File size: 70,412 Bytes
32165da
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
30
31
32
33
34
35
36
37
38
39
40
41
42
43
44
45
46
47
48
49
50
51
52
53
54
55
56
57
58
59
60
61
62
63
64
65
66
67
68
69
70
71
72
73
74
75
76
77
78
79
80
81
82
83
84
85
86
87
88
89
90
91
92
93
94
95
96
97
98
99
100
101
102
103
104
105
106
107
108
109
110
111
112
113
114
115
116
117
118
119
120
121
122
123
124
125
126
127
128
129
130
131
132
133
134
135
136
137
138
139
140
141
142
143
144
145
146
147
148
149
150
151
152
153
154
155
156
157
158
159
160
161
162
163
164
165
166
167
168
169
170
171
172
173
174
175
176
177
178
179
180
181
182
183
184
185
186
187
188
189
190
191
192
193
194
195
196
197
198
199
200
201
202
203
204
205
206
207
208
209
210
211
212
213
214
215
216
217
218
219
220
221
222
223
224
225
226
227
228
229
230
231
232
233
234
235
\id EPH
\ide UTF-8
\rem Copyright © 2017 Bridge Connectivity Solutions. This translation is made available to you under the terms of the Creative Commons Attribution-ShareAlike 4.0 License
\h ಎಫೆಸದವರಿಗೆ
\toc1 ಎಫೆಸದವರಿಗೆ
\toc2 ಎಫೆ
\toc3 ಎಫೆ
\mt ಎಫೆಸದವರಿಗೆ
\is ಗ್ರಂಥಕರ್ತೃತ್ವ
\ip ಎಫೆಸ 1:1, ಅಪೊಸ್ತಲನಾದ ಪೌಲನನ್ನು ಎಫೆಸ ಪುಸ್ತಕದ ಗ್ರಂಥಕರ್ತನೆಂದು ಗುರುತಿಸುತ್ತದೆ. ಎಫೆಸದವರಿಗೆ ಬರೆದ ಪತ್ರಿಕೆಯನ್ನು ಪೌಲನು ಬರೆದಿದ್ದಾನೆಂದು ಸಭೆಯ ಆರಂಭಿಕ ದಿನಗಳಿಂದಲೂ ಪರಿಗಣಿಸಲಾಗಿದೆ ಮತ್ತು ಆದಿ ಅಪೊಸ್ತಲಿಕ ಪಾದ್ರಿಗಳಾದ ರೋಮಾದ ಕ್ಲೆಮೆಂಟ್, ಇಗ್ನೇಷಿಯಸ್, ಹೆರ್ಮಸ್, ಮತ್ತು ಪೋಲಿಕಾರ್ಪ್ ಅದರ ಕುರಿತು ಉಲ್ಲೇಖಿಸಿದ್ದಾರೆ.
\is ಬರೆದ ದಿನಾಂಕ ಮತ್ತು ಸ್ಥಳ
\ip ಸರಿಸುಮಾರು ಕ್ರಿ.ಶ. 60 ರಲ್ಲಿ ಬರೆಯಲ್ಪಟ್ಟಿದೆ.
\ip ಪೌಲನು ರೋಮಾಪುರದಲ್ಲಿ ಸೆರೆಮನೆಯಲ್ಲಿರುವಾಗ ಇದನ್ನು ಅವನು ಬರೆದಿದ್ದಾನೆ.
\is ಸ್ವೀಕೃತದಾರರು
\ip ಎಫೆಸದ ಸಭೆಯವರು ಪ್ರಾಥಮಿಕ ಸ್ವೀಕೃತದಾರರಾಗಿದ್ದರು. ಪೌಲನು ತನ್ನ ಉದ್ದೇಶಿತ ಓದುಗರು ಅನ್ಯಜನರು ಎಂಬ ಸ್ಪಷ್ಟವಾದ ಸೂಚನೆಗಳನ್ನು ನೀಡಿದ್ದಾನೆ. ಎಫೆ 2:11-13 ರಲ್ಲಿ, ತನ್ನ ಓದುಗರು “ಜನ್ಮತಃ ಅನ್ಯಜನರು” ಎಂದು ಅವನು ಸ್ಪಷ್ಟವಾಗಿ ಹೇಳುತ್ತಾನೆ (2:11), ಆದ್ದರಿಂದ “ವಾಗ್ದಾನಕ್ಕೆ ಸಂಬಂಧವಾದ ಒಡಂಬಡಿಕೆಗಳಲ್ಲಿ ಪರಕೀಯರು” (2:12) ಎಂದು ಯೆಹೂದ್ಯರಿಂದ ಪರಿಗಣಿಸಲ್ಪಟ್ಟಿದ್ದಾರೆ. ಅದೇ ರೀತಿಯಲ್ಲಿ, ಎಫೆ 3:1 ರಲ್ಲಿ, ಪೌಲನು ತನ್ನ ಉದ್ದೇಶಿತ ಓದುಗರಿಗೆ “ಅನ್ಯಜನರಾಗಿರುವ ನಿಮ್ಮ ನಿಮಿತ್ತವಾಗಿ” ಸೆರೆಯಾಳಾಗಿದ್ದೇನೆ ಎಂದು ತಿಳಿಸುತ್ತಾನೆ.
\is ಉದ್ದೇಶ
\ip ಕ್ರಿಸ್ತನ ರೀತಿಯ ಪರಿಪಕ್ವತೆಗಾಗಿ ಬಯಸುವಂಥವರೆಲ್ಲರು ಈ ಪತ್ರಿಕೆಯನ್ನು ಸ್ವೀಕರಿಸುತ್ತಾರೆಂದು ಪೌಲನು ಉದ್ದೇಶಿಸಿದ್ದನು. ದೇವರ ನಿಜವಾದ ಮಕ್ಕಳಾಗಿ ಬೆಳೆಯಲು ಬೇಕಾದ ಶಿಸ್ತನ್ನು ಎಫೆಸ ಪುಸ್ತಕದಲ್ಲಿ ಲಗತ್ತಿಸಿದ್ದಾನೆ. ಇದಲ್ಲದೆ, ಎಫೆಸ ಪತ್ರಿಕೆಯಲ್ಲಿರುವ ಅಧ್ಯಯನವು ವಿಶ್ವಾಸಿಯನ್ನು ಬಲಪಡಿಸಲು ಮತ್ತು ಸ್ಥಿರಪಡಿಸಲು ಸಹಾಯ ಮಾಡುತ್ತದೆ, ಆದ್ದರಿಂದ ದೇವರು ನೀಡಿರುವ ಉದ್ದೇಶವನ್ನು ಮತ್ತು ಕರೆಯುವಿಕೆಯನ್ನು ಅವನು ನೆರವೇರಿಸುವನು. ಎಫೆಸದ ವಿಶ್ವಾಸಿಗಳು ತಮ್ಮ ಕ್ರೈಸ್ತ ನಂಬಿಕೆಯಲ್ಲಿ ಬಲಗೊಳ್ಳಬೇಕೆಂದು ಪೌಲನು ಇಚ್ಛಿಸಿದನು, ಆದ್ದರಿಂದ ಅವನು ಸಭೆಯ ಸ್ವರೂಪವನ್ನು ಮತ್ತು ಉದ್ದೇಶವನ್ನು ವಿವರಿಸಿದನು. ಪೌಲನು ಅನ್ಯಜನರಿಂದ ಬಂದ ತನ್ನ ಕ್ರೈಸ್ತ ಓದುಗರಿಗೆ ಪರಿಚಿತರಾಗಿದ್ದ ಅವರ ಹಿಂದಿನ ಧರ್ಮಗಳಲ್ಲಿದ್ದ, ತಲೆ, ದೇಹ, ಪೂರ್ಣತೆ, ಮರ್ಮ, ಯುಗ, ಆಧಿಪತಿ, ಎಂಬ ಇತ್ಯಾದಿ ಪದಗಳನ್ನು ಎಫೆಸ ಪತ್ರಿಕೆಯಲ್ಲಿ ಬಳಸಿದ್ದಾನೆ. ಕ್ರಿಸ್ತನು ದೇವತೆಗಳ ಮತ್ತು ಆಧ್ಯಾತ್ಮಿಕ ಜೀವಿಗಳ ವರ್ಗಕ್ಕಿಂತ ಅತಿ ಉನ್ನತನಾಗಿ ಮತ್ತು ಶ್ರೇಷ್ಠನಾಗಿ ಇದ್ದಾನೆ ಎಂದು ತನ್ನ ಓದುಗರಿಗೆ ತೋರಿಸಿಕೊಡಲು ಅವನು ಈ ಪದಗಳನ್ನು ಬಳಸಿದನು.
\is ಮುಖ್ಯಾಂಶ
\ip ಕ್ರಿಸ್ತನಲ್ಲಿರುವ ಆಶೀರ್ವಾದಗಳು
\iot ಪರಿವಿಡಿ
\io1 1. ಸಭೆಯ ಸದಸ್ಯರಿಗಾಗಿರುವ ಸಿದ್ಧಾಂತಗಳು — 1:1-3:21
\io1 2. ಸಭೆಯ ಸದಸ್ಯರ ಕರ್ತವ್ಯಗಳು — 4:1-6:24
\c 1
\s ಪೀಠಿಕೆ
\p
\v 1 \f + \fr 1:1 \ft 1 ಕೊರಿ 1:1 ನೋಡಿರಿ\f*ದೇವರ ಚಿತ್ತಾನುಸಾರವಾಗಿ \f + \fr 1:1 \ft ಕೊರಿ 1:1 ನೋಡಿರಿ\f*ಕ್ರಿಸ್ತ ಯೇಸುವಿನ ಅಪೊಸ್ತಲನಾದ ಪೌಲನು \f + \fr 1:1 \ft ಕೆಲವು ಪ್ರತಿಗಳಲ್ಲಿ ಎಫೆಸದಲ್ಲಿರುವ ಎಂಬ ಪದ ಇಲ್ಲ; ಕೊಲೊ 4:16 ನೋಡಿರಿ. \f*ಎಫೆಸದಲ್ಲಿರುವ ದೇವಜನರಿಗೂ ಕ್ರಿಸ್ತ ಯೇಸುವಿನಲ್ಲಿ \f + \fr 1:1 \ft ಕೊಲೊ 1:2:\f*ನಂಬಿಕೆಯಿಟ್ಟಿರುವವರಿಗೂ ಬರೆಯುವುದೇನಂದರೆ,
\v 2 \f + \fr 1:2 \ft ರೋಮಾ. 1:7 ನೋಡಿರಿ. \f*ನಮ್ಮ ತಂದೆಯಾದ ದೇವರಿಂದಲೂ ಕರ್ತನಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯು ಶಾಂತಿಯೂ ಉಂಟಾಗಲಿ.
\s ಕ್ರಿಸ್ತನಲ್ಲಿರುವ ಆತ್ಮೀಕ ಆಶೀರ್ವಾದಗಳು
\p
\v 3 ನಮ್ಮ ಕರ್ತನಾದ ಯೇಸುಕ್ರಿಸ್ತನ \f + \fr 1:3 \ft ರೋಮಾ. 15:6 ನೋಡಿರಿ. \f*ದೇವರೂ ತಂದೆಯೂ ಆಗಿರುವಾತನಿಗೆ ಸ್ತೋತ್ರವಾಗಲಿ, ಆತನು \f + \fr 1:3 \ft ಎಫೆ 1:20; 2:6; 3:10:\f*ಪರಲೋಕದಲ್ಲಿನ ಸಕಲ ಆತ್ಮೀಕ ಆಶೀರ್ವಾದಗಳನ್ನು ನಮಗೆ ಕ್ರಿಸ್ತನಲ್ಲಿ ಅನುಗ್ರಹಿಸಿದ್ದಾನೆ.
\v 4 ನಾವು ಆತನ ಸನ್ನಿಧಿಯಲ್ಲಿ \f + \fr 1:4 \ft ಎಫೆ 5:27; ಕೊಲೊ 1:22; 1 ಥೆಸ. 4:7:\f*ಪರಿಶುದ್ಧರೂ ದೋಷವಿಲ್ಲದವರೂ ಆಗಿರಬೇಕೆಂದು, ಜಗತ್ತು ಸೃಷ್ಟಿಯಾಗುವುದಕ್ಕಿಂತ ಮೊದಲೇ ದೇವರು \f + \fr 1:4 \ft ಎಫೆ 2:10; 2 ಥೆಸ. 2:13; 1 ಪೇತ್ರ 1:2:\f*ಕ್ರಿಸ್ತನಲ್ಲಿ ನಮ್ಮನ್ನು ಆರಿಸಿಕೊಂಡನು.
\v 5 \f + \fr 1:5 \ft ಎಫೆ 1:12,14\f*ದೇವರು ತನ್ನ ದಯಾಪೂರ್ವಕವಾದ ಚಿತ್ತಕ್ಕನುಸಾರವಾಗಿ ಯೇಸು ಕ್ರಿಸ್ತನ ಮೂಲಕ\f + \fr 1:5 \ft ರೋಮಾ. 8 15:\f* ನಮ್ಮನ್ನು ತನ್ನ ಮಕ್ಕಳನ್ನಾಗಿ ಅಂಗೀಕರಿಸಲು ಪ್ರೀತಿಯಿಂದ \f + \fr 1:5 \ft ಎಫೆ 1:9,11; ರೋಮಾ. 8:29,30. \f*ಮೊದಲೇ ಸಂಕಲ್ಪಮಾಡಿದ್ದನು.
\v 6 ತನ್ನ ಪ್ರಿಯನಲ್ಲಿಯೇ ನಮಗೆ ಉಚಿತವಾಗಿ ಅನುಗ್ರಹಿಸಿರುವ ತನ್ನ ಮಹಿಮೆಯುಳ್ಳ ಕೃಪೆಯ ಸ್ತುತಿಗಾಗಿ ಇದೆಲ್ಲಾವನ್ನು ಮಾಡಿದನು.
\v 7 ಯೇಸುಕ್ರಿಸ್ತನು ನಮಗೋಸ್ಕರ ಸುರಿಸಿದ \f + \fr 1:7 \ft ಅ. ಕೃ. 20:28:\f*ರಕ್ತದ ಮೂಲಕ ನಮಗೆ ಆತನ ಕೃಪೆಯ ಐಶ್ವರ್ಯಕ್ಕನುಸಾರವಾಗಿ \f + \fr 1:7 \ft ಕೊಲೊ 1:14; ಅ. ಕೃ. 2:38:\f*ಪಾಪ ಕ್ಷಮಾಪಣೆಯೆಂಬ \f + \fr 1:7 \ft ರೋಮಾ. 3:24; 1 ಕೊರಿ 1:30. \f*ವಿಮೋಚನೆಯು ಉಂಟಾಯಿತು.
