text
stringlengths
165
185k
timestamp
stringlengths
19
19
url
stringlengths
16
3.21k
source
stringclasses
1 value
ಇಟಾಹ್, ಏಪ್ರಿಲ್ 17: ಜಮ್ಮು-ಕಾಶ್ಮೀರದ ಕತುವಾದಲ್ಲಿ ಎಂಟು ವರ್ಷದ ಅಪ್ರಾಪ್ತ ಬಾಲಕಿ ಮೇಲೆ ನಡೆದ ಅತ್ಯಾಚಾರ ಪ್ರಕರಣದ ಕುರಿತು ಇಡೀ ದೇಶವೂ ಮರುಗುತ್ತಿರುವಾಗ ಉತ್ತರ ಪ್ರದೇಶದಲ್ಲೂ ಇಂಥದೇ ಘಟನೆ ನಡೆದಿರುವುದು ಆತಂಕ ಸೃಷ್ಟಿಸಿದೆ. ಎಂಟು ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ 18 ವರ್ಷದ ಯುವಕನೊಬ್ಬ ಅತ್ಯಾಚಾರ ನಡೆಸಿದ ಘಟನೆ ನಿನ್ನೆ(ಏ.16) ರಾತ್ರಿ ಉತ್ತರ ಪ್ರದೇಶದ ಇಟಾಹ್ ಜಿಲ್ಲೆಯಲ್ಲಿ ನಡೆದಿದೆ. ಕುಟುಂಬಸ್ಥರ ಜೊತೆ ಮದುವೆ ಕಾರ್ಯಕ್ರಮವೊಂದಕ್ಕೆ ಬ ಆಲಕಿ ತೆರಳಿದ್ದಳು. ಬಾಲಕಿಯ ತಂದೆ-ತಾಯಿ ಮದುವೆ ಮನೆಯಲ್ಲಿ ಬ್ಯುಸಿಯಾಗಿದ್ದರಿಂದ ಬಾಲಕಿ ಹೊರಗಡೆ ಆಟವಾಡುತ್ತಿದ್ದಳು. ಈ ಸಂದರ್ಭದಲ್ಲಿ ಯುವಕನೊಬ್ಬ ಆಕೆಯನ್ನು ಪಕ್ಕದ ನಿರ್ಮಾಣ ಹಂತದ ಕಟ್ಟಡಕ್ಕೆ ಎಳೆದುಕೊಂದು ಹೋಗಿದ್ದಾನೆ. ಮದುವೆ ಮನೆಯಲ್ಲಿ ಲೌಡ್ ಸ್ಪೀಕರ್ ಹಾಕಿದ್ದರಿಂದ ಮಗು ಕೂಗಿಕೊಂಡಿದ್ದು ಯಾರಿಗೂ ಕೇಳಿಸಿಲ್ಲ. ನಂತರ ಆಕೆಯ ಮೇಲೆ ಅತ್ಯಾಚಾರ ಎಸಗಿ, ಬಾಲಕಿಯನ್ನು ಕೊಲೆಮಾಡಿದ್ದಾನೆ. ರಾತ್ರಿ ಸುಮಾರು 1.30 ರ ಸುಮಾರಿಗೆ ಬಾಲಕಿಯ ಅರೆನಗ್ನ ದೇಹ ಪತ್ತೆಯಾಗಿದ್ದು, ಆಕೆಯ ಶವದ ಪಕ್ಕ ಕುಡಿದು ಮಲಗಿದ್ದ ಸೋನು ಜಾಟವ್ ಎಂಬುವವನ್ನು ಬಂಧಿಸಲಾಗಿದೆ. ಆತನೇ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದು, ದೂರು ದಾಖಲಿಸಲಾಗಿದೆ.
OSCAR-2019
ಚಿಂಚೋಳಿ: ಜೀವ ಕೈಯಲ್ಲಿ ಹಿಡಿದುಕೊಂಡೇ ಇಲ್ಲಿ ವಾಹನ ಚಾಲನೆ ಮಾಡಬೇಕು. ಅತ್ತ ಕಂದರ- ಇತ್ತ ಕೆರೆ. ನಡುವೆ ಕಿರಿದಾದ ರಸ್ತೆಯಲ್ಲಿ ನಿತ್ಯ ಸರ್ಕಸ್. ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ನೆರೆಯ ಆಂಧ್ರದ ಜತೆ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಈ ಹೆದ್ದಾರಿ ಬದಿಗೆ ಇರುವ ತಾಲ್ಲೂಕಿನ ಮಿರಿಯಾಣ ಕೆರೆಯ ದಂಡೆಯ ಮೇಲೆ ಪ್ರಯಾಣಿಸಬೇಕಿದ್ದರೆ ಗುಂಡಿಗೆ ಗಟ್ಟಿ ಇರಲೇಬೇಕು. ಕೆರೆಯ ಕೋಡಿ (ಬಂಡ್) 15 ಅಡಿಗಿಂತಲೂ ಎತ್ತರವಿದೆ, ದಕ್ಷಿಣದಿಂದ ಉತ್ತರಕ್ಕೆ ತೆರಳುವ ಮಾರ್ಗದ ರಸ್ತೆಗೆ ಪೂರ್ವದಲ್ಲಿ 50 ಎಕರೆಯಷ್ಟು ವಿಶಾಲವಾದ ಕೆರೆಯಿದೆ. ಪಶ್ಚಿಮದಲ್ಲಿ ರೈತರ ಜಮೀನುಗಳಿವೆ. ಆದರೆ ಇವು (ಬಂಡ್) ರಸ್ತೆಯ ಮಟ್ಟದಿಂದ ಸುಮಾರು 20 ಅಡಿ ಆಳದಲ್ಲಿವೆ. ಹೀಗಾಗಿ ಕಂದರದಂತೆ ಗೋಚರಿಸುತ್ತದೆ. ಅಕ್ಕಪಕ್ಕದಲ್ಲಿ ಬೆಳೆದುನಿಂತಿರುವ ದೈತ್ಯ ಮರಗಳೂ ಚಾಲಕನ ಕೌಶಲಕ್ಕೆ ಸವಾಲಾಗಿವೆ. ಸುಮಾರು ನಾಲ್ಕು ನೂರರಿಂದ ಐದು ನೂರು ಮೀಟರ್ ಉದ್ದದ ಬಂಡ್ ಮೇಲೆ ಹಾದು ಹೋಗುವ ರಸ್ತೆಯಲ್ಲಿ ವಾಹನಗಳನ್ನು ಓಡಿಸುವುದೆಂದರೆ ಚಾಲಕರಿಗೆ ಹಗ್ಗದ ಮೇಲಿನ ನಡಿಗೆ. ರಾಷ್ಟ್ರೀಯ ಹೆದ್ದಾರಿ-7 ಹಾಗೂ ರಾಷ್ಟ್ರೀಯ ಹೆದ್ದಾರಿ-9ರ ಮಧ್ಯೆ ಸಂಪರ್ಕ ಬೆಸೆಯುವ ಮಹತ್ವದ ರಸ್ತೆಯಾದ ಇದನ್ನು ಆಂಧ್ರ ಗಡಿಯಿಂದ (ಉಮ್ಮರ್ಗಾ ಮಾರ್ಗದ) ಚಿಂಚೋಳಿ ಪಟ್ಟಣದವರೆಗೆ ರಾಷ್ಟ್ರೀಯ ಹೆದ್ದಾರಿ ಉಪ ವಿಭಾಗದ ಅಧಿಕಾರಿಗಳು ಸುಮಾರು 20 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವ ಕಾಮಗಾರಿಯ ಟೆಂಡರ್ ಅಂತಿಮ ಹಂತದಲ್ಲಿದೆ. ಹೈದರಾಬಾದ್- ಮುಂಬಯಿ, ಭಾಲ್ಕಿ- ಶ್ರೀಶೈಲ, ಮೆಹಬೂಬನಗರ- ಚಿಂಚೋಳಿ, ತಾಂಡೂರು- ಚಿಂಚೋಳಿ, ಜೆಡ್‌ಚರ್ಲಾ- ಚಿಂಚೋಳಿ ಮಾರ್ಗದಲ್ಲಿ ಉಭಯ ರಾಜ್ಯಗಳ ಸಾರಿಗೆ ಬಸ್ಸು ಮತ್ತು ಮಿರಿಯಾಣ ಪರ್ಸಿ (ಶಹಾಬಾದ್ ಕಲ್ಲು) ತುಂಬಿದ ಭಾರಿ ವಾಹನಗಳು ನಿರಂತರ ಸಂಚರಿಸುತ್ತವೆ. ಆಂಧ್ರದ ಗಡಿಯಿಂದ ಕೇವಲ ಐನೂರು ಮೀಟರ್ ಅಂತರದಲ್ಲಿರುವ ‘ಮಿರಿಯಾಣ ಕೆರೆ’ ಗೂ ರಕ್ಷಣಾಗೋಡೆಯ ಭಾಗ್ಯ ಬೇಕಿದ್ದರೆ ಒಂದಷ್ಟಾದರೂ ಮಂದಿಯನ್ನು ಬಲಿ ತೆಗೆದುಕೊಳ್ಳಬೇಕು ಎಂದು ಜನ ವ್ಯಂಗ್ಯವಾಗಿ ಹೇಳುತ್ತಾರೆ.
OSCAR-2019
ದುರ್ಗಾ ಪೂಜಾ ಹಿಂದೂ ದೇವತೆ ದುರ್ಗೆಯ ಪೂಜೆಯನ್ನು ಆಚರಿಸುವ ದಕ್ಷಿಣ ಏಷ್ಯಾದಲ್ಲಿನ ಒಂದು ವಾರ್ಷಿಕ ಹಿಂದೂ ಹಬ್ಬ. ಅದು ಮಹಾಲಯ, ಷಷ್ಠಿ, ಮಹಾ ಸಪ್ತಮಿ, ಮಹಾ ಅಷ್ಟಮಿ, ಮಹಾ ನವಮಿ, ಮತ್ತು ವಿಜಯದಶಮಿ ಎಂದು ಆಚರಿಸಲ್ಪಡುವ ಎಲ್ಲ ಆರು ದಿನಗಳನ್ನು ಸೂಚಿಸುತ್ತದೆ. ದುರ್ಗಾ ಪೂಜಾ ಆಚರಣೆಗಳ ದಿನಾಂಕಗಳನ್ನು ಸಾಂಪ್ರದಾಯಿಕ ಹಿಂದೂ ಪಂಚಾಂಗದ ಪ್ರಕಾರ ನಿಗದಿಪಡಿಸಲಾಗುತ್ತದೆ ಮತ್ತು ಹಬ್ಬಕ್ಕೆ ಅನುಗುಣವಾದ ಎರಡುವಾರಗಳನ್ನು ದೇವಿ ಪಕ್ಷವೆಂದು ಕರೆಯಲಾಗುತ್ತದೆ.
OSCAR-2019
ವನ್ಯ ಜೀವಿಗಳು ಹಾಗೂ ಸರಿಸ್ರಪಗಳು ಎಂದರೆ ಒಂದು ರೀತಿಯ ಭಯ. ಅವುಗಳನ್ನು ದೂರಿನಿಂದ ನೋಡುತ್ತಿದ್ದರೆ ಸಾಕು ಒಂದು ಬಗೆಯ ಆತಂಕಗಳು ನಮ್ಮನ್ನು ಆವರಿಸಿ ಬಿಡುತ್ತವೆ. ಇನ್ನು ಅವುಗಳೊಂದಿಗೆ ಕಾಲ ಕಳೆಯುವುದು ಎಂದರೆ ಅದೊಂದು ಕನಸಿನ ಮಾತು. ಅದರಲ್ಲೂ ಹಾವಿನಂತಹ ವಿಷ ಪೂರಿತ ಜೀವಿಗಳು ಒಮ್ಮೆ ಕಡಿದರೆ ಸಾಕು ವ್ಯಕ್ತಿ ಸಾವನ್ನಪ್ಪುವ ಸಾಧ್ಯತೆಗಳೇ ಹೆಚ್ಚು. ಕೆಲವೊಂದು ಜಾತಿಯ ಹಾವುಗಳ ಎಂಜಲು ತಾಗಿದರೂ ದೇಹದ ಭಾಗಗಳು ಕೊಳೆಯಲು ಪ್ರಾರಂಭವಾಗುತ್ತವೆ. ಹಾಗಾಗಿ ಮನುಷ್ಯರು ಆದಷ್ಟು ಇಂತಹ ಪ್ರಾಣಿಗಳಿಂದ ದೂರ ಇರಲು ಬಯಸುತ್ತಾರೆ. ಆದರೆ ಇಲ್ಲೊಂದು ಹಳ್ಳಿಯಿದೆ. ಆ ಹಳ್ಳಿಯ ಜನರೆಲ್ಲಾ ಹಾವುಗಳೊಂದಿಗೆ ಜೀವಿಸುತ್ತಾರೆ. ಹಾವುಗಳು ಅವರ ಮೈಮೇಲೆ ಹರೆದಾಡುತ್ತಾ ಇದ್ದರೂ ಅವರಿಗೆ ಏನೂ ಮಾಡದು. ಚಿಕ್ಕ ಮಕ್ಕಳು ಹಾಗೂ ದೊಡ್ಡವರು ಎನ್ನುವ ಯಾವುದೇ ತಾರತಮ್ಯವಿಲ್ಲ. ಎಲ್ಲರೂ ಹಾವಿನೊಂದಿಗೆ ಸಮಯವನ್ನು ಕಳೆಯುತ್ತಾರೆ. ಈ ವಿಚಾರ ನಂಬಲು ಸ್ವಲ್ಪ ಕಷ್ಟವಾದರೂ ಇದು ನಿಜ. ಹೌದು, ಮಹಾರಾಷ್ಟ್ರದ ಪುಣೆಯ ಸಮೀಪದಲ್ಲಿ ಇರುವ ಶೆಟ್ಟಪಾಲ್ ಹಳ್ಳಿಯ ಜನರು ಹಾವಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದಾರೆ. ಮಹಾರಾಷ್ಟ್ರದಲ್ಲಿ ಹಾವಾಡಿಗರ ಸಂಖ್ಯೆ ಹೆಚ್ಚೆಂದು ಹೇಳಲಾಗುವುದು. ಶುಷ್ಕ ವಾತಾವರಣವನ್ನು ಹೊಂದಿರುವ ಈ ಪ್ರದೇಶದಲ್ಲಿ ಹಾವುಗಳ ಸಂಖ್ಯೆಯು ಅಧಿಕವಾಗಿವೆ. ಇಲ್ಲಿ ವಿವಿಧ ಬಗೆಯ ಹಾವುಗಳು ಓಡಾಡುತ್ತಿರುತ್ತವೆ. ಆ ಹಾವುಗಳನ್ನು ಯಾರು ಏನು ಮಾಡುವುದಿಲ್ಲ. ಜೊತೆಗೆ ಹಾವುಗಳು ಸಹ ಮನುಷ್ಯರಿಗೆ ಯಾವುದೇ ಹಾನಿಯುಂಟುಮಾಡುವುದಿಲ್ಲ. ಇಲ್ಲಿಯ ಜನರು ಹಾವನ್ನು ಮನೆಯೊಳಗೆ ಸ್ವಾಗತಿಸುತ್ತಾರೆ. ಹಾವುಗಳು ಬಹಳಷ್ಟು ಸಮಯ ಮನೆಯೊಳಗೆ ಓಡಾಡಿಕೊಂಡು ಇರುತ್ತವೆ ಎನ್ನುತ್ತಾರೆ. ಶೋಲಾಪುರ ಜಿಲ್ಲೆಯ ಆವೃತ್ತಿಯಲ್ಲಿ ಬರುವ ಈ ಹಳ್ಳಿಯ ಜನರು ನಿತ್ಯವೂ ಹಾವಿಗೆ ಪೂಜೆಯನ್ನು ಸಲ್ಲಿಸುತ್ತಾರೆ. ಈ ಹಳ್ಳಿಯಲ್ಲಿ ಸರಿ ಸುಮಾರು 2500 ಮಂದಿ ಜನಸಂಖ್ಯೆಯನ್ನು ಹೊಂದಿದೆ. ಆದರೆ ಇಲ್ಲಿರುವ ಈ ಪದ್ಧತಿಗಳು ಎಂದಿನಿಂದ ಆರಂಭವಾಗಿದೆ ಎನ್ನುವುದನ್ನು ಯಾರೂ ತಿಳಿದಿಲ್ಲ. ಈ ಹಳ್ಳಿಯಲ್ಲಿ ಹೊಸದಾಗಿ ಮನೆ ಕಟ್ಟುವವರು ಸಹ ಹಾವಿಗಾಗಿ ಮನೆಯಲ್ಲೊಂದು ವಿಶೇಷ ಪೊಟರೆಯನ್ನು ಮಾಡಿರುತ್ತಾರೆ ಎಂದು ಹೇಳಲಾಗುತ್ತದೆ. ಅದು ಹಾವಿಗೆ ವಿಶ್ರಾಂತಿ ಪಡೆಯಲು ಮಾಡುವ ವ್ಯವಸ್ಥೆ ಎನ್ನುತ್ತಾರೆ. ಹಾವಿಗಾಗಿ ಮಾಡಿರುವ ವಿಶೇಷ ಪೊಟರೆಯನ್ನು ದೇವಸ್ಥಾನ ಎಂದು ಸಹ ಕರೆಯುತ್ತಾರೆ. ಇದು ಕೇವಲ ನಾಗರಹಾವಿಗಷ್ಟೇ ಅಲ್ಲ. ಪ್ರಾಣಾಂತಿಕ ಹಾವುಗಳಿಗೂ ಅವಕಾಶ ನೀಡಲಾಗುವುದು. ಎಲ್ಲಾ ಹಾವುಗಳು ಸ್ವತಂತ್ರವಾಗಿ ಓಡಾಡುತ್ತವೆ. ಮಕ್ಕಳು ಹಾವುಗಳನ್ನು ಕಂಡರೆ ಭಯಪಡುವುದಿಲ್ಲ. ಅವುಗಳೊಂದಿಗೂ ಆಡುತ್ತಾರೆ. ಶಾಲೆಯ ಕೊಠಡಿಗಳಲ್ಲೂ ಹಾವುಗಳ ವಾಸವಿರುತ್ತದೆ ಎಂದು ಹೇಳಲಾಗುತ್ತದೆ. ಈ ಹಳ್ಳಿಯಲ್ಲಿ ಸಿಂಧೇಶ್ವರ ಎನ್ನುವ ದೇವಸ್ಥಾನವಿದೆ. ಈ ದೇವಸ್ಥಾನದಲ್ಲಿ ಏಳು ತಲೆಯ ಹಾವು ಶಿವನ ವಿಗ್ರಹದ ಮೇಲೆ ಇರುವಂತಹ ವಿಗ್ರಹವಿದೆ. ಹಳ್ಳಿಯಲ್ಲಿ ಯಾರಿಗಾದರೂ ಹಾವು ಕಚ್ಚಿದರೆ ಈ ದೇವಸ್ಥಾನಕ್ಕೆ ಬಂದರೆ ಕಡಿಮೆಯಾಗುತ್ತದೆ ಎಂದು ಗ್ರಾಮಸ್ಥರು ನಂಬಿಕೆಯಿಟ್ಟಿದ್ದಾರೆ. ಗ್ರಾಮಸ್ಥರು ಹೇಳುವ ಪ್ರಕಾರ ಈ ವರೆಗೆ ಯಾವುದೇ ಹಾವು ಮನುಷ್ಯರಿಗೆ ಕಡಿದಿಲ್ಲ ಎನ್ನುತ್ತಾರೆ. ಭಾರತೀಯ ಕಥೆ ಪುರಾಣಗಳ ಪ್ರಕಾರ ನಾಗರ ಹಾವನ್ನು ಬಹಳ ಪವಿತ್ರವಾದ ಹಾವು ಎಂದು ಪರಿಗಣಿಸಲಾಗುತ್ತದೆ. ಹಾವು ಶಿವನ ಸಂಕೇತ ಎಂದು ಕರೆಯಲಾಗುವುದು. ಹಾವು, ಜನ್ಮ, ಪುನರ್ಜನ್ಮ ಮತ್ತು ಮರಣಗಳನ್ನು ಪ್ರತಿನಿಧಿಸುತ್ತದೆ. ಹಾವು ಎಂಟು ಅವತಾರವನ್ನು ತಾಳಿದೆ. ವಿಷ್ಣುವು ಆದಿಶೇಷನ ಮೇಲೆ ಮಲಗಿ ನಿದ್ರಿಸುತ್ತಾನೆ ಎನ್ನಲಾಗುವುದು. ಅಲ್ಲದೆ ಹಾವುಗಳು ಪುರಾಣ ಇತಿಹಾಸದಿಂದಲೂ ವಿಶೇಷವಾದ ಪವಿತ್ರತೆಯನ್ನು ಪಡೆದುಕೊಂಡಿದೆ ಎಂದು ಹೇಳಲಾಗುವುದು. ಈ ಹಳ್ಳಿಗೆ ಭೇಟಿ ನೀಡಬೇಕು ಎಂದುಕೊಂಡಿದ್ದರೆ ಪುಣೆಯ ವಿಮಾನ ನಿಲ್ದಾಣಕ್ಕೆ ಹತ್ತಿರದಲ್ಲಿರುವ ರೈಲ್ವೆ ನಿಲ್ದಾಣದ ಸಂಪರ್ಕಗಳ ಮೂಲಕ ಹಳ್ಳಿಯನ್ನು ತಲುಪಬಹುದು. ಆದರೆ ಹಳ್ಳಿಗೆ ಭೇಟಿ ನೀಡಲು ನಿಮಗೆ ಧೈರ್ಯ ಇದೆಯೇ ಎನ್ನುವುದನ್ನು ಮೊದಲು ಕಚಿತಪಡಿಸಿಕೊಳ್ಳಿ. ಹಳ್ಳಿಯಲ್ಲಿ ಹಾವುಗಳು ಕಡಿಯುವುದಿಲ್ಲ. ಅವುಗಳ ಬಗ್ಗೆ ಯಾವುದೇ ಆರೋಪಗಳನ್ನು ಮಾಡಬಾರದು ಎಂದು ಜನರು ಬಯಸುತ್ತಾರೆ. ಹಾವು ಹಾಲನ್ನು ಕುಡಿಯುವುದಿಲ್ಲ. ಹಾಲನ್ನು ಜೀರ್ಣಿಸಿಕೊಳ್ಳುವ ಶಕ್ತಿಯೂ ಇರುವುದಿಲ್ಲ ಎಂದು ಹೇಳಲಾಗುವುದು. ಭಾವನಾತ್ಮಕ ಜೀವಿ ಹಾವು. ಅವು ಬೆದರಿಕೆಯನ್ನು ಅನುಭವಿಸಿದಾಗ ಆಕ್ರಮಣಶೀಲ ಪ್ರವೃತ್ತಿಯನ್ನು ತೋರುತ್ತವೆ. ಹಾಗೆಯೇ ಪರಿಸ್ಥಿತಿಗೆ ಅವಲಂಬಿತರಾಗಿ ಶಾಂತವಾಗಿ ಇರುತ್ತಾರೆ. ಹಾವು ಸಾಕು ಪ್ರಾಣಿಗಳಲ್ಲ. ಅವು ವನ್ಯ ಜೀವಿಗಳು. ವನ್ಯ ಜೀವಿಯ ಕಾಯ್ದೆ ಪ್ರಕಾರ 1972ರ ಅಡಿಯಲ್ಲಿ ಹಾವುಗಳನ್ನು ರಕ್ಷಿಸಲಾಗುವುದು. ಕೋಬ್ರಾಸ್, ಪೈಥಾನ್ಸ್, ಸ್ಯಾಂಡ್ ಬೋಯಾಸ್ ಹಾವುಗಳು ಅಳಿವಿನಂಚಿನಲ್ಲಿವೆ. ಹಾವಿನ ಕೋರೆ ಹಲ್ಲುಗಳ ಬಳಿ ವಿಷದ ಚೀಲವಿರುತ್ತವೆ. ಅವು ಕತ್ತರಿಸಿ ಹೋದರೆ ಏನನ್ನು ತಿನ್ನುವುದಿಲ್ಲ. ಹಾಗೆಯೇ ಹಾವುಗಳು ಸಾವನ್ನಪ್ಪುಯತ್ತವೆ ಎಂದು ಹೇಳಲಾಗುವುದು. ಹಾವುಗಳು ಚಲನಚಿತ್ರದಲ್ಲಿ ತೋರಿಸುವ ರೀತಿಯಲ್ಲಿ 12 ವರ್ಷಗಳ ಸೇಡನ್ನು ಹೊಂದಿರುವುದಿಲ್ಲ. ಹಾಗೆಯೇ ಹಾವಿನ ತಲೆಯ ಮೇಲೆ ವಜ್ರದ ಮಣಿ ಇರುವುದಿಲ್ಲ. ಅದರ ಬೆನ್ನತ್ತಿ ಹೋಗದಿರಿ. ಹಾವಿನ ವ್ಯಾಪಾರ ಬಹಳ ಬೆಲೆಬಾಳುತ್ತವೆ. ಹಾವಿನ ಚರ್ಮವನ್ನು ಜನರು ವಿವಿಧ ಉಪಯೋಗಗಳಿಗೆ ಬಳಸಿಕೊಳ್ಳುತ್ತಾರೆ. ಹಾಗಾಗಿಯೇ ಹಾವು ಮಂಗಳಕರ ಎಂದು ಭಾವಿಸುತ್ತಾರೆ. ಕೆಲವೆಡೆ ಬಾರ್ ಗಳಲ್ಲಿ ಹಾವನ್ನು ಬಳಸಿ ಮಧ್ಯಗಳನ್ನು ಶೇಖರಿಸಿಡುತ್ತಾರೆ ಎಂದು ಸಹ ಹೇಳಲಾಗುವುದು. ಹಾವನ್ನು ಬಹುತೇಕ ಜನರು ದುರುಪಯೋಗ ಪಡಿಸಿಕೊಳ್ಳುತ್ತಾರೆ. ಈ ಕುರಿತು ಸಾಕಷ್ಟು ಎಚ್ಚರಿಕೆಯಿಂದ ಇರಬೇಕು
OSCAR-2019
ನಮ್ಮ ಹಿಂದೂ ಧರ್ಮದಲ್ಲಿ ಹಬ್ಬಗಳಿಗೆ ಮತ್ತು ದೇವಿ ದೇವತೆಗಳಿಗೆ ಹೆಚ್ಚಿನ ಮಹತ್ವವಿದ್ದು ಹಬ್ಬದ ಸಂಭ್ರಮದಲ್ಲಿ ದೇವತಾ ಆರಾಧನೆ ಮುಖ್ಯವಾಗಿರುತ್ತದೆ. ಬೇರೆ ಬೇರೆ ಹೆಸರುಗಳಿಂದ ಬೇರೆ ಬೇರೆ ದೇವರುಗಳನ್ನು ಪೂಜಿಸುವ ಹಿಂದೂಗಳು ಸನಾತನ ಧರ್ಮ ಮತ್ತು ಸಂಪ್ರದಾಯಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಇನ್ನು ಆಗಸ್ಟ್ ತಿಂಗಳಲ್ಲಿ ಬರುವ ಪ್ರಮುಖ ಹಬ್ಬವೆಂದರೆ ವರಮಹಾಲಕ್ಷ್ಮೀ ಹಬ್ಬವಾಗಿದ್ದು ಧನ ಪ್ರಾಪ್ತಿಗೆ ಸಂಪತ್ತಿನ ಅದಿಧೇವತೆಯಾದ ಲಕ್ಷ್ಮೀಯನ್ನು ಪೂಜಿಸುತ್ತಾರೆ. ಆ ಮನೆಯಲ್ಲಿ ಲಕ್ಷ್ಮೀ ನೆಲೆ ನಿಲ್ಲಲಿ ಮತ್ತು ಅವರ ಆಶೀರ್ವಾದ ಮನೆಯವರ ಮೇಲಿರಲಿ ಎಂಬುದೇ ಈ ಹಬ್ಬದ ಪ್ರಮುಖ ಉದ್ದೇಶವಾಗಿದೆ. ಇಂದಿನ ಜೀವನದಲ್ಲಿ ಹಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದ್ದೇ ಇದೆ. ಜೀವನದಲ್ಲಿ ಹಣವೊಂದೇ ಮುಖ್ಯವಲ್ಲದೇ ಇದ್ದರೂ ನಮ್ಮ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ನಾವು ಹಣವನ್ನು ಅವಲಂಬಿಸಿದ್ದೇವೆ. ಆದ್ದರಿಂದ ಧನ ಕನಕಕ್ಕೆ ಪ್ರಮುಖ ದೇವತೆಯಾಗಿರುವ ಲಕ್ಷ್ಮೀಯ ಆರಾಧನೆಯನ್ನು ಮಾಡುವುದರಿಂದ ಲಕ್ಷ್ಮೀ ಕೃಪಾಕಟಾಕ್ಷಕ್ಕೆ ನಾವು ಪಾತ್ರರಾಗಬಹುದು ಮತ್ತು ಧಾರ್ಮಿಕ ವಿಧಿ ವಿಧಾನಗಳನ್ನು ಕೂಡ ಮನೆಯಲ್ಲಿ ಅನುಷ್ಠಾನಗೊಳಿಸಬಹುದು ಎಂಬುದು ಹಬ್ಬದ ಹಿಂದಿರುವ ಮುಖ್ಯ ಉದ್ದೇಶವಾಗಿದೆ. ಲಕ್ಷ್ಮೀ ಹಬ್ಬವನ್ನು ಮಾಡುವಾಗ ಮನೆಯಲ್ಲಿ ಸ್ವಚ್ಛತೆಗೆ ಪ್ರಮುಖ ಆದ್ಯತೆಯನ್ನು ನೀಡಬೇಕು. ಮನೆಯಲ್ಲಿ ಕಸ ತುಂಬಿದ್ದು ನೀವು ಲಕ್ಷ್ಮೀಯನ್ನು ಸ್ವಾಗತಿಸಿದರೆ ಆಕೆ ಖಂಡಿತ ನಿಮ್ಮ ಮನೆಯನ್ನು ಪ್ರವೇಶಿಸುವುದಿಲ್ಲ. ನಿಮ್ಮ ಮನೆಯಲ್ಲಿ ಆಕೆ ನೆಲೆನಿಂತಿದ್ದರೂ ಆಕೆ ಮನೆಯಿಂದ ನಿರ್ಗಮಿಸುತ್ತಾಳೆ. ಒಮ್ಮೆ ಲಕ್ಷ್ಮೀ ದೇವಿಯು ವಿಷ್ಣುವನ್ನು ತೊರೆದು ಹೋದಾಗ ಇಡಿಯ ದೇವಲೋಕವೇ ಆಕೆಯ ನಿರ್ಗಮನದಿಂದ ಶೂನ್ಯವಾಯಿತು. ಅಂದರೆ ಸಂಪತ್ತು ನಷ್ಟವಾದಂತಾಯಿತು ಇದನ್ನು ಶ್ರಿ-ಹಿನ್ ಎಂದು ಕರೆಯುತ್ತಾರೆ. ಶ್ರಾವಣ ಮಾಸದ ಕೊನೆಯ ಶುಕ್ರವಾರ ಲಕ್ಷ್ಮೀ ಹಬ್ಬವಿದ್ದು ರಕ್ಷಾ ಬಂಧನಕ್ಕೆ ಕೆಲವು ದಿನಗಳಿರುವಾಗ ಈ ಹಬ್ಬವನ್ನು ನಡೆಸಲಾಗುತ್ತದೆ. ಶ್ರಾವಣ ಮಾಸದ ಶುಕ್ಷ ಪಕ್ಷದ ಹತ್ತನೇ ದಿನ ಈ ಹಬ್ಬವನ್ನು ನಡೆಸುತ್ತಾರೆ. ಈ ಹಬ್ಬ ಇಂದು ಶುಕ್ರವಾರ ಅಂದರೆ 24 ರಂದು ಬಂದಿದೆ. ಹಿಂದೂ ಧರ್ಮದಲ್ಲಿ ಪ್ರತಿ ಶುಕ್ರವಾರವನ್ನು ದೇವಿಗೆ ಅರ್ಪಿಸಲಾಗುತ್ತದೆ. ಭಾರತದ ದಕ್ಷಿಣದಲ್ಲಿ ಇದನ್ನು ಮುಖ್ಯವಾಗಿ ನಡೆಸುತ್ತಾರೆ. ಅಂತೆಯೇ ಉತ್ತರದಲ್ಲಿ ಕೂಡ ಈ ಹಬ್ಬಕ್ಕೆ ಪ್ರಾಮುಖ್ಯತೆ ಇದೆ. ಹೆಸರೇ ಸೂಚಿಸುವಂತೆ ವರ ಎಂದರೆ ದೇವರಿಂದ ದೊರೆಯುವ ವರವಾಗಿದೆ ಲಕ್ಷ್ಮೀ ಎಂಬುದು ಧನ ಕನಕ ಸಂಪತ್ತು ಎಂದಾಗಿದೆ. ಆದ್ದರಿಂದ ಧನ ಕನಕ ಸಂಪತ್ತಿನ ವರವನ್ನು ಪ್ರಸಾದಿಸುವ ಲಕ್ಷ್ಮೀ ಮಾತೆ ಎಂದು ಈ ಹಬ್ಬವನ್ನು ಆಚರಿಸುತ್ತಾರೆ. ಜೀವನದಲ್ಲಿ ಸುಖವನ್ನು ಧನವನ್ನು ಪಡೆಯಲು ಈ ದಿನ ವ್ರತಾಚರಣೆಯನ್ನು ಮಾಡಲಾಗುತ್ತದೆ. ಅಂತೆಯೇ ಈ ದಿನ ಉಪವಾಸವನ್ನು ಮಾಡುವುದರಿಂದ ನಿಮ್ಮ ಜೀವನದಲ್ಲಿ ಯಶಸ್ಸು ದೊರೆಯುತ್ತದೆ ಮತ್ತು ವಿದ್ಯಾಭ್ಯಾಸದ ವಿಷಯದಲ್ಲಿ ಕೂಡ ನೀವು ಮುಂದೆ ಇರಲಿದ್ದೀರಿ. ಈ ವ್ರತವನ್ನು ವಿವಾಹಿತ ಸ್ತ್ರೀಯರು ಮಾತ್ರ ನಡೆಸಬೇಕು ಎಂದಾಗಿದೆ ಆದರೆ ಅವಿವಾಹಿತ ಹುಡುಗಿಯರೂ ಕೂಡ ವ್ರತವನ್ನು ಮಾಡಬಹುದು. ಕುಟಂಬದ ಒಳಿತಿಗಾಗಿ ವಿವಾಹಿತ ಪುರುಷ ಕೂಡ ವ್ರತವನ್ನು ಕೈಗೊಳ್ಳಬಹುದು. ಈ ವ್ರತವನ್ನು ಮಾಡುವುದು ಪತಿ ಮತ್ತು ಪತ್ನಿಗೆ ಒಳ್ಳೆಯದಾಗಿದೆ. *ಮಾವಿನ ಎಲೆಗಳು - ಕಲಶದ ಸುತ್ತಲೂ ಅಲಂಕಾರಕ್ಕಾಗಿ ಕಟ್ಟಲು ಸ್ವಲ್ಪ ತೆಂಗಿನಕಾಯಿಗಳು - ಒಂದನ್ನು ಕಲಶದ ಮೇಲೆ ಇರಿಸುತ್ತಾರೆ ಮತ್ತು ಉಳಿದವುಗಳನ್ನು ಪೂಜೆ ಹಾಗೂ ತಾಂಬೂಲದಲ್ಲಿ ಉಪಯೋಗಿಸುತ್ತಾರೆ *ತೋರಂ - ಅರಿಶಿನವನ್ನು ಬಳಿದು ಮಾಡಿದ ದಾರ. ಇದು ಒಂಭತ್ತು ದಾರ ಮತ್ತು ಗಂಟುಗಳನ್ನು ಒಳಗೊಂಡಿದೆ. ಇದನ್ನು ಕೈಗೆ ಕಟ್ಟಲಾಗುತ್ತದೆ ಪೋಂಗು ನೂಲು - ಇದು ಹಳದಿ ಬಣ್ಣದಿಂದ ಮಾಡಲಾದ ದಾರವಾಗಿದೆ. ಇದನ್ನು ಕುತ್ತಿಗೆಗೆ ಕಟ್ಟಲಾಗುತ್ತದೆ ಕ್ಷೀರಸಾಗರದಲ್ಲಿ ನೆಲೆಸಿರುವ ಲಕ್ಷ್ಮೀ ಮಾತೆಯು ಬಿಳಿಯ ವಸ್ತ್ರಗಳನ್ನು ಧರಿಸುವವರಾಗಿದ್ದಾರೆ. ಈ ದಿನ ಲಕ್ಷ್ಮೀ ದೇವತೆಗೆ ಪೂಜೆಯನ್ನು ಮಾಡುವುದು ಆಕೆಯ ಎಂಟು ರೂಪಗಳಿಗೆ ಪೂಜೆ ಮಾಡುವುದಕ್ಕೆ ಸಮನಾಗಿದೆ. ದೀಪವಾಳಿ ಪೂಜಾ ವಿಧಿಯಂತೆಯೇ ಈ ಪೂಜೆಯನ್ನು ಮಾಡಲಾಗುತ್ತದೆ. 7. ಪೂಜೆ ಮುಗಿದ ನಂತರ ಪ್ರಸಾದ ವಿತರಣೆಯನ್ನು ಮಹಿಳೆಯರಿಗೆ ಮಾಡಿ. ಸಂಜೆಯ ಪ್ರಾರ್ಥನೆಯ ನಂತರ ವ್ರತವನ್ನು ಕೈಗೊಂಡವರು ಹಣ್ಣು ಹಂಪಲುಗಳನ್ನು ಮಾತ್ರ ತಿನ್ನಬೇಕು. 8. ವರಮಹಾಲಕ್ಷ್ಮಿ ಕಲಶ ಮಡಿಕೆ ಒಣಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ಮಡಿಕೆ ಕೆಳಭಾಗದಲ್ಲಿ ಜಿಪ್ಸಮ್ ಅನ್ವಯಿಸಿ. ಬಳಿಕ ಮಡಿಕೆ/ಬಿಂದಿಗೆಯನ್ನು ಅರಿಶಿನ ಮತ್ತು ಕುಂಕುಮದ ಬಟ್ಟು/ಹುಂಡುಗಳಿಂದ ಅಲಂಕರಿಸಿ. ಮಡಿಕೆ ಒಳಗೆ ಅಕ್ಕಿ, ಒಣ ಹಣ್ಣು ಹಾಗೂ ನಾಣ್ಯವನ್ನು ಇಟ್ಟು ತುಂಬಿರಿ. 9. ಮೃದುವಾದ ಮಾವಿನೆಲೆಯಿಂದ ಮಡಿಕೆಯ ಕುತ್ತಿಗೆಯ ಭಾಗವನ್ನು ಅಲಂಕರಿಸಿ. ಮಾವಿನ ಎಲೆಯ ತುದಿಯು ಮೇಲ್ಮುಖವಾಗಿಯೇ ಇರಬೇಕು. ತೆಂಗಿನ ಕಾಯಿಗೆ ಅರಿಶಿನ, ಕುಂಕುಮ ಮತ್ತು ಚಂದನವನ್ನು ಲೇಪಿಸಿ ಅಲಂಕರಿಸಿ. ಬಳಿಕ ಬಿಂದಿಗೆಯ ಕಂಟದಲ್ಲಿ, ಮಾವಿನೆಲೆಗಳ ಮಧ್ಯೆ ಇರಿಸಿ. ತೆಂಗಿನ ಕಾಯಿಯ ಕಣ್ಣುಗಳು ಮೇಲ್ಭಾಗದಲ್ಲಿ ಇರಬೇಕು. ಹೊಸ ಕುಪ್ಪುಸದ ಬಟ್ಟೆಯನ್ನು ಕಲಶಕ್ಕೆ ಇಡಬೇಕು.ಬಳಿಕ ಹೂವಿನ ಹಾರವನ್ನು ಹಾಕಿ ಅಲಂಕರಿಸಿ.
OSCAR-2019
ಬೆಂಗಳೂರು : ಆದಾಯ ತೆರಿಗೆ ಇಲಾಖೆ ಅಧಿಕಾರಗಳ ದಾಳಿ ವೇಳೆ ಸಿಕ್ಕ ಸಾಕ್ಷ್ಯವನ್ನು ನಾಶ ಮಾಡಿದ ಪ್ರಕರಣ ಸಂಬಂಧ ಇಂದನ ಸಚಿವ ಡಿ.ಕೆ ಶಿವಕುಮಾರ್‌ಗೆ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಕೆಲ ತಿಂಗಳ ಹಿಂದೆ ಅಕ್ರಮ ಆಸ್ತಿ ಸಂಪಾದನೆ ಹಾಗೂ ತೆರಿಗೆ ವಂಚನೆ ಆರೋಪದ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಈಗಲ್ ಟನ್‌ ರೆಸಾರ್ಟ್‌ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಡಿ. ಕೆ ಶಿವಕುಮಾರ್ ಹಾಗೂ ಸಂಸದ ಡಿ.ಕೆ ಸುರೇಶ್‌ ಸಾಕ್ಷಿ ನಾಶಕ್ಕೆ ಯತ್ನಿಸಿದ್ದರು ಎಂದು ಹೇಳಲಾಗಿದ್ದು, ಈ ಸಂಬಂಧ ನೃಪತುಂಗ ರಸ್ತೆಯಲ್ಲಿರುವ ವಿಶೇಷ ಕೋರ್ಟ್‌ನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಲಯ 25 ಸಾವಿರ ರೂ ನಗದು ಹಾಗೂ ಇಬ್ಬರ ಶೂರಿಟಿಯೊಂದಿಗೆ ಷರತ್ತು ಬದ್ದ ಜಾಮೀನು ನೀಡಿದೆ.
OSCAR-2019
ಬೆಂಗಳೂರು : ದಶಕಗಳ ಕಾಲ ಅಮೆರಿಕದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ರವಿಕೃಷ್ಣಾ ರೆಡ್ಡಿ ಸಾಮಾಜಿಕ ಕಳಕಳಿಯಿಂದಾಗಿ ನಗರಕ್ಕೆ ವಾಪಸ್ ಆಗಿ ಸಮಾಜಸೇವೆಯಲ್ಲಿ ತೊಡಗಿದ್ದಾರೆ. ಆಮ್ ಆದ್ಮಿ ಪಕ್ಷ ಕಟ್ಟಲು ಸಾಕಷ್ಟು ಪ್ರಯತ್ನಿಸಿ ನಂತರ ನಿರಾಶರಾಗಿ ಅದರಿಂದ ಹೊರಬಂದರು. ಇದೀಗ ಜಯನಗರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಬಳಿಕ ಲಂಚಮುಕ್ತ ನಿರ್ಮಾಣ ವೇದಿಕೆ ರಚಿಸಿಕೊಂಡು ಹೋರಾಟ ನಡೆಸುತ್ತಿದ್ದಾರೆ. ಜಯನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯ ವಿಜಯಕುಮಾರ್ ಮತ್ತು ಕಾಂಗ್ರೆಸ್‌ನ ಸೌಮ್ಯ ರೆಡ್ಡಿ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಅವರು ಚುನಾವಣಾ ಪ್ರಚಾರದ ವೇಳೆ ವೇಳೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಿಷ್ಟು. ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಚೆನ್ನಾಗಿ ನಡೆಯುತ್ತಿದೆ. ರಾಷ್ಟ್ರೀಯ ಪಕ್ಷಗಳಿಗಿಂತ ಕಡಿಮೆ ಇಲ್ಲದಂತೆ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನಗರದ ಪ್ರತಿಷ್ಠಿತ ಪ್ರದೇಶ ಎಂಬ ಖ್ಯಾತಿಗೆ ಪಾತ್ರವಾಗಿರುವ ಜಯನಗರದಲ್ಲಿ ಶ್ರೀಮಂತ ವರ್ಗ ಮಾತ್ರವಲ್ಲ ಬಡತನ ರೇಖೆಗಿಂತ ಕೆಳಗಿರುವ ಜನರು ಸಹ ಇದ್ದಾರೆ. ಅವರಿಗೆ ಮೂಲ ಸೌಕರ್ಯ ಕಲ್ಪಿಸುವಲ್ಲಿ ಶಾಸಕರು ವಿಫಲವಾಗಿದ್ದಾರೆ. ಮೂಲಸೌಕರ್ಯಗಳನ್ನು ? ಚುನಾವಣೆಗಾಗಿ ಒಂದು ನೋಟು ಒಂದು ವೋಟು ಎಂದು ಜನರಿಂದ ದೇಣಿಗೆ ಸಂಗ್ರಹ ಮಾಡುತ್ತಿದ್ದೀರಿ. ಈವರೆಗೆ ಎಷ್ಟು ದೇಣಿಗೆ ಸಂಗ್ರಹವಾಗಿದೆ? ಈವರೆಗೆ ಸುಮಾರು ಎಂಟು ಲಕ್ಷ ರು.ಗಳಷ್ಟು ದೇಣಿಗೆ ಸಂಗ್ರಹವಾಗಿದೆ. ನಾನು ಸಹ ಐದು ಲಕ್ಷ ರು. ಖರ್ಚು ಮಾಡುತ್ತಿದ್ದೇನೆ. ಚುನಾವಣಾ ಆಯೋಗವು 28 ಲಕ್ಷ ರು. ನಿಗದಿ ಪಡಿಸಿದ್ದು, ಅಷ್ಟರೊಳಗೆ ಪ್ರಚಾರ ಮಾಡಲಾಗುವುದು. ಇನ್ನಷ್ಟು ದೇಣಿಗೆ ಸಂಗ್ರಹವಾಗಿರುವ ನಿರೀಕ್ಷೆ ಇದೆ. ಎಲ್ಲದಕ್ಕೂ ಉತ್ತರದಾಯಿತ್ವ ಇರಲಿದೆ. ? ಕಳೆದ ಎರಡು ಅವಧಿಗೆ ಶಾಸಕರಾಗಿರುವ ವಿಜಯಕುಮಾರ್ ಕ್ಷೇತ್ರದಲ್ಲಿ ಪ್ರಾಬಲ್ಯ ಹೊಂದಿದ್ದಾರೆ. ಅವರ ವಿರುದ್ಧ ಗೆಲುವು ಸಾಧ್ಯವೆ? ಈಗಾಗಲೇ ಅಭಿವೃದ್ಧಿಯಾಗಿರುವ ಪ್ರದೇಶಗಳನ್ನೇ ಅಭಿವೃದ್ಧಿ ಮಾಡಿರುವುದಾಗಿ ಬಿಂಬಿಸಿಕೊಳ್ಳುತ್ತಿದ್ದಾರೆ. ಜಯನಗರ ಕ್ಷೇತ್ರದಲ್ಲಿ ಬಡತನ ಇದೆ. ಇದು ಶಾಸಕರ ಕಣ್ಣಿಗೆ ಬಿದ್ದಿಲ್ಲ. ಶಾಸಕರ ವಿರುದ್ಧ ಕ್ಷೇತ್ರದಲ್ಲಿ ವಿರೋಧ ಅಲೆ ಇರುವುದು ಪ್ರಚಾರದಲ್ಲಿ ಗೊತ್ತಾಗಿದೆ. ಕ್ಷೇತ್ರದ ಜನರಿಗೆ ಶಾಸಕರು ಸುಳ್ಳು ಭರವಸೆ ನೀಡಿ ಮರಳು ಮಾಡಿದ್ದಾರೆ. ಇದು ಈ ಬಾರಿ ನಡೆಯುವುದಿಲ್ಲ. ಕೊಳಗೇರಿ ಪ್ರದೇಶ ಗಳಿದ್ದು, ಜ್ವಲಂತ ಸಮಸ್ಯೆಗಳಿವೆ. ಈ ಬಗ್ಗೆ ಶಾಸಕರು ಗಮನವೇ ಹರಿಸಿಲ್ಲ. ಕ್ಷೇತ್ರದಲ್ಲಿ ನನಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಗೆಲ್ಲುವ ವಿಶ್ವಾಸ ಇದೆ. ಸೌಮ್ಯ ರೆಡ್ಡಿಗೆ ತಂದೆಯ ಬೆಂಬಲ ಇರಬಹುದು. ಆದರೆ, ಕ್ಷೇತ್ರದ ಜನರ ಬೆಂಬಲ ಬೇಕು. ತಂದೆ ಬೆನ್ನಿಗೆ ನಿಂತ ಮಾತ್ರಕ್ಕೆ ಜಯಗಳಿಸುತ್ತಾರೆ ಎಂಬುದು ಸುಳ್ಳು. ಜನರ ಪರಿಚಯ ಇರಬೇಕು. ಅಷ್ಟಕ್ಕೂ, ಗೃಹ ಸಚಿವ ರಾಮಲಿಂಗಾರೆಡ್ಡಿ ಅವರು ಹೇಗೆ ಗೆಲ್ಲುತ್ತಾ ಬರುತ್ತಿದ್ದಾರೆ ಎಂಬುದು ಗೊತ್ತಿದೆ. ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ದುರ್ಬಲ ಅಭ್ಯರ್ಥಿಯನ್ನು ಪ್ರತಿಸ್ಪರ್ಧಿಯನ್ನಾಗಿ ಕಣಕ್ಕಿಳಿಸಿ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ನೀಡುವ ಒಳಒಪ್ಪಂದ ಮಾಡಿಕೊಳ್ಳುತ್ತಾರೆ. ಸೌಮ್ಯರೆಡ್ಡಿ ಈ ಬಾರಿ ಠೇವಣಿ ಉಳಿಸುವುದು ಕೊಳ್ಳುವುದು ಡೌಟು. ಜನಸಮಾನ್ಯರನ್ನು ಖುದ್ದಾಗಿ ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸುತ್ತೇನೆ. ಅವುಗಳನ್ನು ಬಗೆಹರಿಸುವ ಯೋಚನೆಯಲ್ಲಿ ಟಿಪ್ಪಣ್ಣಿ ಕೂಡ ಮಾಡಿಕೊಳ್ಳುತ್ತೇನೆ. ರಾತ್ರಿ ವೇಳೆ ಬೀದಿ ವಾಸ್ತವ್ಯ ಮಾಡು ತ್ತೇನೆ. ಅವರು ಸೇವಿಸುವ ಆಹಾರವನ್ನೇ ಸೇವನೆ ಮಾಡಿ ಅವರಲ್ಲೊ ಬ್ಬನಂತೆ ಇದ್ದು ವಿಷಯಗಳನ್ನು ತಿಳಿದುಕೊಳ್ಳುತ್ತೇನೆ. ಹೀಗೆ ಕ್ಷೇತ್ರದ ಹಲವೆಡೆ ಈಗಾಗಲೇ ವಾಸ್ತವ್ಯ ಹೂಡಿ ಹಲವು ಮಾಹಿತಿಗಳನ್ನು ಯಾವ ಚುನಾವಣಾ ಗಿಮಿಕ್ ಇಲ್ಲ. ಸರಳತೆ ಜೀವನವನ್ನು ಮೊದಲಿನಿಂದಲೂ ಮೈಗೂಡಿಸಿಕೊಂಡು ಜೀವನ ನಡೆಸುತ್ತಿದ್ದೇನೆ. ನನ್ನ ಬಳಿಯೂ ಹಣ ಇದೆ. ಅಮೆರಿಕದಲ್ಲಿ ಇದ್ದು ಬಂದವನು. ಆದರೆ, ವೈಭವ ಜೀವನಕ್ಕೆ ಜೋತು ಬೀಳದೆ ಸರಳ ಜೀವನ ನಡೆಸು ವುದು ನನ್ನ ಧ್ಯೇಯ. ಅದರಂತೆ ನಡೆದುಕೊಳ್ಳುತ್ತಿದ್ದೇನೆ. ಚುನಾವಣಾ ಬಳಿಕವೂ ಸರಳತೆಯಲ್ಲಿ ಯಾವುದೇ ಬದಲಾವಣೆಯಾ ? ನೀವು ಆಮ್ ಆದ್ಮಿ ಪಕ್ಷ ತೊರೆದು ಬಂದವರು. ಈಗ ಆ ಪಕ್ಷದಿಂದ ಜಯನಗರ ಕ್ಷೇತ್ರದಲ್ಲಿ ಯಾವ ಅಭ್ಯರ್ಥಿಯನ್ನೂ ಕಣಕ್ಕಿಳಿಸಿಲ್ಲವಲ್ಲ? ಆಮ್ ಆದ್ಮಿ ಪಕ್ಷ ಮಾತ್ರವಲ್ಲ, ಪಕ್ಷಾತೀತವಾಗಿ ನನ್ನ ಹೋರಾಟಕ್ಕೆ ಬೆಂಬಲ ಸೂಚಿಸಿದೆ. ಆಮ್ ಆದ್ಮಿ ಪಕ್ಷವು ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸದಿರುವ ಬಗ್ಗೆ ಮಾಹಿತಿ ಇಲ್ಲ. ಎಲ್ಲ ಪಕ್ಷದಲ್ಲಿಯೂ ಉತ್ತಮ ಸ್ನೇಹಿತರಿದ್ದಾರೆ. ಅವರೆಲ್ಲರ ಬೆಂಬಲ ಚುನಾವಣೆಯಲ್ಲಿ ಇದೆ. ಮೊದಲಿಗೆ ಒಂದೇ ತಿಂಗಳಲ್ಲಿ ಕ್ಷೇತ್ರದ ಎಲ್ಲಾ ಸರ್ಕಾರಿ ಕಚೇರಿಯಲ್ಲಿ ಲಂಚ ಮುಕ್ತ ವ್ಯವಸ್ಥೆ ಮಾಡಲಾಗುವುದು. ಈಗಾಗಲೇ ಜಯನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಈ ವ್ಯವಸ್ಥೆ ಜಾರಿಯಾಗಲು ಹೋರಾಟ ನಡೆಸಿ ಸಫಲ ಕಂಡಿದ್ದೇನೆ. ಬಡವರಿಗೆ ಉತ್ತಮ ಶಿಕ್ಷಣ ಕಲ್ಪಿಸುವುದು, ಕಸದ ಸಮಸ್ಯೆ ನಿವಾರಣೆಗೆ ಹೆಚ್ಚಿನ ಒತ್ತು ನೀಡಲಾಗುವುದು.
OSCAR-2019
ಚಿತ್ರದುರ್ಗ, ಫೆ.13- ತುಮಕೂರು ಜಿಲ್ಲೆಯ ಹುಲಿಯೂರು ದುರ್ಗದ ಸಮೀಪದಲ್ಲಿ ಈತ್ತಿಚೆಗೆ ಆದಂತಹ ಅಪಘಾತದಲ್ಲಿ ಗಾಯಗೊಂಡಿದ್ದ ಭೋವಿ ಗುರು ಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅವರು ಗುಣಮುಖರಾಗಿ ಮಠಕ್ಕೆ ಹಿಂದಿರುಗಿದ್ದಾರೆ.ಅಪಘಾತದ ಕೂಡಲೇ ಕುಣಿಗಲ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ನಂತರ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗೆ ದಾಖಲಾಗಿದ್ದರು. ಗುಣಮುಖರಾದ ಹಿನ್ನಲೆಯಲ್ಲಿ ಸ್ವಾಮೀಜಿ ಅವರು ಚಿತ್ರದುರ್ಗದಲ್ಲಿರುವ ಗುರುಪೀಠದಲ್ಲಿ ವಿಶ್ರಾಂತಿ ಪಡೆಯುವರು. ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು, ಆದಿ ಚುಂಚನಗಿರಿ ಮಠದ ನಿರ್ಮಲಾನಂದ ನಾಥ ಸ್ವಾಮೀಜಿ, ಕುಂಚಿಗಟಿಗ ಮಹಾ ಸಂಸ್ಥಾನ ಮಠದ ಶಾಂತವೀರ ಸ್ವಾಮೀಜಿ, ನಿಡುಮಾಮುಡಿ ಮಠದ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ, ಶಿವಶರಣ ಮಾದಾರ ಚೆನ್ನಯ್ಯ ಗುರುಪೀಠದ ಮಾದಾರ ಚನ್ನಯ್ಯ ಸ್ವಾಮೀಜಿ, ಯೋಗಗುರು ವಚನನಾಂದ ಸ್ವಾಮೀಜಿ, ಮಲ್ಲಾರಹಟ್ಟಿಯ ಓಂ ವೃಕ್ಷ ಮಠದ ತಿಪ್ಪೇರುದ್ರ ಸ್ವಾಮೀಜಿ ಸೇರಿದಂತೆ ಹಲವರು ಅವರ ಯೋಗ ಕ್ಷೇಮ ವಿಚಾರಿಸಿದ್ದಾರೆ. ಬೆಂಗಳೂರು, ಮೇ 2-ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ರಿಯಲ್ ಎಸ್ಟೇಟ್ ಕಾಯ್ದೆ ಹದಿನೈದು ದಿನದಲ್ಲಿ ಕರ್ನಾಟಕದಲ್ಲೂ ಜಾರಿಯಾಗಲಿದೆ ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯನಾಯ್ಡು ತಿಳಿಸಿದ್ದಾರೆ. ಈಗಾಗಲೇ ಈ ಕಾಯ್ದೆಯನ್ನು 14 ರಾಜ್ಯಗಳಲ್ಲಿ ಅನುಷ್ಠಾನ ಮಾಡಿವೆ. ಕೆಲವು ಕರಡುಗಳನ್ನು ಸಿದ್ಧಪಡಿಸಬೇಕಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ 15 ದಿನಗಳ ಕಾಲಾವಕಾಶ ಕೇಳಿದೆ. ಇನ್ನು ಹದಿನೈದು ದಿನಗಳಲ್ಲಿ ಜಾರಿಗೆ ಬರಲಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಿಯಲ್ ಎಸ್ಟೇಟ್ ಕಾಯ್ದೆ ಜಾರಿಗೆ ಬರುವುದರಿಂದ ಭೂ ಮಾಲೀಕರು ಮತ್ತು ಖರೀದಿಸುವವರಿಗ ಯಾವುದೇ ರೀತಿಯ ಸಮಸ್ಯೆ ಉಂಟಾಗುವುದಿಲ್ಲ. ಪಾರದರ್ಶಕತೆ ತರುವ ಏಕೈಕ ಉದ್ದೇಶದಿಂದ ಇದನ್ನು ಜಾರಿಗೆ ತಂದಿದ್ದೇವೆ. ಗ್ರಾಹಕನೇ ನಿಜವಾಗಿಯೂ ರಾಜನಾಗುತ್ತಾನೆ ಎಂದು ತಿಳಿಸಿದರು. ಕೊಡಗು,ಜೂ.9-ಮಡಿಕೇರಿ ತಾಲ್ಲೂಕು ಭಾಗಮಂಡಲ ವನ್ಯಜೀವಿಗಳ ಪ್ರದೇಶವಾಗಿರುವ ತಲಕಾವೇರಿಯನ್ನು ಸೂಕ್ಷ್ಮ ಪರಿಸರ ತಾಣ ಎಂದು ಘೋಷಿಸಿರುವುದನ್ನು ವಿರೋಧಿಸಿ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಇಂದು ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರ ಭಾಗಮಂಡಲ ಪ್ರದೇಶವನ್ನು ಸೂಕ್ಷ್ಮ ಪರಿಸರ ತಾಣ ಎಂದು ಘೋಷಣೆ ಮಾಡಿದ್ದು , ಅಧಿಸೂಚನೆಯನ್ನು ಹಿಂಪಡೆಯುವಂತೆ ಆಗ್ರಹಿಸಿ, ಭಾಗಮಂಡಲ ವಾಸಿಗಳು ರಸ್ತೆ ತಡೆ ನಡೆಸಿದರಲ್ಲದೆ ಅಂಗಡಿಮುಂಗಟ್ಟು ಮುಚ್ಚಿ ಬಂದ್ ಆಚರಿಸಿದರು. ಭಾಗಮಂಡಲ-ಮಡಿಕೇರಿ ನಡುವಿನ ರಸ್ತೆಯನ್ನು ಗ್ರಾಮಸ್ಥರು ತಡೆದು ಪ್ರತಿಭಟನೆ ನಡೆಸಿದ್ದು , ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು. ಪ್ರತಿಭಟನೆಯಿಂದಾಗಿ ಪ್ರವಾಸಿ ತಾಣಕ್ಕೆ ಆಗಮಿಸಿದ್ದರು. ಬಹು ನಿರೀಕ್ಷೆಯ ಅದ್ದೂರಿ ತಾರಾಗಣದ ದೊಡ್ಮನೆ ಹುಡ್ಗ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಗೊಳ್ಳುತ್ತಿದೆ. ಪವರ್‍ಸ್ಟಾರ್ ಪುನೀತ್‍ರಾಜ್‍ಕುಮಾರ್ ಜೊತೆ ರಾಧಿಕಾ ಪಂಡಿತ್ ಅವರ ಅಭಿನಯ ಹಾಗೂ ದುನಿಯಾ September 6, 2016 Sri Raghav Dodmane Hudga, Kannada, movie, ಪವರ್‌ಸ್ಟಾರ್ ಪುನೀತ್‌ರಾಜ್‌ಕುಮಾರ್, ರಾಧಿಕಾ ಪಂಡಿತ್, ಸ್ಯಾಂಡಲ್ವುಡ್ ಪವರ್‌ಸ್ಟಾರ್ ಪುನೀತ್‌ರಾಜ್‌ಕುಮಾರ್ ಅಭಿನಯದ, ದುನಿಯಾ ಸೂರಿ ನಿರ್ದೇಶನದ ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಚಿತ್ರ ದೊಡ್ಮನೆ ಹುಡುಗ ಇದೀಗ ತೆರೆಗೆ ಬರಲು ಸನ್ನದ್ದನಾಗಿದ್ದಾನೆ. ಕಳೆದ ಕೆಲದಿನಗಳಿಂದಲೂ ಹಾಡುಗಳ ಮೂಲಕ ಸುದ್ದಿಮಾಡುತ್ತಿದ್ದು,
OSCAR-2019
ಕಾರವಾರ: ಈ ಬಾರಿಯ ಕರಾವಳಿ ಉತ್ಸವಕ್ಕೆ ವೈವಿಧ್ಯಮಯ ಸ್ಪರ್ಧೆಗಳ ಜತೆಗೆ ‘ಪೇಂಟ್‌ ಬಾಲ್‌’ ಎಂಬ ರೋಮಾಂಚನಕಾರಿ ಆಟವನ್ನು ಜಿಲ್ಲಾಡಳಿತ ಮೊದಲ ಬಾರಿಗೆ ಪರಿಚಯಿಸುತ್ತಿದ್ದು, ಇಲ್ಲಿನ ಮಾಲಾದೇವಿ ಮೈದಾನದಲ್ಲಿ ಮೂರು ದಿನಗಳು ನಡೆಯಲಿದೆ. ಡಿಸೆಂಬರ್‌ 8ರಿಂದ 10ರವರೆಗೆ ಕರಾವಳಿ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಈಗಾಗಲೇ ವಿವಿಧ ಉತ್ಸವ ಸಮಿತಿಗಳನ್ನು ರಚಿಸಿದ್ದು, ಅವುಗಳು ಉತ್ಸವದ ಯಶಸ್ವಿಗೆ ಶ್ರಮಿಸುತ್ತಿವೆ. ಪ್ರತಿ ವರ್ಷ ಉತ್ಸವಕ್ಕೆ ದೋಣಿ ಸ್ಪರ್ಧೆ, ಕಬಡ್ಡಿ, ಶ್ವಾನ ಪ್ರದರ್ಶನ, ದೇಹದಾರ್ಡ್ಯ, ಅಡುಗೆ ಸ್ಪರ್ಧೆ ಸೇರಿದಂತೆ ಹಲವು ರೀತಿಯ ಸ್ಪರ್ಧೆಗಳು ಇರುತ್ತಿದ್ದವು. ಇವುಗಳ ಸಾಲಿಗೆ ಈ ಬಾರಿ ಹೊಸದಾಗಿ ‘ಪೇಂಟ್‌ಬಾಲ್‌’ ಆಟ ಸೇರಿದೆ. ಗೋವಾದ ಮಿಲ್ಸಿಮ್‌ (milsim) ಎಂಬ ವೃತ್ತಿಪರ ಸಂಸ್ಥೆಯು ಈ ಆಟವನ್ನು ಆಯೋಜಿಸುತ್ತಿದೆ. ರೋಮಾಂಚನಕಾರಿ ಹಾಗೂ ಸಂಕೀರ್ಣವಾದ ಕ್ರೀಡಾ ಚಟುವಟಿಕೆಯನ್ನು ಈ ಸಂಸ್ಥೆ ನಡೆಸುತ್ತದೆ. ಆಟಗಾರರಲ್ಲಿ ಸಕಾರಾತ್ಮಕ ಮನೋಭಾವ, ಸಂವಹನ ಹಾಗೂ ನಾಯಕತ್ವ ಕೌಶಲಗಳನ್ನು ಬೆಳೆಸಲು ಇದು ಪೂರಕವಾಗಿದೆ.
