿಯಿಂದ ಹರ್ಷ. ಮಲ್ಲಿಕಾರ್ಜುನನ ಸೇವೆಯಿಂದ ಆರೋಗ್ಯ ಭಾಗ್ಯ ಮತ್ತು ನೆಮ್ಮದಿ. | 0 |
ರಕ್ತದಾನ: ಅಂತೆಕಂತೆಗಳಿಗೆ ಕಿವಿಗೊಡಬೇಡಿ
ರಕ್ತದಾನ: ಅಂತೆಕಂತೆಗಳಿಗೆ ಕಿವಿಗೊಡಬೇಡಿ
LK ¦ Mar 26, 2018 02:37:23 PM (IST)
ನಮ್ಮಲ್ಲಿ ಬಹಳಷ್ಟು ಮಂದಿಗೂ ಇವತ್ತಿಗೂ ರಕ್ತದಾನದ ಕುರಿತಂತೆ ಹಲವು ರೀತಿಯ ತಪ್ಪು ಕಲ್ಪನೆಗಳಿವೆ. ಇದರಿಂದಾಗಿಯೇ ಹೆಚ್ಚಿನ ಜನ ರಕ್ತದಾನ ಮಾಡಲು ಹಿಂದೇಟು ಹಾಕುತ್ತಾರೆ. ನಮ್ಮ ನಡುವೆ ಹಲವು ಮಂದಿ ಆಗಾಗ್ಗೆ ರಕ್ತದಾನ ಮಾಡುತ್ತಿದ್ದರೂ ಅದನ್ನು ನೋಡಿದ ಮೇಲೆಯೂ ಅಂತೆಕಂತೆಗಳ ಸುದ್ದಿಗಳಿಗೆ ಕಿವಿಗೊಡುವುದನ್ನು ಮಾತ್ರ ಬಿಡುವುದಿಲ್ಲ.
ಯಾವುದಾದರೂ ಅಪಘಾತವಾಗಿಯೋ ಇನ್ನಿತರ ಅನಿವಾರ್ಯ ಸಂದರ್ಭಗಳಲ್ಲಿ ವೈದ್ಯರು ರಕ್ತ ಬೇಕು ಎಂದಾಗ ಮಾತ್ರ ಅದರ ಮಹತ್ವ ತಿಳಿಯುತ್ತದೆ. ಆಗ ರಕ್ತಕ್ಕಾಗಿ ಪರದಾಡುವುದನ್ನು ನಾವು ಕಾಣಬಹುದಾಗಿದೆ. ಇದನ್ನು ಮನಗಂಡು ಬಹಳಷ್ಟು ದಾನಿಗಳು ತುರ್ತು ಸಂದರ್ಭದಲ್ಲಿ ರಕ್ತ ನೀಡಲು ಬರುವ ಮೂಲಕ ಉಪಕಾರ ಮಾಡುತ್ತಾರೆ. ಇಂತಹವರಿಗೆ ಮಾದರಿಯಾಗಬೇಕಾದರೆ ಆರೋಗ್ಯವಂತ ಎಲ್ಲರೂ ರಕ್ತದಾನ ಮಾಡಲು ಮುಂದಾಗಬೇಕು.
ಮುಂದುವರಿದ ಆಧುನಿಕ ಕಾಲದಲ್ಲಿ ರಕ್ತದಾನ ಮಾಡುವುದು ಮತ್ತು ರಕ್ತವನ್ನು ಪಡೆದುಕೊಳ್ಳುವುದರ ಕುರಿತಂತೆ ಹಲವು ರೀತಿಯ ಆಧಾರ ರಹಿತ ಅಂತೆ ಕಂತೆ ಮಾತುಗಳು ಜನವಲಯದಲ್ಲಿದೆ. ಅವುಗಳನ್ನು ಸಂಪೂರ್ಣವಾಗಿ ಕೆಲವರು ನಂಬಿ ರಕ್ತದಾನ ಮಾಡಲು ಭಯಪಡುವುದನ್ನು ನಾವು ಕಾಣಬಹುದಾಗಿದೆ.
ರಕ್ತದಾನ ಮಾಡುವ ಬಗ್ಗೆ ಕೆಲವು ತಪ್ಪು ಕಲ್ಪನೆಯಿರುವುದರಿಂದ ಆ ಬಗ್ಗೆ ಒಂದಷ್ಟು ಮಾಹಿತಿಗಳನ್ನು ಪ್ರತಿಯೊಬ್ಬರೂ ಪಡೆದುಕೊಳ್ಳುವುದು ಉತ್ತಮ. 18 ರಿಂದ 60 ವರ್ಷದೊಳಗಿನ 45 ಕೆ.ಜಿ.ಗಿಂತಲೂ ಹೆಚ್ಚು ತೂಕವಿರುವ, 12.5 ಗ್ರಾಂ.ಗಿಂತಲೂ ಹೆಚ್ಚು ಹಿಮೋಗ್ಲೋಬಿನ್ ಅಂಶ ಹೊಂದಿರುವ ಎಲ್ಲ ಆರೋಗ್ಯವಂತರೂ ರಕ್ತದಾನ ಮಾಡಬಹುದಾಗಿದೆ.
ದೇಶದಲ್ಲಿ ಪ್ರತಿ 2 ಸೆಕೆಂಡಿಗೆ ಒಬ್ಬ ರೋಗಿಗೆ ರಕ್ತದ ಅವಶ್ಯಕತೆ ಇರುವುದಾಗಿ ಸಮೀಕ್ಷೆಯೊಂದು ಹೇಳಿದೆ. ನಮ್ಮ ದೇಶದಲ್ಲಿ ರಕ್ತದ ಬೇಡಿಕೆ ಸುಮಾರು 4 ಕೋಟಿ ಯೂನಿಟ್ ಗಳಾಗಿದ್ದು, ಕೇವಲ 5 ಲಕ್ಷ ಯೂನಿಟ್ ಗಳಷ್ಟು ಮಾತ್ರ ರಕ್ತದ ಪೂರೈಕೆಯಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಆರೋಗ್ಯವಂತ ವ್ಯಕ್ತಿಯ ದೇಹದಲ್ಲಿ ಸರಾಸರಿ 5.5 ರಿಂದ 6 ಲೀಟರ್ ನಷ್ಟು ರಕ್ತ ಇರುತ್ತದೆ. ರಕ್ತ ಕೊಡುವ ವ್ಯಕ್ತಿಯಿಂದ ಕೇವಲ 350 ಮಿಲಿಯಷ್ಟೇ ರಕ್ತವನ್ನು ದಾನಿಯಿಂದ ತೆಗೆದುಕೊಳ್ಳುವುದರಿಂದ ಯಾವುದೇ ಅಪಾಯವಾಗುವುದಿಲ್ಲ. ಆದ್ದರಿಂದ ಎಲ್ಲ ಆರೋಗ್ಯವಂತ ಪುರುಷರು ಹಾಗೂ ಮಹಿಳೆಯರು ಪ್ರತಿ ಮೂರರಿಂದ ನಾಲ್ಕು ತಿಂಗಳಿಗೊಮ್ಮೆ ನಿರಾತಂಕವಾಗಿ ರಕ್ತದಾನ ಮಾಡಬಹುದು. ಸಾಮಾನ್ಯವಾಗಿ ದಾನಿಯಿಂದ ಪಡೆದ ರಕ್ತವನ್ನು 35 ದಿನಗಳವರೆಗೆ ಅದು ಯಾವುದೇ ರೀತಿಯಲ್ಲಿಯೂ ಹಾಳಾಗದಂತೆ ವಿಶೇಷ ರೆಫ್ರಿಜಿರೇಟರ್ ಗಳಲ್ಲಿ ಶೇಖರಿಸಿಟ್ಟು ಉಪಯೋಗಿಸಲಾಗುತ್ತದೆ.
ಯಾರು ರಕ್ತದಾನ ಮಾಡಬಾರದು?
18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು, ಲಿವರ್, ಮೂತ್ರಪಿಂಡ ಮತ್ತು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುವವರು, ಗರ್ಭಿಣಿಯರು, ಋತುಸ್ರಾವದಲ್ಲಿರುವ ಮಹಿಳೆಯರು, ಮಗುವಿಗೆ ಹಾಲುಣಿಸುವ ತಾಯಂದಿರು, ದೊಡ್ಡ ಪ್ರಮಾಣದ ಶಸ್ತ್ರ ಚಿಕಿತ್ಸೆಗೆ ಒಳಗಾದವರು, ಒಂದು ವರ್ಷದವರೆಗೆ ರಕ್ತ ವರ್ಗಾವಣೆ ಮಾಡಿಸಿಕೊಂಡವರು, ಆರು ತಿಂಗಳವರೆಗೆ ಯಾವುದಾದರು ಕಾಯಿಲೆಯ ವಿರುದ್ಧ ಲಸಿಕೆಗಳನ್ನು ತೆಗೆದುಕೊಂಡವರು ಮುಂದಿನ ಆರು ತಿಂಗಳವರೆಗೆ ರಕ್ತದಾನ ಮಾಡಬಾರದು.
ಒಂದು ತಾಸು ವಿಶ್ರಾಂತಿ ಸಾಕು
ಇನ್ನು ರಕ್ತದಾನ ಮಾಡಿದ ವ್ಯಕ್ತಿಗೆ ಹೆಚ್ಚೆಂದರೆ ಒಂದು ತಾಸಿನ ವಿಶ್ರಾಂತಿ ಸಾಕಾಗುತ್ತದೆ. ಜೊತೆಗೆ ಯಾವುದೇ ರೀತಿ ಔಷಧದ ಅಗತ್ಯವಿರುವುದಿಲ್ಲ, ವ್ಯಕ್ತಿಯು ರಕ್ತದಾನ ಮಾಡಿದ ಆ ದಿನ ನೀರನ್ನು ಹೆಚ್ಚಾಗಿ ಕುಡಿಯಬೇಕು. ರಕ್ತದಾನದ ಕೆಲವು ತಾಸುಗಳೊಳಗಾಗಿ ದಾನಿಯ ದೇಹದಲ್ಲಿ ಹೊಸ ರಕ್ತಕಣಗಳನ್ನು ಉತ್ವಾದಿಸಲು ಪ್ರಾರಂಭಿಸುತ್ತದೆ. ಮುಂದಿನ ಮೂರು ತಿಂಗಳೊಳಗಾಗಿ ದಾನಿಯ ದೇಹದಲ್ಲಿ ಮರು ರಕ್ತ ತಯಾರಾಗುತ್ತದೆ.
ಸೋಂಕಿನ ಭಯ ಬೇಡ
ಇನ್ನೂ ರಕ್ತ ವರ್ಗಾವಣೆಯಿಂದ ಯಾವುದಾದರೂ ರೋಗ ಅಥವಾ ಸೋಂಕು ತಗಲುತ್ತದೆ ಎಂಬ ಭಯವೂ ಕೆಲವರಲ್ಲಿದೆ. ರಕ್ತದಾನ ಮಾಡುವ ದಾನಿಯಿಂದ ಸ್ವೀಕರಿಸಿದ ರಕ್ತವನ್ನು ರಕ್ತನಿಧಿಗಳಲ್ಲಿ ಹೆಪಟೈಟಿಸ್ ಬಿ. ಹೆಪಟೈಟಿಸ್, ಎಚ್ಐವಿ, ಮಲೇರಿಯಾ, ಸಿಫಿಲಿಸ್ ಮುಂತಾದ ಸೂಕ್ಷಾಣುಗಳಿಗಾಗಿ ಪರೀಕ್ಷಿಸಿ. ರೋಗಾಣುಗಳಿಂದ ಮುಕ್ತವಾದ ರಕ್ತವನ್ನು ಮಾತ್ರವೇ ಅವಶ್ಯಕತೆ ಇರುವರಿಗೆ ವರ್ಗಾಯಿಸುತ್ತಾರೆ. ಅಲ್ಲದೆ ದಾನಿಯಿಂದ ರಕ್ತವನ್ನು ಸ್ವೀಕರಿಸುವಾಗಲೂ ಸಂಸ್ಕರಿಸಿದ ಶುದ್ಧವಾದ ಉಪಕರಣಗಳನ್ನು ಬಳಸುತ್ತಾರೆ. ಹಾಗಾಗಿ ರಕ್ತದಾನ ಪ್ರಕ್ರಿಯೆಯಲ್ಲಿ ದಾನಿಗಾಗಲೀ, ರಕ್ತ ವಗಾವಣೆ ಮಾಡಿಸಿಕೊಂಡವರಿಗಾಗಲಿ ಸೋಂಕಿನ ಭಯ ಬೇಡ. ಯಾವುದೇ ಭಯ ಆತಂಕಗಳಿಲ್ಲದೆ ಪ್ರತಿಯೊಬ್ಬ ವ್ಯಕ್ತಿಯೂ ಸ್ವ ಇಚ್ಛೆಯಿಂದ ರಕ್ತದಾನವನ್ನು ಮಾಡಬಹುದಾಗಿದೆ.
ಮನರಂಜನೆ | 1 |
ದಂತ ರಕ್ಷಣೆಗೆ ಅಗತ್ಯ ಸಲಹೆಗಳು
ದಂತ ರಕ್ಷಣೆಗೆ ಅಗತ್ಯ ಸಲಹೆಗಳು
Sep 13, 2016 07:17:23 AM (IST)
ಹಲ್ಲು ನಮ್ಮ ಮುಖಕ್ಕೆ ಸೌಂದರ್ಯ ನೀಡುವುದಲ್ಲದೆ, ಆಹಾರವನ್ನು ಚೆನ್ನಾಗಿ ಅಗೆದು ತಿನ್ನಲು ಕೂಡ ಸಹಕಾರಿಯಾಗಿದೆ. ಇಂಥ ಹಲ್ಲನ್ನು ಕಾಪಾಡಿಕೊಳ್ಳುವುದು ಅಗತ್ಯವಾಗಿದೆ.
ಮುಖದಲ್ಲಿ ಎದ್ದು ಕಾಣುವ ಅಂಗಾಂಗಗಳಲ್ಲಿ ಹಲ್ಲು ಕೂಡ ಒಂದು. ಇಂತಹ ಹಲ್ಲು ಗಟ್ಟಿಯಾಗಿರಬೇಕು, ಸುಂದರವಾಗಿರಬೇಕು, ಆರೋಗ್ಯಕರವಾಗಿಯೂ ಇರಬೇಕು. ಆದ್ದರಿಂದ ಇದರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯವಾಗಿದೆ. ಹಲ್ಲು ಗಟ್ಟಿಯಾಗಿದ್ದರೂ ಅದನ್ನು ಹುಳುಕುರೋಗ ಇನ್ನಿಲ್ಲದಂತೆ ಕರಗಿಸಿ ಬಿಡುತ್ತದೆ. ಬಹಳಷ್ಟು ಜನಕ್ಕೆ ಹಲ್ಲುಗಳಿಗೆ ತಾಗಿರುವ ಹುಳುಕುರೋಗ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಈ ಹುಳುಕನ್ನು ಹೋಗಲಾಡಿಸಿ ಹಲ್ಲನ್ನು ಕಾಪಾಡುವುದು ಸವಾಲ್ ಎಂದರೂ ತಪ್ಪಾಗಲಾರದು. ಸ್ಟ್ರೆಪ್ಟೊಕಾಕಸ್ ಮ್ಯೂಟ್ಯನ್ಸ್ ಎಂಬ ಸೂಕ್ಷ್ಮ ಕ್ರಿಮಿ ಹಲ್ಲನ್ನು ಕಾಡುತ್ತದೆ. ಇದಕ್ಕೆ ಸಿಕ್ಕಿದ ಹಲ್ಲು ಇನ್ನಿಲ್ಲದಂತೆ ಕರಗಿ, ನೋವು ತಂದು ನೆಮ್ಮದಿ ಕೆಡುವಂತೆ ಮಾಡಿಬಿಡುತ್ತದೆ.
ಸ್ಟ್ರೆಪ್ಟೊಕಾಕಸ್ ಮ್ಯೂಟ್ಯನ್ಸ್ ಎಂಬ ಸೂಕ್ಷ್ಮ್ಮಾಣು ಜೀವಿ ಮನುಷ್ಯನ ಬಾಯಿ ಮತ್ತು ಜೊಲ್ಲಿನಲ್ಲಿ ಒಂದನೇ ವಯಸ್ಸಿನಿಂದಲೇ ಗೋಚರಿಸಲಾರಂಭಿಸುತ್ತದೆ. ಬಾಯೊಳಗೆ ಹಲ್ಲು ಮೂಡುವ ಸಮಯಕ್ಕೆ ಸರಿಯಾಗಿ ಬಾಯೊಳಗೆ ಪ್ರವೇಶ ಪಡೆಯುತ್ತದೆ. ಬಾಯಿಯ ಸ್ವಚ್ಛತೆ ಕಡಿಮೆಯಾದಾಗ ಅದನ್ನೇ ಬಳಸಿಕೊಂಡು ತನ್ನ ಕಾರ್ಯಕ್ಕೆ ಮುಂದಾಗುತ್ತದೆ.
ಬಾಯಲ್ಲಿ ಸಿಹಿ, ಸಕ್ಕರೆ, ಆಮ್ಲ ಪದಾರ್ಥಗಳ ಅಂಶ ಹೆಚ್ಚಾಗುತ್ತದೆ. ಆಗ ರೋಗಾಣು ತನ್ನ ಕೆಲಸವನ್ನು ಚುರುಕುಗೊಳಿಸುತ್ತದೆ. ನಾವು ಹಲ್ಲಿನ ಬಗ್ಗೆ ನಿರ್ಲಕ್ಷ್ಯ ವಹಿಸಿದಷ್ಟೂ ಸೂಕ್ಷ್ಮಾಣು ಹಲ್ಲಿನ ಮೇಲೆ ದಾಳಿ ಮಾಡಿ ಕೊರೆಯುತ್ತಾ ಹೋಗುತ್ತದೆ.
ಹುಳುಕು ರೋಗದಿಂದ ಉಂಟಾಗುವ ಸಮಸ್ಯೆ ಅದನ್ನು ಅನುಭವಿಸದವರಿಗಷ್ಟೆ ಗೊತ್ತಾಗಬೇಕು. ಆದ್ದರಿಂದ ಬಾರದಂತೆ ತಡೆಗಟ್ಟುವುದೇ ನಾವು ನೀಡಬೇಕಾದ ಮೊದಲ ಆದ್ಯತೆ. ಒಂದು ದವಡೆ ಹಲ್ಲು ಹುಳುಕಿನಿಂದ ಹಾಳಾದರೆ ಶೇ.50 ಅಗಿಯುವ ಸಾಮರ್ಥ್ಯ ಕಡಿಮೆಯಾದಂತೆ ಎಂದರೆ ತಪ್ಪಾಗಲಾರದು.
ವೈದ್ಯರು ಹೇಳುವ ಪ್ರಕಾರ ಹಲ್ಲಿನ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡಬಾರದು, ಹಲ್ಲಿನ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಅತಿಯಾದ ಸಕ್ಕರೆ ಅಂಶದ ಕಾಫಿ, ಟೀ ಸೇವನೆ ಒಳ್ಳೆಯದಲ್ಲ. ನೀರಿನಲ್ಲಿ ನಿಗದಿತ ಪ್ರಮಾಣಕ್ಕಿಂತ ಪ್ಲೋರೈಡ್ ಅಂಶ ಕಡಿಮೆ ಇರುವುದು, ಸವೆದ ಮುರಿದ ಹಲ್ಲು ವಕ್ರಹಲ್ಲು ಸಿಕ್ಕಿ ಬೀಳುವ ಜಾಗಗಳಾಗಿದ್ದು, ಅವುಗಳಿಗೆ ಚಿಕಿತ್ಸೆ ಪಡೆದುಕೊಳ್ಳಬೇಕು. ಅತಿಯಾದ ಅಂಟು ಪದಾರ್ಥ ಸೇವನೆ, ಚಾಕಲೇಟ್, ಐಸ್ಕ್ರೀಂನ ಹೆಚ್ಚು ಬಳಕೆ ಒಳ್ಳೆಯದಲ್ಲ.
ದಿನಕ್ಕೆರಡು ಬಾರಿ ಹಲ್ಲನ್ನು ಸ್ವಚ್ಛಗೊಳಿಸಬೇಕು. ಅಂಟು ಸಿಹಿ ಪದಾರ್ಥ ಸೇವನೆಗೆ ನಿಲ್ಲಿಸಬೇಕು. ಹಲ್ಲಿನ ಆರೋಗ್ಯಕ್ಕೆ ಪೌಷ್ಠಿಕಾಂಶಯುಕ್ತ ಆಹಾರ ಸೇವನೆ ಮಾಡಬೇಕು. ಸಿಹಿ ಅಂಶದ ಸೇವನೆ ಬಳಿಕ ಬಾಯನ್ನು ಮುಕ್ಕಳಿಸಿ ಸ್ವಚ್ಛಗೊಳಿಸಬೇಕು. ಹಲ್ಲು ಹುಳುಕಿನ ಸೂಚನೆ ಕಂಡು ಬಂದಲ್ಲಿ ಕೂಡಲೇ ದಂತವೈದ್ಯರಿಗೆ ತೋರಿಸಬೇಕು.
ಸಣ್ಣ ಪ್ರಮಾಣದ ಹುಳುಕು ಹಲ್ಲುಗಳಿಗೆ ವೈದ್ಯರಿಂದ ಬೆಳ್ಳಿ ಸಿಮೆಂಟ್ ಮುಂತಾದವುಗಳನ್ನು ತುಂಬಿಸಬೇಕು. ಹಲ್ಲುಗಳ ಮೇಲೆ ನಡುವೆ ಆಹಾರ ಕಣಗಳು ಸಿಕ್ಕಿ ಬೀಳದಂತೆ ಜಾಗೃತೆವಹಿಸಬೇಕು. ಹೀಗೆ ಮಾಡುವುದರಿಂದ ಹುಳುಕು ಹಲ್ಲಿನ ಸಮಸ್ಯೆಯಿಂದ ಒಂದಷ್ಟು ರಿಲೀಪ್ ಪಡೆಯಬಹುದಾಗಿದೆ.