\v 8 ಈ ಕೃಪೆಯನ್ನು ಆತನು \f + \fr 1:8 \ft ರೋಮಾ. 16:25:\f*ಎಲ್ಲಾ ಜ್ಞಾನ ವಿವೇಕಗಳೊಂದಿಗೆ ನಮಗೆ ಹೇರಳವಾಗಿ ಸುರಿಸಿದ್ದಾನೆ.
\v 9 ದೇವರು ಆತನಲ್ಲಿ ಮೊದಲೇ ನಿರ್ಣಯಿಸಿಕೊಂಡಿದ್ದ ಕೃಪೆಯುಳ್ಳ ಸಂಕಲ್ಪದ ಪ್ರಕಾರ ತನ್ನ ಚಿತ್ತದ ರಹಸ್ಯವನ್ನು ನಮಗೆ ತಿಳಿಯಪಡಿಸಿದ್ದಾನೆ.
\v 10 ಕಾಲವು ಪರಿಪೂರ್ಣವಾದಾಗ, ಆತನು \f + \fr 1:10 \ft ಕೊಲೊ 1:16, 20:\f*ಭೂಪರಲೋಕಗಳಲ್ಲಿರುವ ಸಮಸ್ತವನ್ನು \f + \fr 1:10 \ft ಕ್ರಿಸ್ತನ ಅಧಿಪತ್ಯಕ್ಕೆ ಅಥವಾ ಪ್ರಭುತ್ವಕ್ಕೆ ಅಧೀನಪಡಿಸಬೇಕೆಂದಿದ್ದನು. \f*ಕ್ರಿಸ್ತನಲ್ಲಿ ಒಂದುಗೂಡಿಸುವುದೇ ಆ ಸಂಕಲ್ಪವಾಗಿತ್ತು.
\p
\v 11 ಇದಲ್ಲದೆ ತನ್ನ ಚಿತ್ತದ ಉದ್ದೇಶಕ್ಕನುಸಾರವಾಗಿ ಎಲ್ಲಾ ಕಾರ್ಯಗಳನ್ನು ನಡೆಸುವಾತನು \f + \fr 1:11 \ft ಎಫೆ 1:5; 3:11; ರೋಮ. 8:28:\f*ತನ್ನ ಸಂಕಲ್ಪದ ಪ್ರಕಾರ ಮೊದಲೇ ನೇಮಿಸಲ್ಪಟ್ಟವರಾದ ನಮ್ಮನ್ನು ಕ್ರಿಸ್ತನಲ್ಲಿ ತನ್ನ ಸ್ವಕೀಯ ಜನರನ್ನಾಗಿ ಅರಿಸಿಕೊಂಡನು.
\v 12 ಕ್ರಿಸ್ತನಲ್ಲಿ ಮೊಟ್ಟ ಮೊದಲು ನಿರೀಕ್ಷೆಯನ್ನಿಟ್ಟ ನಾವು ಆತನ ಮಹಿಮೆಯನ್ನು ಸ್ತುತಿಸುವವರಾಗಿರಬೇಕೆಂದು ಹೀಗೆ ಮಾಡಿದನು.
\p
\v 13 ನೀವು ಸಹ ನಿಮ್ಮ ರಕ್ಷಣಾ \f + \fr 1:13 \ft ಕೊಲೊ 1:7:\f*ಸುವಾರ್ತೆಯ ಸತ್ಯವಾಕ್ಯವನ್ನು ಕೇಳಿ, ಕ್ರಿಸ್ತನಲ್ಲಿ ನಂಬಿಕೆಯಿಟ್ಟು, \f + \fr 1:13 \ft ಅ. ಕೃ. 1:4:\f*ವಾಗ್ದಾನಮಾಡಲ್ಪಟ್ಟ \f + \fr 1:13 \ft ಎಫೆ 4:30. \f*ಪವಿತ್ರಾತ್ಮನಿಂದ ಮುದ್ರೆಯನ್ನು ಹೊಂದಿದ್ದೀರಿ.
\v 14 \f + \fr 1:14 \ft 1 ಪೇತ್ರ. 2:9; ತೀತ. 2:14:\f*ದೇವರು ತನ್ನ ಸ್ವಕೀಯ ಜನರಿಗೆ ವಿಮೋಚನೆಯುಂಟಾಗುತ್ತದೆ ಎಂಬುದಕ್ಕೆ \f + \fr 1:14 \ft ಕೆಲವು ಪ್ರತಿಗಳಲ್ಲಿ, ಪವಿತ್ರಾತ್ಮವರವು ನಮ್ಮ ಬಾಧ್ಯತೆಗೆ ಸಂಚಕಾರವಾಗಿದೆ ಎಂದು ಬರೆದಿದೆ. \f*ಪವಿತ್ರಾತ್ಮನು \f + \fr 1:14 \ft ಅ. ಕೃ. 20:32; ಎಫೆ 1:18; 2 ಕೊರಿ 1:22; ಎಫೆ 4:30. \f*ನಮ್ಮ ಬಾಧ್ಯತೆಗೆ ಸಂಚಕಾರವಾಗಿದ್ದಾನೆ\f + \fr 1:14 \ft ಮುಂಚಿತವಾಗಿ ಕೊಟ್ಟ ಹಣ ಅಥವಾ ಕಳುಹಿಸಿದ ಸಹಾಯಕ, ಮುಂಚಿತವಾಗಿ ಗೊತ್ತುಮಾಡಿದ ವ್ಯವಸ್ಥೆ ಅಥವಾ ಜಮೀನುದಾರ. \f*. \f + \fr 1:14 \ft ಎಫೆ 1:6, 12:\f*ಈ ಕಾರಣ ದೇವರಿಗೆ ಮಹಿಮೆಯನ್ನು ಸಲ್ಲಿಸೋಣ.
\s ಕೃತಜ್ಞತೆಯೂ ಪ್ರಾರ್ಥನೆಯೂ
\p
\v 15 ಹೀಗಿರಲಾಗಿ \f + \fr 1:15 \ft ಕೊಲೊ 1:4; ಫಿಲೆ. 5:\f*ಕರ್ತನಾದ ಯೇಸುವಿನಲ್ಲಿ ನೀವು ಇಟ್ಟಿರುವ ನಂಬಿಕೆಯನ್ನು ಮತ್ತು ದೇವಜನರೆಲ್ಲರಿಗೆ ನೀವು ತೋರಿಸುವ ಪ್ರೀತಿಯ ವಿಷಯವನ್ನು ಕೇಳಿ,
\v 16 \f + \fr 1:16 \ft ಕೊಲೊ 1:9:\f*ನಾನು ನಿಮಗೋಸ್ಕರ ನನ್ನ ಪ್ರಾರ್ಥನೆಗಳಲ್ಲಿ ವಿಜ್ಞಾಪನೆ ಮಾಡುವಾಗ ದೇವರಿಗೆ ಎಡೆಬಿಡದೆ ಸ್ತೋತ್ರ ಮಾಡುತ್ತೇನೆ.
\v 17 \f + \fr 1:17 \ft ರೋಮಾ. 15:6:\f*ನಮ್ಮ ಕರ್ತನಾದ ಯೇಸು ಕ್ರಿಸ್ತನ ದೇವರೂ ಮಹಿಮಾಸ್ವರೂಪನಾದ ತಂದೆಯೂ \f + \fr 1:17 \ft ಕೊಲೊ 1:9, 10:\f*ಆಗಿರುವಾತನು ತನ್ನ ವಿಷಯವಾಗಿ ಪೂರ್ಣವಾದ ತಿಳಿವಳಿಕೆಯನ್ನು ಕೊಟ್ಟು, ಜ್ಞಾನ ಮತ್ತು ಪ್ರಕಟಣೆಗಳ ಆತ್ಮವನ್ನು ನಿಮಗೆ ದಯಪಾಲಿಸಬೇಕೆಂದು ಪ್ರಾರ್ಥಿಸುತ್ತೇನೆ.
\v 18 \f + \fr 1:18 \ft ಅ. ಕೃ. 26:18:\f*ಆತನೇ ನಿಮ್ಮ ಮನೋನೇತ್ರಗಳನ್ನು ಬೆಳಗಿಸಿ, ಆತನ ಕರೆಯ ನಿರೀಕ್ಷೆಯು ಎಂಥದೆಂಬುದನ್ನೂ ಮತ್ತು \f + \fr 1:18 \ft ಎಫೆ 3:8,16, 17; 1:7; ಕೊಲೊ 1:27; \f*ದೇವಜನರಲ್ಲಿರುವ ಆತನ ಸ್ವತ್ತಿನ ಮಹಿಮಾತಿಶಯವು ಎಂಥದೆಂಬುದನ್ನೂ,
\v 19 ಮತ್ತು ನಂಬುವವರಾದ ನಮ್ಮಲ್ಲಿ ಕಾರ್ಯ ಸಾಧಿಸುವ ಆತನ ಪರಾಕ್ರಮ ಶಕ್ತಿಯ ಅಪಾರವಾದ ಮಹತ್ವವು ಎಂಥದೆಂಬುದನ್ನೂ ನೀವು ತಿಳಿಯುವಂತೆ ದೇವರು ನಿಮಗೆ ಅನುಗ್ರಹಿಸಲಿ.
\v 20 ಈ ಪರಾಕ್ರಮ ಶಕ್ತಿಯಿಂದಲೇ ದೇವರು ಕ್ರಿಸ್ತನನ್ನು ಮರಣದಿಂದ ಎಬ್ಬಿಸಿ, \f + \fr 1:20 \ft ಎಫೆ 4:10; ಕೊರಿ 15:24; ಯೋಹಾ 3:31:\f*ಸಕಲ ರಾಜತ್ವ, ಅಧಿಕಾರ, ಅಧಿಪತ್ಯ ಮತ್ತು ಪ್ರಭುತ್ವಗಳ ಮೇಲೆಯೂ
\v 21 ಈ ಲೋಕದಲ್ಲಿ ಮಾತ್ರವಲ್ಲದೆ ಮುಂಬರುವ ಲೋಕದಲ್ಲಿಯೂ ಹೆಸರುಗೊಂಡವರೆಲ್ಲರ ಎಲ್ಲಾ \f + \fr 1:21 \ft ಫಿಲಿ. 2:9 \f*ನಾಮಗಳ ಮೇಲೆಯೂ ಪರಲೋಕದಲ್ಲಿ ಆತನನ್ನು ತನ್ನ ಬಲಗಡೆಯಲ್ಲಿ ಕುಳ್ಳಿರಿಸಿಕೊಂಡನು.
\v 22 ಇದಲ್ಲದೆ \f + \fr 1:22 \ft ಕೀರ್ತ 8:6; 1 ಕೊರಿ 15:27 \f*ದೇವರು ಸಮಸ್ತವನ್ನೂ ಯೇಸುಕ್ರಿಸ್ತನ ಪಾದದ ಕೆಳಗೆ ಅಧೀನಮಾಡಿ, \f + \fr 1:22 \ft ಎಫೆ 4:15; 5:23; ಕೊಲೊ 1:18; 2:10,19.\f*ಸಭೆಗಾಗಿ ಎಲ್ಲಾದರ ಮೇಲೆ ಆತನನ್ನು ಶಿರಸ್ಸಾಗಿ ನೇಮಿಸಿದನು.
\v 23 \f + \fr 1:23 \ft ಎಫೆ 4:12,16; 5:30; ಕೊಲೊ 1:18. 1 ಕೊರಿ 12:27:\f*ಸಭೆಯು ಕ್ರಿಸ್ತನ ದೇಹವಾಗಿದೆ, ಎಲ್ಲವನ್ನೂ ಎಲ್ಲಾ ವಿಧದಲ್ಲೂ ಪೂರೈಸುವಾತನಿಂದ \f + \fr 1:23 \ft ಅಥವಾ, ಅದು ಆತನನ್ನು ಪರಿಪೂರ್ಣ ಮಾಡುತ್ತದೆ; ಮತ್ತು ಆತನ ದೊರೆತನವು ಅದರ ಎಲ್ಲಾ ಭಾಗಗಳಲ್ಲಿ ಪರಿಪೂರ್ಣವಾಗಿದೆ. ಎಫೆ 3:19; 4:10; ಕೊಲೊ 3:11:\f*ಅದು ಸಂಪೂರ್ಣತೆಯುಳ್ಳದ್ದಾಗಿದೆ.
\c 2
\s ಮರಣದಿಂದ ಜೀವಕ್ಕೆ
\p
\v 1 \f + \fr 2:1 \ft ಕೊಲೊ 1:21; 2:13:\f*ನೀವು ನಿಮ್ಮ ಅಪರಾಧಗಳ ಹಾಗೂ ಪಾಪಗಳ ದೆಸೆಯಿಂದ ಸತ್ತವರಾಗಿದ್ದೀರಿ.
\v 2 ಪೂರ್ವದಲ್ಲಿ \f + \fr 2:2 \ft ಎಫೆ  4:17,22; 5:8; ಕೊಲೊ 3:7; 1 ಕೊರಿ 6:7,8:\f*ನೀವು ಇಹಲೋಕದ ಪದ್ಧತಿಗೆ ಅನುಸಾರವಾಗಿಯೂ, \f + \fr 2:2 \ft ಎಫೆ  6:12; ಯೋಹಾ 12:13:\f*ವಾಯುಮಂಡಲದಲ್ಲಿ ಅಧಿಕಾರ ನಡಿಸುವ ಅಧಿಪತಿಗೆ ಅಂದರೆ ಅವಿಧೇಯತೆಯ ಮಕ್ಕಳಲ್ಲಿ ಈಗ ಕೆಲಸ ನಡೆಸುವ ಆತ್ಮನಿಗನುಸಾರವಾಗಿ ಜೀವನ ನಡಿಸಿದ್ದೀರಿ.