OSCAR-2019
ಬಳ್ಳಾರಿ, ಏಪ್ರಿಲ್ 15 : ಬಳ್ಳಾರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೇಟ್ ಆಕಾಂಕ್ಷಿ, ಮಾಜಿ ಶಾಸಕ ಜಿ. ಸೋಮಶೇಖರರೆಡ್ಡಿ ಅವರಿಗೆ ಪಕ್ಷದಿಂದ ಅಧಿಕೃತ ಟಿಕೇಟ್ ಘೋಷಣೆ ಆಗದಿದ್ದರೂ ಏಪ್ರಿಲ್ 21 ರಂದು ನಾಮಪತ್ರ ಸಲ್ಲಿಸಲು ಸಕಲ ಸಿದ್ಧತೆ ನಡೆಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ಪಕ್ಷದ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಪಾಲ್ಗೊಂಡು, ಬಳ್ಳಾರಿ ವಿಧಾನಸಭಾ ಕ್ಷೇತ್ರದ ಟಿಕೇಟ್ ಆಕಾಂಕ್ಷಿಯಾಗಿ ತಾವೊಬ್ಬರೇ ಅರ್ಜಿ ಸಲ್ಲಿಸಿದ ನಂತರ, ತಮಗೇ ಟಿಕೇಟ್ ಎನ್ನುವ ಅಪಾರ ವಿಶ್ವಾಸದಲ್ಲಿದ್ದ ಜಿ. ಸೋಮಶೇಖರರೆಡ್ಡಿ, ಈಗಾಗಲೇ ನಾಮಪತ್ರ ಸಲ್ಲಿಕೆಗೆ ಸಿದ್ಧತೆ ನಡೆಸಿದ್ದಾರೆ. ಅವಿರತವಾಗಿ ಪ್ರಚಾರದಲ್ಲಿ ಪಾಲ್ಗೊಂಡು, ಇಡೀ ಕ್ಷೇತ್ರ ಸುತ್ತಿರುವ ಜಿ. ಸೋಮಶೇಖರರೆಡ್ಡಿ ಅವರು ಟಿಕೇಟ್ ಬಗ್ಗೆ ಆರಂಭದಲ್ಲಿ ತೀವ್ರ ಒತ್ತಡ, ಗೊಂದಲ ಮತ್ತು ಆತಂಕದಲ್ಲಿದ್ದರು. ಆದರೆ ಅವರೊಬ್ಬರೇ ಅರ್ಜಿ ಸಲ್ಲಿಸಿದ ನಂತರ, ಟಿಕೇಟ್ ಖಾತರಿ ಮಾಡಿಕೊಂಡು ಉತ್ಸಾಹದಿಂದ ಪ್ರಚಾರ ನಿರ್ವಹಿಸುತ್ತಿದ್ದಾರೆ. ಆದರೂ ನನಗೆ ಮತ ನೀಡಿ ಅನ್ನದೆ ಬಿಜೆಪಿಗೆ ಮತ ನೀಡಿ ಎಂದು ಮತ ಕೇಳುತ್ತಿರುವುದು ವಿಶೇಷ. ಬಿಜೆಪಿ ಈವರೆಗೆ ಟಿಕೇಟ್ ಕುರಿತಾಗಿ ಗ್ರೀನ್‍ ಸಿಗ್ನಲ್ ನೀಡದಿದ್ದರೂ ಏಪ್ರಿಲ್ 21 ರಂದು ನಾಮಪತ್ರ ಸಲ್ಲಿಸುವುದು ಗ್ಯಾರಂಟಿ ಆಗಿದೆ. ಇದೆಲ್ಲದರ ನಡುವೆ ನಾನು ಈ ಬಾರಿ ಸ್ಪರ್ಧಿಸುತ್ತೇನೆ. ಬಿಜೆಪಿ ಟಿಕೇಟ್ ನನ್ನದೇ. ಗೆಲುವೂ ನನ್ನದೇ. ಕಸಾಪುರ ಆಂಜನೇಯಸ್ವಾಮಿ ನನ್ನೊಂದಿಗಿದ್ದಾನೆ' ಎಂದು ಸೋಮಶೇಖರರೆಡ್ಡಿ ಆತ್ಮವಿಶ್ವಾಸದಿಂದ ಹೇಳುತ್ತಿರುವುದಂತು ಸುಳ್ಳಲ್ಲ. karnataka assembly elections 2018 district news ಕರ್ನಾಟಕ ವಿಧಾನಸಭೆ ಚುನಾವಣೆ 2018 ಜಾಹೀರಾತು ಬಳ್ಳಾರಿ ಜಿಲ್ಲಾಸುದ್ದಿ bellari
OSCAR-2019
ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದ? ಬಾಹುಬಲಿ ಚಿತ್ರ ತೆರೆಗೆ ಬಂದ ನಂತ್ರ ಸಿನಿ ಪ್ರಿಯರನ್ನು ಈವರೆಗೆ ಕಾಡ್ತಾ ಇರುವ ಬಹುಮುಖ್ಯ ಪ್ರಶ್ನೆ. ಕೋಟಿ ಜನರ ತಲೆ ಕೆಡಿಸಿರುವ ಈ Read more… ಹೈದರಾಬಾದ್ ಪೊಲೀಸರು ಬೃಹತ್ ಸೆಕ್ಸ್ ರ್ಯಾಕೆಟ್ ಜಾಲವನ್ನು ಬಯಲಿಗೆಳೆದಿದ್ದಾರೆ. ಆನ್ ಲೈನ್ ನಲ್ಲಿ ಕಾರ್ಪೋರೇಟ್ ಉದ್ಯಮದಂತೆ ವ್ಯವಸ್ಥಿತವಾಗಿ ನಡೆಯುತ್ತಿದ್ದ ಈ ಕರಾಳ ದಂಧೆಯ ಆಳ- ಅಗಲವನ್ನು ಕಂಡು ಪೊಲೀಸರೇ Read more…
OSCAR-2019
ಬಂದ್ ಮಾಡುವವರು ಕೇರಳ ಸಿಎಂ ಚಪ್ಪಲಿಗೂ ಸಮಾನರಲ್ಲ ಎಂಬ ಹೇಳಿಕೆ ಹೇಳುವ ಮೂಲಕ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯುಟಿ ಖಾದರ್ ವಿವಾದವನ್ನು ಸೃಷ್ಟಿಸಿದ್ದರು. ಇದೀಗ ಆ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಮತ್ತೆ ಈ ವಿಚಾರವಾಗಿ ಸ್ಪಷ್ಟನೆ ನೀಡಿದ ಅವರು, ಅಚಾತುರ್ಯದಿಂದ ಚಪ್ಪಲಿ ಎಂಬ ಪದ ಬಂದಿದೆ. ನಾನು ಯಾರನ್ನು ಅವಮಾನ, ನೋವು ಮಾಡಲು ಹೇಳಿಕೆ ನೀಡಿಲ್ಲ. ಕ್ಷಮೆ ಕೇಳಲ್ಲ, ಈ ಬಗ್ಗೆ ವಿಷಾದವಿದೆ. ಪಾಕಿಸ್ತಾನ ಪ್ರಧಾನಮಂತ್ರಿ ಬಂದಾಗ ಯಾರು ವಿರೋಧಿಸಿಲ್ಲ. ಹಿರಿಯರು, ದೇಶದ ಏಕೈಕ ಬಿಲ್ಲವ ಸಿಎಂ ಬಂದಾಗ ಕಚೇರಿಗೆ ಬೆಂಕಿ, ಬಸ್ ಗೆ ಕಲ್ಲು ತೂರಾಟ ನಡೆಯಿತು ಎಂದು ತಿಳಿಸಿದರು. ನನ್ನ ಸಣ್ಣ ಮಗಳು ಕೂಡ ಇದನ್ನು ತಪ್ಪು ಹೇಳಿದ್ದಾಳೆ. ಮುಂದೆ ಈ ರೀತಿ ಮಾತಾಡುವುದಿಲ್ಲ. ಇದನ್ನು ಕೆಲವರು ರಾಜಕೀಯ ಮಾಡುತ್ತಿದ್ದಾರೆ. ವಾಟ್ಸಪ್ ನಲ್ಲಿ ತಿರುಚುತ್ತಿದ್ದಾರೆ. ಸಿಪಿಎಂ ಸೌಹಾರ್ದತೆ ರ್ಯಾಲಿಯ ಘೋಷಣೆ ಸರಿಯಲ್ಲ ಎಂದು ಅವರು ತಿಳಿಸಿದರು. ಯುಟಿ ಖಾದರ್ ಹೇಳಿಕೆಗೆ ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ಧನರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹೇಳಿಕೆಯಿಂದ ಜಿಲ್ಲೆಗೆ ಕೆಟ್ಟ ಹೆಸರು ಬಂದಿದೆ. ಇದು ಸಂವಿಧಾನ ವಿರೋಧಿಗಳ ಹೇಳಿಕೆ ಎಂದಿದ್ದಾರೆ.
OSCAR-2019
ನವದೆಹಲಿ, ಮಾರ್ಚ್ 8: ತಮ್ಮ ಸಚಿವ ಸ್ಥಾನಕ್ಕೆ ಟಿಡಿಪಿ ಸಂಸದರಾದ ಅಶೋಕ್ ಗಜಪತಿ ರಾಜು ಮತ್ತು ವೈಎಸ್ ಚೌಧರಿ ರಾಜೀನಾಮೆ ನೀಡಿದ್ದಾರೆ. ಇಂದು ಸಂಜೆ 6.15ರ ಸುಮಾರಿಗೆ ಪ್ರಧಾನಿ ನಿವಾಸಕ್ಕೆ ತೆರಳಿದ ಸಚಿವರು ಪ್ರಧಾನಿಗೆ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. "ನಾವು ಎನ್.ಡಿ.ಎ ಮೈತ್ರಿಕೂಟದಿಂದ ಹೊರಕ್ಕೆ ಬರುವುದಿಲ್ಲ. ಆದರೆ ಯಾವುದೇ ಸಚಿವ ಸ್ಥಾನಗಳನ್ನು ತೆಗೆದುಕೊಳ್ಳುವುದಿಲ್ಲ. ಇದರಲ್ಲಿ ಯಾವುದೇ ತಪ್ಪಿಲ್ಲ ಎಂದು ನಾನು ಭಾವಿಸುತ್ತೇನೆ," ಎಂಬುದಾಗಿ ರಾಜೀನಾಮೆ ಸಲ್ಲಿಸಿದ ನಂತರ ಅಶೋಕ್ ಗಜಪತಿ ರಾಜು ಜೊತೆ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ವೈ.ಎಸ್.ಚೌಧರಿ ಹೇಳಿದ್ದಾರೆ. ಇದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಜತೆ ಕರೆ ಮಾಡಿ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಕೇಂದ್ರ ಸಚಿವರು ರಾಜೀನಾಮೆ ನೀಡುವ ಸಂಬಂಧ ನಾಯ್ಡು ಪ್ರಧಾನಿಗೆ ವಿವರಿಸಿದ್ದಾರೆ ಎಂದು ಟಿಡಿಪಿ ಮೂಲಗಳು ಹೇಳಿವೆ.
OSCAR-2019
ಬುಧವಾರ ಸಂಜೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಪತ್ರಿಕಾಗೋಷ್ಠಿ ನಡೆಸಿ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಇದಾದ ಬೆನ್ನಿಗೆ ಕೆರಳಿದ್ದ ಚಂದ್ರಬಾಬು ನಾಯ್ಡು ಟಿಡಿಪಿ ಎನ್.ಡಿ.ಎ ಮೈತ್ರಿಕೂಟದಿಂದ ಹೊರ ನಡೆಯುವ ಗಂಭೀರ ಬೆದರಿಕೆ ಹಾಕಿದ್ದರು. ಇದರ ಮೊದಲ ಯತ್ನವಾಗಿ ಇಬ್ಬರು ಟಿಡಿಪಿ ಸಂಸದರು ಕೇಂದ್ರ ಸಂಪುಟಕ್ಕೆ ಇಂದು ರಾಜೀನಾಮೆ ನೀಡಿದ್ದಾರೆ. ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ವೈಎಸ್ ಚೌಧರಿ ರಾಜೀನಾಮೆ ನೀಡಿದ್ದಾರೆ.
OSCAR-2019
ಇನ್ನು ಇಂದು ಬೆಳಿಗ್ಗೆ ಆಂಧ್ರ ಪ್ರದೇಶದ ಟಿಡಿಪಿ ಸಂಪುಟದಲ್ಲಿದ್ದ ಬಿಜೆಪಿ ಶಾಸಕರಾದ ಡಾ. ಕಾಮಿನೇನಿ ಶ್ರೀನಿವಾಸ್ ಮತ್ತು ಪೈದಿಕೊಂಡಲ ಮಾಣಿಕ್ಯಲ ರಾವ್ ರಾಜೀನಾಮೆ ನೀಡಿದ್ದರು. ಇನ್ನೊಂದು ಕಡೆ ವೈಎಸ್ಆರ್ ಮತ್ತು ಟಿಡಿಪಿ ಸಂಸದರು ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕೋರಿ ತಮ್ಮ ಪ್ರತಿಭಟನೆ ಮುಂದುವರಿಸಿದ್ದಾರೆ.
OSCAR-2019
ಬಾಂಗ್ಲಾ ವಿರುದ್ಧ ಥ್ರಿಲ್ಲಿಂಗ್ ಜಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರೊಬ್ಬರ ಮೇಲೆಯೂ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಭರ್ಜರಿ ಬ್ಯಾಟಿಂಗ್ ಮಾಡಿರೋದು ಈಗ ವೈರಲ್ ಸುದ್ದಿ. ಧೋನಿಯ ಈ ಮಾಧ್ಯಮ ನಿರ್ವಹಣೆ ಸ್ಟೈಲ್ ಇದೇ ಮೊದಲ ಬಾರಿಗೆ ಕಾಣ್ತಿರೋದಲ್ಲ, ಅಲ್ಲೂ ಧೋನಿಗೊಂದು ಹೊಸತನ ಇದೆ ಅನ್ನೋದು ನಾವೀಗ ನಿಮ್ಮ ಗಮನಕ್ಕೆ ತರಲು ಹೊರಟಿರೋದು. ಪಂದ್ಯದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಟೀಂ ಇಂಡಿಯಾ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ, ಪತ್ರಕರ್ತರೊಬ್ಬರನ್ನು ತರಾಟೆಗೆ ತೆಗೆದುಕೊಂಡಿರುವ ವಿಡಿಯೋ ವೈರಲ್ ಆಗುತ್ತಿದೆ. ಪಂದ್ಯದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು, ‘ನೀವು ಪಂದ್ಯವನ್ನು ಸುಲಭವಾಗಿ ಗೆಲ್ಬೋದಿತ್ತು. ಪರದಾಟ ನಡೆಸಿದ್ದು ಯಾಕೆ?’ ಎಂಬಂತೆ ಪ್ರಶ್ನೆ ಹಾಕಿದರು. ಇದರಿಂದ ಕೋಪಗೊಂಡ ಧೋನಿ, ‘ಭಾರತ ಗೆದ್ದಿರೋದಕ್ಕೆ ನಿಮಗೆ ಸಂತೋಷವಾಗಿಲ್ಲ ಅನ್ನೋದು ನೀವು ಪ್ರಶ್ನೆ ಕೇಳಿದ ರೀತಿಯಲ್ಲೇ ಗೊತ್ತಾಗುತ್ತದೆ. ಕ್ರಿಕೆಟ್ ಪಂದ್ಯ ಆಡುವಾಗ ಸ್ಕ್ರಿಪ್ಟ್ ಹಾಕಿಕೊಂಡು ಆಡಲು ಸಾಧ್ಯವಾಗುವುದಿಲ್ಲ. ಇಲ್ಲಿ ಮುಂಚಿತವಾಗಿ ಯಾವುದೇ ಸ್ಕ್ರಿಪ್ಟ್ ರೆಡಿಯಾಗಿರೋದಿಲ್ಲ. ನಾವು ಟಾಸ್ ಸೋತ ನಂತರ ಬ್ಯಾಟಿಂಗ್ ಮಾಡಿದ್ದು, ಪಿಚ್ ವರ್ತಿಸಿದ ರೀತಿ, ಯಾಕೆ ನಾವು ಹೆಚ್ಚು ರನ್ ಗಳಿಸಲು ಸಾಧ್ಯವಾಗಲಿಲ್ಲ ಎಂಬುದನ್ನು ಅವಲೋಕಿಸಬೇಕಾಗುತ್ತದೆ. ಅಂಥ ವಿಶ್ಲೇಷಣೆ ಶಕ್ತಿ ನಿಮಗಿದ್ದರೆ ಈ ಪ್ರಶ್ನೆ ಕೇಳುತ್ತಿರಲಿಲ್ಲ.’ ಎಂದು ಖಾರವಾಗಿ ಉತ್ತರಿಸಿದ್ದಾರೆ. ಏನಾದರೂ ಮಾತು ಸುತ್ತಬೇಕು ಅಂತ ಎಡಬಿಡಂಗಿ ಪ್ರಶ್ನೆಗಳನ್ನು ಕೇಳಿಕೊಂಡಿರುವ ಒಂದು ವರ್ಗದ ಪತ್ರಕರ್ತರಿಗೆ ಹೀಗೊಂದು ಬಿಸಿ ಮುಟ್ಟಿಸಬೇಕಿತ್ತು ಅಂತಲೇ ಸಾಮಾಜಿಕ ತಾಣಗಳಲ್ಲಿ ಜನ ಇದನ್ನು ಎಂಜಾಯ್ ಮಾಡ್ತಿದಾರೆ. ಆದ್ರೆ ನಿಮಗೆ ಗೊತ್ತಾ? ಮಾಧ್ಯಮ ಮಂದಿಗೆ ಧೋನಿ ಟಾಂಗ್ ಕೊಡೋದು, ಖಾರ ಉತ್ತರ ನೀಡಿರೋದು ಇದೇ ಮೊದಲೇನಲ್ಲ.ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯೆಯಲ್ಲಿಹಾಸ್ಯ ಹಾಗೂ ಮಾರ್ಮಿಕತೆ ಸೇರಿಸೋದ್ರಲ್ಲಿ ಧೋನಿ ಎತ್ತಿದ ಕೈ. ಹೀಗೆ ಧೋನಿ, ಪತ್ರಕರ್ತರಿಗೆ ವಿಭಿನ್ನ ಉತ್ತರ ನೀಡಿದ ಪ್ರಸಂಗಗಳು ಹೀಗಿವೆ. ‘ಇದು ನಿಮಗೆ ಬಿಟ್ಟ ವಿಚಾರ. ಈ ಬಗ್ಗೆ ಮಾಧ್ಯಮಗಳು ಒಂದು ಉತ್ತಮ ಸಂಶೋಧನೆ ನಡೆಸಬೇಕು. ಇದಕ್ಕಾಗಿ ಸಮಯವನ್ನೂ ತೆಗೆದುಕೊಳ್ಳಿ. ಆದರೆ, ನೀವು ಏನು ಬರಿತೀರೊ ಅದಕ್ಕೆ ವಿರುದ್ಧವಾಗಿರುತ್ತೆ ನನ್ನ ನಿರ್ಧಾರ’ ‘ಇದು ಸುದೀರ್ಘ ಪ್ರವಾಸ. ಒಂದೇ ದೇಶದಲ್ಲಿ ನಾಲ್ಕು ತಿಂಗಳಿನಿಂದ ಇದೀವಿ. ಇನ್ನು 20 ದಿನ ಇದ್ದರೆ, ಆಸ್ಟ್ರೇಲಿಯಾ ಪೌರತ್ವಕ್ಕೆ ಅರ್ಜಿ ಸಲ್ಲಿಸಬಹುದು.’ ಕಳೆದ ವರ್ಷ ಆಸ್ಟ್ರೇಲಿಯಾ ಪ್ರವಾಸದ ವೇಳೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಧೋನಿ ಮಾಡಿದ ಹ್ಯಾಸಕ್ಕೆ ಪತ್ರಕರ್ತರು ನಗೆಗಡಲಿನಲ್ಲಿ ತೇಲಿದ್ದನ್ನು ನೀವೇ ನೋಡಿ.. ‘ಅಲ್ಲಿಯೂ ಸತ್ತಿದ್ದೀರಿ.. ಇಲ್ಲಿಯೂ ಸತ್ತಿದ್ದೀರಿ.. ಈ ಎರಡು ಸಾವಿನಲ್ಲಿ ಯಾವುದು ಉತ್ತಮ ಸಾವು ಎಂದು ಕೇಳಿದಂತಿದೆ ನಿಮ್ಮ ಪ್ರಶ್ನೆ’ ನನ್ನ ಪ್ರದರ್ಶನದ ಬಗ್ಗೆ ನಾನೇ ವಿಮರ್ಶೆ ಮಾಡಿದರೆ, ಸ್ವಹಿತಾಸಕ್ತಿ ಸಂಘರ್ಷಕ್ಕೆ ಕಾರಣವಾಗುತ್ತೆ. ಹಾಗಾಗಿ ನೀವು ನನ್ನ ಪ್ರದರ್ಶನದ ಬಗ್ಗೆ ತೀರ್ಪು ತಿಳಿಯಲು ಪಿಐಎಲ್ (ಸಾರ್ವಜನಿಕ ಹಿತಾಸಕ್ತಿ ಅರ್ಜಿ) ಸಲ್ಲಿಸಿ. ‘ಒಬ್ಬ ವ್ಯಕ್ತಿಯ ಮೇಲೆ 100 ಕೆ.ಜಿ ಭಾರ ಹಾಕಿದ ನಂತರ, ಒಂದು ಪರ್ವತವನ್ನೇ ಆತನ ಮೇಲೆ ಇಟ್ಟರೆ ಏನೂ ವ್ಯತ್ಯಾಸವಾಗುವುದಿಲ್ಲ’ ‘ಆಸ್ಟ್ರೇಲಿಯಾದಲ್ಲಿ ಶ್ರೀಶಾಂತ್, ಡಾನ್ ಬ್ರಾಡ್ ಮನ್ ರೀತಿ ಬ್ಯಾಟಿಂಗ್ ಮಾಡಲು ಸಾಧ್ಯವಿಲ್ಲ. ಅವರವರ ಬ್ಯಾಟಿಂಗ್ ಮಾತ್ರ ಮಾಡಲು ಸಾಧ್ಯ’ ಹೆಲಿಕಾಪ್ಟರ್ ಗಳು ಎಲ್ಲ ಸ್ಥಳದಿಂದಲೂ ಹಾರಲು ಸಾಧ್ಯವಿಲ್ಲ. ಅದು ಕೇವಲ ನಿರ್ದಿಷ್ಟ ಸ್ಥಳದಿಂದ ಮಾತ್ರ ಹಾರುತ್ತದೆ. ನಾನು ಹೆಲಿಕಾಪ್ಟರ್ ಅನ್ನು ಸಮುದ್ರದೊಳಗಿಂದ ಹಾರಿಸಬೇಕು ಎಂದು ನಿರೀಕ್ಷಿಸಿದರೆ ಕಷ್ಟವಾಗುತ್ತದೆ. ಹೆಲಿಕಾಪ್ಟರ್ ಶಾಟ್ ಹೊಡೆಯಲು ನಿರ್ದಿಷ್ಟ ಎಸೆತವಿರುತ್ತದೆ. ಆ ಎಸೆತ ಬಾರದೇ ಇದ್ದರೆ ನಾನು ಹೊಡೆಯಲು ಹೇಗೆ ಸಾಧ್ಯ? ಬೌನ್ಸರ್ ಎಸೆತಕ್ಕೆ ಹೆಲಿಕಾಪ್ಟರ್ ಶಾಟ್ ಹೊಡೆಯಲು ಸಾಧ್ಯವಿಲ್ಲ. ಅದಕ್ಕಾಗಿ ನಾನು ಸ್ಟೂಲ್ ಹಾಕಿಕೊಳ್ಳಬೇಕಾಗುತ್ತದೆ. Previous articleಧೋನಿ ಲಕ್ ನಿಂದ ಗೆಲ್ತಾನೆ ಅನ್ನೋ ವಾದ ಬಾಂಗ್ಲಾ ವಿರುದ್ಧ ಪಂದ್ಯದಲ್ಲಿ ಅಡ್ಡಡ್ಡ ಮಲಗಿದ್ದು ಹೆಂಗೆ ಗೊತ್ತೇ?
OSCAR-2019
ಪರ್ಣಪಾತಿ ಎಂದರೆ ಪರಿಪಕ್ವತೆಯ ಘಟ್ಟದಲ್ಲಿ ಬೀಳುವುದು (ಉದುರುವುದು) ಅಥವಾ ಉದುರುವುದಕ್ಕೆ ಪ್ರವೃತ್ತವಾಗುವುದು ಎಂದು ಮತ್ತು ವಿಶಿಷ್ಟವಾಗಿ ಈ ಪದವನ್ನು ಕಾಲಕಾಲಕ್ಕೆ ತಮ್ಮ ಎಲೆಗಳನ್ನು ಕಳೆದುಕೊಳ್ಳುವ ಮರ ಹಾಗೂ ಪೊದೆಗಳ ಸಂಬಂಧದಲ್ಲಿ ಮತ್ತು ಹೂ ಬಿಟ್ಟ ನಂತರ ಪುಷ್ಪದಳಗಳ ಅಥವಾ ಪಕ್ವವಾದ ಹಣ್ಣುಗಳಂತಹ ಇತರ ಸಸ್ಯ ರಚನೆಗಳ ಉದುರುವಿಕೆಯ ಸಂಬಂಧದಲ್ಲಿ ಬಳಸಲಾಗುತ್ತದೆ. ಹೆಚ್ಚು ನಿಖರವಾದ ಅರ್ಥದಲ್ಲಿ, ಪರ್ಣಪಾತಿ ಎಂದರೆ ಮುಂದೆ ಅಗತ್ಯವಿರದ ಒಂದು ಭಾಗದ ಬೀಳುವಿಕೆ, ಅಥವಾ ಅದರ ಉದ್ದೇಶ ಮುಗಿದ ನಂತರ ಬೀಳುವಿಕೆ. ಸಸ್ಯಗಳ ಸಂಬಂಧದಲ್ಲಿ, ಇದು ನೈಸರ್ಗಿಕ ಪ್ರಕ್ರಿಯೆಗಳ ಪರಿಣಾಮ.
OSCAR-2019
ಮಂಡ್ಯ: ಮೋಕ್ಷಕ್ಕಾಗಿ ದೆಹಲಿಯಲ್ಲಿ ಕುಟುಂಬದ 11 ಮಂದಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ದೇಶವನ್ನೇ ಬೆಚ್ಚಿ ಬೀಳಿಸಿದ ಬೆನ್ನಲ್ಲೇ ಮಂಡ್ಯದಲ್ಲೂ ಸಹ ಮಾಂತ್ರಿಕನೋರ್ವ ಕುಟುಂಬವೊಂದಕ್ಕೆ ಆತ್ಮಹತ್ಯೆಗೆ ಪ್ರಚೋದಿಸಿರುವ ಘಟನೆ ಬೆಳಕಿಗೆ ಬಂದಿದೆ! ತಾಲೂಕಿನ ಮಾರಗೌಡನ ಹಳ್ಳಿ ಗ್ರಾಮದ ಅನಿತಾ ಕುಟುಂಬಕ್ಕೆ ಮೈಸೂರಿನ ಮಂಗಳ ಮುಖೀಮಾಂತ್ರಿಕನೋರ್ವ ಮೋಕ್ಷಕ್ಕಾಗಿ ಆತ್ಮಹತ್ಯೆಗೆ ಪ್ರಚೋದನೆ ನೀಡುತ್ತಿದ್ದ ಎನ್ನಲಾಗಿದೆ. ಈ ಸಂಬಂಧ ಮಹಿಳೆ ಮಾಂತ್ರಿಕನ ವಿರುದ್ಧ ಪೊಲೀಸರ ಬಳಿ ಹೇಳಿಕೊಂಡರೂ, ದೂರು ಮಾತ್ರ ದಾಖಲಾಗಿಲ್ಲ. ಸ್ಥಳೀಯ ನಿವಾಸಿ ಅನಿತಾ ಅವರು ಹುಣಸೂರಿನ ವ್ಯಕ್ತಿಯೊಬ್ಬರನ್ನು ಮದುವೆ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಈ ಮಧ್ಯೆ ತನ್ನ ಪತಿಗೆ ಮೈಸೂರಿನಲ್ಲಿ ಮಂಗಳಮುಖೀ ಮಾಂತ್ರಿಕ ನೋರ್ವ ಪರಿಚಯವಾಗಿದ್ದ. ಪತಿ ಆಗಾಗ ಜ್ಯೋತಿಷ್ಯ ಕೇಳಲು ಹೋಗುತ್ತಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಮಾಂತ್ರಿಕ, ಮೋಕ್ಷ ದೊರಕಬೇಕಾದರೆ ನೀವು ಭಗವಂತನ ಹೆಸರಿನಲ್ಲಿ ಧ್ಯಾನ ಮಾಡುತ್ತಾ, ಆತ್ಮಹತ್ಯೆ ಮಾಡಿಕೊಂಡಲ್ಲಿ ನಿಮಗೆ ಮೋಕ್ಷ ದೊರೆಯುತ್ತದೆ ಎನ್ನುವುದಾಗಿ ಹೇಳಿ ಪ್ರಚೋದಿಸಿದ್ದಾನೆ ಎಂದು ಆರೋಪಿಸಿದ್ದಾರೆ. ಈ ಕುರಿತು ಪತಿ, ಅನಿತಾಳಿಗೆ ತಿಳಿ ಸಿದ್ದ. ಆದರೆ ಅದರ ಬಗ್ಗೆ ಅಷ್ಟಾಗಿ ಆಕೆ ಮತ್ತು ಕುಟುಂಬದವರು ಗಮನ ನೀಡಲಿಲ್ಲ. ಅಷ್ಟಕ್ಕೇ ಸುಮ್ಮನಾಗದ ಮಾಂತ್ರಿಕ ಮತ್ತೆ ಮತ್ತೆ ಅನಿತಾ ಕುಟುಂಬದವರನ್ನು ಮೊಬೈಲ್‌ ಮೂಲಕ ಸಂಪರ್ಕಿಸಿ, ಮೋಕ್ಷಕ್ಕಾಗಿ ಆತ್ಮಹತ್ಯೆಗೆ ಶರಣಾಗುವಂತೆ ಪೀಡಿಸುತ್ತಿದ್ದ ಎಂದು ಹೇಳಲಾಗಿದೆ. ಈತನ ಕಾಟದಿಂದ ಬೇಸತ್ತ ಅನಿತಾ ಕುಟುಂಬದವರು ಆತನ ಬಳಿಗೆ ಸುಳಿಯುವುದನ್ನೇ ಬಿಟ್ಟಿದ್ದರು. ಆದರೂ ಮಾಂತ್ರಿಕನ ಕಾಟ ತಪ್ಪಿರಲಿಲ್ಲ. ಹೀಗಾಗಿ ಮಹಿಳೆ ಹುಣಸೂರು ಪೊಲೀಸರಿಗೆ ದೂರು ನೀಡಲು ಮುಂದಾದರಾದರೂ, ಪೊಲೀಸರು ದೂರು ದಾಖಲಿಸಿಕೊಳ್ಳದೇ ವಾಪಸ್‌ ಕಳುಹಿಸಿದ್ದರು. ಇತ್ತೀ ಚೆಗೆ ದೆಹಲಿಯಲ್ಲಿ ಒಂದೇ ಕುಟುಂಬದ ಹನ್ನೊಂದು ಮಂದಿ ಆತ್ಮ ಹತ್ಯೆ ಮಾಡಿ ಕೊಂಡ ಹಿನ್ನೆಲೆಯಲ್ಲಿ ಅನಿತಾ ಅವರು ವಾಹಿನಿಗಳಲ್ಲಿ ಬಂದ ಸುದ್ದಿ ಕಂಡು, ಇದೇ ರೀತಿ ಮಾಂತ್ರಿಕ ಮೋಕ್ಷಕ್ಕಾಗಿ ತಮಗೆ ಆತ್ಮ ಹತ್ಯೆ ಮಾಡಿಕೊಳ್ಳುವಂತೆ ಪ್ರಚೋದನೆ ನೀಡುತ್ತಿದ್ದಾನೆಂದು ಆರೋಪಿಸಿದ್ದಾರೆ. ಸದ್ಯ ಅನಿತಾ ಅವರು ಮೈಸೂರು ತಾಲೂಕು ಹುಣಸೂರಿ ನಲ್ಲಿ ವಾಸವಾಗಿರುವ ಕಾರಣ ಅವರ ತವರೂರಾಗಿರುವ ಮಾರಗೌಡನ ಹಳ್ಳಿ ಗ್ರಾಮದಲ್ಲಿರುವ ಅವರ ಪೋಷಕರನ್ನು ಸಂಪರ್ಕಿಸಲು ಕೆರಗೋಡು ಠಾಣೆ ಪೊಲೀಸರು ಯತ್ನಿಸುತ್ತಿದ್ದು, ಅವರಿಂದ ಮಾಹಿತಿ ಕಲೆ ಹಾಕಲು ನಿರತರಾಗಿದ್ದಾರೆ.
OSCAR-2019
ಬೆಂಗಳೂರು: ಕೌಟುಂಬಿಕ ವಿಷಯವಾಗಿ ಗುರುವಾರ ವಿಚಾರಣೆ ಹಾಜರಾಗಿದ್ದ ನಟ ದುನಿಯಾ ವಿಜಯ್‌ ಅವರು ಸಾರ್ವಜನಿಕರ ಹಾಗೂ ಕಾನೂನಿನ ವಿರುದ್ಧ ನಡೆದುಕೊಳ್ಳುವುದಿಲ್ಲ ಎಂದು ದಕ್ಷಿಣ ಭಾಗದ ಡಿಸಿಪಿ ಅಣ್ಣಾಮಲೈ ಅವರಿಗೆ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ. ಕೌಟುಂಬಿಕ ಕಲಹದಿಂದ ಬೀದಿ ರಂಪಾಟದ ಹಿನ್ನೆಲೆಯಲ್ಲಿ ಗಿರಿನಗರ ಠಾಣೆಯಲ್ಲಿ ನಾಗರತ್ನ ಹಾಗೂ ದುನಿಯಾ ವಿಜಯ್‌ ವಿರುದ್ಧ ಐಪಿಸಿ ಸೆಕ್ಷನ್ 107ರಡಿ ಪ್ರಕರಣ ದಾಖಲಿಸಿದ್ದರು. ವಿಚಾರಣೆಗೆ ಹಾಜರಾಗುವಂತೆ ವಿಜಯ್‌ ದಂಪತಿಗೆ ಪೊಲೀಸರು ನೋಟಿಸ್ ನೀಡಿದ್ದರು. ವಿಜಯ್ ಜೊತೆ ಆಗಮಿಸಿದ್ದ ಎರಡನೇ ಪತ್ನಿ ಕೀರ್ತಿಗೌಡ, ಪುತ್ರ, ತಂದೆ ಮತ್ತು ತಾಯಿ ಅವರ ಹೇಳಿಕೆಗಳನ್ನೂ ದಾಖಲಿಸಿಕೊಂಡರು. ವಿಜಯ್ ಮೊದಲ ಪತ್ನಿ ನಾಗರತ್ನ ಅವರು ವಿಚಾರಣೆಗೆ ಹಾಜರಾಗಿದ್ದರು. ಅಲ್ಲದೆ, ₹ 5 ಲಕ್ಷ ಭದ್ರತಾ ಠೇವಣಿ ಪಡೆದ ಡಿಸಿಪಿ, ಸಮಾಜ ಸ್ವಾಸ್ಥ್ಯ ಹಾಳು ಮಾಡಿದರೆ, ಕ್ರಮ ಕೈಗೊಳ್ಳಲಾಗುವುದು ಎಂದು ವಿಜಯ್‌ಗೆ ಎಚ್ಚರಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯ್‌, ಅಣ್ಣಾಮಲೈ ಅವರು ಪ್ರಾಮಾಣಿಕ ಅಧಿಕಾರಿ. ಅವರ ಬಗ್ಗೆ ತುಂಬಾ ಗೌರವವಿದೆ. ಅವರು ಹೇಳಿದ ರೀತಿ ನಡೆದುಕೊಳ್ಳುತ್ತೇನೆ’ ಎಂದರು.
OSCAR-2019
ಚೆನ್ನೈ: ‘ಸೂಪರ್‌ಸ್ಟಾರ್‌‘ ರಜನೀಕಾಂತ್‌ ಮತ್ತು ನಟ ಅಕ್ಷಯ್‌ಕುಮಾರ್‌ ನಟಿಸಿರುವ ‘2.0’ ಚಿತ್ರ ಇದೇ 29ರಂದು ವಿಶ್ವದಾದ್ಯಂತ ಏಕಕಾಲಕ್ಕೆ ತೆರಕಾಣಲಿದೆ. ಆರು ನೂರು ಕೋಟಿ ರೂಪಾಯಿ ವೆಚ್ಚದಡಿ ನಿರ್ಮಿಸಿರುವ ಈ ಚಿತ್ರವನ್ನು ಎಸ್‌. ಶಂಕರ್‌ ನಿರ್ದೇಶಿಸಿದ್ದಾರೆ. ತಮಿಳು, ಹಿಂದಿ ಮತ್ತು ತೆಲುಗಿನಲ್ಲಿ ಚಿತ್ರ ನಿರ್ಮಾಣಗೊಂಡಿದೆ. ಸುಭಾಷ್‌ಕರನ್ ಆರ್ಥಿಕ ಇಂಧನ ಒದಗಿಸಿದ್ದಾರೆ. ಇಲ್ಲಿನ ಸತ್ಯ ಚಿತ್ರಮಂದಿರದಲ್ಲಿ ಶನಿವಾರ ನಡೆದ ಅದ್ದೂರಿ ಸಮಾರಂಭದಲ್ಲಿ ಚಿತ್ರದ 3ಡಿಇ ಟ್ರೇಲರ್ ಅನ್ನು ಬಿಡುಗಡೆ ಮಾಡಲಾಯಿತು. ‘ಎಂಟು ವರ್ಷದ ಹಿಂದೆ ತೆರೆಕಂಡ ಎಂದಿರನ್‌ ಚಿತ್ರ ಕೂಡ ವಿಶ್ವದಾದ್ಯಂತ ಮ್ಯಾಜಿಕ್‌ ಮಾಡಿತ್ತು. ಈ ಚಿತ್ರದಲ್ಲೂ ನನ್ನ ಮ್ಯಾಜಿಕ್‌ ಮುಂದುವರಿಯಲಿದೆ. ಚಿತ್ರ ಸೂಪರ್‌ ಹಿಟ್‌ ಆಗುವುದು ನಿಶ್ಚಿತ‘ ಎಂದು ನಟ ರಜನೀಕಾಂತ್‌ ವಿಶ್ವಾಸ ವ್ಯಕ್ತಪಡಿಸಿದರು. ಆಧುನಿಕ ಯುಗದಲ್ಲಿ ತಂತ್ರಜ್ಞಾನ ನಮ್ಮನ್ನು ಆಳುತ್ತಿದೆ. ಅದು ಮನುಕುಲದ ಮೇಲೆ ಹೇಗೆ ದುಷ್ಪರಿಣಾಮ ಬೀರುತ್ತದೆ ಎನ್ನುವುದೇ ಚಿತ್ರದ ತಿರುಳು. ಇದನ್ನು ಶಂಕರ್‌ ರಂಜನೀಯವಾಗಿ ಹೇಳಿದ್ದಾರೆ. ಆರಂಭದಲ್ಲಿ ₹ 350 ಕೋಟಿ ವೆಚ್ಚದಡಿ ಚಿತ್ರ ನಿರ್ಮಿಸುವ ಯೋಜನೆ ಇತ್ತು. ದುಪ್ಪಟ್ಟು ಹಣ ಖರ್ಚಾಗಿದೆ. ಈ ಚಿತ್ರದ ಪ್ರಚಾರ ಬೇಕಿಲ್ಲ. ಸಿನಿಮಾ ನೋಡಿದ ಪ್ರೇಕ್ಷಕರು, ಅಭಿಮಾನಿಗಳೇ ಪ್ರಚಾರ ಮಾಡಲಿದ್ದಾರೆ ಎಂದು ಹೇಳಿದರು. ನಿರ್ದೇಶಕ ಶಂಕರ್ ಮಾತನಾಡಿ, ‘ಎಂದಿರನ್‌ ಚಿತ್ರದಲ್ಲಿ ರಜನಿ ಸರ್‌ ನಟನೆ ಮನೋಜ್ಞವಾಗಿತ್ತು. ಇದರಲ್ಲಿಯೂ ಆ ಮೊನಚು ಉಳಿದುಕೊಂಡಿದೆ. ಚಿಟ್ಟಿಯಾಗಿ ಅವರ ಅಭಿನಯ ಪ್ರೇಕ್ಷಕರಿಗೆ ಮೋಡಿ ಮಾಡಲಿದೆ ಎಂದು ಹೇಳಿದರು. ನಟಿ ಆ್ಯಮಿ ಜಾಕ್ಷನ್, ‘ರಜನೀಕಾಂತ್‌ ಅವರೊಟ್ಟಿಗೆ ಕೆಲಸ ಮಾಡುವ ಮೊದಲು ಸ್ವಲ್ಪ ಆತಂಕಗೊಂಡಿದ್ದೆ. ಆದರೆ, ಚಿತ್ರತಂಡದ ಸಹಕಾರದಿಂದ ನಟನೆ ಸುಲಭವಾಯಿತು’ ಎಂದು ಹೇಳಿದರು. ಚಿಟ್ಟಿಯೊಂದಿಗೆ ರೊಮ್ಯಾನ್ಸ್‌ ಮಾಡಲು ನಿಮಗಿಷ್ಟವೇ ಎಂಬ ಪ್ರೇಕ್ಷಕರ ಪ್ರಶ್ನೆಗೆ, ‘ಚಿಟ್ಟಿಯೊಂದಿಗೆ ನಟಿಸಿದ್ದೇನೆ. ನೀವು ಚಿತ್ರ ನೋಡಿದರೆ ನನ್ನ ನಟನೆಯ ಅರಿವಾಗುತ್ತದೆ’ ಎಂದು ಉತ್ತರಿಸಿದರು. ಈ ಚಿತ್ರದಲ್ಲಿ ಅಕ್ಷಯ್‌ ಕುಮಾರ್ ಅತಿಮಾನುಷ ಶಕ್ತಿಯ ರೂಪದಲ್ಲಿರುವ ಖಳನಟನಾಗಿ ನಟಿಸಿದ್ದಾರೆ. ತಮಿಳಿನಲ್ಲಿಯೇ ಮಾತನಾಡಿ ಪ್ರೇಕ್ಷಕರ ಮನಸೂರೆಗೊಂಡರು. ‘ನಾನು ತಮಿಳಿನಲ್ಲಿಯೇ ಮಾತನಾಡುತ್ತೇನೆ. ಇದಕ್ಕಾಗಿ ಮೂರು ತಾಸು ಕಷ್ಟಪಟ್ಟಿದ್ದೇನೆ ಎಂದ ಅವರು, ‘ಚೆನ್ನೈನ ಜನರಿಗೆ ನನ್ನ ವಂದನೆಗಳು. ಈ ಚಿತ್ರಕ್ಕೆ ನೀವೆಲ್ಲರೂ ಪ್ರೋತ್ಸಾಹ ನೀಡಬೇಕು’ ಎಂದರು. ‘ನನ್ನ ತಂದೆ ಸೇನೆಯಲ್ಲಿದ್ದರು. ಅವರಿಂದ ನಾನು ಶಿಸ್ತು ಕಲಿತೆ. ಪ್ರತಿದಿನ ಬೆಳಿಗ್ಗೆ 4ಗಂಟೆಗೆ ಏಳುತ್ತೇನೆ. ತಪ್ಪದೇ ವ್ಯಾಯಾಮ ಮಾಡುತ್ತೇನೆ. ಇದೇ ನನ್ನ ಫಿಟ್‌ನೆಸ್‌ ಗುಟ್ಟು‘ ಎಂದು ಹೇಳಿದರು. ‘ನಿಮ್ಮ ನೆಚ್ಚಿನ ಹೀರೊ ಯಾರು’ ಎಂಬ ಪ್ರಶ್ನೆ ಸಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್‌ಗೆ ಎದುರಾಯಿತು. ತುಟಿಯಂಚಿಯನಲ್ಲಿ ನಗು ತುಂಬಿಕೊಂಡ ಅವರು,ವೇದಿಕೆಯ ಕೆಳಗೆ ಆಸೀನರಾಗಿದ್ದ ರಜನೀಕಾಂತ್‌ ಅವರತ್ತ ನೋಡಿದರು. ‘ಸೂಪರ್‌ಸ್ಟಾರ್‌ ಅವರೇ ನನ್ನ ನಿಜವಾದ ಹೀರೊ. ಅವರ ಕಾರ್ಯದಕ್ಷತೆ, ಆಧ್ಯಾತ್ಮಿಕ ಜ್ಞಾನ ನನಗಿಷ್ಟ’ ಎಂದು ಹೇಳಿದರು. ‘ಸಂಗೀತವೇ ನನ್ನ ಉಸಿರು. ಹೆಚ್ಚಿನ ಶ್ರಮವಹಿಸಿ ಕೆಲಸ ಮಾಡಿದ್ದರಿಂದ 2.0 ಚಿತ್ರಕ್ಕೆ ಸಂಗೀತ ನೀಡುವ ವೇಳೆ ಎದುರಾದ ಒತ್ತಡವನ್ನು ನಿಭಾಯಿಸಲು ಸಾಧ್ಯವಾಯಿತು’ ಎಂದರು.
OSCAR-2019
ನವದೆಹಲಿ: ಎಲೆಕ್ಟ್ರಾನಿಕ್‌ ಮತಯಂತ್ರಗಳ (ಇವಿಎಂ) ವಿಶ್ವಾಸಾರ್ಹತೆ ಬಗ್ಗೆ 12ಕ್ಕೂ ಹೆಚ್ಚು ರಾಜಕೀಯ ಪಕ್ಷಗಳು ಪ್ರಶ್ನೆಗಳನ್ನು ಎತ್ತಿದ್ದವು. ಆದರೆ, ಅವುಗಳನ್ನು ದುರ್ಬಳಕೆ ಮಾಡಬಹುದು ಎಂದು ಸಾಬೀತು ಪಡಿಸುವಂತೆ ಚುನಾವಣಾ ಆಯೋಗ ಎಸೆದಿದ್ದ ಸವಾಲನ್ನು ಸ್ವೀಕರಿಸಿ, ಅದನ್ನು ಸಾಧಿಸಲು ಯಾವ ಪಕ್ಷಕ್ಕೂ ಸಾಧ್ಯವಾಗಿಲ್ಲ! ಆಯೋಗ ನೀಡಿದ್ದ ಸವಾಲನ್ನು ಸಿಪಿಎಂ ಮತ್ತು ಎನ್‌ಸಿಪಿಗಳು ಸ್ವೀಕರಿಸಿದ್ದವಾದರೂ, ಶನಿವಾರ ಆಯೋಜಿಸಲಾಗಿದ್ದ ಪರೀಕ್ಷೆಯಲ್ಲಿ ಅವುಗಳೂ ಭಾಗವಹಿಸಲಿಲ್ಲ. ಪರೀಕ್ಷೆ ಅವಧಿ ಮುಗಿದ ನಂತರ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ನಸೀಮ್‌ ಜೈದಿ, ‘ಆಯೋಗ ಬಳಸುತ್ತಿರುವ ಇವಿಎಂಗಳನ್ನು ದುರ್ಬಳಕೆ ಮಾಡಲು ಸಾಧ್ಯವೇ ಇಲ್ಲ. ಭವಿಷ್ಯದ ಎಲ್ಲ ಚುನಾವಣೆಗಳಲ್ಲಿ ಮತದಾನ ದೃಢೀಕರಣ ರಸೀದಿ ಮುದ್ರಣ ಯಂತ್ರಗಳನ್ನು ಬಳಸುವುದರಿಂದ ಈವಿಚಾರ ಅಪ್ರಸ್ತುತವಾಗಲಿದೆ’ ಎಂದರು. ಈ ಸವಾಲಿನಲ್ಲಿ ಭಾಗವಹಿಸಲು ತಾನು ಬಯಸುವುದಿಲ್ಲ. ಆದರೆ ಇವಿಎಂ ಪ್ರಕ್ರಿಯೆ ತಿಳಿಯಲು ಇಚ್ಛಿಸುವುದಾಗಿ ಸಿಪಿಎಂ ಹೇಳಿತ್ತು. ಎನ್‌ಸಿಪಿ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿತ್ತು. ಸವಾಲಿನ ಸಾಬೀತಿಗೆ ಈ ಎರಡು ಪಕ್ಷಗಳಿಗೆ ನಾಲ್ಕು ಗಂಟೆಗಳ ಕಾಲಾವಕಾಶವನ್ನು ಆಯೋಗ ನೀಡಿತ್ತು. ಇದಕ್ಕಾಗಿ ಇತ್ತೀಚೆಗೆ ಚುನಾವಣೆ ನಡೆದ ಉತ್ತರಪ್ರದೇಶ, ಪಂಜಾಬ್‌, ಉತ್ತರಾಖಂಡಗಳಲ್ಲಿ ಬಳಸಿದ್ದ ನಾಲ್ಕು ಮತಯಂತ್ರಗಳನ್ನೂ ಒದಗಿಸಿತ್ತು. ಸಿಪಿಎಂ ಪ್ರತಿನಿಧಿಗಳಿಗೆ ಇವಿಎಂಗಳ ಬಗ್ಗೆ ವಿಸ್ತೃತವಾಗಿ ಪ್ರಾತ್ಯಕ್ಷಿಕೆ ನೀಡಲಾಯಿತು. ಇದಕ್ಕೆ ಅವರು ತೃಪ್ತಿ ವ್ಯಕ್ತಪಡಿಸಿದರು ಎಂದು ಜೈದಿ ಹೇಳಿದರು. ಎಚ್ಚರಿಕೆ: ಆಯೋಗ ನೀಡಿದ್ದ ಸವಾಲಿನ ಕುರಿತಾಗಿ ಟೀಕೆ ಮಾಡುವ ಮೂಲಕ ಉತ್ತರಾಖಂಡ ಹೈಕೋರ್ಟ್‌ನ ಆದೇಶವನ್ನು ಯಾರಾದರೂ ಉಲ್ಲಂಘಿಸಿದರೆ, ಅಂಥವರ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಚುನಾವಣಾ ಆಯೋಗ ನೀಡಿದೆ. ಆಯೋಗ ಮುಂದಿಟ್ಟಿದ್ದ ಸವಾಲಿನ ಸಂವಿಧಾನ ಬದ್ಧತೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ್ದ ಉತ್ತರಾಖಂಡ ಹೈಕೋರ್ಟ್‌, ಇವಿಎಂಗಳ ನಿಷ್ಪಕ್ಷಪಾತ ಕಾರ್ಯನಿರ್ವಹಣೆಯ ಬಗ್ಗೆ ಸಂದೇಹ ಪಡಲು ಆಸ್ಪದ ಇಲ್ಲ ಎಂದು ಹೇಳಿತ್ತು.
OSCAR-2019
ಗುಲ್ಬರ್ಗ: ಹಸಿರುಕ್ರಾಂತಿಯ ತರುವಾಯ ಉತ್ಪಾದನೆ ಹೆಚ್ಚಳವಾದ ಧಾನ್ಯಗಳನ್ನು ಮಾತ್ರ ಪಡಿತರ ವ್ಯವಸ್ಥೆಯಲ್ಲಿ ವಿತರಿಸಲಾಗುತ್ತಿದೆ. ಇವುಗಳ ಜತೆಗೆ ಜೋಳ, ತೊಗರಿಬೇಳೆ ಇತರ ಕಿರುಧಾನ್ಯಗಳನ್ನು ಸೇರಿಸಬೇಕು ಎಂದು ಕರ್ನಾಟಕ ರಾಜ್ಯ ತೊಗರಿ ಬೆಳೆಗಾರರ ಸಂಘದ ಅಧ್ಯಕ್ಷ ಬಸವರಾಜ ಇಂಗಿನ ಆಗ್ರಹಿಸಿದರು. “ಪೌಷ್ಟಿಕಾಂಶಗಳಿಂದ ಸಂಪದ್ಭರಿತವಾದ ಕಿರುಧಾನ್ಯಗಳು ಆಹಾರ ಭದ್ರತೆ ಒದಗಿಸಬಲ್ಲವು. ಕೇವಲ ಅಕ್ಕಿ, ಗೋಧಿ ವಿತರಿಸುವುದನ್ನು ಬಿಟ್ಟು ಸಾಂಪ್ರದಾಯಿಕ ಧಾನ್ಯಗಳನ್ನೂ ಪಡಿತರ ವ್ಯವಸ್ಥೆಯಲ್ಲಿ ವಿತರಿಸಬೇಕು” ಎಂದು ಅವರು ಒತ್ತಾಯಿಸಿದರು. ಗುಲ್ಬರ್ಗ ದೂರದರ್ಶನ ಕೇಂದ್ರವು ಶುಕ್ರವಾರ ಇಲ್ಲಿ ಆಯೋಜಿಸಿದ್ದ ಕೃಷಿ ವಿಚಾರಸಂಕಿರಣ ಹಾಗೂ ಸಂವಾದವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಸಾಯನಿಕ ಬಳಸುವುದರಿಂದ ನೆಲದ ಫಲವತ್ತತೆ ಹಾಳಾಗುತ್ತದೆ ಎಂಬ ಬಗ್ಗೆ ಹಸಿರುಕ್ರಾಂತಿಯ ಪಿತಾಮಹ ಕೃಷಿ ವಿಜ್ಞಾನಿ ಎಂ.ಎಸ್.ಸ್ವಾಮಿನಾಥನ್ ಅವರೇ ಆತಂಕ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿ ಕೈಮೀರುವ ಮುನ್ನ ರೈತರು ಎಚ್ಚೆತ್ತುಕೊಂಡು ರಾಸಾಯನಿಕ ತ್ಯಜಿಸಬೇಕು ಎಂದು ಅವರು ಸಲಹೆ ಮಾಡಿದರು. ರೈತರು ಕೃಷಿಯನ್ನು ದೂರ ಮಾಡುತ್ತಿರುವುದಕ್ಕೆ ಇಂದಿನ ಶಿಕ್ಷಣ ಪದ್ಧತಿಯೇ ಕಾರಣ. ನೌಕರಿ ಪಡೆಯುವುದೇ ಶಿಕ್ಷಣದ ಉದ್ದೇಶ ಎಂಬಂತಾಗಿದೆ. ಕೃಷಿ ಬಗ್ಗೆ ಯುವಪೀಳಿಗೆಯಲ್ಲಿ ಆಸಕ್ತಿ ಮೂಡಿಸುವ ಅಗತ್ಯವಿದೆ ಎಂದು ಇಂಗಿನ ಅಭಿಪ್ರಾಯಪಟ್ಟರು. ಕೃಷಿ ಮಾರುಕಟ್ಟೆಯಲ್ಲಿ ಮಾಹಿತಿ ಮತ್ತು ತಂತ್ರಜ್ಞಾನದ ಉಪಯೋಗದ ಬಗ್ಗೆ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ ಪ್ರಧಾನ ವ್ಯವಸ್ಥಾಪಕ ಎಸ್.ಎಸ್.ಶಂಕರಮೂರ್ತಿ ಹಾಗೂ ತೊಗರಿಯಲ್ಲಿ ವಿದ್ಯುನ್ಮಾನ ವ್ಯಾಪಾರದ ಕುರಿತು ಎನ್‌ಸಿಡಿಎಕ್ಸ್‌ನ ಉಪಾಧ್ಯಕ್ಷ ರಮೇಶಚಂದ ಮಾಹಿತಿ ನೀಡಿದರು. ದೂರದರ್ಶನ ಕೇಂದ್ರದ ಸಹಾಯಕ ನಿರ್ದೇಶಕ ಎಂ.ಬಿ.ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮ ಅಧಿಕಾರಿ ಮೋಹನಕುಮಾರ ಸ್ವಾಗತಿಸಿದರು. ಜಿಲ್ಲೆಯ ವಿವಿಧೆಡೆಯಿಂದ ರೈತರು ಪಾಲ್ಗೊಂಡಿದ್ದರು. ಕಾರ್ಯಕ್ರಮದ ನಂತರ ಸಂವಾದ ನಡೆಯಿತು.