ಮನರಂಜನೆ | 1 |
ಕರಿಬೇವಿನ ಸೊಪ್ಪಿನಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ…?
05-05-2019 5:04AM IST / No Comments / Posted In: Latest News , Health
ಕರಿಬೇವಿನ ಸೊಪ್ಪು ಅಂದ್ರೆ ಮಹಿಳೆಯರಿಗೆ ವಿಶೇಷ ಪ್ರೀತಿ. ಅವರು ಮಾಡೋ ಅಡುಗೆಗೆ ವಿಶೇಷ ಪರಿಮಳ ನೀಡೋ ಮುಖ್ಯ ಪದಾರ್ಥ ಅದು. ಹೌದು….ಅಡುಗೆಗೆ ವಿಶೇಷ ಮೆರಗು ನೀಡುತ್ತೆ ಕರಿಬೇವು. ಕೇವಲ ಪರಿಮಳಕ್ಕಷ್ಟೇ ಅಲ್ಲ, ಇದರಿಂದ ಸಾಕಷ್ಟು ಆರೋಗ್ಯಕರ ಪ್ರಯೋಜನಗಳೂ ಇವೆ.
ಕರಿಬೇವು ಕಬ್ಬಿಣದಂಶ ಹಾಗೂ ಪೋಲಿಕ್ ಆಸಿಡ್ ಗಳ ಗುಚ್ಛವೆಂದೇ ಹೇಳಬಹುದು.
ರಕ್ತಹೀನತೆಗೂ ಇದು ರಾಮಬಾಣ.
ಕರಿಬೇವು ಲಿವರ್ ಗೂ ಒಳ್ಳೆಯದು. ಲಿವರ್ ಹಾಳಾಗದಂತೆ ತಡೆಯುತ್ತದೆ.
ಕರಿಬೇವು ಆಂಟಿಬಯಾಟಿಕ್ ಎಂದು ಆಯುರ್ವೇದಲ್ಲಿ ಹೇಳಲಾಗುತ್ತದೆ.
ಕರಿಬೇವು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.
ಹೃದಯ ಖಾಯಿಲೆಗಳಿಗೂ ಇದು ರಾಮಬಾಣ. ಒಳ್ಳೆಯ ಕೊಲೆಸ್ಟ್ರಾಲ್ ಪ್ರಮಾಣವನ್ನು ಹೆಚ್ಚು ಮಾಡುತ್ತದೆ.
ಜೀರ್ಣಕ್ರಿಯೆಗೆ ಕರಿಬೇವು ಒಳ್ಳೆಯದು.
ಇನ್ನು, ದಟ್ಟ ಕೂದಲಿಗೆ, ಚರ್ಮದ ಸೋಂಕು ನಿವಾರಣೆಗೆ ಅಷ್ಟೇ ಏಕೆ ತೂಕ ಇಳಿಕೆಗೂ ಕರಿಬೇವು ಸಹಕಾರಿ. | 1 |
ಸಮಸ್ಯೆಗೆ ಹೆದರಿ ಆರೋಗ್ಯ ಕೆಡಿಸಿಕೊಳ್ಳಬೇಡಿ..
ಸಮಸ್ಯೆಗೆ ಹೆದರಿ ಆರೋಗ್ಯ ಕೆಡಿಸಿಕೊಳ್ಳಬೇಡಿ..
May 31, 2016 08:18:50 AM (IST)
ಪ್ರತಿ ಸಮಸ್ಯೆಗೆ ಪರಿಹಾರ ಇದ್ದೇ ಇರುತ್ತದೆ. ಆದ್ದರಿಂದ ಸಮಸ್ಯೆಗೆ ಹೆದರಿ ಚಿಂತೆ ಮಾಡಿ ಆರೋಗ್ಯ ಕೆಡಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ. ನಾವೆಲ್ಲರೂ ಪ್ರತಿಕ್ಷಣವೂ ಖುಷಿಯಾಗಿ, ಸಂತೋಷವಾಗಿ ಇರಬೇಕೆಂದುಕೊಳ್ಳುತ್ತೇವೆ. ಆದರೆ ಕೆಲವೊಮ್ಮೆ ಯಾವುದಾದರೊಂದು ಸಮಸ್ಯೆ ನುಸುಳಿ ನಮ್ಮ ಸಂತೋಷವನ್ನು ಕೊಂದು ಹಾಕಿಬಿಡುತ್ತದೆ. ಸಮಸ್ಯೆ ಎದುರಾದಾಗ ಚಿಂತಾಕ್ರಾಂತರಾಗುವ ಬದಲು ಅದರಿಂದ ಹೊರಬರಲು ದಾರಿ ಹುಡುಕುವುದು ಜಾಣತನ.
ಈಗಿನ ಬದುಕು ಸದಾ ಒತ್ತಡದ ಬದುಕು. ಹಾಗಾಗಿ ಒಂದಲ್ಲ ಒಂದು ಸಮಸ್ಯೆಯನ್ನು ನಾವು ಎದುರಿಸಲೇ ಬೇಕು. ಈ ಸಮಸ್ಯೆಗಳಿಗೂ ಕೊನೆಯಿಲ್ಲ. ಒಂದು ಪರಿಹರಿಸಿದರೆ ಮತ್ತೊಂದು ಸದ್ದಿಲ್ಲದೆ ಎದ್ದು ನಿಲ್ಲುತ್ತದೆ. ಇದರಿಂದ ಸಮಸ್ಯೆಯನ್ನು ಬಗೆಹರಿಸುತ್ತಾ, ಬಗೆಹರಿಸುತ್ತಾ ಬದುಕೇ ಸಮಸ್ಯೆಯಾಗಿ ಬಿಡುತ್ತದೆ.
ಸಮಸ್ಯೆ ಮುಕ್ತ ಜೀವನವನ್ನು ಕಲ್ಪಿಸಿಕೊಳ್ಳುವುದೇ ಅಸಾಧ್ಯ. ನಮ್ಮ ವೈಯಕ್ತಿಕ ಬದುಕಿರಬಹುದು ಅಥವಾ ಉದ್ಯೋಗರಂಗ ಇರಬಹುದು. ಸಮಸ್ಯೆ ತಪ್ಪಿದಲ್ಲ. ಇಷ್ಟಕ್ಕೂ ಸಮಸ್ಯೆ ಇಲ್ಲದ ಬದುಕು ಅದು ಬದುಕೇ ಅಲ್ಲ. ಆದರೆ ಪ್ರತಿಯೊಂದು ಸಮಸ್ಯೆಗೂ ಪರಿಹಾರ ಇದ್ದೇ ಇರುತ್ತದೆ ಎಂಬ ಸತ್ಯವನ್ನು ನಾವು ಅರಿಯಬೇಕು. ಆಗ ಸಮಸ್ಯೆಗೆ ಹೆದರಿ ಅಮೂಲ್ಯ ಜೀವ ಕಳೆದುಕೊಳ್ಳುವ ಅಥವಾ ಆರೋಗ್ಯ ಕೆಡಿಸಿಕೊಳ್ಳುವ ಪ್ರಮೇಯ ಬರಲಾರದು.
ಆಧುನಿಕ ಜಗತ್ತಿನಲ್ಲಿ ಎಲ್ಲವೂ ಮೊದಲಿನಂತಿಲ್ಲ. ಕ್ಷಣಕ್ಷಣಕ್ಕೂ ಬದಲಾವಣೆ ಕಾಣುತ್ತಿದೆ. ಈ ಬದಲಾವಣೆ ಹೊಂದಿಕೊಂಡು ಹೋಗುವುದು ಅನಿವಾರ್ಯವಾಗುತ್ತಿದೆ. ಕೆಲಸ ಸಿಕ್ಕಿದೆ ಎಂಬ ಮಾತ್ರಕ್ಕೆ ಖುಷಿಪಡಲು, ಬದುಕಿನಲ್ಲಿ ನೆಲೆ ನಿಂತೆ ಎಂದುಕೊಳ್ಳಲು ಇದು ಸಕಾಲವಲ್ಲ. ನಾವು ಮಾಡುವ ಕೆಲಸದೊಂದಿಗೆ ಅದನ್ನು ಕ್ಷಣ ಕ್ಷಣಕ್ಕೂ ಉಳಿಸಿಕೊಳ್ಳಬೇಕಾದ ಅನಿವಾರ್ಯತೆಯೂ ನಮ್ಮದಾಗಿದೆ.
ಕೆಲಸ ಮಾಡುವಾಗ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಬಹುದು. ಆದರೆ ನಮ್ಮ ವೈಯಕ್ತಿಕ ಬದುಕಿನಲ್ಲಿ ಎದುರಾಗುವ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದು ನಂತರದಾದರೂ, ಮೊದಲಿಗೆ ಸಮಸ್ಯೆ ಬರದಂತೆ ನೋಡಿಕೊಳ್ಳುವುದು ಮುಖ್ಯವಾಗಬೇಕು.
ಇವತ್ತು ಯಾವುದೂ ನಾಲ್ಕು ಗೋಡೆ ಮಧ್ಯೆ ಗೌಪ್ಯವಾಗಿ ಉಳಿಯುತ್ತಿಲ್ಲ. ಅದು ಬಹಿರಂಗವಾಗುತ್ತಿದೆ. ಹೀಗಿರುವಾಗ ಸಾರ್ವಜನಿಕವಾಗಿ ಬದುಕುವ ನಾವು ಮಾಡುವ ಯಾವುದೇ ಕಾರ್ಯಗಳಿರಲಿ ಅದು ಹೇಗಾದರು ಹೊರಗೆ ಬಂದೇ ಬರುತ್ತೆ. ಸದಾ ಒಳ್ಳೆಯದನ್ನೇ ಮಾಡುತ್ತಾ ಹೋದರೆ ನಮಗೆ ಯಾರ ಭಯವೂ ಇಲ್ಲ.
ಜೀವನದಲ್ಲಿ ಹಣ ಸಂಪಾದಿಸುವುದು ಅದರಿಂದ ಐಷಾರಾಮಿ ವಸ್ತುಗಳನ್ನು ಖರೀದಿಸಿ ನೋಡುವವರ ಮುಂದೆ ಶ್ರೀಮಂತರಾಗಿ ಬದುಕಿದ ತಕ್ಷಣ ಅವನು ಯಶಸ್ವಿ ವ್ಯಕ್ತಿ ಎಂದು ಒಪ್ಪಿಕೊಳ್ಳಲಾಗುವುದಿಲ್ಲ. ಆದರೆ ಬದುಕೆಂದರೆ ಹಣ, ಕಾರು, ಬಂಗಲೆ ಎಂದು ನಂಬಿರುವ ಹಲವರು ಹಣ ಸಂಪಾದನೆ ಮಾಡುವ ಒಂದೇ ಒಂದು ಉದ್ದೇಶದಿಂದ ಇಲ್ಲ ಸಲ್ಲದ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಂಡು ಸುಂದರ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ.
ಕೆಲವು ಸಮಸ್ಯೆಗಳಿಗೆ ನಮ್ಮಲ್ಲೇ ಪರಿಹಾರವಿದ್ದರೂ ಪ್ರತಿಷ್ಠೆಗಾಗಿ ಹೋರಾಡುತ್ತೇವೆ. ಈ ಪ್ರತಿಷ್ಠೆ ಸಮಸ್ಯೆಯನ್ನು ಬಗೆಹರಿಸುವುದಿಲ್ಲ ಬದಲಾಗಿ ಹೆಚ್ಚಿಸುತ್ತದೆ. ಎಲ್ಲಿ ಸಮಸ್ಯೆ ಆರಂಭವಾಗಿದೆ ಎಂಬುವುದನ್ನು ಹುಡುಕಿ ಆದಷ್ಟು ನಮ್ಮ ಸಮಸ್ಯೆಯನ್ನು ನಾವೇ ಬಗೆಹರಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಅದನ್ನು ಎಂದು ಮರೆಯಬಾರದು.
ಮನರಂಜನೆ | 1 |
'ಯುಗಪುರುಷ' ಚಿತ್ರದ ನಾಯಕ ನಟನ ಮೇಲೆ ದುಷ್ಕರ್ಮಿಗಳಿಂದ ದಾಳಿ
Highlights
ಚಾಲಕ ಹಾಗೂ ಸ್ನೇಹಿತನ ಜೊತೆ ತಮ್ಮ ಐ20 ಕಾರಿನಲ್ಲಿ ಹೋಗುತ್ತಿದ್ದಾಗ ಬೈಕಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಅರ್ಜುನ್ ದೇವ್ ಅವರ ಮೇಲೆ ರಾಡ್'ನಿಂದ ಹಲ್ಲೆ ನಡೆಸಲು ಅರ್ಜುನ್ ಪ್ರಾಣಾಪಾಯದಿಂದ ಪಾರಾಗಿದ್ದು,ಕಾರಿಗೆ ಸ್ವಲ್ಪ ಮಟ್ಟಿನ ಹಾನಿಯಾಗಿದೆ.
ರಾಮನಗರ(ಮೇ.30): ಯುಗಪುರುಷ ಚಿತ್ರದ ನಾಯಕ ಅರ್ಜುನ್ ದೇವ್ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ ಘಟನೆ ರಾಮನಗರದ ಬಳಿ ನಡೆದಿದೆ.
ಚಾಲಕ ಹಾಗೂ ಸ್ನೇಹಿತನ ಜೊತೆ ತಮ್ಮ ಐ20 ಕಾರಿನಲ್ಲಿ ಹೋಗುತ್ತಿದ್ದಾಗ ಬೈಕಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಅರ್ಜುನ್ ದೇವ್ ಅವರ ಮೇಲೆ ರಾಡ್'ನಿಂದ ಹಲ್ಲೆ ನಡೆಸಲು ಅರ್ಜುನ್ ಪ್ರಾಣಾಪಾಯದಿಂದ ಪಾರಾಗಿದ್ದು,ಕಾರಿಗೆ ಸ್ವಲ್ಪ ಮಟ್ಟಿನ ಹಾನಿಯಾಗಿದೆ.
ಅರ್ಜುನ್ ಅವರು ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಕೋರ್ಟ್'ಗೆ ತೆರಳುತ್ತಿದ್ದರು. 'ಯುಗಪುರುಷ' ಅರ್ಜುನ್ ದೇವ್ ಅವರ ಮೊದಲ ಕನ್ನಡ ಚಿತ್ರವಾಗಿದ್ದು, ಇನ್ನಷ್ಟೆ ಬಿಡುಗಡೆಯಾಗಬೇಕಿದೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 11, Apr 2018, 1:02 PM IST | 0 |
#Gomonster Samsung M30s: ಹೊಸ ಸ್ಮಾರ್ಟ್‌ಫೋನ್ ನ ವಿಶೇಷತೆಗಳೇನು ನೋಡಿ! WATCH LIVE TV
ಲೈಫ್‌ಸ್ಟೈಲ್‌ನಲ್ಲಿದೆ ಆರೋಗ್ಯ
ಕ್ರಮಬದ್ಧ ಜೀವನಶೈಲಿ ನಾನಾ ಆರೋಗ್ಯ ಸಮಸ್ಯೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಆದ್ದರಿಂದ ನೀವು ತಿನ್ನುವ ಆಹಾರ, ಮಾಡುವ ಕೆಲಸದ ಮೇಲೆ ನಿಮ್ಮ ಗಮನವಿರಲಿ.
| Updated:
Nov 27, 2014, 04:03AM IST
-ಡಾ. ಗಂಗಾಧರ ವರ್ಮಾ, ಪ್ರಕೃತಿ ಚಿಕಿತ್ಸಾ ತಜ್ಞರು
ಕ್ರಮಬದ್ಧ ಜೀವನಶೈಲಿ ನಾನಾ ಆರೋಗ್ಯ ಸಮಸ್ಯೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಆದ್ದರಿಂದ ನೀವು ತಿನ್ನುವ ಆಹಾರ, ಮಾಡುವ ಕೆಲಸದ ಮೇಲೆ ನಿಮ್ಮ ಗಮನವಿರಲಿ.
ಇದ್ದಕ್ಕಿದ್ದಂತೆ ಹೊಟ್ಟೆ ನೋವು ಶುರುವಾಗುತ್ತದೆ. ಅದು ವಾಸಿ ಆಯ್ತು ಅನ್ನುವ ಹೊತ್ತಿಗೆ, ವಾಂತಿಯೋ ಅಥವಾ ತಲೆನೋವು ಕಿರಿಕಿರಿ ಉಂಟು ಮಾಡುತ್ತದೆ. ನಿತ್ಯ ಒಂದಲ್ಲಾ ಒಂದು ಸಮಸ್ಯೆ ದೇಹದ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿ ದೇಹದ ಕ್ರಿಯೆಯಲ್ಲಿ ಅಸಮಪರ್ಕತೆ ಕಾಣಿಸಬಾರದು ಅಂದರೆ ನಿಮ್ಮ ಜೀವನ ಶೈಲಿ ಬದಲಾಗಬೇಕು. ತಿನ್ನುವ ಆರೋಗ್ಯದ ಮೇಲೆ ಹಿಡಿತವಿರಬೇಕು. ನಿತ್ಯದ ಕ್ರಿಯೆಯಲ್ಲಿ ಶಿಸ್ತು ಕಡ್ಡಾಯವಾಗಿ ಇರಲೇಬೇಕು. ಸಮರ್ಪಕ ಜೀವನಶೈಲಿ ಹಲವಾರು ಅಪಾಯಕಾರಿ ರೋಗಗಳಿಂದ ದೂರ ಇರುವಂತೆ ನಿಮ್ಮ ದೇಹವನ್ನು ಕಾಪಾಡುತ್ತದೆ. ಹಿತ-ಮಿತವಾದ ಆಹಾರದಿಂದ ದೇಹ ಮತ್ತು ಮನಸ್ಸು ಉಲ್ಲಾಸವಾಗಿರುತ್ತದೆ.
ಯಾವಾಗಲೂ ದೀರ್ಘ ಶ್ವಾಸ ಮತ್ತು ನೇರವಾಗಿ ಕುಳಿತುಕೊಳ್ಳುವುದನ್ನು ರೂಢಿಸಿಕೊಳ್ಳಿ. ಪ್ರತಿದಿನ 3 ರಿಂದ 4 ಲೀಟರ್ ನೀರನ್ನು ಕುಡಿಯಬೇಕು. ದಿನದಲ್ಲಿ ಒಂದು ಗಂಟೆ ಯೋಗಾಭ್ಯಾಸ ಅಥವಾ ವ್ಯಾಯಾಮ ಮಾಡಿದರೆ ಒಳ್ಳೆಯದು. ಪ್ರತಿದಿನ ಎರಡು ಬಾರಿ ತಣ್ಣೀರು ಸ್ನಾನ ಮತ್ತು ಮಲಕ್ರಿಯೆಯನ್ನು ರೂಢಿ ಮಾಡಿಕೊಳ್ಳಿ.ನಿತ್ಯ ಯಾವುದಾದರೂ ಹಣ್ಣು ಅಥವಾ ತರಕಾರಿಯ ರಸವನ್ನು ಸೇವಿಸಿ. ಆಹಾರವನ್ನು ಚೆನ್ನಾಗಿ ನುರಿಸಿ, ನಿಧಾನವಾಗಿ ಸೇವಿಸಿ. ಊಟದ ನಂತರ 5 ರಿಂದ 10 ನಿಮಿಷಗಳು ವಜ್ರಾಸನದಲ್ಲಿ ಕುಳಿತುಕೊಳ್ಳಬೇಕು. ಬೆಳಗಿನ ಊಟವನ್ನು 12 ಗಂಟೆಯೊಳಗಾಗಿ ಮತ್ತು ಸಂಜೆಯ ಊಟವನ್ನು 8 ಗಂಟೆಯೊಳಗಾಗಿ ಸೇವಿಸುವುದು ಒಳ್ಳೆಯದು. ಬೇಗನೆ ಮಲಗುವುದು; ಬೇಗನೆ ಏಳುವುದು ಸೂಕ್ತ.ದಿನಕ್ಕೆ ಒಂದು ಅಥವಾ ಎರಡು ಬಾರಿ ಪ್ರಾರ್ಥನೆಯನ್ನು ಮಾಡಿ. ವಾರಕ್ಕೊಂದು ದಿನ ಉಪವಾಸ (ಹಣ್ಣುಗಳ ರಸ ಹಾಗೂ ನೀರನ್ನು ಸೇವಿಸುವುದು).ಯಾವ ಬಗೆಯ ಯೋಚನೆಗೂ ಅವಕಾಶ ಕೊಡದೆ ಶಾಂತಚಿತ್ತದಿಂದ ಮಲಗುವುದು.