\v 3 ನಾವೆಲ್ಲರೂ ಪೂರ್ವದಲ್ಲಿ ಅವರ ಹಾಗೆಯೇ ಇದ್ದೆವು, \f + \fr 2:3 \ft ಗಲಾ 5:16:\f*ಶರೀರಭಾವದ ಆಸೆಗಳಿಗೆ ಅಧೀನರಾಗಿ, ಶಾರೀರಿಕ ಹಾಗೂ ಮಾನಸಿಕ ಇಚ್ಛೆಗಳನ್ನು ಈಡೇರಿಸುತ್ತಾ ಬಂದೆವು. \f + \fr 2:3 \ft ಕೀರ್ತ 51:5; ರೋಮಾ. 5:12. 2 ಪೇತ್ರ 2:14:\f*ಸ್ವಭಾವತಃ ನಾವು ಸಹ ಇತರರಂತೆಯೇ ದೇವರ ಕೋಪಕ್ಕೆ ಗುರಿಯಾಗಿದ್ದೆವು.
\v 4 ಆದರೆ \f + \fr 2:4 \ft ಎಫೆ  2:7; ತೀತ. 3:5:\f*ಕರುಣಾನಿಧಿಯಾಗಿರುವ ದೇವರು \f + \fr 2:4 \ft ಯೋಹಾ 3 16:\f*ನಮ್ಮನ್ನು ಪ್ರೀತಿಸಿದ ಮಹಾ ಪ್ರೀತಿಯ ನಿಮಿತ್ತ,
\v 5 ಅಪರಾಧಗಳ ದೆಸೆಯಿಂದ \f + \fr 2:5 \ft ಕೊಲೊ 2:12,13; ಯೋಹಾ 14:19:\f*ಸತ್ತವರಾಗಿದ್ದ ನಮ್ಮನ್ನು ಕ್ರಿಸ್ತನೊಂದಿಗೆ ಬದುಕಿಸಿದನು. \f + \fr 2:5 \ft ಎಫೆ  1 8; ಅ. ಕೃ. 15:11:\f*ಕೃಪೆಯಿಂದಲೇ ನೀವು ರಕ್ಷಣೆ ಹೊಂದಿದವರಾಗಿದ್ದೀರಿ.
\v 6 ಆತನು ಕ್ರಿಸ್ತ ಯೇಸುವಿನಲ್ಲಿ ನಮ್ಮೊಂದಿಗಿರುವ \f + \fr 2:6 \ft ತೀತ. 3:4:\f*ದಯೆಯ ಮೂಲಕ ತನ್ನ ಅಪಾರವಾದ ಕೃಪಾತಿಶಯವನ್ನು
\v 7 ಮುಂದಿನ ಯುಗಗಳಲ್ಲಿ ನಮಗೆ ತೋರಿಸಬೇಕೆಂದು ಕ್ರಿಸ್ತಯೇಸುವಿನಲ್ಲಿರುವ ನಮ್ಮನ್ನು ಆತನೊಂದಿಗೆ ಎಬ್ಬಿಸಿ, \f + \fr 2:7 \ft ಎಫೆ  1:21:\f*ಪರಲೋಕದಲ್ಲಿ ಯೇಸುಕ್ರಿಸ್ತನೊಂದಿಗೆ ನಮ್ಮನ್ನು ಕೂರಿಸಿದ್ದಾನೆ.
\v 8 \f + \fr 2:8 \ft 1 ಪೇತ್ರ. 1:5; ರೋಮಾ. 4:16:\f*ನಂಬಿಕೆಯ ಮೂಲಕ ಕೃಪೆಯಿಂದಲೇ ನೀವು ರಕ್ಷಣೆ ಹೊಂದಿದವರಾಗಿದ್ದೀರಿ. \f + \fr 2:8 \ft 2 ಕೊರಿ 3:5:\f*ಈ ರಕ್ಷಣೆಯು ನಿಮ್ಮಿಂದುಂಟಾದದ್ದಲ್ಲ, \f + \fr 2:8 \ft ಯೋಹಾ 4:10:\f*ಅದು ದೇವರ ದಾನವೇ.
\v 9 \f + \fr 2:9 \ft 2 ತಿಮೊ. 1:9; ತೀತ. 3:5; ರೋಮಾ. 3:20,28:\f*ಈ ರಕ್ಷಣೆಯೂ ಪುಣ್ಯಕ್ರಿಯೆಗಳಿಂದ ಉಂಟಾದದ್ದಲ್ಲ, \f + \fr 2:9 \ft 1 ಕೊರಿ 1:29:\f*ಆದ್ದರಿಂದ ಹೊಗಳಿಕೊಳ್ಳುವುದಕ್ಕೆ ಯಾರಿಗೂ ಆಸ್ಪದವಿಲ್ಲ.
\v 10 \f + \fr 2:10 \ft ಕೀರ್ತ 100. 3; ಯೆಶಾ 64:8:\f*ನಾವಾದರೋ ದೇವರ ಕಲಾಕೃತಿಯಾಗಿದ್ದೇವೆ, \f + \fr 2:10 \ft ಎಫೆ  1:4:\f*ದೇವರು ಮೊದಲೇ ನಮಗಾಗಿ ಸಂಕಲ್ಪಿಸಿದ್ದ \f + \fr 2:10 \ft ಎಫೆ  4:24; ತೀತ. 2:14:\f*ಸತ್ಕಾರ್ಯಗಳನ್ನು ಮಾಡುವವರಾಗಿ ಬದುಕಬೇಕೆಂದು ಯೇಸು ಕ್ರಿಸ್ತನಲ್ಲಿ ಸೃಷ್ಟಿಸಲ್ಪಟ್ಟಿದ್ದೇವೆ.
\s ಕ್ರಿಸ್ತನಲ್ಲಿ ಒಂದೇ ಜನಾಂಗ
\r ಕೊಲೊ 1:21-29
\p
\v 11 ಆದಕಾರಣ ಹಿಂದೊಮ್ಮೆ ನೀವು ಜನ್ಮದಿಂದ ಅನ್ಯಜನರಾಗಿದ್ದೀರಿ ಎಂಬುದು ನಿಮಗೆ ನೆನಪಿರಲಿ. ಶರೀರದಲ್ಲಿ ಮನುಷ್ಯನಿಂದ \f + \fr 2:11 \ft ರೋಮಾ. 2:28,29; ಕೊಲೊ 2:11,13:\f*ಸುನ್ನತಿಯನ್ನು ಮಾಡಿಸಿಕೊಂಡು ಸುನ್ನತಿಯವರೆನ್ನಿಸಿಕೊಳ್ಳುವವರಿಂದ ‘ಸುನ್ನತಿಯಿಲ್ಲದವರು’ ಎಂದು ಕರೆಯಲ್ಪಟ್ಟಿದ್ದೀರಿ.
\v 12 ಅಂದು \f + \fr 2:12 \ft ಎಫೆ  5:8:\f*ನೀವು ಕ್ರಿಸ್ತನಿಂದ ದೂರವಿದವರೂ, \f + \fr 2:12 \ft ಕೊಲೊ 1:21; ಗಲಾ. 2:15:\f*ಇಸ್ರಾಯೇಲ್ಯರ ಹಕ್ಕಿನಲ್ಲಿ ಪಾಲಿಲ್ಲದವರೂ, \f + \fr 2:12 \ft ರೋಮಾ. 9:4:\f*ವಾಗ್ದಾನಕ್ಕೆ ಸಂಬಂಧವಾದ ಒಡಂಬಡಿಕೆಗಳಲ್ಲಿ ಪರಕೀಯರೂ, ಯಾವ ನಿರೀಕ್ಷೆಯಿಲ್ಲದವರೂ ಮತ್ತು \f + \fr 2:12 \ft 1 ಥೆಸ. 4:13:\f*ಲೋಕದಲ್ಲಿ ದೇವರಿಲ್ಲದವರೂ ಆಗಿದ್ದಿರೆಂಬುದನ್ನು ಜ್ಞಾಪಕಮಾಡಿಕೊಳ್ಳಿರಿ.
\v 13 ಈಗಲಾದರೋ, \f + \fr 2:13 \ft ಎಫೆ  2:17; ಅ. ಕೃ. 2:39:\f*ಮೊದಲು ದೂರವಾಗಿದ್ದ ನೀವು ಕ್ರಿಸ್ತ ಯೇಸುವಿನಲ್ಲಿ \f + \fr 2:13 \ft ಕೊಲೊ 1:20:\f*ಆತನ ರಕ್ತದ ಮೂಲಕ ಸಮೀಪಸ್ಥರಾಗಿದ್ದೀರಿ.
\v 14 \f + \fr 2:14 \ft ಗಲಾ. 3:28:\f*ನಿಮ್ಮನ್ನು ಮತ್ತು ನಮ್ಮನ್ನು ಒಂದುಮಾಡಿದವನಾದ \f + \fr 2:14 \ft ಮೀಕ. 5:5; ಕೊಲೊ 3:15:\f*ಆತನೇ ನಮಗೆ ಶಾಂತಿದಾತನಾಗಿದ್ದಾನೆ. ಆತನು \f + \fr 2:14 \ft ಕೊಲೊ 1:21,22:\f*ವಿಧಿನಿಯಮಗಳಿಂದ ಕೂಡಿದ್ದ ಆಜ್ಞೆಗಳುಳ್ಳ ಧರ್ಮಶಾಸ್ತ್ರವನ್ನು ನಿರರ್ಥಕಗೊಳಿಸಿ, ನಮ್ಮನ್ನು ಅಗಲಿಸಿದ್ದ ಹಗೆತನವೆಂಬ ಅಡ್ಡಗೋಡೆಯನ್ನು ತನ್ನ ಶರೀರದಿಂದಲೇ ಕೆಡವಿಹಾಕಿದ್ದಾನೆ.
\v 15 ಆತನು ಸಮಾಧಾನವನ್ನುಂಟು ಮಾಡುವವನಾಗಿ, ಉಭಯರನ್ನೂ ತನ್ನಲ್ಲಿ \f + \fr 2:15 \ft ರೋಮಾ. 6:4:\f*ಒಂದುಗೂಡಿಸಿ ನೂತನ ಮಾನವನನ್ನಾಗಿ ನಿರ್ಮಿಸಿದ್ದಾನೆ.
\v 16 ನಮ್ಮ ಮೇಲೆ ಇದ್ದ ಹಗೆತನವನ್ನು ತನ್ನ ಶಿಲುಬೆಯ ಮೇಲೆ \f + \fr 2:16 \ft ಅಥವಾ, ಪರಿಹರಿಸಿ. \f*ಇಲ್ಲವಾಗಿಸಿ, \f + \fr 2:16 \ft ಕೊಲೊ 1:20-22:\f*ಆ ಶಿಲುಬೆಯ ಮೂಲಕ ಉಭಯರನ್ನೂ ಒಂದೇ ಶರೀರವನ್ನಾಗಿ ಮಾಡಿ ದೇವರೊಂದಿಗೆ ಸಂಧಾನಪಡಿಸಿದ್ದಾನೆ.
\v 17 ಇದಲ್ಲದೆ ಆತನು ಬಂದು ದೂರವಾಗಿದ್ದ ನಿಮಗೂ ಮತ್ತು ಸಮೀಪವಾಗಿದ್ದವರಿಗೂ ಸಮಾಧಾನವನ್ನು ಸಾರಿದನು.
\v 18 ಇದರಿಂದ \f + \fr 2:18 \ft ಯೋಹಾ 14:6 \f*ಆತನ ಮೂಲಕ ಉಭಯತ್ರರು \f + \fr 2:18 \ft ಎಫೆ  4:4; 1 ಕೊರಿ 12:13 ಯೋಹಾ 4:23:\f*ಒಂದೇ ಆತ್ಮನಲ್ಲಿ \f + \fr 2:18 \ft ಎಫೆ  3:12; ರೋಮಾ. 5:2; ಯೋಹಾ 10:7,9 \f*ತಂದೆಯ ಬಳಿಗೆ \f + \fr 2:18 \ft ತಂದೆಯೊಟ್ಟಿಗೆ ಮಾತನಾಡಲು ಅಥವಾ ತಂದೆಯ ಪ್ರಸ್ನತೆಯಲ್ಲಿ ಸೇರಲು ಅಧಿಕಾರ ದೊರೆಯಿತು. \f*ಪ್ರವೇಶಿಸಲು ಮಾರ್ಗವಾಯಿತು.
\v 19 ಹೀಗಿರಲಾಗಿ ನೀವು ಇನ್ನು ಮೇಲೆ \f + \fr 2:19 \ft ಎಫೆ  2:12; ಇಬ್ರಿ. 11:13, 13:14:\f*ಪರದೇಶದವರೂ ಅನ್ಯರೂ ಆಗಿರದೇ \f + \fr 2:19 \ft ಫಿಲಿ. 3:20; ಇಬ್ರಿ. 12:22,23:\f*ದೇವಜನರೊಂದಿಗೆ ಒಂದೇ ಸಂಸ್ಥಾನದವರೂ \f + \fr 2:19 \ft ಗಲಾ. 6:10\f*ದೇವರ ಮನೆಯವರೂ ಆಗಿದ್ದೀರಿ.
\v 20 \f + \fr 2:20 \ft ಮತ್ತಾ 16:18; ಪ್ರಕ 21:14:\f*ಅಪೊಸ್ತಲರೂ \f + \fr 2:20 \ft ಎಫೆ  3:5; 4:11:\f*ಪ್ರವಾದಿಗಳೂ ಎಂಬ \f + \fr 2:20 \ft ಅಥವಾ ಹಾಕಿದ. \f*ಅಡಿಪಾಯದ ಮೇಲೆ \f + \fr 2:20 \ft 1 ಕೊರಿ 3:9:\f*ನೀವೂ ಮಂದಿರದೋಪಾದಿಯಲ್ಲಿ ಕಟ್ಟಲ್ಪಟ್ಟಿದ್ದೀರಿ. \f + \fr 2:20 \ft 1 ಕೊರಿ 3:11:\f*ಯೇಸು ಕ್ರಿಸ್ತನೇ \f + \fr 2:20 \ft ಕೀರ್ತ 118:22; ಯೆಶಾ 28:16:\f*ಮುಖ್ಯವಾದ ಮೂಲೆಗಲ್ಲು.
\v 21 \f + \fr 2:21 \ft ಎಫೆ  4:15,16:\f*ಆತನಲ್ಲಿ ಕಟ್ಟಡದ ಎಲ್ಲಾ ಭಾಗಗಳು ಒಂದಕ್ಕೊಂದು ಹೊಂದಿಕೆಯಾಗಿ, ಕಟ್ಟಡವು ವೃದ್ಧಿಯಾಗುತ್ತಾ ಕರ್ತನಲ್ಲಿ \f + \fr 2:21 \ft 1 ಕೊರಿ 3:16,17:\f*ಪರಿಶುದ್ಧ ದೇವಾಲಯವಾಗುತ್ತದೆ.