OSCAR-2019
ಕಡೂರು: ತಾಲ್ಲೂಕಿನ ಜೀವನಾಡಿ ಮದಗದ ಕೆರೆ ಮತ್ತು ಜಿಲ್ಲಾ ಪಂಚಾಯಿತಿ ಕ್ಷೇತ್ರವ್ಯಾಪ್ತಿಯಲ್ಲಿ ಒಂದು ಕೆರೆಯನ್ನು ವಿಹಾರತಾಣವಾಗಿ ರೂಪಿಸುವ ಬಗ್ಗೆ ಗಮನ ಹರಿಸುವುದಾಗಿ ಸರಸ್ವತಿಪುರ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸದಸ್ಯ ಬಿ.ಪಿ.ನಾಗರಾಜ್ ತಿಳಿಸಿದರು. ಎಮ್ಮೆದೊಡ್ಡಿ ಸಮೀಪದ ಮದಗದಕೆರೆ ತುಂಬಿ ಕೋಡಿ ಬಿದ್ದ ಪ್ರಯುಕ್ತ ಪತ್ನಿಯ ಜೊತೆಗೂಡಿ ಬುಧವಾರ ಕೆರೆಗೆ ಬಾಗಿನ ಅರ್ಪಿಸಿ ಅವರು ಮಾತನಾಡಿದರು. ವರುಣನ ಕೃಪೆಯಿಂದ ಬರದ ಛಾಯೆಯಲ್ಲಿದ್ದ ತಾಲ್ಲೂಕಿನ ರೈತರ ಮೊಗದಲ್ಲಿ ನಗು ಮೂಡಿದ್ದು ಮದಗದಕೆರೆಯಿಂದ ಸುತ್ತಮುತ್ತಲ ಹತ್ತಾರು ಕೆರೆಗಳು ಭರ್ತಿಯಾಗಲಿವೆ. ಇದರಿಂದ ಅಂತರ್ಜಲ ಹೆಚ್ಚಳವಾಗಿ ತಾಲ್ಲೂಕಿನ ನೂರಾರು ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಯಲಿದ್ದು ಜನಪ್ರತಿನಿಧಿಗಳ ಮೇಲಿನ ಅರ್ಧ ಹೊರೆ ಕಡಿಮೆ ಆಗಲಿದೆ ಎಂಬ ಆಶಯ ವ್ಯಕ್ತಪಡಿಸಿದ ಅವರು ಮದಗದಕೆರೆಯಿಂದ ಹೊರ ಬರುವ ನೀರು ಇಲ್ಲಿಗೆ ಸಂಪರ್ಕ ಕಲ್ಪಿಸುವ ರಸ್ತೆ ಮಧ್ಯೆ ಹರಿಯುತ್ತದೆ. ಬ್ರಹ್ಮದೇವರ ಕಟ್ಟೆಯ ಬಳಿ ಓವರ್‌ಬ್ರಿಡ್ಜ್ ನಿರ್ಮಿಸಿ ಸಂಚಾರಕ್ಕೆ ಸುಗಮ ವ್ಯವಸ್ಥೆ ಕಲ್ಪಿಸುವ ಮತ್ತು ಬಿಳಚೇನಹಳ್ಳಿ ಕೋಟೆ ಪ್ರದೇಶದ ಸಂಪರ್ಕವೇ ಕೆರೆಗೆ ನೀರು ಹರಿದುಬರುವ ಸಂದರ್ಭದಲ್ಲಿ ಕಡಿತಗೊಳ್ಳುತ್ತಿದ್ದು ಅಲ್ಲಿಯೂ ಮೇಲು ರಸ್ತೆ ನಿರ್ಮಿಸಲು ತಾವು ಶ್ರಮಿಸುವುದಾಗಿಯೂ, ಸುಮಾರು ಒಂದೂವರೆಯಿಂದ ಎರಡು ಕೋಟಿ ರೂಗಳ ವೆಚ್ಚದ ಈ ಯೋಜನೆ ಬಗ್ಗೆ ಶಾಸಕರ ಗಮನ ಸೆಳೆದು ಶೀಘ್ರ ಈ ವ್ಯವಸ್ಥೆ ಮಾಡಲು ಯತ್ನಿಸುವುದಾಗಿಯೂ ತಿಳಿಸಿದರು. ಮುಖ್ಯಮಂತ್ರಿಗಳ ಪ್ರದೇಶಾಭಿವೃದ್ಧಿ ನಿಧಿ ಅಡಿ ಮದಗದಕೆರೆ ಪ್ರದೇಶವನ್ನು ಪ್ರೇಕ್ಷಣೀಯ ಸ್ಥಳವಾಗಿ ಪರಿವರ್ತಿಸುವ ಬಗ್ಗೆ ಶಾಸಕರ ಗಮನಕ್ಕೆ ತಂದು ಅಭಿವೃದ್ಧಿಗೆ ಯತ್ನಿಸುವುದಾಗಿ ತಿಳಿಸಿದ ಅವರು ವರುಣನ ಕೃಪೆ ಮುಂದೆಯೂ ಹೀಗೇ ಇರಲಿ ರೈತರ ಬಾಳಲ್ಲಿ ಸಂತಸ ತರಲಿ ಎಂದು ಪ್ರಾರ್ಥಿಸುವುದಾಗಿ ನುಡಿದರು. ಈ ಸಂದರ್ಭದಲ್ಲಿ ಮಮತಾ, ಕವಿತಾ, ಅನುಷಾ, ರಮೇಶ್, ವಸಂತ, ಹರಿಪ್ರಸಾದ್, ಚಿಕ್ಕೇನಹಳ್ಳಿ ಹಾಲಪ್ಪ, ಎಂ.ಕೆ.ಗಂಗಾಧರ, ಮಲ್ಲಪ್ಪ, ಭಾರತಿ, ಸುಧಾ ಕಾಂತ, ನೇತ್ರಮ್ಮ, ಮುಕುಂದ ಮುಂತಾದವರು ಇದ್ದರು.
OSCAR-2019
ಮಹಿಳೆಯರ ಜಾತಕದಲ್ಲಿ ಚಂದ್ರನ ಸ್ಥಾನ ಅಶುಭವಾಗಿದ್ದಲ್ಲಿ ಅನೇಕ ಆರೋಗ್ಯ ಸಂಬಂಧಿ ಸಮಸ್ಯೆ ಕಾಡುತ್ತದೆ. ಗರ್ಭಪಾತ, ಒತ್ತಡ, ದೈಹಿಕ ದೌರ್ಬಲ್ಯ ಸೇರಿದಂತೆ ಅನೇಕ ರೋಗಗಳು ಕಾಡಲು ಶುರುವಾಗುತ್ತವೆ. ಇದಕ್ಕೆ ಚಂದ್ರನ ಬೇರೆ ಬೇರೆ ಸ್ಥಾನ ಕಾರಣವಾಗುತ್ತದೆ. ಚಂದ್ರ ಗ್ರಹ ಶನಿ, ಮಂಗಳ, ರಾಹು, ಕೇತುವಿನಿಂದ ಪೀಡಿತನಾಗಿದ್ದಲ್ಲಿ ಅಂಥ ಮಹಿಳೆಯರಿಗೆ ಮುಟ್ಟಿನ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಚಂದ್ರ ಮಹಿಳೆಯರನ್ನು ಪ್ರತಿನಿಧಿಸುವ ಗ್ರಹ. ಚಂದ್ರ ಪಾಪ ಗ್ರಹಗಳ ಪ್ರಭಾವಕ್ಕೊಳಗಾಗಿದ್ದರೆ ಅಥವಾ ಬಲಹೀನನಾಗಿದ್ದರೆ ಆ ಮಹಿಳೆ ಮೇಲೆ ನಕಾರಾತ್ಮಕ ಶಕ್ತಿ ಪ್ರಭಾವ ಹೆಚ್ಚಾಗುತ್ತದೆ. ಜಾತಕದಲ್ಲಿ ಶನಿ-ಮಂಗಳ ಉನ್ನತ ಸ್ಥಾನದಲ್ಲಿದ್ದು, ಕ್ರೂರ ಗ್ರಹದ ಪ್ರಭಾವ ಇದ್ರ ಮೇಲಿದ್ದರೆ ರಕ್ತ ಸಂಬಂಧಿ ಸಮಸ್ಯೆ ಮಹಿಳೆಯರನ್ನು ಕಾಡುತ್ತದೆ. ಜಾತಕದ ಐದನೇ ಸ್ಥಾನದಲ್ಲಿ ಕ್ರೂರ ಹಾಗೂ ಪಾಪದ ಗ್ರಹ ಬಂದಲ್ಲಿ, ಐದನೇ ಸ್ಥಾನದಲ್ಲಿ ಸೂರ್ಯ, ಶನಿ, ರಾಹು, ಕೇತು ಮಂಗಳವಾಗಿದ್ದರೆ ಸ್ತ್ರೀಗೆ ಗರ್ಭಧಾರಣೆ ಸಮಸ್ಯೆ ಕಾಡುತ್ತದೆ. ಜಾತಕದಲ್ಲಿ ಕಾಡುವ ಸಮಸ್ಯೆಗೆ ಜ್ಯೋತಿಷ್ಯದಲ್ಲಿ ಪರಿಹಾರವನ್ನೂ ಹೇಳಲಾಗಿದೆ. ಜಾತಕದಲ್ಲಿ ಸೂರ್ಯ ಗ್ರಹ ಸಂಬಂಧಿ ಸಮಸ್ಯೆ ಕಂಡು ಬಂದಲ್ಲಿ ಪ್ರತಿದಿನ ಸೂರ್ಯನಿಗೆ ಜಲವನ್ನು ಅರ್ಪಿಸಬೇಕು.
OSCAR-2019
ಇನ್ನೇನು ಕೇಂದ್ರ ಬಜೆಟ್ ಹತ್ತಿರದಲ್ಲಿದೆ. ಇಂಥ ಸಮಯದಲ್ಲಿ ಶುಕ್ರವಾರ, ಸಿ ಡಿ ದೇಶಮುಖ್ ಸ್ಮಾರಕ ಉಪನ್ಯಾಸ ನೀಡುತ್ತ ಆರ್ಬಿಐ ಗವರ್ನರ್ ರಘುರಾಮ ರಾಜನ್ ಎಚ್ಚರಿಸಿದ್ದಾರೆ- ‘ಆರ್ಥಿಕ ದರ ಸಾಧಿಸಿ ತೋರಿಸಬೇಕು ಎಂಬ ಒತ್ತಡಕ್ಕೆ ಬಿದ್ದು ನಾವು ಸಾಲದ ಇಟ್ಟಿಗೆ ಮೇಲೆ ಬೆಳವಣಿಗೆ ಸಾಧಿಸೋಕೆ ಹೋಗಬಾರದು. ಜಾಗತಿಕ ಅರ್ಥವ್ಯವಸ್ಥೆ ತಲ್ಲಣಿಸುತ್ತಿರುವ ಸಂದರ್ಭದಲ್ಲಿ ನಮ್ಮ ಶಕ್ತಿ ಇರುವುದೇ ಸಮಗ್ರ ಆರ್ಥಿಕತೆಯ ನಿರ್ವಹಣೆಯಲ್ಲಿ.’ ಹೌದು. ಆರ್ಬಿಐ ಗವರ್ನರ್ ರಘುರಾಮ ರಾಜನ್ ಅವರು ಯಾವತ್ತೂ ಸರ್ಕಾರದ ಯೆಸ್ ಗೆ ತಮ್ಮ ಯೆಸ್ ಸೇರಿಸಿ ಕೆಲಸ ಮುಗಿಸುವವರಲ್ಲ. ಹಾಗೆಂದೇ ಕೆಲವರಲ್ಲಿ ಇವರ ಬಗ್ಗೆ ಆಕ್ಷೇಪವೊಂದಿದೆ. ರಾಜನ್ ಅವರು ಮೋದಿ ಸರ್ಕಾರದ ವಿರೋಧಿಯಾ ಅಂತ. ಇದಕ್ಕೆ ಉತ್ತರ ಹುಡುಕಿಕೊಳ್ಳಬೇಕಿದ್ದರೆ, ಕೇವಲ ನಾಲ್ಕು ಹೇಳಿಕೆಗಳನ್ನು ಮುಂದಿರಿಸಿಕೊಂಡು ಅಳೆಯದೇ ಅವರ ವೃತ್ತಿಜೀವನದ ಬಗ್ಗೆ ಗಮನವಹಿಸಬೇಕಾಗುತ್ತದೆ. ಜೇಮ್ಸ್ ಬಾಂಡ್ ಆಫ್ ಬ್ಯಾಂಕಿಂಗ , ಚೆನ್ನೈ ಎಕ್ಸ್ಪ್ರೆಸ್ ಆಫ್ ಮಾರ್ಕೆಟ್ಸ್, ವಿತ್ತ ಜಗತ್ತಿನಲ್ಲಿಇವರ ಹೆಸರು ಈ ರೀತಿ ಚಾಲನೆಯಲ್ಲಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ದ 23ನೆ ಗವರ್ನರ್. ಈ ಹುದ್ದೆ ಪಡೆದ ಅತಿ ಚಿಕ್ಕ ಪ್ರಾಯದ ವ್ಯಕ್ತಿ. 2013ರ ಸೆಪ್ಟೆಂಬರ್ ತಿಂಗಳಲ್ಲಿಆರ್ಬಿಐ ಗವರ್ನರ್ ಹುದ್ದೆಗೇರಿದ ಈತ, ಚಲನಚಿತ್ರ ಗಳಲ್ಲಿ ಹೀರೋ ಗಳು ಮಾಡುವ ಕೆಲಸ ನಿಜ ಜೀವನದಲ್ಲಿ ಮಾಡಿದ್ದಾರೆ. ಜಗತ್ತಿನ ಹಣಕಾಸು ನಿಯಮ ಗಳಿಗೆ ಗಳಿಗೆಗೆ ಬದಲಾಗುತ್ತೆ. ಬದಲಾದ ಪರಿಸ್ಥಿತಿಗೆ ಭಾರತದಂತ ಬೃಹತ್ ದೇಶವನ್ನು ಒಗ್ಗಿಸಿ ಮುನ್ನೆಡೆಸುವುದು ಸುಲಭದ ಮಾತಲ್ಲ. ಅದು ಗೊತ್ತಿದ್ದೇ ವಿತ್ತ ವಲಯದಲ್ಲಿ ಈತನನ್ನು ರಾಕ್ ಸ್ಟಾರ್ ರಾಜನ್ ಎಂದೂ ಕೂಡ ಕರೆಯಲಾಗುತ್ತೆ. ಏನಿದು? ಈತನಿಗಿಂತ ಹಿಂದೆ 22 ರಿಸರ್ವ್ ಬ್ಯಾಂಕ್ ಗವರ್ನರ್ ಗಳು ಬಂದರು. ಅವರೆಲ್ಲರೂ ಮಹಾನ್ ಬುದ್ಧಿವಂತರೇ. ಆಗೆಲ್ಲಾ ಇಲ್ಲದ ಹೈಪ್ ಈತನಿಗೇಕೆ? ಯಾರು ಮಾಡದ್ದನ್ನು ಏನು ಮಾಡಿದ? RBI ಕೆಲಸ ರೆಪೋ ರೇಟ್ ಸಮಸ್ಥಿತಿಯಲ್ಲಿಡುವುದು, ಮಾರುಕಟ್ಟೆ ಯ ಬದಲಾವಣೆಗೆ ತಕ್ಕಂತೆ ರೇಟ್ ಹೊಂದಿಸುವುದು, ಇನಫ್ಲೇಶನ್ , ಡಿಫ್ಲೆಶನ್ ಎಂಬ ಎರಡು ಅಲುಗಿನ ಕತ್ತಿಯ ಮೇಲೆ ಸವಾರಿ ಮಾಡುವುದು , ಇವೆಲ್ಲಾ ಲಾಗಾಯ್ತಿನಿಂದ ಇದ್ದದ್ದೇ , ಹೊಸತೇನು? ಹೀಗೆ ನೂರಾರು ಪ್ರಶ್ನೆ ನಮ್ಮಲ್ಲಿ ಹುಟ್ಟುತ್ತೆ. ನಿಮಗೆ ಟಿ .ಎನ್ . ಶೇಷನ್ ನೆನಪಿರಬಹುದು. ಎಲೆಕ್ಷನ್ ಕಮಿಷನ್ ನ ಅಧ್ಯಕ್ಷರಾಗಿ ಇವರು ಬರುವ ಮೊದಲು ಹೀಗೊಂದು ಹುದ್ದೆ ಇದೆ ಎನ್ನುವುದೇ ಜನ ಸಾಮಾನ್ಯನಿಗೆ ತಿಳಿದಿರಲಿಲ್ಲ. ವ್ಯಕ್ತಿ ಭಿನ್ನವಾಗುವುದು ಹುದ್ದೆಯಿಂದಲ್ಲ, ನಡತೆಯಿಂದ. ರಾಜನ್ ಆ ರೀತಿ ಏನು ಮಾಡಿದರು, ಅವರಿಗೇಕೆ ಇಂಥ ಸಮ್ಮಾನ ತಿಳಿಯುವ ಮೊದಲು, ಆತನ ಬಾಲ್ಯ , ವಿದ್ಯಾಭ್ಯಾಸ, ಆರ್ಬಿಐ ಗವರ್ನರ್ ಹುದ್ದೆಗೂ ಮುಂಚೆ ಏನ್ಮಾಡ್ತ ಇದ್ದರು ಒಂದಷ್ಟು ತಿಳಿಯೋಣ. ರಘುರಾಮ ಗೋವಿಂದ ರಾಜನ್ ಹುಟ್ಟಿದ್ದು , ಫೆಬ್ರವರಿ 3, 1963 ರಲ್ಲಿ ಮಧ್ಯಪ್ರದೇಶದ ಭೋಪಾಲ್ ನಲ್ಲಿ. ತಂದೆ IB ( ಇಂಟೆಲ್ಲಿಜೆನ್ಸ್ ಬ್ಯೂರೊ ) ನಲ್ಲಿ ಸೀನಿಯರ್ ಆಫೀಸರ್. ಮೂಲತಃ ತಮಿಳುನಾಡಿಗೆ ಸೇರಿದ ಇವರು ಉದ್ಯೋಗಕ್ಕನುಗುಣವಾಗಿ ಭಾರತದ ಇತರ ರಾಜ್ಯ ನಗರಗಳಲ್ಲಿ ವಾಸಿಸುವಂತೆ ಆಯಿತು. ಹೀಗಾಗಿ ರಘುರಾಮ ರಾಮ ರಾಜನ್ ಜನನ ಮಧ್ಯಪ್ರದೇಶದಲ್ಲಿ, ನಂತರ ವಿಧ್ಯಾಭ್ಯಾಸ ಕೂಡ ತಮಿಳು ನಾಡಿನಿಂದ ದೂರವೇ! ಡೆಲ್ಲಿ ಪಬ್ಲಿಕ್ ಸ್ಕೂಲ್ ನಲ್ಲಿ ತಮ್ಮ ಪ್ರೌಡ ಶಿಕ್ಷಣ ಮುಗಿಸಿದ ರಾಜನ್, 1985ರಲ್ಲಿ ತಮ್ಮ ಪದವಿ ಪಡೆದದ್ದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ , ಡೆಲ್ಲಿ ಇಂದ. ಅದೂ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ನಲ್ಲಿ! ಭಾರತದಂತ ಬೃಹತ್ ದೇಶದ ವಿತ್ತ ಪ್ರಪಂಚದ ಚುಕ್ಕಾಣಿ ಹಿಡಿದಿರುವರು ಒಬ್ಬ ಇಂಜಿನಿಯರ್! 1987 ರಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಅಹಮದಾಬಾದ್ ನಿಂದ ಪಡೆದದ್ದು ಪೋಸ್ಟ್ ಗ್ರಾಜುಯೆಶನ್ ಡಿಪ್ಲೋಮೋ ಪದವಿ ಬಿಸಿನೆಸ್ ಅಡ್ಮಿನಿಸ್ಟ್ರೇಶನ್ ನಲ್ಲಿ. 1991ರಲ್ಲಿ ಇವರು ಬರೆದ ಮಹಾ ಪ್ರಬಂಧ Essays on Banking ಮಸ್ಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT , USA ) ವತಿಯಿಂದ ಪಿಎಚ್ಡಿ ಪದವಿ ದೊರಕಿಸಿ ಕೊಡುತ್ತದೆ. ಜಯಶ್ರೀ ರಾಜನ್ ಸಹೋದರಿ, ಮುಕುಂದ್ ರಾಜನ್ ಹಾಗು ಶ್ರೀನಿವಾಸ್ ರಾಜನ್ ಸಹೋದರರು. ರಘುರಾಮ ರಾಜನ್ ಬಾಲ್ಯದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಆತ ಓದಿನಲ್ಲಿ ಸದಾ ಮುಂದು. ರಘುರಾಮ ರಾಜನ್ ವ್ಯಕ್ತಿತ್ವವೇ ಹಾಗೆ. ಸರಿ ಅನ್ನಿಸದ್ದು ಸರಿ, ತಪ್ಪೆನ್ನಿಸಿದ್ದು ತಪ್ಪು ಎಂದು ಮುಲಾಜಿಲ್ಲದೆ ಹೇಳುವುದು. ತನ್ನ ವೃತ್ತಿಯ ಉತ್ತುಂಗದಲ್ಲಿ ಅಮೆರಿಕದಲ್ಲಿ ವಾಸ. ಕೈತುಂಬಾ ಹಣ, ಬಯಸಿದ್ದೆಲ್ಲಾ ಕಾಲ ಬುಡದಲ್ಲಿ ಇರುವಾಗ, ಅಮೆರಿಕದ ವಿತ್ತ ವ್ಯವಸ್ಥೆ ಸರಿ ಇಲ್ಲ, ಹಣಕಾಸು ನಿರ್ವಹಿಸುತ್ತಿರುವ ರೀತಿ ತರವಲ್ಲ ಎಂದು ಹೇಳಿದ ಕೆಲವೇ ಕೆಲವು ಮಂದಿಯಲ್ಲಿ ರಾಜನ್ ಪ್ರಮುಖರು. ವ್ಯವಸ್ಥೆಯ ಭಾಗವಾಗಿದ್ದು ವ್ಯವಸ್ಥೆಯ ಖಂಡಿಸುವುದು, ಅದನ್ನು ಸರಿ ಪಡಿಸಲು ಏನು ಮಾಡಬೇಕು, ಹೇಗೆ ನಿಭಾಯಿಸಬೇಕು ಎನ್ನುವ ಬಗ್ಗೆ ದೀರ್ಘ ಲೇಖನಗಳ ಬರೆಯುವುದು ಸಾಮಾನ್ಯ ಮಾತಲ್ಲ. ಎಲ್ಲಾ ಒಳ್ಳೆ ಕೆಲಸ ಮಾಡುವರಿಗೆ ವಿಘ್ನ ತಪ್ಪಿದ್ದಲ್ಲ, ರಘುರಾಮ ರಾಜನ್ ಇದರಿಂದ ಹೊರತಲ್ಲ. ಅದೆಲ್ಲವ ಮೆಟ್ಟಿ ತಮ್ಮ ನಿಲುವಿಗೆ ಬದ್ಧರಾಗಿ ನಿಂತದ್ದು ರಘುರಾಮ ರಾಜನ್ ವೃತ್ತಿ ಜೀವನದ ಮಹಾನ್ ಸಾಧನೆ. ನಿಧಾನವಾಗಿ ಅಮೆರಿಕದ ವಿತ್ತ ವಲಯಕ್ಕೆ ತಮ್ಮ ತಪ್ಪಿನ ಅರಿವಾಯಿತು. ೨೦೦೮ ರಲ್ಲಿ ಅಮೆರಿಕ ದಿವಾಳಿಯಾಗಲಿದೆ ಎಂದು ನಾಲ್ಕಾರು ವರ್ಷ ಮೊದಲೇ ವಿಶ್ವಕ್ಕೆ ಸಾರಿದ್ದ ರಘುರಾಮ ರಾಜನ್ ವಿಶ್ವದ ಮನೆ ಮಾತಾದರು. ತಮ್ಮ ತರ್ಕ ಬದ್ಧ ವಿಶ್ಲೇಷಣ ಬುದ್ಧಿಯಿಂದ ಸೂಪರ್ ಪವರ್ ಅಮೆರಿಕ ಕೂಡ ತಮ್ಮ ಒಪ್ಪಿ ಹೊಗಳುವುದಕ್ಕೆ ವಿವಶರಾಗಿಸಿದರು. ಹುಟ್ಟು ಗುಣ ಸುಟ್ಟರೂ ಹೋಗೋಲ್ಲ ಎನ್ನುತ್ತೆ ಒಂದು ಗಾದೆ. ರಘುರಾಮ ರಾಜನ್ ಆ ತರಹದ ವ್ಯಕ್ತಿ. ಸೋನಿಯಾ – ಮನಮೋಹನ್ ಇರಬಹುದು , ಮೋದಿ – ಜೇಟ್ಲಿ ಇರಬಹುದು; ಮತ್ತ್ಯಾವುದೇ ಲಾಭಿ ಇರಬಹುದು… ಇಲ್ಲ ಇದಾವುದಕ್ಕೂ ಸೊಪ್ಪು ಹಾಕುವರಲ್ಲ. ಮಾರ್ಕೆಟ್ ಏನು ಬಯಸುತ್ತೇ ಅದಕ್ಕೆ ತಕ್ಕಂತೆ ಪಾಲಿಸಿಗಳ ಬದಲಾವಣೆ ಹೊರತು ಯಾವುದೊ ಹಿತಾಸಕ್ತಿಯ ಉದ್ಧಾರಕ್ಕಲ್ಲ. ಪಿಎಚ್ಡಿ ಪದವಿ ಮುಗಿಸಿದ ನಂತರ ಚಿಕಾಗೊ ಯುನಿವರ್ಸಿಟಿ ಯಲ್ಲಿ ಅಸ್ಸಿಸ್ಟಂಟ್ ಪ್ರೊಫೆಸರ್ ಆಗಿ ವೃತ್ತಿ ಜೀವನ ಶುರು. ನಂತರ 1997 ರಲ್ಲಿ ವಿಸಿಟಿಂಗ್ ಪ್ರೊಫೆಸರ್ ಆಗಿ ಸ್ಟಾಕ್ಹೋಂ ಯುನಿವರ್ಸಿಟಿ ಯಲ್ಲಿ ಹುದ್ದೆ. 2003 ರಲ್ಲಿ IMF ( ಇಂಟರ್ನ್ಯಾಷನಲ್ ಮೊನಿಟರಿ ಫಂಡ್ ) ಚೀಫ್ ಎಕನಾಮಿಸ್ಟ್ ಆಗಿ ನೇಮಕ. 2006ರ ಡಿಸೆಂಬರ್ ವರೆಗೆ ಆ ಹುದ್ದೆಯಲ್ಲಿ ಮುಂದುವರಿಕೆ. 2005ರಲ್ಲಿ ಅತ್ಯಂತ ವಿವಾದಾತ್ಮಕ ಲೇಖನ Has Financial Development Made the World Riskier? ಬರೆಯುತ್ತಾರೆ. ತದನಂತರ ಕೆಲವು ಸಮಯದವರೆಗೆ ಮತ್ತೆ ಶಿಕ್ಷಕ ವೃತ್ತಿ. 2008ರಲ್ಲಿ ಭಾರತ ಸರಕಾರದ ಫೈನಾನ್ಸಿಯಲ್ ಸೆಕ್ಟರ್ ರಿಫಾರ್ಮ್ಸ್ ಕಮಿಟಿಯ ಅಧ್ಯಕ್ಷ. ನಂತರ ಮನಮೋಹನ ಸಿಂಗರಿಗೆ ಆರ್ಥಿಕ ಸಲಹೆಗಾರ. 2013ರ ಸೆಪ್ಟೆಂಬರ್ ನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ನ ಗವರ್ನರ್ ಹುದ್ದೆ. ಹಾಗೆ ನೋಡಿದರೆ ರಾಜನ್ ಸವೆಸಿದ ಹಾದಿ ಸುಗಮವೇನಲ್ಲ. ತಮ್ಮ ನಿಲುವಿಗೆ ಬದ್ಧರಾಗಿ, ಗಾಳಿ ಬಂದಾಗ ತೂರಿಕೊಳ್ಳದ ಇವರ ಗುಣ ಇಂದು ಅವರನ್ನು ಈ ಮಟ್ಟಕ್ಕೆ ಮುಟ್ಟಿಸಿದೆ. ಇಂಥ ಸಾಮರ್ಥ್ಯದ ಅರಿವಿರುವುದರಿಂದಲೇ ಪಕ್ಷದೊಳಗಿನವರ ಅಪಸ್ವರದ ಹೊರತಾಗಿಯೂ ಪ್ರಧಾನಿ ನರೇಂದ್ರ ಮೋದಿ, ರಾಜನ್ ಕಾರ್ಯದಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ. ಅಲ್ಲದೇ, ಆರ್ಥಿಕ ನೀತಿ ಕುರಿತು ಆಗಾಗ ಭಿನ್ನ ಅಭಿಪ್ರಾಯಗಳು ಮೈತಳೆಯುತ್ತಿದ್ದರೂ ಉಭಯರಿಗೂ ಪರಸ್ಪರ ಗೌರವವಿದೆ. ‘ಪ್ರಧಾನಿ ಮೋದಿ ನಮ್ಮೆಲ್ಲರಿಗಿಂತ ಮುಂದಿದ್ದಾರೆ. ಅವರ ವಿದೇಶ ಪ್ರವಾಸಗಳಲ್ಲಾದ ಕಾರ್ಯವನ್ನು ಅಧಿಕಾರಿ ವರ್ಗ ಫಾಲೊ ಅಪ್ ಮಾಡಿದ್ದೇ ಹೌದಾದರೆ ಅದ್ಭುತ ಫಲ ಸಿಗುತ್ತದೆ’ ಅಂತ ರಾಜನ್ ಹೇಳಿದ್ದರು. ಮೋದಿಯವರು ರಾಜನ್ ಬಗ್ಗೆ ಮಾತನಾಡುತ್ತ, ‘ರಘುರಾಮ್ ರಾಜನ್ ಕೇವಲ ಎಕಾನಮಿಸ್ಟ್ ಮಾತ್ರವೇ ಅಲ್ಲ. ಅವರೊಳಗೊಬ್ಬ ಅಧ್ಯಾಪಕನಿದ್ದಾನೆ. ಹತ್ತೆಂಟು ಕಡತಗಳನ್ನು ಹರವಿಟ್ಟು ವಿದ್ಯಾರ್ಥಿಗೆ ಪಾಠ ಅರ್ಥ ಮಾಡಿಸುವಂತೆ ನನಗೆ ಮನಗಾಣಿಸುವ ಕುಶಲತೆ ಅವರಲ್ಲಿದೆ’ ಎಂದಿದ್ದರು. “ಪ್ರೀತಿ” ಅಂದರೆ ಏನು? ವ್ಯಾಲಂಟೈನ್ ದಿನದ ಗುಂಗಲ್ಲಿ ಹಲವರು ಹಲವು ರೀತಿ ಪುಂಖಾನುಪುಂಖ ವ್ಯಾಖ್ಯಾನ ನೀಡಬಹುದೇನೋ? ಆದರೆ, ಪ್ರೀತಿ ಅಂದರೇನು ಅಂತ ಫಾಕ್ಸ್ ನ್ಯೂಸ್.ಕಾಂ ತನ್ನ ಓದುಗರ ಪ್ರತಿಕ್ರಿಯೆ ಕೇಳಿದಾಗ, ಯೋಧನ ಮಡದಿಯೊಬ್ಬಳು ನಾಲ್ಕು ಸಾಲು ಬರೆದಳು. ಅದು ನಿಮ್ಮನ್ನು ಕವಿತೆಯ ಥರ ಕಾಡದಿದ್ದರೆ ಹೇಳಿ! ಪ್ರೀತಿ ಅಂದರೆ ಏನು ಎಂಬ ಪ್ರಶ್ನೆ ಕೌತುಕದ್ದು. ವೈಯಕ್ತಿಕ ನೆಲೆಯಲ್ಲಿ ಇದಕ್ಕೆ ಉತ್ತರಿಸೋದು ನನ್ನ ಮಟ್ಟಿಗಂತೂ ಸುಲಭವಾಗಿದೆ ಈಗ. ನನ್ನ ಪತಿ ನೌಕಾಸೇನೆಯಲ್ಲಿ ನಾಲ್ಕನೇ ಬಾರಿ ದೂರಪ್ರದೇಶದ ಕರ್ತವ್ಯದಲ್ಲಿ ನಿಯೋಜನೆಗೊಂಡು ಮತ್ತೆ ವಾಪಸ್ಸಾಗುತ್ತಿದ್ದಾರೆ. ವಿಮಾನ ನಿಲ್ದಾಣದಲ್ಲಿ ನಿಂತು ನಿನ್ನ ನಾಲ್ಕು ಮುದ್ದು ಮಕ್ಕಳೊಂದಿಗೆ ವಿಮಾನ ಹತ್ತುವವರೆಗೆ ಮರೀನ್ ರನ್ನು ನೋಡುವುದು… ವಿಮಾನ ನಿರ್ಗಮಿಸುವವರೆಗೂ, ಆ ಸದ್ದು ಕೊನೆಯಾಗುವವರೆಗೂ ಆಗುವ ಮನಸ್ಸಿನ ತಳಮಳವೇ ಪ್ರೀತಿ. ಇವರು ತುಂಬಾ ಚಿಕ್ಕ ಮಕ್ಕಳಾಗಿರುವುದರಿಂದ ಇಸ್ಲಾಮಿಕ್ ಭಯೋತ್ಪಾದನೆ ಅಥವಾ ಇಸಿಸ್ ನ ಬಗ್ಗೆ ಅರ್ಥವಾಗುವುದಿಲ್ಲ. ಅವುಗಳ ಕುರಿತೇನೂ ಹೇಳದೇ ತಂದೆಯ ವಿದಾಯದ ಅವಶ್ಯವನ್ನು ಆ ಪುಟ್ಟ ಹೃದಯಗಳಿಗೆ ಘಾಸಿಯಾಗದಂತೆ ಮನದಟ್ಟುಗೊಳಿಸೋದೇ ಪ್ರೀತಿ. ಆತ ಇನ್ನೊಂದು ವರ್ಷ ಕುಟುಂಬವನ್ನು ಹೇಗೆ ಬಿಟ್ಟಿರಲಿ ಅಂತ ಕಳವಳಗೊಳ್ಳುತ್ತಲೇ, ತಾನಲ್ಲದಿದ್ದರೆ ಮತ್ತೊಬ್ಬರಾದರೂ ಈ ಕರ್ತವ್ಯ ನೆರವೇರಿಸಲೇಬೇಕಲ್ಲ ಅಂತ ಯುದ್ಧಭೂಮಿಗೆ ಹೊರಟು ನಿಲ್ತಾನಲ್ಲ… ಅದೇ ಪ್ರೀತಿ. ಮೊದಲ ಅಪ್ಪುಗೆ, ಮೊದಲ ಮುತ್ತು ನೆನಪಿಸಿಕೊಳ್ಳುತ್ತಿರುವಾಗಲೇ, ಮರಳಿಬಂದಾತನನ್ನು ನೋಡುತ್ತ 5 ವರ್ಷದ ಮಗು ‘ಇವನೇ ನನ್ನಪ್ಪನಾ’ ಅಂತ ಕೇಳುವಾಗ ‘ಮತ್ತೆ ನನ್ನ ಕುಟುಂಬ ಒಂದಾಗ್ತಿದೆಯಲ್ಲ’ ಅಂತ ಆನಂದಿಸೋದೇ ಪ್ರೀತಿ. ಆತನಿಲ್ಲದೇ ನಾವು ಪರಿಪೂರ್ಣರಲ್ಲ ಎಂಬುದನ್ನು ಅರ್ಥಮಾಡಿಕೊಂಡು ಅವನನ್ನು ದೇವರ ಅಭಯಹಸ್ತವೊಂದು ನಿರಂತರ ಪೊರೆಯುತ್ತಿರುತ್ತದಲ್ಲ… ಅದುವೇ ಪ್ರೀತಿ. ಒಂದು ಸಾರಿ ಪ್ರೀತಿ ಆವರಿಸಿಕೊಂಡ ನಂತರ ಅದನ್ನು ಸುಲಭಕ್ಕೆ ಪರಿಗಣಿಸಿಬಿಡುತ್ತೇವೆ. ಪ್ರೀತಿ ಹೇಗೆಂದರೂ ಇದ್ದಲ್ಲೇ ಇರುತ್ತದೆ ಅಂತ ನಿರಾಳರಾಗಿಬಿಡುತ್ತೇವೆ. ಹಾಗಲ್ಲದೇ ಅದನ್ನು ಕಳೆದುಕೊಳ್ಳುವ ಸಾಧ್ಯತೆಗಳ ಅರಿವೊಂದು ಮೂಡುತ್ತದೆಯಲ್ಲ… ನಾವು ಈ ಪ್ರೀತಿಯನ್ನು ಪಡೆಯಲು ಎಷ್ಟೆಲ್ಲ ಹೋರಾಡಿದೆವೆಂಬುದನ್ನು ನೆನಪಲ್ಲಿ ಇಟ್ಟುಕೊಳ್ಳುತ್ತಲೇ, ಇದನ್ನು ಕಳೆದುಕೊಳ್ಳೋದು ಸಹ ಕಷ್ಟದ್ದಲ್ಲ ಎಂಬ ಎಚ್ಚರಿಕೆಯಿಂದ ಇರೋದು.. Previous articleವ್ಯಾಲಂಟೈನ್ ದಿನ ಹೇಗೆ ಆಚರಿಸೋದು ಅಂದ್ಕೊಳ್ತಿದೀರಾ? ತವರಿಗೆ ಮರಳುತ್ತಿರುವ ಈ ವೀರ ಮಹಿಳೆಯರಿಗೆ ಹೆಮ್ಮೆಯ ಸೆಲ್ಯೂಟ್ ಕೊಡಿ ಸಾಕು!
OSCAR-2019
ಹಿಂದೂ ಧರ್ಮದಲ್ಲಿ ಸಂಪತ್ತಿನ ದೇವತೆಯೆಂದೇ ಪೂಜಿಸಲ್ಪಡುವಂತಹ ಲಕ್ಷ್ಮೀ ದೇವಿಯನ್ನು ವರಮಹಾಲಕ್ಷ್ಮೀ ಎಂದೂ ಕರೆಯಲಾಗುವುದು. ಲಕ್ಷ್ಮೀ ದೇವಿಯ ಆಶೀರ್ವಾದ ಪಡೆಯಲು ವರಮಹಾಲಕ್ಷ್ಮಿ ಪೂಜೆ ಅಥವಾ ವರಮಹಾಲಕ್ಷ್ಮೀ ವ್ರತ ಕೈಗೊಳ್ಳಲಾಗುವುದು. ದಕ್ಷಿಣ ಭಾರತ ಮತ್ತು ಮಹಾರಾಷ್ಟ್ರದೆಲ್ಲೆಡೆ ವಿವಾಹಿತ ಮಹಿಳೆಯರು ತಮ್ಮ ಕುಟುಂಬದ ಸುಖ ಹಾಗೂ ಸಮೃದ್ಧಿಗಾಗಿ ವರಮಹಾಲಕ್ಷ್ಮೀ ವ್ರತ ಆಚರಿಸಲಾಗುತ್ತದೆ. ಶ್ರಾವಣ ಮಾಸದಲ್ಲಿ ಬರುವಂತಹ ಹುಣ್ಣೆಮೆಗೆ ಮೊದಲಿನ ಶುಕ್ರವಾರದಂದು ಇದನ್ನು ಆಚರಿಸಲಾಗವುದು. ಈ ವರ್ಷ ವರಮಹಾಲಕ್ಷ್ಮೀ ಪೂಜೆಯು ಆಗಸ್ಟ್ 24ರಂದು ಆಚರಿಸಲಾಗುವುದು. ಪೂಜೆಗೆ ಗುರುವಾರದಂದು ಎಲ್ಲಾ ರೀತಿಯ ತಯಾರಿಗಳನ್ನು ನಡೆಸಲಾಗುವುದು. ಪುರಾಣಗಳಲ್ಲಿ ಬೇರೆ ಬೇರೆ ಹಬ್ಬಗಳ ಆಚರಣೆಗೆ ಇರುವಂತೆ ವರಮಹಾಲಕ್ಷ್ಮೀ ಆಚರಣೆಗು ತನ್ನದೇ ಆಗಿರುವಂತಹ ಕಥೆಯಿದೆ. ಇದಲ್ಲಿ ಜನಪ್ರಿಯವಾಗಿರುವುದು ಚಾರುಮತಿ ಕಥೆ. ಒಂದು ಶಿವ ದೇವರದಲ್ಲಿ ಅವರ ಪತ್ನಿ ಪಾರ್ವತಿಯು ಪ್ರಶ್ನೆಯೊಂದನ್ನು ಕೇಳುವರು. ಭೂಮಿ ಮೇಲೆ ಮಹಿಳೆಯರು ತಮಗೆ ಬೇಕಾಗಿರುವ ಒಳ್ಳೆಯ ವೈವಾಹಿಕ ಜೀವನ, ಮಕ್ಕಳು, ಮೊಮ್ಮಕ್ಕಳು ಮತ್ತು ಸಂಪತ್ತನ್ನು ಪಡೆಯುವುದು ಹೇಗೆ ಎಂದು? ವರಮಹಾಲಕ್ಷ್ಮೀ ಪೂಜೆ ಮಾಡುವಂತಹ ಮಹಿಳೆಗೆ ತನ್ನ ಜೀವನದಲ್ಲಿ ಬಯಸಿದ ಎಲ್ಲವೂ ಸಿಗುವುದು ಎಂದು ಶಿವ ದೇವರು, ಚಾರುಮತಿಯ ಕಥೆಯನ್ನು ವಿವರಿಸುವರು. ಮಗದ ದೇಶದಲ್ಲಿ ಸದ್ಗುಣದ ಪ್ರತೀಕದಂತಿದ್ದ ಚಾರುಮತಿ ಎಂಬ ಮಹಿಳೆಯು ಪರಿಪೂರ್ಣ ಪತ್ನಿ, ಸೊಸೆ ಮತ್ತು ತಾಯಿಯಾಗಿರುವಳು. ಆಕೆಯಿಂದ ಪ್ರಭಾವಿತಳಾಗುವ ಲಕ್ಷ್ಮೀ ದೇವಿಯು, ಒಂದು ದಿನ ಚಾರುಮತಿಯ ಕನಸಿನಲ್ಲಿ ಬಂದು ಶ್ರಾವಣ ತಿಂಗಳಲ್ಲಿ ಹುಣ್ಣಿಮೆಗೆ ಮೊದಲು ಬರುವ ಶುಕ್ರವಾರದಂದು ತನ್ನನ್ನು ಪೂಜಿಸುವಂತೆ ಹೇಳುವರು. ಭಕ್ತಿಪೂರ್ವಕವಾಗಿ ಪೂಜೆ ಮಾಡಿದರೆ ಜೀವನದಲ್ಲಿ ಇಚ್ಛಿಸಿರುವುದನ್ನು ಪಡೆಯುವಳು ಎಂದು ಲಕ್ಷ್ಮೀ ದೇವಿಯು ಹೇಳುವರು. ಲಕ್ಷ್ಮೀ ದೇವರು ಹೇಳಿದಂತೆ ಚಾರುಮತಿಯು ಪೂಜೆ ಮಾಡವಳು ಮತ್ತು ಪೂಜೆಗೆ ನೆರೆಮನೆಯವರು ಹಾಗೂ ಸಂಬಂಧಿಕರನ್ನು ಕರೆಯುವಳು. ಪೂಜೆ ಕೊನೆಗೊಳ್ಳುತ್ತಿದ್ದಂತೆ ಮಹಿಳೆಯು ಚಿನ್ನ ಹಾಗೂ ಅಮೂಲ್ಯ ರತ್ನಗಳಿಂದ ಅಲಂಕರಿಸಲ್ಪಟ್ಟರು ಮತ್ತು ಆಕೆಯ ಮನೆಯು ಬಂಗಾರವಾಯಿತು. ಮಹಿಳೆಯು ಜೀವನಪೂರ್ತಿ ಪೂಜೆ ಮಾಡಿಕೊಂಡು ತನ್ನ ಜೀವನವನ್ನು ಸುಖ ಹಾಗೂ ಸಮೃದ್ಧಿಯಿಂದ ಕಳೆದಳು. ಅಂದಿನಿಂದ ವರಮಹಾಲಕ್ಷ್ಮಿ ಪೂಜೆಯನ್ನು ವಿವಾಹಿತ ಮಹಿಳೆಯರು ನೆರವೇರಿಸುತ್ತಾ ಬಂದಿದ್ದು ಬಂಗಾರಕ್ಕೂ ಮಿಗಿಲಾದ ಆರೋಗ್ಯ ಮತ್ತು ನೆಮ್ಮದಿಗಳನ್ನು ಉಡುಗೊರೆಯಾಗಿ ಪಡೆದುಕೊಳ್ಳುತ್ತಾ ಬಂದಿದ್ದಾರೆ.... ರಾಹುಕಾಲವು ತುಂಬಾ ಅಶುಭವಾಗಿರುವ ಕಾರಣದಿಂದಾಗಿ ಈ ಸಮಯದಲ್ಲಿ ವರಮಹಾಲಕ್ಷ್ಮೀ ಪೂಜೆ ಮಾಡಬಾರದು. ಶುಕ್ರವಾರದಂದು ಸಾಮಾನ್ಯವಾಗಿ ರಾಹುಕಾಲವು ಬೆಳಗ್ಗೆ 10.20ರಿಂದ ಮಧ್ಯಾಹ್ನ 12 ಗಂಟೆ ತನಕ ಇರುವುದು. ಇದರಿಂದ ವರಮಹಾಲಕ್ಷ್ಮೀ ಪೂಜೆಯನ್ನು ಬೆಳಗ್ಗೆ 10.30ರ ಮೊದಲು ಮಾಡಬೇಕು ಅಥವಾ ಮಧ್ಯಾಹ್ನ 12 ಗಂಟೆ ಬಳಿಕ ಮಾಡಿ. ದೇಶದ ಕೆಲವು ಭಾಗಗಳಲ್ಲಿ ವರಮಹಾಲಕ್ಷ್ಮೀ ಪೂಜೆಯನ್ನು ಸಂಜೆ ಗೋಧೂಳಿ ಲಗ್ನದಲ್ಲಿ ಮಾಡಲಾಗುತ್ತದೆ. ನೆನಪಿಡಿ- ಪೂಜೆಯ ದಿನದ ರಾಹುಕಾಲ ಪ್ರಶಸ್ತ ಸಮಯವಲ್ಲ. ಸಾಮಾನ್ಯವಾಗಿ ಬೆಳಿಗ್ಗೆ ಹತ್ತೂವರೆಯಿಂದ ಹನ್ನೆರಡು ಘಂಟೆಯವರೆಗೆ ರಾಹುಕಾಲವಿದ್ದು ಈ ಅವಧಿಯ ಆಚೀಚಿನ ಹೊತ್ತಿನಲ್ಲಿ ಪೂಜೆನಡೆಸುವುದು ಅತ್ಯಂತ ಶುಭವಾಗಿದೆ. ಅಂದರೆ ಬೆಳಿಗ್ಗೆ ಹತ್ತೂವರೆಗೂ ಮೊದಲು ಅಥವಾ ಮದ್ಯಾಹ್ನ ಹನ್ನೆರಡರ ಬಳಿಕ ಪೂಜೆ ನಡೆಸಿದರೆ ಅತ್ಯುತ್ತಮವಾಗಿದೆ. ಇನ್ನೂ ಹಲವೆಡೆ ಗೋಧೂಳಿಯ ಸಮಯ ಈ ಪೂಜೆಗೆ ಪ್ರಶಸ್ತ ಎಂದು ಭಾವಿಸಲಾಗಿದೆ. ವಿವಿಧ ರೀತಿಯ ಕಡಲೆಯಿಂದ ಮಾಡಿದ ತಿಂಡಿಗಳನ್ನು ಈ ದಿನ ತಿನ್ನಲಾಗುತ್ತದೆ. ಒಬ್ಬಟ್ಟು ಮತ್ತು ಇತರ ಕೆಲವೊಂದು ರೀತಿಯ ಸಿಹಿ ಕೂಡ ತಿನ್ನಲಾಗುತ್ತದೆ. ದೇಶದ ಕೆಲವೊಂದು ಭಾಗದಲ್ಲಿ ಪೂಜೆ ಮಾಡಲು ಉಪವಾಸ ಮಾಡುವುದು ಅತೀ ಅಗತ್ಯ ಮತ್ತು ಪೂಜೆ ಕೊನೆಗೊಂಡ ಬಳಿಕ ಆಹಾರ ಸೇವನೆ ಮಾಡಬಹುದು. ಇನ್ನು ಪೂಜೆಯ ಸಮಯದಲ್ಲಿ ಒಬ್ಬಟ್ಟು ಮತ್ತು ಇತರ ಸಿಹಿತಿಂಡಿಗಳನ್ನು ನೈವೇದ್ಯವಾಗಿ ಅರ್ಪಿಸಿ ಬಳಿಕ ಮನೆಯವರೆಲ್ಲರೂ ಪ್ರಸಾದದ ರೂಪದಲ್ಲಿ ಸೇವಿಸಬಹುದು. ಕೆಲವು ಕಡೆಗಳಲ್ಲಿ ಈ ದಿನ ಉಪವಾಸದ ದಿನವಾಗಿ ಆಚರಿಸಿ ಪೂಜೆ ಸಂಪನ್ನಗೊಂಡ ಬಳಿಕವೇ ಆಹಾರ ಸ್ವೀಕರಿಸಲಾಗುತ್ತದೆ. ಉಪವಾಸವನ್ನು ಬೆಳಗ್ಗೆಯಿಂದ ಪೂಜೆ ಕೊನೆಗೊಳ್ಳುವ ತನಕ ಮಾಡಬಹುದು. ಕೆಲಸ ಮಾಡುತ್ತಲಿದ್ದರೆ, ಗರ್ಭಿಣಿ, ಅನಾರೋಗ್ಯದಿಂದ ಇರುವವರು ಅಥವಾ ಔಷಧಿ ತೆಗೆದುಕೊಳ್ಳುತ್ತಿರುವವರು ಉಪವಾಸ ಮಾಡಬೇಡಿ. ಕಾರಣಾಂತರಗಳಿಂದ ಈ ಪೂಜೆ ನೆರವೇರಿಸಲಾಗದ ಮಹಿಳೆಯರು ಮುಂದಿನ ಶುಕ್ರವಾರ ನೆರವೇರಿಸಬಹುದು. ಅದೂ ಸಾಧ್ಯವಾಗದಿದ್ದ ಪಕ್ಷದಲ್ಲಿ ನವರಾತ್ರಿಯ ಶುಕ್ರವಾರದಂದೂ ನೆರವೇರಿಸಬಹುದು. ನಿಮಗೆ ಪೂಜೆ ನೆರವೇರಿಸಲು ಸಾಧ್ಯವಾಗದೆ ಇದ್ದರೆ ಅಥವಾ ಯಾವುದೇ ಪರಿಸ್ಥಿತಿಯಲ್ಲಿ ಇದು ತಪ್ಪಿ ಹೋದರೆ ಆಗ ಮುಂದಿನ ಶುಕ್ರವಾರ ಅಥವಾ ನವರಾತ್ರಿಯಲ್ಲಿ ಬರುವ ಶುಕ್ರವಾರದಂದು ನೀವು ಇದರ ಆಚರಣೆ ಮಾಡಬಹುದು.ಇನ್ನು ವರಮಹಾಲಕ್ಷ್ಮಿ ಪೂಜೆಯಲ್ಲಿ ಮೂರ್ತಿಗೆ ಅಲಂಕಾರವನ್ನು ನೀವು ಚೆನ್ನಾಗಿ ಮಾಡಬೇಕು. ನಿಮ್ಮ ಮಂಟಪಕ್ಕೆ ಹೊಂದಿಕೊಳ್ಳುವ ಮೂರ್ತಿಯನ್ನು ಆಯ್ಕೆಮಾಡಿ. ಮೂರ್ತಿಯ ಅಲಂಕಾರಕ್ಕೆ ಸಮನಾಗಿ ಮಂಟಪದ ಅಲಂಕಾರ ಕೂಡ ಇರಲಿ. ಅಲ್ಲದೇ ಪೂಜೆಯಲ್ಲಿ ರಂಗೋಲಿ ಹೆಚ್ಚು ಪ್ರಾಮುಖ್ಯವಾದುದು. ಸಾಂಪ್ರದಾಯಿಕ ರಂಗೋಲಿ ವಿನ್ಯಾಸವನ್ನು ಪ್ರಯತ್ನಿಸುವುದರ ಜೊತೆಗೆ, ಹೊಸ ಮತ್ತು ವಿನ್ಯಾಸದ ರಂಗೋಲಿಯನ್ನು ನೀವು ಹಾಕಬಹುದಾಗಿದೆ. ಎಣ್ಣೆಯ ದೀಪಗಳನ್ನು ಇರಿಸುವುದರ ಮೂಲಕ ರಂಗೋಲಿ ವಿನ್ಯಾಸಗಳನ್ನು ಅಲಂಕರಿಸಿ.ನಿಮ್ಮ ಹಬ್ಬವನ್ನು ಇನ್ನಷ್ಟು ನೆನಪಿನಲ್ಲುಳಿಯುವಂತೆ ಮಾಡಲು ಈ ಅಲಂಕಾರದ ವಿಧಾನಗಳನ್ನು ಅನುಸರಿಸಿ. ಇದು ಆಧ್ಯಾತ್ಮಿಕ ವಾತಾವರಣವನ್ನು ಸೃಷ್ಟಿಸುವುದು ಖಂಡಿತ. ಪೂಜೆ ಬಳಿಕ 9 ಗಂಟುಗಳು ಇರುವ ಮತ್ತು ಮಧ್ಯದಲ್ಲಿ ಹೂ ಇರುವಂತಹ ದಾರವನ್ನು ಬಲ ಕೈಗೆ ಕಟ್ಟಿಕೊಳ್ಳಬೇಕು. ಇದು ಆಚರಣೆಯ ಪ್ರಮುಖ ಅಂಶ. ವರಮಹಾಲಕ್ಷ್ಮೀ ಪೂಜೆಯನ್ನು ಯಾರಿಂದಲೂ ಒತ್ತಾಯಪೂರ್ವಕವಾಗಿ ಮಾಡಿಸಬಾರದು. ಇಂದಿನ ದಿನಗಳಲ್ಲಿ ಹೆಚ್ಚಿನವರಿಗೆ ಪೂಜೆ ಮಾಡಲು ಇಷ್ಟವಿರಲ್ಲ. ಪೂಜೆ ಮಾಡುವಂತೆ ಯಾರನ್ನೂ ಒತ್ತಾಯಿಸಬಾರದು. ಯಾಕೆಂದರೆ ಅವರ ಇಚ್ಛೆಗೆ ವಿರುದ್ಧವಾಗಿ ಮತ್ತು ಮನಸ್ಸಿಲ್ಲದೆ ಮಾಡಿದ ಪೂಜೆಯ ಫಲವು ಸಿಗದು. ಇತ್ತೀಚೆಗಷ್ಟೇ ಹೆರಿಗೆಯಾದ ಮಹಿಳೆ ಮತ್ತು ಹೆರಿಗೆಯಾಗಿ 22 ದಿನ ಕಳೆಯದ ಹೊರತಾಗಿ ಈ ಪೂಜೆ ಮಾಡುವುದು ಅಶುಭವೆಂದು ಪರಿಗಣಿಸಲಾಗಿದೆ.
OSCAR-2019
ಕೇರಳ ಶಿಕ್ಷಕರ ಅರ್ಹತಾ ಪರೀಕ್ಷೆ (ಕೆ.ಟಿ.ಟಿ.ಟಿ) ಯನ್ನು ರಾಜ್ಯದಾದ್ಯಂತ ವಿವಿಧ ಕೇಂದ್ರಗಳಲ್ಲಿ ನಡೆಸಲಾಗುತ್ತದೆ. ಕೇರಳ ಟಿಇಟಿಯನ್ನು ಕೀ 2018 ಗೆ ಹುಡುಕುವ ಅಭ್ಯರ್ಥಿಗಳು ಇಲ್ಲಿಂದ ಕೇರಳ ಟಿಇಟಿ ಲಿಖಿತ ಪರೀಕ್ಷೆಯ ಉತ್ತರವನ್ನು ಡೌನ್ಲೋಡ್ ಮಾಡಬಹುದು. ಪ್ರತಿ ವರ್ಷವೂ ಈ ಪರೀಕ್ಷೆಯನ್ನು ಸರ್ಕಾರಿ ಶಾಲೆಗಳಿಗೆ ಶಿಕ್ಷಕರು ನೇಮಿಸಿಕೊಳ್ಳಲು ನಡೆಸಲಾಗುತ್ತದೆ. ಕೆ.ಇ.ಟಿ.ಟಿ ಉತ್ತರ ಕೀ ಕೀ 2018, ಕೆ.ಇ.ಟಿ.ಟಿ ಆಯ್ಕೆ ಪ್ರಕ್ರಿಯೆ, ಮತ್ತು ಕೇರಳ ಶಿಕ್ಷಕರ ನೇಮಕಾತಿ ಪರೀಕ್ಷೆಯ ಬಗ್ಗೆ ಮತ್ತು ಇತರ ಪ್ರಮುಖ ಮಾಹಿತಿಗಳನ್ನು ಇಲ್ಲಿ ಕೇರಳ ಟಿಇ ಪರೀಕ್ಷೆಗೆ ಹೇಗೆ ಡೌನ್ಲೋಡ್ ಮಾಡಬೇಕೆಂಬುದರ ಬಗ್ಗೆ ಎಲ್ಲ ವಿವರಗಳನ್ನು ಪಡೆಯಿರಿ. ಕೀ ಪಿಡಿಎಫ್ ಉತ್ತರ ಕೀಲಿಯನ್ನು ಇಲ್ಲಿ ನೀಡಲಾಗಿದೆ.
OSCAR-2019
ಧಾರವಾಡ/ ಹೊಸಪೇಟೆ: ಛತ್ರಪತಿ ಶಿವಾಜಿ ಜಯಂತಿ ಆಚರಣೆ ವೇಳೆ ಸೋಮವಾರ ಧಾರವಾಡದಲ್ಲಿ ಪಾಲಿಕೆ ಸದಸ್ಯರೊಬ್ಬರು ತಮ್ಮ ರಿವಾಲ್ವರ್‌ನಿಂದ ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದರೆ, ಬಳ್ಳಾರಿಯ ಕಮಲಾಪುರದಲ್ಲಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಮಸೀದಿ ಮೇಲೆ ಕಲ್ಲು ತೂರಿ, ಕಿಟಕಿ ಗಾಜು ಒಡೆದಿದ್ದಾರೆ. ಧಾರವಾಡ ಜಿಲ್ಲಾ ಕಾಂಗ್ರೆಸ್‌ ಮುಖಂಡರೂ ಆದ ಪಾಲಿಕೆಯ ನಾಮಕರಣ ಸದಸ್ಯ ಮಂಜುನಾಥ ಕದಂ, ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡುವಾಗ ಗುಂಡು ಹಾರಿಸಿದರು. ಸ್ಥಳದಲ್ಲಿದ್ದ ಪೊಲೀಸರೂ ರಿವಾಲ್ವರ್‌ ಸದ್ದು ಕೇಳಿ ಕಕ್ಕಾಬಿಕ್ಕಿಯಾದರು. ತಕ್ಷಣ ಕದಂ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ‘ಪರವಾನಗಿ ಇದ್ದ ರಿವಾಲ್ವರ್‌ ಆದ ಕಾರಣ ಅವರ ವಿರುದ್ಧ ಪ್ರಕರಣ ದಾಖಲಿಸಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ. ಮರಾಠ ವಿದ್ಯಾ ಪ್ರಸಾರಕ ಮಂಡಳದ ಅಧ್ಯಕ್ಷರೂ ಆಗಿರುವ ಕದಂ ಪ್ರತಿಕ್ರಿಯಿಸಿ, ‘ಶಿವಾಜಿ ಉತ್ಸವದ ಸಂದರ್ಭದಲ್ಲಿ ಈ ಹಿಂದಿನ ಅಧ್ಯಕ್ಷರು ಡಬ್ಬಲ್ ಬ್ಯಾರಲ್ ಬಂದೂಕು ತರಿಸಿ ಗಾಳಿಯಲ್ಲಿ ಗುಂಡು ಹಾರಿಸಿದ್ದರು. ನಾನು ಅದೇ ಪರಂಪರೆ ಮುಂದುವರೆಸಿದ್ದೇನೆ’ ಎಂದು ಹೇಳಿದರು. ಆದರೆ, ಮಂಡಳದ ಹಿಂದಿನ ಅಧ್ಯಕ್ಷ ಮೋಹನ ಮೋರೆ ಅದನ್ನು ನಿರಾಕರಿಸಿದ್ದು, ‘ಅಂಥ ಉದ್ಧಟತನ ಪ್ರದರ್ಶಿಸಿರಲಿಲ್ಲ’ ಎಂದು ಸಮಜಾಯಿಷಿ ನೀಡಿದ್ದಾರೆ. ಮಸೀದಿಗೆ ಕಲ್ಲು: ಕಮಲಾಪುರ ಪಟ್ಟಣದಲ್ಲಿ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಟಿಪ್ಪು ಸುಲ್ತಾನ್‌ ಭಾವ ಚಿತ್ರವಿರುವ ಫಲಕಕ್ಕೆ ಅವಮಾನಗೊಳಿಸಿ, ಮಸೀದಿ ಮೇಲೆ ಕಲ್ಲು ತೂರಿದರು. ಇದರಿಂದ ಕೆರಳಿದ ಮುಸ್ಲಿಮರು ಪ್ರತಿಯಾಗಿ ಪ್ರತಿಭಟನೆ ನಡೆಸಿದರು. ಎರಡೂ ಕಡೆಯವರು ಕೈಯಲ್ಲಿ ದೊಣ್ಣೆ, ಕಲ್ಲುಗಳನ್ನು ಹಿಡಿದುಕೊಂಡು ಓಡಾಡುತ್ತಿದ್ದರೂ ಪೊಲೀಸರಿಗೆ ಅದನ್ನು ತಡೆಯಲು ಸಾಧ್ಯವಾಗಲಿಲ್ಲ. ಧಾರವಾಡ: ‘ಗಾಳಿಯಲ್ಲಿ ಗುಂಡು ಹಾರಿಸುವುದು ಸಂಪ್ರದಾಯ’ ಎಂದು ಹುಬ್ಬಳ್ಳಿ– ಧಾರವಾಡ ಪೊಲೀಸ್ ಕಮಿಷನರ್‌ ಎಂ.ಎನ್.ನಾಗರಾಜ್‌ ಪ್ರತಿಕ್ರಿಯೆ ನೀಡಿದರು. ‘ಶಿವಾಜಿ ಜಯಂತಿ, ವಿಜಯ ದಶಮಿ ಸಂದರ್ಭಗಳಲ್ಲಿ ಕೆಲವರು ಗಾಳಿಯಲ್ಲಿ ಗುಂಡು ಹಾರಿಸುತ್ತಾರೆ. ತಲ್ವಾರ್‌ ಹಿಡಿದು ಬಾಳೆಕಂಬ ಕತ್ತರಿಸುವ ಹಾಗೆ ರಿವಾಲ್ವರ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಅಷ್ಟೇ. ಇದನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯ ಇಲ್ಲ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
OSCAR-2019
ನೇತಾಜಿ ತಾನು ಧರಿಸಿದ್ದ ಪೇಟವನ್ನು ಶಿವಾಜಿಯ ಕಾಲಬುಡಕ್ಕೆ ತಾನೇ ಕಿತ್ತೆಸೆದ. ಶಿವಾಜಿ ಅವನನ್ನು ಆಲಂಗಿಸಿಕೊಂಡ. ಪುನಃ ಹಿಂದು ಧರ್ಮಕ್ಕೆ ಶಾಸ್ತ್ರೋಕ್ತವಾಗಿ ಅವನನ್ನು ಸೇರಿಸಿಕೊಂಡ. ಎಲ್ಲರೂ ನೇತಾಜಿಯನ್ನು ಇನ್ನು ಮುಂದೆ ಆದರದಿಂದ ಕಾಣಬೇಕು ಎಂಬುದು ಶಿವಾಜಿಯ ಇಷ್ಟ. ಅದಕ್ಕಾಗಿ ನೇತಾಜಿಯ ನೆಂಟನಾದ ಜಾನೋಜಿ ಪಾಲಕರನಿಗೆ ತನ್ನ ಸ್ವಂತ ಮಗಳನ್ನು ಕೊಟ್ಟು ಮದುವೆ ಮಾಡಿದ. ಅವರ ಕಥೆ ಇಲ್ಲಿದೆ.