ಊಟವನ್ನು ಹಸಿವಿದ್ದಾಗ ಮಾತ್ರ ಸೇವಿಸಿ.ಕೋಪ, ಯೋಚನೆ, ಅನಾರೋಗ್ಯ, ಆತುರ ಇದ್ದರೆ ಊಟ ಮಾಡದಿರುವುದು ಸೂಕ್ತ. ರಾತ್ರಿಯ ಊಟ ಮತ್ತು ನಿದ್ರೆಗೆ ಕನಿಷ್ಠ 2 ರಿಂದ 3 ಗಂಟೆಗಳ ಅಂತರವಿರಲಿ. ಊಟಕ್ಕೆ ಕನಿಷ್ಠ ಅರ್ಧಗಂಟೆಯ ಮುಂಚೆ ಅಥವಾ ಎರಡು ಗಂಟೆಯ ನಂತರ ನೀರನ್ನು ಕುಡಿಯಬೇಕು. ಊಟದಲ್ಲಿ ಕಡಿಮೆ ವಿವಿಧತೆ ಇರುವುದು. ಹೆಚ್ಚು ಸೊಪ್ಪು, ತರಕಾರಿಗಳಿರಲಿ. ಊಟವನ್ನು ಚೆನ್ನಾಗಿ ಅಗಿದು ನುರಿಸಿ ತಿನ್ನಿ. ಘನ ಪದಾರ್ಥಗಳನ್ನು ಕುಡಿಯುವುದು; ದ್ರವವನ್ನು ತೆಗೆದುಕೊಳ್ಳಿ. | 1 |
|
Updated: Tuesday, July 30, 2019, 11:52 [IST]
ನಮ್ಮ ದೇಹಕ್ಕೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಅಗತ್ಯವಾಗಿ ಬೇಕಾಗಿರುವ ಪ್ರೋಟೀನ್ ದೊಡ್ಡ ಗಾತ್ರದ ಪೋಷಕಾಂಶವಾಗಿದೆ. ಈ ಅಗತ್ಯತೆಯನ್ನು ಕೆಲವಾರು ಆಹಾರಗಳ ಮೂಲಕ ಪೂರೈಸಿಕೊಳ್ಳಬಹುದಾದರೂ ಇಂದಿನ ದಿನಗಳಲ್ಲಿ ಇನ್ನೂ ಸುಲಭರೀತಿಯಲ್ಲಿ ಪ್ರೋಟೀನ್ ಶೇಕ್ ಎಂಬ ಪ್ರೋಟೀನ್ ಪುಡಿ ಬೆರೆಸಿದ ಪೇಯವನ್ನು ಸೇವಿಸುವ ಮೂಲಕ ಪಡೆಯಬಹುದು. ಇಂದು ಹೆಚ್ಚು ಜನಪ್ರಿಯವಾಗಿರುವ ಈ ಪೇಯ ದಿನದ ಒಂದು ಹೊತ್ತಿನ ಆಹಾರದ ಭಾಗವೇ ಆಗಿಬಿಟ್ಟಿದೆ.
ಅದರಲ್ಲೂ ವ್ಯಾಯಾಮಶಾಲೆಯಲ್ಲಿ ನಿತ್ಯವೂ ವ್ಯಾಯಾಮ ಮಾಡುವವರಿಗೆ ಹೆಚ್ಚು ಫಲದಾಯಕವಾಗಿದೆ. ಸಾಮಾನ್ಯವಾಗಿ ಪ್ರೋಟೀನ್ ಮಾಂಸಾಹಾರದ ಮೂಲಕ ಹೆಚ್ಚು ಲಭಿಸುವ ಆಹಾರವಾಗಿದ್ದು ಇದುವರೆಗೆ ಮಿತವಾದ ಆಯ್ಕೆಗಳಿದ್ದ ಸಸ್ಯಾಹಾರಿಗಳಿಗೆ ಈ ಪೇಯ ಹೆಚ್ಚು ಪ್ರಯೋಜನಕಾರಿಯಾಗಿದೆ.
ಪ್ರೋಟೀನ್ ಎಂದರೇನು?
ಇದೊಂದು ಅವಶ್ಯಕ ಅಮೈನೋ ಆಮ್ಲವಾಗಿದೆ ಹಾಗೂ ಮಾನವ ದೇಹದ ಅಂಗಾಶಗಳನ್ನು ರಚಿಸಲು ಮತ್ತು ಸವೆದ ಅಂಗಾಂಶಗಳನ್ನು ದುರಸ್ತಿಗೊಳಿಸಲು ಬಳಸಲ್ಪಡುವ ಮೂಲಧಾತುಗಳಾಗಿವೆ.
ನಮ್ಮ ದೇಹದ ಮೂಳೆಗಳು, ಸ್ನಾಯುಗಳು, ಅಸ್ಥೆಮಜ್ಜೆ, ತ್ವಚೆ ಮತ್ತು ರಕ್ತ ಆರೋಗ್ಯಕರವಾಗಿರಲು ಪ್ರೋಟೀನ್ ಅಗತ್ಯವಾಗಿ ಬೇಕು. ಕಿಣ್ವ, ರಸದೂತಗಳು ಹಾಗೂ ಇತರ ಅಗತ್ಯ ರಾಸಾಯನಿಕಗಳ ತಯಾರಿಕೆಗೆ ಪ್ರೋಟೀನ್ ಅಗತ್ಯವಾಗಿ ಬೇಕು. ಮೊಟ್ಟೆ, ಮೊಸರು, ಮಾಂಸ ಹಾಗೂ ಮೀನು ಪ್ರೋಟೀನ್ ಸಮೃದ್ಧವಾಗಿರುವ ಆಹಾರಗಳಾಗಿವೆ.
ಹಾಲಿನಲ್ಲಿ ಎರಡು ಬಗೆಯ ಪ್ರೋಟೀನುಗಳಿವೆ: ಕೇಸಿನ್ ಮತ್ತು ವ್ಹೇ. (casein and whey)
ಹಾಲಿನಿಂದ ಇವೆರಡು ಪ್ರೋಟೀನುಗಳನ್ನು ಪ್ರತ್ಯೇಕಿಸಿದಾಗ ಲಭಿಸುವ ಚೀಸ್ ನ ಉಪ ಉತ್ಪನ್ನಗಳ ರೂಪದಲ್ಲಿ ದೊರಕುತ್ತವೆ. ಹಾಲಿಗಿಂತಲೂ ಹಾಲಿನಿಂದ ಪ್ರತ್ಯೇಕಿಸಲ್ಪಟ್ಟ ವ್ಹೇ ಪ್ರೋಟೀನ್ ಅತಿ ಹೆಚ್ಚು ಆರೋಗ್ಯಕರ, ಏಕೆಂದರೆ ಇದರಲ್ಲಿ ಒಂಭತ್ತು ಬಗೆಯ ಅವಶ್ಯಕ ಅಮೈನೋ ಆಮ್ಲಗಳಿವೆ ಹಾಗೂ ಲ್ಯಾಕ್ಟೋಸ್ ಪ್ರಮಾಣ ಅತಿ ಕಡಿಮೆ ಇರುತ್ತದೆ.
ಅಷ್ಟಕ್ಕೂ ಪ್ರೋಟೀನ್ ಪುಡಿಯ ಅಗತ್ಯವೇನಿದೆ?
ಉತ್ತಮ ಗುಣಮಟ್ಟದ ಪ್ರೋಟೀನ್ ಪುಡಿಯಲ್ಲಿ ವ್ಹೇ ಪ್ರೋಟೀನ್ ಇರುತ್ತದೆ ಹಾಗೂ ಇದು ದೇಹಕ್ಕೆ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತದೆ. ದೈನಂದಿನ ಪ್ರೋಟೀನ್ ಸೇವನೆಯ ಜೊತೆಗೇ ಸುಮಾರು 25-30 ಗ್ರಾಂನಷ್ಟು ಪ್ರೋಟೀನ್ ಪುಡಿಯನ್ನು ಹೆಚ್ಚುವರಿಯಾಗಿ ಸೇವಿಸುವ ಮೂಲಕ ದೇಹದಾರ್ಢ್ಯತೆಯ ಗುರಿಗಳನ್ನು ಸುಲಭವಾಗಿ ಸಾಧಿಸಲು ಸಾಧ್ಯವಾಗುತ್ತದೆ ಹಾಗೂ ಅಹಾರದ ಸಂತೃಪ್ತಿಯೂ ಲಭಿಸುತ್ತದೆ.
ಪ್ರೋಟೀನ್ ಪುಡಿಯನ್ನು ಬೆರೆಸಿ ಕುಡಿಯಲು ಯಾವುದು ಸೂಕ್ತ? ನೀರೋ, ಹಾಲೋ?
ಪ್ರೋಟೀನ್ ಶೇಕ್ ಪೇಯವನ್ನು ತಯಾರಿಸಲು ಪ್ರೋಟೀನ್ ಪುಡಿಯನ್ನು ನೀರಿನೊಂದಿಗೆ ಅಥವಾ ಹಾಲಿನೊಂದಿಗೆ ಬೆರೆಸಬಹುದು. ಆದರೆ ಇವೆರಡರಲ್ಲಿ ಯಾವುದು ಹೆಚ್ಚು ಆರೋಗ್ಯಕರ ಎಂಬ ಪ್ರಶ್ನೆ ಚರ್ಚೆಗೆ ಗ್ರಾಸವಾಗಿದೆ. ಸಾಮಾನ್ಯವಾಗಿ ಈ ಆಯ್ಕೆ ಕುಡಿಯುವವರ ರುಚಿಯನ್ನು ಆಧರಿಸಿರುತ್ತದೆ. ಆದರೂ, ದೇಹದಾರ್ಢ್ಯತೆಯ ಗುರಿ ಹಾಗೂ ಈಗಿರುವ ಶಾರೀರ ಹೇಗಿದೆ ಎಂಬ ಅಂಶಗಳನ್ನು ಪರಿಗಣಿಸಿ ಈ ಆಯ್ಕೆಯನ್ನು ಖಚಿತಪಡಿಸಬಹುದು. ನಿಮ್ಮ ದೇಹದಾರ್ಢ್ಯತೆಯ ಗುರಿ, ಹುರಿಗಟ್ಟಿದ ಸ್ನಾಯುಗಳನ್ನು ಹೊಂದುವುದು, ಸ್ನಾಯುಗಳನ್ನು ಹೆಚ್ಚಿಸುವುದು, ದೇಹದ ತೂಕವನ್ನು ಹೆಚ್ಚಿಸುವುದು ಮೊದಲಾದ ಆದ್ಯತೆಗಳನ್ನು ಪರಿಗಣಿಸಿ ಈ ಪ್ರೋಟೀನ್ ಪೇಯವನ್ನು ಸಿದ್ಧಪಡಿಸಬಹುದು.
ಹಾಲಿನೊಂದಿಗೆ ಬೆರೆಸಿದ ಪ್ರೋಟೀನ್ ಪುಡಿ
ಈ ಪುಡಿಯನ್ನು ಹಾಲಿನಲ್ಲಿ ಬೆರೆಸಿದಾಗ ಈ ಪೇಯ ಹೆಚ್ಚು ಶಕ್ತಿಭರಿತವಾಗುತ್ತದೆ. ಹಾಲಿನಲ್ಲಿ ಈಗಾಗಲೇ ನೈಸರ್ಗಿಕ ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿರುತ್ತದೆ. ಈಗ ಬೆರೆತಿರುವ ವ್ಹೇ ಪ್ರೋಟೀನ್ ಪುಡಿ ಈ ಹಾಲನ್ನು ಇನ್ನಷ್ಟು ಶಕ್ತಿಯುತವಾಗಿಸಿ ಸ್ನಾಯುಗಳನ್ನು ವೃದ್ದಿಸಲು ಮತ್ತು ತೂಕವನ್ನು ಹೆಚ್ಚಿಸಲೂ ನೆರವಾಗುತ್ತದೆ. ಒಂದು ವೇಳೆ ನೀವು ತೂಕವನ್ನು ಇಳಿಸುವ ಇರಾದೆಯನ್ನು ಹೊಂದಿದ್ದರೆ ನೀವು ಪ್ರೋಟೀನ್ ಪುಡಿ ಮತ್ತು ಹಾಲನ್ನು ಜೊತೆಯಾಗಿ ಸೇವಿಸಬಾರದು. ಬದಲಿಗೆ ಹಾಲಿನ ಪುಡಿಯಿಂದ ತಯಾರಿಸಿದ ಅಥವಾ ಹಸುವಿನ ಹಾಲಿನಿಂದ ತಯಾರಿಸಿದ ಪ್ರೋಟೀನ್ ಶೇಕ್ ಸೇವಿಸಬಹುದು.
ಸಾಮಾನ್ಯವಾಗಿ ಪ್ರೋಟೀನ್ ಪೇಯ ಜೀರ್ಣಗೊಳ್ಳಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ ಹಾಗೂ ಈ ಅವಧಿಯಲ್ಲಿ ನಿಧಾನವಾಗಿ ದೇಹ ಪೋಷಕಾಂಶಗಳನ್ನು ಹೀರಿಕೊಂಡು ಹೆಚ್ಚು ಹೊತ್ತು ವ್ಯಾಯಾಮ ನಡೆಸಲು ಸಾಧ್ಯವಾಗುತ್ತದೆ. ಆದರೆ ನಮ್ಮ ದೇಹ ಈ ಪೇಯದ ಒಟ್ಟೂ ಪ್ರೋಟೀನ್ ನಲ್ಲಿ ಒಂದಂಶವನ್ನು ಮಾತ್ರವೇ ಬಳಸಿಕೊಳ್ಳುತ್ತದೆ ಹಾಗೂ ಉಳಿದ ಪ್ರಮಾಣ ಬಳಸಲ್ಪಡದೇ ವ್ಯರ್ಥವಾಗುತ್ತದೆ. ಆದರೂ, ಈ ಪ್ರಮಾಣವೇ ದೇಹದ ಅಗತ್ಯಕ್ಕೆ ಬೇಕಾದಷ್ಟಾಗುತ್ತದೆ.
ನೀರಿನೊಂದಿಗೆ ಬೆರೆಸಿದ ಪ್ರೋಟೀನ್ ಪುಡಿ
ತೂಕ ಇಳಿಸಲು ಪ್ರೋಟೀನ್ ಅತ್ಯುತ್ತಮ ಪೋಷಕಾಂಶವಾಗಿದೆ. ಹಾಗಾಗಿ ತೂಕ ಇಳಿಸುವವರು ಹೆಚ್ಚು ಪ್ರೋಟೀನ್ ಮತ್ತು ಕಡಿಮೆ ಕಾರ್ಬೋಹೈಡ್ರೇಟುಗಳನ್ನು ಹೊಂದಿರುವ ಆಹಾರಗಳನ್ನು ಸೇವಿಸುವುದು ಉತ್ತಮ.
*ಒಂದು ವೇಳೆ ನೀವು ತೂಕವನ್ನು ಇನ್ನಷ್ಟು ಶೀಘ್ರವಾಗಿ ಕಳೆದುಕೊಳ್ಳಬೇಕೆಂದಿದ್ದರೆ ನಿಮ್ಮ ಪ್ರೋಟೀನ್ ಪುಡಿಯನ್ನು ನೀರಿನೊಂದಿಗೆ ಬೆರೆಸಿ ಇದರಲ್ಲಿ ಉತ್ತಮ ಪ್ರಮಾಣದ ಹಣ್ಣು ಮತ್ತು ತರಕಾರಿಗಳನ್ನೂ ಸೇರಿಸಬೇಕು. ಇದು ಜೀವರಾಸಾಯನಿಕ ಕ್ರಿಯೆಯನ್ನು ಉತ್ತಮಗೊಳಿಸುವುದರ ಜೊತೆಗೇ ತೂಕ ಇಳಿಸುವ ಗತಿಯನ್ನೂ ಶೀಘ್ರವಾಗಿಸುತ್ತದೆ.
*ಅಲ್ಲದೇ ನೀರಿನೊಂದಿಗೆ ಬೆರೆಸಿದ ಪ್ರೊಟೀನ್ ಪುಡಿ ಜೀರ್ಣಿಸಿಕೊಳ್ಳುವುದು ಸುಲಭವಾಗುತ್ತದೆ ಹಾಗೂ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳು ಸುಲಭವಾಗಿ ಲಭಿಸುತ್ತವೆ. ಇದು ವ್ಯಾಯಾಮದ ಬಳಿಕ ಬಳಲಿದ ಸ್ನಾಯುಗಳಿಗೆ ಮರುಚೇತನ ನೀಡಲು ಸಾಧ್ಯವಾಗುತ್ತದೆ.
*ಅಲ್ಲದೇ ನೀರು ನಮ್ಮ ದೇಹಕ್ಕೆ ಹೆಚ್ಚು ಆರ್ದ್ರತೆ ನೀಡಲು ಅಗತ್ಯವಾಗಿದೆ ಹಾಗೂ ನೀರಿನಂಶವನ್ನು ಉಳಿಸಿಕೊಳ್ಳಲು ಪ್ರೋಟೀನ್ ನೊಂದಿಗೆ ನೀರನ್ನು ಬೆರೆಸುವುದು ಹೆಚ್ಚು ಸೂಕ್ತವಾಗಿದೆ.
ಸಾಮಾನ್ಯವಾಗಿ ಸಿದ್ಧರೂಪದಲ್ಲಿ ಸಿಗುವ ಪ್ರೋಟೀನ್ ಪುಡಿಯ ಪ್ಯಾಕೆಟ್ಟುಗಳಲ್ಲಿ ಎಷ್ಟು ಹಾಲು ಬೆರೆಸಬೇಕು ಅಥವಾ ನೀರು ಬೆರೆಸಬೇಕು ಎಂಬ ಮಾಹಿತಿಯನ್ನು ಮುದ್ರಿಸಲಾಗಿರುತ್ತದೆ. ಹಾಲಿನಲ್ಲಿ ನೈಸರ್ಗಿಕವಾಗಿಯೇ ಇರುವ ಪ್ರೊಟೀನ್ ಮತ್ತು ಕೊಬ್ಬುಗಳು ಈಗ ಬೆರೆಸಿದ ಪ್ರೋಟೀನ್ ಪುಡಿಯ ಬೆರೆಸುವಿಕೆಯಿಂದ ಇನ್ನಷ್ಟು ಪೌಷ್ಟಿಕವಾಗುತ್ತದೆ. ಒಂದು ವೇಳೆ ನೀವು ಕೊಬ್ಬು ರಹಿತ ಆಹಾರವನ್ನು ಸೇವಿಸುತ್ತಿದ್ದರೆ ಅಥವಾ ನಿಮ್ಮ ಆಹಾರದಲ್ಲಿ ಈಗಾಗಲೇ ಪೋಷಕಾಂಶಗಳಿದ್ದರೆ ನಿಮಗೆ ಈ ಹೆಚ್ಚುವರಿ ಪೋಷಕಾಂಶವಿರುವ ಆಹಾರದ ಅಗತ್ಯವಿಲ್ಲ. ಒಂದು ವೇಳೆ ಆಹಾರದ ರುಚಿ ನಿಮ್ಮ ಆದ್ಯತೆಯಾಗಿದ್ದರೆ ನೀವು ಪ್ರೋಟೀನ್ ಪೇಯದಲ್ಲಿ ಬೆರೆಸಲು ಹಾಲನ್ನು ಬೆರೆಸಬಹುದು. ಇದು ಕೇವಲ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲ, ನಿಮ್ಮ ಪೋಷಕಾಂಶದ ಅಗತ್ಯತೆಯನ್ನೂ ಪೂರೈಸುತ್ತದೆ.
ಅಲ್ಲದೇ, ವ್ಯಾಯಾಮವನ್ನೇ ಮಾಡದೆ ಪ್ರೋಟೀನ್ ಪೇಯವನ್ನು ಸೇವಿಸುವುದು ತೀರಾ ಅಪಾಯಕರ! ಅಲ್ಲದೇ ಪೇಯವನ್ನು ಸೇವಿಸಬೇಕಾದ ಸಮಯವನ್ನು ಪರಿಗಣಿಸುವುದೂ ಅಗತ್ಯವಾಗಿದೆ. ಹಾಗಾಗಿ, ವ್ಯಾಯಾಮದ ಬಳಿಕ ಬಳಲಿದ್ದ ಸಮಯದಲ್ಲಿ ಮಾತ್ರವೇ ಈ ಪೇಯವನ್ನು ಸೇವಿಸುವ ಮೂಲಕ ಗರಿಷ್ಟ ಪ್ರಯೋಜನಗಳನ್ನು ಪಡೆಯಬಹುದು. | 1 |
ಕೆಟಿಪಿಪಿಎ–ಎಐಟಿಎ ಟೆನಿಸ್ ಟೂರ್ನಿ: ಸೆಮಿಗೆ ನಿಕ್ಷೇಪ್, ರಿಷಿ
ಭರತ್–ಉಮೈರ್ ಶಾಗೆ ಜಯ
ಕೆಟಿಪಿಪಿಎ–ಎಐಟಿಎ ಟೆನಿಸ್ ಟೂರ್ನಿ: ಸೆಮಿಗೆ ನಿಕ್ಷೇಪ್, ರಿಷಿ
ಪ್ರಜಾವಾಣಿ ವಾರ್ತೆ
Published:
16 ಜನವರಿ 2019, 23:35 IST
Updated:
16 ಜನವರಿ 2019, 23:35 IST
ಅಕ್ಷರ ಗಾತ್ರ :
ಆ
ಆ
ಬೆಂಗಳೂರು: ಕರ್ನಾಟಕದ ಬಿ.ಆರ್.ನಿಕ್ಷೇಪ್ ಮತ್ತು ರಿಷಿ ರೆಡ್ಡಿ ಇಲ್ಲಿನ ಟೆಂಪಲ್ ಟೆನಿಸ್ ಕೋರ್ಟ್‌ನಲ್ಲಿ ನಡೆಯುತ್ತಿರುವ ಕೆಟಿಪಿಪಿಎ–ಎಐಟಿಎ ಟೆನಿಸ್ ಟೂರ್ನಿಯ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.
ಬುಧವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮೂರನೇ ಶ್ರೇಯಾಂಕಿತ ನಿಕ್ಷೇಪ್, 6–4, 6–3ರಲ್ಲಿ ತರುಣ್ ಅನಿರುದ್ಧ್ ಅವರನ್ನು ಮಣಿಸಿದರು. ರಿಷಿ ರೆಡ್ಡಿ, 6–1, 6–4ರಲ್ಲಿ ಸೂರ್ಯ ಇಳಂಗೋವನ್ ಅವರನ್ನು ಸೋಲಿಸಿದರು.