\v 22 \f + \fr 2:22 \ft 1 ಪೇತ್ರ. 2:5:\f*ಆತನಲ್ಲಿ ನೀವೂ ಸಹ ಪವಿತ್ರಾತ್ಮನ ಮೂಲಕವಾಗಿ \f + \fr 2:22 \ft 2 ಕೊರಿ 6:16:\f*ದೇವರಿಗೆ ವಾಸಸ್ಥಾನವಾಗುವುದಕ್ಕೆ ನಮ್ಮ ಜೊತೆಯಲ್ಲಿ ಕಟ್ಟಲ್ಪಡುತ್ತಾ ಇದ್ದೀರಿ.
\c 3
\s ಅನ್ಯಜನರ ಬೋಧಕನಾದ ಪೌಲನು
\p
\v 1 ಹೀಗಿರುವುದರಿಂದ ಪೌಲನೆಂಬ ನಾನು ಅನ್ಯಜನರಾಗಿರುವ \f + \fr 3:1 \ft ಎಫೆ  3:13; ಕೊಲೊ 1:24:\f*ನಿಮ್ಮ ನಿಮಿತ್ತ ಕ್ರಿಸ್ತ ಯೇಸುವಿನ \f + \fr 3:1 \ft ಎಫೆ  4:1; ಅ. ಕೃ. 23:18. ಫಿಲಿ. 1:7. 2 ತಿಮೊ. 1:8 ಇತ್ಯಾದಿ. \f*ಸೆರೆಯಾಳಾಗಿದ್ದಾನೆ.
\v 2 \f + \fr 3:2 \ft ಎಫೆ  1:10; ಕೊಲೊ 1:25:\f*ನಿಮಗೋಸ್ಕರ ನಿರ್ವಹಿಸುವುದಕ್ಕಾಗಿ ದೇವರು ನನಗೆ \f + \fr 3:2 \ft ವ. 7 ನೋಡಿರಿ. \f*ಕೃಪೆಯಾಗಿ ಕೊಟ್ಟ ಕಾರ್ಯಭಾರವನ್ನು ನೀವು ಕೇಳಿದ್ದೀರಿ,
\v 3 ಆತನು ಮರ್ಮವನ್ನು \f + \fr 3:3 \ft ಅ. ಕೃ. 22:17,21; 26:18. ಗಲಾ. 1:12; 2 ಕೊರಿ 12:1 ನೋಡಿರಿ. \f*ಪ್ರಕಟಣೆಯಿಂದ ನನಗೆ ತಿಳಿಯಪಡಿಸಿದನೆಂದು ಅದನ್ನು ಕುರಿತು \f + \fr 3:3 \ft ಎಫೆ  1:9, 10 ನೋಡಿರಿ. \f*ನಾನು ಮೊದಲೇ ನಿಮಗೆ ಸಂಕ್ಷಿಪ್ತವಾಗಿ ಬರೆದಿದ್ದೇನೆ.
\v 4 ಬರೆದದ್ದನ್ನು ನೀವು ಓದಿ ನೋಡಿದರೆ ಕ್ರಿಸ್ತನ ವಿಷಯವಾದ ಮರ್ಮವನ್ನು ಕುರಿತು \f + \fr 3:4 \ft 2 ಕೊರಿ 11:6 ನೋಡಿರಿ. \f*ನನಗಿರುವ ಗ್ರಹಿಕೆಯನ್ನು ನೀವು ತಿಳಿದುಕೊಳ್ಳಬಹುದು.
\v 5 ಆ ಮರ್ಮವು ಈ ಕಾಲದಲ್ಲಿ ದೇವರ ಪರಿಶುದ್ಧ ಅಪೊಸ್ತಲರಿಗೂ ಪ್ರವಾದಿಗಳಿಗೂ ಪವಿತ್ರಾತ್ಮನಿಂದ ತಿಳಿಸಲ್ಪಟ್ಟಂತೆ ಬೇರೆ ಕಾಲಗಳಲ್ಲಿದ್ದ ಜನರಿಗೆ ತಿಳಿಸಲ್ಪಡಲಿಲ್ಲ.
\v 6 ಅದು ಯಾವುದೆಂದರೆ, ಅನ್ಯಜನರು ಸುವಾರ್ತೆಯ ಮೂಲಕ ಕ್ರಿಸ್ತ ಯೇಸುವಿನಲ್ಲಿ \f + \fr 3:6 \ft ಗಲಾ. 3:29 ನೋಡಿರಿ. ಯೆಹೂದ್ಯರೊಂದಿಗೆ\f*ದೇವಜನರೊಂದಿಗೆ ಸಹಬಾಧ್ಯರೂ \f + \fr 3:6 \ft ಎಫೆ  2:16:\f*ಒಂದೇ ದೇಹದ ಅಂಗಗಳೂ, ವಾಗ್ದಾನದಲ್ಲಿ ಪಾಲುಗಾರರೂ ಆಗಿದ್ದಾರೆಂಬುದೇ.
\v 7 ದೇವರು \f + \fr 3:7 \ft ಎಫೆ  3:20; 1:19 ನೋಡಿರಿ. \f*ತನ್ನ ಶಕ್ತಿಯ ಪ್ರಯೋಗದ ಮೂಲಕ ನನಗೆ ಕೊಡಲ್ಪಟ್ಟ ಆತನ ಕೃಪಾದಾನಕ್ಕನುಸಾರವಾಗಿ \f + \fr 3:7 \ft ಕೊಲೊ 1:23,25. 2 ಕೊರಿ 3:6 ನೋಡಿರಿ. \f*ನಾನು ಈ ಸುವಾರ್ತೆಗೆ ಸೇವಕನಾದೆನು.
\v 8 ಕ್ರಿಸ್ತನ \f + \fr 3:8 \ft ಎಫೆ  1:18; ರೋಮಾ. 2:4; 11:33:\f*ಅಗಮ್ಯವಾದ ಐಶ್ವರ್ಯದ ಸುವಾರ್ತೆಯನ್ನು \f + \fr 3:8 \ft ಅ. ಕೃ. 9:15:\f*ಅನ್ಯಜನರಿಗೆ ಸಾರುವ ಹಾಗೆಯೂ
\v 9 ಹಾಗೂ \f + \fr 3:9 \ft ಎಫೆ  3:2,3:\f*ಸಮಸ್ತವನ್ನು ಸೃಷ್ಟಿಸಿದ ದೇವರಲ್ಲಿ \f + \fr 3:9 \ft ಕೊಲೊ 1:26:\f*ಆದಿಯಿಂದ ಗುಪ್ತವಾಗಿದ ಮರ್ಮದ ಯೋಜನೆಯನ್ನು ಎಲ್ಲಾರಿಗೂ ತಿಳಿಸುವಂತಹ ಕೃಪೆಯು \f + \fr 3:9 \ft 1 ಕೊರಿ 15:9:\f*ದೇವಜನರೊಳಗೆ ಅತ್ಯಲ್ಪನಾದ ನನಗೆ ಕೊಡಲ್ಪಟ್ಟಿತು.
\v 10-11 \f + \fr 3:10-11 \ft ಎಫೆ  1:11:\f*ದೇವರು ನಮ್ಮ ಕರ್ತನಾದ ಕ್ರಿಸ್ತಯೇಸುವಿನಲ್ಲಿ ಮಾಡಿದ \f + \fr 3:10-11 \ft ಅಥವಾ ನಿತ್ಯವಾದ ಉದ್ದೇಶದ ಪ್ರಕಾರ. \f*ನಿತ್ಯಸಂಕಲ್ಪದ ಮೇರೆಗೆ ತನ್ನ \f + \fr 3:10-11 \ft ರೋಮಾ. 11:33:\f*ನಾನಾ ವಿಧವಾದ ಜ್ಞಾನವು, ಪರಲೋಕದಲ್ಲಿ \f + \fr 3:10-11 \ft ಎಫೆ  1:21. ಎಫೆ  6:12:\f*ರಾಜತ್ವಗಳಿಗೂ, ಅಧಿಕಾರಗಳಿಗೂ ಈಗ ಸಭೆಯ ಮೂಲಕ ಗೊತ್ತಾಗಬೇಕೆಂದು ಉದ್ದೇಶಿಸಿದನು.
\v 12 \f + \fr 3:12 \ft ಎಫೆ  2:18:\f*ದೇವರ ಸನ್ನಿಧಿಯಲ್ಲಿ ಸೇರುವುದಕ್ಕೆ \f + \fr 3:12 \ft ಇಬ್ರಿ. 4:16; 10:19:\f*ನಮಗಿರುವ ಭರವಸೆಯೂ ಧೈರ್ಯವೂ ಕ್ರಿಸ್ತನಲ್ಲಿ ಇಟ್ಟಿರುವ ನಂಬಿಕೆಯ ಮೂಲಕ ಆತನಲ್ಲಿಯೇ ನಮಗಿದೆ.
\v 13 ಆದ್ದರಿಂದ \f + \fr 3:13 \ft ವ. 1 ನೋಡಿರಿ. \f*ನಿಮ್ಮ ನಿಮಿತ್ತ ನನಗೆ ಉಂಟಾದ ಕಷ್ಟಗಳನ್ನು ನೋಡಿ ನೀವು ಧೈರ್ಯಗೆಡಬಾರದೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ. \f + \fr 3:13 \ft 2 ಕೊರಿ 1:6:\f*ಈ ಕಷ್ಟಗಳು ನಿಮಗೆ ಘನತೆಯನ್ನು ಉಂಟುಮಾಡುತ್ತವೆ.
\s ಎಫೆಸದವರಿಗಾಗಿ ಪ್ರಾರ್ಥನೆ
\p
\v 14-15 ಹೀಗಿರಲಾಗಿ \f + \fr 3:14-15 \ft ಅಥವಾ, ಪ್ರತಿ ಜನವೂ ತನ್ನ ಮೂಲಜನಕನಿಂದ ಹೆಸರು ತೆಗೆದುಕೊಳ್ಳುತ್ತದಷ್ಟೆ; ಯಾವಾತನು ದೇವಜನರಾದ ನಮಗೆ ಮೂಲ ಜನಕನಾಗಿದ್ದಾನೋ. \f*ಯಾವ ತಂದೆಯಿಂದ ಭೂಪರಲೋಕಗಳಲ್ಲಿರುವ ಪ್ರತಿ ಜನವೂ ಹೆಸರುಗೊಂಡಿರುವುದೋ ಆ ತಂದೆಯ ಮುಂದೆ ನಾನು ಮೊಣಕಾಲೂರಿಕೊಂಡು,
\v 16 ನೀವು ದೇವರಾತ್ಮನ ಮೂಲಕ ಆಂತರ್ಯದಲ್ಲಿ \f + \fr 3:16 \ft ಎಫೆ  6:10; ಫಿಲಿ. 4:13; ಕೊಲೊ 1:11:\f*ವಿಶೇಷಬಲವನ್ನು ಹೊಂದುವಂತೆಯೂ,
\v 17 \f + \fr 3:17 \ft ಎಫೆ  2:22:\f*ಕ್ರಿಸ್ತನು ನಿಮ್ಮ ನಂಬಿಕೆಯ ಮೂಲಕ ನಿಮ್ಮ ಹೃದಯಗಳಲ್ಲಿ ವಾಸಮಾಡುವಂತೆಯೂ, ಆತನು \f + \fr 3:17 \ft ವ. 8:\f*ತನ್ನ ಮಹಿಮಾತಿಶಯದ ಪ್ರಕಾರ ಅನುಗ್ರಹಿಸಲಿ.
\v 18 \f + \fr 3:18 \ft ಅಥವಾ, ಆ ಸತ್ಯರ್ಥದ. \f*ನೀವು ದೇವರ ಪ್ರೀತಿಯಲ್ಲಿ ನೆಲೆಯಾಗಿ ನಿಂತು, ದೇವಜನರೆಲ್ಲರೊಂದಿಗೆ ಅದರ ಅಗಲ, ಉದ್ದ, ಎತ್ತರ, ಆಳ ಎಷ್ಟೆಂಬುದನ್ನು ಗ್ರಹಿಸುವುದಕ್ಕೆ ಶಕ್ತರಾಗುವಂತೆಯೂ,
\v 19 ಬುದ್ಧಿಗಿಂತಲೂ ಮಿಗಿಲಾಗಿರುವ ಕ್ರಿಸ್ತನ ಪ್ರೀತಿಯನ್ನು ತಿಳಿದುಕೊಂಡು, \f + \fr 3:19 \ft ಎಫೆ  1:23; ಕೊಲೊ 2:10:\f*ದೇವರ ಸಂಪೂರ್ಣತೆಯ ಮಟ್ಟಿಗೂ ಪರಿಪೂರ್ಣರಾಗುವ ಹಾಗೆ ದೇವರು ನಿಮಗೆ ದಯಪಾಲಿಸಲಿ ಎಂದು ಆತನನ್ನು ಬೇಡಿಕೊಳ್ಳುತ್ತೇನೆ.
\p
\v 20 \f + \fr 3:20 \ft ವ. 7:\f*ನಮ್ಮಲ್ಲಿ ಕಾರ್ಯಸಾಧಿಸುವ ತನ್ನ ಈ ಶಕ್ತಿಯ ಪ್ರಕಾರ \f + \fr 3:20 \ft 2 ಕೊರಿ 9:8:\f*ನಾವು ಬೇಡುವುದಕ್ಕಿಂತಲೂ ಯೋಚಿಸುವುದಕ್ಕಿಂತಲೂ ಅತ್ಯಧಿಕವಾದದ್ದನ್ನು ಮಾಡಲು ಶಕ್ತನಾದ ದೇವರಿಗೆ
\v 21 \f + \fr 3:21 \ft ರೋಮಾ. 11:36:\f*ಸಭೆಯಲ್ಲಿಯೂ ಕ್ರಿಸ್ತ ಯೇಸುವಿನಲ್ಲಿಯೂ ತಲತಲಾಂತರಕ್ಕೂ ಯುಗಯುಗಾಂತರಕ್ಕೂ ಮಹಿಮೆಯಾಗಲಿ. ಆಮೆನ್.