OSCAR-2019
ಗೋರಕ್‌ ಪುರ : ಬುಧವಾರ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಪಾಲಿಗೆ ಕೆಟ್ಟದಿನವಾಗಿದ್ದು, ಯೋಗಿ ಪ್ರತಿನಿಧಿಸಿದ್ದ ಗೋರಕ್‌ಪುರ ಹಾಗೂ ಉಪಮುಖ್ಯಮಂತ್ರಿ ಕೇಸವ್‌ ಪ್ರಸಾದ್‌ ಮೌರ್ಯ ಜಯಗಳಿಸಿದ್ದ ಫುಲ್ಪುರ್‌ ಲೋಕಸಭಾ ಕ್ಷೇತ್ರದಲ್ಲೇ ಬಿಜೆಪಿ ಸೋಲನುಭವಿಸಿದೆ. ಇದೇ ವೇಳೆ ಬೆಸ್ತರ ಸಂಘಟನೆ ನಿಶದ್‌ ಗೋರಕ್‌ನಾಥ್‌ ದೇವಸ್ಥಾನದ ಮೇಲೆ ಹಕ್ಕು ಸಾಧಿಸಿದ್ದು, ಈಗ ಯೋಗಿ ಮುಖ್ಯಸ್ಥರಾಗಿರುವ ದೇವಾಲಯವನ್ನು ತಮ್ಮ ಸುಪರ್ದಿಗೆ ನೀಡುವಂತೆ ಆಗ್ರಹಿಸಿದೆ. ಗೋರಕ್‌ ನಾಥ್‌ ದೇವಾಲಯ ಬೆಸ್ತ ಸಮುದಾಯಕ್ಕೆ ಸೇರಿದ್ದಾಗಿದ್ದು, ಈ ದೇವಸ್ಥಾನವನ್ನು 19ನೇ ಶತಮಾನದ್ಲಿ ಮೇಲ್ಜಾತಿಯವು ಒತ್ತಾಯಪೂರ್ವಕವಾಗಿ ವಶಪಡಿಸಿಕೊಂಡಿದ್ದರು. ಆದ್ದರಿಂದ ದೇವಾಲಯದ ಮುಖ್ಯಸ್ಥನ ಸ್ಥಾನದಲ್ಲಿ ಬೆಸ್ತನೊಬ್ಬನನ್ನು ನೇಮಿಸಬೇಕು ಎಂದು ನಿರ್ಬಲ ಇಂಡಿಯನ್‌ ಶೋಷಿತ್‌ ಹಮಾರಾ ಆಮ್ ದಲ್‌ (ನಿಶದ್‌) ಅಧ್ಯಕ್ಷ ಸಂಜಯ್‌ ನಿಶದ್‌ ತಿಳಿಸಿದ್ದಾರೆ. ಮೂರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಸಂಜಯ್‌ ಅವರ ನಿಶದ್‌ ಪಕ್ಷ ಕಳೆದ ವರ್ಷ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿದಿದ್ದು, ಒಂದು ಸ್ಥಾನವನ್ನು ಗೆದ್ದಿತ್ತು. ಈಗ ಸಂಜಯ್‌ ಪುತ್ರ ಪ್ರವೀಣ್ ಕುಮಾರ್ ನಿಶದ್ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಗೋರಕ್‌ಪುರದಲ್ಲಿ ಲಕ್ಷಗಳ ಅಂತರದಿಂದ ಮಣಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದೇವಸ್ಥಾನವನ್ನು ತಮ್ಮ ಸುಪರ್ದಿಗೆ ನೀಡುವಂತೆ ಒತ್ತಾಯಿಸಲಾಗುತ್ತಿದೆ ಎಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.
OSCAR-2019
ಚಂಡೀಘಡ : ಫೇಸ್​ ಬುಕ್​ನಲ್ಲಿ ಹಲವಾರು ಮಂದಿ ಪರಸ್ಪರ ಪರಿಚಯವಿಲ್ಲದವರು ಲವ್​ ಮಾಡಿ ಮದುವೆ ಆಗಿರುವುದು ನೋಡಿದ್ದೇವೆ ಹಾಗೂ ಎಷ್ಟೋಂದು ಜನರು ಫೇಸ್​ಬುಕ್​ ಹೆಸರಿನಲ್ಲಿ ಮೋಸ ಮಾಡಿರುವುದ್ದನ್ನು ನೋಡಿದ್ದೇವೆ. ಆದರೆ ಪ್ರೀತಿ ಕುರುಡು ಎಂಬ ಮಾತಿನಂತೆ ಫೇಸುಬುಕ್‌ನಲ್ಲಿ 27 ರ ಯುವಕ 65 ರ ಅಜ್ಜಿ ಲವ್‌ ಮಾಡಿ ಮದುವೆಯಾಗಿದ್ದಾರೆ. ಇಂಥದೊಂದು ಅಪರೂಪದ ಘಟನೆ ಹರಿಯಾಣದ ಕಾತಿಹಾಳ ಎಂಬ ಹಳ್ಳಿಯಲ್ಲಿ ನಡೆದಿದೆ. ಅಮೆರಿಕದ ಮಹಿಳೆ ಕೆರೇನ್‌ ಲಿಲಿಯಾನ್‌ ಮತ್ತು ಪ್ರವೀಣ್‌ ಫೇಸ್​ ಬುಕ್​ನಲ್ಲಿ ಮೊದಲು ಸ್ನೇಹಿತರಾಗಿದ್ದ ಇಬ್ಬರೂ ಬಳಿಕ ಪರಸ್ಪರ ಪ್ರೀತಿಸಿ, ವಿವಾಹವಾಗಲು ನಿರ್ಧರಿಸಿ ಹೊಸ ಬಾಳಿಗೂ ಕಾಲಿಟ್ಟಿದ್ದಾರೆ. ಪ್ರವೀಣ್‌ ಹಿಂದು ಆಗಿದ್ದು ಕೆರೇನ್‌ ಕ್ರಿಶ್ಚಿಯನ್‌ ಧರ್ಮೀಯರು ,ಆದರೆ ವಿವಾಹ ಮಾತ್ರ ಸಿಖ್ಬ್‌ ಸಂಪ್ರದಾಯದಂತೆ ಮಾಡಿಕೊಂಡಿರುವುದು ಮತ್ತೋಂದು ವಿಶೇಷ. ಪ್ರವೀಣ್‌ ಸ್ನಾತಕೋತ್ತರ ಪದವೀಧರನಾದ ಹೊರತಾಗಿಯೂ ಸರಿಯಾದ ಕೆಲಸ ಸಿಗದ ಕಾರಣ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಇದೀಗ ಭಾರತಕ್ಕೆ ವಿವಾಹವಾಗಲು ಆಗಮಿಸಿದ್ದ ಕೆರೇನ್‌ ಪ್ರವೀಣ್‌ರನ್ನು ಅಮೆರಿಕಕ್ಕೆ ಕರೆದೊಯ್ದಿದ್ದು ಅಲ್ಲಿನ ವೀಸಾ ಕೊಡಿಸಲು ಪ್ರಯತ್ನಿಸುತ್ತಿದ್ದಾರೆ. ವೀಸಾ ಸಿಕ್ಕರೆ ಪ್ರವೀಣ್‌ ಅಮೆರಿಕದಲ್ಲಿ ನೆಲೆಸಲಿದ್ದು, ಇಲ್ಲವಾದರೆ ಕೆರೇನ್‌ ಭಾರತಕ್ಕೆ ಬಂದು ನೆಲೆಸಲಿದ್ದಾರೆ..
OSCAR-2019
ಸೌಜನ್ಯ ಸಾವಿಗೆ ನ್ಯಾಯ ಒದಗಿಸಲು ಪ್ರಜಾಪ್ರಭುತ್ವ ವೇದಿಕೆಯ ಮೂಲಕ ಹೋರಾಟವನ್ನು ನಡೆಸಿ ಸೌಜನ್ಯ ಪ್ರಕರಣ ಸಿಬಿಐ ವಶಕ್ಕೆ ಹೋಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಹೇಶ್ ತಿಮರೋಡಿ ಅವರು ಬಿಜೆಪಿಗೆ ತನ್ನ ಬೆಂಬಲವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಈ ಮೂಲಕ ಕಳೆದ ಹಲವಾರು ಸಮಯದಿಂದ ತಿಮರೋಡಿಯ ರಾಜ ಕೀಯ ನಿಲುವಿನ ಬಗ್ಗೆ ಕವಿದಿದ್ದ ಕುತೂ ಹಲದ ತೆರೆ ಸರಿದು ಹೋಗಿದೆ. ಮತ ಕೇಳಲೆಂದು ಮನೆಗೆ ಬಂದಿದ್ದ ನಳಿನ್ ಕುಮಾರ್ ಕಟೀಲ್ ಅವರಿಗೆ ಹೂವಿನ ಹಾರ ಹಾಕಿ ಸ್ವಾಗತಿಸುವ ಮೂಲಕ ತನ್ನ ಬೆಂಬಲ ಬಿಜೆಪಿಗೆ ಎನ್ನುವ ನಿಲುವನ್ನು ಪರೋಕ್ಷವಾಗಿ ರವಾನಿಸಿದ್ದರೂ, ನಿನ್ನೆ ಪತ್ರಿಕಾಗೋಷ್ಠಿಯನ್ನು ನಡೆಸಿ ತಾನು ಮೋದಿಯನ್ನು ಬೆಂಬಲಿಸುತ್ತಿದ್ದು ದೇಶದಲ್ಲಿ ಪರಿಣಾಮಕಾರಿಯಾದ ಬದಲಾವಣೆ ಆಗಬೇಕಿದೆ ಎಂದರು. ಈ ಹಿಂದೆ ವಿಧಾನ ಸಭಾ ಚುನಾವಣಾ ಸಮಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಮಹೇಶ್ ಶೆಟ್ಟಿ ಆ ಸಮಯದಲ್ಲೇ ಎಂಟು ಸಾವಿರ ಮತಗಳನ್ನು ಪಡೆದಿದ್ದರು. ಇದೀಗ ಸೌಜನ್ಯ ಪ್ರಕರಣದಲ್ಲಿ ಅವರ ಹೋರಾಟ ತುಳುನಾಡಿನ ಜನ ಸಾಮಾನ್ಯರಲ್ಲೂ ಗಾಢವಾದ ಪರಿಣಾಮ ಬೀರಿದ್ದ ಕಾರಣ ಅವರ ಹಿಂದೆ ಜನ ಬೆಂಬಲ ಅತೀ ಹೆಚ್ಚಿತ್ತು. ಇದರ ಲಾಭವನ್ನು ಪಡೆದುಕೊಂಡು ತಿಮರೋಡಿ ಚುನಾವಣೆಗೆ ನಿಲ್ಲುತ್ತಾರೆ ಎನ್ನುವ ಪ್ರಚಾರ ಇತ್ತಾದರೂ ಈ ಬಗ್ಗೆ ಧೋರಣೆ ಹೊಂದಿರದ ಕಾರಣ ಅವರ ಬೆಂಬಲ ಯಾರಿಗೆ ಎನ್ನುವ ಕುತೂಹಲ ಸಹಜವಾಗಿಯೇ ಇದ್ದವು. ತಿಮರೋಡಿ ಅವರು ಭಾನುವಾರದವರೆಗೆ ತನ್ನ ನಿಲುವನ್ನು ಸ್ಪಷ್ಟಪಡಿಸದೇ ಇದ್ದ ಕಾರಣ ಈ ಕುತೂಹಲ ಮತ್ತಷ್ಟು ಹೆಚ್ಚಾಗಿತ್ತು. ಈ ನಡುವೆ ಮಹೇಶ್ ಶೆಟ್ಟಿ ಅವರನ್ನು ಸಿಪಿಐಎಂ ಮತ್ತು ಡಿವೈಎಫ್‍ಐ ನಾಯಕರೂ ಭೇಟಿ ಮಾಡಿದ್ದು, ಈ ಹಿಂದೆ ಸೌಜನ್ಯ ಹೋರಾಟ ನಡೆದಾಗಲೂ ಈ ಸಂಘಟನೆ ತಿಮರೋಡಿಗೆ ಬೆಂಬಲ ನೀಡಿದ್ದ ಕಾರಣ ತಿಮರೋಡಿ ಸಿಪಿಐಎಂ ಪಕ್ಷವನ್ನು ಬೆಂಬಲಿಸುತ್ತಾರೆ ಎಂದೇ ನಂಬಲಾಗಿತ್ತು. ಇದಾದ ಬಳಿಕ ಆಶ್ಚರ್ಯಕರ ಬೆಳವಣಿಗೆಯಲ್ಲಿ ನಳಿನ್ ಕುಮಾರ್ ಕಟೀಲ್ ಮತ್ತು ಕಲ್ಲಡ್ಕ ಪ್ರಭಾಕರ್ ಭಟ್ ಅವರು ತಿಮರೋಡಿ ಅವರ ಮನೆಗೆ ಭೇಟಿ ನೀಡಿದ್ದರು. ತಿಮರೋಡಿ ಅವರು ಹಾರ ಹಾಕಿ ನಳಿನ್ ಅವರನ್ನು ಸ್ವಾಗತಿಸಿದ್ದರು. ಈ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಬಿಜೆಪಿ ಜಿಲ್ಲಾಧ್ಯಕ್ಷರು ಇದೊಂದು ಸಾಮಾನ್ಯ ಭೇಟಿಯೇ ವಿನಃ ತಿಮರೋಡಿ ನಮ್ಮ ಕಾರ್ಯಕರ್ತರಲ್ಲ ಎಂದಿದ್ದರು. ಇತ್ತ ಪತ್ರಿಕಾಗೋಷ್ಠಿ ನಡೆಸಿದ ತಿಮರೋಡಿ ಅವರು ನಾನು ಮೋದಿಯನ್ನು ಬೆಂಬಲಿಸುತ್ತೇನೆ ನಮ್ಮ ವೇದಿಕೆಯ ಕಾರ್ಯಕರ್ತರು ಇದೇ ನಿಲುವನ್ನು ಹೊಂದಿದ್ದಾರೆ. ಇದು ನಳಿನ್ ಭೇಟಿಗಿಂತ ಮುಂಚೆಯೂ ಇದ್ದ ಸಿದ್ಧಾಂತವೇ ಆಗಿದೆ. ಇದಕ್ಕೂ ಸೌಜನ್ಯ ಹೋರಾಟಕ್ಕೂ ಸಂಬಂಧವೇ ಇಲ್ಲ. ಅಲ್ಲದೇ ಸೌಜನ್ಯ ಹೆತ್ತವರು ಯಾವುದೇ ಪಕ್ಷವನ್ನು ಬೆಂಬಲಿಸದೇ ತಟಸ್ಥರಾಗಿದ್ದಾರೆ ಎಂದರು. ಹೀಗಾಗಿ ಈ ಘಟನೆಗೆ ವಿಶೇಷ ಅರ್ಥ ಬೇಡ ಸೌಜನ್ಯ ಹೋರಾಟದಲ್ಲಿ ಬಿಜೆಪಿ ಅಸಹಕಾರ ತೋರಿದಾಗ ಖಂಡಿಸಿದ್ದೇನೆ. ಮುಂದೆಯೂ ಖಂಡಿಸುತ್ತೇನೆ. ಆದರೆ ದೇಶದ ನಾಯಕತ್ವ ಮೋದಿಗೆ ಸಿಗಬೇಕು ಎನ್ನುವ ಕಾರಣಕ್ಕೆ ಬಿಜೆಪಿಯನ್ನು ಬೆಂಬಲಿಸುವುದಾಗಿ ತಿಳಿಸಿದರು. ವಸಂತ ಬಂಗೇರ ಅವರು ಸೌಜನ್ಯ ಹೋರಾಟದಲ್ಲಿ ಬೆಂಬಲವನ್ನು ನೀಡಿದ್ದಾರೆ. ಏಕೆಂದರೆ ಅದರಲ್ಲಿ ಅವರ ಸ್ವಾರ್ಥವೂ ಇತ್ತು, ಆದರೆ ಇತ್ತೀಚೆಗೆ ಅವರೂ ನುಣುಚಿಕೊಳ್ಳುತ್ತಿದ್ದಾರೆ. ನನ್ನ ರಾಜಕೀಯ ನಿಲುವೇ ಬೇರೆ ಹೋರಾಟದ ನಿಲುವೇ ಬೇರೆ ಯಾರೂ ಇಲ್ಲವಾದರೂ ನಾನು ಹೋರಾಡುತ್ತೇನೆ ಎಂದರು. ಪ್ರಜಾಪ್ರಭುತ್ವ ವೇದಿಕೆ ಸೌಜನ್ಯ ಸಾವಿಗೆ ನ್ಯಾಯ ಒದಗಿಸಲು ಹೋರಾಟವನ್ನು ಆರಂಭಿಸಿದ ಬಳಿಕ ರಾಜ್ಯಾದ್ಯಂತ ಹೋರಾಟಗಳೇ ನಡೆದಿದ್ದವು, ದೇಶದ ಹಲವಾರು ಕಡೆ ವಿದ್ಯಾರ್ಥಿಗಳೂ ಬೀದಿಗಿಳಿದು ಹೋರಾಟ ನಡೆಸಿದ್ದರಲ್ಲದೆ ಸೌಜನ್ಯ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಒತ್ತಾಯಿಸಿದ್ದರು. ಪರಿಣಾಮ ಪ್ರಕರಣ ಸಿಬಿಐಗೆ ಹಸ್ತಾಂತರವಾಗಿತ್ತು. ಇದೀಗ ಈ ಬಗ್ಗೆ ಪ್ರತಿಕ್ರಿಯೇ ನೀಡಿದ ತಿಮರೋಡಿ ಅವರು ರಾಜ್ಯ ಸರಕಾರ ಈ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿಲ್ಲ, ಬದಲಾಗಿ ಬೇರೆ ಪ್ರಕರಣದ ವಿಚಾರಣೆಗೆ ಜಿಲ್ಲೆಗೆ ಬಂದಿದ್ದ ಸಿಬಿಐ ತಂಡದ ಅಧಿಕಾರಿ ಇಲ್ಲಿ ಸೌಜನ್ಯಳ ಸಾವಿನ ಬಗ್ಗೆ ಅಕ್ರೋಶ ವ್ಯಕ್ತ ಪಡಿಸಿ ನ್ಯಾಯ ಕೋರಿ ಹಾಕಿದ್ದ ಬ್ಯಾನರ್‍ಗಳನ್ನು ಗಮನಿಸಿ ಪ್ರಕರಣದ ಬಗ್ಗೆ ತಿಳಿದುಕೊಂಡು ಸ್ವಯಂಪ್ರೇರಿತರಾಗಿ ಈ ಪ್ರಕರಣವನ್ನು ವಿಚಾರಣೆಗೆ ಪಡೆದುಕೊಂಡಿದ್ದಾರೆಯೇ ವಿನಃ ಇದು ಸರಕಾರದಿಂದ ಆಗಿರುವ ಕೆಲಸ ಅಲ್ಲ ಎಂದಿದ್ದಾರೆ. ಬೆಳ್ತಂಗಡಿ, ಏ 2: ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಬಿರುಸಿನ ತನಿಖೆ ಆರಂಭಿಸಿದೆ. ಸೌಜನ್ಯ ಕೊಲೆ ಪ್ರಕರಣದ ನಿಜವಾದ ಆರೋಪಿಯನ್ನು ಸಿಬಿಐ ಅಧಿಕಾರಿಗಳು ಸದ್ಯದಲ್ಲೇ ಬಂಧಿಸಲಿದ್ದಾರೆನ್ನುವ ಬಿಸಿಬಿಸಿ ಚರ್ಚೆ ಬೆಳ್ತಂಗಡಿ ಭಾಗದಲ್ಲಿ ನಡೆಯುತ್ತಿದೆ. ಚೆನ್ನೈ ನಿಂದ ಬಂದ ಏಳು ಜನರ ಅಧಿಕಾರಿಗಳ ತಂಡ ಜಿಲ್ಲಾ ಪರಿವೀಕ್ಷಣಾ ಮಂದಿರದಲ್ಲಿ (IB) ತಂಗಿದ್ದು, ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಕುಟುಂಬದವರನ್ನು ಮತ್ತು ಆರೋಪಿ ಪಟ್ಟಿಯಲ್ಲಿ ದಾಖಲಾಗಿರುವವರನ್ನು ಒಬ್ಬೊಬ್ಬರಾಗಿ ವಿಚಾರಣೆ ನಡೆಸಲಾರಂಭಿಸಿದ್ದಾರೆ. ಸೌಜನ್ಯ ತಂದೆ, ತಾಯಿ ಕುಸುಮ, ಮಾವ ವಿಠಲ ಪೂಜಾರಿ ಸೇರಿದಂತೆ ಹಲವರನ್ನು ಸಿಬಿಐ ಈಗಾಗಲೇ ವಿಚಾರಣೆಗೊಳಪಡಿಸಿ ಮಾಹಿತಿ ಸಂಗ್ರಹಿಸಿದೆ. ತನಿಖಾ ಅಧಿಕಾರಿಗಳ ಜೊತೆ ಜಸ್ಟಿಸ್ ಸುಬ್ರಮಣ್ಯೇಶ್ವರ ರಾವ್ ಕೂಡಾ ಇದ್ದು ಎರಡು ದಿನ ಸಿಬಿಐ ಅಧಿಕಾರಿಗಳು ಆರೋಪಿ ಪಟ್ಟಿಯಲ್ಲಿರುವವರನ್ನು ವಿಚಾರಣೆ ನಡೆಸುವ ವೇಳೆ ಅಧಿಕಾರಿಗಳಿಗೆ ಸಹಕರಿಸಿದ್ದಾರೆ. ಸೌಜನ್ಯ ಶವ ಪತ್ತೆಯಾದ ಜಾಗಕ್ಕೆ ಸಿಬಿಐ ಅಧಿಕಾರಿಗಳು ಈಗಾಗಲೇ ಭೇಟಿ ನೀಡಿದ್ದಾರೆ. ಇದಲ್ಲದೇ, ಈ ಭಾಗದಲ್ಲಿನ 450ಕ್ಕೂ ಹೆಚ್ಚು ಅಸಹಜ ಸಾವು ಪ್ರಕರಣಗಳ ಬಗ್ಗೆ ಕೂಡಾ ಸಿಬಿಐ ತನಿಖೆ ನಡೆಸಲಿದೆ. ಯಾರ ಒತ್ತಾಯಕ್ಕೂ ಮಣಿಯದೆ ಸಿಬಿಐ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು. ಸೌಜನ್ಯಳನ್ನು ಕೊಂದವರಿಗೆ ಶಿಕ್ಷೆಯಾಗಬೇಕು, ಹೆತ್ತವರಿಗೆ ನ್ಯಾಯ ಸಿಗಬೇಕು. ಈ ಪ್ರಕರಣವನ್ನು ಸರಕಾರ ಸಿಬಿಐಗೆ ವಹಿಸ ಬೇಕೆಂದು ವಿವಿಧ ಸಂಘಟನೆಗಳು ಭಾರೀ ಪ್ರತಿಭಟನೆ ನಡೆಸಿದ್ದವು. (ಕೇಮಾರು ಶ್ರೀ ಮತ್ತು ಮಹೇಶ್ ಶೆಟ್ಟಿ ತಿಮರೋಡಿ ವಿಶೇಷ ಸಂದರ್ಶನ) ಪ್ರತಿಭಟನೆಯ ಬಿಸಿಗೆ ಕೊನೆಗೂ ಮಣಿದಿದ್ದ ಸರಕಾರ ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಪ್ರಕರಣವನ್ನು ಸಿಬಿಐಗೆ ಅಧಿಕೃತವಾಗಿ ವರ್ಗಾಯಿಸಿತ್ತು. ಕಳೆದ ವರ್ಷ ಅಕ್ಟೋಬರ್ 31ರಂದು ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ರಾಜ್ಯ ಸರ್ಕಾರಕ್ಕೆ ತನಿಖಾ ವರದಿಯನ್ನು ಸಲ್ಲಿಸಿದ್ದರು. 12 ಪುಟಗಳ ತನಿಖಾ ವರದಿಯಲ್ಲಿ ಸೌಜನ್ಯ ಮೇಲೆ ಅತ್ಯಾಚಾರ ಯತ್ನ ಹಾಗೂ ಹತ್ಯೆ ಮಾಡಿರೋದು ಆರೋಪಿ ಸಂತೋಷ್ ರಾವ್ ಎಂದು ನಮೂದಿಸಿದ್ದ ಸಿಐಡಿ ಅಧಿಕಾರಿಗಳು ವರದಿಯನ್ನು ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅವರಿಗೆ ನೀಡಿ, ಪ್ರಕರಣದ ಬಗ್ಗೆ ಅಗತ್ಯವಿದ್ದರೆ ಸಿಬಿಐ ತನಿಖೆ ನಡೆಸಬಹುದು ಎಂದು ಶಿಫಾರಸು ಮಾಡಿದ್ದರು. ಸಿಐಡಿ ಅಧಿಕಾರಿಗಳು ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿನ 12 ಸಾಕ್ಷ್ಯಗಳ ವಿಚಾರಣೆ ಬಳಿಕ ಆರೋಪಿಗಳಾಗಿದ್ದ ನಿಶ್ಚಲ್ ಜೈನ್, ಧೀರಜ್ ಜೈನ್, ಉದಯ್ ಜೈನ್, ಮಲ್ಲಿಕ್ ಅವರಿಗೆ ಕ್ಲೀನ್ ಚಿಟ್ ನೀಡಿದ್ದರು ಮತ್ತು ಪೊಲೀಸರು ಬಂಧಿಸಿರುವ ಆರೋಪಿ ಸಂತೋಷ್ ರಾವ್ ಕೊಲೆ ಮಾಡಿರುವುದು ಎಂದು ವರದಿಯಲ್ಲಿ ಉಲ್ಲೇಖಿಸಿದ್ದರು. ಸಿಐಡಿ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗುತ್ತಿದ್ದಂತೆ ವಿವಿಧ ಸಂಘಟನೆಗಳು ಮತ್ತು ಸೌಜನ್ಯ ಪೋಷಕರು ವರದಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಸೌಜನ್ಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸದೇ ಮುಚ್ಚಿ ಹಾಕುವ ಹುನ್ನಾರ ನಡೆದಿದೆ ಎಂದು ಆರೋಪಿಸಿದ್ದರು. ನ.3ರಂದು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆ, ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ-ಕೊಲೆ ಪ್ರಕರಣದ ಸಿಐಡಿ ತನಿಖೆ ಮತ್ತು ತನಿಖಾ ವರದಿ ಕುರಿತು ಸ್ಥಳೀಯರ ಮನಸ್ಸಿನಲ್ಲಿ ಇನ್ನೂ ಗೊಂದಲವಿದೆ. ಈ ಬಗ್ಗೆ ಇನ್ನೂ ಹೆಚ್ಚಿನ ತನಿಖೆ ಆಗಬೇಕೆಂದು ಅಪೇಕ್ಷಿಸುತ್ತಿದ್ದಾರೆ. ಆದ್ದರಿಂದ ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಬೇಕೆಂದು ಪತ್ರ ಬರೆದಿದ್ದರು.
OSCAR-2019
ಆಶ್ವೀಜ ಮಾಸದ ಅಮವಾಸ್ಯೆಯನ್ನು ಮಹಾಲಯ ಅಮವಾಸ್ಯೆಯೆಂದು ಆಚರಿಸಲಾಗುತ್ತದೆ. ದಸರಾ ಮೊದಲು ಬರುವ ಅಮವಾಸ್ಯೆಯೇ ಮಹಾಲಯ ಅಮವಾಸ್ಯೆ. ಒಂದು ಪ್ರಕಾರ ಈ ದಿನದ ನಂತ್ರ ದಸರಾ ಶುರುವಾಗುತ್ತದೆ. ಪಿತೃಪಕ್ಷ ಭಾದ್ರಪದ ಮಾಸದ ಪೂರ್ಣಿಮೆಯಂದು ಶುರುವಾಗುತ್ತದೆ. 16 ದಿನಗಳ ಕಾಲ ಇರುತ್ತದೆ. ಆಶ್ವೀಜ ಮಾಸದ ಅಮವಾಸ್ಯೆಯಂದು ಪಿತೃಪಕ್ಷ ಮುಕ್ತಾಯವಾಗುತ್ತದೆ. ಗರುಡ ಪುರಾಣದಲ್ಲಿ ಮಹಾಲಯ ಅಮವಾಸ್ಯೆಗೆ ಬಹಳ ಮಹತ್ವವಿದೆ. ಅದ್ರ ಪ್ರಕಾರ ನಮ್ಮ ಪೂರ್ವಜರು ಈ ದಿನ ಮನೆ ಬಾಗಿಲಿಗೆ ಬರ್ತಾರಂತೆ. ಕುಟುಂಬಸ್ಥರು ತಮ್ಮ ಶ್ರಾದ್ಧ ಮಾಡಿ ಇನ್ನೊಮ್ಮೆ ವಿದಾಯ ಹೇಳಲಿ ಎಂದು ಅವರು ಬಯಸುತ್ತಾರೆ. ಅಕಾಲ ಮೃತ್ಯುವಿಗೆ ತುತ್ತಾದವರ ಶ್ರಾದ್ಧವನ್ನು ಕೂಡ ಇಂದೇ ಮಾಡಲಾಗುತ್ತದೆ. ಶ್ರಾದ್ಧ ಮಾಡಿದ್ರೆ ಪೂರ್ವಜರು ಖುಷಿಯಾಗ್ತಾರೆ. ಸಂಪತ್ತು, ವಿದ್ಯೆ, ಸುಖವನ್ನು ನೀಡ್ತಾರೆ. ಒಂದು ವೇಳೆ ಈ ದಿನ ಶ್ರಾದ್ಧ ಮಾಡದೆ ಹೋದಲ್ಲಿ ಪೂರ್ವಜರು ಕೋಪಗೊಳ್ತಾರೆ. ಇದ್ರಿಂದ ಮನೆ ಸುಖ-ಶಾಂತಿ ಹಾಳಾಗುತ್ತದೆ ಎಂದು ನಂಬಲಾಗಿದೆ. ಈ ಬಾರಿ ಪಿತೃಪಕ್ಷ 14 ದಿನಗಳವರೆಗೆ ಮಾತ್ರವಿತ್ತು. ಸೆಪ್ಟೆಂಬರ್ 19ರಂದು ಮಹಾಲಯ ಅಮವಾಸ್ಯೆ ಬಂದಿದ್ದು, ಅಲ್ಲಿಗೆ ಪಿತೃಪಕ್ಷ ಮುಗಿಯಲಿದೆ. ಎಲ್ಲ ಪೂರ್ವಜರು ಸಾವನ್ನಪ್ಪಿದ ತಿಥಿಯನ್ನು ನೆನಪಿನಲ್ಲಿಟ್ಟುಕೊಂಡು ಆ ದಿನ ಶ್ರಾದ್ಧ ಮಾಡಲು ಸಾಧ್ಯವಿಲ್ಲ. ಹಾಗಾಗಿ ಈ ದಿನ ಎಲ್ಲರ ಹೆಸರಿನಲ್ಲಿ ತರ್ಪಣ ಬಿಡುವುದು ಒಳ್ಳೆಯದು. ಈ ದಿನ ಬ್ರಾಹ್ಮಣರೊಬ್ಬರನ್ನು ಮನೆಗೆ ಕರೆದು ಊಟ ಹಾಕಬೇಕು. ಜೊತೆಗೆ ಒಳ್ಳೆಯದಾಗಲೆಂದು ಆಶೀರ್ವಾದ ಮಾಡುವಂತೆ ಅವರನ್ನು ಪ್ರಾರ್ಥಿಸಬೇಕು. ಸ್ನಾನ ಮಾಡಿ ಶ್ರದ್ಧೆಯಿಂದ ಭೋಜನ ಸಿದ್ಧಪಡಿಸಬೇಕು. ಈ ಬಾರಿ ಸೆಪ್ಟೆಂಬರ್ 19ರ 11.52 ನಿಮಿಷಕ್ಕೆ ಅಮವಾಸ್ಯೆ ಶುರುವಾಗಲಿದೆ. ಅಲ್ಲಿಂದ ಸೆಪ್ಟೆಂಬರ್ 20ರ ಬೆಳಿಗ್ಗೆ 10.51ರವರೆಗೆ ಅಮವಾಸ್ಯೆಯಿದೆ. ಹಾಗಾಗಿ ಈ ಮಧ್ಯೆ ಶ್ರಾದ್ಧ ಮಾಡಬಹುದಾಗಿದೆ. ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಯುಗಾದಿ ಗಿಫ್ಟ್ | Kannada Dunia | Kannada News | Karnataka News | India News ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ‘ಪೈಲ್ವಾನ್’ ಯುಗಾದಿ ದಿನವೇ ಶುಭಾರಂಭ ಮಾಡಿದೆ. ಬೆಂಗಳೂರು ಹನುಮಂತನಗರದ ಶ್ರೀರಾಮಾಂಜನೇಯ ದೇವಾಲಯದಲ್ಲಿ ‘ಪೈಲ್ವಾನ್’ ಚಿತ್ರದ ಮುಹೂರ್ತ ನೆರವೇರಿದೆ. ಪ್ರಿಯಾ ಸುದೀಪ್ ಕ್ಲಾಪ್ ಮಾಡಿದ್ದಾರೆ. ‘ಹೆಬ್ಬುಲಿ’ ಬಳಿಕ ಕೃಷ್ಣ ನಿರ್ದೇಶನದಲ್ಲಿ ಸುದೀಪ್ ಮತ್ತೆ ನಟಿಸುತ್ತಿದ್ದು, ‘ಪೈಲ್ವಾನ್’ ಚಿತ್ರದಲ್ಲಿ ಬಾಕ್ಸರ್ ಹಾಗೂ ಪೈಲ್ವಾನ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕಾಗಿ ಭಾರೀ ತಯಾರಿ ನಡೆಸಿದ್ದಾರೆ. ‘ಹೆಬ್ಬುಲಿ’ ಚಿತ್ರದ ತಾಂತ್ರಿಕ ವರ್ಗದವರೇ ಈ ಚಿತ್ರದಲ್ಲೂ ಜೊತೆಯಾಗಲಿದ್ದಾರೆ. ಪಾತ್ರಗಳ ಆಯ್ಕೆ ನಡೆದಿದೆ. ‘ದಿ ವಿಲನ್’, ‘ಕೋಟಿಗೊಬ್ಬ -3’ ಬಳಿಕ ಸುದೀಪ್ ‘ಪೈಲ್ವಾನ್’ನಲ್ಲಿ ಬ್ಯುಸಿಯಾಗಿದ್ದಾರೆ. ಮುಹೂರ್ತ ಮುಗಿಸಿರುವ ಚಿತ್ರತಂಡ ಏಪ್ರಿಲ್ ನಿಂದ ಶೂಟಿಂಗ್ ಶುರು ಮಾಡಲು ಪ್ಲಾನ್ ಮಾಡಿಕೊಂಡಿದೆ. ಯಾವ ಮನೆಯಲ್ಲಿ ತುಳಸಿ ಮತ್ತು ಆಕಳು ಇರುವುದೋ ರೋಗ ಆ ಮನೆಯನ್ನು ಪ್ರವೇಶಿಸುವುದಿಲ್ಲ ಎಂಬ ಒಂದು ಮಾತಿದೆ. ಇದರ ವಿಶೇಷತೆಗನುಗುಣವಾಗಿ ಇದನ್ನು ಬೇರೆ ಬೇರೆ ಹೆಸರಿನಿಂದ ಕರೆಯುತ್ತಾರೆ. ಎಲ್ಲ ಸ್ಥಳಗಳಲ್ಲಿ ಸುಲಭವಾಗಿ ದೊರೆಯುವ ಇದಕ್ಕೆ ‘ಸುಲಭಾ’ ಎಂಬ ಹೆಸರಿದೆ. ಹಳ್ಳಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಿಗುವ ತುಳಸಿಗೆ ‘ಗ್ರಾಯಾ’ ಎಂದೂ ಕರೆಯುತ್ತಾರೆ. ಶೂಲೆ(ಪೀಡೆ)ಗಳ ನಾಶ ಮಾಡುವುದರಿಂದ ಇದನ್ನು ‘ಶೂಲ್ಗನಿ’ ಎಂದು ಕರೆಯುತ್ತಾರೆ. ನಮ್ಮ ಶರೀರ, ಮನಸ್ಸುಗಳನ್ನು ಸಧೃಡಗೊಳಿಸುವ ತುಳಸಿಗೆ ವಿಶೇಷ ಸ್ಥಾನಮಾನವಿದೆ. ತುಳಸಿಯ 5-6 ಎಲೆಗಳನ್ನು ತಿನ್ನುವುದರಿಂದ ಮತ್ತು ತುಳಸಿ ಎಲೆ ಹಾಕಿಟ್ಟ ನೀರನ್ನು ಕುಡಿಯುವುದರಿಂದ ಪಿತ್ತ ದೋಷ ಮತ್ತು ಕಫ ದೋಷ ಮಾಯವಾಗುತ್ತದೆ. ಇದು ಜ್ಞಾಪಕ ಶಕ್ತಿ ಮತ್ತು ರೋಗ ನಿರೋಧಕ ಶಕ್ತಿ ವೃದ್ಧಿಸುವಂತೆ ಮಾಡುತ್ತದೆ. ತುಳಸಿಯಲ್ಲಿ ಕ್ಯಾನ್ಸರ್ ದೂರ ಮಾಡುವ ಗುಣವೂ ಇದೆ. ತುಳಸಿ ಮಾಲೆಯನ್ನು ಧರಿಸುವುದರಿಂದ ರಕ್ತಸಂಚಾರ ಸರಾಗವಾಗುತ್ತದೆ ಮತ್ತು ಅಸ್ತಮಾ, ಟಿಬಿ, ಅಲ್ಸರ್, ಕಫಜನ್ಯ ರೋಗಗಳು ದೂರವಾಗುತ್ತವೆ. ಕೆಲವು ಔಷಧಿಗಳು ನಮ್ಮ ಶರೀರಕ್ಕೆ ವಿಷಕಾರಿಯಾಗಿರುತ್ತವೆ. ಇಂತಹ ಔಷಧಿಗಳಿಂದ ಯಕೃತ್ತನ್ನು ರಕ್ಷಿಸುವ ಕೆಲಸವನ್ನು ತುಳಸಿ ಮಾಡುತ್ತದೆ. ಗರ್ಭವತಿಯರು ತುಳಸಿ ನೀರಿನ ಸೇವನೆ ಮಾಡಿದರೆ ಹೆರಿಗೆ ನೋವು ಕಡಿಮೆಯಾಗುತ್ತದೆ ಮತ್ತು ಹೆರಿಗೆ ಸರಾಗವಾಗುತ್ತದೆ. ತುಳಸಿ ಪ್ರದಕ್ಷಿಣೆ ಮಾಡುವುದು ಕೂಡ ಆರೋಗ್ಯಕ್ಕೆ ಒಳ್ಳೆಯದು. ಈಶಾನ್ಯ ದಿಕ್ಕಿನಲ್ಲಿ ತುಳಸಿ ನೆಡುವುದರಿಂದ ಅಭಿವೃದ್ಧಿಯಾಗುತ್ತದೆ. ಜೈಪುರ್: ರಾಜಸ್ತಾನದಲ್ಲಿ ಟ್ರಾನ್ಸ್ ಫಾರ್ಮರ್ ಸ್ಪೋಟಗೊಂಡು ಐವರು ಸಾವನ್ನಪ್ಪಿದ್ದು, 12 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಜೈಪುರ್ ಜಿಲ್ಲೆಯ ಶಾಪ್ ಪುರ ಪಟ್ಟಣಕ್ಕೆ ಸಮೀಪದಲ್ಲಿ ಖಾತಲೈ ಗ್ರಾಮದಲ್ಲಿ ದುರಂತ ಸಂಭವಿಸಿದೆ. ಮದುವೆಯ ಆಚರಣೆಯ ಭಾಗವಾಗಿ ಕುಟುಂಬದವರು, ಬಂಧು –ಬಾಂಧವರು ಮೆರವಣಿಗೆ ಹೋಗುವ ಸಂದರ್ಭದಲ್ಲಿ ರಸ್ತೆ ಬದಿಯಲ್ಲೇ ಇದ್ದ ಟ್ರಾನ್ಸ್ ಫಾರ್ಮರ್ ಸ್ಪೋಟಗೊಂಡಿದೆ. ಸ್ಪೋಟದ ತೀವ್ರತೆಗೆ ಐವರು ಸಾವನ್ನಪ್ಪಿದ್ದು, 12 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ರಕ್ಷಣಾ ತಂಡಗಳೊಂದಿಗೆ ಧಾವಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಜೈಪುರ್ ಗ್ರಾಮೀಣ ಎಸ್.ಪಿ. ಡಾ. ರಾಮೇಶ್ವರ್ ಸಿಂಗ್ ತಿಳಿಸಿದ್ದಾರೆ. ಅಚ್ಚರಿ ! ಕಲ್ಲಾಗಿ ಬದಲಾಗುತ್ತಿದೆ ಬಾಲಕನ ದೇಹ | Kannada Dunia | Kannada News | Karnataka News | India News ‘ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ’ ಎಂಬ ಜನಪ್ರಿಯ ಹಾಡಿನ ಸಾಲು ನೆನಪಿಸುವ ಘಟನೆಯೊಂದು ಅಮೆರಿಕದಲ್ಲಿ ನಡೆದಿದೆ. ಇಲ್ಲಿನ ಬಾಲಕನೊಬ್ಬ ದೇಹ ಕಲ್ಲಿನ ರೂಪಕ್ಕೆ ಪರಿವರ್ತನೆಯಾಗುತ್ತಿದೆ. ಏನಿದು ಪ್ರಕರಣ ಎಂಬ ಮಾಹಿತಿಯನ್ನು ತಿಳಿಯಲು ಮುಂದೆ ಓದಿ. ಅಮೆರಿಕದ ಕೊಲರಾಡೊದಲ್ಲಿರುವ ಬಾಲಕನಿಗೆ ದೇಹದಲ್ಲಿ ಬದಲಾವಣೆಗಳಾಗುತ್ತಿದ್ದು, ಕಲ್ಲಿನ ರೂಪ ಪಡೆದುಕೊಳ್ಳುತ್ತಿದೆ. ಜೇಡನ್ ರೋಜರ್ಸ್ ಎಂಬ ಈ ಬಾಲಕನಿಗೆ ಅಪರೂಪದಲ್ಲಿಯೇ ಅಪರೂಪ ಎನ್ನಬಹುದಾದ ಕಾಯಿಲೆ ಆವರಿಸಿದೆ. ಮೊದಲಿಗೆ ಚರ್ಮ ಗಟ್ಟಿಯಾದಂತಾಗಿ ಬಾಲಕನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಬರಬರುತ್ತಾ ಅದು, ಉಲ್ಬಣವಾಗಿ ಬಾಲಕ ಜೇಡನ್ ರೋಜರ್ಸ್ ಮೈಮೇಲೆಲ್ಲಾ ಕಲ್ಲಿನಂತಹ ರಚನೆಗಳು ಕಾಣಿಸಿಕೊಳ್ಳತೊಡಗಿವೆ. ಇದರಿಂದಾಗಿ ಬಾಲಕ ತೀವ್ರ ತೊಂದರೆ ಅನುಭವಿಸುವಂತಾಗಿದೆ. ಈ ರೀತಿಯ ಕಾಯಿಲೆಗೆ ಇನ್ನೂ ಚಿಕಿತ್ಸೆ ಕಂಡುಹಿಡಿದಿಲ್ಲವಾದ್ದರಿಂದ ಕಲ್ಲಿನಂತಹ ರಚನೆ ಬೆಳೆಯದಂತೆ ಕೀಮೋಥೆರಪಿ ಮಾಡಲಾಗುತ್ತಿದೆ. ಇಂತಹ ಕಾಯಿಲೆ ಬಂದವರಿಗೆ ಮೈಮೇಲೆ ಕಲ್ಲಿನಂತಹ ರಚನೆ ಕಾಣಿಸಿಕೊಂಡು ಓಡಾಡಲು ಕೂಡ ಸಾಧ್ಯವಾಗುವುದಿಲ್ಲ. ವಿಶ್ವದಲ್ಲಿ ಇದುವರೆಗೆ 14 ಮಂದಿಗೆ ಮಾತ್ರ ಈ ರೀತಿಯ ಚರ್ಮದ ಕಾಯಿಲೆಯ ಲಕ್ಷಣಗಳು ಕಾಣಿಸಿಕೊಂಡಿವೆ. ಆದರೆ ಶಾಶ್ವತ ಪರಿಹಾರ ಸಿಕ್ಕಿಲ್ಲ ಎಂದು ಹೇಳಲಾಗಿದೆ.
OSCAR-2019
ವಿಶಾಖಪಟ್ಟಣಂ ,ನ.೧೭-ಭಾರತ ಮತ್ತು ಇಂಗ್ಲೆಂಡ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡು ಮುಂಚೂಣಿ ಆಟಗಾರರಾದ ಕನ್ನಡಿಗ ಕೆ ಎಲ್ ರಾಹುಲ್ ಮತ್ತು ಮುರಳಿ ವಿಜಯ್ ಅವರ ವಿಕೆಟ್ ಬಹುಬೇಗ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಒಳಗಾಗಿದ್ದ ಭಾರತಕ್ಕೆ ಚೇತೇಶ್ವರ ಪೂಜಾರ ಮತ್ತು ನಾಯಕ ವಿರಾಟ್ ಕೊಹ್ಲಿ ಇವರಿಬ್ಬರ ಶತಕಗಳನ್ನು ಸಿಡಿಸಿ ತಂಡಕ್ಕೆ ಆಸರೆಯಾದರು . ಈ ಜೋಡಿಯ ಉತ್ತಮ ಜೊತೆಯಾಟದೊಂದಿಗೆ ಭಾರತ 220 ರ ಗಡಿ ದಾಟಲು ಕಾರಣವಾಯಿತು . ಉತ್ತಮ ಬ್ಯಾಟಿಂಗ್ ಪ್ರದರ್ಶನ ಮಾಡುತ್ತಿದ್ದ ಪೂಜಾರ ಆಂಡರ್ಸನ್ ಎಸೆತದಲ್ಲಿ ಬೈರ್ಸ್ಟೌ ಗೆ ಕ್ಯಾಚ್ಚೆತ್ತಿ ಪೆವಿಲಿಯನ್ ಸೇರಿದರು. ನಂತರ ಕ್ರೀಸ್ ಗೆ ಆಗಮಿಸಿದ ರಹಾನೆ ತಾಳ್ಮೆಯ ಆಟ ಪ್ರದರ್ಶನ ಮಾಡಿದರು ಕೂಡ ೨೩ ರನ್ ಗಳಿಸಿ ಆಂಡೆರ್ಸನ್ ಎಸೆತದಲ್ಲಿ ಬೈರ್ಸ್ಟೌ ಗೆ ಕ್ಯಾಚ್ ನೀಡಿ ನಿರ್ಗಮಿಸಿದರು .ನಂತರ ಕ್ರೀಸ್ ಗೆ ಆಗಮಿಸಿದ ಅಶ್ವಿನ್ ೧ ರನ್ ಗಳಿಸುವ ಮೂಲಕ ನಾಳೆಯ ದಿನಕ್ಕೆ ತಮ್ಮ ಬ್ಯಾಟಿಂಗ್ ನ್ನು ಕಾಯ್ದುಕೊಂಡಿದ್ದಾರೆ . ೧ ದಿನದ ಮುಕ್ತಾಯಕ್ಕೆ ಭಾರತ ೪ ವಿಕೆಟ್ ನಷ್ಟಕ್ಕೆ ೩೧೭ ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿದೆ . ಕೊಹ್ಲಿಯ ಮಿಂಚಿನ ಆಟ: ಕೊಹ್ಲಿಯ ಮಿಂಚಿನ ಆಟ: ತಮ್ಮ ಟೆಸ್ಟ್ ಜೀವನದ ೫೦ ನೇ ಪಂದ್ಯ ಆಡುತ್ತಿರುವ ಕೊಹ್ಲಿ ದ್ವಿಶತಕದತ್ತಾ ಮುನ್ನುಗ್ಗುತ್ತಿದ್ದು ,ಕ್ರೀಡಾ ಪ್ರೇಮಿಗಳಲ್ಲಿ ಕುತೂಹಲ ಹೆಚ್ಚಿಸಿದ್ದಾರೆ . ಬೆಂಗಳೂರು, ಜು.21-ಯಾವುದೇ ಕಾರಣಕ್ಕೂ ಅವಧಿ ಪೂರ್ವ ಚುನಾವಣೆ ಇಲ್ಲ ಎಂದು ಸ್ಪಷ್ಟಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಚುನಾವಣೆ ವಿಷಯದಲ್ಲಿ ಪ್ರತಿಪಕ್ಷಗಳು ಅನಗತ್ಯವಾಗಿ ಗೊಂದಲ ಸೃಷ್ಟಿ ಮಾಡುವ ಪ್ರಯತ್ನ ಮಾಡುತ್ತಿವೆ ಎಂದರು. ಕೆಪಿಸಿಸಿ ಕಚೇರಿಯಲ್ಲಿ ಏರ್ಪಡಿಸಿದ್ದ ನೂತನ ಪದಾಧಿಕಾರಿಗಳ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 2013ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನ ನಮ್ಮ ಪಕ್ಷಕ್ಕೆ ಆಶೀರ್ವಾದ ಮಾಡಿದ್ದಾರೆ. ಅಧಿಕಾರಕ್ಕೆ ಬಂದು ನಾಲ್ಕು ವರ್ಷ ಕಳೆದಿದೆ. ಚುನಾವಣೆ ನಿಗದಿಯಂತೆ ಮಾರ್ಚ್ ಅಥವಾ ಏಪ್ರಿಲ್‍ನಲ್ಲಿ ನಡೆಯಲಿದೆ. ಅವಧಿಪೂರ್ವ ಚುನಾವಣೆ ಇಲ್ಲವೇ ಇಲ್ಲ. ಪ್ರತಿಪಕ್ಷಗಳ ಗೊಂದಲದ ಹೇಳಿಕೆಗೆ ತಲೆ ಕೆಡಿಸಿಕೊಳ್ಳಬೇಡಿ ಎಂದು ನೂತನ ಪದಾಧಿಕಾರಿಗಳಿಗೆ ಸ್ಪಷ್ಟಪಡಿಸಿದರು. ಹೊಸದಾಗಿ ನೇಮಕಗೊಂಡಿರುವ ಪದಾಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ನಿಮ್ಮ ಜವಾಬ್ದಾರಿ ನಿರ್ವಹಣೆಯಲ್ಲಿ ನಿಮಗೆ ಯಶಸ್ಸು ಸಿಗಲಿ ಎಂದು ಹಾರೈಸಿದರು. ನೂತನ ಪದಾಧಿಕಾರಿಗಳನ್ನು ನೇಮಕ ಮಾಡಿದ ಹೈಕಮಾಂಡ್‍ಗೆ ಅಭಿನಂದನೆ ಸಲ್ಲಿಸಿದರು. ಇದು ಚುನಾವಣಾ ವರ್ಷ. ಹೀಗಾಗಿ ಪದಾಧಿಕಾರಿಗಳ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಮುಂದೆ ಇರುವ ಸವಾಲು ಎಂದರೆ ಪಕ್ಷವನ್ನು ಬಲ ಪಡಿಸುವುದು. ಹೆಚ್ಚು ಸ್ಥಾನವನ್ನು ಗಳಿಸುವುದರ ಮೂಲಕ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುವುದು ಎಂದು ಹೇಳಿದರು. ರಾಜ್ಯಕ್ಕೆ ಆಗಮಿಸಿರುವ ಎಐಸಿಸಿ ಪದಾಧಿಕಾರಿಗಳು ಪಕ್ಷ ಸಂಘಟನೆಯಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಇವರ ಈ ಕಾರ್ಯವೈಖರಿಯಿಂದ ಪ್ರತಿಪಕ್ಷಗಳಲ್ಲಿ ಆತಂಕ ಉಂಟಾಗಿ ಅನಗತ್ಯ ಗೊಂದಲ ಸೃಷ್ಟಿ ಮಾಡುವ ಪ್ರಯತ್ನ ನಡೆಯುತ್ತಿದೆ. ನಮ್ಮ ಸರ್ಕಾರ ಸಂಪೂರ್ಣ ಅವಧಿ ಪೂರೈಸುತ್ತದೆ. ಈ ಬಗ್ಗೆ ಯಾವುದೇ ಗೊಂದಲ ಬೇಡ. ಈ ವಿಚಾರವನ್ನು ಹೈಕಮಾಂಡ್‍ಗೂ ತಿಳಿಸಲಾಗಿದೆ ಎಂದು ಹೇಳಿದರು. ನಾಲ್ಕು ವರ್ಷಗಳ ಕಾಲ ಉತ್ತಮ ಆಡಳಿತ ನಡೆಸಿದ್ದೇವೆ. ಉಳಿದ ಅವಧಿಯಲ್ಲೂ ಉತ್ತಮ ಆಡಳಿತ ನಡೆಸುತ್ತೇವೆ. ನಮ್ಮ ಅವಧಿಯಲ್ಲಿ ನುಡಿದಂತೆ ನಡೆದಿದ್ದೇವೆ. ಪ್ರಣಾಳಿಕೆಯಲ್ಲಿರುವ ಭರವಸೆಗಳನ್ನು ಈಡೇರಿಸಿದ್ದೇವೆ ಎಂದರು. ಕೇಂದ್ರ ಮತ್ತು ರಾಜ್ಯಸರ್ಕಾರಗಳ ಸಾಧನೆ ಬಗ್ಗೆ ಬಹಿರಂಗ ಚರ್ಚೆಗೆ ಬನ್ನಿ ಸವಾಲು ಹಾಕಿದ್ದೇನೆ ಎಂದರು. ಪದಾಧಿಕಾರಿಗಳು, ಕಾರ್ಯಕರ್ತರು ಮನೆ ಮನೆಗೆ ತೆರಳಿ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸಿ. ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಿ. ಬಿಜೆಪಿಯವರು ಕೆಲಸ ಮಾಡದೆ ಮಾತನಾಡುತ್ತಾರೆ. ನಾವು ಮಾಡಿರುವ ಕೆಲಸಗಳನ್ನು ಜನರಿಗೆ ತಿಳಿಸಬೇಕು. ಬಿಜೆಪಿಯವರದ್ದು ಬಾಯಿ, ಬಡಾಯಿ. ಸಾಧನೆ ಶೂನ್ಯ ಎಂದು ಸಿದ್ದರಾಮಯ್ಯ ಟೀಕಿಸಿದರು. ಸರ್ಕಾರವನ್ನು ಟೀಕಿಸಲು ಬಿಜೆಪಿಯವರಿಗೆ ಯಾವುದೇ ವಿಷಯಗಳಿಲ್ಲ. ಹೀಗಾಗಿ ಜಾತಿ, ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಲು ಹೊರಟಿದ್ದಾರೆ. ಅದನ್ನು ತಡೆಯಲು ನಮ್ಮವರು ಸಜ್ಜಾಗಬೇಕು. ಇದು ಅತ್ಯಂತ ಅವಶ್ಯಕವಾಗಿದೆ ಎಂದು ತಿಳಿಸಿದರು. ನಾವು ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸೋಣ. ಹೇಳಿಕೊಳ್ಳಲು ಬಿಜೆಪಿಯವರು ಯಾವುದೇ ಸಾಧನೆ ಮಾಡಿಲ್ಲ. ಹೀಗಾಗಿ ಸರ್ಕಾರದ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಾರೆ ಎಂದು ಹೇಳಿದರು. ಅಧಿಕಾರದಲ್ಲಿದ್ದಾಗ ದಲಿತರಿಗೆ ಬಿಜೆಪಿಯವರು ಏನೂ ಮಾಡಲಿಲ್ಲ. ಈಗ ದಲಿತರ ಮನೆಗೆ ಭೇಟಿ ನೀಡುವ ನಾಟಕವಾಡುತ್ತಿದ್ದಾರೆ. ಅವರಿಗೆ ದಲಿತರ ಬಗ್ಗೆ ಕಾಳಜಿ ಇಲ್ಲ. ಸಾಮಾಜಿಕ ನ್ಯಾಯಕ್ಕೆ, ಜಾತ್ಯತೀತ ವಾದಕ್ಕೆ ಅವರು ಯಾವಾಗಲೂ ವಿರುದ್ಧ. ಬದ್ಧತೆಯಿರುವುದು ಕಾಂಗ್ರೆಸ್‍ಪಕ್ಷಕ್ಕೆ ಮಾತ್ರ ಎಂದರು. ಇಂದಿರಾ ಕ್ಯಾಂಟೀನ್ ವಿಚಾರದಲ್ಲಿ ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆ. ಬಡವರಿಗಾಗಿ ಮಾಡಿರುವ ಯೋಜನೆ ವಿಚಾರದಲ್ಲೂ ಸುಳ್ಳು ಆರೋಪಗಳನ್ನು ಮಾಡುತ್ತಿದ್ದು,ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಸುಳ್ಳು ಆರೋಪಗಳನ್ನು ಹೆಚ್ಚಾಗಿ ಮಾಡುತ್ತಾರೆ. ಈ ಬಗ್ಗೆ ಎಚ್ಚರವಾಗಿರಬೇಕು ಮತ್ತು ದಿಟ್ಟವಾಗಿ ಎದುರಿಸಬೇಕು ಎಂದರು. ನಮ್ಮ ಕಾರ್ಯಕರ್ತರು ಎದೆ ಉಬ್ಬಿಸುವ ಕೆಲಸವನ್ನು ಸರ್ಕಾರ ಮಾಡಿದೆಯೇ ಹೊರತು, ಎದೆಗುಂದುವ ಕೆಲಸ ಮಾಡಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.
OSCAR-2019
ಬೆಳ್ತಂಗಡಿ, ಮಾ.20- ಮರಕ್ಕೆ ನೇಣು ಬಿಗಿದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಉಜಿರೆ ಗ್ರಾಮದಲ್ಲಿ ನಡೆದಿದೆ.ಬಿಹಾರ ಮೂಲದ ರಾಮ್‍ದಾಸ್ (22) ಆತ್ಮಹತ್ಯೆಗೆ ಶರಣಾದ ಯುವಕ.ಉಜಿರೆ ಗ್ರಾಮದ ಅನುಗ್ರಹ ಶಾಲೆ ಸಮೀಪವಿದ್ದ ಮರಕ್ಕೆ ನೇಣು ಬಿಗಿದು ರಾಮ್‍ದಾಸ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದರೆ, ಆತ್ಮಹತ್ಯೆಗೆ ಕಾರಣವೇನೆಂಬುದು ತಿಳಿದುಬಂದಿಲ್ಲ.ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಡುಪಿ, ಸೆ.30- ಕಾವೇರಿ ಜಲವಿವಾದದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗದಂತೆ ಕೇಂದ್ರ ಸಂಪನ್ಮೂಲ ಸಚಿವೆ ಉಮಾಭಾರತಿ ಅವರಿಗೆ ಮನವಿ ಮಾಡಿರುವುದಾಗಿ ಪೇಜಾವರ ಶ್ರೀಗಳು ತಿಳಿಸಿದ್ದಾರೆ. ತಾವು ದೂರವಾಣಿ ಮೂಲಕ ಉಮಾಭಾರತಿ ಅವರನ್ನು ಕೆ.ಆರ್.ಪೇಟೆ, ಫೆ.10- ಪಟ್ಟಣದ ದೇವೀರಮ್ಮಣ್ಣಿ ಕೆರೆಯಲ್ಲಿ ಅಪರಿಚಿತ ಮಹಿಳೆಯೊಬ್ಬರ ಶವ ಪತ್ತೆಯಾಗಿದೆ.ಸುಮಾರು 38ರಿಂದ 40ವಯಸ್ಸಿನ ಮಹಿಳೆಯ ಶವವು ಕೆರೆಯಲ್ಲಿ ತೇಲುತ್ತಿರುವುದನ್ನು ಕಂಡ ಸಾರ್ವಜನಿಕರು ಪಟ್ಟಣ ಪೊಲೀಸರಿಗೆ ಸುದ್ದಿ
OSCAR-2019
ಗೋವಾದ ಪಣಜಿಯಲ್ಲಿ ನಡೆಯುತ್ತಿರುವ ಎರಡು ದಿನಗಗಳ ಬ್ರಿಕ್ಸ್ ಶೃಂಗ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌, ದ.ಆಫ್ರಿ ಕಾ ಅಧ್ಯಕ್ಷ ಜಾಕೋಬ್‌ ಝೂಮಾ ಹಾಗೂ ಬ್ರೆಜಿಲ್‌ ಅಧ್ಯಕ್ಷ ಮೈಕೆಲ್‌ ಟೆಮರ್‌ ಅವರು ಗ್ರೂಪ್ ಫೋಟೋ ಪೋಸ್ ನೀಡಿದ್ದು ಹೀಗೆ. ಹೆಚ್ಚಿನ ಚಿತ್ರಗಳು ಮುಂದಿವೆ...