ಇದೇ ವಿಭಾಗದ ಇತರ ಪಂದ್ಯಗಳಲ್ಲಿ ಯಶವಂತ್ ಲೋಗನಾಥನ್, 6–4, 6–3ರಲ್ಲಿ ಅರ್ಜುನ್ ಮಹದೇವನ್ ವಿರುದ್ಧ, ಭರತ್ ನಿಶೋಕ್ ಕುಮಾರ್ 6–2, 6–4ರಲ್ಲಿ ದೀಪಕ್ ಸ್ನೇಹಿತ್ ಕುಮಾರ್ ವಿರುದ್ಧ ಗೆದ್ದರು.
ಮಹಿಳೆಯರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ಎಸ್. ಸೋಹಾ, 6–1, 6–4ರಲ್ಲಿ ಅನುಷಾ ಅವರನ್ನು ಮಣಿಸಿ ನಾಲ್ಕರ ಘಟ್ಟ ಪ್ರವೇಶಿಸಿದರು. ಮತ್ತೊಂದು ಪಂದ್ಯದಲ್ಲಿ ಎಸ್.ಅಪೂರ್ವಾ ಅವರನ್ನು 6–1, 63ರಲ್ಲಿ ಮಣಿಸಿದ ಟಿ.ಶ್ರೇಯಾ ಸೆಮಿಫೈನಲ್ ಪ್ರವೇಶಿಸಿದರು.
ಪುರುಷರ ಡಬಲ್ಸ್‌ನಲ್ಲಿ ಭರತ್ ನಿಶೋಕ್ ಕುಮಾರ್–ಉಮೈರ್ ಶಾ ಜೋಡಿ 6–3, 6–4ರಲ್ಲಿ ಸೂರ್ಯ ಇಳಂಗೋವನ್-ಪಿ. ಬಾಬು ಮೇಲೆ, ದೀಪಕ್ ಕುಮಾರ್-ಆರ್ಯನ್ ಪತಂಗೆ ಜೋಡಿ, 6-4, 7-5ರಲ್ಲಿ ಇಫ್ತಿಕರ್ ಶೈಕ್ ಮೇಲೆ ಗೆದ್ದರು. | 2 |
ಇಲಿಯಾನ ಮದುವೆಯೇ ಆಗದೇ ಪ್ರಗ್ನಂಟ್ ಹೇಗೆ?
Highlights
ಈ ಹಿಂದೆಯೇ ಇಲಿಯಾನ ಪ್ರಗ್ನೆಂಟ್ ಎನ್ನುವ ಸುದ್ದಿ ಸಾಕಷ್ಟು ಹರಿದಾಡಿತ್ತು. ಮದುವೆಯೇ ಆಗಿಲ್ಲ ಇನ್ನು ಪ್ರಗ್ನೆಂಟ್ ಹೇಗೆ? ಏನಿದರ ಹಿಂದಿನ ಅಸಲಿಯತ್ತು ಎಂಬುದೆಲ್ಲಾ ಚರ್ಚೆಯ ಮುನ್ನೆಲೆಗೆ ಬಂದಿದ್ದವು. ಆಗ ಯಾವುದಕ್ಕೂ ಪ್ರತಿಕ್ರಿಯೆ ನೀಡದೇ ತನ್ನ ಪಾಡಿಗೆ ತಾನಾಯಿತು, ತನ್ನ ಸಿನಿಮಾವಾಯಿತು ಎಂದುಕೊಂಡೇ ಇದ್ದ ಇಲಿಯಾನ ಈಗ ಅವೆಲ್ಲಕ್ಕೂ ಉತ್ತರಿಸಿದ್ದಾರೆ.
ಬಾಲಿವುಡ್ ಮಂದಿ ಕುಳಿತರೂ ಸುದ್ದಿ, ನಿಂತರೂ ಸುದ್ದಿಯಾಗುವುದು ಸಹಜ. ಅದರಲ್ಲಿಯೂ ನಟಿಯರ ಪಾಲಿಗಂತೂ ಇದು ತುಸು ಹೆಚ್ಚೇ ಇರುತ್ತದೆ. ಅಭಿಮಾನಿಗಳು ಒಳ್ಳೆಯ, ಕೆಟ್ಟ ರೀತಿಯಲ್ಲೆಲ್ಲಾ ಕಾಮೆಂಟ್ ಮಾಡುತ್ತಾರೆ. ಇದು ಹಲವು ವೇಳೆ ಅವರ ತೀರಾ ವಯಕ್ತಿಕ ಜೀವನಕ್ಕೆ ಸಂಬಂಧಪಟ್ಟ ಘಟನೆಗಳೂ ಆಗಿರುತ್ತವೆ.
ಈಗ ಈ ಸರದಿ ಇಲಿಯಾನ ಡಿಕ್ರೂಜ್ ಅವರದ್ದು. ಈ ಹಿಂದೆಯೇ ಇಲಿಯಾನ ಪ್ರಗ್ನೆಂಟ್ ಎನ್ನುವ ಸುದ್ದಿ ಸಾಕಷ್ಟು ಹರಿದಾಡಿತ್ತು. ಮದುವೆಯೇ ಆಗಿಲ್ಲ ಇನ್ನು ಪ್ರಗ್ನೆಂಟ್ ಹೇಗೆ? ಏನಿದರ ಹಿಂದಿನ ಅಸಲಿಯತ್ತು ಎಂಬುದೆಲ್ಲಾ ಚರ್ಚೆಯ ಮುನ್ನೆಲೆಗೆ ಬಂದಿದ್ದವು. ಆಗ ಯಾವುದಕ್ಕೂ ಪ್ರತಿಕ್ರಿಯೆ ನೀಡದೇ ತನ್ನ ಪಾಡಿಗೆ ತಾನಾಯಿತು, ತನ್ನ ಸಿನಿಮಾವಾಯಿತು ಎಂದುಕೊಂಡೇ ಇದ್ದ ಇಲಿಯಾನ ಈಗ ಅವೆಲ್ಲಕ್ಕೂ ಉತ್ತರಿಸಿದ್ದಾರೆ.
‘ನಾನು ನನ್ನ 18 ನೇ ವಯಸ್ಸಿಗೇ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟವಳು. ಇಲ್ಲಿ ಏನೆಲ್ಲಾ ನಡೆಯುತ್ತೆ, ಯಾರು ಏನು ಮಾಡುತ್ತಾರೆ, ನಾನು ಏನು ಮಾಡಬೇಕು ಎನ್ನುವುದರ ಅರಿವು ನನಗಾಗಿದೆ. ಹಾಗಾಗಿ ಯಾವುದಕ್ಕೂ ಪ್ರತಿಕ್ರಿಯೆ ನೀಡುವುದಿಲ್ಲ. ನಾನು ಪ್ರಗ್ನೆಂಟ್ ಎಂದು ಸಾಕಷ್ಟು ಜನ ಹೇಳಿದರು. ಈಗ ಅದು ಸುಳ್ಳು ಎನ್ನುವುದು ಸ್ವತಃ ಅವರಿಗೇ ಗೊತ್ತಾಗಿದೆ. ಹಾಗಾಗಿ ಸುಳ್ಳು ಹೆಚ್ಚು ದಿನ ಉಳಿಯುವುದಿಲ್ಲ. ಸತ್ಯವೇ ಜಯ ಗಳಿಸುವುದು. ಇದರಿಂದಾಗಿಯೇ ನಾನು ಮುಂದೆ ನನ್ನ ಕಾರ್ಯವನ್ನಷ್ಟೇ ಮಾಡಿಕೊಂಡು ಹೋಗುತ್ತೇನೆ’ ಎಂದು ಹೇಳಿ ತನ್ನ ವಿರುದ್ಧ ರೂಮರ್ಸ್ ಹಬ್ಬಿಸುವವರತ್ತ ಛಾಟಿ ಬೀಸಿದ್ದಾರೆ ಇಲಿಯಾನ.
Last Updated 18, Jun 2018, 5:44 PM IST | 0 |
ಭಾರತ ಕ್ರೀಡೆಗೆ ಸಂಕಷ್ಟ ?
ಪಾಕಿಸ್ತಾನದ ಶೂಟರ್‌ಗಳಿಗೆ ವೀಸಾ ನಿರಾಕರಣೆ
ಭಾರತ ಕ್ರೀಡೆಗೆ ಸಂಕಷ್ಟ ?
ಎಎಫ್‌ಪಿ
23 ಫೆಬ್ರವರಿ 2019, 01:04 IST
Updated:
23 ಫೆಬ್ರವರಿ 2019, 01:04 IST
ಅಕ್ಷರ ಗಾತ್ರ :
ಆ
ಆ
ನವದೆಹಲಿ: ಪಾಕಿಸ್ತಾನ ಶೂಟರ್‌ಗಳಿಗೆ ವೀಸಾ ನಿರಾಕರಿಸಿದ ಹಿನ್ನೆಲೆಯಲ್ಲಿ ಭಾರತದಲ್ಲಿ ಒಲಿಂಪಿಕ್ಸ್‌ಗೆ ಸಂಬಂಧಿಸಿದ ಕ್ರೀಡಾಕೂಟಗಳ ಆಯೋಜನೆಗೆ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಅವಕಾಶ ನೀಡದೇ ಇರುವ ಸಾಧ್ಯತೆ ಇದೆ.
ಈ ವಿಷಯವನ್ನು ಭಾರತ ಒಲಿಂಪಿಕ್ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ಶುಕ್ರವಾರ ತಿಳಿಸಿದ್ದು ‘ಸಮಸ್ಯೆ ಬಗೆಹರಿಯುವ ವರೆಗೆ ಮಾತುಕತೆಗೆ ಸಿದ್ಧವಿಲ್ಲ’ ಎಂದು ಐಒಸಿ ಸ್ಪಷ್ಟಪಡಿಸಿದೆ. ಭವಿಷ್ಯದಲ್ಲಿ ನಮ್ಮ ಅಥ್ಲೀಟ್‌ಗಳು ಪ್ರಮುಖ ಟೂರ್ನಿಗಳಲ್ಲಿ ಪಾಲ್ಗೊಳ್ಳುವುದಕ್ಕೂ ಅವಕಾಶ ನೀಡದೇ ಇರುವ ಸಾಧ್ಯತೆ ಇದೆ ಎಂದಿದ್ದಾರೆ.
2026ರ ಯೂತ್ ಒಲಿಂಪಿಕ್ಸ್, 2030ರ ಏಷ್ಯಾ ಕ್ರೀಡಾಕೂಟ ಮತ್ತು 2032ರ ಒಲಿಂಪಿಕ್ಸ್ ಆಯೋಜಿಸಲು ಅವಕಾಶ ಕೋರಿ ಬಿಡ್ ಸಲ್ಲಿಸಲು ಭಾರತ ಮುಂದಾಗಿದ್ದು ಐಒಸಿಯ ನಿರ್ಧಾರದಿಂದಾಗಿ ಇದಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ. | 2 |
ಬಾಯಿಯ ಆರೋಗ್ಯ ಇಮ್ಮಡಿಗೊಳಿಸುವ ನೈಸರ್ಗಿಕ ಮೌತ್ ವಾಶ್
June 25, 2019
Facebook Twitter Google+ LinkedIn StumbleUpon Tumblr Pinterest Reddit VKontakte Odnoklassniki Pocket WhatsApp
ಮನುಷ್ಯನ ದೇಹದ ಆರೋಗ್ಯ ನಿಂತಿರುವುದು ಆತ ಸೇವಿಸುವ ಆಹಾರದ ಮೇಲೆ. ಅದು ಸತ್ಯ. ಯಾಕೆಂದರೆ ನಾವು ಸೇವಿಸುವ ಆಹಾರದಲ್ಲಿ ಸಣ್ಣ ಹೆಚ್ಚು ಕಡಿಮೆಯಾದರೂ ಸಾಕು, ಅದು ಇಡೀ ದೇಹದ ಮೇಲೆ ಪರಿಣಾಮ ಬೀರುತ್ತದೆ.
ಇನ್ನು ನಮಗೆ ನಮ್ಮ ದೇಹದ ಪ್ರತಿಯೊಂದು ಅಂಗಗಳು ಕೂಡಾ ಮುಖ್ಯ. ಜೊತೆಗೆ ಎಲ್ಲಾ ಅಂಗಗಳನ್ನು ಶುಚಿಯಾಗಿ ಇಟ್ಟುಕೊಳ್ಳುವುದು ನಮ್ಮ ಕರ್ತವ್ಯ. ಅದರಲ್ಲೂ ನಾವು ಆರೋಗ್ಯದಿಂದಿರಲು ಪ್ರತಿದಿನ ತಪ್ಪದೇ ಆಹಾರ ತೆಗೆದುಕೊಳ್ಳುವ ಬಾಯಿಯನ್ನು ಶುಚಿಯಾಗಿಡಲು ಮರೆಯಬಾರದು. ಬಾಯಿ ಶುಚಿಯಾಗದಿದ್ದರೆ ಕೆಟ್ಟ ವಾಸನೆ ಬರುತ್ತದೆ. ಮತ್ತೆ ಕ್ರಮೇಣ ಹಲ್ಲು, ವಸಡಿನ ಸಮಸ್ಯೆ ಎದುರಾಗುತ್ತದೆ.
ಹಲ್ಲಿನ ಆರೋಗ್ಯ ಕಾಪಾಡಿಕೊಳ್ಳುವ ಸಲುವಾಗಿ ನಾವು ದಿನಕ್ಕೆ ಎರಡು ಬಾರಿ ತಪ್ಪದೇ ಹಲ್ಲುಜ್ಜಬೇಕು ಎಂಬುದು ನಾವು ಬಾಲ್ಯದಿಂದಲೂ ಕಲಿತ ಪಾಠ. ಈಗಲೂ ಕೆಲವರು ಅದನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಆದರೆ ಹಲ್ಲುಜ್ಜುವುದರಿಂದ ಬಾಯಿಯ ಆರೋಗ್ಯ ಕಾಪಾಡಿದಂತೆ ಆಗುವುದಿಲ್ಲ. ಬಾಯಿಯ ಆರೋಗ್ಯ ಕಾಪಾಡಿಕೊಳ್ಳಲು ಶುಚಿಯಾದ ನೀರಿನಿಂದ ಬಾಯಿ ಮುಕ್ಕಳಿಸಬೇಕು. ಜೊತೆಗೆ ಮೌತ್ ವಾಶ್ ಉಪಯೋಗಿಸಿ ಬಾಯಿ ಮುಕ್ಕಳಿಸಿದರೆ ಒಳ್ಳೆಯದು. ಅದರಲ್ಲೂ ನೈಸರ್ಗಿಕ ಮೌತ್ ವಾಶ್ ಬಳಸಿದರೆ ಯಾವುದೇ ರೀತಿಯ ಅಡ್ಡ ಪರಿಣಾಮಗಳಿಲ್ಲ.
ಬೇಕಿಂಗ್ ಸೋಡಾದಿಂದ ನೈಸರ್ಗಿಕ ಮೌತ್ ವಾಶ್ ತಯಾರಿಸಬಹುದು. ಅರ್ಧ ಟೀ ಚಮಚ ಬೇಕಿಂಗ್ ಸೋಡಾ ಅರ್ಧ ಗ್ಲಾಸ್ ಬಿಸಿ ನೀರು ಅದಕ್ಕೆ ಬೇಕಾಗುವ ಸಾಮಾಗ್ರಿಗಳು. ಬಿಸಿ ನೀರಿಗೆ ಅರ್ಧ ಟೀ ಚಮಚ ಸೋಡಾ ಹಾಕಿ ಚೆನ್ನಾಗಿ ಕಲಸಬೇಕು. ಬ್ರಷ್ ಮಾಡಿದ ನಂತರ ಈ ಮಿಶ್ರಣದಿಂದ ಬಾಯಿ ಮುಕ್ಕಳಿಸಿ. ಹೀಗೆ ಮಾಡುವುದರಿಂದ ಬಾಯಿಯ ದುರ್ವಾಸನೆಯನ್ನು ದೂರವಾಗುತ್ತದೆ. ಎಲ್ಲದಕ್ಕಿಂತಲೂ ಮುಖ್ಯವಾಗಿ ಓರಲ್ ಬ್ಯಾಕ್ಟೇರಿಯಾ ಗಳನ್ನೂ ನಾಶ ಪಡಿಸುವ ಶಕ್ತಿ ಬೇಕಿಂಗ್ ಸೋಡಾಕ್ಕಿದೆ. .
ಅಡುಗೆ ಮನೆಯಲ್ಲಿ ಪ್ರತಿದಿನ ಬಳಸಲ್ಪಡುವ ಉಪ್ಪುನಿಂದಲೂ ನೈಸರ್ಗಿಕ ಮೌತ್ ವಾಶ್ ತಯಾರಿಸಬಹುದು. ಅರ್ಧ ಟೀ ಸ್ಪೂನ್ ಪುಡಿ ಉಪ್ಪು , ಮತ್ತು ಅರ್ಧ ಗ್ಲಾಸ್ ಬಿಸಿ ನೀರು ಇದ್ದರೆ ಸಾಕು, ಸುಲಭದಲ್ಲಿ ಈ ಮೌತ್ ವಾಶ್ ತಯಾರಿಸಬಹುದು. ಪುಡಿ ಉಪ್ಪನ್ನು ಬಿಸಿ ನೀರಿಗೆ ಹಾಕಿ ಚೆನ್ನಾಗಿ ಕಲಸಿ. ನಂತರ ಬ್ರಶ್ ಮಾಡಿದ ನಂತರ, ಊಟ ಮಾಡಿದ ನಂತರ ಈ ನೀರಿನಿಂದ ಬಾಯಿ ಮಕ್ಕಳಿಸಿ. ಹೀಗೆ ಮಾಡುವುದರಿಂದ ಹಲ್ಲಿನ ಮತ್ತು ವಸಡಿನ ಸಮಸ್ಯೆಗಳನ್ನು ದೂರ ಮಾಡಬಹುದು. | 1 |
ಬಿಪಿಎಲ್ ಕಾರ್ಡ್'ನಿಂದ ರೇಷನ್ ಪಡೆಯುತ್ತಿದ್ದಾರೆ ದೀಪಿಕಾ, ಸೋನಾಕ್ಷಿ, ಜಾಕ್ವೆಲಿನ್ ಹಾಗೂ ರಾಣಿ ಮುಖರ್ಜಿ!
Highlights
ಬಾಲಿವುಡ್'ನ ಪ್ರಖ್ಯಾತ ನಟಿಯರಾದ ದೀಪಿಕಾ ಪಡುಕೋಣೆ, ಜಾಕ್ವೆಲಿನ್ ಫೆರ್ನಾಂಡಿಸ್, ಸೋನಾಕ್ಷಿ ಸಿನ್ಹಾ ಹಾಗೂ ರಾಣಿ ಮುಖರ್ಜಿ ಬಹು ಮಹಡಿ ಮನೆಗಳಲ್ಲಿ ವಾಸಿಸುತ್ತಿದ್ದರೂ, ಉತ್ತರ ಪ್ರದೇಶದ ಫರ್ಕಾಬಾದ್ ಜಿಲ್ಲೆಯ ಕಾಯ್ಮಗಂಜ್ ಕ್ಷೇತ್ರದಲ್ಲಿ ಇವರ ಹೆಸರಿನಲ್ಲಿ ಬಡತನ ರೇಖೆಗಿಂತ ಕೆಳಗಿರುವ(ಬಿಪಿಎಲ್) ಶ್ರೇಣಿಯಲ್ಲಿ ರೇಷನ್ ಕಾರ್ಡುಗಳಿವೆ. ಇಷ್ಟೇ ಅಲ್ಲದೆ ವ್ಯವಸ್ಥತವಾಗಿ ರೇಷನ್ ಕೂಡಾ ಹಂಚಲಾಗುತ್ತಿದೆ.
ಈ ಕುರಿತಾಗಿ ಮಾತನಾಡಿರುವ ಜಿಲ್ಲಾಧಿಕಾರಿ ಪ್ರಕಾಶ್ ಬಿಂದು 'ಬಿಪಿಎಲ್ ಕುಟುಂಬಗಳಿಗೆ ಕಲ್ಪಿಸಲಾಗಿರುವ ಅಂತ್ಯೋದಯ' ಕಾರ್ಡುಗಳ ಪಟ್ಟಿಯಲ್ಲಿ ದೀಪಿಕಾ ಪಡುಕೋಣೆ, ಜಾಕ್ವೆಲಿನ್ ಫೆರ್ನಾಂಡಿಸ್, ಸೋನಾಕ್ಷಿ ಸಿನ್ಹಾ ಹಾಗೂ ರಾಣಿ ಮುಖರ್ಜಿ ಹೆಸರನ್ನು ಸೇರಿಸಲಾಗಿದ್ದು, ರೇಷನ್ ಕೂಡಾ ನೀಡಲಾಗುತ್ತಿದೆ. ಈ ಕುರಿತಾಗಿ ಇದೀಗ ಆರೋಪಗಳು ಕೇಳ ಬಂದಿವೆ' ಎಂದಿದ್ದಾರೆ.
ಕಾಯ್ಮಂಜನ್ ಕ್ಷೇತ್ರದ ಸಾಹಬ್'ಗಂಜ್ ಹಳ್ಳಿಯ 169 ಕುಟುಂಬಗಳಿಗೆ ರೇಷನ್ ಕಾರ್ಡ್ ವಿತರಿಸಲಾಗಿದ್ದು, ಈ ಕುರಿತಾದ ಒಂದು ವರದಿಯನ್ನು ಉಪ ಜಿಲ್ಲಾಧಿಕಾರಿಗಳಿಂದ ತರಿಸಿಕೊಂಡಿದ್ದೇನೆ. ಇವರಲ್ಲಿ 40 ಕುಟುಂಬಗಳಿಗೆ 'ಅಂತ್ಯೋದಯ' ಸೌಲಭ್ಯ ನೀಡಲಾಗಿದ್ದು, ಈ 40 ಕುಟುಂಬಗಳ ಪಟ್ಟಿಯಲ್ಲಿ ಬಹುತೇಕ ಹೆಸರುಗಳು ಪ್ರಖ್ಯಾತ ನಡ ನಡಿಯರದ್ದೇ ಆಗಿದೆ' ಎಂದಿದ್ದಾರೆ.