\c 4
\s ಕ್ರಿಸ್ತನ ದೇಹದಲ್ಲಿನ ಐಕ್ಯತೆ
\p
\v 1 ನೀವು ದೇವರಿಂದ \f + \fr 4:1 \ft ರೋಮಾ. 8:28:\f*ಕರೆಯಲ್ಪಟ್ಟವರಾದ ಕಾರಣ ಆ ಕರೆಗೆ \f + \fr 4:1 \ft ಕೊಲೊ 2:6; 1 ಥೆಸ. 2:12; ಫಿಲಿ. 1:27:\f*ಯೋಗ್ಯರಾಗಿ ಜೀವಿಸಬೇಕೆಂದು, ಕರ್ತನ ಸೇವೆಯಲ್ಲಿ \f + \fr 4:1 \ft ಎಫೆ  3:1:\f*ಸೆರೆಯವನಾದ ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ.
\v 2 ನೀವು ಪೂರ್ಣ \f + \fr 4:2 \ft ಫಿಲಿ. 2:3; ಕೊಲೊ 3:12; 1 ಪೇತ್ರ. 3:5.\f*ವಿನಯ, ಸಾತ್ವಿಕತ್ವಗಳಿಂದಲೂ \f + \fr 4:2 \ft ಕೊಲೊ 1:11:\f*ದೀರ್ಘಶಾಂತಿಯಿಂದಲೂ ಕೂಡಿದವರಾಗಿ, \f + \fr 4:2 \ft ಕೊಲೊ 3:13:\f*ಪ್ರೀತಿಯಿಂದ ಒಬ್ಬರನ್ನೊಬ್ಬರು ಸಹಿಸಿಕೊಳ್ಳಿರಿ.
\v 3 \f + \fr 4:3 \ft ಕೊಲೊ 3:14,15:\f*ಸಮಾಧಾನವೆಂಬ ಬಂಧನದಿಂದ ಕಟ್ಟಲ್ಪಟ್ಟವರಾಗಿದ್ದು ಪವಿತ್ರಾತ್ಮನಿಂದುಂಟಾಗುವ ಐಕ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಆಸಕ್ತರಾಗಿರಿ.
\v 4 ನೀವು ಕರೆಯಲ್ಪಟ್ಟಾಗ \f + \fr 4:4 \ft ಎಫೆ  1:18:\f*ಒಂದೇ ನಿರೀಕ್ಷೆಗಾಗಿ ಕರೆಯಲ್ಪಟ್ಟವರಂತೆಯೇ, \f + \fr 4:4 \ft ಎಫೆ  2:16:\f*ನೀವೆಲ್ಲರೂ ಒಂದೇ ದೇಹಕ್ಕೆ ಸೇರಿದವರು, \f + \fr 4:4 \ft ಎಫೆ  2:18:\f*ಒಬ್ಬನೇ ಆತ್ಮನನ್ನು ಹೊಂದಿದವರು,
\v 5 ನಿಮ್ಮೆಲ್ಲರಿಗೂ \f + \fr 4:5 \ft ಜೆಕ. 14:9; 1 ಕೊರಿ 8:6:\f*ಕರ್ತನು ಒಬ್ಬನೇ, \f + \fr 4:5 \ft ಎಫೆ  4:13; ಯೂದ. 3:\f*ನಂಬಿಕೆಯು ಒಂದೇ, \f + \fr 4:5 \ft ಗಲಾ. 3:27,28:\f*ದೀಕ್ಷಾಸ್ನಾನ ಒಂದೇ,
\v 6 \f + \fr 4:6 \ft 1 ಕೊರಿ 12:5,6:\f*ಎಲ್ಲರಿಗೂ ತಂದೆಯಾಗಿರುವ ದೇವರು ಒಬ್ಬನೇ. \f + \fr 4:6 \ft ರೋಮಾ. 9:5:\f*ಆತನು ಎಲ್ಲರ ಮೇಲಿರುವವನೂ, ಎಲ್ಲರ ಮುಖಾಂತರ ಕಾರ್ಯ ನಡಿಸುವವನೂ, ಎಲ್ಲರಲ್ಲಿ ವಾಸಿಸುವವನೂ ಆಗಿದ್ದಾನೆ.
\p
\v 7 ಆದರೆ \f + \fr 4:7 \ft ರೋಮಾ. 12:3; ಎಫೆ  4:16; 1 ಕೊರಿ 12:7; ಮತ್ತಾ 25 15:\f*ಕ್ರಿಸ್ತನ ವರದ ಅಳತೆಯ ಪ್ರಕಾರವೇ ಪ್ರತಿಯೊಬ್ಬರಿಗೆ ಕೃಪಾವರವು ಕೊಡಲ್ಪಟ್ಟಿದೆ.
\v 8 ಆದ್ದರಿಂದ ದೇವರವಾಕ್ಯದಲ್ಲಿ ಹೀಗೆ ಹೇಳಿದೆ,
\q1 \f + \fr 4:8 \ft ಕೀರ್ತ 68:18:\f*“ಆತನು ಉನ್ನತ ಸ್ಥಾನಕ್ಕೆ ಏರಿಹೋದಾಗ
\q1 \f + \fr 4:8 \ft ನ್ಯಾಯ 5:12; ಕೊಲೊ 2:15:\f*ತಾನು ಸೆರೆಯಾಳುಗಳನ್ನು ಸೆರೆಹಿಡಿದುಕೊಂಡು ಹೋಗಿ
\q1 ಮನುಷ್ಯರಿಗೆ ವರಗಳನ್ನು ಕೊಟ್ಟನು.”
\p
\v 9 \f + \fr 4:9 \ft ಯೋಹಾ 3:13:\f*“ಏರಿಹೋದನೆಂದು” ಹೇಳಿದ್ದರ ಅರ್ಥವೇನು? ಭೂಮಿಯ ಅಧೋಭಾಗಕ್ಕೆ ಇಳಿದಿದ್ದನೆಂತಲೂ ಹೇಳಿದ ಹಾಗಾಯಿತಲ್ಲಾ?
\v 10 ಇಳಿದು ಬಂದಾತನು, \f + \fr 4:10 \ft ಎಫೆ  1:23:\f*ಸಮಸ್ತವನ್ನು ತುಂಬುವುದಕ್ಕಾಗಿ ಮೇಲಣ \f + \fr 4:10 \ft ಇಬ್ರಿ. 4:14; 7:26; 9:24:\f*ಎಲ್ಲಾ ಲೋಕಗಳಿಗಿಂತಲೂ ಉನ್ನತಕ್ಕೆ ಏರಿಹೋದವನು ಆಗಿದ್ದಾನೆ.
\v 11 ಆತನು\f + \fr 4:11 \ft 1 ಕೊರಿ 12:28:\f* ಕೆಲವರನ್ನು ಅಪೊಸ್ತಲರನ್ನಾಗಿಯೂ, ಕೆಲವರನ್ನು ಪ್ರವಾದಿಗಳನ್ನಾಗಿಯೂ, \f + \fr 4:11 \ft ಅ. ಕೃ. 21:8; 2 ತಿಮೊ. 4:5:\f*ಕೆಲವರನ್ನು ಸುವಾರ್ತಿಕರನ್ನಾಗಿಯೂ, ಕೆಲವರನ್ನು \f + \fr 4:11 \ft ಯೆರೆ 3:15; ಅ. ಕೃ 20:28:\f*ಸಭಾಪಾಲಕರನ್ನಾಗಿಯೂ, ಬೋಧಕರನ್ನಾಗಿಯೂ ನೇಮಿಸಿದನು.
\v 12 ನಾವೆಲ್ಲರೂ ನಂಬಿಕೆಯಿಂದಲೂ ದೇವಕುಮಾರನ ವಿಷಯವಾದ ಜ್ಞಾನದಿಂದಲೂ ಉಂಟಾಗುವ ಐಕ್ಯತೆಯನ್ನು ಹೊಂದಿ, ಪರಿಪಕ್ವತೆಯನ್ನು ಪಡೆದು,\f + \fr 4:12 \ft ಎಫೆ  1:23:\f* ಕ್ರಿಸ್ತನ ಪರಿಪೂರ್ಣತೆಯ ಮಟ್ಟವನ್ನು ತಲುಪುವ ತನಕ,
\v 13 ದೇವಜನರನ್ನು ದೇವರ ಸೇವೆಗೆ ಸಿದ್ಧಗೊಳಿಸುವುದಕ್ಕೂ, \f + \fr 4:13 \ft 1 ಕೊರಿ 12:27; ಎಫೆ  4:16,29:\f*ಕ್ರಿಸ್ತನ ದೇಹವೆಂಬ ಸಭೆಯು ಅಭಿವೃದ್ಧಿಯಾಗುವುದಕ್ಕೋಸ್ಕರವೂ ಆತನು ಇವರನ್ನು ನೇಮಿಸಿದನು.
\v 14 ಆದ್ದರಿಂದ ನಾವು ಇನ್ನು ಮೇಲೆ ಕೂಸುಗಳಾಗಿರದೇ, ದುರ್ಜನರ ವಂಚನೆಗಳಿಗೂ, ಕುಯುಕ್ತಿಗೂ ಒಳಬಿದ್ದು, ನಾನಾ ಉಪದೇಶಗಳಿಂದ ಕಂಗೆಟ್ಟು \f + \fr 4:14 \ft ಮತ್ತಾ 11:7; ಇಬ್ರಿ 13:9; ಯಾಕೋಬ. 1:6; ಯೂದ. 12.\f*ಗಾಳಿಯಿಂದ ಅತ್ತಿತ್ತ ಓಲಾಡುವವರ ಹಾಗಿರದೇ,
\v 15 \f + \fr 4:15 \ft 1 ಯೋಹಾ 3:18.\f*ಪ್ರೀತಿಯಲ್ಲಿ ಸತ್ಯವನ್ನು ಮಾತನಾಡುತ್ತಾ \f + \fr 4:15 \ft ಎಫೆ  2:21\f*ಎಲ್ಲಾ ವಿಷಯಗಳಲ್ಲಿಯೂ \f + \fr 4:15 \ft ಎಫೆ  1:22:\f*ತಲೆಯಾಗಿರುವ ಕ್ರಿಸ್ತನಲ್ಲಿ ಬೆಳೆಯುವವರಾಗಿರೋಣ.
\v 16 \f + \fr 4:16 \ft ಕೊಲೊ 2:19:\f*ದೇಹವೆಲ್ಲಾ ಆತನ ಮುಖಾಂತರ ಪ್ರತಿ ಕೀಲಿನಿಂದ ಬಿಗಿಯಾಗಿ ಜೋಡಿಸಲ್ಪಟ್ಟು ಐಕ್ಯವಾಗಿದ್ದು, \f + \fr 4:16 \ft ವ. 7 ನೋಡಿರಿ\f*ಪ್ರತಿಯೊಂದು ಅಂಗವು ತನ್ನ ಕೆಲಸವನ್ನು ಮಾಡುವುದರಿಂದ ದೇಹವು ಪ್ರೀತಿಯಲ್ಲಿ ಬೆಳೆದು ಕ್ಷೇಮಾಭಿವೃದ್ಧಿಯನ್ನು ಹೊಂದುತ್ತದೆ.
\s ಕ್ರಿಸ್ತನಲ್ಲಿ ಹೊಸ ಜೀವನ
\r ಕೊಲೊ 3:5-17
\p
\v 17 ಆದ್ದರಿಂದ ನಾನು ಕರ್ತನಲ್ಲಿ ಹೇಳುವುದೇನಂದರೆ \f + \fr 4:17 \ft ಎಫೆ  4:22; 2:1-3 ಕೊಲೊ 3:7; 1 ಪೇತ್ರ. 4:3:\f*ಅನ್ಯಜನರು ನಡೆದುಕೊಳ್ಳುವ ಹಾಗೆ ನೀವು ಇನ್ನು ಮುಂದೆ ನಡೆದುಕೊಳ್ಳಬಾರದು. \f + \fr 4:17 \ft ರೋಮಾ. 1:21; ಕೊಲೊ 2:18:\f*ಅವರು ನಿಷ್ಪ್ರಯೋಜನವಾದ ಬುದ್ಧಿಯುಳ್ಳವರಾಗಿ ನಡೆದುಕೊಳ್ಳುತ್ತಾರೆ.
\v 18 \f + \fr 4:18 \ft ರೋಮಾ. 11:10:\f*ಅವರ ಮನಸ್ಸಿಗೆ ಕತ್ತಲು ಕವಿದಿದೆ, ಅವರು \f + \fr 4:18 \ft ಮಾರ್ಕ 3:5:\f*ತಮ್ಮ ಕಠಿಣವಾದ ಹೃದಯದ ನಿಮಿತ್ತದಿಂದಲೂ ಮತ್ತು ತಮ್ಮಲ್ಲಿರುವ ಅಜ್ಞಾನದ ನಿಮಿತ್ತದಿಂದಲೂ ದೇವರಿಂದಾಗುವ ಜೀವಕ್ಕೆ \f + \fr 4:18 \ft ಎಫೆ  2:12:\f*ದೂರವಾಗಿದ್ದಾರೆ.
\v 19 ಅವರು ಲಜ್ಜೆಗೆಟ್ಟವರಾಗಿ \f + \fr 4:19 \ft ರೋಮಾ. 1:24,26,28:\f*ತಮ್ಮನ್ನು ಬಂಡುತನಕ್ಕೆ ಒಪ್ಪಿಸಿಕೊಟ್ಟು ಎಲ್ಲಾ ವಿಧವಾದ ಅಶುದ್ಧ ಕೃತ್ಯಗಳನ್ನು ಅತ್ಯಾಶೆಯಿಂದ ನಡೆಸುವವರಾಗಿದ್ದಾರೆ.
\v 20 ನೀವಾದರೋ \f + \fr 4:20 \ft ಮೂಲ, ಕ್ರಿಸ್ತನನ್ನು. ಮತ್ತಾ 11:29:\f*ಕ್ರಿಸ್ತನ ಬೋಧನೆಯನ್ನು ಅಂಥದೆಂದು ಕಲಿತುಕೊಳ್ಳಲಿಲ್ಲ.
\v 21 ಆತನಿಂದಲೇ ಕೇಳಿ \f + \fr 4:21 \ft ಕೊಲೊ 2:7:\f*ಆತನಲ್ಲಿಯೇ ಉಪದೇಶವನ್ನು ಹೊಂದಿದ್ದೀರಲ್ಲಾ.