OSCAR-2019
ಖಿನ್ನತೆಯಿಂದ ಬಳಲಿದ್ದ ತಾಯಿಗೆ ಮಗಳು ನೀಡಿದ್ದಾಳೆ ಇಂಥಾ ಮದ್ದು | Kannada Dunia | Kannada News | Karnataka News | India News ಜೈಪುರದಲ್ಲಿ ಯುವತಿಯೊಬ್ಬಳು ವಿಧವೆಯಾಗಿದ್ದ ತನ್ನ ತಾಯಿಗೆ ಮರುಮದುವೆ ಮಾಡಿಸಿದ್ದಾಳೆ. ಸಮಾಜದ ಒತ್ತಡ, ಟೀಕೆಗಳಿಗೆ ಬಗ್ಗದೇ ತಾಯಿಯ ಮುಖದಲ್ಲಿ ಮತ್ತೆ ನಗು ಮೂಡುವಂತೆ ಮಾಡಿದ್ದಾಳೆ. 53 ವರ್ಷದ ಗೀತಾ ಅಗರ್ವಾಲ್ ವಿವಾಹ ಇಬ್ಬರು ಗಂಡು ಮಕ್ಕಳ ತಂದೆಯಾಗಿರೋ ಕೆಜಿ ಗುಪ್ತಾ ಜೊತೆಗೆ ನೆರವೇರಿದೆ. 2016ರ ಮೇನಲ್ಲಿ ಗೀತಾರ ಪತಿ ಕಾರ್ಡಿಯಾಕ್ ಅರೆಸ್ಟ್ ನಿಂದ ಮೃತಪಟ್ಟಿದ್ದರು. ಪತಿಯ ಮರಣದ ನಂತರ ಗೀತಾ ಖಿನ್ನತೆಗೊಳಗಾಗಿದ್ಲು. ಮಗಳು ಸಂಹಿತಾ ಉದ್ಯೋಗಕ್ಕಾಗಿ ಗುರುಗ್ರಾಮಕ್ಕೆ ತೆರಳುತ್ತಿದ್ದಂತೆ ಅವರ ನೋವು ಮತ್ತಷ್ಟು ಹೆಚ್ಚಾಗಿತ್ತು. ಒಂಟಿತನ ತಾಯಿಯನ್ನು ಕಾಡುತ್ತಿದೆ ಅನ್ನೋದನ್ನು ಸಂಹಿತಾ ಅರ್ಥಮಾಡಿಕೊಂಡಿದ್ಲು. ಕೂಡಲೇ ಮ್ಯಾಟ್ರಿಮೊನಿ ಸೈಟ್ ಗಳಲ್ಲಿ ಅಮ್ಮನಿಗಾಗಿ ವರನ ಹುಡುಕಾಟ ನಡೆಸಿದ್ದಾಳೆ. 2010ರಲ್ಲಿ ಪತ್ನಿಯನ್ನು ಕಳೆದುಕೊಂಡಿದ್ದ ಕೆಜಿ ಗುಪ್ತಾ ಜೊತೆಗೆ ತಾಯಿಯ ಮದುವೆ ಮಾಡಿಸಿದ್ದಾಳೆ.
OSCAR-2019
ಕ್ರಿಕೆಟ್ ಇತಿಹಾಸದಲ್ಲಿ 1970 ಮತ್ತು 80ರ ದಶಕದಲ್ಲಿ ಸಾಮ್ರಾಟನಂತೆ ಮೆರೆದಿದ್ದ ವೆಸ್ಟ್ ಇಂಡೀಸ್ ತಂಡಕ್ಕೆ 2016 ಸುವರ್ಣ ವರ್ಷ ಎಂದೇ ಪರಿಗಣಿಸಬಹುದು. ಕೇವಲ ಎರಡೇ ತಿಂಗಳ ಅವಧಿಯಲ್ಲಿ ಕೆರಿಬಿಯನ್ ಕ್ರಿಕೆಟಿಗರು 3 ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಟೂರ್ನಿಯ ಆರಂಭದಲ್ಲಿ ಸಂಕಷ್ಟ ಸ್ಥಿತಿಯಲ್ಲಿದ್ದ ಆಟಗಾರರು, ಎಲ್ಲ ಸಮಸ್ಯೆಗಳನ್ನು ಬದಿಗಿಟ್ಟು ತಮ್ಮ ಸಾಮರ್ಥ್ಯದ ಮೇಲೆ ಇಟ್ಟ ನಂಬಿಕೆಗೆ ತಕ್ಕ ಪ್ರತಿಫಲ ಸಿಕ್ಕಿದೆ. ಭಾನುವಾರ ಕ್ರಿಕೆಟ್ ಕಾಶಿ ಕೋಲ್ಕತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಗೆಲವಿನ ಜೈತ್ರಯಾತ್ರೆ ಕಂಡು ಇಡೀ ಕ್ರಿಕೆಟ್ ಲೋಕವೇ ನಿಬ್ಬೆರಗಾಗಿದೆ. ಮಧ್ಯಾಹ್ನ ನಡೆದ ಮಹಿಳೆಯರ ಫೈನಲ್ ನಲ್ಲಿ ಫೇವರಿಟ್ ಆಸ್ಟ್ರೇಲಿಯಾ ತಂಡವನ್ನು ಬಗ್ಗು ಬಡಿದು, ಪ್ರಶಸ್ತಿಯನ್ನು ಮಡಿಲಿಗೆ ಹಾಕಿಕೊಂಡಿತು. ಸಂಜೆ ನಡೆದ ಪುರುಷರ ಫೈನಲ್ಸ್ ನಲ್ಲೂ ಆಂಗ್ಲರನ್ನು ಮಣಿಸಿದ ಆ ರೋಚಕ ಕ್ಷಣ ಅದ್ಭುತ. ಅದರಲ್ಲೂ 2012 ರಲ್ಲಿ ಪ್ರಶಸ್ತಿ ಗೆಲವಿನ ರೂವಾರಿಯಾಗಿದ್ದ ಮರ್ಲಾನ್ ಸ್ಯಾಮುಯೆಲ್ಸ್ ಹೋರಾಟ ಇನಿಂಗ್ಸ್ ಕಟ್ಟಿದ ರೀತಿ ಅತ್ಯುತ್ತಮ. ಇನ್ನು ಕಡೇ ಓವರ್ ನಲ್ಲಿ ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡಿ, ರೋಮಾಂಚರಾಗಿ ಗೆಲವು ತಂದುಕೊಟ್ಟ ಬ್ರಾಥ್ ವೇಟ್ ಆಟ ಅವಿಸ್ಮರಣೀಯ. ಕಳೆದ ಫೆಬ್ರವರಿ ಬಾಂಗ್ಲಾದೇಶದಲ್ಲಿ ನಡೆದ 19 ವರ್ಷದೊಳಗಿನವರ ವಿಶ್ವಕಪ್ ಫೈನಲ್ ನಲ್ಲೂ ವಿಂಡೀಸ್ ಪಡೆ ದಿಗ್ವಿಜಯ ಸಾಧಿಸಿತ್ತು. ರಾಹುಲ್ ದ್ರಾವಿಡ್ ಗರಡಿಯಲ್ಲಿ ಪಳಗಿ ಪ್ರಶಸ್ತಿ ಫೇವರಿಟ್ ತಂಡ ಎನಿಸಿದ್ದ ಭಾರತವನ್ನು ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಕಿರಿಯರ ಈ ಸಾಧನೆ ಹಿರಿಯರ ತಂಡಕ್ಕೆ ಸ್ಫೂರ್ತಿಯ ಚಿಲುಮೆಯಾಗಿತ್ತು. ಟೂರ್ನಿಯ ಆರಂಭದಿಂದಲೇ ಟಾಸ್ ಹಾಗೂ ಇತರೆ ಸಂದರ್ಭಗಳಲ್ಲಿ ವಿಂಡೀಸ್ ಆಟಗಾರರು ಹೇಳಿತ್ತಿದ್ದುದು ಒಂದೇ ಮಾತು. ಅದು ‘we came here for a mission’ ಎಂದು. ಈಗ ಅದು ಸಂಪೂರ್ಣಗೊಂಡಿದೆ. ನಿಜ.. ಈ ಜಯ ವಿಂಡೀಸ್ ಆಟಗಾರರ ಪಾಲಿಗೆ ಇದೊಂದು ಯುದ್ಧವೇ ಆಗಿತ್ತು. ಕಾರಣ, ಕಳೆದ ಆರು ತಿಂಗಳ ವಿಂಡೀಸ್ ತಂಡ ಎದುರಿಸಿದ ಬವಣೆ ನೋಡಿದರೆ ಈ ಯಶಸ್ಸು ಒಂದು ಮ್ಯಾಜಿಕ್ ಎನಿಸದಿರದು. ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಮತ್ತು ಕ್ರಿಕೆಟ್ ಆಟಗಾರರ ಸಂಘದ ನಡುವಣ ರಾಜಕೀಯ ಸಮರದಿಂದ ಬೇಸತ್ತು ಬಂಡಾಯವೆದ್ದಿದ್ದ ಬ್ರಾವೊ, ಪೊಲಾರ್ಡ್ ಹಾಗೂ ಇತರೆ ಆಟಗಾರರಿಗೆ ತಂಡದಿಂದ ಕೊಕ್ ನೀಡಲಾಗಿತ್ತು. ನಂತರ ವೇತನ ತಾರತಮ್ಯದ ವಿವಾದ, ವೆಸ್ಟ್ ಇಂಡೀಸ್ ಕ್ರಿಕೆಟ್ ನಲ್ಲಿ ಯಾವುದೂ ಸರಿ ಇಲ್ಲ ಎಂಬ ವಾತಾವರಣ ನಿರ್ಮಾಣವಾಗಿತ್ತು. ಕಳೆದ ಜನವರಿಯಲ್ಲಿ ವೆಸ್ಟ್ ಇಂಡೀಸ್ ತಂಡ ಆಸ್ಟ್ರೇಲಿಯಾ ಪ್ರವಾಸದಲ್ಲಿ ಸತತ ಸೋಲಿನಿಂದ ಬಳಲುತ್ತಿದ್ದರೆ, ಬಂಡಾಯ ಆಟಗಾರರಾಗಿದ್ದ ಗೇಲ್, ಬ್ರಾವೊ ‘ಬಿಗ್ ಬ್ಯಾಷ್’ ನಲ್ಲಿ ಆಡುತ್ತಿದ್ದರು. ಈ ವೇಳೆ ತಂಡದ ಕೋಚ್ ಫಿಲ್ ಸಿಮನ್ಸ್ ಮತ್ತು ಕರ್ಟ್ಲಿ ಅಂಬ್ರೊಸ್ ಮಂಡಳಿ ವಿರುದ್ಧ ಸೆಡ್ಡು ಹೊಡೆದು ಬ್ರಾವೊ ಹಾಗೂ ಇತರೆ ಆಟಗಾರರನ್ನು ತಂಡಕ್ಕೆ ಹಿಂಪಡೆಯುವಲ್ಲಿ ಸಫಲರಾಗಿದ್ದರು. ಹೀಗಾಗಿ ಈ ಜಯ ಆಟಗಾರರು ಮತ್ತು ಕೋಚ್ ಪಾಲಿಗೆ ಅವಿಸ್ಮರಣೀಯ. ಪ್ರಶಸ್ತಿ ಸಮಾರಂಭದಲ್ಲಿ ನಾಯಕ ಡಾರೆನ್ ಸಾಮಿ ಅವರ ಕೋಪ, ಭಾವೋದ್ವೇಗದ ಮಾತುಗಳು ತಂಡದ ಇತರೆ ಆಟಗಾರರ ಮನಸ್ಥಿತಿಯ ಪ್ರತಿಬಿಂಬವಾಗಿತ್ತು. ‘ನಾವು ವಿಂಡೀಸ್ ಮಂಡಳಿ ಜತೆ ಸಮಸ್ಯೆ ಹೊಂದಿದ್ದೇವೆ. ಮಾರ್ಕ್ ನಿಕೋಲಸ್ ನಮ್ಮನ್ನು ತಲೆಯಲ್ಲಿ ಬುದ್ಧಿ ಇಲ್ಲದ ಆಟಗಾರರು ಎಂದು ಕರೆದಿದ್ದರು. ನಮಗೆ ಸಿಗಬೇಕಾದ ಸೌಲಭ್ಯ ಸಿಕ್ಕಿರಲಿಲ್ಲ. ಆಟಗಾರರಿಗೆ ಒಂದು ಜರ್ಸಿಗೂ ಗತಿ ಇರಲಿಲ್ಲ. ಇಂಥ ಸನ್ನಿವೇಶದಲ್ಲಿ ನಾವು 15 ಆಟಗಾರರು ಒಟ್ಟಾಗಿ ನಿಂತೆವು. ಕ್ರಿಕೆಟ್ ಪ್ರೀತಿಸೋ ಅಭಿಮಾನಿಗಳ ಮುಂದೆ ಇಂಥದೊಂದು ಪ್ರದರ್ಶನ ನೀಡಿರುವುದರಲ್ಲಿ ನಮ್ಮ ಜನ್ಮ ಸಾರ್ಥಕವಾಯ್ತು ಅನ್ನಿಸುತ್ತಿದೆ’ ಎಂದ ಸಾಮಿ ಮಾತುಗಳು ತಂಡದಲ್ಲಿ ಮಡುಗಟ್ಟಿದ್ದ ನೋವಿನ ಅನಾವರಣ ಮಾಡಿತ್ತು. ಕೆಲ ದಿನಗಳ ಹಿಂದೆ ಇದೇ ವಿಂಡೀಸ್ ತಂಡದಿಂದ ಭಾರತ ಸೋಲು ಕಂಡದ್ದಕ್ಕೆ ನಿರಾಶರಾಗಿದ್ದ ಕೋಟ್ಯಂತರ ಭಾರತೀಯ ಅಭಿಮಾನಿಗಳು ಇದೀಗ ಅದೇ ತಂಡದ ಜಯ ಕಂಡು ಪುಳಕಿತರಾದರು. ಸಂಬಂಧಗಳ ಬೆಸುಗೆಯಲ್ಲಿ ಕ್ರಿಕೆಟ್ ಗೆ ಅದೆಂಥ ಅದ್ಭುತ ಶಕ್ತಿಯಿದೆ ಎಂಬುದಕ್ಕೆ ಇದಕ್ಕಿಂತ ಬೇರೆ ನಿದರ್ಶನ ಬೇಕಿಲ್ಲವೇನೋ..? Next articleಹೋಟೆಲಲ್ಲಿ ಉಳಿದ ಆಹಾರ ಕಸದ ತೊಟ್ಟಿಗೆ ಎಸೆಯದೆ ಹಸಿದವರ ಹೊಟ್ಟೆಗೆ ಸೇರಿಸೋ ಈ ಪುಣ್ಯಾತಗಿತ್ತಿ ತಣ್ಣಗಿರಲಿ..
OSCAR-2019
ರಂಜಾನ್ ತಿಂಗಳಲ್ಲಿ, ವಿಶ್ವದಾದ್ಯಂತ ಮಿಲಿಯನ್ ನಷ್ಟು ಮುಸ್ಲೀಂಮರು ಈ ಹೋಲಿ ತಿಂಗಳಲ್ಲಿ ಉಪವಾಸವಿರುತ್ತಾರೆ.. ರಂಜಾನ್ ನಲ್ಲಿ, ಇಸ್ಲಾಂ ಧರ್ಮದ ಪಾಲಕರು ಹಗಲಿನಲ್ಲಿ ಯಾವುದೇ ಆಹಾರವನ್ನು ಸೇವಿಸುವುದಿಲ್ಲ. ಈ ಲೇಖನದಲ್ಲಿ ನಾವು ರಂಜಾನ್ ನ ಉಪವಾಸದಿಂದಾಗುವ ಆರೋಗ್ಯ ಲಾಭಗಳು ಮತ್ತು ತೊಂದರೆಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಮುಸ್ಲಿಂ ಬಾಂಧವರು ತಮ್ಮ ಮನಸ್ಸು ಮತ್ತು ದೇಹವನ್ನು ಈ ತಿಂಗಳಲ್ಲಿ ಸಿದ್ಧಗೊಳಿಸಿಕೊಂಡಿರುತ್ತಾರೆ ಆ ಮೂಲಕ ಅವರು ಯಾವುದೇ ರೀತಿಯ ಅನಾರೋಗ್ಯ ಸಮಸ್ಯೆಗಳನ್ನು ಎದುರಿಸದಂತೆ ನೋಡಿಕೊಳ್ಳುತ್ತಾರೆ. ಆದರೆ ಉಪವಾಸವನ್ನು ಗಣನೆಗೆ ತೆಗೆದುಕೊಂಡರೆ , ಹಲವಾರು ರೀತಿಯ ಅಂದರೆ ಎದೆಯುರಿ ಸಮಸ್ಯೆ, ಡಿಹೈಡ್ರೇಷನ್, ಮತ್ತು ಕಿರಿಕಿರಿಯಂತ ಅನಾರೋಗ್ಯ ಸಮಸ್ಯೆಗಳು ಕಾಡುವ ಸಾಧ್ಯತೆಗಳಿರುತ್ತದೆ. ಅಷ್ಟೇ ಅಲ್ಲ, ಇದರಿಂದಾಗಿ ತೂಕ ಇಳಿಕೆ, ರಕ್ತದ ಒತ್ತಡದಲ್ಲಿ ಇಳಿಕೆ, ಡಯಾಬಿಟೀಸ್ ನಿಯಂತ್ರಣ, ಸ್ನಾಯುವಿನ ಬಲವನ್ನು ಸಂರಕ್ಷಿಸುವಿಕೆ ಇತ್ಯಾದಿಗಳಿಗೂ ಇದು ಕಾರಣವಾಗಬಹುದು. ದೇಹವು ಈ ಸಂದರ್ಭದಲ್ಲಿ ಅಂದರೆ ರಂಜಾನ್ ತಿಂಗಳಲ್ಲಿ ಹಲವು ಹಂತಗಳನ್ನು ಎದುರಿಸುತ್ತದೆ ಯಾಕೆಂದರೆ ಬೇರೆಬೇರೆ ರೀತಿಯ ಆಹಾರ ಕ್ರಮ ಮತ್ತು ಬೇರೆಬೇರೆ ರೀತಿಯ ಪಾನೀಯ ಸೇವನೆ ಇದಕ್ಕೆ ಕಾರಣವಿರಬಹುದು. ಇದರಿಂದಾಗಿ, ಎಂಡಾರ್ಫಿನ್ಗಳ ಲೆವೆಲ್ ರಕ್ತದಲ್ಲಿ ಅಧಿಕವಾಗುತತೆ ಮತ್ತು ನಿಮ್ಮನ್ನು ಹೆಚ್ಚು ಎಚ್ಚರದಿಂದ ಇರುವಂತೆ ಮತ್ತು ಖುಷಿಯಾಗಿ ಇರುವಂತೆ ಅಷ್ಟೇ ಯಾಕೆ, ನಿಮ್ಮ ಮಾನಸಿಕ ಆರೋಗ್ಯವೂ ಒಳ್ಳೆಯ ರೀತಿಯಲ್ಲಿ ಇರಲು ನೆರವಾಗುತ್ತದೆ. ಅತಿಯಾದ ತೂಕವಿರುವವರು ಅರ್ಥಾತ್ ಅತಿಯಾದ ಬೊಜ್ಜು ಹೊಂದಿರುವವರು ಈ ತಿಂಗಳಿನಲ್ಲಿ ಹೆಚ್ಚಿನ ಲಾಭವನ್ನು ಪಡೆಯಲಿದ್ದಾರೆ. ಹಾಗಂತ ರಂಜಾನ್ ಬೇಕಂತಲೆ ತೂಕ ನಷ್ಟಕ್ಕೆ ಕಾರಣವಾಗುವುದಿಲ್ಲ. ಯಾವ ಜನರು ಆರೋಗ್ಯಯುತವಾದ ಬೆಳಗಿನ ಡಯಟ್ ಮತ್ತು ಸಂಜೆಯ ಡಯಟ್ ಪಾಲಿಸುತ್ತಾರೋ ಅವರು ಅಂದರೆ, ಸೂಪ್, ತಾಜಾ ಬ್ರೆಡ್, ಖರ್ಜೂರ, ಮತ್ತು ಹಣ್ಣುಗಳನ್ನು ಸೇವಿಸುತ್ತಾರೋ ಅಂತವರು ಬೇಗನೆ ತೂಕ ಕಳೆದುಕೊಳ್ಳಲು ಸಾಧ್ಯವಾಗುತ್ತೆ. ಸಕ್ಕರೆ ಮತ್ತು ಬೊಜ್ಜಿನ ಆಹಾರ ಪದಾರ್ಥಗಳನ್ನು ಸೇವಿಸದೇ ತಾಜಾ ಹಣ್ಣುಗಳು , ತಾಜಾ ತರಕಾರಿಗಳು ಮತ್ತು ನೀರಿನ ಸೇವನೆಯನ್ನು ಅಧಿಕವಾಗಿರಲಿ. ಇದು ನಿಮ್ಮ ದೇಹ ತೂಕವನ್ನು ಕಡಿಮೆಗೊಳಿಸಲು ಸಹಾಯಕವಾಗಿದೆ.. ರಂಜಾನ್ ತಿಂಗಳಲ್ಲಿ ಉಪವಾಸ ಮಾಡುವುದರಿಂದಾಗುವ ಒಂದು ಪ್ರಮುಖ ಲಾಭವೆಂದರೆ ಅದು ನಿಮ್ಮ ರಕ್ತದ ಸಕ್ಕರೆಯಂಶವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ನೆರವು ನೀಡುತ್ತದೆ. ಉಪವಾಸವು ನಿಮ್ಮ ಗ್ಲುಕೋಸ್ ಅಂಶವನ್ನು ತಗ್ಗಿಸಿ ಕೆಳಗಿಳಿಸುತ್ತದೆ ಅರ್ಥಾತ್ ಕರಗಿಸುತ್ತದೆ ಹಾಗಾಗಿ ನಿಮ್ಮ ದೇಹಕ್ಕೆ ಶಕ್ತಿಯ ಲಭ್ಯತೆ ಆಗುತ್ತದೆ. ಇದು ನಿಮ್ಮ ಮೇಧೋಜೀರಕ ಗ್ರಂಥಿಗಳಿಗೆ ಆರಾಮ ಒದಗಿಸುತ್ತದೆ. ಗ್ಲುಕೋಸ್ ನ ಸ್ಥಗಿತವನ್ನು ಹೆಚ್ಚುಗೊಳಿಸಲು ಗ್ಲುಕೋಗನ್ ನ್ನು ತಯಾರಿಸಲಾಗುತ್ತದೆ ಮತ್ತು ಇದರ ಫಲಿತಾಂಶದಿಂದಾಗಿ ರಕ್ತದ ಸಕ್ಕರೆ ಅಂಶದಲ್ಲಿ ಗಣನೀಯವಾಗಿ ಕಡಿಮೆಯಾಗುತ್ತದೆ. ಉಪವಾಸ ಮಾಡುವ ಪರಿಣಾಮದಿಂದಾಗಿ ಆರ್ಥೆರೋಸೆಲೋರಿಸಿಸ್ ಅಂದರೆ ಅಪಧಮನಿಯ ಕಾಠಿಣ್ಯತೆಯು ಆಗುವ ಭಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಅಂದರೆ ಬೊಬ್ಬಿನ ಪದಾರ್ಥಗಳಿಂದ ಆಗುವ ಆರ್ಥೈಟಿಸ್ ಅಡಚಣೆಯು ಆಗದಂತೆ ತಡೆಯುತ್ತದೆ. ದೇಹವು ಸರಿಯಾದ ಸಮಯದ ಆಹಾರ ಮತ್ತು ನೀರನ್ನು ಕಳೆದುಕೊಳ್ಳುವುದರಿಂದಾಗಿ, ದೇಹದಲ್ಲಿ ಸಂಗ್ರಹವಾಗಿದ್ದ ಕೊಬ್ಬಿನ ಅಥವಾ ಬೊಜ್ಜಿನ ಅಂಶವು ಶಕ್ತಿಯಾಗಿ ಪರಿವರ್ತನೆಯಾಗಿ ಬಳಕೆಯಾಗುತ್ತದೆ. ಹಾಗಾಗಿ ಉಪವಾಸ ಮಾಡುವಾಗ ಚಯಾಪಚಯ ಕ್ರಿಯೆಯ ಒಟ್ಟಾರೆ ದರವು ಕಡಿಮೆಯಾಗುತ್ತದೆ. ಅಡ್ರಿನಾಲಿನ್ ಮತ್ತು ನಾನ್ಡ್ರೆನಾಲಿನ್ ಎಂಬ ಎರಡು ಹಾರ್ಮೋನುಗಳ ಸ್ರವಿಸುವಿಕೆ ಕೂಡ ಈ ಸಂದರ್ಬದಲ್ಲಿ ಕಡಿಮೆಯಾಗುತ್ತದೆ, ಇದು ನಿಮಗೆ ನಿಮ್ಮ ಚಯಾಪಚಯ ದರವು ಸರಿಯಾದ ಕ್ರಮದಲ್ಲಿ ಇರಲು ನೆರವು ನೀಡುತ್ತದೆ ಮತ್ತು ಹೆಚ್ಚಿನ ರಕ್ತದೊತ್ತಡವನ್ನು ಕಂಟ್ರೋಲ್ ನಲ್ಲಿ ಇಡಲು ನೆರವಾಗುತ್ತದೆ. ನಿಮ್ಮ ಸ್ನಾಯುಗಳಲ್ಲಿ ಸಂಗ್ರಹವಾಗಿರುವ ಬೊಜ್ಜಿನ ಅಂಶಗಳು ಈ ಉಪವಾಸದ ಸಂದರ್ಬದಲ್ಲಿ ಬಳಕೆಯಾಗುತ್ತಾ ಸಾಗುತ್ತೆ. ನೀವು ಯಾವಾಗ ಆಹಾರ ಸೇವಿಸುತ್ತಲೇ ಇರುತ್ತೀರೋ ಆಗ ನಿಮ್ಮ ದೇಹಕ್ಕೆ ಕಾರ್ಬೋಹೈಡ್ರೇಟ್ಸ್ ಮತ್ತು ಗ್ಲುಕೋಜೆನ್( ಕೊಬ್ಬಿನ ಜೀವಕೋಶಗಳು) ಸೇರುತ್ತಲೇ ಸಾಗುತ್ತೆ, ಮತ್ತು ಇದು ನಿಮ್ಮ ತೂಕ ಹೆಚ್ಚಳಕ್ಕೆ ಕಾರಣವಾಗುತ್ತೆ., ಆದರೆ ರಂಜಾನ್ ನಲ್ಲಿ ಉಪವಾಸ ಕೈಗೊಳ್ಳುವುದರಿಂದಾಗಿ, ಈ ಕೊಬ್ಬಿನ ಜೀವಕೋಶಗಳು ಬಳಕೆಯಾಗುತ್ತದೆ ಮತ್ತು ಶಕ್ತಿಯಾಗಿ ಪರಿವರ್ತನೆಯಾಗುತ್ತದೆ. ಮತ್ತು ನಿಮ್ಮ ಸ್ನಾಯುಗಳ ಬಲವನ್ನು ಸಂರಕ್ಷಿಸುತ್ತದೆ ಜೊತೆಗೆ ಹೆಚ್ಚಿನ ಬೊಜ್ಜಿನ ಅಂಶ ನಿಮ್ಮ ಸ್ನಾಯುಗಳಲ್ಲಿ ಸೇರದಂತೆ ನೋಡಿಕೊಳ್ಳುತ್ತದೆ. ರಂಜಾನ್ ನಲ್ಲಿ ಉಪವಾಸ ಮಾಡುವುದರಿಂದಾಗಿ, ಜನರು ಹೆಚ್ಚಾಗಿ ಆರೋಗ್ಯದಾಯಕವಾಗಿರುವ ಆಹಾರ ಪದಾರ್ಥಗಳನ್ನು ಸೇವಿಸುತ್ತಾರೆ.ಇದು ಸಹಜವಾಗಿಯೇ ಅವರ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು, ಟಾಕ್ಸಿನ್ ಅಂಶಗಳು ದೇಹದಿಂದ ಹೊರಹೋಗುವಂತೆ ನೋಡಿಕೊಳ್ಳುತ್ತದೆ. ಯಾವಾಗ ಖರ್ಜೂರ ಮತ್ತು ಹಣ್ಣುಗಳನ್ನು ತಿಂದು ಉಪವಾಸವನ್ನು ನಿಲ್ಲಿಸುತ್ತಾರೋ, ಆಗ ದೇಹಕ್ಕೆ ಅಗತ್ಯವಿರುವ ವಿಟಮಿನ್ಸ್ ಮತ್ತು ಮಿನರಲ್ಸ್ ಗಳು ಶೇಖರಣೆಗೊಳ್ಳುವ ಪ್ರಮಾಣ ಅಧಿಕ ಆಗುತ್ತದೆ. ವಿಟಮಿನ್ ಎ ಮತ್ತು ವಿಟಮಿನ್ ಇ ಅಂಶವು ಹೆಚ್ಚಿನ ಎಲ್ಲಾ ಹಣ್ಣುಗಳಲ್ಲೂ ಇರುತ್ತದೆ ಮತ್ತು ಇದು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವು ನೀಡುತ್ತದೆ. ರಂಜಾನ್ ನಲ್ಲಿ ಉಪವಾಸ ಮಾಡುವುದರಿಂದಾಗುವ ಇನ್ನೊಂದು ದೈಹಿಕ ಲಾಭವೆಂದರೆ ದೇಹದ ಉರಿಯೂತದ ಕಾಯಿಲೆಗಳು ಮತ್ತು ಅಲರ್ಜಿಗಳನ್ನು ಪರಿಹರಿಸಲು ಇದು ನೆರವು ನೀಡುತ್ತದೆ. ಉರಿಯೂತಕ್ಕೆ ಸಂಬಂಧಿಸಿದ ಕೆಲವು ಕಾಯಿಲೆಗಳೆಂದರೆ, ಆರ್ಥೈಟೀಸ್ ಮತ್ತು ಚರ್ಮದ ಸಮಸ್ಯೆಗಳು ಅಂದರೆ ಸ್ಪೋರಿಯೋಸಿಸ್.. ಇತ್ಯಾದಿಗಳು. ತಜ್ಞರು ತಿಳಿಸುವಂತೆ ಉಪವಾಸವು ಉರಿಯೂತಕ್ಕೆ ಸಂಬಂಧಿಸಿದ ಕೆಲವು ಕಾಯಿಲೆಗಳು ಉದಾಹರಣೆಗೆ ಅಲ್ಸರೇಟಿವ್ ಕೊಲೈಟೀಸ್ ನ್ನು ನಿವಾರಿಸಲು ನೆರವು ನೀಡುತ್ತದೆ. ಹಲವಾರು ಅಧ್ಯಯನಗಳು ತಿಳಿಸಿರುವಂತೆ, ಉಪವಾಸದಿಂದಾಗಿ ಹಲವಾರು ರೀತಿಯ ಪ್ರೊಟೀನ್ ಗಳ ಉತ್ಪಾದನೆಯು ಅಧಿಕವಾಗುತ್ತದೆ ಮತ್ತು ಈ ಪ್ರೋಟೀನುಗಳು ಮೆದುಳಿನ ಕಾರ್ಯಚಟುವಟಿಕೆಗೆ ಸಾಕಷ್ಟು ನೆರವು ನೀಡುತ್ತದೆ. ಮೆದುಳಿನ ಸ್ಟೆಮ್ ಸೆಲ್ ಗಳನ್ನು ಆಕ್ಟೀವ್ ಮಾಡಲು ಮತ್ತು ಸರಿಯಾಗಿ ಕೆಲಸ ನಿರ್ವಹಿಸಲು ಈ ಪ್ರೋಟೀನ್ ಗಳು ಸಹಾಯ ಮಾಡುತ್ತೆ. ಇದೇ ಕಾರಣದಿಂದಾಗಿ ನಿಮ್ಮ ಉಪವಾಸವು, ಮೆದುಳನ್ನು ಹೆಚ್ಚು ಅಲರ್ಟ್ ಆಗಿರುವಂತೆ ನೋಡಿಕೊಳ್ಳುತ್ತದೆ. ರಂಜಾನ್ ನಲ್ಲಿ ಉಪಮಾಸ ಮಾಡುವುದರಿಂದ ಆಗುವ ಒಂದು ಮಾನಸಿಕ ಲಾಭವೆಂದರೆ, ನಿಮ್ಮ ದೇಹವು ಹೇಗೆ ಆಹಾರ ಮತ್ತು ಪಾನೀಯಗಳನ್ನು ಕಂಟ್ರೋಲ್ ಮಾಡಿಕೊಳ್ಳುವುದು ಹೇಗೆ ಎಂಬ ಬಗ್ಗೆ ಮಾನಸಿಕ ಸ್ಪಷ್ಟತೆಯನ್ನು ಪಡೆಯುತ್ತದೆ. ಈ ಪ್ರಕ್ರಿಯೆಯಲ್ಲಿ, ನಿಮ್ಮ ಮೆದುಳು ಹೇಗೆ ತಾಳ್ಮೆಯಿಂದ ಇರುವುದು ಮತ್ತು ಎಲ್ಲದಕ್ಕೂ ಹೊಂದಿಕೊಳ್ಳುವುದು ಎಂಬುದನ್ನು ಸರಿಯಾಗಿ ಅರ್ಥೈಸಿಕೊಳ್ಳುತ್ತದೆ. ಇದಿಷ್ಟನ್ನು ಹೊರತು ಪಡಿಸಿ ರಂಜಾನ್ ನಲ್ಲಿ ಉಪವಾಸ ಮಾಡುವುದರಿಂದಾಗಿ ಕೆಲವು ಅಪಾಯಗಳೂ ಕೂಡ ಒದಗಿ ಬರಬಹುದು. ಅವುಗಳು ಯಾವುವು ಎಂಬ ಬಗ್ಗೆ ಇಲ್ಲಿದೆ ನೋಡಿ ವಿವರ.. •ಕೆಫಿನ್ ಅಂಶವಿರುವ ಪಾನೀಯಗಳನ್ನು ರಂಜಾನ್ ನಲ್ಲಿ ಸೇವಿಸುವುದು ಆದಷ್ಟು ತಡೆಯುವುದು ಒಳ್ಳೆಯುದು ಅಷ್ಟೇ ಅಲ್ಲ, ಕಾರ್ಬೋನೆಟೆಡ್ ಪಾನೀಯಗಳೂ ಕೂಡ ಹಿತವಲ್ಲ. ಇದು ನಿಮಗೆ ಅಸಿಡಿಟಿಯ ಸಮಸ್ಯೆಯನ್ನು ತಂದೊಡ್ಡುತ್ತದೆ. •ಸೂರ್ಯನ ಕಿರಣಗಳು ಮೈಯೊಡ್ಡುವುದನ್ನು ಆದಷ್ಟು ಕಡಿಮೆ ಮಾಡಿ ಮತ್ತು ಅತೀ ಹೆಚ್ಚು ನೀರನ್ನು ಸೇವಿಸಿ. ಹೊರಗಿನ ಅತಿಯಾದ ಬಿಸಿಲಿನಿಂದಾಗಿ ನೀವು ಡಿಹೈಡ್ರೇಷನ್ ಸಮಸ್ಯೆಯನ್ನು ಎದುರಿಸುವಂತಾಗಬಹುದು. •ಯಾರಿಗೆ ದೊಡ್ಡ ಪ್ರಮಾಣದ ಕಿಡ್ನಿ ಸಮಸ್ಯೆ ಇರುತ್ತೋ, ಅಂತವರು ಉಪವಾಸ ಮಾಡುವುದರಿಂದಾಗಿ ಮೂತ್ರಪಿಂಡದ ಕಾರ್ಯದಲ್ಲಿ ಮತ್ತಷ್ಟು ಹಾಳಾಗಬಹುದು. ಎಚ್ಚರವಿರಲಿ.
OSCAR-2019
ವಿಜಯಪುರ, ಮಾರ್ಚ್ 8: "ಇಂದು ಸಂಜೆಯೊಳಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಯಾರಾದರೂ ಕೊಲೆ ಮಾಡುತ್ತಾರೆ ಎಂಬ ಭಯ ನನಗೆ ಇದೆ" ಎಂದು ವಿಪಕ್ಷ ನಾಯಕ- ಬಿಜೆಪಿ ಮುಖಂಡರಾದ ಕೆ.ಎಸ್.ಈಶ್ವರಪ್ಪ ಇಲ್ಲಿ ಹೇಳಿದರು. ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದರು. ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರ ಮೇಲೆ ಚಾಕು ಇರಿತ ಆಗಿದೆ. ಅದೇ ರೀತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಯಾಕೆ ಚಾಕು ಹಾಕಬಾರದು? ಕೊಲೆಗಡುಕರಿಗೆ ಕರ್ನಾಟಕ ಸ್ವರ್ಗ ಆಗಿದೆ. ಯಾರೂ- ಏನೂ ಮಾಡಲಿಕೆ ಆಗಲ್ಲ. ಗೃಹ ಇಲಾಖೆ ಸತ್ತು ಹೋಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸ್ ಇಲಾಖೆಗೆ ಹೇಳೋರು- ಕೇಳೋರು ಯಾರೂ ಇಲ್ಲ. ಎಲ್ಲಿ ಬೇಕಾದರೂ ಅತ್ಯಾಚಾರ ಹಾಗೂ ಕೊಲೆ ಮಾಡಬಹುದು. ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಆಗುತ್ತಿಲ್ಲ. ಮುಖ್ಯಮಂತ್ರಿ ಹಾಗೂ ಗೃಹ ಸಚಿವರ ಜೀವ ಉಳಿಸುವುದು ಕಷ್ಟ. ಆದ್ದರಿಂದ ನಮ್ಮ ಜೀವ ಉಳಿಸಿ ಎಂದು ಸಿಎಂ ಹಾಗೂ ಗೃಹ ಸಚಿವರು ಕೇಂದ್ರ ಸರಕಾರಕ್ಕೆ, ಪ್ರಧಾನಮಂತ್ರಿಗೆ ಮನವಿ ಮಾಡಲಿ ಎಂದು ಹೇಳಿದರು.
OSCAR-2019
ಕೊಲ್ಲೂರು: ಯಕ್ಷಗಾನದ ಅಂತಃಸತ್ವಕ್ಕೆ ಕುಂದುಂಟಾಗದಂತೆ ಪೋಷಿಸಿ ಬೆಳೆಸುವಲ್ಲಿ ಕಲಾವಿದರ ಸಾಧನೆ ಸಮಾಜಕ್ಕೊಂದು ಮಾದರಿ ಎಂದು ಕೊಲ್ಲೂರು ಪ.ಪೂ. ಕಾಲೇಜಿನ ಪ್ರಾಂಶುಪಾಲ ಪ್ರೊ| ಅರುಣ ಪ್ರಕಾಶ್‌...
OSCAR-2019
ಚಿಂತಕ, ನಿರ್ದೇಶಕ ಅಮಿತ್ ಮಧೇಸಿಯಾ ‘‘ಸರ್ಚಿಂಗ್ ಫಾರ್ ಸರಸ್ವತಿ’’ ಎನ್ನುವಂತಹ ಸಾಕ್ಷ ಚಿತ್ರವೊಂದನ್ನು ತೆಗೆದಿದ್ದಾರೆ. ಪುರಾಣ ಕಾಲದಲ್ಲಿ ಅಥವಾ ಋಗ್ವೇದ ಕಾಲದಲ್ಲಿ ಇತ್ತು ಎನ್ನುವ ಸರಸ್ವತಿ ಎಂಬ ನದಿಯ ಹುಡುಕಾಟಕ್ಕಾಗಿ ಮುಂದಾಗಿರುವ ಸರಕಾರದ ನಿಲುವನ್ನು ನಿಕಷಕೊಡ್ಡುವ ಸಾಕ್ಷ ಚಿತ್ರ ಇದು. ಮೋದಿ ನೇತೃತ್ವದ ಎನ್‌ಡಿಎ ಸರಕಾರ ಅಸ್ತಿತ್ವಕ್ಕೆ ಬಂದ ವರ್ಷದೊಳಗೆ, ಋಗ್ವೇದ ಕಾಲದಲ್ಲಿರುವ ಸರಸ್ವತಿ ನದಿಯನ್ನು ಹುಡುಕುವುದಕ್ಕಾಗಿ 50 ಕೋಟಿಗು ಅಧಿಕ ಹಣವನ್ನು ಘೋಷಿಸಿತ್ತು. ಪುರಾಣವನ್ನು ವಾಸ್ತವದ ಜೊತೆಗೆ ಕಲಬೆರಕೆ ಮಾಡುವ ಅಪಾಯಗಳ ಕುರಿತಂತೆ ಈ ಚಿತ್ರ ನಮ್ಮನ್ನು ಎಚ್ಚರಿಸುತ್ತದೆ. ಯಾವುದೇ ಸಂಶೋಧನೆಗೆ ವೈಜ್ಞಾನಿಕ ಹಿನ್ನೆಲೆಯಿರಬೇಕು. ನೂತನ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ನಮ್ಮ ಶೋಧನೆಗಳು ಪುರಾಣಗಳನ್ನು ಆಧರಿಸಿ ನಡೆಯುತ್ತಿದೆ. ಗೋಮೂತ್ರದಲ್ಲಿ ಔಷಧೀಯ ಅಂಶವಿದೆಯೇ ಎನ್ನುವುದನ್ನು ಶೋಧಿಸುವುಕ್ಕೂ ಹಣ ಮೀಸಲಿಟ್ಟ ಸರಕಾರ ನಮ್ಮದು. ಈ ಮೂಲಕ ಈ ದೇಶವನ್ನು ಆಧುನಿಕ ದಿನದೆಡೆಗೆ ಮುನ್ನಡೆಸಿದ ವಿಜ್ಞಾನವನ್ನು ತಿರಸ್ಕರಿಸಿ, ಪುರಾಣಗಳ ಕಂತೆಗಳನ್ನು ವಿಜ್ಞಾನ ಪುಸ್ತಕವಾಗಿಸುವ ಪ್ರಯತ್ನ ನಡೆಯುತ್ತಿದೆ. ಇಲ್ಲದಿರುವುದನ್ನು ಇದೆ ಎಂದು ಘೋಷಿಸಿ ಹುಡುಕುವುದರ ಬದಲು ಇರುವುದನ್ನು ಉಳಿಸುವ ಕಡೆಗೆ ಮನ ಮಾಡಬೇಕು ಎನ್ನುವ ಸಂದೇಶವನ್ನು ಚಿತ್ರ ನೀಡುತ್ತದೆ.
OSCAR-2019
ಖೈರೈರ್ (ಪಿಟಿಐ), : ಭಾರತದ ಸೈನಿಕರು ಗಡಿ ನಿಯಂತ್ರಣ ರೇಖೆಯನ್ನು (ಎಲ್ಒಸಿ) ದಾಟಿ ಅಪ್ರಚೋದಿತ ದಾಳಿ ನಡೆಸಿಲ್ಲ ಎಂದು ಸೇನಾ ಮುಖ್ಯಸ್ಥ ಜನರಲ್ ಬಿಕ್ರಂ ಸಿಂಗ್ ಪಾಕಿಸ್ತಾನದ ಆರೋಪಗಳನ್ನು ತಿರಸ್ಕರಿಸಿದ್ದಾರೆ. ಜನವರಿ 8 ರಂದು ಜಮ್ಮು ಮತ್ತು ಕಾಶ್ಮೀರದ ಗಡಿ ಜಿಲ್ಲೆ ಪೂಂಚ್‌ನ ಸೋನಾ ಗಾಲಿ ಪ್ರದೇಶದಲ್ಲಿ ಪಾಕಿಸ್ತಾನದ ಸೈನಿಕರು ಭಾರತದ ಇಬ್ಬರು ಸೈನಿಕರನ್ನು ಹತ್ಯೆ ಮಾಡಿತ್ತು . ಮೃತ ಹೇಮರಾಜ್ ಕುಟುಂಬವನ್ನು ಭೇಟಿಮಾಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನಮ್ಮ ಸೈನಿಕರು ಗಡಿ ನಿಯಂತ್ರಣ ರೇಖೆಯನ್ನು ದಾಟಿಲ್ಲ, ಅಲ್ಲದೆ ನಮ್ಮ ಸೈನಿಕರು ಯಾವುದೇ ಅಪ್ರಚೋದಿತ ದಾಳಿ ನಡೆಸಿಲ್ಲ, ನಾವು ಮಾನವ ಹಕ್ಕುಗಳನ್ನು ಗೌರವಿಸುತ್ತೇವೆ ಎಂದು ಅವರು ತಿಳಿಸಿದರು. ಭಾರತದ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ನಮ್ಮ ಸೈನಿಕನೊಬ್ಬನು ಮೃತ ಪಟ್ಟಿರುವುದಾಗಿ ಪಾಕಿಸ್ತಾನದ ಸೇನೆ ಹೇಳಿತ್ತು, ಇದಕ್ಕೆ ಪ್ರತಿಕ್ರಿಯಿಸಿದ ಭೂಸೇನಾ ಮುಖ್ಯಸ್ಥರು ಎರಡು ಕಡೆ ನಡೆದ ಗುಂಡಿನ ದಾಳಿಯಲ್ಲಿ ಮೃತ ಪಟ್ಟಿರಬಹುದು ಎಂದು ಹೇಳಿದರು.
OSCAR-2019
ಜಮ್ಮು ಕಾಶ್ಮೀರದ ಕತುವಾ ಪ್ರದೇಶದಲ್ಲಿ ಪುಟ್ಟ ಪುಟ್ಟ ಮೇಕೆಗಳನ್ನು ಮುದ್ದಿಸುತ್ತಾ, ಆಡಿ-ಕುಣಿಯುತ್ತಿದ್ದ ಎಂಟರ ಬಾಲಕಿ ಆಕೆ. ಸದಾ ತುಂಟಾಟವಾಡುತ್ತಿದ್ದ ಆಕೆ ಎಂದರೆ ಇಡೀ ಊರಿಗೂ ಅಚ್ಚುಮೆಚ್ಚು. ಪಾದರಸದಂಥ ಆ ಪುಟ್ಟ ಬಾಲಕಿಯನ್ನೂ ಕಾಮದ ಕಣ್ಣಿಂದ ನೋಡುವ ನೀಚರ ಕೃತ್ಯಕ್ಕೆ ಆಕೆ ಬದುಕು ಮುಗಿಸಿದ್ದಾಳೆ. ಜನವರಿ ತಿಂಗಳಿನಲ್ಲಿ ನಡೆದ ಈ ಘಟನೆ ಇದೀಗ ದೇಶದಾದ್ಯಂತ ಚರ್ಚೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ದೇಶದಾದ್ಯಂತ ಪ್ರತಿಭಟನೆಯೂ ನಡೆದಿದೆ. ಕಾಂಗ್ರೆಸ್ ಮಧ್ಯರಾತ್ರಿ ನಡೆಸಿದ ಪ್ರತಿಭಟನೆಯಲ್ಲಿ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಗಣ್ಯರೂ ಭಾಗವಹಿಸಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಮ್ಮು ಕಾಶ್ಮೀರದ ಕತುವಾ ಎಂಬಲ್ಲಿ ಜನವರಿ ತಿಂಗಳ ಆರಂಭದಲ್ಲಿ ಮನೆಯ ಪಕ್ಕದ ಕಾಡಿನಿಂದ ಕುದುರೆಗಳನ್ನು ಕರೆತರಲು ತೆರಳಿದ್ದ ಆ ಪುಟ್ಟ ಬಾಲಕಿ ನಾಪತ್ತೆಯಾಗಿದ್ದಳು. ಸ್ಥಳೀಯರೆಲ್ಲ ಸೇರಿ ಆಕೆಯನ್ನು ಹುಡುಕಲು ಪ್ರಯತ್ನಿಸಿದರೂ ಆಕೆ ಸಿಗದಿದ್ದಾಗ ಆತಂಕಗೊಂಡ ಆಕೆಯ ತಂದೆ-ತಾಯಿ ಪೊಲೀಸರಿಗೆ ದೂರು ನೀಡಿದ್ದರು. ದೂರನ್ನು ಸ್ವೀಕರಿಸಲು ನಿರಾಕರಿಸಿದ ಪೊಲೀಸರು ನಿಮ್ಮ ಮಗಳು ಯಾವುದಾದರೂ ಹುಡುಗನೊಂದಿಗೆ ಓಡಿಹೋಗಿರಬಹುದು ಎಂದು ಅಸಭ್ಯವಾಗಿ ಮಾತನಾಡಿದ್ದರು. ನಂತರ ಒತ್ತಡ ಹೆಚ್ಚಾದಾಗ ದೂರು ಸ್ವೀಕರಿಸಿದ್ದರು. ನಂತರ ಜನವರಿ 23 ರಂದು ಆಸಿಫಾ ಮೃತದೇಹ ಒಂದು ಪೊದೆಯಲ್ಲಿ ಪತ್ತೆಯಾಗಿತ್ತು. ಆಕೆಯ ವೈದ್ಯಕೀಯ ಪರೀಕ್ಷೆಯಿಂದಾಗಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂಬುದು ದೃಢವಾಗಿತ್ತು. ಪ್ರಕರಣ ಭೇದಿಸಲು ಹೊರಟ ಪೊಲೀಸರು ಈಗಾಗಲೇ ಎಂಟು ಜನರನ್ನು ಬಂಧಿಸಿದ್ದಾರೆ. ಈ ಘಟನೆಯಲ್ಲಿ 60 ರ್ಷದ ನಿವೃತ್ತ ಸರ್ಕಾರಿ ನೌಕರ ಸಾಂಜಿ ರಾಮ್ ಎಂಬುವವನೂ ಶಾಮೀಲಾಗಿದ್ದಾನೆ ಎಂಬುದು ನಂತರ ತಿಳಿದುಬಂದಿತ್ತು. ಅಲ್ಲದೆ ಪೊಲೀಸ್ ಅಧಿಕಾರಿಗಳಾದ ಸುರೇಂದರ್ ವರ್ಮಾ, ಆನಂದ ದತ್ತ, ತಿಲಕ್ ರಾಜ್ ಮತ್ತು ಖಾಜುರಿಯಾ, ಅಲ್ಲದೆ ಸಾಂಜಿ ರಾಮ್ ಪುತ್ರ ವಿಶಾಲ್, ಸಂಬಂಧಿ ಒಬ್ಬ ಅಪ್ರಾಪ್ತ ಹುಡುಗ, ಆತನ ಸ್ನೇಹಿತ ಪರ್ವೇಶ್ ಕುಮಾರ್ ಮುಂತಾದವರು ಈ ಘಟನೆಯಲ್ಲಿ ಆರೋಪಿಗಳೆಂದು ಬಂಧಿಸಲಾಗಿದೆ. ಎಂಟು ವರ್ಷದ ಆಕೆಯನ್ನು ಕಾಡಿನಿಂದ ಅಪಹರಿಸಿ, ಆಕೆಗೆ ಮತ್ತು ಬರುವ ಔಷಧ ನೀಡಿ, ಹಲವು ದಿನಗಳ ಕಾಲ ಹತ್ತಿರದ ಮಂದಿರವೊಂದರಲ್ಲಿ ಕೂಡಿ ಹಾಕಿ ನಿರಂತರವಾಗಿ ಸಾಮೂಹಿತ ಅತ್ಯಾಚಾರ ನಡೆಸಲಾಗಿತ್ತು. ಆಕೆಯ ಕಾಲುಗಳು ಮುರಿದಿದ್ದವು. ಮೈಮೇಲೆ ಲೆಕ್ಕವಿಲ್ಲದಷ್ಟು ಗಾಯಗಳಿದ್ದವು. ಉಗುರುಗಳೆಲ್ಲ ನೀಲಿ ಬಣ್ಣಕ್ಕೆ ತಿರುಗಿದ್ದವು. ಹಲವು ದಿನಗಳ ಕಾಲ ಅತ್ಯಾಚಾರ ನಡೆಸಿದ ನಂತರ ಆಕೆಯ ತಲೆಗೆ ಕಲ್ಲಿನಿಂದ ಜೋರಾಗಿ ಹೊಡೆದು ಕೊಲೆ ಮಾಡಲಾಗಿತ್ತು. ನಂತರ ಕಾಡಿನ ಪೊದೆಯೊಂದರಲ್ಲಿ ಆಕೆ ಶವವನ್ನು ಎಸೆಯಲಾಗಿತ್ತು. ಘಟನೆ ಕುರಿತು ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಾಲು ಸಾಲು ಟ್ವೀಟ್ ಮಾಡಿದ್ದಾರೆ. "ಇಂಥ ಹೀನ ಕೃತ್ಯ ಮಾಡಿದ ಅಪರಾಧಿಗಳನ್ನು ಸುಮ್ಮನೆ ಬಿಡುವುದು ಸರಿಯೇ? ಕತುವಾದಲ್ಲಿ ಅಪರಾಧ ನಡೆದಿದ್ದು ಆಸಿಫಾ ಮೇಳೆ ಮಾತ್ರವಲ್ಲ, ಮಾನವೀಯತೆಯ ಮೇಲೆ. ಅಪರಾಧಿಗಳನ್ನು ಸುಮ್ಮನೆ ಬಿಡಬಾರದು. ಒಬ್ಬ ಮುಗ್ಧ ಮಗುವಿನ ಮೇಲಾದ ಈ ಪರಿ ಅಮಾನವೀಯತೆಯನ್ನು ರಾಜಕೀಯಕ್ಕೆ ಎಳೆಯುವುದು ಬೇಡ" ಎಂದು ಗಾಂಧಿ ಟ್ವೀಟ್ ಮಾಡಿದ್ದಾರೆ. ಭಾರತ ಎಂದಿಗೂ ತನ್ನ ಮಹಿಳೆಯರನ್ನು ಈ ರೀತಿ ಹೀನಾಯವಾಗಿ ನೋಡಬಾರದು. ಅದಕ್ಕೆಂದೇ ಕಾಂಗ್ರೆಸ್ ಆಯೋಹಿಸಿದ್ದ ಮಧ್ಯರಾತ್ರಿಯ ಮೊಂಬತ್ತಿ ಪ್ರತಿಭಟನೆಗೆ ಅಪೂರ್ವ ಬೆಂಬಲ ಸಿಕ್ಕಿದೆ. ಅದಕ್ಕಾಗಿ ಧನ್ಯವಾದಗಳು ಎಂದು ಅವರು ಟ್ವೀಟ್ ಮಾಡಿದ್ದಾರೆ. ರಾಹುಲ್ ಗಾಂಧಿ ಮತ್ತು ಇತರ ಎಲ್ಲಾ ಮಾಧ್ಯಮಗಳೂ ಮೂರು ತಿಂಗಳ ನಂತರ ಈ ಹೀನ ಕೃತ್ಯದ ವಿರುದ್ಧ ಧ್ವನಿ ಎತ್ತಿದ್ದಾರೆ. ಪ್ರಜಾಪ್ರಭುತ್ವದ ಆಧಾರ ಸ್ತಂಬಗಳಿಗೆ ಆಸಿಫಾ ಮೇಲಾದ ಈ ಅತ್ಯಾಚಾರದ ಹಿಂಸೆಗೆ ಪತ್ರಿಕ್ರಿಯೆ ನೀಡಲು ನೆನಪಾಗಿದ್ದು ನಿಜಕ್ಕೂ ದುರಂತ. ಈ ಎಲ್ಲ ನಡೆಗಳು ನಮ್ಮ ಸಮಾಜದ ಕುರಿತು ಹಲವು ವಿಷಯಗಳನ್ನು ಬಚ್ಚಿಡುತ್ತವೆ ಎಂದು ವಿಷಾದವಾಗಿ ಹೇಳಿದ್ದಾರೆ ಆದಿತ್ಯ ರಾಜ್ ಕೌಲ್. ಅತ್ಯಾಚಾರಕ್ಕೊಳಗಾದ, ಹಿಂಸೆಗೊಳಗಾದ, ಅಪಹಾಸ್ಯಕ್ಕೆ ಗುರಿಯಾದ, ಅವರು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಬೇಕಾದ ಎಲ್ಲ ಮಹಿಳೆಯರೊಂದಿಗೆ ನಾನಿದ್ದೇನೆ. ನಾನೊಬ್ಬ ಹೆಣ್ಣು ಮಗಳ ತಂದೆಯಾಗಿರುವುದಕ್ಕೆ ನನಗೆ ಬಹಳ ಆತಂಕವಾಗುತ್ತಿದೆ. ಈ ಎಲ್ಲ ಘಟನೆಗಳಿಗೂ ನಾವೇ ಕಾರಣ. ನಾವೆಲ್ಲ ನಮ್ಮ ನಮ್ಮ ವೈಮನಸ್ಯ ಬಿಟ್ಟು ಇಂಥವರ ವಿರುದ್ಧ ಹೋರಾಡಲು ಒಂದಾಗಬೇಕಿದೆ ಎಂದಿದ್ದಾರೆ ಜಾವೇದ್ ಅಫ್ರೀದಿ. ನಾವು ಏನೇ ಆಗಿದ್ದಿರಬಹುದು.ಯಾವ ಧರ್ಮದವರೇ ಇರಬಹುದು. ನಮ್ಮ ಭಾಷೆ, ಸಂಸ್ಕೃತಿ, ಸಿದ್ಧಾಂತ ಎಲ್ಲವೂ ಬೇರೆ ಇದ್ದಿರಬಹುದು. ಆದರೆ ಕೊಟ್ಟ ಕೊನೆಯಲ್ಲಿ ನಾವೆಲ್ಲರೂ ಮನುಷ್ಯರೇ ಎಂಬುದು ಸತ್ಯ. ಆಸಿಫಾಗೆ ನ್ಯಾಯ ಸಿಗಬೇಕು ಎಂಬುದು ನಮ್ಮೆಲ್ಲರ ಆಶಯ. ಅವಳೂ ಭಾರತದ ಮಗಳೇ ಎಂದಿದ್ದಾರೆ ಅಂಶುಲ್ ಸಕ್ಸೇನಾ.
OSCAR-2019
ನವದೆಹಲಿ, ಜೂನ್ 22: ಸೇನಾ ಕಾರ್ಯಾಚರಣೆಯಿಂದ ಉಗ್ರರಿಗಿಂತ ನಾಗರಿಕರೇ ಹೆಚ್ಚಿನ ಸಂಖ್ಯೆಯಲ್ಲಿ ಸತ್ತಿದ್ದಾರೆ ಎನ್ನುವ ಮೂಲಕ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್ ವಿವಾದ ಸೃಷ್ಟಿಸಿದ್ದಾರೆ. ಕಾಂಗ್ರೆಸ್ ಮುಖಂಡರೊಬ್ಬರು ಭಾರತದ ಸೇನೆಯ ಮೇಲೆ ಆರೋಪ ಹೊರಿಸುವ ಮತ್ತು ಉಗ್ರರ ಬಗ್ಗೆ ಸಹಾನುಭೂತಿ ತೋರುವ ರೀತಿ ಮಾತನ್ನಾಡಿರುವುದಕ್ಕೆ ಹಾಗೂ ಅದು ಭಯೋತ್ಪಾದನಾ ಸಂಘಟನೆಯೊಂದಕ್ಕೆ ಸಂತಸ ನೀಡಿದ್ದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಸೇನಾ ಪಡೆಗಳು ನಾಲ್ವರು ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿ 20 ನಾಗರಿಕರನ್ನು ಕೊಂದು ಹಾಕುತ್ತವೆ. ಅವರ ಕ್ರಮಗಳು ಉಗ್ರರಿಗಿಂತ ನಾಗರಿಕರ ಮೇಲೆಯೇ ಹೆಚ್ಚಾಗಿರುತ್ತದೆ. ಉದಾಹರಣೆಗೆ ಅವರು ಪುಲ್ವಾಮಾದಲ್ಲಿ 13 ನಾಗರಿಕರನ್ನು ಮತ್ತು ಕೇವಲ 1 ಉಗ್ರರನ್ನು ಕೊಂದಿದ್ದರು ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು. ಅಲ್ಲದೆ, ಜಮ್ಮು ಮತ್ತು ಕಾಶ್ಮೀರದಲ್ಲಿ 'ಆಲ್ ಔಟ್ ಆಪರೇಷನ್' ನಡೆಸುವುದಾಗಿ ಬಿಜೆಪಿ ಹೇಳಿದೆ. ಇದರರ್ಥ ಅಲ್ಲಿ ಹತ್ಯಾಕಾಂಡವೊಂದಕ್ಕೆ ಯೋಜನೆ ರೂಪಿಸಲಾಗಿದೆ ಎಂದು ಆಜಾದ್ ಹೇಳಿದ್ದರು. ಇ-ಮೇಲ್ ಹೇಳಿಕೆ ನೀಡಿರುವ ಲಷ್ಕರ್ ಎ ತಯಬಾ ಮುಖ್ಯಸ್ಥ ಮಹಮೂದ್ ಶಾ, ಆಜಾದ್ ಮತ್ತು ಕಾಂಗ್ರೆಸ್‌ನ ಇತರೆ ನಾಯಕರ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿದ್ದಾನೆ. ಗುಲಾಂ ನಬಿ ಆಜಾದ್ ಮತ್ತು ಇತರರ ಅಭಿಪ್ರಾಯಗಳನ್ನು ನಾವು ಆರಂಭದಿಂದಲೂ ವ್ಯಕ್ತಪಡಿಸುತ್ತಿದ್ದೇವೆ. ಭಾರತವು ಅಮಾಯಕರ ಹತ್ಯಾಕಾಂಡ ನಡೆಸಲು ಮತ್ತು ಮೂಲಸೌಕರ್ಯಗಳನ್ನು ಧ್ವಂಸಗೊಳಿಸಲು ರಾಷ್ಟ್ರಪತಿ ಆಳ್ವಿಕೆಯನ್ನು ಹೇರುವ ಮೂಲಕ ಜಗಮೋಹನ್ ಯುಗವನ್ನು ಮರಳಿ ತರುತ್ತಿದೆ. ರಂಜಾನ್‌ನಲ್ಲಿನ ಕದನ ವಿರಾಮ ಒಂದು ನಾಟಕ ಎಂದು ಆತ ಹೇಳಿದ್ದಾನೆ. ಮೆಹಬೂಬ ಮುಫ್ತಿ ಅವರ ವಿರುದ್ಧವೂ ವಾಗ್ದಾಳಿ ನಡೆಸಿರುವ ಮಹಮೂದ್, ಕಣಿವೆ ಹಾಗೂ ಜಮ್ಮುವಿನಲ್ಲಿ ಆರ್‌ಎಸ್‌ಎಸ್‌ನ ಅಜೆಂಡಾವನ್ನು ಸ್ಥಾಪಿಸುವುದರಲ್ಲಿ ಮೆಹಬೂಬ ಮುಫ್ತಿ ಮಹತ್ವದ ಕಾರ್ಯ ಮಾಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದುದ್ದಕ್ಕೂ ಎಂಟು ಲಕ್ಷ ಭಾರತೀಯ ಪಡೆಗಳು ದೌರ್ಜನ್ಯಗಳನ್ನು ಎಸಗುತ್ತಿವೆ. ಹೆಚ್ಚುವರಿ ಪಡೆಗಳು ಶೋಷಣೆಯಿಂದ ಜನರು ಗುಲಾಮಗಿರಿಗೆ ಒಳಗಾಗುತ್ತಿದ್ದಾರೆ. ಕದನ ವಿರಾಮ ಎನ್ನುವುದು ಕೇವಲ ಒಂದು ನಾಟಕ. ಇದು ಶಾಂತಿ ಕಾಪಾಡುವ ಬೆಳವಣಿಗೆಯ ಉದ್ದೇಶಕ್ಕಲ್ಲ, ತಮ್ಮ ಗುರಿಗಳನ್ನು ಈಡೇರಿಸಿಕೊಳ್ಳಲು ಮಾಡಿದ ತಂತ್ರ ಎಂದು ಆತ ಹೇಳಿದ್ದಾನೆ. ಕಾಂಗ್ರೆಸ್‌ ಮತ್ತು ಗುಲಾಂ ನಬಿ ಆಜಾದ್ ವಿರುದ್ಧ ಹರಿಹಾಯ್ದಿರುವ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ, ಈ ಘಟನೆಯನ್ನು 2005ರಲ್ಲಿ ಸೋರಿಕೆಯಾದ ವಿಕಿಲೀಕ್ಸ್ ಕೇಬಲ್‌ಗೆ ಹೋಲಿಸಿದ್ದಾರೆ. ಲಷ್ಕರ್ ಎ ತಯಬಾಗಿಂತ ಹಿಂದೂ ಭಯೋತ್ಪಾದನೆ ಅಪಾಯಕಾರಿ ಎಂದು ರಾಹುಲ್ ಗಾಂಧಿ ಅವರು ಅಮೆರಿಕದ ರಾಯಭಾರ ಕಚೇರಿಗೆ ಹೇಳಿದ್ದು ವಿಕಿಲೀಕ್ಸ್‌ನಲ್ಲಿ ದಾಖಲಾಗಿತ್ತು. ಈ ಹಿಂದೆ ಮಣಿಶಂಕರ್ ಅಯ್ಯರ್ ಪಾಕಿಸ್ತಾನಕ್ಕೆ ಹೋಗಿ ಬಂದರು. ಆದರೆ, ಕಾಂಗ್ರೆಸ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಿಲ್ಲ ಎಂದು ಸ್ವಾಮಿ ಉಲ್ಲೇಖಿಸಿದ್ದಾರೆ.