ಈ ರೇಷನ್ ಕಾರ್ಡ್'ಗಳಲ್ಲಿ ನಮೂದಿಸಿರುವ ಪ್ರಕಾರ ದೀಪಿಕಾ ಪಡುಕೋಣೆ ರಾಕೇಶ್ ಚಂದ್ರ ಎಂಬವನ ಪತ್ನಿ ಎಂದು ನಮೂದಾಗಿದ್ದರೆ, ಜಾಕ್ವೆಲಿನ್ ಸಾಧುಲಾಲ್ ಎಂಬಾತನ ಪತ್ನಿ. ಇನ್ನು ರಾಣಿ ಮುಖರ್ಜಿ ಸ್ವರೂಪ್ ಹಾಘೂ ಸೋನಾಕ್ಷಿ ಸಿನ್ಹಾ ರಮೇಶ್ ಚಂದ್ರ ಎಂಬಾತನ ಪತ್ನಿ ಎಂದು ದಾಖಲಾಗಿದೆ. | 0 |
ಚಿನ್ನಸ್ವಾಮಿಯಲ್ಲಿ 2ನೇ ವರ್ಷವೂ ದೇಶಿ ಕ್ರಿಕೆಟ್ ಇಲ್ಲ ?
Highlights
40 ವರ್ಷಗಳಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಿಚ್ ಬದಲಾಯಿಸಿಲ್ಲ.
ಬೆಂಗಳೂರು(ಸೆ.21): ಭಾರತ-ಆಸ್ಟ್ರೇಲಿಯಾ ನಡುವಿನ ಏಕದಿನ(ಸೆ.28) ಪಂದ್ಯದ ಬಳಿಕ ಹೊಸ ಪಿಚ್ ನಿರ್ಮಾಣ ಕಾರ್ಯ ಆರಂ‘ವಾಗಲಿರುವ ಕಾರಣ, ಚಿನ್ನಸ್ವಾಮಿಯಲ್ಲಿ ಸತತ 2ನೇ ವರ್ಷ ರಣಜಿ ಪಂದ್ಯಗಳು ನಡೆಯುವುದಿಲ್ಲ.
ಕಳೆದ ವರ್ಷ ಸಬ್-ಏರ್ ವ್ಯವಸ್ಥೆ ಸಿದ್ಧಪಡಿಸುವ ಸಲುವಾಗಿ ಇಲ್ಲಿ ಯಾವುದೇ ಪಂದ್ಯ ನಡೆದಿರಲಿಲ್ಲ. ಈ ಋತುವಿನಲ್ಲಿ ಕರ್ನಾಟಕ ತಂಡ ತವರಿನಲ್ಲಿ 2 ಪಂದ್ಯಗಳನ್ನು ಆಡಲಿದ್ದು, ಬೆಂಗಳೂರು ಆತಿಥ್ಯ ಕಳೆದುಕೊಳ್ಳಲಿದೆ. 40 ವರ್ಷಗಳಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಿಚ್ ಬದಲಾಯಿಸಿಲ್ಲ.
Last Updated 11, Apr 2018, 1:10 PM IST | 2 |
|
Published: Tuesday, October 11, 2016, 12:08 [IST]
ಹೆಚ್ಚಿನ ಮಹಿಳೆಯರಿಗೆ ಮಾಸಿಕ ದಿನಗಳೆಂದರೆ ಕೇವಲ ನೋವಿನ ದಿನಗಳು ಮಾತ್ರವಲ್ಲ, ಮಾನಸಿಕವಾಗಿಯೂ ಹಲವಾರು ಕಿರಿಕಿರಿಗಳ ದಿನಗಳಾಗಿರುತ್ತವೆ. ಈ ದಿನಗಳೇ ಏಕಪ್ಪಾ ಬರುತ್ತವೆ ಎನ್ನುವಂತಾಗುತ್ತವೆ. ಆದರೆ ಇದು ನಿಸರ್ಗನಿಯಮವಾಗಿದ್ದು ನೋವು ಕೊಡುವ ನಿಸರ್ಗವೇ ಇದರ ಪರಿಹಾರವನ್ನೂ ಒದಗಿಸಿದೆ. ಈ ಸಮಯದಲ್ಲಿ ಕೆಲವು ಆಹಾರಗಳನ್ನು ಸೇವಿಸುವ ಮೂಲಕ ನೋವು ಕಡಿಮೆಯಾಗುವ ಜೊತೆಗೇ ಮಾನಸಿಕ ಕಿರಿಕಿರಿಯನ್ನು ಎದುರಿಸಿ ಸ್ಥಿಮಿತ ಕಾಯ್ದುಕೊಳ್ಳಲೂ ಸಾಧ್ಯವಾಗುತ್ತದೆ.
ಹದಿಹರೆಯದಿಂದ ಪ್ರಾರಂಭವಾಗುವ ಈ ದಿನಗಳು ರಜೋನಿವೃತ್ತಿಯವರೆಗೂ ಪ್ರತಿತಿಂಗಳೂ ಸಂಭವಿಸುವುದು ನೈಸರ್ಗಿಕ. ಈ ನಡುವೆ ಗರ್ಭಾಂಕುರವಾದರೆ ಮುಂದಿನ ಒಂಬತ್ತು ಗರ್ಭಾವಸ್ಥೆಯಾಗುತ್ತದೆ. ಆ ಬಳಿಕ ಈ ಕ್ರಿಯೆ ಮುಂದುವರೆಯಬೇಕು. ಪ್ರತಿ ತಿಂಗಳ ಸುಮಾರು ಮೂರರಿಂದ ಐದು ದಿನಗಳ ಕಾಲ ಹೊಟ್ಟೆಯಲ್ಲಿ ನೋವು ಮತ್ತು ರಕ್ತಸ್ರಾವ ಕಾಣಿಸಿಕೊಳ್ಳುತ್ತದೆ. ಇಡಿಯ ತಿಂಗಳು ಮಿಲನಕ್ಕಾಗಿ ಕಾದ ಅಂಡಾಣುವನ್ನು ವಿಸರ್ಜಿಸಿ ಹೊಸ ಅಂಡಾಣುವನ್ನು ಬಿಡುಗಡೆಗೊಳಿಸುವ ಕ್ರಿಯೆ ಈ ಅವಧಿಯಲ್ಲಿ ನಡೆಯುತ್ತದೆ. ಅನಿಯಮಿತ ಮುಟ್ಟಿನ ಸಮಸ್ಯೆಗಳನ್ನು ನಿವಾರಿಸುವುದು ಹೇಗೆ?
ಹಿಂದಿನ ದಿನಗಳಲ್ಲಿ ಈ ಅವಧಿಯಲ್ಲಿ ಮನೆಯ ಹೊರಗೆ ಅಥವಾ ಪ್ರತ್ಯೇಕವಾದ ಕೋಣೆಯೊಂದರಲ್ಲಿ ವಿಶ್ರಾಂತಿ ಪಡೆಯಲು ಬಿಡುತ್ತಿದ್ದರು. ಇದೇ ಕಾರಣಕ್ಕೆ ಈ ನೈಸರ್ಗಿಕ ಕ್ರಿಯೆಗೆ 'ಹೊರಗಾಗುವುದು' ಎಂಬ ಹೆಸರೂ ಇದೆ. ಆದರೆ ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಒಂದೊಂದು ಕ್ಷಣವೂ ಅಮೂಲ್ಯವಾಗಿರುವಾಗ ನಾಲ್ಕಾರು ದಿನ ಸುಮ್ಮನೇ ಕುಳಿತಿರುವುದು ಇಂದಿನ ಯುವತಿಯರಿಗೆ ಹೇಳಿಸದ ಮಾತು. ಯಮಯಾತನೆ ನೀಡುವ ಮುಟ್ಟಿನ ನೋವಿಗೆ ಪರಿಹಾರವೇನು?
ಆದರೆ ಈ ಅವಧಿಯಲ್ಲಿ ಕೆಲವು ಆಹಾರಗಳನ್ನು ಸೇವಿಸುವ ಮೂಲಕ ನೈಸರ್ಗಿಕ ಕ್ರಿಯೆಯ ಪರಿಣಾಮಗಳನ್ನು ಸುಲಭವಾಗಿ ಎದುರಿಸಲು ದೇಹವನ್ನು ಸಜ್ಜುಗೊಳಿಸಬಹುದು. ಬನ್ನಿ, ಈ ಆಹಾರಗಳು ಯಾವುವು ಎಂಬುದನ್ನು ಮುಂದೆ ಓದಿ....
ಹಾಲು
ಹಲವು ಬಗೆಯ ಪೋಷಕಾಂಶಗಳಿಂದ ಕೂಡಿರುವ ಹಾಲು ಮಾಸಿಕ ದಿನಗಳಲ್ಲಿ ಸೇವಿಸಲು ಅತ್ಯುತ್ತಮ ಆಹಾರವಾಗಿದೆ. ಇದರಲ್ಲಿರುವ ಕ್ಯಾಲ್ಸಿಯಂ ಹಾಗೂ ಇತರ ಪೋಶಕಾಂಶಗಳು ಕಳೆದುಕೊಂಡ ರಕ್ತವನ್ನು ಮತ್ತೆ ನವೀಕರಿಸಲು ನೆರವಾಗುತ್ತವೆ.
ಬಾದಾಮಿ
ಮಾಸಿಕ ದಿನಗಳಲ್ಲಿ ವಿಟಮಿನ್ ಇ ಅತಿ ಅಗತ್ಯವಾಗಿ ಬೇಕಾಗಿರುವ ಪೋಷಕಾಂಶವಾಗಿದೆ. ಬಾದಾಮಿಯಲಿ ಇದು ಹೇರಳವಾಗಿದ್ದು ಕೆಳಹೊಟ್ಟೆಯ ಉಬ್ಬರಿಕೆ ಮತ್ತು ನೋವನ್ನು ಕಡಿಮೆಗೊಳಿಸಲು ಬಹಳ ಹೆಚ್ಚಿನ ನೆರವು ನೀಡುತ್ತದೆ.
ಹಸಿರು ಸೊಪ್ಪುಗಳು
ಈ ಅವಧಿಯಲ್ಲಿ ಹಸಿರು ಮತ್ತು ದಪ್ಪನೆಯ ಎಲೆಗಳಿರುವ ಸೊಪ್ಪುಗಳನ್ನು ತಿನ್ನುವುದು ಅಗತ್ಯ. ವಿಶೇಷವಾಗಿ ಬಸಲೆ ಸೊಪ್ಪು ಮತ್ತು ಪಾಲಕ್. ಇವುಗಳಲ್ಲಿ ಅತ್ಯಧಿಕ ಪ್ರಮಾಣದ ಕಬ್ಬಿಣದ ಅಂಶವಿದ್ದು ರಕ್ತದ ಉತ್ಪಾದನೆಗೆ ನೆರವು ನೀಡುತ್ತದೆ. ಹೆಚ್ಚಿನ ಕಬ್ಬಿಣ ಸಿಗುವ ಮೂಲಕ ಉರಿಯೂತ ಮತ್ತು ನೋವನ್ನು ಕಡಿಮೆಯಾಗಿಸುತ್ತದೆ.
ಸೇಬುಹಣ್ಣು
ದಿನಕ್ಕೊಂದು ಸೇಬು ಮಾಸಿಕ ನೋವನ್ನೂ ದೂರವಿರಿಸಬಲ್ಲುದು. ಇದರಲ್ಲಿ ಉತ್ತಮ ಪ್ರಮಾಣದಲ್ಲಿರುವ ಆಂಟಿ ಆಕ್ಸಿಡೆಂಟುಗಳು ಮತ್ತು ಕರಗುವ ನಾರು ವಿಶೇಷವಾಗಿ ಮಲಬದ್ದತೆಯಾಗದಂತೆ ತಡೆದು ಮಾಸಿಕ ದಿನಗಳಲ್ಲಿ ಕನಿಷ್ಟ ನೋವಾಗುವಲ್ಲಿ ಸಹಕರಿಸುತ್ತದೆ.
ಕಪ್ಪು ಚಾಕಲೇಟು
ಕಪ್ಪು ಚಾಕಲೇಟಿನಲ್ಲಿಯೂ ಆಂಟಿ ಆಕ್ಸಿಡೆಂಟುಗಳು ಹೇರಳವಾಗಿದ್ದು ಮಾಸಿಕ ದಿನಗಳ ಉರಿಯೂತ, ನೋವು ಮತ್ತು ಸಂಕಟವನ್ನು ನಿವಾರಿಸಲು ನೆರವಾಗುತ್ತದೆ. ಅಲ್ಲದೇ ಈ ಪೋಷಕಾಂಶಗಳು ಅತಿ ಕಡಿಮೆ ಸಮಯದಲ್ಲಿ ರಕ್ತದಲ್ಲಿ ಹೀರಲ್ಪಡುವ ಕಾರಣ ನೋವನ್ನು ತಕ್ಷಣವೇ ಕಡಿಮೆಗೊಳಿಸಲು ಸಾಧ್ಯವಾಗುತ್ತದೆ. ಆದ್ದರಿಂದ ನೋವು ಕಾಣಿಸಿಕೊಳ್ಳುವಂತೆ ಅನ್ನಿಸುತ್ತಿದ್ದಾಗಲೇ ಕೊಂಚ ಕಪ್ಪು ಚಾಕಲೇಟು ತಿಂದರೆ ನೋವು ವಿಪರೀತವಾಗುವುದಿಲ್ಲ.
ಬಾಳೆಹಣ್ಣು
ಮಾಸಿಕ ದಿನಗಳಲ್ಲಿ ತಿನ್ನಲೇಬೇಕಾದ ಇನ್ನೊಂದು ಆಹಾರವೆಂದರೆ ಬಾಳೆಹಣ್ಣು. ಇದರಲ್ಲಿ ಹೆಚ್ಚಿನ ಪ್ರಮಾಣದ ಮೆಗ್ನೀಶಿಯಂ ಇದ್ದು ಕೆಳಹೊಟ್ಟೆಯ ನೋವು ಮತ್ತು ಸೆಡೆತಗಳಿಂದ ರಕ್ಷಿಸುತ್ತದೆ. ಅಲ್ಲದೇ ಇದರಲ್ಲಿರುವ ಕರಗದ ನಾರು ಮಲಬದ್ದತೆಯಾಗದಂತೆ ಸಹಕರಿಸುತ್ತದೆ. ವಿಶೇಷವಾಗಿ ಮಾಸಿಕ ದಿನಗಳಲ್ಲಿ ಮನೋಭಾವನೆ ಏರುಪೇರಾಗದಿರಲು ಬಾಳೆಹಣ್ಣಿನ ಸೇವನೆ ಉತ್ತಮವಾಗಿದೆ.
ಅಗಸೆ ಬೀಜಗಳು
ಅಗಸೆ ಬೀಜ (Flax Seeds) ಸಹಾ ಮಾಸಿಕ ದಿನಗಳಲ್ಲಿ ಸೇವಿಸಲು ಯೋಗ್ಯವಾದ ಆಹಾರವಾಗಿದೆ. ಇದರಲ್ಲಿ ಉತ್ತಮ ಪ್ರಮಾಣದ ಒಮೆಗಾ 3 ಕೊಬ್ಬಿನ ಆಮ್ಲವಿದ್ದು ಕೆಳಹೊಟ್ಟೆಯ ನೋವನ್ನು ಕಡಿಮೆ ಮಾಡುವ ಕ್ಷಮತೆ ಹೊಂದಿದೆ. | 1 |
Bengaluru, First Published 14, Mar 2019, 9:32 AM IST
Highlights
12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಹಲವು ಬದಲಾವಣೆ ಮಾಡಲು ಟೂರ್ನಿ ಪ್ರಸಾರ ಹಕ್ಕು ಹೊಂದಿರುವ ಖಾಸಗಿ ವಾಹಿನಿ ಮುಂದಾಗಿತ್ತು. ಇದರಲ್ಲಿ ಪ್ರಮುಖವಾಗಿ ರಾತ್ರಿ ಪಂದ್ಯದ ಸಮಯ ಬದಲಿಸಲು ಎಲ್ಲಾ ತಯಾರಿ ಮಾಡಿಕೊಂಡಿತ್ತು. ಆದರೆ ಮುಂಬೈ ಇಂಡಿಯನ್ಸ್ ಇದಕ್ಕೆ ವಿರೋಧ ವ್ಯಕ್ತಪಡಿಸಿದೆ.
ನವದೆಹಲಿ(ಮಾ.14): ಐಪಿಎಲ್ ಪಂದ್ಯಗಳನ್ನು ರಾತ್ರಿ 8ರ ಬದಲು 7ಕ್ಕೆ ಆರಂಭಿಸುವಂತೆ ಪ್ರಸಾರ ಹಕ್ಕು ಹೊಂದಿರುವ ಸ್ಟಾರ್ ಸ್ಪೋಟ್ಸ್‌ರ್ ವಾಹಿನಿಯ ಮನವಿಯನ್ನು ಬಿಸಿಸಿಐ ತಿರಸ್ಕರಿಸಲು ಮುಂಬೈ ಇಂಡಿಯನ್ಸ್ ತಂಡ ಕಾರಣ ಎಂದು ತಿಳಿದುಬಂದಿದೆ. ಈ ಮೂಲಕ ಐಪಿಎಲ್ ಪಂದ್ಯದ ಸಮಯದಲ್ಲಿ ಯಾವುದೇ ಬದಲಾವಣೆ ಆಗದಂತೆ ನೋಡಿಕೊಳ್ಳುವಲ್ಲಿ ಮುಂಬೈ ಫ್ರಾಂಚೈಸಿ ಯಶಸ್ವಿಯಾಗಿದೆ.
ಇದನ್ನೂ ಓದಿ: ಈ 2 IPL ತಂಡಗಳ ತವರು ಪಂದ್ಯಗಳು ಶಿಫ್ಟ್..?
ಒಂದು ಗಂಟೆ ಮೊದಲು ಆರಂಭಿಸಿದರೆ ರಾತ್ರಿ 11ರ ವೇಳೆಗೆ ಪಂದ್ಯ ಮುಕ್ತಾಯೊಳ್ಳಲಿದೆ. ಟೀವಿ ವೀಕ್ಷಕರ ಸಂಖ್ಯೆ ಕಡಿತಗೊಳ್ಳುವುದಿಲ್ಲ ಎನ್ನುವ ಕಾರಣವನ್ನು ಮುಂದಿಟ್ಟುಕೊಂಡು ಸ್ಟಾರ್ ವಾಹಿನಿ ಮನವಿ ಸಲ್ಲಿಸಿತ್ತು. ಆದರೆ ಮುಂಬೈ ತಂಡದ ಮಾಲೀಕರು ಪಂದ್ಯದಲ್ಲಿ ಸಮಯದಲ್ಲಿ ಬದಲಾವಣೆ ಮಾಡಬಾರದು ಎಂದು ಬಿಸಿಸಿಐ ಮೇಲೆ ಒತ್ತಡ ಹೇರಿದರು ಎನ್ನಲಾಗಿದೆ.
ಇದನ್ನೂ ಓದಿ: ಐಪಿಎಲ್ ಪಂದ್ಯದ ಸಮಯ ಬಹಿರಂಗ ಪಡಿಸಿದ ಬಿಸಿಸಿಐ!
ಫ್ರಾಂಚೈಸಿ ಒತ್ತಡಕ್ಕೆ ಮಣಿದ ಸ್ಟಾರ್ ಸ್ಪೋರ್ಟ್ ಪಂದ್ಯ ಈ ಹಿಂದಿನ ಆವೃತ್ತಿಗಳಂತೆ ರಾತ್ರಿ 8 ಗಂಟೆಗೆ ಆರಂಭವಾಗಲಿದೆ. ದಿನದಲ್ಲಿ 2 ಪಂದ್ಯವಿದ್ದಾಗ 4 ಗಂಟೆ ಆರಂಭವಾಗೋ ಪಂದ್ಯ ಮುಕ್ತಾಯವಾಗೋ ಮೊದಲೇ 2ನೇ ಪಂದ್ಯ ಆರಂಭಗೊಳ್ಳಲಿದೆ. ಇದರಿಂದ ಅಭಿಮಾನಿಗಳು 2ನೇ ಪಂದ್ಯದ ಆರಂಭಿಕ ಹಂತ ಅಥವಾ ಮೊದಲ ಪಂದ್ಯದ ಕೊನೆಯ ಹಂತ ಮಿಸ್ ಮಾಡಿಕೊಳ್ಳಲಿದ್ದಾರೆ ಎಂದು ಮುಂಬೈ ಫ್ರಾಂಚೈಸಿ ತನ್ನ ವಾದ ಮುಂದಿಟ್ಟಿತು.