\v 22 ಯೇಸುವಿನಲ್ಲಿರುವ ಸತ್ಯೋಪದೇಶವು ಯಾವುದೆಂದರೆ \f + \fr 4:22 \ft ಕೊಲೊ 3:8; ಇಬ್ರಿ. 12:1; ಯಾಕೋಬ. 1:21; 1 ಪೇತ್ರ. 2:1:\f*ನೀವು ನಿಮ್ಮ ಹಿಂದಿನ ನಡತೆಯನ್ನು ಅನುಸರಿಸದೇ \f + \fr 4:22 \ft ರೋಮಾ. 6:6; ಕೊಲೊ 3:9:\f*ಪೂರ್ವಸ್ವಭಾವವನ್ನು ತೆಗೆದುಹಾಕಿಬಿಡಬೇಕು. ಅದು ಮೋಸಕರವಾದ ದುರಾಶೆಗಳಿಂದ ಕೆಟ್ಟುಹೋಗುವಂಥದ್ದು.
\v 23 \f + \fr 4:23 \ft ರೋಮಾ. 12:2:\f*ನೀವು ನಿಮ್ಮ ಹೃನ್ಮನಗಳನ್ನು ನವೀಕರಿಸಿ, \f + \fr 4:23 \ft ರೋಮಾ. 16:4:\f*ನೂತನ ಸ್ವಭಾವವನ್ನು ಧರಿಸಿಕೊಳ್ಳಿರಿ.
\v 24 ಆ ಸ್ವಭಾವವು ದೇವರ ಹೋಲಿಕೆಯ ಮೇರೆಗೆ \f + \fr 4:24 \ft ಎಫೆ  2:10:\f*ಸತ್ಯಕ್ಕನುಗುಣವಾಗಿ ನೀತಿಯುಳ್ಳದ್ದಾಗಿಯೂ, ಪರಿಶುದ್ಧತೆಯುಳ್ಳದ್ದಾಗಿಯೂ ನಿರ್ಮಿಸಲ್ಪಟ್ಟಿದೆ.
\p
\v 25 ಆದಕಾರಣ ಸುಳ್ಳಾಡುವುದನ್ನು ಬಿಟ್ಟುಬಿಟ್ಟು \f + \fr 4:25 \ft ಜೆಕ. 8:16; ಕೊಲೊ 3:9:\f*“ಪ್ರತಿಯೊಬ್ಬನು ತನ್ನ ನೆರೆಯವನ ಸಂಗಡ ಸತ್ಯವನ್ನೇ ನುಡಿಯಲಿ.” ಏಕೆಂದರೆ \f + \fr 4:25 \ft ರೋಮಾ. 12:5:\f*ನಾವು ಪ್ರತಿಯೊಬ್ಬರೂ ಒಂದೇ ದೇಹದ ಅಂಗಗಳಾಗಿದ್ದೇವಲ್ಲಾ.
\v 26 \f + \fr 4:26 \ft ಕೀರ್ತ 4:4.\f*“ಕೋಪಗೊಳ್ಳಬೇಕಾಗಿ ಬಂದರೂ ಪಾಪಮಾಡಬೇಡಿರಿ,” ಸೂರ್ಯನು ಮುಳುಗುವುದಕ್ಕಿಂತ ಮೊದಲೇ ನಿಮ್ಮ ಸಿಟ್ಟು ತೀರಿಹೋಗಲಿ.
\v 27 \f + \fr 4:27 \ft ಯಾಕೋಬ. 4:7:\f*ಸೈತಾನನಿಗೆ ಅವಕಾಶಕೊಡಬೇಡಿರಿ.
\v 28 ಕಳವು ಮಾಡುವವನು ಇನ್ನು ಮುಂದೆ ಕಳವು ಮಾಡದೇ ಸ್ವಂತ \f + \fr 4:28 \ft 1 ಥೆಸ. 4:11; 2 ಥೆಸ. 3:8, 11:\f*ಕೈಯಿಂದ ಒಳ್ಳೇ ಉದ್ಯೋಗವನ್ನು ಮಾಡಿ ದುಡಿಯಲಿ. ಆಗ ಕೊರತೆಯಲ್ಲಿರುವವರಿಗೆ ಕೊಡುವುದಕ್ಕೆ ಅವನಿಂದಾಗುವದು.
\v 29 \f + \fr 4:29 \ft ಎಫೆ  5:4; ಕೊಲೊ 3:8; ಮತ್ತಾ 12:34:\f*ನಿಮ್ಮ ಬಾಯೊಳಗಿಂದ ಯಾವ ಕೆಟ್ಟ ಮಾತು ಹೊರಡಬಾರದು. ಭಕ್ತಿಯನ್ನು ವೃದ್ಧಿ ಮಾಡುವಂತಹ ಸಮಯೋಚಿತವಾದ ಮಾತನ್ನು ಆಡಿದರೆ \f + \fr 4:29 \ft ಕೊಲೊ 4:6:\f*ಕೇಳುವವರಿಗೆ ಹಿತವಾಗಿ ತೋರುವುದು.
\v 30 \f + \fr 4:30 \ft ಯೆಶಾ 63:10; 1 ಥೆಸ. 5:19:\f*ದೇವರ ಪವಿತ್ರಾತ್ಮನನ್ನು ದುಃಖಪಡಿಸಬೇಡಿರಿ. ಆತನಲ್ಲಿಯೇ ವಿಮೋಚನೆಯ ದಿನಕ್ಕಾಗಿ \f + \fr 4:30 \ft ಎಫೆ  1:13:\f*ಮುದ್ರೆ ಹೊಂದಿದ್ದೀರಲ್ಲಾ.
\v 31 \f + \fr 4:31 \ft ಕೊಲೊ 3:8:\f*ಎಲ್ಲಾ ದ್ವೇಷ, ಕೋಪ, ಕ್ರೋಧ, ಕಲಹ, ದೂಷಣೆ ಇವುಗಳನ್ನೂ ಸಕಲ ವಿಧವಾದ ದುಷ್ಟತನಗಳನ್ನೂ ನಿಮ್ಮಿಂದ ದೂರ ಮಾಡಿರಿ.
\v 32 \f + \fr 4:32 \ft ಕೊಲೊ 3:12,3; 1 ಪೇತ್ರ. 3:8:\f*ಒಬ್ಬರಿಗೊಬ್ಬರು ದಯೆಯುಳ್ಳವರಾಗಿಯೂ, ಕರುಣೆಯುಳ್ಳವರಾಗಿಯೂ ಇರಿ. ದೇವರು ನಿಮ್ಮನ್ನು ಕ್ರಿಸ್ತನಲ್ಲಿ ಕ್ಷಮಿಸಿದಂತೆ ನೀವು ಒಬ್ಬರನ್ನೊಬ್ಬರು \f + \fr 4:32 \ft 2 ಕೊರಿ 2:7,10; ಮತ್ತಾ 6:14:\f*ಕ್ಷಮಿಸಿರಿ.
\c 5
\s ಪ್ರೀತಿಯಲ್ಲಿ ನಡೆಯಿರಿ
\p
\v 1 ಆದುದರಿಂದ ದೇವರ ಪ್ರಿಯರಾದ ಮಕ್ಕಳಿಗೆ ತಕ್ಕ ಹಾಗೆ \f + \fr 5:1 \ft ಎಫೆ  4:32; ಮತ್ತಾ 5:7, 48; ಲೂಕ 6:36 ನೋಡಿರಿ. \f*ಆತನನ್ನು ಅನುಸರಿಸುವವರಾಗಿರಿ.
\v 2 \f + \fr 5:2 \ft ರೋಮಾ. 8:37:\f*ಕ್ರಿಸ್ತನು ನಮ್ಮನ್ನು ಪ್ರೀತಿಸಿ \f + \fr 5:2 \ft ರೋಮಾ. 4:25:\f*ನಮ್ಮೆಲ್ಲರಿಗೋಸ್ಕರ ತನ್ನನ್ನೇ ದೇವರಿಗೆ ಸುವಾಸನೆಯಾದ ಕಾಣಿಕೆಯಾಗಿಯೂ, \f + \fr 5:2 \ft ಇಬ್ರಿ. 7:27; 9:14; 10:10, 12:\f*ಯಜ್ಞವಾಗಿಯೂ ಸಮರ್ಪಿಸಿಕೊಂಡ ಪ್ರಕಾರ \f + \fr 5:2 \ft ರೋಮಾ. 14:15; ಕೊಲೊ 3:14; ಯೋಹಾ 13:34:\f*ನೀವೂ ಪ್ರೀತಿಯಲ್ಲಿ ನಡೆದುಕೊಳ್ಳಿರಿ.
\p
\v 3 \f + \fr 5:3 \ft 1 ಕೊರಿ 6:9, 18; ಗಲಾ. 5:19:\f*ಜಾರತ್ವ ಮತ್ತು ಯಾವ ವಿಧವಾದ ಅಶುದ್ಧತ್ವ ಅಥವಾ ದ್ರವ್ಯಾಶೆ \f + \fr 5:3 \ft ವ. 12 ನೋಡಿರಿ. \f*ಇವುಗಳ ಸುದ್ದಿಯಾದರೂ ನಿಮ್ಮಲ್ಲಿ ಇರಬಾರದು, ಇವುಗಳಿಗೆ ದೂರವಾಗಿರುವುದೇ ದೇವಜನರಿಗೆ ಯೋಗ್ಯವಾದದ್ದು.
\v 4 \f + \fr 5:4 \ft ಎಫೆ  4:29:\f*ಹೊಲಸು ಮಾತು, ಹುಚ್ಚು ಮಾತು, ಕುಚೋದ್ಯ ಇವು ಬೇಡ. ಇವು ಅಯುಕ್ತವಾಗಿವೆ. ಆದರೆ ಇವುಗಳಿಗೆ ಪ್ರತಿಯಾಗಿ \f + \fr 5:4 \ft ವ. 20 ನೋಡಿರಿ. \f*ದೇವರಿಗೆ ಕೃತಜ್ಞತಾಸ್ತುತಿಮಾಡಿರಿ.
\v 5 \f + \fr 5:5 \ft 1 ಕೊರಿ 6:9:\f*ಜಾರನಿಗಾಗಲಿ, ದುರಾಚಾರಿಗಾಗಲಿ, \f + \fr 5:5 \ft ಕೊಲೊ 3:5:\f*ವಿಗ್ರಹಾರಾಧಕನಾಗಿರುವ ಲೋಭಿಗಾಗಲಿ ಕ್ರಿಸ್ತನ ಮತ್ತು ದೇವರ ರಾಜ್ಯದಲ್ಲಿ ಬಾಧ್ಯತೆ ಇಲ್ಲವೆಂದು ನಿಮಗೆ ನಿಶ್ಚಯವಾಗಿ ತಿಳಿದಿರಲಿ.
\v 6 \f + \fr 5:6 \ft ಕೊಲೊ 2:8:\f*ಹುರುಳಿಲ್ಲದ ಮಾತುಗಳಿಂದ ಯಾರು ನಿಮ್ಮನ್ನು ವಂಚಿಸದಿರಲಿ, \f + \fr 5:6 \ft ಕೊಲೊ 3:6; ರೋಮಾ. 1:18:\f*ಇಂಥ ಕೃತ್ಯಗಳ ನಿಮಿತ್ತ ದೇವರ ಕೋಪವು ಆತನಿಗೆ ಅವಿಧೇಯರಾಗಿರುವವರ ಮೇಲೆ ಬರುತ್ತದೆ.
\v 7 ಆದುದರಿಂದ ನೀವು ಅವರೊಂದಿಗೆ ಪಾಲುಗಾರರಾಗಿರಬೇಡಿರಿ.
\p
\v 8 ಏಕೆಂದರೆ \f + \fr 5:8 \ft ಎಫೆ  2:1, 2; ಅ. ಕೃ. 26:18:\f*ನೀವು ಹಿಂದಿನ ಕಾಲದಲ್ಲಿ ಕತ್ತಲೆಯಾಗಿದ್ದಿರಿ, ಆದರೆ ಈಗ ನೀವು ಕರ್ತನಲ್ಲಿದ್ದು ಬೆಳಕಾಗಿದ್ದೀರಿ. \f + \fr 5:8 \ft ಯೆಶಾ 2:5; ಯೋಹಾ 12:35,36:\f*ಬೆಳಕಿನವರಂತೆ ನಡೆದುಕೊಳ್ಳಿರಿ.
\v 9 \f + \fr 5:9 \ft ಗಲಾ. 5:22:\f*ಬೆಳಕಿನ ಫಲವು ಉಪಕಾರದಲ್ಲಿಯೂ ನೀತಿಯಲ್ಲಿಯೂ ಸತ್ಯದಲ್ಲಿಯೂ ಕಾಣಿಸಿಕೊಳ್ಳುತ್ತದೆ.
\v 10 \f + \fr 5:10 \ft ರೋಮಾ. 12:2:\f*ಕರ್ತನಿಗೆ ಮೆಚ್ಚಿಕೆಯಾದದ್ದು ಏನೆಂಬುದನ್ನು ಪರಿಶೋಧಿಸಿ ತಿಳಿದುಕೊಳ್ಳಿರಿ.
\v 11 ನಿಷ್ಪ್ರಯೋಜಕವಾದ \f + \fr 5:11 \ft ರೋಮಾ. 13:12; 6:21:\f*ಕತ್ತಲೆಯ ಕೃತ್ಯಗಳಲ್ಲಿ ಪಾಲುಗಾರರಾಗಿರದೆ ಅವುಗಳನ್ನು ಬಯಲಿಗೆಳೆದು ಖಂಡಿಸಿರಿ.
\v 12 \f + \fr 5:12 \ft ವ. 3:\f*ಆ ಜನರು ರಹಸ್ಯವಾಗಿ ನಡಿಸುವ ಕೆಲಸಗಳನ್ನು ಕುರಿತು ಹೇಳುವುದಕ್ಕೂ ಅವಮಾನಕರವಾಗಿದೆ.
\v 13 \f + \fr 5:13 \ft ಯೋಹಾ 3:20, 21; ಎಫೆ  5:9:\f*ಬೆಳಕಿನಿಂದ ಎಲ್ಲಾ ಕೃತ್ಯಗಳ ನಿಜಗುಣ ಬಹಿರಂಗವಾಗುತ್ತದೆ. ಯಾಕೆಂದರೆ ಎಲ್ಲಾವನ್ನೂ \f + \fr 5:13 \ft ಅಥವಾ, ಪ್ರಕಟವಾಗುವಂತದೆಲ್ಲವೂ ಬೆಳಕೇ. \f*ಬಹಿರಂಗಪಡಿಸುವಂಥದ್ದು ಬೆಳಕೇ.
\q2
\v 14 ಆದ್ದರಿಂದ,
\q2 \f + \fr 5:14 \ft ಯೆಶಾ 51:17; 52:1; 60. 1; ಮಲಾ. 4:2; ರೋಮಾ. 13:11:\f*“ನಿದ್ರೆ ಮಾಡುವವನೇ, ಎಚ್ಚರವಾಗು!