OSCAR-2019
ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿರುವುದಕ್ಕೆ ಗುಲಾಂ ನಬಿ ಆಜಾದ್ ಮತ್ತು ಕಾಂಗ್ರೆಸ್‌ಗೆ ನಾಚಿಕೆಯಾಗಬೇಕು. ಇದಕ್ಕೆ ಗುಲಾಂ ನಬಿ ಅವರ ಅಭಿಪ್ರಾಯ ನಮ್ಮದೂ ಹೌದು, ನಾವು ಹಿಂದಿನಿಂದಲೂ ಇದನ್ನೇ ಪ್ರತಿಪಾದಿಸುತ್ತಿದ್ದೇವೆ ಎಂದು ಅದಕ್ಕೆ ಲಷ್ಕರ್ ಮುಖ್ಯಸ್ಥನೇ ಬೆಂಬಲ ನೀಡಿದ್ದಾನೆ ಎಂದು ಬಿಜೆಪಿ ಸಾಮಾಜಿಕ ಮಾಧ್ಯಮ ಉಸ್ತುವಾರಿ ಅಮಿತ್ ಮಾಳವೀಯ ಕೆಂಡಕಾರಿದ್ದಾರೆ.
OSCAR-2019
ಇದು ಉಗ್ರರ ಪರವಾದ ವ್ಯಕ್ತಿಗಳಿಂದ ಬಂದ ಹೇಳಿಕೆಯಾಗಿದ್ದರೆ ಅರ್ಥಮಾಡಿಕೊಳ್ಳುತ್ತಿದ್ದೆ. ಆದರೆ, ಈ ಹೇಳಿಕೆ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕನಿಂದ ಬಂದಿರುವುದು ವಿಷಾದನೀಯ. ಸರ್, ಕಾಶ್ಮೀರವನ್ನು ರಕ್ಷಿಸಲು ಪಟತೊಟ್ಟಿರುವ ನಾಗರಿಕರನ್ನು, ಸೇನೆ ಮತ್ತು ಪೊಲೀಸರನ್ನು ಕೊಲ್ಲುತ್ತಿರುವುದು ಈ ಭಯೋತ್ಪಾದಕರು. ನಿಮ್ಮ ಹೇಳಿಕೆಯನ್ನು ವಾಪಸ್ ತೆಗೆದುಕೊಳ್ಳುತ್ತೀರಿ ಎಂದು ವಿಶ್ವಾಸ ಹೊಂದಿದ್ದೇನೆ ಎಂದು ಕೆಂದ್ರ ಸಚಿವ ರಾಜ್ಯವರ್ಧನ ಸಿಂಗ್ ರಾಥೋರ್ ಹೇಳಿದ್ದಾರೆ. ಸೇನೆಯ ವಿರುದ್ಧ ಯಾವುದೇ ವಾಸ್ತವ ಅಂಶಗಳಿಲ್ಲದೆ ಆಧಾರರಹಿತ ಆರೋಪ ಮಾಡುತ್ತಿರುವ ಆಜಾದ್ ಅವರಂತಹ ನಾಯಕರ ವಿರುದ್ಧ ರಾಹುಲ್ ಗಾಂಧಿ ಕ್ರಮಗಳನ್ನು ತೆಗೆದುಕೊಳ್ಳಲೇಬೇಕು. ಅವು ಬಿಜೆಪಿಯನ್ನು ಗುರಿ ಮಾಡಿಕೊಳ್ಳಲಿ ಆದರೆ, ಸಶಸ್ತ್ರಪಡೆಗಳ ವಿರುದ್ಧ ನಕಾರಾತ್ಮಕ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಲಿ ಎಂದು ರಾಜ್ಯಸಭೆ ಸದಸ್ಯ ಅನಿಲ್ ಬಲೂನಿ ಆಗ್ರಹಿಸಿದ್ದಾರೆ. ಕಾಂಗ್ರೆಸ್ ನಾಯಕರು ಸೇನಾ ಮುಖ್ಯಸ್ಥರ ಕುರಿತು ಲಘುವಾಗಿ ಮಾತನಾಡುತ್ತಾರೆ. ಮತ್ತು ಸಶಸ್ತ್ರ ಪಡೆಗಳ ಕುರಿತು ನಿರಂತರವಾಗಿ ಪ್ರಶ್ನಿಸುತ್ತಾರೆ. ಆಜಾದ್ ಅವರಂತಹ ಹಿರಿಯರು ಈ ರೀತಿ ಹೇಳಿಕೆ ನೀಡುತ್ತಿರುವುದು ನೋವಿನ ಸಂಗತಿ. ಕಾಂಗ್ರೆಸ್ ಪಕ್ಷ ಈ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
OSCAR-2019
ಜಮ್ಮ ಮತ್ತು ಕಾಶ್ಮೀರ ಸಮಸ್ಯೆಯಲ್ಲಿ ಭಾರತ ವಿರೋಧಿ ಧ್ವನಿಗಳನ್ನು ಬೆಂಬಲಿಸಿ ಭಾರತದ ಸಾರ್ವಭೌಮತೆಗೆ ಧಕ್ಕೆ ತರುತ್ತಿರುವ ಕಾಂಗ್ರೆಸ್ ಗಂಭೀರ ಬೆದರಿಕೆಯಾಗಿದೆ. ಬಿಜೆಪಿ ವಿರುದ್ಧದ ಅವರ ದ್ವೇಷವು ದೇಶವನ್ನು ಒಡೆಯಲು ನಿಂತಿರುವವರ ಪರವಾಗಿ ಇರುವಂತೆ ಮಾಡಿದೆ ಎಂದು ಪಿಯೂಷ್ ಗೋಯಲ್ ಹೇಳಿದ್ದಾರೆ. jammu and kashmir ghulam nabi azad congress bjp terrorists ಜಮ್ಮು ಮತ್ತು ಕಾಶ್ಮೀರ ಕಾಂಗ್ರೆಸ್ ಬಿಜೆಪಿ ಭಯೋತ್ಪಾದನೆ ಭಯೋತ್ಪಾದಕರು
OSCAR-2019
ಕೊಡಗು, ಆಗಸ್ಟ್ 27: ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಜನರ ಸಂಕಷ್ಟಕ್ಕೆ ಸಹಾಯ ಹಸ್ತ ಚಾಚುವ ನಿಟ್ಟಿನಲ್ಲಿ ಸರ್ಕಾರಿ ನೌಕರರು ತಮ್ಮ ಸಂಘದಿಂದ ಒಂದು ದಿನದ ವೇತನ 102ಕೋಟಿ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲು ಮುಂದಾಗಿದ್ದಾರೆ. ಈ ಕುರಿತು ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕ ಅಧ್ಯಕ್ಷ ಎಚ್‌ಕೆ ರಾಮು ಅವರು ಮಾತನಾಡಿ, ರಾಜ್ಯದಲ್ಲಿ 5.25 ಲಕ್ಷ ಸರ್ಕಾರಿ ನೌಕರರಿದ್ದು, ಖಜಾನೆ ಮೂಲಕ ಒಂದು ದಿನದ ವೇತನ ಒಟ್ಟು 102 ಕೋಟಿ ರೂ ಕಡಿತವಾಗಲಿದ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ರಾಷ್ಟ್ರ ಹಾಗೂ ರಾಜ್ಯಗಳಲ್ಲಿ ಸಂಭವಿಸುವ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸಂತ್ರಸ್ತರಿಗೆ ನೆರವಿನ ಹಸ್ತ ನೀಡುತ್ತಾ ಬಂದಿದೆ. ಈ ಹಿಂದೆ ಕಾರ್ಗಿಲ್ ಯುದ್ಧ ಪರಿಹಾರ ನಿಧಿ, ಗುಜರಾತ್ ಭೂಕಂಪ ಸೇರಿದಂತೆ ಹಲವು ಸಂದರ್ಭಗಳಲ್ಲಿ ರಾಜ್ಯ ಸರ್ಕಾರಿ ನೌಕರರ ಒಂದು ದಿನದ ವೇತನವನ್ನು ದೇಣಿಗೆಯಾಗಿ ನೀಡಿದೆ ಎಂದು ಅವರು ಸ್ಮರಿಸಿದರು. ಪ್ರಸ್ತುತ ರಾಜ್ಯದ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದಾಗಿ ಲಕ್ಷಾಂತರ ಜನರು ನಿರಾಶ್ರೀತರಾಗಿದ್ದು, ಸಂಕಷ್ಟಕ್ಕೆ ಸಿಲುಕಿ ಅಪಾರ ಪ್ರಮಾಣದ ಸಾವುನೋವು, ಆಸ್ತಿ ಪಾಸ್ತಿಗಳಿಗೆ ನಷ್ಟ ಸಂಭವಿಸಿರುವುದು ಅತ್ಯಂತ ನೋವಿನ ಸಂಗತಿ. ಈ ಸನ್ನಿವೇಶದಲ್ಲಿ ಸಂತ್ರಸ್ತರಿಗೆ ಸಹಾಯ ಹಸ್ತ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿರುತ್ತದೆ. ಈ ಹಿನ್ನಲೆಯಲ್ಲಿ ಆಗಸ್ಟ್ 20 ರಂದು ನಡೆದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರು ಹಾಗೂ ಕೇಂದ್ರ ಸಂಘದ ಪದಾಧಿಕಾರಿಗಳ ತುರ್ತು ಕಾರ್ಯಕಾರಿ ಸಮಿತಿ ಸಭೆಯ ತೀರ್ಮಾನದಂತೆ ರಾಜ್ಯಾದ್ಯಂತ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಸರ್ಕಾರಿ ನೌಕರರ ಒಂದು ದಿನದ ವೇತನ ಸಮಾರು 102 ಕೋಟಿ ರೂಗಳನ್ನು ಜಿಲ್ಲೆಯ ನೆರೆ ಸಂತ್ರಸ್ತರ ಪುನರ್ವಸತಿಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಾಗುವುದು ಎಂದು ಅವರು ಹೇಳಿದರು. ಈ ಪರಿಹಾರ ನಿಧಿಯಿಂದ ಸಂತ್ರಸ್ತರಿಗೆ ಮನೆ ನಿರ್ಮಿಸಿಕೊಡಲು ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಲಾಗಿದೆ ಎಂದು ರಾಜ್ಯ ಅಧ್ಯಕ್ಷರು ಮಾಹಿತಿ ನೀಡಿದರು. ಜೋಡುಪಾಲ ಗ್ರಾಮದ ನಿವಾಸಿ ಹಾಗೂ ಸುಳ್ಯದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದ ಬಸಪ್ಪ ಅವರು ಅತಿವೃಷ್ಟಿಗೆ ಸಿಲುಕಿ ಮೃತರಾಗಿದ್ದು, ಅವರಿಗೆ ಇದೇ ಸಂದರ್ಭದಲ್ಲಿ ಶ್ರದ್ದಾಂಜಲಿ ಸಲ್ಲಿಸಲಾಯಿತು. 2006 ರಿಂದ ಜಾರಿಗೆ ಬಂದಿರವ ಎನ್‍ಪಿಎಸ್ ರದ್ದುಪಡಿಸಿ ಹಳೇ ಪದ್ಧತಿಯವನ್ನೇ ಮುಂದುವರೆಸಬೇಕು. ಆ ನಿಟ್ಟಿನಲ್ಲಿ ಮುಖ್ಯಮಂತ್ರಿಯವರಲ್ಲಿ ಕೋರಲಾಗಿದೆ. ಈ ಮನವಿಗೆ ಮಮುಖ್ಯಮಂತ್ರಿಯವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ರಾಮು ಅವರು ತಿಳಿಸಿದರು. ರಾಜ್ಯ ಸರ್ಕಾರಿ ನೌಕಕರ ಸಂಘದ ಕಾರ್ಯದರ್ಶಿ ಪುಟ್ಟಸ್ವಾಮಿ, ನಿರ್ದೇಶಕರಾದ ರಾಜಕುಮಾರ್, ಜಗದೀಶ, ಉಮೇಶ, ಗೋವಿಂದರಾಜು, ಶಿವರಾಮು, ಲಕ್ಷ್ಮಿಕಾಂತ್, ಸರ್ಕಾರಿ ನೌಕರರ ಜಿಲ್ಲಾ ಘಟಕದ ಅಧ್ಯಕ್ಷರಾದ ರವಿ ಇದ್ದರು.
OSCAR-2019
ನಿನ್ನೆಯಿಂದ ನಾಪತ್ತೆಯಾಗಿದ್ದ ಬಿಗ್​​ಬಾಸ್​ ಪ್ರಥಮ್ ನ್ಯಾಯಾಲಯಕ್ಕೆ ಶರಣಾಗಿದ್ದಾರೆ. ಬೆಂಗಳೂರಿನ 2ನೇ ಎಸಿಜೆಎಂ ಕೋರ್ಟ್​ಗೆ ತೆರಳಿ ಶರಣಾಗಿದ್ದಾರೆ. ಸಹನಟ ಭುವನ್ ತೊಡೆ ಕಚ್ಚಿದ್ದಕ್ಕೆ ಪ್ರಥಮ್ ಮೇಲೆ ದೂರು ನೀಡಲಾಗಿತ್ತಷ್ಟೇ ಅಲ್ಲ, ಎಫ್​ಐಆರ್ ಕೂಡಾ ದಾಖಲಾಗಿತ್ತು. ರಾತ್ರಿಯಿಂದಲೂ ಪೊಲೀಸರಿಗೆ ಸಿಗದೆ ಓಡಾಡಿಕೊಂಡಿದ್ದ ಪ್ರಥಮ್, ಕುಕ್ಕೆ ಸುಬ್ರಹ್ಮಣ್ಯದಲ್ಲಿರೋದಾಗಿ ಪೊಲೀಸರಿಗೆ ತಿಳಿಸಿದ್ದ. ಬಿಗ್‍ಬಾಸ್ ಖ್ಯಾತಿಯ ಪ್ರಥಮ್, ಸದಾ ಸುದ್ದಿಯಲ್ಲಿರುವ ವ್ಯಕ್ತಿ. ಇತ್ತೀಚೆಗೆ ಒಳ್ಳೆಯ ಕಾರಣಗಳಿಂದಲೇ ಹೆಚ್ಚು ಹೆಚ್ಚು ಸುದ್ದಿಯಾಗುತ್ತಿರುವುದು ವಿಶೇಷ. ವಿಜಯಪುರದಲ್ಲಿ ಸಾಮೂಹಿಕ ಅತ್ಯಾಚಾರಿಗಳ ಅಟ್ಟಹಾಸಕ್ಕೆ ಬಲಿಯಾದ ಪುಟ್ಟ ಬಾಲಕಿ ದಾನಮ್ಮನಿಗಾಗಿ. ಆಕೆಯ ಸಾವಿಗೆ ನ್ಯಾಯ ಕೊಡಿಸುವ ಸಲುವಾಗಿ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ್ದಾರೆ. ದಾನಮ್ಮ ಕುಟುಂಬಕ್ಕೆ ನ್ಯಾಯ ಸಲ್ಲಿಸುವಂತೆ ಸಿದ್ದರಾಮಯ್ಯನವರಿಗೆ ಮನವಿ ಪತ್ರ ಕೊಟ್ಟಿದ್ದಾರೆ. ದಾನಮ್ಮ ಕುಟುಂಬಕ್ಕೆ ಇನ್ನಷ್ಟು ಆರ್ಥಿಕ ನೆರವು ಒದಗಿಸಬೇಕು. ಅವರ ಕುಟುಂಬದ ಯಾರಾದರೊಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕು. ಪ್ರಕರಣದ ವಿಚಾರಣೆಯನ್ನು ತ್ವರಿತ ನ್ಯಾಯಾಲಯದಲ್ಲಿ ನಡೆಸಬೇಕು. ಪ್ರಥಮ್ ಅವರಿಗೆ ಒಂದು ಹವ್ಯಾಸವಿದೆ. ಅವರು ಸಾಮಾನ್ಯವಾಗಿ ಯಾರೇ ಗಣ್ಯರನ್ನು ಭೇಟಿ ಮಾಡಿದರೂ, ಸೆಲ್ಫಿ ತೆಗೆದುಕೊಳ್ತಾರೆ. ಆದರೆ, ದಾನಮ್ಮ ವಿಚಾರಕ್ಕೆ ಸಿದ್ದರಾಮಯ್ಯರನ್ನು ಭೇಟಿ ಮಾಡಿದಾಗ ಸೆಲ್ಫಿ ತೆಗೆದುಕೊಳ್ಳಬೇಕು ಎಂದು ಅನ್ನಿಸಲಿಲ್ಲ ಎಂದಿದ್ದಾರೆ ಪ್ರಥಮ್. ಇನ್ನು ಪ್ರಥಮ್‍ಗೆ ಸಿದ್ದರಾಮಯ್ಯನವರ ಸರಳತೆ ಮತ್ತು ಕಳಕಳಿಯೂ ಇಷ್ಟವಾಗಿದೆಯಂತೆ. ಅವರ ಸಜ್ಜನಿಕೆಗೊಂದು ಸೆಲ್ಯೂಟ್ ಎಂದಿದ್ದಾರೆ ಪ್ರಥಮ್. ರಾಜ್ಯಾದ್ಯಂತ ಹೊತ್ತಿ ಉರಿಯುತ್ತಿರುವುದು ಕೋಮು ಸಂಘರ್ಷ. ಕರಾವಳಿಯಂತೂ ಕೊತಕೊತನೆ ಕುದಿಯುತ್ತಿದೆ. ದೀಪಕ್ ರಾವ್ ಕೋಮುವಾದಿ ಮುಸಲ್ಮಾನರ ದಾಳಿಗೆ ಬಲಿಯಾಗಿದ್ದರೆ, ಬಶೀರ್ ಎಂಬುವವರು ಹಿಂದೂ ಕೋಮುವಾದಿಗಳ ಅಟ್ಟಹಾಸಕ್ಕೆ ಜೀವಬಿಟ್ಟಿದ್ದಾರೆ. ಮೃತರ ನೆರವಿಗೆ ಧಾವಿಸಿರುವವರು ಸೌಹಾರ್ದದ ಮಾತನಾಡುತ್ತಿದ್ದಾರೆ. ಅದರಲ್ಲೂ ಪ್ರಥಮ್‍ಗೆ ಆನ್‍ಲೈನ್ ಅಭಿಯಾನದಲ್ಲಿ ನೆರವಿನ ಮಹಾಪೂರವೇ ಹರಿದುಬಂದಿದೆ. ಸರಿಸುಮಾರು 40 ಲಕ್ಷ ರೂ. ಹಣ ದಾನಿಗಳಿಂದಲೇ ಸಂಗ್ರಹವಾಗಿದೆ. ಸರ್ಕಾರದ ನೆರವನ್ನು ಹೊರತುಪಡಿಸಿ ಎನ್ನುವುದು ವಿಶೇಷ. ಈ ನಡುವೆಯೇ ಬಿಗ್‍ಬಾಸ್ ಪ್ರಥಮ್ ಸದ್ದಿಲ್ಲದೆ ಮಂಗಳೂರಿಗೆ ಹೋಗಿ ಬಂದಿದ್ದಾರೆ. ಯಾವುದೇ ಪ್ರಚಾರವಿಲ್ಲದೆ ದೀಪಕ್ ರಾವ್ ಅವರ ಮನೆಗೆ ಹೋಗಿ ಸಾಂತ್ವನ ಹೇಳಿದ್ದಾರೆ. ನಿಮ್ಮ ನೆರವಿಗೆ, ಕುಟುಂಬಕ್ಕೆ ಆಸರೆಯಾಗಿ ನಾವಿದ್ದೇವೆ ಎಂದು ಭರವಸೆ ತುಂಬಿದ್ದಾರೆ. 25 ಸಾವಿರ ರೂ. ನಗದು ಹಾಗೂ 25 ಸಾವಿರ ರೂ. ಚೆಕ್‍ನ್ನು ನೀಡಿ ಬಂದಿದ್ದಾರೆ. ಪ್ರಥಮ್ ಈ ರೀತಿಯ ನೆರವು ನೀಡುತ್ತಿರುವುದು ಇದೇ ಮೊದಲೇನೂ ಅಲ್ಲ. ಹಾಗೆಂದು ಪ್ರಥಮ್ ಕೋಟ್ಯಧಿಪತಿಯಲ್ಲ. ತನ್ನ ಬಳಿ ಇರುವ ಅಲ್ಪಸ್ವಲ್ಪ ಹಣವನ್ನೇ ನೊಂದವರಿಗೆ ನೀಡುವ ಕೆಲಸವನ್ನು ಮಾಡಿಕೊಂಡೇ ಬರುತ್ತಿದ್ದಾರೆ. ಒಳ್ಳೆ ಹುಡುಗ ಪ್ರಥಮ್, ಬಿಗ್‍ಬಾಸ್‍ನಲ್ಲಿ ಗೆದ್ದ ಹಣದ ಬಹುಭಾಗವನ್ನು ಸಮಾಜಸೇವೆಗೆ ಮೀಸಲಿಟ್ಟು ಸುದ್ದಿಯಾದವರು. ರೈತರು, ಸೈನಿಕರು, ಊರಿನ ದೇವಸ್ಥಾನ.. ಹೀಗೆ ತಮಗೆ ಕೊಡಬೇಕು ಎನಿಸಿದ ತಕ್ಷಣ, ತಮ್ಮ ಕೈಲಾದಷ್ಟು ನೆರವು ನೀಡುತ್ತಾ ಬಂದಿದ್ದಾರೆ ಪ್ರಥಮ್. ಇದೀಗ ಮತ್ತೊಮ್ಮೆ ಅಂಥದ್ದೇ ಗುಣ ಮೆರೆದಿದ್ದಾರೆ. ಇತ್ತೀಚೆಗೆ ಸ್ಟಾರ್ ಸುವರ್ಣ ವಾಹಿನಿಯ ಸಿಕ್ಸ್ತ್ ಸೆನ್ಸ್ ಗೇಮ್‍ಶೋಗೆ ಹೋಗಿದ್ದ ಪ್ರಥಮ್, ಸ್ಪರ್ಧೆಯಲ್ಲಿ 10 ಸಾವಿರ ರೂ. ಬಹುಮಾನ ಗೆದ್ದರು. 10 ಲಕ್ಷ ಗೆಲ್ಲುವ ಅವಕಾಶ ಮಿಸ್ ಮಾಡಿಕೊಂಡ ಪ್ರಥಮ್, ತಾವು ಗೆದ್ದ ಅಷ್ಟೂ ಹಣವನ್ನು ಅಲ್ಲಿಯೇ ಶಕ್ತಿಧಾಮ ಸಂಸ್ಥೆಗೆ ದೇಣಿಗೆಯಾಗಿ ನೀಡಿದರು. ಸಂಸ್ಥೆಯಲ್ಲಿ ವೃದ್ಧರು, ಅಶಕ್ತ ಮಹಿಳೆಯರಿಗೆ ಬದುಕು ಕಲ್ಪಿಸಲಾಗುತ್ತಿದೆ. ಅಶಕ್ತ ಮಹಿಳೆಯರಿಗೆ ಸೂಕ್ತ ತರಬೇತಿ ನೀಡಿ, ಸ್ವಯಂ ಉದ್ಯೋಗ ಹಾಗೂ ನೆಲೆ ಕಲ್ಪಿಸುತ್ತಿರುವ ಸಂಸ್ಥೆ, ಪ್ರತಿವರ್ಷ ನೂರಾರು ಮಹಿಳೆಯರ ಬಾಳಿಗೆ ಬೆಳಕಾಗುತ್ತಿದೆ. ಆ ಸಂಸ್ಥೆಗೆ ತಾವು ಗೆದ್ದ ಹಣವನ್ನು ದೇಣಿಗೆಯಾಗಿ ಕೊಟ್ಟಿದ್ದಾರೆ. ಹಾಗಂತ ಪ್ರಥಮ್ ಕೋಟ್ಯಧಿಪತಿಯೇನೂ ಅಲ್ಲ. ಕೊಡುವ ಮನಸ್ಸಿರುವವರು ಅಷ್ಟೆ. ಬಿಗ್​ಬಾಸ್ ಪ್ರಥಮ್ ಸಹನಟ ಭುವನ್​ ತೊಡೆಗೇ ಕಚ್ಚಿ, ಟಿವಿ ನ್ಯೂಸ್​ನಲ್ಲಿ ಮಾತನಾಡಿ, ನಂತರ ನಾಪತ್ತೆಯಾಗಿ ಹೋಗಿದ್ದಾರೆ. ಆದರೆ, ಪ್ರಥಮ್ ಮೇಲೆ ಕಂಪ್ಲೇಂಟುಗಳ ಸರಮಾಲೆಯೇ ಬರತೊಡಗಿದೆ. ಸಂಜು ಮತ್ತು ನಾನು ಸೀರಿಯಲ್​ನಲ್ಲಿ ನಟಿಸುತ್ತಿದ್ದ ಪ್ರಥಮ್, ಸೀರಿಯಲ್​ನ ದೃಶ್ಯವೊಂದರಲ್ಲಿ ಸಂಜನಾ ಜೊತೆ ನಟಿಸಬೇಕಿತ್ತು. ಪ್ರಥಮ್ ಎಂದರೇನೇ ಉರಿದು ಬೀಳುತ್ತಿದ್ದ ನಟಿ ಸಂಜನಾ, ಆತನ ಕೈ ಮೇಲೆ ಕೈ ಇಟ್ಟು ಪ್ರಾಮಿಸ್ ಮಾಡುವ ದೃಶ್ಯಕ್ಕೂ ಒಲ್ಲೆ ಎಂದು ಕೂತುಬಿಟ್ಟಿದ್ದರು. ನಂತರ ಭುವನ್ ಹೇಳಿದ ಮೇಲೆ ಒಪ್ಪಿ ನಟಿಸಿದರಂತೆ. ಆದರೆ, ಅದಾದ ಮೇಲೆ ಇನ್ನಷ್ಟು ಕೆರಳಿದ ಪ್ರಥಮ್, ಈ ರೀತಿ ಹಲ್ಲೆ ನಡೆಸಿದ್ದಾರೆ ಎನ್ನುವುದು ಭುವನ್ ಪೊನ್ನಣ್ಣ ದೂರು. ಸಂಜನಾಗೆ ಕೂಡಾ ಪ್ರಥಮ್ ವರ್ತನೆ ಇಷ್ಟವಾಗುತ್ತಿರಲಿಲ್ಲ. ಅವರಷ್ಟೇ ಅಲ್ಲ, ಸೀರಿಯಲ್ ತಂಡದ ಹಲವು ತಂತ್ರಜ್ಞರು, ಸಹ ಕಲಾವಿದರು ಪ್ರಥಮ್ ವರ್ತನೆಯ ಬಗ್ಗೆ ದೂರುಗಳ ಸರಮಾಲೆಯನ್ನೇ ಹೇಳುತ್ತಿದ್ದಾರೆ. ಇದೆಲ್ಲದರ ಮಧ್ಯೆ ಭುವನ್, ಪ್ರಥಮ್ ವಿರುದ್ಧ ದೂರು ಕೊಟ್ಟಾಗಿದೆ. ಆದರೆ, ಪ್ರಥಮ್ ಇದುವರೆಗೆ ಪೊಲೀಸರಿಗೆ ಸಿಕ್ಕಿಲ್ಲ. ಎಲ್ಲಿದ್ದಾರೋ ಗೊತ್ತಿಲ್ಲ. ಇದೆಲ್ಲದರ ಮಧ್ಯೆ ಬಚ್ಚನ್ ಖ್ಯಾತಿಯ ಉದಯ್ ಮೆಹ್ತಾ ಅವರು ನನ್ನನ್ನು ಹೀರೋ ಹಾಕಿಕೊಂಡು ಸಿನಿಮಾ ಮಾಡುತ್ತಿದ್ದಾರೆ ಎಂದಿದ್ದು, ನಂತರ ಅದನ್ನು ಉದಯ್ ಮೆಹ್ತಾ ನಿರಾಕರಿಸಿದ್ದು ಪ್ರಥಮ್ ಹುಚ್ಚಾಟಕ್ಕೆ ಇನ್ನೊಂದು ಉದಾಹರಣೆಯಷ್ಟೆ. ಪ್ರಥಮ್ ವಿರುದ್ಧದ ದೂರುಗಳ ಲಿಸ್ಟು ಹನುಮಂತನ ಬಾಲದಂತೆ ಬೆಳೆಯುತ್ತಿದೆ. ಆತನ ಜೊತೆ ಕೆಲಸ ಮಾಡಿರುವವರು ನೀಡುತ್ತಿರುವ ಸಲಹೆಯೇನು ಗೊತ್ತೇ, ಪ್ರಥಮ್​ಗೆ ಒಬ್ಬ ಒಳ್ಳೆಯ ಮಾನಸಿಕ ತಜ್ಞರಿಂದ ಕೌನ್ಸೆಲಿಂಗ್ ಮಾಡಿಸಬೇಕು ಎನ್ನುವುದು. ಒಳ್ಳೆ ಹುಡುಗ ಪ್ರಥಮ್ ಅವರ ನಿಜವಾದ ಹೆಸರೇನು..? ನಿಮಗೆ ಅಚ್ಚರಿಯಾಗಬಹುದೇನೋ. ಅವರ ನಿಜವಾದ ಹೆಸರು ಪುನೀತ್. ಅವರ ಆಧಾರ್ ಕಾರ್ಡ್‍ನಲ್ಲಿರೋ ಹೆಸರು ಕೂಡಾ ಪುನೀತ್. ಅವರು ಬಣ್ಣದ ಲೋಕದಲ್ಲಷ್ಟೇ ಪ್ರಥಮ್. ರಿಯಲ್ ಲೈಫ್‍ನಲ್ಲಿ ಪುನೀತ್. ಇದನ್ನು ಬಹಿರಂಗಪಡಿಸಿರುವುದು ಸ್ವತಃ ಪ್ರಥಮ್. ಪುನೀತ್ ರಾಜ್‍ಕುಮಾರ್ ಅವರ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಪ್ರಥಮ್, ಅಪ್ಪು ಎದುರೇ ಈ ಸತ್ಯ ಬಿಚ್ಚಿಟ್ಟಿದ್ದಾರೆ. ಪುನೀತ್ ಅವರಿಗೆ ತಮ್ಮ ಆಧಾರ್ ಕಾರ್ಡ್‍ನ್ನೂ ತೋರಿಸಿದ್ದಾರೆ. ಆಗ ಶಾಕ್ ಆಗುವ ಸರದಿ ಪುನೀತ್ ರಾಜ್‍ಕುಮಾರ್ ಅವರದ್ದಾಗಿತ್ತು. ಅದಕ್ಕೆ ಕಾರಣ ಇಷ್ಟೆ, ಪ್ರಥಮ್ ಅವರ ತಂದೆ, ತಾಯಿ ಇಬ್ಬರೂ ಡಾ.ರಾಜ್ ಅಭಿಮಾನಿಗಳು. ಪುನೀತ್ ಅವರ ಸಿನಿಮಾಗಳನ್ನು ಬಹಳ ಇಷ್ಟಪಡುತ್ತಿದ್ದರು. ಇನ್ನು ಪ್ರಥಮ್, ಸಿನಿಮಾ ಲೋಕಕ್ಕೆ ಬಂದಾಗ, ಸಿನಿಮಾಗೆ ಒಬ್ಬರೇ ಪುನೀತ್ ಇರಬೇಕು. ಅದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರೇ ಆಗಿರಬೇಕು. ಅವರ ಕಾಪಿ, ರಿಪ್ಲೇಸ್‍ಮೆಂಟ್ ಯಾವುದೂ ಇರಬಾರದು ಎಂಬ ಕಾರಣಕ್ಕೆ ಪ್ರಥಮ್ ಎಂದು ಹೆಸರು ಬದಲಾಯಿಸಿಕೊಂಡೆ ಎಂದು ಹೇಳಿಕೊಂಡಿದ್ದಾರೆ ಪ್ರಥಮ್. ಬಿಗ್‍ಬಾಸ್ ಪ್ರಥಮ್, ಬಿಲ್ಡಪ್ ಸೃಷ್ಟಿಸೋದ್ರಲ್ಲಿ ಎತ್ತಿದ ಕೈ. ಅದೂ ಸುಮ್ಮನೆ ಬಿಲ್ಡಪ್ ಹುಟ್ಟೋದಿಲ್ಲ. ಹೇಳಿದ್ದನ್ನು ಮಾಡಿ ತೋರಿಸಿರುವ ಹುಡುಗ ಪ್ರಥಮ್. ನಿಮಗೆಲ್ಲ ಗೊತ್ತಿರೋ ಹಾಗೆ, ಪ್ರಥಮ್ ಅವರ ಮೊದಲ ಚಿತ್ರ `ದೇವ್ರಂತಾ ಮನುಷ್ಯ' ಚಿತ್ರಕ್ಕೆ ಕ್ಲಾಪ್ ಮಾಡಿದ್ದು ಹೆಚ್.ಡಿ. ದೇವೇಗೌಡ. ಎರಡನೇ ಸಿನಿಮಾ `ಎಂಎಲ್‍ಎ' ಚಿತ್ರಕ್ಕೆ ಕ್ಲಾಪ್ ಮಾಡಿದ್ದವರು ಸಿದ್ದರಾಮಯ್ಯ. ಈಗ ಅವರ 3ನೇ ಸಿನಿಮಾ `ಬಿಲ್ಡಪ್' ರೆಡಿಯಾಗುತ್ತಿದೆ. ಹೇಳಿದಂತೆ ಶಿವರಾಜ್ ಕುಮಾರ್ ಅವರಿಂದಲೇ ಟೈಟಲ್ ಲಾಂಚ್ ಮಾಡಿಸಿರುವ ಪ್ರಥಮ್, ಈಗ ಚಿತ್ರಕ್ಕೆ ಕ್ಲಾಪ್ ಮಾಡೋಕೆ ದೇಶದ ಅತಿಗಣ್ಯ ವ್ಯಕ್ತಿಯೊಬ್ಬರನ್ನು ಕರೆಸುತ್ತಿದ್ದಾರಂತೆ. ಅವರ ಹೆಸರು ಕೇಳಿದರೆ ಸಾಕು, ಇಡೀ ದೇಶ ಎದ್ದು ನಿಂತು ಗೌರವಿಸುತ್ತೆ ಅಂತಾರೆ ಪ್ರಥಮ್. ಆದರೆ ಅವರ್ಯಾರು ಅನ್ನೋದನ್ನು ಮಾತ್ರ ಪ್ರಥಮ್ ಹೇಳೋದಿಲ್ಲ. ಇನ್ನು ಚಿತ್ರದಲ್ಲಿ ಭಾರತ ಚಿತ್ರರಂಗದಲ್ಲೇ ಖ್ಯಾತರಾಗಿರುವ ನಟಿಯೊಬ್ಬರು ನಟಿಸಲಿದ್ದಾರಂತೆ. ಇನ್ನು ಹಲವು ವರ್ಷಗಳಿಂದ ಚಿತ್ರರಂಗದಿಂದ ದೂರವಿದ್ದ ಹಿರಿಯ ಕಲಾವಿದರೊಬ್ಬರು ಈ ಚಿತ್ರದಲ್ಲಿ ನಟಿಸಲಿದ್ದಾರಂತೆ. ಇವೆಲ್ಲವನ್ನೂ ಹೇಳಿಕೊಳ್ಳುವ ಪ್ರಥಮ್, ಅವರ್ಯಾರು ಅನ್ನೋ ವಿಷಯವನ್ನು ಮಾತ್ರ ಗುಟ್ಟಾಗಿಡ್ತಾರೆ. ಒಟ್ಟಿನಲ್ಲಿ ಸೀಕ್ರೆಟ್ ಮೈಂಟೇನ್ ಮಾಡಿಕೊಂಡೇ `ಬಿಲ್ಡಪ್' ತೆಗೆದುಕೊಳ್ಳೊದ್ರಲ್ಲಿ, ಪ್ರಥಮ್‍ಗೆ ಪ್ರಥಮ್ ಅವರೇ ಸಾಟಿ.
OSCAR-2019
ಮಂಗಳೂರು, ಜುಲೈ 1: ಶಿರಾಡಿ ಘಾಟ್ ಕಾಮಗಾರಿ ಇನ್ನೂ ಮುಗಿದಿಲ್ಲ. ಹಾಗಾಗಿ ಸಂಚಾರಕ್ಕೆ ಮುಕ್ತವಾಗುವ ದಿನ ಇನ್ನೂ ದೂರವಾಗಿದೆ. ಈ ಹಿಂದೆ ಜುಲೈ 5ರಂದು ಶಿರಾಡ್ ಘಾಟ್ ನಲ್ಲಿ ವಾಹನ ಸಂಚಾರ ಆರಂಭವಾಗಲಿದೆ ಎನ್ನಲಾಗಿತ್ತು. ಆದರೆ, ಕಾಮಗಾರಿ ಪೂರ್ಣಗೊಂಡಿದ್ದರೂ, ತಡೆಗೋಡೆ ಕಾಮಗಾರಿ ಬಾಕಿ ಇರುವುದರಿಂದ ಜುಲೈ 15ರಿಂದ ಸಂಚಾರ ಆರಂಭವಾಗುವ ಸಾಧ್ಯತೆ ಇದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಹೇಳಿದರು. ಶನಿವಾರ ಮಂಗಳೂರಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಭೆಯಲ್ಲಿ ಅವರು ಈ ವಿವರ ನೀಡಿದರು. ಸದ್ಯಕ್ಕೆ 12.30 ಕಿಲೋಮೀಟರ್ ನ ಕಾಮಗಾರಿ ಪೂರ್ಣಗೊಂಡಿದೆ. ಬಾಕಿ ಉಳಿದಿರುವ 380 ಮೀಟರ್ ನ ಕಾಮಗಾರಿ ನಡೆಯುತ್ತಿದೆ . ವಾಹನ ಸಂಚಾರ ಸುರಕ್ಷತಾ ಕ್ರಮಗಳಾದ ರಸ್ತೆಯ ಎರಡೂ ಬದಿಯಲ್ಲಿ ಶೋಲ್ಡರ್ ನಿರ್ಮಾಣ, ತಡೆಗೋಡೆ ನೀರ್ಮಾಣ ಕಾಮಗಾರಿ ನಡೆಯುತ್ತಿದೆ ಎಂದು ಅವರು ವಿವರಿಸಿದರು. ಇದರಿಂದ ಮಂಗಳೂರು ಮತ್ತು ಬೆಂಗಳೂರನ್ನು ಸಂಪರ್ಕಿಸುವ ಶಿರಾಡಿ ಘಾಟಿ ರಸ್ತೆ ಜುಲೈ 15ರಿಂದ ವಾಹನ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆ ಇದೆ ಎಂದು ಸೆಂಥಿಲ್ ತಿಳಿಸಿದರು.
OSCAR-2019
ಗೋಮಾತೆಯ ಅನುಗ್ರಹ ಹಾಗೂ ತಮ್ಮೆಲ್ಲರ ಸಹಕಾರದಿಂದ ಗೋ ರಕ್ಷಣೆಯ ನಿಟ್ಟಿನಲ್ಲಿ ದೊಡ್ಡ ಮೈಲಿಗಲ್ಲಾಗಿರುವ ಗೋ ಸ್ವರ್ಗದ ಮೊದಲ ಹಂತದ ಉದ್ಘಾಟನೆ ಕಳೆದ ಮೇ ಇಪ್ಪತ್ತೇಳರ ಭಾನುವಾರ ನಡೆದಿದ್ದು , ನೂರಾರು ಗೋವುಗಳು ಹಂತ ಹಂತವಾಗಿ ಅಲ್ಲಿಗೆ ಆಗಮಿಸಲಾರಂಭಿಸಿವೆ ಪರಮ ಪೂಜ್ಯ ಶ್ರೀ ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಪರಿ ಕಲ್ಪನೆ ಹಾಗೂ ಮಾರ್ಗದರ್ಶನದ ವಿಶ್ವದಲ್ಲೇ ವಿಶಿಷ್ಟವಾದ 'ಗೋ ಸ್ವರ್ಗ' ಇವತ್ತಿನ ಹಂತಕ್ಕೆ ಬಂದು ನೂರಾರು ಗೋವಿಗೆ ಆಶ್ರಯ ಕೊಡುವಂತಾಗಲು ತಮ್ಮೆಲ್ಲರ ಸಹಕಾರ ಅತ್ಯಮೂಲ್ಯವಾದದ್ದು . ಮೊದಲಿಗೆ ಅದಕ್ಕೆ ಧನ್ಯವಾದ ಸಮರ್ಪಿಸುತ್ತೇವೆ ಹಾಗೂ ಗೋ ಮತ್ತು ಗುರುಗಳ ಆಶೀರ್ವಾದ ತಮ್ಮ ಮತ್ತು ತಮ್ಮ ಕುಟುಂಬಗಳ ಮೇಲಿರಲಿ ಮಾತ್ರವಲ್ಲದೆ ಉತ್ತಮ ಶ್ರೇಯಸ್ಸು ತಮಗೆ ಸಿಗಲಿ ಎಂದು ಗೋ ಗುರುಗಳಲ್ಲಿ ಪ್ರಾರ್ಥಿಸುತ್ತೇವೆ ಗೋ ಬಂಧುಗಳೇ , ಇದು ಆರಂಭ ಮಾತ್ರ - ಶ್ರೀಗಳ ವಿಶಿಷ್ಟ ಪರಿಕಲ್ಪನೆಯ ಗೋ ಸ್ವರ್ಗ ಸಹಸ್ರಾರು ಗೋವುಗಳಿಗೆ ಆಶ್ರಯಧಾಮ ಆಗಬೇಕಲ್ಲದೆ ಅದಕ್ಕೆ ಬೇಕಾದ ರೀತಿಯಲ್ಲಿ ಅದು 'ಸೆಲ್ಫ್ ಕಂಟೈನ್ಡ್ ಅಂಡ್ ಸೆಲ್ಫ್ sustaining ' ಮಾಡುವ ಪ್ರಯತ್ನ ಮಾಡುವುದು ಗೋ ಬಂಧುಗಳಾದ ನಮ್ಮೆಲ್ಲರ ಜವಾಬ್ದಾರಿ . ಸಾವಿರಾರು ಗೋವುಗಳಿಗೆ ಬೇಕಾದ ಮೇವು ನೀರು ನೆರಳು ಒದಗಿಸಲು ಸಾಧ್ಯವಿದ್ದರೆ ಅದು ಗೋಮಾತೆಯ ಆಶೀರ್ವಾದ ಹಾಗೂ ತಮ್ಮೆಲ್ಲರ ತುಂಬು ಹೃದಯದ ಸಹಕಾರದಿಂದ ಮಾತ್ರ .. ತಾವೆಲ್ಲರೂ ಕೂಡ ತಮ್ಮ ಬಂಧು ಮಿತ್ರರಲ್ಲಿ , 'ಗೋ ಸ್ವರ್ಗ' ದ ವೈಶಿಷ್ಟತೆ ಯನ್ನು ತಿಳಿಸಿ ಈ ಮಹತ್ತರ ಪುಣ್ಯ ಕಾರ್ಯದಲ್ಲಿ ಅವರನ್ನೂ ಭಾಗಿ ಗೊಳಿಸಬೇಕಾಗಿ ಕೋರಿ ಕೊಳ್ಳುತ್ತೇವೆ
OSCAR-2019
ಮೈಸೂರು, ಮಾರ್ಚ್ 30 : ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಂದ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂಬ ಆರೋಪ ಕೇಳಿಬಂದಿದೆ. ಬಿಜೆಪಿ ಕಾರ್ಯಕರ್ತ ಮೈಸೂರಿನ ಕ್ಯಾತಮಾರನಹಳ್ಳಿ ರಾಜು ನಿವಾಸಕ್ಕೆ ಭೇಟಿ ನೀಡಿದ ವೇಳೆ ಅಮಿತ್ ಶಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾಗಿ, ನೀತಿ ಸಂಹಿತೆ ಜಾರಿಯಲ್ಲಿದ್ದರೂ ರಾಜು ಕುಟುಂಬಕ್ಕೆ 5 ಲಕ್ಷ ರುಪಾಯಿ ಪರಿಹಾರ ನೀಡಿ, ಸದ್ಯ ಪೇಚಿಗೆ ಸಿಲುಕಿದ್ದಾರೆ. 5 ಲಕ್ಷ ರುಪಾಯಿ ಪರಿಹಾರ ಕೊಟ್ಟಿದ್ದಾಗಿ ರಾಜು ಅವರ ಅತ್ತಿಗೆ‌ ಕುಮಾರಿ ಒಪ್ಪಿಕೊಂಡಿದ್ದಾರೆ. ಈ ಮೂಲಕ ಅಮಿತ್ ಶಾ ನೇರವಾಗಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ರಾಜು ಅವರ ಅತ್ತಿಗೆಗೆ ಮಾದ್ಯಮಗಳ ಮುಂದೆ ಬಿಜೆಪಿ ಕಾರ್ಯಕರ್ತರು ಹೇಳಿ ಕೊಟ್ಟ ಹಾಗೆ ಹೇಳಿಕೆ ನೀಡುವಂತೆ ಸ್ಥಳೀಯ ಬಿಜೆಪಿ ನಾಯಕರ ತಾಕೀತು ಮಾಡಿದ್ದಾರೆ. ಮಾದ್ಯಮಗಳು ಪ್ರಶ್ನೆ ಮಾಡುವಾಗ‌ ಬಿಜೆಪಿ ಸ್ಥಳೀಯ ‌ಮುಖಂಡರು ಮಧ್ಯಪ್ರವೇಶ ಮಾಡುತ್ತಿದ್ದರು. ಆದರೂ ಅವರ ಎದುರೇ 5 ಲಕ್ಷ ಹಣ ಕೊಟ್ಟಿರುವುದಾಗಿ ರಾಜು ಅತ್ತಿಗೆ ಕುಮಾರಿ ಒಪ್ಪಿಕೊಂಡರು. ಸದ್ಯ ಹಣ ಕೊಟ್ಟು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಪೇಚಿಗೆ ಸಿಲುಕಿರುವುದಂತೂ ಸತ್ಯ. amit shah karnataka assembly elections 2018 bjp mysuru district news ಅಮಿತ್ ಶಾ ಕರ್ನಾಟಕ ವಿಧಾನಸಭೆ ಚುನಾವಣೆ 2018 ಬಿಜೆಪಿ ಮೈಸೂರು ಜಿಲ್ಲಾಸುದ್ದಿ
OSCAR-2019
ಸದ್ದಿಲ್ಲದೆ ಖಾಸಗಿ ಸಮಾರಂಭದಲ್ಲಿ ವಿವಾಹವಾಗಿದ್ದ ನಟಿ ನೇಹಾ ಧೂಪಿಯಾ ಸದ್ಯ ಗಂಡ ಅಂಗದ್​ ಬೇಡಿಯೊಂದಿಗೆ ಮಾಲ್ಡೀವ್ಸ್​ನಲ್ಲಿ ಕಾಲ ಕಳೆಯುತ್ತಿದ್ದಾರೆ. ತಮ್ಮ ಪ್ರವಾಸದ ಚಿತ್ರಗಳನ್ನು ನೇಹಾ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದಾರೆ. ನಟ ಅಂಗದ್ ಬೇಡಿ ಇತ್ತೀಚೆಗೆ ತೆರೆಕಂಡ 'ಸೂರ್ಮಾ' ಸಿನಿಮಾದಲ್ಲಿ ಅಭಿನಯಿಸಿದ್ದರೆ, ನೇಹಾ ಕಡೆಯದಾಗಿ 'ಲಸ್ಟ್​ ಸ್ಟೋರೀಸ್​'ನಲ್ಲಿ ಕಾಣಿಸಿಕೊಂಡಿದ್ದರು. ಕೆಲ ಸಮಯ ಡೇಟಿಂಗ್​ ಮಾಡುತ್ತಿದ್ದ ಈ ಜೋಡಿ ಕಳೆದ ಮೇನಲ್ಲಿ ವಿವಾಹವಾಗಿದ್ದರು. ದಕ್ಷಿಣ ದೆಹಲಿಯ ಗುರುದ್ವಾರದಲ್ಲಿ ಕೇವಲ ಕುಟುಂಬ ಸದಸ್ಯರೊಂದಿಗೆ ವಿವಾಹವಾಗಿದ್ದ ಇವರ ಬಗ್ಗೆ ಸಾಕಷ್ಟು ಗಾಳಿ ಸುದ್ದಿಯೂ ಹರಿದಾಡುತ್ತಿತ್ತು. ಅದೂ ಸಹ ನೇಹಾ ವಿವಾಹಕ್ಕೆ ಮುಂಚಿತವಾಗಿಯೇ ಗರ್ಭಿಣಿಯಾಗಿದ್ದ ಕಾರಣಕ್ಕೆ ಆತುರವಾಗಿ ಈ ಮದುವೆ ಮಾಡಲಾಯಿತು ಎಂದು. ಈ ಗಾಳಿ ಮಾತಿಗೆ ನೇಹಾ ತಂದೆ ಮೌನ ಮುರಿದು ಸಾರ್ವಜನಿಕವಾಗಿ ಉತ್ತರಿಸಿದ್ದರು. ಈ ಕುರಿತಾದ ಮಾಹಿತಿಗಾಗಿ ಈ ಲಿಂಕ್​ ಕ್ಲಿಕ್​ ಮಾಡಿ...
OSCAR-2019
ಮನಿಲಾ (ಎಎಫ್‌ಪಿ):ಫಿಲಿಪ್ಪೀನ್ಸ್‌ನಲ್ಲಿ ಕಳೆದ ಮೂರು ವಾರಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ 25 ಪ್ರಾಂತ್ಯಗಳಲ್ಲಿ ಪ್ರವಾಹ ಮತ್ತು ಭೂಕುಸಿತಗಳು ಸಂಭವಿಸಿದ್ದು, ಸತ್ತವರ ಸಂಖ್ಯೆ 51ಕ್ಕೆ ಏರಿದೆ. ಇನ್ನೂ ಒಂದು ವಾರ ಕಾಲ ಬಿರುಸಿನ ಮಳೆ ಸುರಿಯಬಹುದು ಎಂದು ಎಚ್ಚರಿಸಲಾಗಿದೆ. ಈಗಾಗಲೇ ಪ್ರವಾಹದಿಂದ 15 ಲಕ್ಷ ಮಂದಿ ತೊಂದರೆಗೆ ಸಿಲುಕಿದ್ದು, 8,800 ಮಂದಿ ಪುನರ್ವಸತಿ ಕೇಂದ್ರಗಳಲ್ಲಿ ಆಸರೆ ಪಡೆದಿದ್ದಾರೆ.