Last Updated 14, Mar 2019, 9:32 AM IST | 2 |
ಜೊಕೊ ಮಣಿಸಿದ ವಾವ್ರಿಂಕಾ ಚಾಂಪಿಯನ್
Highlights
‘‘ನಾನು ಇಲ್ಲಿಗೆ ಯಾವುದೇ ಗುರಿಯನ್ನು ಹಾಕಿಕೊಂಡು ಬಂದಿರಲಿಲ್ಲ. ಆದರೆ, ಕೋರ್ಟ್‌ಗೆ ಕಾಲಿಟ್ಟಪ್ರತೀ ಕ್ಷಣವೂ ಗೆಲುವಿಗಾಗಿ ಪ್ರಯತ್ನಿಸಿದೆ. ನನ್ನ ಪಾಲಿಗೆ ಈ ರಾತ್ರಿ ವಿಸ್ಮಯಕಾರಿಯಾಗಿದೆ’’
ಸ್ಟಾನಿಸ್ಲಾಸ್ ವಾವ್ರಿಂಕಾ
ವಿಶ್ವದ ನಂ.1 ಆಟಗಾರ, ಸರ್ಬಿಯಾದ ನೊವಾಕ್ ಜೊಕೊವಿಚ್ ವಿರುದ್ಧ ಮೊದಲ ಸೆಟ್‌ನಲ್ಲಿನ ಹಿನ್ನಡೆಯ ಮಧ್ಯೆಯೂ ಆನಂತರ ದಿಟ್ಟಪ್ರದರ್ಶನ ನೀಡಿದ ಸ್ವಿಟ್ಜರ್ಲೆಂಡ್‌ನ ಸ್ಟಾನಿಸ್ಲಾಸ್ ವಾವ್ರಿಂಕಾ ಋುತುವಿನ ಕಡೆಯ ಗ್ರಾಂಡ್‌ಸ್ಲಾಮ್ ಗೆದ್ದು ಚಾಂಪಿಯನ್ ಎನಿಸಿದರು.
ಭಾನುವಾರ ತಡರಾತ್ರಿ ಇಲ್ಲಿನ ಫ್ಲಶಿಂಗ್ ಮೆಡೋಸ್‌ನಲ್ಲಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಸುತ್ತಿನ ಸೆಣಸಾಟದಲ್ಲಿ ಸ್ವಿಸ್ ಆಟಗಾರ ವಾವ್ರಿಂಕಾ, ನೊವಾಕ್ ಜೊಕೊವಿಚ್ ವಿರುದ್ಧ 6-7 (1/7), 6-4, 7-5, 6-3 ಸೆಟ್‌ಗಳ ಗೆಲುವು ಸಾಧಿಸಿ ಪ್ರಶಸ್ತಿ ಪಡೆದರು. ಈ ಹಿಂದಿನ ಒಟ್ಟಾರೆ 23 ಪಂದ್ಯಗಳಲ್ಲಿ ಜೊಕೊವಿಚ್ ವಿರುದ್ಧ ಕೇವಲ 4 ಪಂದ್ಯಗಳಲ್ಲಷ್ಟೇ ಗೆಲುವು ಸಾಧಿಸಿದ್ದ ವಾವ್ರಿಂಕಾ ಈ ಬಾರಿ ಜೊಕೊ ಸವಾಲನ್ನು ಮೆಟ್ಟಿನಿಲ್ಲುವಲ್ಲಿ ಸಫಲವಾದರು.
ಜೊಕೊವಿಚ್ ಮಣಿಸುವುದರೊಂದಿಗೆ 31 ವರ್ಷದ ವಾವ್ರಿಂಕಾ ಯುಎಸ್ ಓಪನ್ ಗೆದ್ದ ಅತ್ಯಂತ ಎರಡನೇ ಹಿರಿಯ ಆಟಗಾರನೆನಿಸಿದರಲ್ಲದೆ, 46 ವರ್ಷಗಳ ಯುಎಸ್ ಓಪನ್‌ನಲ್ಲಿ ಹೊಸದೊಂದು ದಾಖಲೆ ಬರೆದರು. ಈ ಮುನ್ನ 1970ರ ಆವೃತ್ತಿಯಲ್ಲಿ ಚಾಂಪಿಯನ್ ಆಗಿದ್ದ ಆಸ್ಪ್ರೇಲಿಯಾದ ಕೆನ್ ರೋಸ್‌ವಾಲ್‌ಗೆ 35 ವರ್ಷಗಳಾಗಿತ್ತು. ಇನ್ನು 2002ರಲ್ಲಿ ಪೀಟ್ ಸಾಂಪ್ರಾಸ್ ಯುಎಸ್ ಓಪನ್ ಗೆದ್ದದ್ದು 30ರ ಹರೆಯದಲ್ಲಿ.
ಅಂದಹಾಗೆ ಯುಎಸ್ ಓಪನ್ ಚಾಂಪಿಯನ್ ವಾವ್ರಿಂಕಾಗೆ ಇದು ವೃತ್ತಿಬದುಕಿನ ಮೂರನೇ ಗ್ರಾಂಡ್‌ಸ್ಲಾಮ್. 2014ರಲ್ಲಿ ಆಸ್ಪ್ರೇಲಿಯನ್ ಓಪನ್ ಗೆದ್ದಿದ್ದ ವಾವ್ರಿಂಕಾ, ಮರುವರ್ಷ ರೊಲಾಂಡ್ ಗ್ಯಾರೋಸ್‌ನಲ್ಲಿಯೂ ಚಾಂಪಿಯನ್ ಎನಿಸಿದ್ದರು.
ಫಲ ನೀಡದ ಭರ್ಜರಿ ಆರಂಭ
ನ್ಯೂಯಾರ್ಕ್ನಲ್ಲಿ ನಾಲ್ಕನೇ ಬಾರಿಗೆ ರನ್ನರ್‌ಅಪ್ ಎನಿಸಿದ 29 ವರ್ಷದ ನೊವಾಕ್ ವಾಸ್ತವವಾಗಿ ಮೊದಲ ಸೆಟ್ ಅನ್ನು ತುಸು ಪ್ರಯಾಸದಿಂದಲೇ ಟೈಬ್ರೇಕರ್‌ನಲ್ಲಿ ಜಯಿಸುವುದರೊಂದಿಗೆ ಉತ್ತಮ ಆರಂಭ ಪಡೆದರಾದರೂ, ಆನಂತರದಲ್ಲಿ ವಾವ್ರಿಂಕಾ ತೋರಿದ ಪ್ರತಿರೋಧವನ್ನು ದಿಟ್ಟತೆಯಿಂದ ನಿಭಾಯಿಸುವಲ್ಲಿ ವಿಫಲವಾದರು. 17 ಬ್ರೇಕ್ ಪಾಯಿಂಟ್‌ಗಳಲ್ಲಿ ಕೇವಲ ಮೂರನ್ನಷ್ಟೇ ತನ್ನದಾಗಿ ಪರಿವರ್ತಿಸಿದ ಜೊಕೊವಿಚ್ ಸ್ವಿಸ್ ಆಟಗಾರನ ಲೆಕ್ಕಾಚಾರದ ಆಟಕ್ಕೆ ಪ್ರತಿ ಹೇಳಲು ಸಾಧ್ಯವಾಗದೆ ಸೋಲಪ್ಪಿದರು. 21ನೇ ಗ್ರಾಂಡ್‌ಸ್ಲಾಮ್ ಫೈನಲ್ ಆಡಿದ ಜೊಕೊವಿಚ್, 13ನೇ ಗ್ರಾಂಡ್‌ಸ್ಲಾಮ್ ಗೆಲ್ಲುವ ಕನಸು ಹೀಗೆ ಕಮರಿತು.
ಕಾಡಿದ ಗಾಯದ ಸಮಸ್ಯೆ
ಅಂದಹಾಗೆ ಈ ಟೂರ್ನಿಯ ಸೆಮಿಫೈನಲ್ ಹಂತದವರೆಗೆ ಹೆಚ್ಚು ಪ್ರಯಾಸವಿಲ್ಲದೆ ಮುನ್ನಡೆದಿದ್ದ ಜೊಕೊವಿಚ್, ಭುಜದ ನೋವಿನಿಂದಾಗಿ ಸಾಕಷ್ಟುಅವಸ್ಥೆ ಪಟ್ಟಿದ್ದರು. ಇನ್ನು ವಾವ್ರಿಂಕಾ ಎದುರಿನ ಪಂದ್ಯದಲ್ಲಂತೂ ಪಾದದ ಹೆಬ್ಬೆರಳ ನೋವು ಅವರನ್ನು ಅತಿಯಾಗಿ ಬಾಧಿಸಿತು. ನೋವಿನಿಂದಾಗಿ ಬಿಡುವು ಪಡೆದ ವೇಳೆ ‘‘ಸ್ಟಾನ್, ಸಾರಿ! ನನ್ನಿಂದ ನಿಲ್ಲಲಾಗುತ್ತಿಲ್ಲ’’ ಎಂದು ಹೇಳಿದ ಜೊಕೊವಿಚ್, ಎರಡು ಬಾರಿ ಚಿಕಿತ್ಸೆ ಪಡೆದು ಹೋರಾಟಕ್ಕಿಳಿದರಾದರೂ, ವಾವ್ರಿಂಕಾಗೆ ಸರಿಸಾಟಿಯಾದ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಕೊನೆಗೆ ಸೋಲಿನಿಂದಾಗಿ ಸಹನೆ ಕಳೆದುಕೊಂಡು ತನ್ನ ರಾರಯಕೆಟ್ ಅನ್ನು ಮುರಿದು ನಿಯಮಾವಳಿ ಉಲ್ಲಂಘಿಸಿದ ಅವರನ್ನು ಅಂಪೈರ್ ಅಲಿ ನಿಲಿ ಎಚ್ಚರಿಸಿದರು.
Last Updated 11, Apr 2018, 12:56 PM IST | 2 |
ಮತ್ತೆ ಡ್ರಾಮಾ ಜ್ಯೂನಿಯರ್ಸ್-2 ಶುರು
Highlights
ಈ ಸಲವೂ ಡ್ರಾಮಾ ಜ್ಯೂನಿಯರ್ಸ್‌ಗಳನ್ನು ಆಯ್ಕೆ ಮಾಡಲು ನಿರ್ದೇಶಕ ಟಿಎಸ್ ಸೀತಾರಾಂ, ನಟಿ ಜ್ಯೂಲಿ ಲಕ್ಷ್ಮೀ, ನಟ ವಿಜಯ ರಾಘವೇಂದ್ರ ಇರುತ್ತಾರೆ. ಕಾರ್ಯಕ್ರಮದ ನಿರೂಪಣೆಯನ್ನೂ ಮಾಸ್ಟರ್ ಆನಂದ್ ಅವರೇ ಮಾಡಲಿದ್ದಾರೆ. ಈ ಮಕ್ಕಳನ್ನು ತರಬೇತಿಗೊಳಿಸುವ ಮೆಂಟರ್‌ಗಳಾಗಿ ವಿಕ್ರಂ ಸೂರಿ ಸೇರಿದಂತೆ ಹೋದ ಸೀಜನ್‌ನಲ್ಲಿ ಕೆಲಸ ಮಾಡಿದವರೇ ಇರುತ್ತಾರೆ. ಜೊತೆಗೆ ರಂಗಭೂಮಿಯಲ್ಲಿ ಕೆಲಸ ಮಾಡುತ್ತಿರುವ ಮತ್ತಷ್ಟು ತಂತ್ರಜ್ಞರೂ ಈ ಸಲ ಇರುತ್ತಾರೆ. ಒಟ್ಟಾರೆ ಹೊಸ ಸೀಜನ್ ಬೇರೆಯ ರೀತಿಯಲ್ಲಿ ಮೂಡಿ ಬರುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
‘ಡ್ರಾಮಾ ಜ್ಯೂನಿಯರ್ಸ್’ ಹುಟ್ಟುಹಾಕಿದ ನಿರೀಕ್ಷೆಯನ್ನೂ ಮೀರಿ ಈ ಸೀಸನ್‌ನಲ್ಲಿ ಗೆಲುವು ಸಾಸುವುದು ನಮ್ಮ ಮುಂದಿರುವ ಸವಾಲು.
-ಹಾಗೆನ್ನುತ್ತಾರೆ ಝೀ ಕನ್ನಡದ ಬಿಸಿನೆಸ್ ಹೆಡ್ ರಾಘವೇಂದ್ರ ಹುಣಸೂರು. ಎಂಬಲ್ಲಿಗೆ ಈ ಸಲ ನಿರೀಕ್ಷೆಯೂ ಜಾಸ್ತಿ, ಪರೀಕ್ಷೆಯೂ ಜಾಸ್ತಿ. ಅದಕ್ಕಾಗಿ ಒಂದು ದೊಡ್ಡ ತಂಡ ಸಿದ್ಧಗೊಂಡಿದೆ. 8 ಕೇಂದ್ರಗಳಲ್ಲಿ ಆಡಿಶನ್ ನಡೆಸಿ, ಅದರಲ್ಲಿ ಈಗ 30 ಜನರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಅವರಿಗೋಸ್ಕರ ಒಂದು ತರಬೇತಿ ಕಾರ್ಯಕ್ರಮ ಶುರುವಾಗಿದೆ. ಅವರಿಗೋಸ್ಕರ ಒಂದು ಮೆಗಾ ಆಡಿಶನ್ ನಡೆದು, ಅಲ್ಲಿ 15 ಜನರನ್ನು ಆಯ್ಕೆ ಮಾಡಲಾಗುತ್ತದೆ. ಅಲ್ಲಿಂದ ಕನ್ನಡದ ಹೊಸ ಜ್ಯೂನಿಯರ್ ಪ್ರತಿಭೆಗಳ ಮಹಾ ಪಯಣ ಪ್ರಾರಂಭವಾಗುತ್ತದೆ. ಇದೇ ಜುಲೈ 22ಕ್ಕೆ ಸಂಚಿಕೆ ಪ್ರಾರಂಭಗೊಳ್ಳುತ್ತದೆ. ಈ ಸಲ ಕರ್ನಾಟಕದ ಯಾವ ಭಾಗದಿಂದ ಅಚಿಂತ್ಯ ಬರುತ್ತಾನೆ, ಚಿತ್ರಾಲಿ ಬರುತ್ತಾಳೆ, ಮಹತಿ ಬರುತ್ತಾಳೆ ಅನ್ನುವುದು ಈ ಸಂಚಿಕೆ ನೋಡಿದಾಗಲೇ ಗೊತ್ತಾಗಬೇಕಷ್ಟೇ.
ಹೆಚ್ಚುಕಡಿಮೆ ಅದೇ ತಂಡ
ಈ ಸಲವೂ ಡ್ರಾಮಾ ಜ್ಯೂನಿಯರ್ಸ್‌ಗಳನ್ನು ಆಯ್ಕೆ ಮಾಡಲು ನಿರ್ದೇಶಕ ಟಿಎಸ್ ಸೀತಾರಾಂ, ನಟಿ ಜ್ಯೂಲಿ ಲಕ್ಷ್ಮೀ, ನಟ ವಿಜಯ ರಾಘವೇಂದ್ರ ಇರುತ್ತಾರೆ. ಕಾರ್ಯಕ್ರಮದ ನಿರೂಪಣೆಯನ್ನೂ ಮಾಸ್ಟರ್ ಆನಂದ್ ಅವರೇ ಮಾಡಲಿದ್ದಾರೆ. ಈ ಮಕ್ಕಳನ್ನು ತರಬೇತಿಗೊಳಿಸುವ ಮೆಂಟರ್‌ಗಳಾಗಿ ವಿಕ್ರಂ ಸೂರಿ ಸೇರಿದಂತೆ ಹೋದ ಸೀಜನ್‌ನಲ್ಲಿ ಕೆಲಸ ಮಾಡಿದವರೇ ಇರುತ್ತಾರೆ. ಜೊತೆಗೆ ರಂಗಭೂಮಿಯಲ್ಲಿ ಕೆಲಸ ಮಾಡುತ್ತಿರುವ ಮತ್ತಷ್ಟು ತಂತ್ರಜ್ಞರೂ ಈ ಸಲ ಇರುತ್ತಾರೆ. ಒಟ್ಟಾರೆ ಹೊಸ ಸೀಜನ್ ಬೇರೆಯ ರೀತಿಯಲ್ಲಿ ಮೂಡಿ ಬರುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ರಂಗಭೂಮಿ, ಸಾಹಿತ್ಯಕ್ಕೆ ಪ್ರಾಶಸ್ತ್ಯ
ಈ ಸಲ ಸಿನಿಮಾಗಿಂತ ಹೆಚ್ಚಿಗೆ ರಂಗಭೂಮಿ, ಸಾಹಿತ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲು ಉದ್ದೇಶಿಸಲಾಗಿದೆ. ಡ್ರಾಮಾ ಜ್ಯೂನಿಯರ್ಸ್ ಸೆಟ್ ಜೊತೆಗೆ ಈ ಸಲ ಔಟ್‌ಡೋರ್ ಎಪಿಸೋಡುಗಳನ್ನೂ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ. ‘ರಂಗಭೂಮಿ, ನಾಟಕಗಳಿಗೆ ಹೆಚ್ಚಿನ ಆದ್ಯತೆ ಕೊಡಬೇಕು ಅಂತ ಅಂದುಕೊಂಡಿದ್ದೇವೆ. ರವೀಂದ್ರ ಕಲಾಕ್ಷೇತ್ರದಂಥ ಸಾರ್ವಜನಿಕ ಸ್ಥಳಗಳಲ್ಲಿ ಇದನ್ನು ನಡೆಸಿ, ಮಕ್ಕಳಿಂದ ಶುದ್ಧವಾದ ನಾಟಕವನ್ನೇ ಮಾಡಿಸೋಣ ಅನ್ನುವುದು ನಮ್ಮ ಯೋಚನೆ’ ಎನ್ನುತ್ತಾರೆ ಬಿಸಿನೆಸ್ ಹೆಡ್ ರಾಘವೇಂದ್ರ ಹುಣಸೂರು. ಅಷ್ಟೇ ಅಲ್ಲ, ಈ ಸಲ ಒಂದು ಗಂಟೆ ಕಾಲದ ನಾಟಕಗಳನ್ನೇ ವೇದಿಕೆ ಮೇಲೆ ಮಾಡಿಸುವ ಆಲೋಚನೆಯೂ ಇದೆಯಂತೆ. ಅದಕ್ಕಾಗಿ ಮತದಾನ ಸೇರಿದಂತೆ ಹಲವು ಶ್ರೇಷ್ಠ ಕೃತಿಗಳ ಹಕ್ಕನ್ನೇ ಖರೀದಿಸಲಾಗಿದೆ.
ಡಿಸ್ನಿ ಹೋಲುವ ಸ್ಟೇಜ್
ಈ ಸಲ ವೇದಿಕೆ ಕೂಡ ಕಳೆದ ಸೀಜನ್‌ಗಿಂತ ಬೇರೆಯದೇ ರೀತಿಯಲ್ಲಿ ಇರುತ್ತದೆ. ಇದು ಮಕ್ಕಳ ಶೋ ಆದ ಕಾರಣ, ಮಕ್ಕಳೇ ಹೆಚ್ಚಿನ ಪ್ರೇಕ್ಷಕರಾದ ಕಾರಣ ಅವರಿಗೆ ಆಕರ್ಷಣೀಯವಾಗುವಂತೆ ಒಂದು ್ಯಾಂಟಸಿ ಸೆಟ್ ಹಾಕುವ ಕಾರ್ಯ ಚಾಲನೆಯಲ್ಲಿದೆ. ಡಿಸ್ನಿಯನ್ನು ಹೋಲುವಂಥ ರಮಣೀಯ ಸೆಟ್ ಅದಾಗಿರುತ್ತದೆ.
ಇದು ಹೊಸ ಮಕ್ಕಳ ಡ್ರಾಮಾ
ಮೊದಲ ಸೀಸನ್‌ನಲ್ಲಿ ಆಡಿಶನ್‌ಗೆ ಬರುವವರಿಗೆ ಒಂದು ಮಾದರಿ ಇರಲಿಲ್ಲ. ಸಿನಿಮಾ ಡೈಲಾಗ್‌ಗಳನ್ನು ಹೇಳಿಸಿ ಮಕ್ಕಳನ್ನು ವೇದಿಕೆಗೆ ಕಳಿಸುತ್ತಿದ್ದರಂತೆ ಪೋಷಕರು. ಆದರೆ ಈ ಸಲ ಹಾಗಿಲ್ಲ, ‘ಡ್ರಾಮಾ ಜ್ಯೂನಿಯರ್ಸ್’ ನೋಡಿ ಪೋಷಕರೇ ಹೆಚ್ಚು ಪ್ರೊೆಶನಲ್ಲಾಗಿ ಬದಲಾಗಿದ್ದಾರಂತೆ. ಸ್ಕಿಟ್‌ಗಳನ್ನು ಸಿದ್ಧಪಡಿಸಿಕೊಂಡು ಬಂದು, ತುಂಬ ಪ್ರೊೆಶನಲ್ಲಾಗಿ ಆಡಿಶನ್‌ನಲ್ಲಿ ಈ ಸಲ ಮಕ್ಕಳು ಪಾಲ್ಗೊಂಡಿದ್ದಾರಂತೆ. ‘ಪೋಷಕರಾಗಲೀ, ನಾವಾಗಲೀ ಹಿಂದಿನ ಸೀಸನ್ ಮರೆತು, ಹೊಸ ಜಗತ್ತು, ಹೊಸ ಥರದ ಮಕ್ಕಳು, ಹೊಸ ಥರದ ಡ್ರಾಮಾ ಕಂಟೆಂಟ್ ಸಿದ್ಧಪಡಿಸುವ ಉತ್ಸಾಹದಲ್ಲಿದ್ದೇವೆ. ಈ ಸಲ ಆಯ್ಕೆಯಾದ ಮಕ್ಕಳು ಬೇರೆಯದೇ ಕಮಾಲ್ ಮಾಡುತ್ತಾರೆ’ ಎನ್ನುತ್ತಾರೆ ಹುಣಸೂರು.
(ಕನ್ನಡಪ್ರಭ ವಾರ್ತೆ) | 0 |
14 ವರ್ಷಗಳ ಬಳಿಕ ಹೆತ್ತವರೊಂದಿಗೆ ಪುನರ್ಮಿಲನ…!