\q2 \f + \fr 5:14 \ft ಯೆಶಾ 26:19:\f*ಸತ್ತವರನ್ನು ಬಿಟ್ಟು ಏಳು!
\q2 ಆಗ \f + \fr 5:14 \ft ಲೂಕ 1:78, 79:\f*ಕ್ರಿಸ್ತನು ನಿನ್ನಲ್ಲಿ ಪ್ರಕಾಶಿಸುವನು” ಎಂದು ಹೇಳಿಯದೆಯಲ್ಲಾ.
\p
\v 15 \f + \fr 5:15 \ft ಕೊಲೊ 4:5:\f*ಆದಕಾರಣ ನೀವು ನಡೆದುಕೊಳ್ಳುವ ರೀತಿಯನ್ನು ಕುರಿತು ಚೆನ್ನಾಗಿ ನೋಡಿಕೊಳ್ಳಿರಿ. ಅಜ್ಞಾನಿಗಳಾಗಿರದೆ ಜ್ಞಾನವಂತರಾಗಿರಿ.
\v 16 ಈ ದಿನಗಳು ಕೆಡುಕಿನಿಂದ ಕೂಡಿದವುಗಳಾಗಿರುವುದ್ದರಿಂದ \f + \fr 5:16 \ft ಕೊಲೊ 4:5:\f*ಕಾಲವನ್ನು ಸದುಪಯೋಗಪಡಿಸಿಕೊಳ್ಳಿರಿ.
\v 17 ಮತ್ತು ಬುದ್ಧಿಹೀನರಾಗಿ ನಡೆಯದೆ \f + \fr 5:17 \ft ರೋಮಾ. 12:2; 1 ಥೆಸ. 4:3; 5:18:\f*ಕರ್ತನ ಚಿತ್ತವೇನೆಂಬುದನ್ನು ತಿಳಿದುಕೊಳ್ಳಿರಿ.
\v 18 \f + \fr 5:18 \ft ಜ್ಞಾ. 20:1; 23:20,21; 1 ಕೊರಿ 5:11:\f*ಮದ್ಯಪಾನ ಮಾಡಿ ಮತ್ತರಾಗಬೇಡಿರಿ. ಅದರಿಂದ ಪಟಿಂಗತನವು ಹುಟ್ಟುತ್ತದೆ. ಆದರೆ \f + \fr 5:18 \ft ಲೂಕ 1:15:\f*ಪವಿತ್ರಾತ್ಮಭರಿತರಾಗಿದ್ದು,
\v 19 \f + \fr 5:19 \ft ಅ. ಕೃ. 16:25; ಕೊಲೊ 3 16; ಯಾಕೋಬ 5:13; 1 ಕೊರಿ 14:26:\f*ಕೀರ್ತನೆಗಳಿಂದಲೂ, ಸ್ತುತಿಪದಗಳಿಂದಲೂ, ಆತ್ಮೀಕ ಹಾಡುಗಳಿಂದಲೂ ಒಬ್ಬರಿಗೊಬ್ಬರು ಮಾತನಾಡಿಕೊಳ್ಳುತ್ತಾ ನಿಮ್ಮ ಹೃದಯಗಳಲ್ಲಿ ಕರ್ತನನ್ನು ಹಾಡಿ ಕೊಂಡಾಡಿರಿ.
\v 20 ಯಾವಾಗಲೂ ಎಲ್ಲಾ ಕಾರ್ಯಗಳಿಗಾಗಿ \f + \fr 5:20 \ft ಇಬ್ರಿ. 13:15; ಕೊಲೊ 3:17:\f*ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿ ತಂದೆಯಾದ ದೇವರಿಗೆ ಸ್ತೋತ್ರವನ್ನು ಮಾಡಿರಿ.
\v 21 ಕ್ರಿಸ್ತನಿಗೆ ಭಯಪಡುವವರಾಗಿದ್ದು, \f + \fr 5:21 \ft ಫಿಲಿ. 2:3:\f*ಒಬ್ಬರಿಗೊಬ್ಬರು ವಿನಯವುಳ್ಳವರಾಗಿ ನಡೆದುಕೊಳ್ಳಿರಿ.
\s ಗಂಡಹೆಂಡತಿಯರು
\r ಕೊಲೊ 3:18-4:1
\p
\v 22 \f + \fr 5:22 \ft ಎಫೆ  5:22-6 9; ಕೊಲೊ 3:18, 4:1.\f*ಸತಿಯರೇ, ನೀವು \f + \fr 5:22 \ft ಎಫೆ  6:5:\f*ಕರ್ತನಿಗೆ ಹೇಗೋ ಹಾಗೆಯೇ \f + \fr 5:22 \ft ಆದಿ 3:16:\f*ನಿಮ್ಮ ಗಂಡಂದಿರಿಗೆ ಅಧೀನರಾಗಿರಿ.
\v 23 \f + \fr 5:23 \ft ಎಫೆ  1:22, 23:\f*ಕ್ರಿಸ್ತನು ಸಭೆಗೆ ತಲೆಯಾಗಿರುವ ಪ್ರಕಾರವೇ \f + \fr 5:23 \ft 1 ಕೊರಿ 11:3:\f*ಗಂಡನು ಹೆಂಡತಿಗೆ ತಲೆಯಾಗಿದ್ದಾನೆ. \f + \fr 5:23 \ft 1 ಕೊರಿ 6:13:\f*ಕ್ರಿಸ್ತನು ತಾನೇ ಸಭೆಯೆಂಬ ದೇಹಕ್ಕೆ ರಕ್ಷಕನಾಗಿದ್ದಾನೆ.
\v 24 ಸಭೆಯು ಕ್ರಿಸ್ತನಿಗೆ ಹೇಗೆ ಅಧೀನವಾಗಿದೆಯೋ ಹಾಗೆಯೇ ಸ್ತ್ರೀಯರು ತಮ್ಮ ಗಂಡಂದಿರಿಗೆ ಎಲ್ಲಾ ವಿಷಯಗಳಲ್ಲಿ ಅಧೀನರಾಗಿರಬೇಕು.
\p
\v 25 ಪತಿಯರೇ, ಕ್ರಿಸ್ತನು ಸಭೆಯನ್ನು ಪ್ರೀತಿಸಿದ ಪ್ರಕಾರವೇ \f + \fr 5:25 \ft ಎಫೆ  5:28, 33; ಕೊಲೊ 3:19; 1 ಪೇತ್ರ 3:7:\f*ನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ.
\v 26 ಆತನು ಅದನ್ನು ಪಾವನಗೊಳಿಸುವುದಕ್ಕಾಗಿ \f + \fr 5:26 \ft ವ. 2 ನೋಡಿರಿ. \f*ತನ್ನನ್ನು ತಾನೇ ಒಪ್ಪಿಸಿಕೊಟ್ಟನು.
\v 27 ಅದನ್ನು \f + \fr 5:27 \ft ಗೀತೆ. 4:7:\f*ಕಳಂಕ ಸುಕ್ಕು ಮುಂತಾದದ್ದೊಂದೂ ಇಲ್ಲದಂತೆ ಪರಿಶುದ್ಧವೂ, ನಿರ್ದೋಷವೂ, ಮಹಿಮೆಯುಳ್ಳದ್ದೂ ಆಗಿರುವ ಸಭೆಯನ್ನಾಗಿ \f + \fr 5:27 \ft 2 ಕೊರಿ 11:2; ಎಫೆ  1:4:\f*ತನ್ನೆದುರಿನಲ್ಲಿ ನಿಲ್ಲಿಸಿಕೊಳ್ಳಬೇಕೆಂದು \f + \fr 5:27 \ft ಯೋಹಾ 15:3:\f*ವಾಕ್ಯೋಪದೇಶ ಸಹಿತವಾದ \f + \fr 5:27 \ft ತೀತ. 3:5; ಪ್ರಕ 7:14:\f*ಜಲಸ್ನಾನವನ್ನು ಮಾಡಿಸಿ ಶುದ್ಧಿಮಾಡಿದನು.
\v 28 ಹಾಗೆಯೇ \f + \fr 5:28 \ft ಎಫೆ  5:25, 33:\f*ಗಂಡದಿರು ಸಹ ತಮ್ಮ ಸ್ವಂತ ಶರೀರವನ್ನು ಪ್ರೀತಿಸಿಕೊಳ್ಳುವ ಪ್ರಕಾರವೇ ತಮ್ಮ ಹೆಂಡತಿಯರನ್ನು ಪ್ರೀತಿಸುವ ಹಂಗಿನವರಾಗಿದ್ದಾರೆ. ತನ್ನ ಹೆಂಡತಿಯನ್ನು ಪ್ರೀತಿಸುವವನು ತನ್ನನ್ನೇ ಪ್ರೀತಿಸಿಕೊಳ್ಳುವವನಾಗಿದ್ದಾನೆ.
\v 29 ಯಾರೂ ಎಂದೂ ಸ್ವಂತ ಶರೀರವನ್ನು ಹಗೆಮಾಡಿದ್ದಿಲ್ಲವಲ್ಲ, ಎಲ್ಲರೂ ತಮ್ಮ ಶರೀರಗಳನ್ನು ಪೋಷಿಸಿ ಪಾಲನೆ ಮಾಡುತ್ತಾರಷ್ಟೇ.
\v 30 \f + \fr 5:30 \ft ಆದಿ 2:23; 1 ಕೊರಿ 6:15:\f*ಸಭೆಯೆಂಬ ದೇಹಕ್ಕೆ ನಾವು ಅಂಗಗಳಾಗಿದ್ದೇವೆ ಸಭೆಯೆಂಬ ಈ ದೇಹವನ್ನು ಕ್ರಿಸ್ತನು ಹಾಗೆಯೇ ಪೋಷಿಸಿ ಪಾಲನೆ ಮಾಡುತ್ತಾ ಬಂದಿದ್ದಾನೆ.
\v 31 “ಈ ಕಾರಣದಿಂದ \f + \fr 5:31 \ft ಆದಿ 2, 24; ಮತ್ತಾ 19:5; ಮಾರ್ಕ 10, 7, 8; 1 ಕೊರಿ 6:16:\f*ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು, ಅವರಿಬ್ಬರೂ ಒಂದೇ ಶರೀರವಾಗಿರುವರು.” ಎಂದು ಬರೆದದೆಯಲ್ಲಾ.
\v 32 ನಾನು ಕ್ರಿಸ್ತನಿಗೂ ಸಭೆಗೂ ಇರುವ ಸಂಬಂಧವನ್ನು ಕುರಿತು ಮಾತನಾಡುತ್ತಿದ್ದೇನೆ, ಇದುವರೆಗೆ ಗುಪ್ತವಾಗಿದ್ದ ಈ ಮರ್ಮವು ಬಹು ಗಂಭೀರವಾದದ್ದು.
\v 33 ಆದರೆ \f + \fr 5:33 \ft ಎಫೆ  5:25, 28:\f*ನಿಮ್ಮಲ್ಲಿ ಪ್ರತಿ ಪುರುಷನು ತನ್ನನ್ನು ಪ್ರೀತಿಸಿಕೊಳ್ಳುವಂತೆಯೇ ತನ್ನ ಹೆಂಡತಿಯನ್ನೂ ಪ್ರೀತಿಸಬೇಕು. \f + \fr 5:33 \ft 1 ಪೇತ್ರ. 3:2, 6:\f*ಪ್ರತಿ ಹೆಂಡತಿಯೂ ತನ್ನ ಗಂಡನಿಗೆ ಗೌರವದಿಂದ ನಡೆದುಕೊಳ್ಳಬೇಕು.
\c 6
\s ತಂದೆತಾಯಿಗಳೂ ಮಕ್ಕಳೂ
\p
\v 1 \f + \fr 6:1 \ft ಜ್ಞಾ. 1:8; 6:20; 23:22; ಕೊಲೊ 3:20:\f*ಮಕ್ಕಳೇ, ನೀವು ಕರ್ತನಲ್ಲಿರುವವರಿಗೆ ತಕ್ಕ ಹಾಗೆ ನಿಮ್ಮ ತಂದೆತಾಯಿಗಳ ವಿಧೇಯರಾಗಿರಿ. ಇದು ನ್ಯಾಯವಾದದ್ದು.
\v 2 ವಾಗ್ದಾನಸಹಿತವಾದ ಮೊದಲನೆಯ ಆಜ್ಞೆಯನ್ನು ಕೇಳಿರಿ, \f + \fr 6:2 \ft ವಿಮೋ 20:12; ಧರ್ಮೋ  5:16:\f*“ನಿನ್ನ ತಂದೆತಾಯಿಗಳನ್ನು ಗೌರವಿಸಬೇಕು,
\v 3 ಗೌರವಿಸಿದರೆ ನಿನಗೆ ಶುಭವಾಗುವುದು, ನೀನು ಭೂಮಿಯ ಮೇಲೆ ಬಹುಕಾಲ ಬದುಕುವಿ.”
\p
\v 4 \f + \fr 6:4 \ft ಆದಿ 18:19; ಧರ್ಮೋ  4:9; 6:7; 11:19; ಜ್ಞಾ. 19:18; 22:6; 29:17 ಇತ್ಯಾದಿ. \f*ತಂದೆಗಳೇ, ನಿಮ್ಮ ಮಕ್ಕಳಿಗೆ ಕೋಪವನ್ನೆಬ್ಬಿಸದೆ, ಕರ್ತನಿಗೆ ಮೆಚ್ಚಿಗೆಯಾಗುವ ರೀತಿಯಲ್ಲಿ ಅವರನ್ನು ಶಿಸ್ತಿನಲ್ಲಿಯೂ ಉಪದೇಶದಲ್ಲಿಯೂ ಸಾಕಿ ಸಲಹಿರಿ.
\s ಯಜಮಾನರೂ ದಾಸರೂ
\p
\v 5 \f + \fr 6:5 \ft ಅಥವಾ. ಗುಲಾಮರೇ, ದಾಸರೇ. ಕೊಲೊ 3:22; ತಿಮೊ. 6:1; 1 ಪೇತ್ರ. 2:18:\f*ದಾಸರೇ, ಈ ಲೋಕದಲ್ಲಿ ನಿಮಗೆ ಯಜಮಾನರಾಗಿರುವವರಿಗೆ \f + \fr 6:5 \ft ಎಫೆ  5:22:\f*ಕ್ರಿಸ್ತನಿಗೆ ವಿಧೇಯರಾಗುವ ಹಾಗೆಯೇ ಮನೋಭೀತಿಯಿಂದ ನಡುಗುವವರಾಗಿಯೂ ಸರಳಹೃದಯರಾಗಿಯೂ ವಿಧೇಯರಾಗಿರಿ.