OSCAR-2019
ಮೇ ಹದಿಮೂರರಂದು (2004ನೇ ಇಸವಿ) ಬೆಳಿಗ್ಗೆ ಲೋಕಸಭಾ ಚುನಾವಣೆಗಳ ಮತಗಳ ಎಣಿಕೆ ಪ್ರಾರಂಭಗವಾಗಬೇಕಾಗಿತ್ತು. ಹನ್ನೆರಡನೇ ತಾರೀಖು ರಾತ್ರಿ ಎನ್‌ಡಿಟಿವಿಯಲ್ಲಿ ರಾಜ್‌ದೀಪ್‌ ಸರ್‌ದೇಸಾಯಿ ಅಟಲ್‌ ಅವರನ್ನು ಸಂದರ್ಶಿಸಿದರು. ಅದೊಂದು ಅತ್ಯುತ್ತಮ ಸಂದರ್ಶನವಾಗಿತ್ತು. ರಾಜ್‌ದೀಪ್‌ ಘನತೆಯೇ ಮೈದಾಳಿದಂತೆ ಕುಳಿತಿದ್ದ ವಾಜಪೇಯಿಯವರನ್ನು ಅಷ್ಟೇ ಘನತೆಯಿಂದ ಪ್ರಶ್ನಿಸಿ ಉತ್ತರಗಳನ್ನು ಪಡೆದರು. ಅದು ಅಟಲ್‌ ಅವರು ಆತ್ಮಶೋಧನೆಯ ಆಳಕ್ಕಿಳಿಯಲೂ, ಮರ್ಮಾಘಾತ ಪ್ರಶ್ನೆಗಳಿಂದ ತಬ್ಬಿಬ್ಬಾಗುವಂತೆಯೂ ಇದ್ದ–ಇಷ್ಟೆಲ್ಲದರ ನಡುವೆ ಘನತೆಯ ಎಲ್ಲೆಯನ್ನು ಮೀರದ ಸಂದರ್ಶನವಾಗಿತ್ತದು. ಪ್ರಧಾನಮಂತ್ರಿಯಾಗಿ ಕೊನೆಯ ಗಳಿಗೆಯ ಆ ಕ್ಷಣಗಳು ಆ ಸಂದರ್ಶನದಿಂದ ಬಹುಶಃ ಹೊಸ ಅರ್ಥ ಹೊಳೆಯಿಸಿರಬೇಕು ಅಟಲ್‌ ಅವರಿಗೆ. ಅವರು ಮೌನದ ಕಣಿವೆಗೆ ಇಳಿದರು. ಅಲ್ಲಿ ರಾಜಕಾರಣದ ಅನೇಕ ಪ್ರಶ್ನೆಗಳು ಇದ್ದವು. ಅವೆಲ್ಲವನ್ನು ಬರೆಯುವುದು ನನ್ನ ಉದ್ದೇಶವಲ್ಲ. ರಾಜ್‌ದೀಪ್ ಪ್ರಾರಂಭದಲ್ಲೇ ಒಂದು ಪ್ರಶ್ನೆ ಕೇಳಿದರು. ಯೌವನದ ದಿನಗಳಲ್ಲಿ ಅಟಲ್‌ಗಿದ್ದ ಭವಿಷ್ಯದ ಆಸೆ ಯಾವುದು ಎಂಬ ಪ್ರಶ್ನೆ ಅದು. ಅಟಲ್ ತಾವೊಬ್ಬ ಕವಿಯಾಗುವ ಹಂಬಲವುಳ್ಳವನಾಗಿದ್ದೆ ಎಂದು ಉತ್ತರಿಸಿದರು. ಆ ಸಂದರ್ಶನದ ಮುಕ್ತಾಯ ಕೂಟ ಅಟಲ್‌ರ ಕಾವ್ಯ ಜೀವನದ ಬಗೆಗೇ ಇತ್ತು. ಅವರು ತಮ್ಮ ಕವಿತೆಯ ಸಾಲುಗಳನ್ನು ನೆನಪು ಮಾಡಿಕೊಂಡು ಮುಗಿಸಿದರು. ಕನ್ನಡಕ್ಕೆ ಈಗಾಗಲೇ ಅವರ ಕಾವ್ಯವನ್ನು ಸರಜೂಕಾಟ್ಕರ್ ಅನುವಾದಿಸಿ ಪ್ರಕಟಿಸಿರುವುದು ಎಲ್ಲರಿಗೂ ತಿಳಿದಿದೆ. ಈಗ ಇನ್ನಷ್ಟು ಕವಿತೆಗಳು ಬಂದಿವೆ. ಈಗ ವರ್ಷದ ಹಿಂದೆ ಹಸ್ತಪ್ರತಿಯಲ್ಲಿ ಓದುವ ಅವಕಾಶ ನನಗೆ ಸಿಕ್ಕಿದುದು ತುಂಬಾ ಆಕಸ್ಮಿಕವಾಗಿತ್ತು. ಭಾರತ ಸರ್ಕಾರದ ಯೋಜನಾ ಆಯೋಗದ ಸದಸ್ಯ ಡಾ. ಕೆ ವೆಂಕಟಸುಬ್ರಮಣಿಯನ್ ಹಸ್ತಪ್ರತಿಯನ್ನು ಕಳುಹಿಸಿ ಅನುವಾದವನ್ನೊಮ್ಮೆ ಓದಿ, ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಕೇಳಿದ್ದರು. ಕೆ.ಎಸ್ ರಮಾನಂದ ಅನುವಾದ ಮಾಡಿದ್ದಾರೆ. ಅಟಲ್ ತಿಳಿಸುವಂತೆ ಅವರು ತಮ್ಮ ಸುತ್ತಲ ಜಗತ್ತನ್ನು ಕುರಿತು ತಮ್ಮ ಬದುಕಿನಲ್ಲಿ ಬರುವ ಸವಾಲುಗಳನ್ನು ಎದುರಿಸಲು ಬೇಕಾದ ಶಕ್ತಿಯನ್ನು ಪಡೆಯಲು ಕಾವ್ಯ ರಚನೆ ಮಾಡುತ್ತಾರೆ. ಪಶ್ಚಾತ್ತಾಪ ಅಥವಾ ಸೋಲಿನ ದ್ಯೋತಕವಾಗದೆ ಆತ್ಮವಿಶ್ವಾಸ ಹಾಗೂ ಗೆಲುವನ್ನು ಬಯಸುವ ಅಭಿವ್ಯಕ್ತಿಗಾಗಿ ತಮ್ಮ ಕಾವ್ಯ ಮೈದಾಳುತ್ತದೆಂದು ಹೇಳುತ್ತಾರೆ. ಅಟಲ್ ಅವರ ತಂದೆ ಪಂಡಿತ್ ಕೃಷ್ಣ ಬಿಹಾರಿ ವಾಜಪೇಯಿ ಗ್ವಾಲಿಯರ್‌ನ ಪ್ರಸಿದ್ಧ ಕವಿಯಾಗಿದ್ದರು. ಅಟಲ್‌ರ ಅಜ್ಜ ಪಂಡಿತ್ ಶ್ಯಾಮಲಾಲ್ ವಾಜಪೇಯಿ ಹಿಂದಿ ಹಾಗೂ ಸಂಸ್ಕೃತ ಸಾಹಿತ್ಯ ಪ್ರೇಮಿಯಾಗಿದ್ದರಂತೆ. ಅಟಲ್‌ರ ಅಣ್ಣ ಪಂಡಿತ್ ಅವಧ್ ಬಿಹಾರಿ ವಾಜಪೇಯಿ ಕೂಡ ಕವಿತೆಗಳನ್ನು ಬರೆದು ಕವಿ ಸಮ್ಮೇಳನಗಳಲ್ಲಿ ಭಾಗವಹಿಸುತ್ತಿದ್ದರಂತೆ. ಕಾವ್ಯ ವಂಶ ಪಾರಂಪರ್ಯವಾಗಿ ಅಟಲ್‌ರಿಗೆ ದತ್ತವಾದದ್ದು. ರಾಜಕಾರಣಗಳಲ್ಲಿ ಅತ್ಯುನ್ನತ ಸ್ಥಾನವನ್ನು ಗಳಿಸಿ ಕೆಳಗಿಳಿಯುವ ಗಳಿಗೆಯಲ್ಲೂ ಕಾವ್ಯದ ಬಗೆಗಿನ ತಮ್ಮ ಕಾಳಜಿಯನ್ನು ಪ್ರಕಟಿಸುವ ಅಟಲ್ ಕವಿ ಹೃದಯವುಳ್ಳವರೆಂದು ಧಾರಾಳವಾಗಿ ಹೇಳಬಹುದು. ಕವಿಯಾಗಿ ಅವರಿಗೆ ಹಿಂದಿ ಕಾವ್ಯ ಜಗತ್ತಿನಲ್ಲಿ ಎಂಥ ಸ್ಥಾನವಿದೆಯೆಂಬುದನ್ನು ಅಲ್ಲಿನ ವಿಮರ್ಶಕ ಪಂಡಿತರು ತಿಳಿಯಬೇಕಷ್ಟೆ. ಅವರು ಗದ್ಯ ಕೃತಿಗಳನ್ನು ಪ್ರಬಂಧಗಳನ್ನೂ ಬರೆದಿದ್ದರು. ಆದರೆ ಸಕ್ರಿಯ ರಾಜಕಾರಣ ಅವರ ಕಾವ್ಯ ಜೀವನವನ್ನು ಅಲ್ಲೋಲಕಲ್ಲೋಲ ಮಾಡಿದೆ. ಅವರು ಬರೆಯಬೇಕಾದಷ್ಟು ಬರೆಯಲು ಸಾಧ್ಯವಾಗಿಲ್ಲ. ರಾಜಕಾರಣವನ್ನೂ ಅವರು ವಿಶೇಷವಾಗಿ ಇಷ್ಟಪಡುವರಾದ್ದರಿಂದ ಇದು ಸಹಜ, ‘ಎಷ್ಟು ಬರೆಯಬೇಕೆಂಬ ಆಸೆಯಿತ್ತೊ ಅಷ್ಟು ಬರೆಯಲಾಗಲಿಲ್ಲ. ಅದರ ಕೊರಗೇ ನನಗಿದೆ. ಆದರೆ ನನ್ನ ಒಳಗಿನ ಪ್ರಪಂಚದ ವಸ್ತುಸ್ಥಿತಿಯನ್ನು ಮರೆಮಾಚದೆ ಕವಿಗೆ ವಿಧೇಯನಾಗಿರಲು ಪ್ರಯತ್ನ ಪಟ್ಟಿದ್ದೇನೆ’ ಎನ್ನುತ್ತಾರೆ ವಾಜಪೇಯಿ. ಕವಿಯ ಆಸೆ ಸುತ್ತಲ ಮನುಷ್ಯರ ಜೊತೆ ಬೆರೆತು ಒಂದಾಗುವುದು. ಅವರ ಜೊತೆಜೊತೆ ನಡೆಯುವುದು, ಅವರ ಗುಂಪಿನಲ್ಲಿ ಕಳೆದು ಹೋಗುವುದು, ಮುಳುಗಿ ಹೋಗುವುದು; ಅಂಥ ಪ್ರಕ್ರಿಯೆಯಲ್ಲಿ ತನ್ನನ್ನು ತಾನೇ ಮರೆತು ತನ್ನ ಅಸ್ತಿತ್ವಕ್ಕೆ ಹೊಸ ಅರ್ಥವನ್ನೂ ಬದುಕಿಗೆ ಸುಗಂಧವನ್ನೂ ತರುವಂಥ ಮಹತ್ವಾಕಾಂಕ್ಷೆಯನ್ನು ಅಟಲ್‌ ಪ್ರಕಟಿಸುತ್ತಾರೆ. ಅವರು ತಮ್ಮ ಪ್ರಭುವಿನಲ್ಲಿ ಪ್ರಾರ್ಥಿಸುವುದು ಹೀಗೆ; ’ವಾಜಪೇಯಿ 31’ ಎಂಬ ಈ ಸಂಗ್ರಹದಲ್ಲಿ 31 ಕವಿತೆಗಳಿವೆ. ವೈಯಕ್ತಿಕ ಭಾವನೆಗಳನ್ನೇ ಸಣ್ಣ ಸಣ್ಣ ಪ್ರತಿಮೆಗಳ ಮೂಲಕ ಅಭಿವ್ಯಕ್ತಿಗೊಳಿಸುವ ಕವಿ ಅಟಲ್‌ ಸಮಕಾಲೀನ ವಸ್ತು–ಸಂಗತಿಗಳನ್ನು ತಮ್ಮ ಕಾವ್ಯದ್ರವ್ಯವನ್ನಾಗಿ ಮಾಡಿಕೊಂಡಿದ್ದಾರೆ. ಹರಿದ ತಂತಿಯಿಂದ ವಸಂತ ಸ್ವರ ಹರಿಸಿ, ಹೆಬ್ಬಂಡೆಯ ಎದೆಸೀಳಿ ಹೊಸ ಚಿಗುರನ್ನು ಮೊಳೆಯಿಸುವ, ಪೂರ್ವದಲ್ಲಿ ಅರುಣೋದಯ ರೇಖೆಯನ್ನು ಕಾಣುತ್ತಾ ಹೊಸ ಗೀತೆಯೊಂದನ್ನು ಹಾಡುವೆನು ಎನ್ನುವ ಕವಿ ಅಟಲ್‌ ಸೋಲೊಪ್ಪರಾಲೆ, ಹೊಸ ಗೀತೆಯ ಹಾಡುವೆ ಎನ್ನುತ್ತಾರೆ. ಮತ್ತೊಂದು ಕವಿತೆಯಲ್ಲಿ, ‘ನಾನು ಹಾಡುವುದಿಲ್ಲ’ ಎನ್ನುತ್ತಾರೆ. (ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿಯಾಗಿದ್ದ ಅಗ್ರಹಾರ ಕೃಷ್ಣಮೂರ್ತಿ ಅವರ ‘ಬಹುವಚನ’ (2005) ಪುಸ್ತಕದಲ್ಲಿ ಈ ಲೇಖನ ಪ್ರಕಟವಾಗಿದೆ)
OSCAR-2019
"ಕಿರಿಕ್ ಪಾರ್ಟಿ' ಚಿತ್ರದ ಯಶಸ್ಸಿನ ನಂತರ ನಿರ್ದೇಶಕ ರಿಷಬ್​ ಶೆಟ್ಟಿ "ಸರ್ಕಾರಿ ಹಿ.ಪ್ರಾ. ಶಾಲೆ ಕಾಸರಗೋಡು, ಕೊಡುಗೆ: ರಾಮಣ್ಣ ರೈ' ಎಂಬ ಮಕ್ಕಳ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಈಗಾಗಲೇ ಚಿತ್ರದ "ದಡ್ಡ ಪ್ರವೀಣ', "ಬಲೂನ್', ಹಾಗೂ "ಅರೆರೆ ಅವಳ ನಗುವ' ಹಾಡುಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಇದೀಗ ಚಿತ್ರತಂಡ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ್ದು, ಯೂಟ್ಯೂಬ್‍ನಲ್ಲಿ ಸಿನಿಪ್ರಿಯರ ಸಾಕಷ್ಟು ಮೆಚ್ಚುಗೆ ಗಳಿಸಿ, ವೈರಲ್ ಆಗಿದೆ. ಟ್ರೈಲರ್ ನ್ನು ಗಮನಿಸಿದಾಗ ಕಾಸರಗೋಡಿನಂತಹ ಗಡಿನಾಡು ಪ್ರದೇಶಗಳಲ್ಲಿ ಕನ್ನಡ ಶಾಲೆಗಳಿಗೆ ಬಂದಿರುವ ದುರಂತ ಪರಿಸ್ಥಿತಿ ಕುರಿತು ಹೇಳಲಾಗಿದ್ದು, ಕನ್ನಡ ಕಲಿಯಬೇಕೆಂಬ ಅಲ್ಲಿಯ ಮಕ್ಕಳ ಬಯಕೆ, ತಮ್ಮ ಭಾಷೆ ಹೇರಿಕೆಗೆ ಹಾತೊರೆಯುವ ಅಲ್ಲಿಯ ಸರ್ಕಾರದ ನಡೆ, ಹಾಗೂ ಇದರ ವಿರುದ್ಧ ಹೋರಾಟ ನಡೆಸುವ ಕನ್ನಡಿಗರ ಧೀರತನವನ್ನು ಸುಂದರವಾಗಿ ಕಟ್ಟಿಕೊಡುವ ಪ್ರಯತ್ನವನ್ನು ನಿರ್ದೇಶಕ ರಿಷಬ್​ ಶೆಟ್ಟಿ ಮಾಡಿರುವುದು ಕಾಣಿಸುತ್ತದೆ. ಇನ್ನು ಚಿತ್ರಕ್ಕೆ "ರಾಮಾ ರಾಮಾ ರೇ' ವಾಸುಕಿ ವೈಭವ್ ಸಂಗೀತ ಸಂಯೋಜಿಸಿದ್ದು, ಇದೊಂದು ಕಾಸರಗೋಡು ಹಿನ್ನೆಲೆಯಲ್ಲಿ ಸಾಗುವ ಮಕ್ಕಳ ಚಿತ್ರ. ಅಲ್ಲದೇ ಮಕ್ಕಳ ಜೊತೆ ತಲೆಹರಟೆ ಮಾಡ್ಕೊಂಡು ಹಿರಿಯ ನಟ ಅನಂತ್‍ನಾಗ್ ಇಲ್ಲಿ ವಿಶೇಷವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ವೆಂಕಟೇಶ್‌ ಅಂಗುರಾಜ್‌ ಕ್ಯಾಮೆರಾ ಕೈಚಳಕವಿದ್ದು, ರಿಷಬ್​ ಪತ್ನಿ ಪ್ರಗತಿ ಶೆಟ್ಟಿ ಸಹ ಚಿತ್ರದಲ್ಲಿ ವಸ್ತ್ರ ವಿನ್ಯಾಸಕಿಯಾಗಿ ಕೆಲಸ ಮಾಡಿದ್ದಾರೆ. ಅಲ್ಲದೇ ಚಿತ್ರದ ವಿತರಣಾ ಹಕ್ಕನ್ನು ಜಯಣ್ಣ ಪಡೆದಿದ್ದಾರೆ. ಚಿತ್ರವು ಇದೇ 23 ರಂದು ತೆರೆಗೆ ಬರಲು ಸಜ್ಜಾಗಿದೆ. ಹಿಂದಿನ ವಾರದಿಂದ- ತೀವ್ರ ತರಹದ ಭಾವನಾತ್ಮಕ ಬದಲಾವಣೆಗಳು, ಕಣ್ಣಿಗೆ ಇರಿಯುವಂತಹ ಪ್ರಕಾಶಮಾನವಾದ ದೀಪಗಳು, ತೀಕ್ಷ್ಣ ಘಾಟು ವಾಸನೆಗಳು ಮೈಗ್ರೇನನ್ನು ಪ್ರಚೋದಿಸಬಹುದು. ಮಹಿಳೆಯರಲ್ಲಿ, ಗರ್ಭ ಧರಿಸಿದ ಸಂದರ್ಭದಲ್ಲಿ ಮತ್ತು ಋತುಚಕ್ರದ ಅವಧಿಯಲ್ಲಿ ಅಥವಾ ಹಾರ್ಮೋನ್‌ ಸಂಬಂಧಿ ಔಷಧಗಳನ್ನು ಉಪಯೋಗಿಸಿದ ಚಿಕಿತ್ಸೆಯಿಂದ ಮೈಗ್ರೇನ್‌ ಪ್ರಚೋದನೆಗೊಳ್ಳಬಹುದು. ಕ್ಷಿಪ್ರ (ತಡೆ) ಮತ್ತು ಪ್ರತಿಬಂಧನಾತ್ಮಕ (ಪ್ರಾಫಿಲ್ಯಾಕ್ಟಿಕ್‌) ಚಿಕಿತ್ಸೆ.ಕ್ಷಿಪ್ರ ಚಿಕಿತ್ಸೆಯು ತಲೆನೋವನ್ನು ತಡೆಯುವ, ಅದು ವೃದ್ಧಿಸುವುದನ್ನು ತಡೆಯುವ ಅಥವಾ ಈಗಾಗಲೇ ಆರಂಭವಾಗಿರುವ ತಲೆನೋವನ್ನು ನಿವಾರಿಸುವ ಗುರಿ ಹೊಂದಿರುತ್ತದೆ. ತಲೆನೋವು ಇಲ್ಲದಿದ್ದರೂ ಒದಗಿಸುವ ಪ್ರತಿಬಂಧನಾತ್ಮಕ ಚಿಕಿತ್ಸೆಯು ಮೈಗ್ರೇನ್‌ ಹಾವಳಿಯ ಆವರ್ತನಗಳನ್ನು ಮತ್ತು ತೀವ್ರತೆಯನ್ನು ಕಡಿಮೆ ಮಾಡುವ ಗುರಿ ಹೊಂದಿರುತ್ತದೆ. ಅಲ್ಲದೆ, ಹಠಾತ್‌ ಮೈಗ್ರೇನ್‌ ತಲೆನೋವುಗಳನ್ನು ಕ್ಷಿಪ್ರ ಚಿಕಿತ್ಸೆಗೆ ಪ್ರತಿಸ್ಪಂದನಾತ್ಮಕವಾಗಿ ಮಾರ್ಪಡಿಸುವ ಗುರಿ ಹೊಂದಿರುತ್ತದೆ. ಜತೆಗೆ ರೋಗಿಯ ಜೀವನ ಗುಣಮಟ್ಟವನ್ನು ವೃದ್ಧಿಸುವುದು ಕೂಡ ಈ ಚಿಕಿತ್ಸೆಯ ಗುರಿಯಾಗಿರುತ್ತದೆ. ಚಿಕಿತ್ಸೆ ಯಶಸ್ವಿಯಾಗಿ ಮುಂದುವರಿದರೆ 6ರಿಂದ 12 ತಿಂಗಳುಗಳ ಕಾಲ ಪ್ರೊಫಿಲ್ಯಾಕ್ಟಿಕ್‌ ಔಷಧಗಳನ್ನು ಉಪಶಮನಾತ್ಮಕವಾಗಿ ನೀಡುವುದನ್ನು ಪರಿಗಣಿಸಬಹುದು. ಮೈಗ್ರೇನ್‌ ರೋಗಿಗಳು ಒತ್ತಡ ರಹಿತ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು. ಪರಿಣಾಮಕಾರಿ ಔಷಧಗಳು ಮತ್ತು ಒತ್ತಡ ನಿವಾರಕ ತಂತ್ರಗಳಾದ ಯೋಗ, ಧ್ಯಾನ ಹಾಗೂ ಗುರುತಿಸಲಾದ ಮೈಗ್ರೇನ್‌ ಪ್ರಚೋದಕಗಳಿಂದ ದೂರ ಇರುವುದು ಯಶಸ್ಸಿಗೆ ಕೀಲಿಕೈಯಾಗಿರುತ್ತದೆ. ಔಷಧವನ್ನು ಶಿಫಾರಸು ಮಾಡುವುದಕ್ಕೆ ಮುನ್ನ ಶಿಕ್ಷಣ ಮತ್ತು ಆರೋಗ್ಯ ಪುನರ್‌ ಸ್ಥಾಪನೆಯ ಖಾತರಿಯನ್ನು ಒದಗಿಸುವ ವರ್ತನಾತ್ಮಕ ಚಿಕಿತ್ಸೆಯನ್ನು ಶಿಫಾರಸು ಮಾಡಲಾಗುತ್ತದೆ. ಚಲನಾತ್ಮಕ ಪುನರ್‌ ಸಂಯೋಜನೆ, ಜೈವಿಕ ಪುನರ್‌ ಅನುಸರಣೆ ಮತ್ತು ವಿಶ್ರಾಂತಿದಾಯಕ ತಂತ್ರಗಳು ತಲೆನೋವಿನ ಚಟುವಟಿಕೆಯನ್ನು ಮತ್ತು ಔಷಧ ಬಳಕೆಯನ್ನು ಕಡಿಮೆ ಮಾಡಲು ಸಹಾಯಕವಾಗಿರುತ್ತವೆ. ಮಕ್ಕಳಲ್ಲಿ, ವರ್ತನಾತ್ಮಕ ಚಿಕಿತ್ಸೆಯು ಬಹಳ ಪರಿಣಾಮಕಾರಿಯಾಗಿರುತ್ತದೆಯಲ್ಲದೆ, ವಯಸ್ಕರಾದಂತೆ ಮೈಗ್ರೇನ್‌ ನಿಭಾವಣೆಗೆ ಉತ್ತಮ ನೆರವು ನೀಡುತ್ತದೆ. ವಿಜಯ್‌ಮಲ್ಯ, ನೀರವ್‌ ಮೋದಿಯಂಥವರು ಸಾಲ ಪಡೆದು ಬ್ಯಾಂಕಿಗೆ ನಾಮ ಹಾಕಿ ಓಡಿ ಹೋಗಬಹುದು. ಅದು ದೊಡ್ಡ ಸುದ್ದಿಯಾಗಬಹುದು. ಆದರೆ ಕೋಟಿ, ಕೋಟಿ ವಂಚಿನೆಯಾದಾಗ ಇದರ ಪರಿಣಾಮ ಗ್ರಾಹಕರ ಮೇಲೂ ಆಗುತ್ತದೆ ಅನ್ನೋದು ಸುಳ್ಳಲ್ಲ. ಎನ್‌ಪಿಎ ಹೆಸರಲ್ಲಿ ವಸೂಲಾಗದ ಸಾಲವನ್ನೆಲ್ಲಾ ಸೇರಿಸಿ ಕಟ್ಟಿಹಾಕುತ್ತದೆ. ಇದು ಹೆಚ್ಚಾದಂತೆ ಬ್ಯಾಂಕಿನ ಆದಾಯ, ಗ್ರಾಹಕರಿಗೆ ನೀಡುವ ಬಡ್ಡಿಯ ಮೊತ್ತವೂ ಇಳಿಯುತ್ತಾ ಹೋಗುತ್ತದೆ. ಇವತ್ತು ಬ್ಯಾಂಕಿಂಗ್‌ಗೆ ಸಂಬಂಧಪಟ್ಟ ಯಾವುದೇ ಸಭೆ, ಸಮಾರಂಭ, ವಿಚಾರಗೋಷ್ಠಿ, ಕಾರ್ಯಾಗಾರಗಳು ನಡೆದರೆ.. ಅಲ್ಲಿ ಅನುತ್ಪಾದಕ ಆಸ್ತಿಗಳ ಬಗೆಗೆ ಎಚ್ಚರಿಕೆ ನೀಡದೇ ಅವುಗಳು ಕೊನೆಗೊಳ್ಳುವುದಿಲ್ಲ. ಇಂಥ ಪ್ರತಿ ಸಂದರ್ಭಗಳಲ್ಲಿ ಬ್ಯಾಂಕುಗಳಿಗೆ ಅನುತ್ಪಾದಕ ಆಸ್ತಿಗಳನ್ನು ಕಡಿಮೆ ಮಾಡಲು ಮತ್ತು ನಿಯಂತ್ರಿಸಲು ಕಟ್ಟು ನಿಟ್ಟಾದ ಸೂಚನೆ, ಹೊಸ- ಹೊಸ ನಿರ್ದೇಶನಗಳನ್ನು ನೀಡಲಾಗುತ್ತದೆ. ವಿಜಯ್‌ ಮಲ್ಯ, ನೀರವ್‌ ಮೋದಿಯಂತವರು ಬ್ಯಾಂಕುಗಳಿಗೆ ನಾಮ ಹಾಕಿದ ಮೇಲಂತೂ ಗ್ರಾಹಕರು ಕೂಡ ಅನುತ್ಪಾದಕ ಆಸ್ತಿಯ ಬಗ್ಗೆ ಚಿಂತಿಸಲು ಮುಂದಾಗಿದ್ದಾರೆ. ಈ ಅನುತ್ಪಾದಕ ಆಸ್ತಿಯ ಪ್ರಮಾಣ ಹೆಚ್ಚಾದರೆ ಬ್ಯಾಂಕ್‌ನ ವಹಿವಾಟು, ಲಾಭದ ಮೇಲೂ ಪರಿಣಾಮ ಬೀರಬಹುದು. ಹೀಗಾಗಿ ಅನುತ್ಪಾದಕ ಆಸ್ತಿಗಳನ್ನು ನಿಯಂತ್ರಿಸಲು ಸಮರೋಪಾದಿಯ ಚಿಂತನೆಗಳು ನಡೆಯುತ್ತಿವೆ. ಸಾರ್ವಜನಿಕರಿಂದ ಠೇವಣಿ ಸ್ವೀಕರಿಸುವುದು, ಅದನ್ನು ಅವÍÂಕತೆ ಇದ್ದವರಿಗೆ ಸಾಲ ನೀಡುವುದು ಬ್ಯಾಂಕುಗಳ ಮೂಲ ವೃತ್ತಿ. ಈ ಸೇವೆಗಾಗಿ ಅವು ಠೇವಣಿದಾರರಿಗೆ ಬಡ್ಡಿ ನೀಡುತ್ತವೆ ಮತ್ತು ಸಾಲ ಪಡೆದುಕೊಂಡವರಿಂದ ಬಡ್ಡಿ ವಸೂಲು ಮಾಡುತ್ತವೆ.ಈ ನೀಡುವ, ಪಡೆಯುವ ಬಡ್ಡಿದರದ ವ್ಯತ್ಯಾಸವನ್ನು ಬ್ಯಾಂಕಿಂಗ್‌ ಪರಿಭಾಷೆಯಲ್ಲಿ ನೆಟ… ಇಂಟರೆಸ್ಟ್‌ ಮಾರ್ಜಿನ್‌ ಎನ್ನುತ್ತಾರೆ. ಬ್ಯಾಂಕ್‌ಗಳ ನಿರ್ವಹಣೆ ಈ ಮಾರ್ಜಿನ್‌ನಿಂದಲೇ ಆಗಬೇಕು. ಹಾಗೆಯೇ ಬ್ಯಾಂಕ್‌ಗಳು ಬಡ್ಡಿ ಹೊರತಾಗಿ, ತಾವು ಕೊಡುವ ವಿವಿಧ ಸೇವೆಗಳಿಗೆ ಗ್ರಾಹಕರಿಂದ ಶುಲ್ಕ ಪಡೆಯುತ್ತಿದ್ದು, ಇವುಗಳು ಬ್ಯಾಂಕುಗಳಿಗೆ ಬಡ್ಡಿಯೇತರ ಆದಾಯವಾಗಿರುತ್ತದೆ. ಇಂಥ ಆದಾಯ, ಬ್ಯಾಂಕಿನ ಒಟ್ಟು ಅದಾಯದ ಸುಮಾರು ಶೇ.22- 25 ಇರುತ್ತದೆ. ಬ್ಯಾಂಕುಗಳು ತಮ್ಮ ನಿರ್ವಹಣೆಯನ್ನು ತಾವೇ ಮಾಡಿಕೊಳ್ಳಬೇಕು ವಿನಃ ಅವುಗಳಿಗೆ ಬಜೆಟ್‌ ಅನುದಾನ ದೊರಕುವುದಿಲ್ಲ. ಬ್ಯಾಂಕುಗಳಲ್ಲಿ ಸಾಲ ನೀಡಿದ ತಕ್ಷಣ ಬಡ್ಡಿ ಮೀಟರ್‌ ಚಾಲೂ ಆಗುತ್ತದೆ. ನೀಡಿದ ಸಾಲದ ಮೂರು ಕಂತುಗಳು ಬರದಿದ್ದರೆ ಅಂಥ ಸಾಲಗಳನ್ನು ಅನುತ್ಪಾದಕ ಆಸ್ತಿ ಎಂದು ಪರಿಗಣಿಸಿ, ಆ ಖಾತೆಗೆ ವರ್ಗಾಯಿಸುತ್ತಾರೆ. ಅಂಥ ಸಾಲಗಳನ್ನು ಬ್ಯಾಂಕಿನ ಭಾಷೆಯಲ್ಲಿ ಅನುತ್ಪಾದಕ ಆಸ್ತಿ(ಸಾಲ) ಎಂದು ಹೇಳುತ್ತಾರೆ. ಜನಸಾಮಾನ್ಯರ ಭಾಷೆಯಲ್ಲಿ ಈ ಸಾಲಗಳಿಂದ ಬ್ಯಾಂಕುಗಳಿಗೆ ಏನೂ ಗಿಟ್ಟುವುದಿಲ್ಲ ಮತ್ತು ಇವು ಒಂದು ರೀತಿಯ ಡೆಡ್‌ ಇನ್ವೆಸ್ಟ್‌ಮೆಂಟ್‌ ಕೂಡಾ. ಇದನ್ನು ಇನ್ನೂ ಸರಳವಾಗಿ ಬಂಜೆ ಸಾಲ ಎಂದೂ ಕರೆಯಬಹುದು. ವ್ಯವಹಾರದಲ್ಲಿ ಕುಂಠಿತ, ಬರಬೇಕಾದ ಹಣ ಬಾರದಿರುವುದು, ಮಾರುಕಟ್ಟೆ ಇಳಿತ, ನಿರೀಕ್ಷೆಯಂತೆ ವ್ಯವಹಾರ ನಡೆಯದಿರುವುದು, ವೆಚ್ಚದಲ್ಲಿ ಅಕಸ್ಮಾತ್‌ ಇಳಿಕೆ, ಅನಿರೀಕ್ಷಿತ ಹೊರೆ ಮತ್ತು ಸಾಲಗಾರರ ಮಧ್ಯೆ ವಿರಸ ಹೀಗೆ ಹತ್ತು ಹಲವು ಕಾರಣಗಳನ್ನು ತೋರಿಸಿ ಸಾಲ ಮರುಪಾವತಿ ಯಾಗದಿರುವುದಕ್ಕೆ ಸಮರ್ಥನೆ ನೀಡುತ್ತಾರೆ. ಇವುಗಳಲ್ಲಿ ಸತ್ಯಾಂಶ ವಿಲ್ಲದಿಲ್ಲ. ಆದರೆ, ವಿಶ್ಲೇಷಕರ ಪ್ರಕಾರ ಸಾಲ ಮರುಪಾವತಿ ಗಂಭೀರತೆ ಕಳೆದುಕೊಂಡಿರುವುದೇ ಇದಕ್ಕೆ ಕಾರಣ. ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡಿ ಸಮಾಜದಲ್ಲಿ ತಲೆ ಎತ್ತಿ ಓಡಾಡಿ ಮಾದರಿಯಾಗಬೇಕು ಎನ್ನುವ ದಶಕಗಳ ಹಿಂದಿನ ಮನೋಸ್ಥಿತಿ ಕಡಿಮೆಯಾಗಿದೆ. ಅದಕ್ಕೂಮೇಲಾಗಿ ಸರ್ಕಾರದ ಸಾಲ ಮನ್ನಾ, ಬಡ್ಡಿ ಕಡಿತ, ಏಕಬಾರಿ ತೀರುವಳಿಯಂಥ ಸಾಲಗಾರ ಸ್ನೇಹಿ ಕ್ರಮಗಳು ಸಾಲಗಾರರು ಸಾಲ ಮರುಪಾವತಿ ಮಾಡದಂತೆ ಅಥವಾ ವಿಳಂಬ ಮಾಡುವಂತೆ ಮಾಡುತ್ತಿದೆ. ಪ್ರಾಮಾಣಿಕವಾಗಿ ಸಾಲ ಮರುಪಾವತಿ ಮಾಡುವವರೂ ಸಾಲ ಮರುಪಾವತಿ ನಿಟ್ಟಿನಲ್ಲಿ ಹಿಂಜರಿಯುವಂತೆ ಮಾಡುವುದರಿಂದ ಬ್ಯಾಂಕುಗಳಲ್ಲಿ ಅನುತ್ಪಾದಕ ಆಸ್ತಿ ಪ್ರಮಾಣ ಹೆಚ್ಚುವಂತೆ ಮಾಡಿದೆ. ಇಂದಲ್ಲದಿದ್ದರೆ ನಾಳೆಯಾದರೂ ಸಾಲ ಮನ್ನಾ ಬರಬಹುದೆಂದು ಕಾಯುವವರೂ ಇಲ್ಲದಿಲ್ಲ. ಸಾಲ ಮನ್ನಾದೊಂದಿಗೆ, ಸಾಲವನ್ನು ಪ್ರಾಮಾಣಿಕವಾಗಿ ಮರುಪಾವತಿ ಮಾಡುವವರಿಗೆ ಸ್ವಲ್ಪ ವಿನಾಯತಿಯ ಉತ್ತೇಜನ ಕೊಟ್ಟಿದ್ದರೆ, ಪರಿಸ್ಥಿತಿ ಇಷ್ಟು ಬಿಗಡಾಯಿಸುತ್ತಿರಲಿಲ್ಲ ಎನ್ನುವ ಅಭಿಪ್ರಾಯವೂ ಇದೆ. ಮೂರು ತಿಂಗಳು ಮರುಪಾವತಿ ಅಗದಿದ್ದರೆ, ಪ್ರತಿಯೊಂದು ಸಾಲವನ್ನೂ ಅನುತ್ಪಾದಕ ಸಾಲ ಎಂದು ಪರಿಗಣಿಸಲಾಗುವುದು. ಯಾವುದೇ ಸಾಲಕ್ಕೂ ವಿನಾಯತಿ ನೀಡುವುದಿಲ್ಲ. ಯಾರಾದರೂ ಸಾಲಗಾರರು,ತಮ್ಮ ಸಾಲ ಅನುತ್ಪಾದಕ ಸಾಲ ಅಗದಂತೆ ತಡೆಯಲು, ಸಾಲದ ಮರುಪಾವತಿಯಲ್ಲಿನ ತಮ್ಮ ತೊಂದರೆಗಳನ್ನು ವಿವರಿಸಿ, ಮರುಪಾವತಿ ಸಮಯವನ್ನು ದೀರ್ಘ‌ಗೊಳಿಸುವಂತೆ, ಕಂತಿನ ಮೊತ್ತವನ್ನು, ಬಡ್ಡಿದರವನ್ನು ಕಡಿಮೆಮಾಡುವಂತೆ, ಸಾಲ ಮರುಪಾವತಿಯ ವಿರಾಮವನ್ನು ಹೆಚ್ಚಿಸುವಂತೆ ಸಾಲದ ಒಪ್ಪಂದದಲ್ಲಿ ಕೆಲವೊಂದು ಮಾರ್ಪಾಡು ಮಾಡುವಂತೆ ಬ್ಯಾಂಕುಗಳಲ್ಲಿ ಕೇಳಿಕೊಳ್ಳಬಹುದು. ಬ್ಯಾಂಕುಗಳು ಈ ಮನವಿಯು ಸಕಾರಣವಾಗಿದ್ದರೆ, ಅರ್ಥಗರ್ಭಿತವಾಗಿದ್ದರೆ ಸಾಲ ಒಪ್ಪಂದದಲ್ಲಿ ಸ್ವಲ್ಪ ಮಾರ್ಪಾಡುಮಾಡಿ ಸಾಲ ಅನುತ್ಪಾದಕ ಆಸ್ತಿಗೆ ಜಾರದಂತೆ ಕ್ರಮ ತೆಗೆದುಕೊಳ್ಳುತ್ತವೆ. ಇವುಗಳನ್ನು ಮರು ವಿನ್ಯಾಸಗೊಳಿಸಿದ ಸಾಲ ಎಂದು ಕರೆಯುತ್ತಾರೆ. ಹೀಗಾಗಿ ತಕ್ಷಣಕ್ಕೆ ಅನುತ್ಪಾದಕ ಸಾಲ ಎನ್ನುವ ಹಣೆಪಟ್ಟಿಯಿಂದ ತಪ್ಪಿಸಿಕೊಳ್ಳುತ್ತವೆ. ಬ್ಯಾಂಕುಗಳು ಅವುಗಳಿಗೆ ಲಾಭದಿಂದ ಪ್ರಾವಿಷನ್‌ ಮಾಡುವ ಅನಿವಾರ್ಯತೆಯಿಂದ ವಿರಮಿಸಬಹುದು. ಒಮ್ಮೆ ಒಂದು ಸಾಲವನ್ನು ಅನುತ್ಪಾದಕ ಎಂದು ವರ್ಗೀಕರಿಸಿದ ಮೇಲೆ, ಆ ಸಾಲದ ಮೇಲೆ ಬಡ್ಡಿಯನ್ನು ಆಕರಿಸುವಂತಿಲ್ಲ. ಅಂತೆಯೇ ಅವು ಬ್ಯಾಂಕಿನ ಆದಾಯದಲ್ಲಿ ಸೇರುವುದಿಲ್ಲ. ಬರಬೇಕಾದ ಬಡ್ಡಿಯನ್ನು ಲೆಕ್ಕ ಹಾಕಿ ಪ್ರತ್ಯೇಕವಾಗಿ ಆಂತರಿಕ ಉಪಯೋಗಕ್ಕಾಗಿ ಮಾತ್ರ ನಮೂದಿಸಿಕೊಳ್ಳಬಹುದು. ಅವುಗಳನ್ನು ಪ್ರತ್ಯೇಕ ಪುಸ್ತಕಕ್ಕೆ ಬದಲಾಯಿಸುತ್ತಾರೆ. ಬ್ಯಾಂಕುಗಳಲ್ಲಿ ಆದಾಯದ ಸಮೀಕರಣ ಮೊದಲಿನಂತೆ accrued basis ಮೇಲೆ ಇರದೇ, actual receipt ಮೇಲೆ ಇರುವುದರಿಂದ, ಬಡ್ಡಿಯನ್ನು ಆದಾಯವೆಂದು ಬ್ಯಾಲೆನ್ಸ ಶೀಟ್‌ನಲ್ಲಿ ಸೇರಿಸುವಂತಿಲ್ಲ. ಅಷ್ಟರ ಮಟ್ಟಿಗೆ ಬ್ಯಾಂಕಿನ ಆದಾಯದಲ್ಲಿ ಕಡಿಮೆಯಾಗುತ್ತದೆ. ಬಂದ ಲಾಭದಲ್ಲಿ ಕೂಡಾ ಕೆಲವು ಭಾಗವನ್ನು ಈ ಅನುತ್ಪಾದಕ ಆಸ್ತಿಗೆ ಪ್ರಾವಿಷನ್‌ ಹೆಸರಿನಲ್ಲಿ ವರ್ಗಾಯಿಸುತ್ತಿದ್ದು ಅನುತ್ಪಾದಕ ಸಾಲ ಹಳೆಯದಾದಷ್ಟು ಮತ್ತು ಭದ್ರತೆ ಕಡಿಮೆ ಇದ್ದಷ್ಟು, ಪ್ರಾವಿಷನ್‌ ಪ್ರಮಾಣ ಹೆಚ್ಚಾಗುತ್ತದೆ. ಇದು ಬ್ಯಾಂಕಿನ ನಿವ್ವಳ ಲಾಭದ ಮೇಲೆ ಪರಿಣಾಮ ಬೀರುತ್ತದೆ. ಲಾಭದ ಪ್ರಮಾಣ ಕಡಿಮೆಯಾದಂತೆ ಬ್ಯಾಂಕುಗಳ ಶೇರುಗಳು ದಕ್ಷಿಣಾಭಿಮುಖವಾಗಿ ಚಲಿಸತೊಡಗುತ್ತವೆ. ಶೇರುದಾರರಿಗೆ ಮತ್ತು ಸರ್ಕಾರಕ್ಕೆ ದೊರಕುವ ಡಿವಿಡೆಂಡ್‌ ಪ್ರಮಾಣ ಕೂಡ ಕಡಿಮೆಯಾಗುತ್ತಾ ಹೋಗುತ್ತದೆ. ಒಂದು ಬ್ಯಾಂಕಿನಲ್ಲಿ ಸುಸ್ತಿ ಸಾಲ ಅಥವಾ ಅನುತ್ಪಾದಕ ಆಸ್ತಿ ಹೆಚ್ಚಾದಂತೆ, ಅದರಲ್ಲಿ ಜನಸಾಮಾನ್ಯರ ವಿಶ್ವಾಸ ಕಡಿಮೆ ಯಾಗುತ್ತಾ ಹೋಗುತ್ತದೆ. ಅದರ ನಿರ್ವಹಣಾ ವೈಖರಿ ಬಗೆಗೆ ಪ್ರಶ್ನೆಗಳು ಆರಂಭವಾಗುತ್ತವೆ. ಬ್ಯಾಂಕುಗಳು ಸಾಲ ನೀಡುವಾಗ ಕಠಿಣ ಮತ್ತು ಮಡಿವಂತಿಕೆಯನ್ನು ತೋರಿಸಬಹುದು. ನಿಯಮಗಳನ್ನು ರೂಪಿಸಬಹುದು ಅಥವಾ ಹೆಚ್ಚಿನ ಭದ್ರತೆಯನ್ನು ಕೇಳಹುದು. ಒಂದು ರೀತಿಯ ಕ್ಲಾಸ್‌ ಬ್ಯಾಂಕಿಂಗ್‌ನತ್ತ ಒಲವು ತೋರಿಸಬಹುದು. ಸಾಲಗಳು ಮರುಪಾವತಿ ಯಾಗದಿದ್ದರೆ, ಫ‌ಂಡ್ಸ್‌ ಪುನರ್‌ ಬಳಕೆಗೆ ದೊರಕದೇ, ಬ್ಯಾಂಕ್‌ಗಳ ಸಾಲ ನೀಡಿಕೆಯಲ್ಲಿ ಕುಂಠಿತವಾಗಬಹುದು. ಸಾಲ ನೀಡಿಕೆಗೆ ಸರ್ಕಾರದ ಕ್ಯಾಪಿಟಲ್‌ ಅಥವಾ ಠೇವಣಿಯನ್ನು ಆಶ್ರಯಿಸುವ ಅನಿವಾರ್ಯತೆ ಬರಬಹುದು. ಸರ್ಕಾರ ಬ್ಯಾಂಕ್‌ಗಳಲ್ಲಿ ಕ್ಯಾಪಿಟಲ… ಹೂಡುವಾಗ ಕೆಲವು ಮಾನದಂಡಗಳನ್ನು ವಿಧಿಸುತ್ತಿದ್ದು, ಅನುತ್ಪಾದಕ ಆಸ್ತಿ ಅದರಲ್ಲಿ ಮುಖ್ಯವಾದದ್ದು. ಅನುತ್ಪಾದಕ ಆಸ್ತಿ ಹೆಚ್ಚಾದಷ್ಟು ಕ್ಯಾಪಿಟಲ… ದೊರಕುವ ಪ್ರಮಾಣ ಕಡಿಮೆಯಾಗುತ್ತದೆ. ಈ ವರ್ಷ ಈ ಮಾನದಂಡವನ್ನು ಪೂರೈಸಲಾಗದೇ ಕೆಲವು ಬ್ಯಾಂಕ್‌ಗಳು ಜಂಟಿಯಾಗಿ 6,500 ಕೋಟಿ ಸರ್ಕಾರದ ಕ್ಯಾಪಿಟಲ…ಅನ್ನು ಮಿಸ್‌ ಮಾಡಿಕೊಂಡಿವೆ. ಅನುತ್ಪಾದಕ ಆಸ್ತಿ ಹೆಚ್ಚಿದಂತೆ ಲಾಭದ ಪ್ರಮಾಣ ಕಡಿಮೆಯಾಗುತ್ತಿದ್ದು, ಅದು ಅಂತರಿಕವಾಗಿ ಕ್ಯಾಪಿಟಲ… ಹೆಚ್ಚಿಸಲು ತಡೆಯಾಗುತ್ತದೆ. ಹಾಗೆಯೇ ಅನುತ್ಪಾದಕ ಸಾಲ ವಸೂಲಾತಿಗೆ ತಗಲುವ ವೆಚ್ಚ ಕೂಡಾ ಗಮನಾರ್ಹವಾಗಿರುತ್ತದೆ. ಇದು ಬ್ಯಾಂಕಿಂಗ್‌ ಕ್ಷೇತ್ರಕ್ಕೆ ಅಮರಿಕೊಳ್ಳುವ ಅನಾವಶ್ಯಕವಾದ ಹೊರೆ. ಅದಕ್ಕೂ ಮಿಗಿಲಾಗಿ ಯಾವುದೇ ಸಾಲವನ್ನು ಒಮ್ಮೆ ಅನುತ್ಪಾದಕ ಆಸ್ತಿ ಎಂದು ಪರಿಗಣಿಸಿದರೆ, ಅದು ಬ್ಯಾಂಕ್‌ಗಳ ಸಿಬಿಲ… ವರದಿಯಲ್ಲಿ ನಮೂದಾಗುತ್ತಿದ್ದು, ಇದು ಸಾಲ ಫ‌ೂರ್ಣ ಮರುಪಾವತಿಯಾಗುವವರೆಗೆ ಸಾಲಗಾರನ ದಾಖಲೆಯಲ್ಲಿ ಕಪ್ಪು ಚುಕ್ಕೆಯಾಗಿ ಉಳಿಯುತ್ತದೆ. ಸಾಲಗಾರನ ಮುಂದಿನ ಬ್ಯಾಂಕ… ವ್ಯವಹಾರಗಳಲ್ಲಿ, ಆತನ ಸಾಲ ಬೇಡಿಕೆಗೆ ರೆಡ್‌ ಸಿಗ್ನಲ್‌ ಬೀಳುತ್ತದೆ. ತೀರಾ ಇತ್ತೀಚೆಗೆ Insolvency & Bankruptcy Code(IBC) ನಿರ್ಣಯದ ಮೂಲಕ ಬ್ಯಾಂಕ್‌ ಸಾಲ ವಸೂಲಿಗೆ ಸ್ವಲ್ಪ ಕಠಿಣವಾದ ಕ್ರಮವನ್ನು ತೆಗೆದುಕೊಂಡಿದೆ. ದೊಡ್ಡ ಸಾಲಗಳು ಇದರ ವ್ಯಾಪ್ತಿಗೆ ಬರುವಂತೆ ಮಾಡಲಾಗಿದೆ. ಈ ಪ್ರಕ್ರಿಯೆ 6 ತಿಂಗಳ ಸಮಯ ಪರಿಮಿತಿಯೊಳಗೆ ಮುಗಿಯುವಂತೆ ನಿಗಾವಹಿಸಲಾಗಿದೆ. ಹಾಗೆಯೇ ಇತ್ತಿಚೆಗಗೆ 2.11 ಲಕ್ಷ ಕ್ಯಾಪಿಟಲ… ಮರುಪೂರಣ ಮಾಡುವಾಗ ಬ್ಯಾಂಕಿಂಗ್‌ ಸುಧಾರಣೆಯ ಹಲವು ಕಟ್ಟಳೆಗಳನ್ನು ವಿಧಿಸಲಾಗಿದೆ. 5 ಕೋಟಿ ಮತ್ತು ಹೆಚ್ಚು ಅನುತ್ಪಾದಕ ಸಾಲಕ್ಕೆ ಜಾರಿದರೆ ವಾರಕ್ಕೊಮ್ಮೆ ರಿಸರ್ವ ಬ್ಯಾಂಕ… ಗೆ ಸಂಪೂರ್ಣ ಮಾಹಿತಿ ಕೊಡಬೇಕಾಗುತ್ತದೆ. ಇಷ್ಟೆಲ್ಲಾ ಕಾನೂನುಗಳು ಇದ್ದರೂ ಶ್ರೀಮಂತರ ಪಡೆದ ಸಾಲ ಹಿಂದಿರುಗಸದೇ ಇರುವುದು ಅಥವಾ ಸಾಲ ಪಡೆದು ದೇಶ ಬಿಟ್ಟು ಹೋದದ್ದು ಏಕೆ ಎಂದರೆ ಉತ್ತರ ಮಾತ್ರ ಸಿಗುವುದಿಲ್ಲ. ತೀರಾ ಇತ್ತಿಚೆಗಿನ ವರದಿಗಳ ಪ್ರಕಾರ, ಬ್ಯಾಂಕುಗಳಲ್ಲಿ ಅನುತ್ಪಾದಕ ಅಸ್ತಿಗಳ ಪ್ರಮಾಣ 9.50 ಲಕ್ಷ ಕೋಟಿಗಳು. ಇದು ಬ್ಯಾಂಕುಗಳ ಒಟ್ಟು ಸಾಲದ ಶೇ.10 ರಷ್ಟು ಎನ್ನಬಹುದು. ಇದಕ್ಕೆ ಮರುವಿನ್ಯಾಸಗೊಳಿಸಿದ ಸಾಲದ ಮೊತ್ತವನ್ನೂ ಸೇರಿಸಿದರೆ ಇದು 15ಲಕ್ಷ ಕೋಟಿಯನ್ನು ಮುಟ್ಟಬಹುದು ಎನ್ನುವ ಅಂದಾಜಿದೆ. 2015 -16 ರಲ್ಲಿ ಈ ಅನುತ್ಪಾದಕ ಸಾಲದಲ್ಲಿ ಕೇವಲ ಶೇ.20.15ರಷ್ಟು ಮರುಪಾವತಿಯಾಗಿದೆ. ಬ್ಯಾಂಕ್‌ಗಳ ಪ್ರಕಾರ ಒಂದು ಲಕ್ಷ ವಸೂಲು ಮಾಡುವ ಹೊತ್ತಿಗೆ ಐದು ಲಕ್ಷ ಅನುತ್ಪಾದಕ ಸಾಲದ ಮೊತ್ತಕ್ಕೆ ಹೊಸದಾಗಿ ಸೇರುತ್ತದೆ. ಬ್ಯಾಂಕ್‌ಗಳ ಬಹುಪಾಲು ಶಕ್ತಿ ಇಂಥ ವಸೂಲಾತಿ ಪ್ರಕ್ರಿಯೆಯಲ್ಲಿಯೇ ವ್ಯಯವಾಗುತ್ತದೆ. ಸಾಲ ವಸೂಲಾತಿಗಾಗಿ ಇರುವ ಸಾಲ ವಸೂಲಾತಿ ಮಂಡಳಿ, ಲೊಕ ಅದಾಲತ್‌ ಮತ್ತು ಸಫೇìಸಿ ಆಕ್ಟ್ 2002 ಗಳಲ್ಲಿ ಸುಮಾರು 2.86 ಲಕ್ಷಕೋಟಿ ಸಾಲಗಳು ತೀರ್ಮಾನಕ್ಕಾಗಿ ಕಾಯುತ್ತಿವೆ. ಇವುಗಳಲ್ಲಿ ಹೊಸದಾಗಿ ದಾಖಲಾಗುತ್ತಿರುವ ಪ್ರಕರಣಗಳು ಲೆಕ್ಕವಿಲ್ಲ.
OSCAR-2019
ಲಂಡನ್ ನಲ್ಲಿ ಮನೆ ಖರೀದಿ ಮಾಡಿದ್ದಾಳೆ ರಣವೀರ್ ಬೆಡಗಿ | Kannada Dunia | Kannada News | Karnataka News | India News ಪದ್ಮಾವತ್ ಚಿತ್ರ ಬಿಡುಗಡೆಗೆ ಕಾಯುತ್ತಿರುವ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಲಂಡನ್ ನಲ್ಲೊಂದು ಅಪಾರ್ಟ್ಮೆಂಟ್ ಖರೀದಿ ಮಾಡಿದ್ದಾಳೆ. ಹೊಸ ಮನೆಯಲ್ಲಿ ದೀಪಿಕಾ ಕೆಲ ಸಮಯ ಕಳೆಯಲು ಆಸೆ ಪಟ್ಟಿದ್ದಾಳಂತೆ. ಸಂಜಯ್ ಲೀಲಾ ಬನ್ಸಾಲಿ ಚಿತ್ರ ಪದ್ಮಾವತ್ ಬಿಡುಗಡೆಯಾಗಿ ಯಶಸ್ಸು ಕಂಡ್ರೆ ದೀಪಿ ಲಂಡನ್ ಗೆ ಹಾರಲಿದ್ದಾಳಂತೆ. ಹೊಸ ಮನೆಯಲ್ಲಿ ಕೆಲ ಸಮಯ ಕಳೆಯುವ ಯೋಜನೆ ದೀಪಿಕಾಗಿದೆ ಎಂದು ಮೂಲಗಳು ಹೇಳಿವೆ. ಕೆಲ ದಿನಗಳ ಹಿಂದೆ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್ ಸಿಂಗ್ ಗೋವಾದಲ್ಲಿ ಒಂದಾಗಿ ಆಸ್ತಿ ಖರೀದಿ ಮಾಡಿದ್ದಾರೆಂಬ ಸುದ್ದಿಯಿತ್ತು. ಈ ಬಗ್ಗೆ ಅಧಿಕೃತ ಹೇಳಿಕೆ ಬಂದಿಲ್ಲ. ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಮದುವೆ ನಂತ್ರ ದೀಪಿ ಹಾಗೂ ರಣವೀರ್ ಸುದ್ದಿಯಲ್ಲಿದ್ದಾರೆ. ಹೊಸ ವರ್ಷದ ನಂತ್ರ ಶ್ರೀಲಂಕಾದಲ್ಲಿ ಇಬ್ಬರೂ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಆದ್ರೆ ಎಂಗೇಜ್ ಆಗಿರುವ ಬಗ್ಗೆ ಮಾಧ್ಯಮಗಳಿಗೆ ಮಾಹಿತಿಯಿಲ್ಲ. ಸದ್ಯ ದೀಪಿಕಾ ಪದ್ಮಾವತ್ ಬಿಡುಗಡೆಗೆ ಕಾಯ್ತಿದ್ದಾಳೆ. ಜನವರಿ 25ರಂದು ಚಿತ್ರ ಬಿಡುಗಡೆಗೆ ಮತ್ತೊಂದು ಮುಹೂರ್ತವಿಡಲಾಗಿದೆ. ಆದ್ರೆ ಈ ಮುಹೂರ್ತದಲ್ಲೂ ಚಿತ್ರ ಬಿಡುಗಡೆಯಾಗೋದು ಅನುಮಾನ.
OSCAR-2019
ಶಿವಮೊಗ್ಗದಲ್ಲಿ ವಿಕಾಸ ಯಾತ್ರೆ ಮತ್ತು ರೈತರ ಕಣ್ಣಿರು ಪಾದಯಾತ್ರೆಯ ಸಮಾರಂಭದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ‘ ಶಿವಮೊಗ್ಗ ಜಿಲ್ಲೆ ಕೈಗಾರಿಕೆಯ ಎರಡು ಕಣ್ಣುಗಳು ಭದ್ರಾವತಿಯ
OSCAR-2019
ಟೀಮ್ ಇಂಡಿಯಾದ ಆರಂಭಿಕ ಬ್ಯಾಟ್ಸಮನ್, ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಸೋಮವಾರ 31ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಭಾರತ ತಂಡದ ಉಪನಾಯಕನಾಗಿರುವ ರೋಹಿತ್ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸುತ್ತಿದ್ದು, ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅಂತರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ 3 ದ್ವಿಶತಕ ಬಾರಿಸಿರುವ ವಿಶ್ವದ ಏಕೈಕ ಆಟಗಾರ ಎಂಬ ಹೆಗ್ಗಳಿಕೆ ರೋಹಿತ್ ಅವರದ್ದಾಗಿದೆ. ಸೊಗಸಾದ ಟೈಮಿಂಗ್ ಹೊಂದಿರುವ ಹಿಟ್ ಮ್ಯಾನ್ ರೋಹಿತ್, ಸಿಕ್ಸರ್, ಬೌಂಡರಿಗಳನ್ನು ಬಾರಿಸುತ್ತಿದ್ದರೆ ಎದುರಾಳಿ ತಂಡದ ಬೌಲರ್ ಗಳ ಪಾಡು ಹೇಳತೀರದು. ಸಾಮಾಜಿಕ ಜಾಲತಾಣದಲ್ಲಿ ಅಬಿಮಾನಿಗಳಿಂದ ರೋಹಿತ್ ಶರ್ಮಾಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಭಾರತದ ಮಾಜಿ ಆರಂಭಿಕ ಬ್ಯಾಟ್ಸಮನ್ ವೀರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿ, ಬರ್ತ್ ಡೇ ಬಾಯ್ ರೋಹಿತ್ ಗೆ ವಿಶೇಷವಾಗಿ ಶುಭಾಶಯ ಕೋರಿದ್ದಾರೆ. ಟೈಗರ್ ಜಿಂದಾ ಹೈ ಚಿತ್ರದ ಸಲ್ಮಾನ್ ಖಾನ್ ಅವರಂತೆ ಎಡಿಟ್ ಮಾಡಲಾಗಿರುವ ರೋಹಿತ್ ಫೋಟೊವೊಂದನ್ನು ಹಂಚಿಕೊಂಡಿರುವ ಸೆಹ್ವಾಗ್, ‘ ಟ್ಯಾಲೆಂಟ್ ಜಿಂದಾ ಹೈ ‘ ಎಂದು ತಮಾಷೆಯಾಗಿ ಶುಭಾಶಯ ಕೋರಿದ್ದಾರೆ.
OSCAR-2019
ಚಂಡೀಗಢ, ಮಾರ್ಚ್ 16: ಪಂಜಾಬಿ ಪಾಪ್ ಗಾಯಕ ದಲೇರ್ ಮೆಹಂದಿ ಅವರು ಮಾನವ ಕಳ್ಳಸಾಗಣೆ ಕೇಸ್ ನಲ್ಲಿ ತಪ್ಪಿತಸ್ಥ ಎಂದು ಪಟಿಯಾಲ ಕೋರ್ಟ್ ಆದೇಶ ನೀಡಿದೆ. 2003ರ ಮಾನವ ಕಳ್ಳಸಾಗಣೆ ಕೇಸ್ ನಲ್ಲಿ ಸ್ಟಾರ್ ಗಾಯಕ ದಲೇರ್ ಅವರು ದೋಷಿ ಎಂದು ಆದೇಶಿಸಲಾಗಿದೆ. ದಲೇರ್ ಹಾಗೂ ಅವರ ಸೋದರ ಷಂಶೇರ್ ಸಿಂಗ್ ಅವರು ತಮ್ಮ ಗಾನವೃಂದದ ಮೂಲಕ ಅಕ್ರಮವಾಗಿ ವಿದೇಶಕ್ಕೆ ಜನರನ್ನು ಕರೆದೊಯ್ದಿರುವ ಆರೋಪ ಹೊತ್ತಿದ್ದಾರೆ. 1998 ಹಾಗೂ 1999ರಲ್ಲಿ ಎರಡು ಬಾರಿ ವಿದೇಶಿ ಪ್ರವಾಸ ಕೈಗೊಂಡಿದ್ದರು. ಈ ವೇಳೆಯಲ್ಲಿ ಸುಮಾರು 10 ಮಂದಿಯನ್ನು ಗಾನವೃಂದದ ಸದಸ್ಯರು ಎಂದು ಹೇಳಿ,. ಯುಎಸ್ ಗೆ ಕರೆದೊಯ್ದ ಆರೋಪ ಹೊತ್ತುಕೊಂಡಿದ್ದರು. ಇದರ ವಿರುದ್ಧ ಅಕ್ರಮವಾಗಿ ಮಾನವ ಕಳ್ಳ ಸಾಗಣೆ ಪ್ರಕರಣ ದಾಖಲಾಗಿತ್ತು. 2006ರಲ್ಲಿ ಪಟಿಯಾಲ ಪೊಲೀಸರು ದಲೇರ್ ಮೆಹಂದಿ ಪರ ವರದಿ ಸಲ್ಲಿಸಿದ್ದರು. ಆದರೆ, ಮೆಹಂದಿ ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರಗಳು ಸಿಕ್ಕಿದ್ದರಿಂದ ತನಿಖೆ ನಡೆಸಲಾಗಿತ್ತು. ತನಿಖೆಯಿಂದ ಮೆಹಂದಿ ಅವರ ಮೇಲಿನ ಆರೋಪ ಸತ್ಯ ಎಂದು ಸಾಬೀತಾಗಿದ್ದು, ಮೆಹಂದಿ ಸೋದರರು ದೋಷಿ ಎಂದು ಕೋರ್ಟ್ ತೀರ್ಪು ನೀಡಿದೆ.
OSCAR-2019
ಕೋಲಾರ, ಫೆಬ್ರವರಿ 24: ನಿನ್ನೆ ರಾತ್ರಿ ಹುಟ್ಟಿದ ಶಿಸುವನ್ನು ಅಪರಿಚಿತರಾರೊ ಕದ್ದೊಯ್ದಿರುವ ಘಟನೆ ಕೆಜಿಎಫ್ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಚಲ್ದಿಗಾನಹಳ್ಳಿಯ ರವಿ, ಮತ್ತು ಮಾಲಾ ದಂಪತಿಗೆ ಕೆಜಿಎಫ್‌ನ ಸರ್ಕಾರಿ ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ 9 ಗಂಟೆಗೆ ಗಂಡು ಮಗು ಜನಿಸಿತ್ತು, ರಾತ್ರಿ ಮಲುಗುವಾಗ ತಾಯಿಯ ಪಕ್ಕದಲ್ಲೇ ಮಗುವನ್ನು ಮಲಗಿಸಲಾಗಿತ್ತು ಆದರೆ ಬೆಳೆಗೆದ್ದು ನೋಡಿದರೆ ಮಗು ಕಾಣೆ. ನವ ಮಾಸ ಹೊತ್ತು, ಹೆತ್ತಿದ್ದ ಕೂಸು ಕೆಲವೇ ಗಂಟೆಗಳಲ್ಲಿ ತನ್ನಿಂದ ದೂರಾಗಿರುವುದರಿಮಂದ ಘಾಸಿಗೊಳಗಾಗಿರುವ ತಾಯಿ ಮಾಲಾ ಆಕ್ರಂದನ ಮುಗಿಲು ಮುಟ್ಟಿದ್ದು, ಪೋಷಕರು ರಾಬರ್ಟ್‌ಸನ್‌ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಆಸ್ಪತ್ರೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆಗೆ ಆಸ್ಪತ್ರೆಯ ನಿರ್ಲಕ್ಷ್ಯವೇ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ. ಸ್ಥಳೀಯರೆ ಯಾರೊ ಮಗು ಕದ್ದಿರಬಹುದೆಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದು, ನಿಧಿ ಶೋಧಕರ ಕೃತ್ಯವೂ ಇರಬಹುದೆಂಬ ಊಹಾಪೋಹ ಹರಿದಾಡುತ್ತಿದೆ.
OSCAR-2019
ಬೆಂಗಳೂರು: ರಾಜಧಾನಿಯಲ್ಲಿ ಈರುಳ್ಳಿ ಬೆಲೆ ಮತ್ತೆ ಗಗನಮುಖಿಯಾಗಿದೆ. ಕೆಲ ದಿನಗಳ ಹಿಂದೆ ಈರುಳ್ಳಿ ಬೆಲೆಯಲ್ಲಿ ಇಳಿಕೆ ಕಂಡಿದ್ದರಿಂದ ಗ್ರಾಹಕರು ನಿರಾಳರಾಗಿದ್ದರು. ಆದರೆ ಎರಡು ದಿನಗಳಿಂದ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ. ವಾರದ ಹಿಂದೆ ಗುಣಮಟ್ಟದ ಈರುಳ್ಳಿ ಬೆಲೆ ಕೆ.ಜಿ ಗೆ 50 ರೂಪಾಯಿ ಇತ್ತು. ಈಗ ಸದ್ಯ ಚಿಲ್ಲರೆ ಮಾರುಕಟ್ಟೆಯಲ್ಲಿ ಗುಣಮಟ್ಟದ ದಪ್ಪ ಈರುಳ್ಳಿ ಬೆಲೆ ಕೆ.ಜಿ.ಗೆ 70 ರಿಂದ 75 ಮತ್ತು ಮಧ್ಯಮ ಗಾತ್ರದ ಈರುಳ್ಳಿ 50 ರಿಂದ 60 ರೂಪಾಯಿ ಆಗಿದೆ. ಹಾಗೆಯೇ ಚಿಲ್ಲರೆ ಮಾರಾಟದಲ್ಲಿ ಟೊಮೊಟೊ ಬೆಲೆ ಕೆ.ಜಿ.ಗೆ 40 ರಿಂದ 45 ರೂಪಾಯಿ ಇದೆ. ಈ ದರ ಇನ್ನೂ ಹೆಚ್ಚುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ಮೂಲಗಳು ಸ್ಪಷ್ಟಪಡಿಸಿವೆ. ಬೆಲೆಯ ಹಗ್ಗ ಜಗ್ಗಾಟ: ‘ಸಗಟು ಮಾರುಕಟ್ಟೆಯಲ್ಲಿ ಗುಣಮಟ್ಟದ ಈರುಳ್ಳಿ 50 ಕೆ.ಜಿ. ಚೀಲಕ್ಕೆ 3000 ದಿಂದ 3500 ರೂಪಾಯಿಗೆ ಏರಿಕೆಯಾಗಿದೆ. ಮಧ್ಯಮ ಗಾತ್ರದ ಈರುಳ್ಳಿ 3200 ರೂಪಾಯಿ ಇದೆ. ಸಗಟು ಮಾರುಕಟ್ಟೆಯಿಂದ ಚಿಲ್ಲರೆ ಮಾರುಕಟ್ಟೆಗೆ ಈರುಳ್ಳಿ ತಲುಪುವಾಗ ಬೆಲೆಯಲ್ಲಿ ಮತ್ತಷ್ಟು ಏರಿಕೆಯಾಗುತ್ತದೆ. ಇದಕ್ಕೆ ಸಾಗಣೆ ವೆಚ್ಚ, ದಲ್ಲಾಳಿಗಳ ಕಮಿಷನ್ ಹಾಗೂ ಇತರ ವೆಚ್ಚಗಳೇ ಕಾರಣ’ ಎಂದು ಯಶವಂತಪುರ ಎಪಿಎಂಸಿ ಮಾರುಕಟ್ಟೆಯ ಈರುಳ್ಳಿ ವ್ಯಾಪಾರಿ ಮಧು ‘ಪ್ರಜಾವಾಣಿ’ಗೆ ತಿಳಿಸಿದರು. ‘ಕಳೆದ ವಾರ 50 ಕೆ.ಜಿ ಈರುಳ್ಳಿ ಬೆಲೆ ಚೀಲಕ್ಕೆ 2000ದಿಂದ 2500 ರೂಪಾಯಿ ಇತ್ತು. ಕೇಂದ್ರ ಸರ್ಕಾರ ರಫ್ತು ನಿಷೇಧಿಸಿದ್ದರಿಂದ ಮಾರುಕಟ್ಟೆಯಲ್ಲಿ ಹೆಚ್ಚಿನ ಈರುಳ್ಳಿ ದಾಸ್ತಾನು ಆಗಿತ್ತು. ಇದರಿಂದಾಗಿ ಬೆಲೆ ಇಳಿಕೆಯಾಯಿತು. ಆದರೆ ಈಗ ಮತ್ತೆ ಈರುಳ್ಳಿಯ ಕೊರತೆ ಕಂಡು ಬಂದಿದ್ದರಿಂದ ಬೆಲೆ ಹೆಚ್ಚಳವಾಗಿದೆ. ಮಂಗಳವಾರ ಒಂದು ಚೀಲ ಈರುಳ್ಳಿಗೆ 2800 ರೂಪಾಯಿ ಇತ್ತು. ಬುಧವಾರದ ವೇಳೆಗೆ 400 ರಿಂದ 600 ರೂಪಾಯಿ ಹೆಚ್ಚಾಗಿದೆ. ಬೆಲೆ ಇನ್ನೂ ದಾಖಲೆ ಮಟ್ಟದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ’ ಎಂದು ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ‘ಗದಗ, ಹುಬ್ಬಳ್ಳಿ, ವಿಜಾಪುರದ ಹಾಗೂ ಮಹಾರಾಷ್ಟ್ರದ ಸೊಲ್ಲಾಪುರದಿಂದ ಅಧಿಕ ಪ್ರಮಾಣದಲ್ಲಿ ಈರುಳ್ಳಿ ಮಾರುಕಟ್ಟೆಗೆ ಬರುತ್ತಿತ್ತು. ಆದರೆ ಈಗ ಅಲ್ಲಿಂದ ಈರುಳ್ಳಿ ಬರುತ್ತಿಲ್ಲ. ಮಹಾರಾಷ್ಟ್ರದಿಂದ ಬರುವ ಈರುಳ್ಳಿ ಕಳಪೆ ಮಟ್ಟದ್ದಾಗಿದೆ. ಕೊಳೆತ ಮತ್ತು ಮೊಳಕೆ ಬಂದಿರುವ ಈರುಳ್ಳಿ ಅಲ್ಲಿಂದ ಬರುತ್ತಿದೆ. ಪರಿಣಾಮ ಈರುಳ್ಳಿಯ ಅಭಾವ ಸೃಷ್ಟಿಯಾಗಿದೆ. ಆದರೆ ಬೆಳ್ಳುಳ್ಳಿ ಚಿಲ್ಲರೆ ಮಾರಾಟ ದರದಲ್ಲಿ ಕೊಂಚ ಇಳಿಕೆ ಕಂಡು ಬಂದಿದ್ದು, ಕೆ.ಜಿ.ಗೆ 160 ರೂಪಾಯಿ ಆಗಿದೆ’ ಎಂದು ಅವರು ತಿಳಿಸಿದರು. ಲಾಭವಿಲ್ಲದೆ ಮಾರಾಟ: ‘ಹಾಪ್‌ಕಾಮ್ಸ್ ಮಳಿಗೆಗಳಲ್ಲಿ ಕೆ.ಜಿ. ಈರುಳ್ಳಿಯನ್ನು 59 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಹಾಗೆಯೇ ಟೊಮೊಟೊವನ್ನು 45 ರೂಪಾಯಿಗೆ ಮಾರಲಾಗುತ್ತಿದೆ. ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಯಲ್ಲಿ ಈರುಳ್ಳಿ ಮತ್ತು ಟೊಮೊಟೊ ಮಾರಾಟ ಮಾಡಲಾಗುತ್ತಿದೆ’ ಎಂದು ಹಾಪ್‌ಕಾಮ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಪರಶಿವಮೂರ್ತಿ ಹೇಳಿದರು. ‘ಗ್ರಾಹಕರಿಂದ ಯಾವುದೇ ಲಾಭಾಂಶದ ಪ್ರತಿಫಲಾಪೇಕ್ಷೆಯಿಲ್ಲದೇ ಕಡಿಮೆ ದರಕ್ಕೆ ಈರುಳ್ಳಿ ಮತ್ತು ಟೊಮೊಟೊ ಮಾರಾಟ ಮಾಡಲಾಗುತ್ತಿದೆ. ಕಡಿಮೆ ದರಕ್ಕೆ ಮಾರಾಟ ಮಾಡುತ್ತಿರುವುದರಿಂದ ಹಾಪ್‌ಕಾಮ್ಸ್‌ಗೆ ಶೇ 10ರಷ್ಟು ನಷ್ಟ ಸಂಭವಿಸುತ್ತಿದೆ. ಟೊಮೊಟೊ ಗೆ ಉತ್ತಮ ಬೆಲೆ ನೀಡಿ ರೈತರಿಂದಲೇ ನಿತ್ಯ ಖರೀದಿಸಲಾಗುತ್ತಿದೆ’ ಎಂದು ಅವರು ತಿಳಿಸಿದರು.‘ಚಿತ್ರದುರ್ಗ, ದಾವಣಗೆರೆಗಳಲ್ಲಿ ನೀರಾವರಿ ಪ್ರದೇಶದಲ್ಲಿ ಬೆಳೆಯುತ್ತಿರುವ ಈರುಳ್ಳಿ ಫೆಬ್ರುವರಿಗೆ ಬರುವ ಸಾಧ್ಯತೆ ಇದೆ. ಅಲ್ಲಿಯವರೆಗೆ ಈರುಳ್ಳಿ ಬೆಲೆಯಲ್ಲಿ ಏರು ಪೇರು ಉಂಟಾಗುತ್ತಲೇ ಇರುತ್ತದೆ’ ಎಂದು ತಿಳಿಸಿದರು.