25-11-2017 9:08AM IST / No Comments / Posted In: Latest News , Special
14 ವರ್ಷಗಳ ಹಿಂದೆ ಆಕಸ್ಮಿಕವಾಗಿ ಕುಟುಂಬದಿಂದ ಬೇರ್ಪಟ್ಟಿದ್ದ ಬಾಲಕಿಯೊಬ್ಬಳು ಕೊನೆಗೂ ತನ್ನ ಕುಟುಂಬವನ್ನು ಮರಳಿ ಸೇರಲು ಯಶಸ್ವಿಯಾಗಿದ್ದಾಳೆ. ಆಕೆಯನ್ನು ಹೆತ್ತವರೊಂದಿಗೆ ಸೇರಿಸುವಲ್ಲಿ ಆಕೆ ಕೆಲಸ ಮಾಡುತ್ತಿದ್ದ ಮನೆ ಮಾಲೀಕ ಹಾಗೂ ಸ್ವಯಂ ಸೇವಾ ಸಂಸ್ಥೆಯೊಂದು ನೆರವಾಗಿದೆ.
ಉತ್ತರ ಪ್ರದೇಶದ ಆಯೋಧ್ಯೆಯ ಸರಯೂ ನದಿ ಪಕ್ಕದಲ್ಲಿರುವ ರೈಲ್ವೇ ನಿಲ್ದಾಣದ ಬಳಿ ಪುಟ್ಟ ಬಾಲಕಿ ಪೂಜಾ ತನ್ನ ಹೆತ್ತವರೊಂದಿಗೆ ವಾಸವಾಗಿದ್ದಳು. 2003 ರಲ್ಲಿ ಆಕೆ ಆಕಸ್ಮಿಕವಾಗಿ ಮುಂಬೈಗೆ ತೆರಳುತ್ತಿದ್ದ ರೈಲನ್ನೇರಿದ್ದು, ಮುಂಬೈ ನಿಲ್ದಾಣದಲ್ಲಿ ಆಕೆಯನ್ನು ವಶಕ್ಕೆ ಪಡೆದಿದ್ದ ಪೊಲೀಸರು ತನ್ನ ವಿಳಾಸ ಹೇಳಲು ಆಕೆ ವಿಫಲಳಾದ ಕಾರಣ ಆನಾಥಾಶ್ರಮಕ್ಕೆ ದಾಖಲು ಮಾಡಿದ್ದರು.
ಅತ್ತ ಪೂಜಾಳ ಪೋಷಕರು ಮಗಳಿಗಾಗಿ ಹುಡುಕಾಟ ನಡೆಸಿದ್ದರಲ್ಲದೇ ಪೊಲೀಸ್ ಠಾಣೆಯಲ್ಲೂ ದೂರು ದಾಖಲಿಸಿದ್ದರು. ನಂತರ ಮನೆ ಸಮೀಪವೇ ಸರಯೂ ನದಿ ಇದ್ದ ಕಾರಣ ಪೂಜಾ ಮುಳುಗಿರಬಹುದೆಂದು ಭಾವಿಸಿದ್ದರು. ಮುಂಬೈನಲ್ಲಿದ್ದ ಪೂಜಾ 2009 ರಲ್ಲಿ ನಿತಿನ್ ಹಾಗೂ ಪೂಜಾ ಗಾಯಕ್ವಾಡ್ ಎಂಬವರ ಮನೆಯಲ್ಲಿ ಕೆಲಸಕ್ಕೆ ಸೇರಿದ್ದು, ಆಕೆಯ ಪೂರ್ವಶ್ರಮದ ಕುರಿತು ವಿಚಾರಿಸಿದ ವೇಳೆ ತನ್ನ ಊರು, ತಂದೆ, ತಾಯಿ ಹಾಗೂ ಸಹೋದರನ ಹೆಸರನ್ನು ಹೇಳಿದ್ದಲ್ಲದೇ ತಂದೆ ಹೂವಿನ ವ್ಯಾಪಾರದ ಜೊತೆಗೆ ಕ್ಯಾಸೆಟ್ ಮಾರಾಟ ಮಾಡುತ್ತಿದ್ದರೆಂದು ತಿಳಿಸಿದ್ದಳು.
ಪೂಜಾಳನ್ನು ಆಕೆಯ ಕುಟುಂಬದ ಜೊತೆ ಸೇರಿಸಬೇಕೆಂಬ ಸಂಕಲ್ಪ ತೊಟ್ಟ ನಿತಿನ್ ಸ್ವಯಂ ಸೇವಾ ಸಂಸ್ಥೆಯೊಂದರ ಜೊತೆ ಆಕೆಯ ಪೋಷಕರ ಹುಡುಕಾಟಕ್ಕೆ ಮುಂದಾದರು. ಇದಕ್ಕಾಗಿ ಸಾಕಷ್ಟು ಶ್ರಮಪಟ್ಟರಲ್ಲದೇ ಇತ್ತೀಚೆಗೆ ಪೂಜಾಳನ್ನೇ ಆಯೋಧ್ಯೆಗೆ ಕಳುಹಿಸಲಾಯಿತು. ಅಲ್ಲಿನ ಬೀದಿಗಳಲ್ಲಿ ಓಡಾಡಿದ ಆಕೆಗೆ ಹಳೆ ನೆನಪುಗಳು ಮರುಕಳಿಸಿದ್ದು, ಕಡೆಗೂ ತನ್ನ ಹೆತ್ತವರನ್ನು ಸೇರಲು ಸಫಲಳಾಗಿದ್ದಾಳೆ. ಕಳೆದುಹೋಗಿದ್ದ ಮಗಳು ಮರಳಿ ಬಂದಿರುವುದು ಕುಟುಂಬದಲ್ಲಿ ಹರ್ಷ ಮೂಡಿಸಿದೆ. | 1 |
ಹಳೆಯ ಫೋಟೋಗೆ ದರ್ಶನ್ ಮುಖ!
Team Udayavani, May 15, 2017, 11:11 AM IST
ಅ
ಅ
ಅ
ಮುನಿರತ್ನ ನಿರ್ಮಿಸುತ್ತಿರುವ “ಕುರುಕ್ಷೇತ್ರ’ ಚಿತ್ರದಲ್ಲಿ ದರ್ಶನ್ ಅವರು ದುರ್ಯೋಧನನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು, ಅದಕ್ಕೆಂದೇ ಇತ್ತೀಚೆಗೆ ಹೈದರಾಬಾದ್‌ನಲ್ಲಿ ಟೆಸ್ಟ್‌ಶೂಟ್‌ನಲ್ಲಿ ಪಾಲ್ಗೊಂಡಿದ್ದು ಎಲ್ಲವೂ ಸುದ್ದಿಯಾಗಿದೆ. ಚಿತ್ರತಂಡದವರು ಇದುವರೆಗೂ ದರ್ಶನ್ ಅವರ ಒಂದೇ ಒಂದು ಫೋಟೋವನ್ನು ಸಹ ಇದುವರೆಗೂ ಹೊರಗೆಬಿಟ್ಟಿಲ್ಲ.
ದುರ್ಯೋಧನನ ಗೆಟಪ್‌ನಲ್ಲಿ ದರ್ಶನ್ ಅವರು ಹೇಗೆ ಕಾಣುತ್ತಾರೆ ಎಂಬ ವಿಷಯವು ಒಂದಿಷ್ಟು ಜನರನ್ನು ಹೊರತುಪಡಿಸಿದರೆ, ಮಿಕ್ಕಂತೆ ಯಾರಿಗೂ ಗೊತ್ತಿಲ್ಲ. ಹೀಗಿರುವಾಗಲೇ ದುರ್ಯೋಧನನ ಗೆಟಪ್‌ನಲ್ಲಿ ದರ್ಶನ್ ಕಾಣಿಸಿಕೊಂಡಿರುವ ಫೋಟೋವೊಂದು ಇದೀಗ ಲೀಕ್ ಆಗಿರುವುದಷ್ಟೇ ಅಲ್ಲ, ಸೋಷಿಯಲ್ ಮೀಡಿಯಾದಲ್ಲಿ ಮತ್ತು ದರ್ಶನ್ ಅವರ ಅಭಿಮಾನಿಗಳ ವಲಯದಲ್ಲಿ ಸಖತ್ ಹವಾ ಎಬ್ಬಿಸುತ್ತಿದೆ.
ಫೋಟೋ ನೋಡಿದ ತಕ್ಷಣ, ದರ್ಶನ್ ಅವರು ದುರ್ಯೋಧನನ ಗೆಟಪ್‌ನಲ್ಲಿ ಅದ್ಭುತವಾಗಿ ಕಾಣಿಸುತ್ತಾರೆ ಎಂದನಿಸಬಹುದು. ಆದರೆ, ಸೂಕ್ಷ್ಮವಾಗಿ ನೋಡಿದರೆ ಇದು ದರ್ಶನ್ ಅವರ ಫೋಟೋವಲ್ಲ ಎಂದು ಗೊತ್ತಾಗುತ್ತದೆ. ಯಾವುದೋ ಫೋಟೋಗೆ, ದರ್ಶನ್ ಅವರ ಮುಖವನ್ನು ಅಂಟಿಸಿ, ಇದು “ಕುರುಕ್ಷೇತ್ರ’ ಚಿತ್ರದ ದರ್ಶನ್ ಅವರ ಗೆಟಪ್ಪು ಎಂದು ಹೇಳಲಾಗುತ್ತಿದೆ. ಈ ಕೆಲಸ ಮಾಡಿದ್ದು ಯಾರು ಮತ್ತು ಯಾಕೆ ಎಂಬ ವಿಷಯ ಗೊತ್ತಿಲ್ಲ.
ತಮಾಷೆಗೋ, ಕುಚೋದ್ಯಕ್ಕೋ ಹೀಗೆ ಮಾಡಿರುವ ಸಾಧ್ಯತೆ ಇರಬಹುದು.ಹಾಗೆ, ಇದು ಹಲವು ದಶಕಗಳ ಹಿಂದಿನ ಫೋಟೋ. 1977ರಲ್ಲಿ ಬಿಡುಗಡೆಯಾದ ತೆಲುಗಿನ “ದಾನ ವೀರ ಶೂರ ಕರ್ಣ’ ಚಿತ್ರದ ಫೋಟೋ ಇದು. ಈ ಚಿತ್ರವನ್ನು ನಿರ್ಮಿಸಿ-ನಿರ್ದೇಶಿಸಿದ್ದು ತೆಲುಗಿನ ದಿಗ್ಗಜ ನಟ ಎನ್.ಟಿ. ರಾಮರಾವ್. ಅವರೇ ಈ ಚಿತ್ರದಲ್ಲಿ ದುರ್ಯೋಧನನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಮತ್ತು ಇದು ಅವರದ್ದೇ ಫೋಟೋ.
ಆ ಫೋಟೋದಲ್ಲಿ ಅವರ ಮುಖದ ಬದಲಾಗಿ ದರ್ಶನ್ ಅವರ ಮುಖವನ್ನು ಅಂಟಿಸಿ, ಇದು ಕನ್ನಡದ “ಕುರುಕ್ಷೇತ್ರ’ ಚಿತ್ರದ ಫೋಟೋ ಎಂದು ಬಿಡುಗಡೆ ಮಾಡಲಾಗಿದೆ. ಅಷ್ಟೇ ಅಲ್ಲ, ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋ ಸಾಕಷ್ಟು ಸುದ್ದಿ ಮಾಡುತ್ತಿದೆ ಸಹ. ಆದರೆ, ನಂಬುವುದಕ್ಕಿಂತ ಮುನ್ನ ಇದು ನಕಲಿ ಎಂದು ಗೊತ್ತಿರಲಿ.
ಇನ್ನೂ ವಿವಾಹವಾಗಿಲ್ಲವೇ? ಇಂದೇ ಕನ್ನಡ ಮ್ಯಾಟ್ರಿಮನಿಯಲ್ಲಿ ನೋಂದಾಯಿಸಿ - ನೋಂದಣಿ ಉಚಿತ!
Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.
To report any comment you can email us at udayavani.response@manipalgroup.info . We will review the request and delete the comments. | 0 |
ಮದ್ಯದ ಅಮಲಿನಲ್ಲಿ ಕಿರುತೆರೆ ನಟಿಯಿಂದ ಕಿರಿಕಿರಿ
23-04-2019 10:16AM IST / No Comments / Posted In: Latest News , Sports
ಐಪಿಎಲ್ ಪಂದ್ಯದ ವೀಕ್ಷಣೆಗೆಂದು ಸ್ನೇಹಿತರೊಂದಿಗೆ ತೆರಳಿದ್ದ ಕಿರುತೆರೆ ನಟಿಯೊಬ್ಬಳು ಕಾರ್ಪೊರೇಟ್ ಬಾಕ್ಸ್ ನಲ್ಲಿ ಕುಳಿತಿದ್ದ ವೇಳೆ ಮದ್ಯ ಸೇವಿಸಿ ಇತರ ಪ್ರೇಕ್ಷಕರಿಗೆ ಕಿರಿಕಿರಿ ಉಂಟು ಮಾಡಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದ್ದು, ನಟಿ ವಿರುದ್ಧ ಈಗ ದೂರು ದಾಖಲಿಸಲಾಗಿದೆ.
ಭಾನುವಾರದಂದು ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಹಾಗೂ ಕೋಲ್ಕತ್ತ ನೈಟ್ ರೈಡರ್ಸ್ ತಂಡಗಳ ನಡುವೆ ಪಂದ್ಯ ನಡೆದಿದ್ದು, ಇದನ್ನು ವೀಕ್ಷಿಸಲು ತೆಲುಗು ಕಿರುತೆರೆ ನಟಿ ಪ್ರಶಾಂತಿ ತನ್ನ ಐವರು ಸ್ನೇಹಿತರ ಜೊತೆ ತೆರಳಿದ್ದರು.
ಕಾರ್ಪೊರೇಟ್ ಬಾಕ್ಸಿನಲ್ಲಿ ಕುಳಿತಿದ್ದ ಇವರುಗಳು ಮದ್ಯ ಸೇವಿಸಲು ಆರಂಭಿಸಿದ್ದು, ಜೊತೆಗೆ ಗಲಾಟೆ ಮಾಡತೊಡಗಿದ್ದಾರೆ. ಪಂದ್ಯ ವೀಕ್ಷಿಸಲು ಬಂದಿದ್ದ ಸಂತೋಷ್ ಎಂಬವರು ಇದನ್ನು ಪ್ರಶ್ನಿಸಿದಾಗ ಅವರಿಗೆ ಅಡ್ಡಿಪಡಿಸಿದ್ದಾರೆ. ಪ್ರಶಾಂತಿ ಗಲಾಟೆ ಮಾಡುತ್ತಿರುವ ಸಂಪೂರ್ಣ ದೃಶ್ಯಾವಳಿಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಪ್ರಶಾಂತಿ ವಿರುದ್ಧ ದೂರು ದಾಖಲಿಸಲಾಗಿದೆ. | 2 |
ತೂಕ ಇಳಿಸಲು ಆಹಾರಕ್ರಮಗಳು-ಇವುಗಳು ಮರುದಿನದ ಮಲವಿಸರ್ಜನೆಯ ಮೇಲೆ ಎಸಗುವ ಪರಿಣಾಮಗಳು
Diet Fitness
|
Updated: Monday, January 28, 2019, 10:47 [IST]
ತೂಕ ಇಳಿಕೆಯಲ್ಲಿ ಪ್ರಧಾನ ಪಾತ್ರ ವಹಿಸುವ ಕ್ರಿಯೆ ಎಂದರೆ ಆಹಾರಕ್ರಮದಲ್ಲಿ ಬದಲಾವಣೆ. ಈ ಮೂಲಕ ನಮಗೆ ತೂಕದಲ್ಲಿ ಇಳಿಕೆ ಕಂಡುಬಂದರೂ ಇದರಿಂದ ದೇಹದ ನೈಸರ್ಗಿಕ ಕ್ರಿಯೆಗಳಲ್ಲಿ ಆಗಿರುವ ಬದಲಾವಣೆಗಳನ್ನು ನಾವು ಅಲಕ್ಷಿಸಿಬಿಡುತ್ತೇವೆ. ತೂಕ ಇಳಿಕೆಯ ಪ್ರಯತ್ನಕ್ಕೂ ಮುನ್ನ ಇದ್ದ ನಮ್ಮ ಆಹಾರಕ್ರಮ ಈಗ ಬದಲಾಗಿರುವ ಕಾರಣ ನಮ್ಮ ದೇಹದ ಕೆಲವು ಕ್ರಿಯೆಗಳೂ ಇದಕ್ಕನುಗುಣವಾಗಿ ಬದಲಾವಣೆಗೊಳ್ಳುವುದು ಅನಿವಾರ್ಯವಾಗುತ್ತದೆ. ಈ ಬದಲಾವಣೆಗಳಲ್ಲಿ ಪ್ರಮುಖವಾಗಿ ಬಾಧೆಗೊಳಗಾಗುವುದು ಎಂದರೆ ನಮ್ಮ ಜೀರ್ಣವ್ಯವಸ್ಥೆ.
ಅದರಲ್ಲೂ ವಿಶೇಷವಾಗಿ ವಿಸರ್ಜನಾಕ್ರಿಯೆ. ಇದುವರೆಗೆ ಯಾವುದೇ ತೊಂದರೆ ಇಲ್ಲದೇ ಜರುಗುತ್ತಿದ್ದ ಈ ನೈಸರ್ಗಿಕ ಕ್ರಿಯೆ ಈಗ ಬದಲಾಗಿದ್ದು ಕೊಂಚ ಕಷ್ಟಕರ ಅಥವಾ ಬದಲಾದ ಸಮಯಗಳಲ್ಲಿ ಜರುಗುತ್ತಿದ್ದಿರಬಹುದು. ಸಾಮಾನ್ಯವಾಗಿ ಮಲಬದ್ದತೆಯೂ ಕಾಣಿಸಿಕೊಳ್ಳಬಹುದು. ಹೀಗಾದಾಗ ದೊಡ್ಡದಾಗಿರುವ ಹೊಟ್ಟೆಯ ಕಾರಣ ಮನಸ್ಸೂ ಭಾರವಾಗಿಯೇ ಇರುತ್ತದೆ ಹಾಗೂ ಮಾನಸಿಕ ವಾಗಿಯೂ ಬಳಲಿಕೆಯುಂಟಾಗುತ್ತದೆ. ಆದ್ದರಿಂದ ನಮ್ಮ ತೂಕ ಇಳಿಕೆಯ ಕ್ರಮದಲ್ಲಿ ನಾವು ಸೇವಿಸುವ ಆಹಾರವೂ ನಮ್ಮ ಆರೋಗ್ಯಕ್ಕೆ ಪೂರಕವಾಗಿರಬೇಕು, ಆಗಲೇ ನಮ್ಮ ಜೀರ್ಣವ್ಯವಸ್ಥೆಯೂ ಆರೋಗ್ಯಕರವಾಗಿದ್ದು ಮರುದಿನದ ನಿತ್ಯಕರ್ಮಗಳನ್ನು ಸುಲಭವಾಗಿ ಎಂದಿನಂತೆ ನಿರ್ವಹಿಸಲು ಸಾಧ್ಯವಾಗುತ್ತದೆ.
ಕೀಟೋಜೆನಿಕ್ ಆಹಾರಕ್ರಮ (Ketogenic diet)
ಈ ಆಹಾರಕ್ರಮದಲ್ಲಿ ಹೆಚ್ಚಿನ ಪ್ರಮಾಣದ ಕೊಬ್ಬು ಮತ್ತು ಪ್ರೋಟೀನುಗಳಿದ್ದು ಅತಿ ಕಡಿಮೆ ಪ್ರಮಾಣದಲ್ಲಿ ಕಾರ್ಬೋ ಹೈಡ್ರೇಟುಗಳಿರುತ್ತವೆ. ಆದರೆ ಈ ಆಹಾರಕ್ರಮ ಪ್ರಾರಂಭಿಸಿದ ಬಳಿಕ ನಮ್ಮ ಜೀರ್ಣಕ್ರಿಯೆಗಳು ಪೂರ್ಣಕ್ಷಮತೆಯಲ್ಲಿ ಕಾರ್ಯನಿರ್ವಹಿಸಲು ಸೋಲುತ್ತವೆ. ಏಕೆಂದರೆ ಈ ಕ್ರಿಯೆಗೆ ಅಗತ್ಯವಿದ್ದಷ್ಟು ಕಾರ್ಬೋಹೈಡ್ರೇಟುಗಳ ಕೊರತೆ. ಪರಿಣಾಮ: ಅತಿಸಾರ! ಕೆಲವರಲ್ಲಿ ಇದು ವಿರುದ್ದವಾಗಿ ಕಾರ್ಯನಿರ್ವಹಿಸಿ ಮಲಬದ್ಧತೆಗೆ ಕಾರಣವಾಗಬಹುದು. ಹಾಗಾಗಿ ಮರುದಿನದ ನಿತ್ಯಕರ್ಮ ಎಂದಿನಂತಿರಬೇಕಾದರೆ ಈ ಆಹಾರಕ್ರಮವನ್ನು ಅನುಸರಿಸುವುದು ದೊಡ್ಡ ಸವಾಲಾಗಿ ಪರಿಣಮಿಸಬಹುದು ಏಕೆಂದರೆ ಈ ಅಹಾರಕ್ರಮದಿಂದ ದೇಹ ಕಾರ್ಬೋಹೈಡ್ರೇಟುಗಳ ಬದಲಿಗೆ ದೇಹದ ಸಂಗ್ರಹದಲ್ಲಿರುವ ಕೊಬ್ಬನ್ನು ಬಳಸಿಕೊಂಡು ಶಕ್ತಿಯನ್ನು ಬಿಡುಗಡೆ ಮಾಡತೊಡಗುತ್ತದೆ.