\v 6 \f + \fr 6:6 \ft ಗಲಾ. 1:10.\f*ಮನುಷ್ಯರನ್ನು ಮೆಚ್ಚಿಸುವವರಂತೆ ತೋರಿಕೆಗೆ ಯಜಮಾನರು ನೋಡುತ್ತಿರುವಾಗ ಮಾತ್ರ ಸೇವೆಮಾಡದೇ, ಕ್ರಿಸ್ತನ ದಾಸರಿಗೆ ತಕ್ಕ ಹಾಗೆ ದೇವರ ಚಿತ್ತವನ್ನು ಮನಃಪೂರ್ವಕವಾಗಿ ನಡಿಸಿರಿ.
\v 7 ಮನುಷ್ಯರಿಗೋಸ್ಕರವಲ್ಲ, ಕರ್ತನಿಗೋಸ್ಕರ ಸೇವೆಮಾಡುತ್ತೇವೆಂದು ಮನಃಪೂರ್ವಕವಾಗಿ ಸೇವೆಮಾಡಿರಿ.
\v 8 ಯಾಕೆಂದರೆ \f + \fr 6:8 \ft ಗಲಾ. 3:28. ಕೊಲೊ 3:11.\f*ಒಬ್ಬನು ದಾಸನಾಗಲಿ ಸ್ವತಂತ್ರನಾಗಲಿ \f + \fr 6:8 \ft ಕೀರ್ತ 62:12.\f*ತಾನು ಯಾವ ಸತ್ಕಾರ್ಯವನ್ನು ಮಾಡುತ್ತಾನೋ ಅದರ ಪ್ರತಿಫಲವನ್ನು ಕರ್ತನಿಂದ ಹೊಂದುವನೆಂಬುದನ್ನು ನೀವು ತಿಳಿದವರಾಗಿದ್ದೀರಿ.
\p
\v 9 ಯಜಮಾನರೇ, ನಿಮ್ಮ ದಾಸರ ವಿಷಯದಲ್ಲಿ ಅದೇ ರೀತಿಯಾಗಿ ನಡೆದುಕೊಳ್ಳಿರಿ. \f + \fr 6:9 \ft ಯೋಹಾ 13:13. ಯೋಬ. 31:13-15.\f*ಪರಲೋಕದಲ್ಲಿ ನಿಮಗೂ ಅವರಿಗೂ ಯಜಮಾನನಾಗಿರುವಾತನು ಇದ್ದಾನೆಂತಲೂ \f + \fr 6:9 \ft ರೋಮಾ. 2:11; ಗಲಾ. 2:6:\f*ಆತನಲ್ಲಿ ಪಕ್ಷಪಾತವಿಲ್ಲವೆಂತಲೂ ತಿಳಿದು ನಿಮ್ಮ ದಾಸರನ್ನು ಬೆದರಿಸುವ ಪದ್ಧತಿಯನ್ನು ಬಿಟ್ಟುಬಿಡಿರಿ.
\s ದೇವರ ಸರ್ವಾಯುಧಗಳು
\p
\v 10 ಕಡೆಯದಾಗಿ, ನೀವು \f + \fr 6:10 \ft 2 ತಿಮೊ. 2:1; 1 ಯೊಹಾ. 2:14; ಎಫೆ  3:16:\f*ಕರ್ತನಲ್ಲಿಯೂ \f + \fr 6:10 \ft ಎಫೆ  1:19:\f*ಆತನ ಅತ್ಯಧಿಕವಾದ ಶಕ್ತಿಯಲ್ಲಿಯೂ ಬಲಗೊಳ್ಳಿರಿ.
\v 11 ಸೈತಾನನ ತಂತ್ರೋಪಾಯಗಳನ್ನು ನೀವು ಎದುರಿಸಿ ನಿಲ್ಲುವುದಕ್ಕೆ ಶಕ್ತರಾಗುವಂತೆ ದೇವರು ದಯಪಾಲಿಸುವ \f + \fr 6:11 \ft ಎಫೆ  6:13; 2 ಕೊರಿ 10:4:\f*ಸರ್ವಾಯುಧಗಳನ್ನು \f + \fr 6:11 \ft ವ. 14. ರೋಮಾ. 13:12:\f*ಧರಿಸಿಕೊಳ್ಳಿರಿ.
\v 12 ನಮಗೆ ಹೋರಾಟವಿರುವುದು ಮನುಷ್ಯಮಾತ್ರದವರ ಸಂಗಡವಲ್ಲ. \f + \fr 6:12 \ft ಎಫೆ  1:21:\f*ರಾಜತ್ವಗಳ ಮೇಲೆಯೂ, ಅಧಿಕಾರಿಗಳ ಮೇಲೆಯೂ, \f + \fr 6:12 \ft ಲೂಕ 22:53; ಕೊಲೊ 1:13:\f*ಈ ಅಂಧಕಾರದ \f + \fr 6:12 \ft ಎಫೆ  2:2:\f*ಲೋಕಾಧಿಪತಿಗಳ ಮೇಲೆಯೂ, \f + \fr 6:12 \ft ಎಫೆ  3:10:\f*ಆಕಾಶ ಮಂಡಲಗಳಲ್ಲಿರುವ ದುರಾತ್ಮಗಳ ಸೇನೆಯ ಮೇಲೆಯೂ ನಾವು ಹೋರಾಡುವವರಾಗಿದ್ದೇವೆ.
\v 13 ಆದ್ದರಿಂದ ಆ ದುಷ್ಟ ದಿನದಲ್ಲಿ ವೈರಿಗಳನ್ನು ಎದುರಿಸುವುದಕ್ಕೂ ಮಾಡಬೇಕಾದದ್ದೆಲ್ಲವನ್ನು ಮಾಡಿ ದೃಢವಾಗಿ ನಿಲ್ಲುವುದಕ್ಕೂ ಶಕ್ತರಾಗುವಂತೆ ದೇವರು ದಯಪಾಲಿಸುವ ಸರ್ವಾಯುಧಗಳನ್ನು ಧರಿಸಿಕೊಳ್ಳಿರಿ.
\v 14 \f + \fr 6:14 \ft 1 ಪೇತ್ರ. 1:13; ಯೆಶಾ 11:5\f*ಸತ್ಯವೆಂಬ ನಡುಕಟ್ಟನ್ನು ಸೊಂಟಕ್ಕೆ ಕಟ್ಟಿಕೊಂಡು, \f + \fr 6:14 \ft ಯೆಶಾ 59:17; 1 ಥೆಸ. 5:8; ಯೆಶಾ 61:10; 2 ಕೊರಿ 6:7:\f*ನೀತಿಯೆಂಬ ಎದೆಕವಚವನ್ನು ಧರಿಸಿಕೊಂಡು,
\v 15 \f + \fr 6:15 \ft ಯೆಶಾ 52:7; ರೋಮಾ. 10:15:\f*ಸಮಾಧಾನದ ಸುವಾರ್ತೆಯನ್ನು ಪ್ರಚುರಪಡಿಸುವುದಕ್ಕೆ ಸಿದ್ಧ ಮನಸ್ಸೆಂಬ ಕೆರಗಳನ್ನು ಮೆಟ್ಟಿಕೊಂಡು ನಿಲ್ಲಿರಿ.
\v 16 ಎಲ್ಲಾದಕ್ಕಿಂತ ಹೆಚ್ಚಾಗಿ \f + \fr 6:16 \ft 1 ಯೊಹಾ. 5:4:\f*ನಂಬಿಕೆಯೆಂಬ ಗುರಾಣಿಯನ್ನು ಹಿಡಿದುಕೊಳ್ಳಿರಿ. ಅದರಿಂದ ನೀವು \f + \fr 6:16 \ft ಮತ್ತಾ 13:19; 1 ಯೊಹಾ. 2:14:\f*ಕೆಡುಕನ ಅಗ್ನಿಬಾಣಗಳನ್ನೆಲ್ಲಾ ನಂದಿಸುವುದಕ್ಕೆ ಶಕ್ತರಾಗುವಿರಿ.
\v 17 ಇದಲ್ಲದೆ \f + \fr 6:17 \ft ಯೆಶಾ 59:17; 1 ಥೆಸ. 5:8:\f*ರಕ್ಷಣೆಯೆಂಬ ಶಿರಸ್ತ್ರಾಣವನ್ನು ಇಟ್ಟುಕೊಂಡು \f + \fr 6:17 \ft ಇಬ್ರಿ. 4:12; ಯೆಶಾ 11:4; 49:2:\f*ಪವಿತ್ರಾತ್ಮನು ಕೊಡುವ ದೇವರ ವಾಕ್ಯವೆಂಬ ಕತ್ತಿಯನ್ನು ಹಿಡಿದುಕೊಳ್ಳಿರಿ.
\v 18 ನೀವು \f + \fr 6:18 \ft ಯೂದ. 20:\f*ಪವಿತ್ರಾತ್ಮಪ್ರೇರಿತರಾಗಿ \f + \fr 6:18 \ft ಲೂಕ 18:1:\f*ಎಲ್ಲಾ ಸಮಯಗಳಲ್ಲಿ \f + \fr 6:18 \ft ಕೊಲೊ 4:2-4:\f*ಸಕಲವಿಧವಾದ ಪ್ರಾರ್ಥನೆಯಿಂದಲೂ ವಿಜ್ಞಾಪನೆಗಳಿಂದಲೂ ದೇವರನ್ನು ಪ್ರಾರ್ಥಿಸಿರಿ. ಇದರಲ್ಲಿ ಪೂರ್ಣ ಸ್ಥಿರಚಿತ್ತರಾಗಿದ್ದು ದೇವಜನರೆಲ್ಲರ ವಿಷಯದಲ್ಲಿ \f + \fr 6:18 \ft 1 ತಿಮೊ. 2:1:\f*ವಿಜ್ಞಾಪನೆಮಾಡುತ್ತಾ \f + \fr 6:18 \ft ಮಾರ್ಕ 13:33:\f*ಎಚ್ಚರವಾಗಿರಿ. ನನಗಾಗಿಯೂ ಪ್ರಾರ್ಥನೆ ಮಾಡಿರಿ.
\v 19 ನಾನು ಮಾತನಾಡಲು ಬಾಯಿ ತೆರೆಯುವಾಗ ಪೂರ್ವಕಾಲದಲ್ಲಿ ಗುಪ್ತವಾಗಿದ್ದ \f + \fr 6:19 \ft ಎಫೆ  4:3.\f*ಸುವಾರ್ತಾಸತ್ಯಗಳನ್ನು ಭಯವಿಲ್ಲದೆ ತಿಳಿಸುವುದಕ್ಕೆ ಬೇಕಾದ ಮಾತುಗಳನ್ನು ದೇವರು \f + \fr 6:19 \ft ಕೊಲೊ 4:3; 1 ಥೆಸ. 5:25; 2 ಥೆಸ. 3:1.\f*ನನಗೆ ಅನುಗ್ರಹಿಸಬೇಕೆಂದು ಪ್ರಾರ್ಥಿಸಿರಿ.
\v 20 ಆ ಸುವಾರ್ತೆಯ ನಿಮಿತ್ತವಾಗಿ \f + \fr 6:20 \ft 2 ಕೊರಿ 5:20.\f*ರಾಯಭಾರಿಯಾದ ನಾನು ಸೆರೆಮನೆಯಲ್ಲಿ ಬಿದ್ದಿದ್ದೇನಲ್ಲಾ. ಅದರ ವಿಷಯದಲ್ಲಿ ನಾನು ಮಾತನಾಡಬೇಕಾದ \f + \fr 6:20 \ft ಅ. ಕೃ. 28:20.\f*ಹಾಗೆಯೇ ಧೈರ್ಯವಾಗಿ ನಾನು ಮಾತನಾಡುವಂತೆ ನನಗಾಗಿ ಬೇಡಿಕೊಳ್ಳಿರಿ.
\s ಕಡೆ ಮಾತುಗಳು
\p
\v 21 \f + \fr 6:21 \ft ಕೊಲೊ 4:7-9:\f*ನನ್ನ ವಿಷಯಗಳು ನನ್ನ ಕೆಲಸಕಾರ್ಯಗಳು ನಿಮಗೆ ಗೊತ್ತಾಗುವ ಹಾಗೆ ಪ್ರಿಯ ಸಹೋದರನೂ ಕರ್ತನಲ್ಲಿ ನಂಬಿಗಸ್ತ ಸೇವಕನಾಗಿರುವ \f + \fr 6:21 \ft ಅ. ಕೃ. 20:4. 2 ತಿಮೊ. 4:12; ತೀತ. 3:12:\f*ತುಖಿಕನು ನಿಮಗೆ ಎಲ್ಲವನ್ನೂ ತಿಳಿಸಿಕೊಡುವನು.
\v 22 ನೀವು ನಮ್ಮ ಸಂಗತಿಗಳನ್ನು ತಿಳಿದುಕೊಳ್ಳುವಂತೆಯೂ, ಅವನು ನಿಮ್ಮ ಹೃದಯಗಳನ್ನು ಸಂತೈಸುವಂತೆಯೂ ಅವನನ್ನು ನಿಮ್ಮ ಬಳಿಗೆ ಕಳುಹಿಸಿದ್ದೇನೆ.
\p
\v 23 ತಂದೆಯಾದ ದೇವರಿಂದಲೂ ಕರ್ತನಾದ ಯೇಸು ಕ್ರಿಸ್ತನಿಂದಲೂ \f + \fr 6:23 \ft ಗಲಾ. 6:16; ಥೆಸ. 3:16:\f*ಶಾಂತಿಯೂ, ನಂಬಿಕೆಯಿಂದ ಕೂಡಿದ ಪ್ರೀತಿಯೂ ಸಹೋದರರೆಲ್ಲರಿಗೆ ಉಂಟಾಗಲಿ.
\v 24 ನಮ್ಮ ಕರ್ತನಾದ ಯೇಸು ಕ್ರಿಸ್ತನನ್ನು ನಿರಂತರವಾಗಿ \f + \fr 6:24 \ft 1 ಕೊರಿ 16:22\f*ಪ್ರೀತಿಸುವವರೆಲ್ಲರ ಮೇಲೆ ದೇವರ ಕೃಪೆಯು ಇರಲಿ.