Most Read: ಇದು ಸರಳ ಶೀತ ಎಂದು ನಿರ್ಲಕ್ಷಿಸಬೇಡಿ! ಇದರಿಂದ ಸೈನಸ್ ಸೋಂಕು ಬರಬಹುದು!!
ಜಿ ಎಂ ಆಹಾರಕ್ರಮ (GM diet)
ಜೆನೆರಲ್ ಮೋಟಾರ್ಸ್ ಸಂಸ್ಥೆಯ ಮೂಲಕ ಪ್ರಸ್ತುತಗೊಂಡ ಕಾರಣದಿಂದಲೇ ಇದೇ ಹೆಸರಿನಿಂದ ಕರೆಯಲ್ಪಡುವ ಈ ಆಹಾರಕ್ರಮ ಒಂದು ನಿರ್ಧಾರಿತ ಆಹಾರಪಟ್ಟಿಯಲ್ಲಿರುವ (food pyramid)ಆಹಾರಗಳನ್ನೇ ಕಡ್ಡಾಯವಾಗಿ ಸೇವಿಸಿ ಉಳಿದವನ್ನು ವರ್ಜಿಸುವ ಕ್ರಮವಾಗಿದೆ. ಆದರೆ ಏಕಾಏಕಿ ಈ ಕ್ರಮವನ್ನು ಅನುಸರಿಸುವುದರಿಂದ ದೇಹಕ್ಕೆ ಈ ಬದಲಾವಣೆಗೆ ಹೊಂದಿಕೊಳ್ಳಲು ಕಷ್ಟವಾಗುತ್ತದೆ ಹಾಗೂ ಮಲಬದ್ದತೆ, ಅಜೀರ್ಣತೆ ಸಾಮಾನ್ಯವಾಗಿ ಎದುರಾಗುತ್ತದೆ. ಇದಕ್ಕೆರಡು ಕಾರಣಗಳಿವೆ. ಮೊದಲಿಗೆ ಆಹಾರ ಜೀರ್ಣಗೊಂಡು ತ್ಯಾಜ್ಯಗಳನ್ನು ಉತ್ಪಾದಿಸುವಷ್ಟು ನಾರು ಈ ಆಹಾರದಲ್ಲಿ ಇರುವುದಿಲ್ಲ. ಎರಡನೆಯದಾಗಿ ಒಮ್ಮೆಲೇ ಬದಲಾವಣೆಗೊಂಡ ಆಹಾರದಿಂದ ದೇಹ ಒಂದು ಬಗೆಯ ಆಘಾತಕ್ಕೆ ಒಳಗಾಗಿರುತ್ತದೆ. ಇದು ಕೇವಲ ದೇಹದ ಮೇಲೆ ಮಾತ್ರವಲ್ಲ, ಮನಸ್ಸಿನ ಮೇಲೂ ಒತ್ತಡವನ್ನು ಹೇರುತ್ತದೆ. ಈ ಆಹಾರ ಸತತವಾಗಿ ಅಭ್ಯಾಸವಾಗುವವರೆಗೂ ಜೀರ್ಣಕ್ರಿಯೆ ಮತ್ತು ಮಲಬದ್ಧತೆಯ ತೊಂದರೆ ಮುಂದುವರೆಯುತ್ತದೆ.
ಆಟ್ಕಿನ್ಸ್ ಆಹಾರಕ್ರಮ (Atkins diet)
ಈ ಆಹಾರಕ್ರಮದಲ್ಲಿ ಅತಿ ಹೆಚ್ಚು ಪ್ರೋಟೀನ್ ಮತ್ತು ಅತಿ ಹೆಚ್ಚು ಕೊಬ್ಬನ್ನು ಆಹಾರದ ಮೂಲಕ ಸೇವಿಸಲಾಗುತ್ತದೆ. ಅಂದರೆ ಕಾರ್ಬೋಹೈಡ್ರೇಟುಗಳ ಪ್ರಮಾಣ ಅತ್ಯಂತ ಕಡಿಮೆ ಅಥವಾ ಸೀಮಿತ! ಹಾಗಾಗಿ ಜೀರ್ಣಾಂಗಗಳು ಅತಿ ಹೆಚ್ಚು ಬಾಧೆಗೊಳಗಾಗುತ್ತವೆ. ಇದನ್ನು ತಡೆಯಲು ಈ ಆಹಾರಕ್ರಮದಲ್ಲಿ ಕೊಂಚ ಹಣ್ಣು ಮತ್ತು ತರಕಾರಿಗಳನ್ನು ಸೇರಿಸಿಕೊಳ್ಳುವುದು ಅನಿವಾರ್ಯ. ಅಲ್ಲದೇ ಈ ಆಹಾರಕ್ರಮದಲ್ಲಿ ಮಾಂಸಾಹಾರವೇ ಪ್ರಮುಖವಾಗಿರುವ ಕಾರಣ ಇವು ತರಕಾರಿಗಳಿಗಿಂತಲೂ ಬೇಗನೇ ಜೀರ್ಣಗೊಂಡು ದೇಹದ ನೈಸರ್ಗಿಕ ವಿಧಾನವನ್ನೇ ಬದಲಿಸಿಬಿಡುತ್ತವೆ.
ವೇಗನ್ ಆಹಾರಕ್ರಮ (Vegan diet)
ಕೇವಲ ಸಸ್ಯಾಹಾರವನ್ನೇ ಒಳಗೊಂಡಿರುವ ಈ ಕ್ರಮದಲ್ಲಿ ತರಕಾರಿ, ಧಾನ್ಯಗಳು, ಒಣಫಲಗಳು ಮತ್ತು ಹಣ್ಣುಗಳನ್ನೇ ತಿನ್ನಬೇಕಾಗುತ್ತದೆ. ಈ ಆಹಾರದಲ್ಲಿ ಡೈರಿ ಉತ್ಪನ್ನಗಳು ಇರುವುದಿಲ್ಲವಾದುದರಿಂದ ಜೀರ್ಣಕ್ರಿಯೆ ಮತ್ತು ವಿಸರ್ಜನಾಕ್ರಿಯೆಯಲ್ಲಿ ಯಾವುದೇ ತೊಂದರೆ ಎದುರಾಗದು. ಏಕೆಂದರೆ ಈ ಎಲ್ಲಾ ಆಹಾರಗಳಲ್ಲಿ ಸಾಕಷ್ಟು ನಾರಿನ ಪ್ರಮಾಣವಿದೆ. ಅಲ್ಲದೇ ಡೈರಿ ಉತ್ಪನ್ನಗಳಿಲ್ಲದೇ ಇರುವುದರಿಂದ ವಾಯುಪ್ರಕೋಪವೂ ಇರುವುದಿಲ್ಲ.
Most Read: ಚಿಕನ್ ತಿಂದರೆ ದೇಹದ ತೂಕ ಕಡಿಮೆ ಆಗುತ್ತದೆಯೇ? ಖಂಡಿತವಾಗಿಯೂ ಹೌದು!
ಜ್ಯೂಸ್ ಡಿಟಾಕ್ಸ್ ಆಹಾರ ಕ್ರಮ (Juice detox diet)
ಈ ವಿಧಾನದಲ್ಲಿ ದ್ರವಾಹಾರವನ್ನೇ ಪ್ರಮುಖ ಆಹಾರವನ್ನಾಗಿ ಸೇವಿಸಲಾಗುತ್ತದೆ. ಆದರೆ ಇದರಿಂದ ದೇಹದ ಜೀವರಾಸಾಯನಿಕ ಕ್ರಿಯೆಗಳ ಮಟ್ಟದಲ್ಲಿ ಇಳಿಕೆ ಕಂಡುಬರುತ್ತದೆ. ಅಲ್ಲದೇ ವಿಸರ್ಜಿಸುವ ಕಲ್ಮಶಗಳ ಪ್ರಮಾಣ ಅತ್ಯಂತ ಕಡಿಮೆಯಾಗಿಬಿಡುತ್ತದೆ! ನಮ್ಮ ಆಹಾರದಲ್ಲಿ ಸಾಕಷ್ಟು ನಾರು ಇರಬೇಕು ಹಾಗೂ ಕರುಳುಗಳಲ್ಲಿ ಸುಲಭವಾಗಿ ಚಲಿಸುವಂತಿರಬೇಕು. ಈಗ ನಾರೇ ಇಲ್ಲದಿದ್ದರೆ ಈ ವ್ಯವಸ್ಥೆಯೇ ಕುಸಿಯುತ್ತದೆ ಹಾಗೂ ಕರುಳುಗಳಿಂದ ಜೀರ್ಣಗೊಂಡ ಆಹಾರದಿಂದ ಪೋಷಕಾಂಶಗಳನ್ನು ಹೀರಲ್ಪಡುವುದೂ ಸಾಧ್ಯವಾಗುವುದಿಲ್ಲ. ಹಾಗಾಗಿ ಇಲ್ಲಿ ಸಾಕಷ್ಟು ಕಲ್ಮಶಗಳು ಸಂಗ್ರಹವಾಗುವವರೆಗೆ ಮಲವಿಸರ್ಜನೆಯಾಗುವುದೇ ಇಲ್ಲ. ಕೇವಲ ದ್ರವಾಹಾರವನ್ನು ನೆಚ್ಚಿಕೊಂಡರೆ ಮಲಬದ್ಧತೆಯಾಗುವ ಸಾಧ್ಯತೆ ನಿಚ್ಚಳವಾಗಿದೆ.
ಇಡಿಯ ಆಹಾರಕ್ರಮ (Whole30 diet)
ಈ ಕ್ರಮದಲ್ಲಿ ಕೆಲವು ಸಂಸ್ಕರಿತ ಆಹಾರಗಳನ್ನು ಸೇವಿಸಬೇಕಾಗುತ್ತದೆ ಹಾಗೂ ಕೆಲವನ್ನು ವರ್ಜಿಸಬೇಕಾಗುತ್ತದೆ. ಒಂದು ಸಂಶೋಧನೆಯ ಪ್ರಕಾರ, ಸಂಸ್ಕರಿತ ಆಹಾರಗಳನ್ನು ಆಗಾಗ ಮಾತ್ರವೇ ಸೇವಿಸುತ್ತಿದ್ದು ಆರೋಗ್ಯಕರ ಆಹಾರಕ್ರಮವನ್ನು ಅನುಸರಿಸುತ್ತಿದ್ದರೆ ಇವರಲ್ಲಿ ಮಲವಿಸರ್ಜನೆ ಸುಲಭವಾಗಿ ಆಗುತ್ತಿರುತ್ತದೆ. ಏಕೆಂದರೆ ಸಿದ್ಧ ಆಹಾರಗಳಲ್ಲಿರುವ ಸಂರಕ್ಷಕಗಳು ಈ ವ್ಯಕ್ತಿಗಳ ಕರುಳಿನಲ್ಲಿ ಅತ್ಯಲ್ಪ ಪ್ರಮಾಣದಲ್ಲಿರುತ್ತವೆ ಹಾಗೂ ಇವು ಆಹಾರದ ಚಲನೆಗೆ ಅಡ್ಡಿಯುಂಟುಮಾಡುವ ಸಾಧ್ಯತೆಯೂ ಅತ್ಯಲ್ಪವೇ ಆಗಿರುತ್ತದೆ. ಹಾಗಾಗಿ ಈ ವಿಧಾನ ಅನುಸರಿಸುವುದು ಕಷ್ಟವೇ ಆಗಿದ್ದರೂ ಇದರಿಂದ ಕೆಲವಾರು ಪ್ರಯೋಜನಗಳೂ ಇವೆ. | 1 |
ಭಾರತ–ಆಸ್ಟ್ರೇಲಿಯಾ ಟಿ20 ಪಂದ್ಯ: ಟಿಕೆಟ್‌ಗಾಗಿ ಕಾದು..ಕಾದು...
ಭಾರತ–ಆಸ್ಟ್ರೇಲಿಯಾ ಟಿ20 ಪಂದ್ಯ: ಟಿಕೆಟ್‌ಗಾಗಿ ಕಾದು..ಕಾದು...
ಪ್ರಜಾವಾಣಿ ವಾರ್ತೆ
Published:
19 ಫೆಬ್ರವರಿ 2019, 16:05 IST
Updated:
19 ಫೆಬ್ರವರಿ 2019, 22:45 IST
ಅಕ್ಷರ ಗಾತ್ರ :
ಆ
ಆ
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇದೇ 27ರಂದು ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಟ್ವೆಂಟಿ 20 ಪಂದ್ಯಕ್ಕಾಗಿ ಮಂಗಳವಾರ ಟಿಕೆಟ್ ಮಾರಾಟ ಆರಂಭವಾಗಿದೆ.
ಟಿಕೆಟ್ ಖರೀದಿಗಾಗಿ ಅಭಿಮಾನಿಗಳು ಬೆಳಗಿನ ಜಾವದಿಂದಲೇ ಕೌಂಟರ್ ಮುಂದೆ ಸಾಲುಗಟ್ಟಿದ್ದರು. ಕ್ರೀಡಾಂಗಣದ ಕೌಂಟರ್‌ಗಳಲ್ಲಿ ₹ 750 ರಿಂದ ₹10 ಸಾವಿರದವರೆಗಿನ ವಿವಿಧ ಸ್ಟ್ಯಾಂಡ್‌ಗಳ ಟಿಕೆಟ್‌ಗಳು ಲಭ್ಯವಿದೆ.
ಈ ಕುರಿತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ತನ್ನ ಫೇಸ್‌ಬುಕ್ ಖಾತೆಯಲ್ಲಿ ಪ್ರಕಟಣೆ ನೀಡಿದೆ. ₹ 750ರ ಟಿಕೆಟ್‌ಗಳನ್ನು ಒಬ್ಬರಿಗೆ ಒಂದು ಮತ್ತು ಉಳಿದ ಶ್ರೇಣಿಯ ಟಿಕೆಟ್‌ಗಳನ್ನು ಒಬ್ಬರಿಗೆ ಎರಡು ನೀಡಲಾಗುವುದು ಎಂದು ಸಂಸ್ಥೆಯು ತಿಳಿಸಿದೆ.
ಆನ್‌ಲೈನ್‌ನಲ್ಲಿಯೂ ಟಿಕೆಟ್ ಮಾರಾಟ ಆರಂಭವಾಗಿದೆ. | 2 |
#Gomonster ಸವಾಲು ಸ್ವೀಕರಿಸಿದ ಅರ್ಜುನ್: Samsung Galaxy M30s ಜತೆ ಪರ್ವಾತಾರೋಹಣ WATCH LIVE TV
'ದಳಪತಿ' ಪ್ರೇಮ್‌ಗೆ ಸ್ಪೆಷಲ್ ಗಿಫ್ಟ್
ನೆನಪಿರಲಿ ಪ್ರೇಮ್ ಮತ್ತು ಜೂಮ್ ಚಿತ್ರ ಖ್ಯಾತಿ ನಿರ್ದೇಶಕ ಪ್ರಶಾಂತ್ ಜತೆಯಾಗಿರುವ ದಳಪತಿ ಸಿನಿಮಾದ ಮೋಷನ್ ಪೋಸ್ಟರ್ ಏ18ರಂದು ರಿಲೀಸ್ ಆಗುತ್ತಿದೆ.
ವಿಕ ಸುದ್ದಿಲೋಕ | Updated:
Apr 14, 2017, 05:10AM IST
ನೆನಪಿರಲಿ ಪ್ರೇಮ್ ಮತ್ತು ಜೂಮ್ ಚಿತ್ರ ಖ್ಯಾತಿ ನಿರ್ದೇಶಕ ಪ್ರಶಾಂತ್ ಜತೆಯಾಗಿರುವ ದಳಪತಿ ಸಿನಿಮಾದ ಮೋಷನ್ ಪೋಸ್ಟರ್ ಏ.18ರಂದು ರಿಲೀಸ್ ಆಗುತ್ತಿದೆ. ಅಂದು ಪ್ರೇಮ್ ಅವರ ಹುಟ್ಟು ಹಬ್ಬ ಅನ್ನುವುದು ವಿಶೇಷ.
ದಳಪತಿ ಸಿನಿಮಾದ ನಾಯಕ ನೆನಪಿರಲಿ ಪ್ರೇಮ್ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ ಜೂಮ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ರಾಜ್. ಈ ಸಿನಿಮಾದ ಮೋಷನ್ ಪೋಸ್ಟರ್ ಅನ್ನು ಹೊಸ ರೀತಿಯಲ್ಲಿ ರೆಡಿ ಮಾಡಿಕೊಂಡಿರುವ ಪ್ರಶಾಂತ್ ರಾಜ್, ಏ.18ರಂದು ಅದನ್ನು ರಿಲೀಸ್ ಮಾಡಲಿದ್ದಾರೆ. ಇದು ತಮ್ಮ ಸಿನಿಮಾದ ನಾಯಕನಿಗೆ ಕೊಡುತ್ತಿರುವ ವಿಶೇಷ ಗಿಫ್ಟ್ ಅಂತಾರೆ.
'ದಳಪತಿ ಅನ್ನುವ ಶಬ್ದವೇ ಸಖತ್ ಸೌಂಡ್ ಮಾಡುವಂಥದ್ದು. ಹಾಗಾಗಿಯೇ ಮೋಷನ್ ಪೋಸ್ಟರ್ ಕೂಡ ಸದ್ದು ಮಾಡಲಿದೆ. ತುಂಬಾ ಆಲೋಚನೆ ಮಾಡಿ ಪೋಸ್ಟರ್ ರೆಡಿ ಮಾಡಿಕೊಂಡಿದ್ದೇವೆ. ಆ ಪೋಸ್ಟರ್‌ನಲ್ಲಿ ಪ್ರೇಮ್ ಲವ್ಲಿಯಾಗಿ ಕಂಡಿದ್ದಾರೆ. ಅಲ್ಲದೇ ಪಾತ್ರದ ಒಂದಷ್ಟು ಮಾಹಿತಿಯನ್ನೂ ಈ ಪೋಸ್ಟರ್ ಹೇಳಲಿದೆ' ಅಂತಾರೆ ನಿರ್ದೇಶಕರು.
ಲವ್‌ಗುರು, ಜೂಮ್ ಸೇರಿದಂತೆ ಅನೇಕ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಪ್ರಶಾಂತ್ ರಾಜ್, ಇದೇ ಮೊದಲ ಬಾರಿಗೆ ಪ್ರೇಮ್ ಜತೆ ಕೆಲಸ ಮಾಡುತ್ತಿದ್ದಾರೆ. ಹೊಸ ರೀತಿಯ ಸಿನಿಮಾಗಳನ್ನು ಈವರೆಗೂ ಕೊಟ್ಟಿರು ನಿರ್ದೇಶಕರು, ಪ್ರೇಮ್‌ಗಾಗಿಯೇ ಮತ್ತೊಂದು ಹೊಸ ಕತೆಯನ್ನು ಬರೆದುಕೊಂಡಿದ್ದಾರಂತೆ.
ಈ ಸಿನಿಮಾದ ಪ್ರೇಮ್ ಎರಡು ಭಾವದ ಪಾತ್ರವನ್ನು ಪೋಷಿಸುತ್ತಿದ್ದಾರೆ. ದಳಪತಿಯಾಗಿ ಅವರು ಕಾಣಿಸಿಕೊಂಡಿದ್ದಾರೆ. ಆ ದಳಪತಿಯ ಹಿನ್ನೆಲೆ ಕೂಡ ಅಷ್ಟೇ ರೋಚಕವಾಗಿದೆಯಂತೆ. ಪ್ರೇಮ್ ಜತೆ ಫಸ್ಟ್ ಟೈಮ್ ಕೃತಿ ಕರಬಂಧ ನಟಿಸಿದ್ದು, ಈ ಜೋಡಿಯು ತೆರೆಯ ಮೇಲೆ ತುಂಬಾ ಕ್ಯೂಟ್ ಆಗಿ ಕಂಡಿದೆಯಂತೆ. ಗ್ಲಾಮ್ ಪಾತ್ರಗಳ ಮೂಲಕವೇ ಗುರುತಿಸಿಕೊಂಡಿರುವ ಕೃತಿ, ಈ ಬಾರಿ ಪಕ್ಕಾ ಟಿಪಿಕಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೊಂದು ಚಾಲೇಂಜ್ ನೀಡಬಲ್ಲ ಪಾತ್ರ ಎಂದೂ ಅವರು ಹೇಳಿಕೊಂಡಿದ್ದಾರೆ.
'ಕತೆಗೆ ತಕ್ಕಂತೆ ಒಂದು ಪವರ್‌ಫುಲ್ ಟೈಟಲ್ ಬೇಕಿತ್ತು. ಹಾಗಾಗಿ ದಳಪತಿ ಎಂಬ ಶೀರ್ಷಿಕೆ ಇಟ್ಟಿದ್ದೇನೆ. ಹಾಗಂತ ಇದು ಯಾವುದೇ ಇತಿಹಾಸವನ್ನು ಹೇಳುವ ಸಿನಿಮಾ ಅಲ್ಲ. ಇವನು ಪ್ರೀತಿಯನ್ನು ಕಾಯುವ ದಳಪತಿ. ಹಾಗಾಗಿ ಇದೇ ಟೈಟಲ್ ಫಿಕ್ಸ್ ಮಾಡಿದೆ. ಸಿನಿಮಾದ ಶೀರ್ಷಿಕೆಯೇ ಹೇಳುವಂತೆ ಇದು ಕ್ಲಾಸ್ ಮತ್ತು ಮಾಸ್ ಎರಡೂ ಬಗೆಯ ಪ್ರೇಕ್ಷ ಕರಿಗೆ ಇಷ್ಟವಾಗುವ ಸಿನಿಮಾ' ಅಂತಾರೆ ಪ್ರಶಾಂತ್. | 0 |