OSCAR-2019
ಶಿರಸಿ: ಅಡಿಕೆ, ಕಾಳುಮೆಣಸು ಬೆಳೆಗೆ ತಗುಲಿದ ಕೊಳೆರೋಗಕ್ಕೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ರೈತರ ಬೃಹತ್ ಸಭೆ ಶನಿವಾರ ನಡೆಯಿತು. ಕೊಳೆರೋಗ ಬಂದು ಅಡಿಕೆ ಬೆಳೆ ಕೈ ಕಚ್ಚಿದೆ, ಕಾಳುಮೆಣಸು ಬಳ್ಳಿ ಇನ್ನು 4-5 ವರ್ಷ ಬೆಳೆ ಬರದಷ್ಟು ಸೊರಗಿದೆ ಎಂದು ರೈತರು ಅಭಿಪ್ರಾಯಪಟ್ಟರು. ತೋಟಗಾರಿಕಾ ವಿಶ್ವವಿದ್ಯಾಲಯದ ವಿಜ್ಞಾನಿಗಳು ಅಡಿಕೆಗೆ ಬಂದಿರುವ ರೋಗ ತಡೆಗಟ್ಟಲು ನಿರ್ದಿಷ್ಟ ಔಷಧ ಕಂಡುಹಿಡಿಯಲು ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಟಿಎಸ್ ಎಸ್ ಅಧ್ಯಕ್ಷ ಶಾಂತಾರಾಮ‌ ಹೆಗಡೆ, ಕೆಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಭಾಸ್ಕರ ಹೆಗಡೆ, ಪ್ರಮುಖರಾದ ಜಿ.ಎನ್. ಹೆಗಡೆ, ಭೀಮಣ್ಣ ನಾಯ್ಕ ಉಪಸ್ಥಿತರಿದ್ದರು. ಸಭೆಯ ನಂತರ ರೈತರು ಮೆರವಣಿಗೆಯಲ್ಲಿ ಸಾಗಿ ಉಪವಿಭಾಗಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದಾರೆ. ಎಲ್ಲ ಪ್ರಮುಖ ಪಕ್ಷಗಳ ಮುಖಂಡರು ಭಾಗಿಯಾಗಿದ್ದರು.
OSCAR-2019
ಭಾರತ ಮತ್ತು ಪಾಕಿಸ್ತಾನದ ಚುನಾಯಿತ ನಾಯಕರಿಂದ ಶಾಂತಿ ಸಂಧಾನಕ್ಕಾಗಿ ಅತ್ಯಂತ ದಿಟ್ಟತನದಿಂದ ಮತ್ತು ನಾಟಕೀಯವಾಗಿ ನಡೆದ ಪ್ರಯತ್ನದ (ಸಿಮ್ಲಾ ಒಪ್ಪಂದದ ಚೌಕಟ್ಟಿನಾಚೆಗೆ) ಅಜ್ಞಾತ ಕಥನವೊಂದನ್ನು ಹೇಳಲು, ಪಾಕಿಸ್ತಾನದ ಪ್ರಧಾನಮಂತ್ರಿಯಾಗಿ ಇಮ್ರಾನ್ ಖಾನ್ ಅವರು ಪ್ರಮಾಣವಚನ ಸ್ವೀಕರಿಸಿರುವ ಈ ಸಂದರ್ಭ ಅತ್ಯಂತ ಪ್ರಶಸ್ತವಾಗಿದೆ. ಆ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ ಇಬ್ಬರು ನಾಯಕರಲ್ಲಿ ಒಬ್ಬರು ಗುರುವಾರ ಅಸ್ತಂಗತರಾಗಿದ್ದಾರೆ. ಮತ್ತೊಬ್ಬರು, ಕ್ರೂರ ರಾವಲ್ಪಿಂಡಿ ಕಾರಾಗೃಹದಲ್ಲಿ ಬಂದಿಯಾಗಿದ್ದಾರೆ. ಆ ಸಾಹಸ ಕಥನದಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ವ್ಯಕ್ತಿಯೆಂದರೆ, ಇದೇ ಲೇಖಕನಾದ ನಾನು. ಇವೆಲ್ಲವುಗಳನ್ನೂ ಒಳಗೊಂಡ ಈ ವಾರದ ‘ರಾಷ್ಟ್ರಕಾರಣ’ ಅಂಕಣವು ಒಂದು ಬಗೆಯಲ್ಲಿ ಪ್ರಾಯಶ್ಚಿತ್ತದ ಸ್ವರೂಪದಿಂದಲೂ ಕೂಡಿದೆ. 1997ರಲ್ಲಿ ನವಾಜ್ ಷರೀಫ್ ಅವರು ಎರಡನೇ ಅವಧಿಗೆ ಅಧಿಕಾರಕ್ಕೆ ಏರುವಲ್ಲಿ ಸಫಲರಾಗಿದ್ದರು. ಇದಾದ ಕೆಲವೇ ಸಮಯದಲ್ಲಿ, ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದ ಎನ್‍ಡಿಎ ಭಾರತದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಿತು. ಆ ಅವಧಿಯಲ್ಲಿ ಒಂದಷ್ಟು ಸಮಯದಿಂದ ಭಾರತ– ಪಾಕಿಸ್ತಾನದ ನಡುವಿನ ಸಂಬಂಧ ತಟಸ್ಥವಾಗಿತ್ತು. ವಾಜಪೇಯಿ ನೇತೃತ್ವದ ಸರ್ಕಾರ ಜಗತ್ತೇ ನಿಬ್ಬೆರಗಾಗುವಂತೆ ಪೊಖ್ರಾನ್– 2 ಅಣು ಪರೀಕ್ಷೆ ನಡೆಸಿದ್ದರಿಂದ ಹಾಗೂ ಅದಕ್ಕೆ ಪ್ರತಿಯಾಗಿ ಏಟಿಗೆ ಎದಿರೇಟು ಎನ್ನುವಂತೆ ಪಾಕಿಸ್ತಾನವೂ ಚಗೈನಲ್ಲಿ ಪರಮಾಣು ಪರೀಕ್ಷೆ ನಡೆಸಿದ್ದರಿಂದ, ಉಭಯ ರಾಷ್ಟ್ರಗಳ ನಡುವೆ ಪರಮಾಣು ದ್ವಂದ್ವ ಯುದ್ಧವೇ ಏರ್ಪಟ್ಟು ದ್ವಿಪಕ್ಷೀಯ ಸಂಬಂಧ ತೀರಾ ಹದಗೆಟ್ಟಿತು. ತರುವಾಯ, 1998ರ ಅಂತಿಮ ತ್ರೈಮಾಸಿಕದ ವೇಳೆಗೆ ಎರಡೂ ಕಡೆ ಅಸಹನೆ ಎದ್ದು ಕಾಣುತ್ತಿತ್ತು. ಇಬ್ಬರೂ ಹೊಸ ನಾಯಕರಿಗೆ ಶಾಂತಿ ಸಂಧಾನದ ವೇದಿಕೆ ಅಗತ್ಯವಿತ್ತು. ಆದರೆ, ಇದನ್ನು ಸಾಧಿಸಲು ಎರಡೂ ಕಡೆಯ ವ್ಯವಸ್ಥೆಗಳು ಪರಸ್ಪರ ಅವಿಶ್ವಾಸದಿಂದ ತುಂಬಿಹೋಗಿದ್ದವು. ದೆಹಲಿ– ಲಾಹೋರ್ ನಡುವೆ ಬಸ್ ಸಂಚಾರ ಸೇವೆ ಆರಂಭಿಸುವ ಸಲಹೆ ಕೂಡ ಅಧಿಕಾರಶಾಹಿಯ ಕುತರ್ಕದಂತೆಯೇ ಭಾಸವಾಗುತ್ತಿತ್ತು. ಚಳಿಗಾಲ ಆರಂಭದ ಈ ಸಂದರ್ಭದಲ್ಲಿ, ಪಾಕಿಸ್ತಾನದಿಂದ ನನ್ನ ಅಂಚೆ ಪೆಟ್ಟಿಗೆಗೆ ಒಂದು ಪತ್ರ ಬಂದು ತಲುಪಿತ್ತು. ‘ಪಾಕಿಸ್ತಾನದ ಪ್ರಧಾನ ಮಂತ್ರಿಯವರಿಂದ’ ಎಂಬ ಅಚ್ಚು ಹೊತ್ತಿದ್ದ ಆ ಲಕೋಟೆಯು ಹಲವು ವಾರಗಳ ಕಾಲದ ಪಯಣದ ನಂತರ ನನ್ನನ್ನು ತಲುಪಿದೆ ಎಂಬುದು ಅದನ್ನು ಗಮನಿಸಿದಾಗಲೇ ನನ್ನ ಅರಿವಿಗೆ ಬಂದಿತು. ಆ ಲಕೋಟೆಯ ಪ್ರಯಾಣವೇನೂ ಸುಗಮವಾಗಿರಲಿಕ್ಕಿಲ್ಲ ಎಂಬುದೂ ಅದನ್ನು ನೋಡಿದರೇ ತಿಳಿಯುತ್ತಿತ್ತು. ಪಾಕಿಸ್ತಾನದ ಪ್ರಧಾನಿಯಿಂದ ಅಂತಹದ್ದೊಂದು ಪತ್ರ ಸಾಮಾನ್ಯ ಅಂಚೆಯಲ್ಲಿ ಹೀಗೆ ಬಂದಿದ್ದುದನ್ನು ಈ ಹಿಂದೆಂದೂ ನೋಡಿರದ ಹಲವಾರು ಸಂಸ್ಥೆಗಳು, ಬಹುಶಃ ಆ ಲಕೋಟೆಯನ್ನು ತೆರೆದು ನೋಡಿ ಮತ್ತೆ ಮುಚ್ಚಿರುವ ಸಾಧ್ಯತೆ ಇತ್ತು. ಆ ಪತ್ರದಲ್ಲಿ ಕೆಡುಕಿನ ಯಾವ ಉದ್ದೇಶವೂ ಇರಲಿಲ್ಲ. ಸಂದರ್ಶನಕ್ಕಾಗಿ ಅವಕಾಶ ನೀಡಬೇಕೆಂಬ ಕೆಲವು ತಿಂಗಳುಗಳ ಮುಂಚಿನ ನನ್ನ ಕೋರಿಕೆಗೆ ತಡವಾಗಿ ಬಂದ ಆರ್ದ್ರವಾದ ಪ್ರತಿಕ್ರಿಯೆ ಅದಾಗಿತ್ತು. ಇದಾದ ಮೇಲೆ ನಾನು ಇಸ್ಲಾಮಾಬಾದ್‍ನ ಅವರ ಕಚೇರಿಗೆ ಕರೆ ಮಾಡಿ ಸಂದೇಶವನ್ನು ತಲುಪಿಸಿದೆ. ನವಾಜ್‌ ಷರೀಫ್ ಅವರು ಮತ್ತೆ ಕರೆ ಮಾಡಿ, ಸಂದರ್ಶನಕ್ಕಾಗಿ ಯಾಕೆ ಪಾಕಿಸ್ತಾನಕ್ಕೆ ಬರಬಾರದು ಎಂದು ನನ್ನನ್ನು ಕೇಳಿದರು. ನಮ್ಮ ಪ್ರಧಾನಮಂತ್ರಿಗಳು ಯಾವುದಕ್ಕೂ ಚಾಲನೆ ನೀಡಲು ಸಾಧ್ಯವಿಲ್ಲವೆಂದಾದರೆ, ಸಂದರ್ಶನಗಳನ್ನು ನಡೆಸಿ ಪ್ರಯೋಜನವೇನು ಎಂದು ನಾನು ಕೇಳಿದೆ. ದೊಡ್ಡ ಒಪ್ಪಂದಗಳನ್ನು ಬಿಡಿ, ನಿಮಗೆ ಕೇವಲ ಬಸ್ ಓಡಿಸಲು ಕೂಡ ಸಾಧ್ಯವಾಗುತ್ತಿಲ್ಲ ಎಂದು ಹೇಳಿದೆ. ಷರೀಫ್ ಅವರು ಅದೇ ತೆರೆಮರೆಯ ರಾಜತಾಂತ್ರಿಕ ಸಮಸ್ಯೆಗಳ ಬಗ್ಗೆ ಗೊಣಗುಟ್ಟಿದರು. ಪಂಜಾಬಿ ಭಾಷೆಯಲ್ಲಿ ತುಂಬಾ ಲಘು ಧಾಟಿಯಲ್ಲಿ ನಡೆದ ಆ ಮಾತುಕತೆಯ ಸಂದರ್ಭದಲ್ಲಿ, ನೀವು ಬಸ್ ಸಂಚಾರದ ಬಗ್ಗೆ ಸಂದರ್ಶನದಲ್ಲಿ ಪ್ರಕಟಣೆ ಹೊರಡಿಸಿ, ಅದರ ಮೊದಲ ಸಂಚಾರದಲ್ಲಿ ಪಾಕಿಸ್ತಾನಕ್ಕೆ ನಮ್ಮ ಪ್ರಧಾನಿಯವರನ್ನು ಆಹ್ವಾನಿಸಬಾರದೇಕೆ ಎಂದು ಹೇಳಿದೆ. ಷರೀಫ್ ಅವರಿಗೆ ಈ ಸಲಹೆ ತುಂಬಾ ಇಷ್ಟವಾಯಿತಲ್ಲದೆ, ಈ ಚಿಂತನೆಯನ್ನು ಅವರು ಬಲು ಗಂಭೀರವಾಗಿಯೂ ಪರಿಗಣಿಸಿದರು. ಆದರೆ ಅವರಿಗೊಂದು ಚಿಂತೆಯೂ ಇತ್ತು. ಒಂದೊಮ್ಮೆ ತಾವು ಅವರನ್ನು ಆಹ್ವಾನಿಸಿ, ಅದನ್ನು ಅವರು ತಿರಸ್ಕರಿಸಿಬಿಟ್ಟರೆ ನಿಜವಾಗಿಯೂ ಅದು ಬಹಳ ಕೆಟ್ಟದಾಗಿ ತೋರುತ್ತದೆ ಎಂಬುದು ಅವರ ಅನಿಸಿಕೆಯಾಗಿತ್ತು. ನಾನು ಇದರ ಬಗ್ಗೆ ತಿಳಿದುಕೊಳ್ಳುತ್ತೇನೆ ಎಂದು ಹೇಳಿದೆ. ಅದಾದ ನಂತರ ಈ ಬಗ್ಗೆ ನಾನು ಖಚಿತಪಡಿಸಿಕೊಂಡೆ. ವಾಜಪೇಯಿ ಅವರಿಗೂ ಈ ಚಿಂತನೆ ಇಷ್ಟವಾಯಿತು. ಆದರೆ, ಪಾಕಿಸ್ತಾನದಿಂದ ವಾಪಸು ಬಂದು ತಮ್ಮನ್ನು ನೋಡದ ಹೊರತು ಸಂದರ್ಶನವನ್ನು ಪ್ರಕಟಿಸಬಾರದು ಎಂದಷ್ಟೇ ಅವರು ಹೇಳಿದರು. ಷರೀಫ್ ಅವರ ಲಾಹೋರ್‍ನ ಮನೆಯಲ್ಲಿ ನಡೆದ ಸಂದರ್ಶನದಲ್ಲಿ, ಪಾಕಿಸ್ತಾನದ ಕ್ರಿಕೆಟ್ ತಂಡದ ವಿರುದ್ಧ ಭಾರತದ ಸಚಿನ್ ತೆಂಡೂಲ್ಕರ್ ಅವರ ಅಮೋಘ ಆಟವನ್ನು ನೋಡನೋಡುತ್ತಲೇ ನಡೆದ ಆ ಸಂದರ್ಶನದಲ್ಲಿ, ಷರೀಫ್ ಅವರು ತಾವು ಆಡಿದ ಮಾತನ್ನು ಉಳಿಸಿಕೊಂಡರು. ಅದರಂತೆ ಬಸ್ ಸಂಚಾರ ಸೇವೆಯನ್ನು ಪ್ರಕಟಿಸಿ, ಮೊದಲ ಬಸ್‍ನಲ್ಲಿ ತಮ್ಮ ದೇಶಕ್ಕೆ ಆಗಮಿಸುವಂತೆ ವಾಜಪೇಯಿ ಅವರನ್ನು ಆಹ್ವಾನಿಸಿದರು. ಚರಿತ್ರೆಯು ನೆನಪಿಟ್ಟುಕೊಳ್ಳುವಂತಹ ರೀತಿಯಲ್ಲಿ ಭಾರತದ ಪ್ರಧಾನಿಯನ್ನು ಸ್ವಾಗತಿಸುವ ಖಾತರಿಯನ್ನು ಅವರು ನೀಡಿದರು. ಈ ಸಂದರ್ಶನವನ್ನು ಒಂದು ದಿನದ ಮಟ್ಟಿಗೆ ತಡೆದು ಪ್ರಕಟಿಸುವಂತೆ ವಾಜಪೇಯಿ ಅವರು ನನ್ನಲ್ಲಿ ಕೇಳಿಕೊಂಡರು. ಮರುದಿನ ಬೆಳಿಗ್ಗೆ ತಾವು ಲಖನೌಗೆ ಭೇಟಿ ನೀಡುವ ದಿನದಂದು ಸಂದರ್ಶನ ಪ್ರಕಟವಾಗಬೇಕು ಎಂಬುದು ವಾಜಪೇಯಿ ಅವರ ಇಚ್ಛೆಯಾಗಿತ್ತು. ಷರೀಫ್ ಅವರ ಆಹ್ವಾನದ ಬಗ್ಗೆ ವರದಿಗಾರರೊಬ್ಬರು ಪ್ರಶ್ನೆ ಕೇಳಬೇಕು ಎಂಬುದನ್ನೂ ವಾಜಪೇಯಿ ಖಚಿತಪಡಿಸಿಕೊಂಡರು. ವಿದೇಶಾಂಗ ವ್ಯವಹಾರ ಸಚಿವಾಲಯವು ತನ್ನ ಎಂದಿನ ಸಂದೇಹಗಳನ್ನು ಮುಂದಿಡುವ ಮುನ್ನವೇ ತಾವು ಈ ಆಹ್ವಾನವನ್ನು ಒಪ್ಪಿಕೊಳ್ಳುವುದಾಗಿಯೂ ಅವರು ತಿಳಿಸಿದ್ದರು. ಅದಾದ ನಂತರ ಏನಾಯಿತೆಂಬುದು ಇತಿಹಾಸದಲ್ಲಿ ಸ್ಪಷ್ಟವಾಗಿ ದಾಖಲಾಗಿರುವ ಸಂಗತಿಯೇ ಆಗಿದೆ. ವಾಜಪೇಯಿ ಅವರ ಪಾಕಿಸ್ತಾನ ಭೇಟಿಯು ನಡೆದು ಹಲವಾರು ನಾಟಕೀಯ ಬೆಳವಣಿಗೆಗಳಿಗೆ ಕಾರಣವಾಯಿತು. ಈ ಭೇಟಿಯ ವಿರುದ್ಧ ಪಾಕಿಸ್ತಾನದಲ್ಲಿ ಕೆಲವು ಭಿನ್ನಾಭಿಪ್ರಾಯಗಳು ವ್ಯಕ್ತವಾದವು. ವಿಶೇಷವಾಗಿ, ವಾಜಪೇಯಿ ಅವರನ್ನು ಸ್ವಾಗತಿಸುವ ಸಂದರ್ಭದಲ್ಲಿ, ಪಾಕಿಸ್ತಾನದ ಸೇನಾ ಮುಖ್ಯಸ್ಥರಾಗಿದ್ದ ಜನರಲ್ ಪರ್ವೇಜ್ ಮುಷರಫ್ ಅವರು ವಂದನೆ ಸಲ್ಲಿಸಲು ನಿರಾಕರಿಸಿದರು. ವಾಜಪೇಯಿ ಅವರು ಮಿನಾರ್–ಎ– ಪಾಕಿಸ್ತಾನ್‍ನ ಮೆಟ್ಟಿಲುಗಳನ್ನು ಏರಿ, ಸ್ಥಿರ ಮತ್ತು ಪ್ರಗತಿಪರ ಪಾಕಿಸ್ತಾನವು ಭಾರತದ ಹಿತಾಸಕ್ತಿಗೆ ಪೂರಕ ಎಂಬ ಮಾತುಗಳನ್ನಾಡಿದರು. ಎರಡೂ ರಾಷ್ಟ್ರಗಳ ನಡುವೆ ಹೊಸ ಇತಿಹಾಸವೇ ಸೃಷ್ಟಿಯಾದಂತೆ ಗೋಚರಿಸಿತು. ಆದರೆ, ನಾನು ಅಂತಹ ಪರಿಸ್ಥಿತಿಗೆ ಸಿಲುಕಿಕೊಂಡಿದ್ದು ಅದೇ ಮೊದಲು ಹಾಗೂ ಕಡೆಯ ಬಾರಿ ಕೂಡ. ಇಂದು ಕೆಲವರು ಈ ಸಂದರ್ಶನವನ್ನು ‘ಒಳ ಒಪ್ಪಂದ’ ಎಂದು ವ್ಯಾಖ್ಯಾನಿಸಬಹುದು. ಅದಾಗಿದ್ದೇ ಆದರೆ, ಅದೊಂದು ಉತ್ತಮ ಉದ್ದೇಶಕ್ಕಾಗಿ ಏರ್ಪಟ್ಟ ಒಳ ಒಪ್ಪಂದ ಅಷ್ಟೆ. ಅದೊಂದು ಸ್ಫೋಟಕ ಸುದ್ದಿ ಸಹ ಹೌದು. ಆದರೆ ಅದು ನನಗೆ ಒಂದು ರೀತಿ ಯಾತನಾದಾಯಕವೂ ಆಗಿತ್ತು. ಹೀಗಾಗಿ, ಇನ್ನೊಮ್ಮೆ ಇಂತಹ ಸಾಹಸ ಬೇಡ ಎಂದು ನನ್ನಲ್ಲಿ ನಾನೇ ಸಂಕಲ್ಪ ಮಾಡಿಕೊಂಡೆ. ಈ ಕಥನ ಅಲ್ಲಿಗೇ ಮುಗಿಯಲಿಲ್ಲ. ಎರಡೂ ರಾಷ್ಟ್ರಗಳ ಪ್ರಧಾನಿಗಳು ಶಾಂತಿ ಸಂಧಾನದ ವೇದಿಕೆ ಸಿದ್ಧಪಡಿಸಿದ ಗುಂಗಿನಲ್ಲಿ ಇದ್ದಾಗಲೇ, ಅವರಿಗೇ ಗೊತ್ತಿಲ್ಲದಂತೆ ಪಾಕಿಸ್ತಾನಿ ಸೇನೆಯು ಕಾರ್ಗಿಲ್‍ನಲ್ಲಿ ಹಲವಾರು ಮೈಲುಗಳವರೆಗೆ ನುಸುಳಿ ಸುರಂಗವನ್ನು ಕೊರೆದಿತ್ತು. ಮೇ ತಿಂಗಳ ಮಧ್ಯದ ಅವಧಿಯಲ್ಲಿ ಉಭಯ ರಾಷ್ಟ್ರಗಳ ಸೇನೆಗಳ ನಡುವೆ ಚಕಮಕಿ ನಡೆಯಿತು. ಈ ನಾಟಕೀಯ ತಿರುವುಗಳನ್ನು ಯಾರೂ ಎಣಿಸಿರಲೇ ಇಲ್ಲ. ನಾನು ಉಳಿದುಕೊಂಡಿದ್ದ ಮುಂಬೈ ಹೋಟೆಲಿನ ಕೊಠಡಿಯ ಫೋನ್ ಬೆಳ್ಳಂಬೆಳಿಗ್ಗೆ 6.30ಕ್ಕೇ ಸದ್ದು ಮಾಡಿತು. ‘ಪ್ರಧಾನಮಂತ್ರಿಯವರು ತಮ್ಮೊಂದಿಗೆ ಮಾತನಾಡಬೇಕಂತೆ’ ಎಂದು ಅತ್ತಲಿನ ಧ್ವನಿ ಹೇಳಿತು. ಫೋನ್ ಕರೆಗೆ ಬಂದ ಅವರು ‘ಯೇ ಕ್ಯಾ ಕರ್‌ ರಹಾ ಹೈ ಮಿತ್ರ್‌ ಆಪ್‌ಕಾ’ (ನಿಮ್ಮ ಗೆಳೆಯರು ಇದೇನು ಮಾಡುತ್ತಿದ್ದಾರೆ) ಎಂದು ಕೇಳಿದರು. ಪಾಕಿಸ್ತಾನದ ಸೇನಾ ಮುಖ್ಯಸ್ಥರು ಚೀನಾಕ್ಕೆ ಭೇಟಿ ನೀಡಿರುವ ಸಂದರ್ಭದಲ್ಲಿ, ಪರಿತ್ಯಕ್ತ ಮುಜಾಹಿದ್ದೀನ್‍ಗಳು ಹೇಗಾದರೂ ಕ್ಷಿಪಣಿಗಳನ್ನು ಹೊಂದಲು ಸಾಧ್ಯ ಎಂದು ಪ್ರತಿಯೊಬ್ಬರೂ ಅಚ್ಚರಿಗೊಂಡಿದ್ದಾರೆ ಎಂದು ಅವರು ಹೇಳಿದರು. ಇದೆಂತಹ ಅನಿಷ್ಟವಾದದ್ದು ನಡೆಯುತ್ತಿದೆ ಎಂದು ನಿಮ್ಮ ಸ್ನೇಹಿತರನ್ನು ಕೇಳುವಿರಾ ಎಂದೂ ಕೇಳಿದರು. ನಂತರ ನಾನು ಇಸ್ಲಾಮಾಬಾದ್‍ಗೆ ಕರೆ ಮಾಡಿ ಎಂದಿನಂತೆ ಸಂದೇಶವನ್ನು ಬಿಟ್ಟೆ. ಅದೇ ರಾತ್ರಿ ಅಲ್ಲಿಂದ ಕರೆ ಬಂತು. ನವಾಜ್ ಷರೀಫ್ ಅವರೂ ವಾಜಪೇಯಿ ಅವರಂತೆಯೇ ವಿಚಲಿತರಾಗಿದ್ದುದು ಅವರ ಧ್ವನಿಯಿಂದ ಸ್ಪಷ್ಟವಾಯಿತು. ‘ನಾನು ಯವುದೇ ಒಳಸಂಚು ಮಾಡಿಲ್ಲ ಎಂದು ನೀವು ಅವರಿಗೆ ಹೇಳಬಹುದು. ಗಡಿ ನಿಯಂತ್ರಣ ರೇಖೆಯಲ್ಲಿ ಎಂದಿನಂತೆ ಕೆಲವು ಚಕಮಕಿಗಳು ನಡೆದವು ಎಂದು ನಿನ್ನೆ ನನಗೆ ಹೇಳಿದ್ದರು ಮತ್ತು ಇಂದು ವಾಯುಗಡಿ ಉಲ್ಲಂಘನೆ ಪ್ರಕರಣಗಳನ್ನೂ ವರದಿ ಮಾಡಿದ್ದಾರೆ. ಇವೆಲ್ಲವುಗಳಿಂದ ನನಗೂ ಅಚ್ಚರಿಯಾಗಿದೆ’ ಎಂದರಲ್ಲದೆ, ವಾಜಪೇಯಿ ಅವರೊಂದಿಗೆ ಮಾತುಕತೆ ನಡೆಸುವ ಇಂಗಿತವನ್ನೂ ವ್ಯಕ್ತಪಡಿಸಿದರು. ಇದಾದ ಮೇಲೆ ವಾಜಪೇಯಿ ಮತ್ತು ಬ್ರಜೇಶ್ ಮಿಶ್ರಾ ಅವರು ನನಗೆ ಕರೆ ಮಾಡಿದರು. ‘ಜನರಲ್ ಮುಷರಫ್ ಮತ್ತು ಅವರ ಅಧೀನ ಸಹೋದ್ಯೋಗಿಯ ನಡುವಿನ ಫೋನ್ ಸಂಭಾಷಣೆಗಳನ್ನು ‘ನಮ್ಮವರು’ ಭೇದಿಸಿದ್ದು, ಆ ಪ್ರಕಾರ ಕಾರ್ಗಿಲ್‍ನಲ್ಲಿ ನಡೆದಿರುವುದು ಅಪ್ಪಟ ಸೇನಾ ಕಾರ್ಯಾಚರಣೆಯೆಂದು ದೃಢಪಟ್ಟಿದೆ. ಹೀಗಾಗಿ, ನೀವು ಮತ್ತೊಂದು ಸಂದರ್ಶನದ ನೆಪದಲ್ಲಿ ಇಸ್ಲಾಮಾಬಾದ್‍ಗೆ ಹೋಗಿ, ನವಾಜ್ ಷರೀಫ್ ಅವರಿಗೆ ಈ ಧ್ವನಿಸುರುಳಿಗಳ ಬಗ್ಗೆ ಹೇಳುವಿರಾ’ ಎಂದು ಕೇಳಿದರು. ಆದರೆ ಈ ಬಾರಿ ನಾನು ಎಚ್ಚರಿಕೆ ವಹಿಸಿದೆ. ನಾನು ಮಾಡಲಾರೆ ಹಾಗೂ ನಾನು ಇದನ್ನು ಮಾಡಬಾರದು ಎಂದು ವಿನಯದಿಂದಲೇ ಅವರಿಗೆ ಹೇಳಿದೆ. ಈ ಮುಂಚೆ ನಾನು ನಡೆಸಿದ್ದ ಸಂದರ್ಶನ ಒಂದು ಅಪ್ಪಟ ಸ್ಕೂಪ್ ಆಗಿದ್ದು, ಬಸ್ ಸಂಚಾರ ಸೇವೆಯು ಇಬ್ಬರಿಗೂ ದ್ವಿಪಕ್ಷೀಯ ಲಾಭ ತರುವಂತಹದ್ದಾಗಿತ್ತು. ಆದರೆ ಈಗಿನ ಕೋರಿಕೆಯು ಪತ್ರಿಕೋದ್ಯಮವನ್ನು ಮೀರಿದ ಸಂಗತಿಯಾಗಿತ್ತು. ಇದನ್ನು ಅವರಿಬ್ಬರೂ ಅರ್ಥ ಮಾಡಿಕೊಂಡರು. ನಂತರ, ಮತ್ತೊಬ್ಬ ಮಾಜಿ ಸಂಪಾದಕರನ್ನು ಈ ಕೆಲಸ ಮಾಡಲು ಕೋರಿದರು. ಆಗ ಅಬ್ಸರ್ವರ್ ರಿಸರ್ಚ್ ಫೌಂಡೇಷನ್‍ನಲ್ಲಿದ್ದ ಆರ್‍.ಕೆ.ಮಿಶ್ರಾ ಅವರು ಇಸ್ಲಾಮಾಬಾದ್‍ಗೆ ಹಲವಾರು ಸಲ ತೆರಳಿದರು. ಅವರು ಷರೀಫ್ ಅವರಿಗೆ ಆ ಭೇದಿತ ಧ್ವನಿಸುರುಳಿಗಳನ್ನೂ ತಲುಪಿಸಿದರು. ಪತ್ರಿಕೋದ್ಯಮಕ್ಕೆ ಹೊರತಾದ ನನ್ನ ಸಾಹಸ ಅಲ್ಲಿಗೆ ಕೊನೆಗೊಂಡಿತು. ಪಾಕಿಸ್ತಾನದ ಹೊಸ ಪ್ರಧಾನ ಮಂತ್ರಿಗೆ ಇದರಲ್ಲಿ ಹಲವಾರು ಪಾಠಗಳು ಅಡಗಿವೆ. ಮೊದಲನೆಯದಾಗಿ, ಭಾರತದೊಂದಿಗೆ ಶಾಂತಿ ಸಂಧಾನದ ಪ್ರಯತ್ನವೇ ಗಂಡಾಂತರಕಾರಿ ಯೋಚನೆ ಹಾಗೂ ಜನರಲ್ ಆಣತಿಯ ಮೇರೆಗೆ ಇದನ್ನು ಮಾಡಲು ಹೋಗುವುದು ನಿಶ್ಚಿತವಾಗಿಯೂ ಆತ್ಮಹತ್ಯಾತ್ಮಕವಾದುದು. ಎರಡನೆಯದಾಗಿ, ಪಾಕಿಸ್ತಾನದ ಸೇನೆಯು ಇದುವರೆಗೆ ಯಾವುದೇ ಚುನಾಯಿತ ಪ್ರಧಾನಿಗೆ ತನ್ನ ರಾಷ್ಟ್ರದಲ್ಲಿ ಪೂರ್ಣಾವಧಿ ಅಧಿಕಾರ ನಡೆಸಲು ಅವಕಾಶ ಮಾಡಿಕೊಟ್ಟಿಲ್ಲ. ಮೂರನೆಯದು, ಪಾಕಿಸ್ತಾನದ ಪ್ರತಿಯೊಬ್ಬ ಚುನಾಯಿತ ಪ್ರಧಾನಿಯೂ ಕೊನೆಗೆ ಗಡಿಪಾರಿನಲ್ಲೋ ಜೈಲಿನಲ್ಲೋ ಹತ್ಯೆಗೀಡಾಗಿಯೋ ಅಥವಾ ಬೆನಜೀರ್ ಭುಟ್ಟೊ ಅವರ ಪ್ರಕರಣದಲ್ಲಾದಂತೆ ಈ ಮೂರನ್ನೂ ಅನುಭವಿಸಿಯೋ ಅಂತ್ಯಗೊಂಡಿದ್ದಾರೆ. ಇಮ್ರಾನ್ ಖಾನ್‍ ಅವರು ಬದುಕಿನಲ್ಲಿ ಸಾಕಷ್ಟು ಸಂಕಷ್ಟಗಳನ್ನು ಅನುಭವಿಸಿದ್ದಾರೆ: ಕ್ರಿಕೆಟ್‍, ಸಂಬಂಧ, ವಿವಾಹ ಮತ್ತು ರಾಜಕೀಯ ಈ ಎಲ್ಲದರಲ್ಲೂ. ಆದರೆ ಅವರ ರಾಷ್ಟ್ರದಲ್ಲಿ ಮೂಲಭೂತ ಅಧಿಕಾರ ಸಮೀಕರಣ ಮಾತ್ರ ಎಂದಿನಂತೆಯೆ ಬದಲಾಗದೇ ಉಳಿದಿದೆ. ಅದು ಏನನ್ನಾದರೂ ಮಾಡಿದ್ದರೆ, ಕಳೆದ ದಶಕಗಳಲ್ಲಿ ಸಾಧ್ಯವಾಗಬಹುದಾಗಿದ್ದ ಪ್ರಜಾತಾಂತ್ರಿಕ ಪ್ರಕ್ರಿಯೆಗಳನ್ನು ಭಗ್ನಗೊಳಿಸಿರುವುದೇ ಅದರ ದೊಡ್ಡ ಸಾಧನೆಯಾಗಿದೆ. ಒಂದೊಮ್ಮೆ ಅವರು ಶಾಂತಿ ಸ್ಥಾಪನೆಯ ಪ್ರಯತ್ನಗಳನ್ನು ಮಾಡಿದರೂ, ಸೇನೆಯ ಆಣತಿಯ ಮೇರೆಗೆ ಅದನ್ನು ಮಾಡುತ್ತಾರೆಯೇ ವಿನಾ ಅದನ್ನು ಎದುರು ಹಾಕಿಕೊಂಡು ಮಾಡಲಿಕ್ಕಿಲ್ಲ. ಒಂದೊಮ್ಮೆ ಹೊಸದಾಗಿ ಶಾಂತಿ ಸ್ಥಾಪನೆ ಪ್ರಯತ್ನಗಳು ಆರಂಭವಾದರೂ ನಾನಂತೂ ಮತ್ತೊಮ್ಮೆ ಅದರಲ್ಲಿ ಭಾಗಿಯಾಗಲು ಎಂದೆಂದಿಗೂ ಬಯಸಲಾರೆ. ಅಂತಹ ಯೋಚನೆ ನಮ್ಮನ್ನು ಚುಂಬಕದಂತೆ ಸೆಳೆಯುತ್ತದೇನೋ ಹೌದು. ಆದರೆ, ಅದು ಅಂತಿಮವಾಗಿ ನಮ್ಮನ್ನು ಮೋಸದ ಬಲೆಗೆ ಬೀಳಿಸುವಂತಹದ್ದು. ಕಾಲಾನಂತರದಲ್ಲಿ ಕೇಳಲು ಸೊಗಸಾದ ಕಥೆ ಆಗಬಹುದಾದರೂ ಅದನ್ನು ನಾನು ಒಪ್ಪಿಕೊಳ್ಳಲಾರೆ. ಇದಿಷ್ಟನ್ನು ಪ್ರಸ್ತಾಪಿಸಲು ನನ್ನ ಮುಂದೆ ನಾಲ್ಕು ಕಾರಣಗಳಿವೆ: ಒಂದು, ವಾಜಪೇಯಿ ಅವರ ನಿರ್ಗಮನ, ನವಾಜ್‌ ಷರೀಫ್ ಅವರ ಸೆರೆವಾಸ, ಇಮ್ರಾನ್ ಅವರ ಪ್ರಮಾಣವಚನ ಹಾಗೂ ಅತ್ಯಂತ ಮುಖ್ಯವಾಗಿ ಈ ಕಥನ ನಡೆದು 20 ವರ್ಷಗಳು ಸಂದುಹೋಗಿರುವುದು.
OSCAR-2019
ನವದೆಹಲಿ(ಆ.23): ಪ್ರಧಾನಿ ಮೋದಿ ಸಾಮಾಜಿಕ ಜಾಲಾತಾಣಗಳಲ್ಲಿ ಬಹಳಷ್ಟು ಸಕ್ರಿಯರಾಗಿರುತ್ತಾರೆ. ಈ ಮೂಲಕ ಜನರೊಂದಿಗೆ ಬೆರೆತುಕೊಳ್ಳುತ್ತಾರೆ. ಸದ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ವಿಡಿಯೋ ಒಂದು ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್​ ಆಗಿದ್ದು, ಅದನ್ನು ನೋಡಿದರೆ ನಿಮ್ಮ ಮುಖದಲ್ಲೂ ಒಂದು ಮಂದಹಾಸ ಮೂಡುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ. PIB(Press Information Bureau of India) ಯು ಪ್ರಧಾನಿ ಮೋದಿಯ ವಿಡಿಯೋ ಒಂದನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿದ್ದು, ಇದರಲ್ಲಿ ಅವರು ಕಾರಿನಲ್ಲಿ ಕುಳಿತುಕೊಳ್ಳುವ ದೃಶ್ಯಗಳಿವೆ. ಹಾಗಾದ್ರೆ ಮೋದಿ ಕಾರಿನಲ್ಲಿ ಕುಳಿತ ಕೂಡಲೇ ಏನು ಮಾಡುತ್ತಾರೆ? ಇಲ್ಲಿದೆ ಉತ್ತರ ಮೋದಿಯವರು ಕಾರಿನಲ್ಲಿ ಕುಳಿತುಕೊಳ್ಳುವ ಮೊದಲೇ ಅಲ್ಲಿ ನೆರೆದಿದ್ದ ಅಭಿಮಾನಿಗಳೆಡೆ ಕೈಬೀಸಿ ಧನ್ಯವಾದ ಸ್ವೀಕರಿಸುತ್ತಾರೆ. ಇದಾದ ಬಳಿಕ ಕಾರಿನೊಳಗೆ ಕುಳಿತುಕೊಳ್ಳುವ ಮೋದಿ ಎಲ್ಲಕ್ಕಿಂತ ಮೊದಲು ತಮ್ಮ ಸೀಟ್​ ಬೆಲ್ಟ್​ ಹಾಕಿಕೊಳ್ಳುತ್ತಾರೆ. ಈ ವಿಚಾರವಾಗಿ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದ್ದು, ಪಿಐಬಿಯು ಈ ವಿಡಿಯೋವನ್ನು ರಸ್ತೆ ಸುರಕ್ಷತಾ ಅಭಿಯಾನದ ಅಡಿಯಲ್ಲಿ ಶೇರ್​ ಮಾಡಿಕೊಂಡಿದೆ.
OSCAR-2019
ಈ ವಿಡಿಯೋ ಹಂವಚಿಕೊಂಡಿರುವ ಪಿಐಬಿಯು ಇದರೊಂದಿಗೆ "ಪ್ರಧಾನ ಮಂತ್ರಿ ಮೋದಿ ಕಾರಿನಲ್ಲಿ ಕುಳಿತುಕೊಂಡ ಬಳಿಕ ಎಲ್ಲಕ್ಕಿಂತ ಮೊದಲು ಸೀಟ್ ಬೆಲ್ಟ್​​ ಹಾಕಿಕೊಳ್ಳುತ್ತಾರೆ. ನೀವೂ ಹೀಗೆ ಮಾಡುತ್ತೀರಾ?. ನೀವೂ ಇದನ್ನು ತಪ್ಪದೇ ಮಾಡಿ" ಎಂದು ಬರೆದುಕೊಂಡಿದೆ. ಈ ಮೂಲಕ ಸುರಕ್ಷತಾ ನಿಯಮಗಳನ್ನು ಪಾಲಿಸಲು ತನ್ನದೇ ಆದ ರೀತಿಯಲ್ಲಿ ಮನವಿ ಮಾಡಿಕೊಂಡಿದೆ. ಈ ವಿಡಿಯೋವನ್ನು ಈಗಾಗಲೇ 5 ಸಾವಿರಕ್ಕಿಂತಲೂ ಅಧಿಕ ಮಂದಿ ಶೇರ್​ ಮಾಡಿಕೊಂಡಿದ್ದು, 2 ಸಾವಿರಕ್ಕೂ ಅಧಿಕ ಮಂದಿ ಕಮೆಂಟ್​ ಮಾಡಿದ್ದಾರೆ. World Health Organization ಅನ್ವಯ ಸೀಟ್​ ಬೆಲ್ಟ್​ ಧರಿಸುವುದು, ಪ್ರಥಮಿಕ ಸಂಯಮ ವ್ಯವರ್ಸತೆಯಾಗಿದೆ. ಈ ಮೂಲಕ ಶೇ 45 ರಿಂದ 65ರಷ್ಟು ಸಾವು ಸಂಭವಿಸುವ ಅಪಾಯ ಕಡಿಮೆಯಾಗುತ್ತದೆ.
OSCAR-2019
ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಪಟಾಕಿಗಳನ್ನು ಸಿಡಿಸಲಾಗುತ್ತಿತ್ತು. ಮೆರವಣಿಗೆ ಸಾಗುವ ಮಾರ್ಗವಾದ ಕ್ಲಾಕ್‌ ಟವರ್‌ ಪ್ರದೇಶದಲ್ಲಿರುವ ಮಸೀದಿ ಬಳಿ ಪಟಾಕಿ ಸಿಡಿಸಬಾರುದು ಎಂಬ ತಕರಾರಿನ ಬಳಿಕ ಮಾತಿನ ಚಕಮಕಿ ಆರಂಭವಾಗಿದೆ. ಮೆರವಣಿಗೆಯಲ್ಲಿ ತೆರಳುತ್ತಿದ್ದವರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಘೋಷಣೆಗಳನ್ನು ಕೂಗಿದ್ದಾರೆ. ಕೂಡಲೇ ಸ್ಥಳದಲ್ಲಿದ್ದ ಪೊಲೀಸರು ಹೆಚ್ಚುವರಿ ಪೊಲೀಸರನ್ನು ಕರೆಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಎಂಟು ವರ್ಷಗಳ ಹಿಂದೆ ನಮ್ಮ ಹಳ್ಳಿಯಿಂದ 380 ಕಿ.ಮೀ ದೂರವಿರುವ ಬೆಂಗಳೂರಿಗೆ ಉದ್ಯೋಗಕ್ಕಾಗಿ ಪಯಣ ಬೆಳೆಸಿದ್ದೆ. ಅಪ್ಪ- ಅಮ್ಮ ಸಾಲ ಮಾಡಿ ಒಂದಿಷ್ಟು ಹಣ ಕೊಟ್ಟು ಕಳುಹಿಸಿದ್ದರು. ನಾನೊಬ್ಬನೇ ರೈಲಿನಲ್ಲಿ...
OSCAR-2019
ಬೆಂಗಳೂರು: ನಗರದ ಗಂಗಾನಗರದ ಸಿಬಿಐ ಕಚೇರಿಯ ಎದುರೇ ಸಿಬಿಐ ಅಧಿಕಾರಿಣಿಯೊಬ್ಬರ ಕಾರಿನ ಗಾಜು ಒಡೆದು ಬ್ಯಾಗ್‌ ಕಳವು ಮಾಡಿರುವ ಘಟನೆ ಜನವರಿ 26 ರ ಗಣರಾಜ್ಯೋತ್ಸವದಂದು ನಡೆದಿದ್ದು,ತಡವಾಗಿ...
OSCAR-2019
ಒಮ್ಮೆ ಹಾಗೇ ಮದುವೆ ಮನೆಯೊಳಗೆ ಒಂದು ವಾಕ್‌ಹೋಗಿ ಬರೋಣ. ಜರಪರ ಸದ್ದು ಮಾಡುವ ಜರತಾರಿಸೀರೆಗಳು, ಕೆಲವರು ಆ್ಯಂಟಿಕ್‌ ಜ್ಯುವೆಲ್ಲರಿ ಹಾಕಿದ್ದರೆ ಮತ್ತೆ ಕೆಲವರು ಕೇರಳ, ಕೊಡವ ಮಾದರಿಯ ಸರ ಹಾಕಿರುತ್ತಾರೆ. ಕೆಲವರು... ಕೋಲ್ಕತಾ: ಇಲ್ಲಿನ ನೇತಾಜಿ ಸುಭಾಶ್ಚಂದ್ರ ಬೋಸ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ಅನಾಥ ಕಪ್ಪು ಬ್ಯಾಗ್‌ ಒಂದು ಕಂಡುಬಂದು ಅದರೊಳಗೆ ಬಾಂಬ್‌ ಇದ್ದಿರಬಹುದೆಂಬ ಶಂಕೆಯು...
OSCAR-2019
ಸುಮಾರು ೭೫೦ ವರ್ಷಗಳ ಹಿಂದೆ ಜೈನ - ಚೌಟರಸರಿಂದ ಸ್ಥಾಪಿಸಲ್ಪಟ್ಟಿದ್ದು , ೧೮ ಮಾಗಣೆಗಳ ಹಲವು ಗ್ರಾಮಗಳ ಸೀಮೆ ದೇವಸ್ಥಾನವಾಗಿರುತ್ತದೆ. ಇಲ್ಲಿ ೧೫ ದಿನಗಳ ಪರ್ಯಂತ ವಾರ್ಷಿಕ ಜಾತ್ರೆ ನಡೆಯುತ್ತದೆ.
OSCAR-2019
ಭೋಪಾಲ್: ಬಂಧಿತ ಕೈದಿಯೋರ್ವ ಠಾಣೆಯಲ್ಲಿದ್ದ ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಪೊಲೀಸ್ ಠಾಣೆಯಿಂದ ಪರಾರಿಯಾಗಿರುವ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ. ಮಧ್ಯ ಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪೊಲೀಸರು 25 ವರ್ಷದ ವಿಷ್ಣು ರಜವತ್ ಎಂಬಾತನನ್ನು ಬಂಧಿಸಿದ್ದರು. ಆದರೆ ಬಂಧಿತ ವಿಷ್ಣು ರಜವತ್ ಮತ್ತು ಆತನ ಸ್ನೇಹಿತ ಪೊಲೀಸರ ಮೇಲೆ ಗಂಭೀರ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಸಾರ್ವಜನಿಕರಿಗೆ ತೊಂದರೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಿಂಡ್ ಪೊಲೀಸರು ಇಬ್ಬರನ್ನೂ ಬಂಧಿಸಿ ಕರೆತಂದು ಠಾಣೆಯಲ್ಲಿರಿಸಿಕೊಂಡಿದ್ದರು. ಆದರೆ ಇಬ್ಬರನ್ನೂ ಸೆಲ್ ನೊಳಗೆ ಹಾಕದೇ ಠಾಣೆ ಅವರನ್ನು ಕುಳಿತುಕೊಳ್ಳುವಂತೆ ಸೂಚಿಸಿದ್ದರು. ಬಳಿಕ ವಿಷ್ಣು ಮತ್ತು ಆತನ ಸ್ನೇಹಿತ ಠಾಣೆ ಅವರಣದಲ್ಲೇ ಕುಳಿತುಕೊಂಡು ಸುಮಾರು ಹೊತ್ತು ಸಮಾಲೋಚನೆ ನಡೆಸಿದ್ದಾರೆ. ಈ ವೇಳೆ ಪರಾರಿಯಾಗಲು ನಿರ್ಧರಿಸಿದ ವಿಷ್ಣು ಅಲ್ಲೇ ಪಕದ್ದಲ್ಲಿದ್ದ ಗುದ್ದಲಿಯನ್ನು ತೆಗೆದುಕೊಂಡು ಟೇಬಲ್ ಮೇಲೆ ಕೆಲಸ ಮಾಡಿಕೊಂಡಿದ್ದ ಇಬ್ಬರು ಪೊಲೀಸರ ಮೇಲೆ ಗಂಭೀರ ಹಲ್ಲೆ ಮಾಡಿದ್ದಾನೆ. ಹಿಂದಿನಿಂದ ಮೊದಲ ಏಟು ಬೇಳುತ್ತಿದ್ದಂತೆಯೇ ಪೊಲೀಸ್ ಪೇದೆ ನೆಲಕ್ಕುರುಳಿದ್ದು, ಇದನ್ನು ಕಂಡ ಮತ್ತೋರ್ವ ಪೇದೆ ತಪ್ಪಿಸಿಕೊಳ್ಳಲು ಯತ್ನಿಸಿದ್ದನಾದರೂ ಸಾಧ್ಯವಾಗದೇ ಆತ ಕೂಡ ಮಾರಣಾಂತಿಕ ಪೆಟ್ಟು ತಿಂದಿದ್ದಾನೆ. ಬಳಿಕ ಇಬ್ಬರೂ ಅಲ್ಲಿಂದ ಪರಾರಿಯಾಗಿದ್ದಾರೆ. ಇವಿಷ್ಟೂ ದೃಶ್ಯಾವಳಿಗಳು ಠಾಣೆಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನು ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಪೊಲೀಸ್ ಅಧಿಕಾರಿಗಳು ಹಲ್ಲೆಗೊಳಗಾದ ಪೊಲೀಸ್ ಪೇದೆಗಳನ್ನು ಗ್ವಾಲಿಯರ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಈ ಪೈಕಿ ಮುಖ್ಯಪೇದೆ ಉಮೇಶ್ ಬಾಬು ಎಂಬುವವರು ಗಂಭೀರವಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗೆ ದೆಹಲಿಗೆ ರವಾನೆ ಮಾಡುವಂತೆ ವೈದ್ಯರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಮತ್ತೋರ್ವ ಪೇದೆ ಕೂಡ ಗಂಭೀರವಾಗಿದ್ದು, ಅವರಿಗೆ ಗ್ವಾಲಿಯರ್ ನಲ್ಲೇ ಚಿಕಿತ್ಸೆ ಮುಂದುವರೆಸಲಾಗಿದೆ. ಕೈದಿಗಳು ಪರಾರಿಯಾದ ಕೆಲವೇ ಗಂಟೆಗಳಲ್ಲಿ ಪೊಲೀಸರು ಅವರನ್ನು ಬಂಧಿಸಿದ್ದು, ಬಂಧನದ ಬಳಿಕ ಮಾತನಾಡಿರುವ ಹಲ್ಲೆಕೋರ ವಿಷ್ಣು ರಜವತ್, ಪೊಲೀಸರು ನಮ್ಮನ್ನು ಸೆಲ್ ನೊಳಗೆ ಹಾಕದೇ ಅವರಣದಲ್ಲೇ ಕೂರಿಸಿದ್ದರು. ಹೀಗಾಗಿ ನಾನು ಪರಾರಿಯಾಗಬಹುದು ಎಂದು ಯೋಚನೆ ಮಾಡಿ ಕೈಗೆ ಸಿಕ್ಕ ಗುದ್ದಲಿಯಿಂದ ಅವರ ಮೇಲೆ ಹಲ್ಲೆ ಮಾಡಿ ಪರರಾಯಾದೆ ಎಂದು ತಪ್ಪೊಪ್ಪಿಕ್ಕೊಂಡಿದ್ದಾನೆ. ಇನ್ನು ಬಂಧಿತ ವಿಷ್ಣು ವಿರುದ್ಧ ಪೊಲೀಸರ ಮೇಲೆ ಹಲ್ಲೆ, ಪರಾರಿ ಯತ್ನ, ಅಕ್ರಮ ಗಣಿಗಾರಿಕೆ, ಶಾಂತಿ ಸುವ್ಯವಸ್ಥೆ ಕದಡುವ ಪ್ರಯತ್ನ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಲ್ವರೇಜ್ ಹೇಳಿದ್ದಾರೆ.
OSCAR-2019
ಕಳೆದ ವಾರ ನನ್ನ ಸ್ನೇಹಿತ ಅನೂಪ ದೇಶಪಾಂಡೆ ಅವರು ನನ್ನನ್ನು ಧಾರ­ವಾಡದ ವನಿತಾ ಸೇವಾ ಸಮಾಜಕ್ಕೆ ಕರೆದುಕೊಂಡು ಹೋದರು. ಈ ಸಂಸ್ಥೆ­ಗೊಂದು ಸುಂದರ ಇತಿಹಾಸವಿದೆ. 1928 ರಲ್ಲಿ ಭಾಗೀರಥಿಬಾಯಿ ಪುರಾಣಿಕ ಹಾಗೂ ಅವರ ಜೊತೆಗಿದ್ದ ಮಹಿಳೆಯರ ಸಾಹಸಗಾಥೆಯ ಫಲ ಈ ಸಂಸ್ಥೆ. ಭಾಗೀರಥಿಬಾಯಿ ಮದುವೆ­ಯಾದದ್ದು ತನ್ನ ಎಂಟನೇ ವರ್ಷದಲ್ಲಿ ಹಾಗೂ ವಿಧವೆಯಾದದ್ದು ಹನ್ನೆರಡನೆ ವಯಸ್ಸಿಗೆ. ಮದುವೆ ಎಂದರೆ ಏನೆಂದು ತಿಳಿ­ಯುವ ಮೊದಲೇ ಮದುವೆಯೂ ಆಗಿಹೋಗಿ ವಿಧವೆಯ ಪಟ್ಟ ಬಂದಿತ್ತು. ತನ್ನಂತಹ ಅನೇಕ ಮಹಿಳೆಯರ ಸಂಕಷ್ಟ ನೋಡಿ ತಾನೂ ಅಳುತ್ತ ಕೂಡ್ರುವ ಸ್ವಭಾವದವರಲ್ಲ ಅವರು. ನಾಲ್ಕೈದು ಸಮಾನಮನಸ್ಕರವನ್ನು ಸೇರಿಸಿಕೊಂಡು ಮಹಿಳೆಯರ ಸಹಾಯಕ್ಕೆಂದೇ ವನಿತಾ ಸೇವಾ ಸಮಾಜವನ್ನು ಪ್ರಾರಂಭಿಸಿದರು. ಅಲ್ಲಿ ಅನೇಕ ಅನಾಥ ಮಹಿಳೆಯರಿಗೆ ಆಶ್ರಮಧಾಮ ಕಟ್ಟಿದರು. ಸಹಾಯ ಮಾಡುವುದೆಂದರೆ ಅವರನ್ನು ಕೂಡ್ರಿಸಿ ರಕ್ಷಿಸುವುದು ಮಾತ್ರವಲ್ಲ, ಅವರಿಗೆ ಆತ್ಮಗೌರವದಿಂದ ಸ್ವಾವಲಂಬಿ­ಯಾಗು­ವಂತೆ ಮಾಡುವುದು ಎಂಬುದನ್ನು ನಂಬಿದ ಭಾಗೀರಥಿಬಾಯಿ ಅವರಿಗೆ ಸುಮಾರು ಇಪ್ಪತ್ತೆರಡು ತರಹದ ವೃತ್ತಿಗಳ ಬಗ್ಗೆ ತರಬೇತಿ ನೀಡಿದರಂತೆ. ಹೊಲಿಗೆ, ಅಡುಗೆ, ಕಸೂತಿ, ಕಲೆ ಹೀಗೆ ಬದುಕನ್ನು ಕಟ್ಟಿಕೊಡುವ ಅನೇಕ ವೃತ್ತಿಗಳು ಅಲ್ಲಿದ್ದ ಮಹಿಳೆಯರ ಕೈ ಹಿಡಿದವು. ನಂತರ ಅವರು ಮಕ್ಕಳ ಶಾಲೆಯನ್ನು ಸ್ಥಾಪಿಸಿದರು. ಭಾಗೀರಥಿ­ಬಾಯಿ ಅಕ್ಷರಶಃ ತಮ್ಮ ಕೊನೆಯುಸಿರು ಇರುವವರೆಗೆ ಸಂಸ್ಥೆಗಾಗಿ ದುಡಿದರು. ತಮ್ಮ ಕಚೇರಿ­ಯಲ್ಲೇ ತಮ್ಮ ಪ್ರಾಣವನ್ನು ತೊರೆದವರು ಅವರು. ಇಂದಿಗೂ ಆ ಶಾಲೆ ನಡೆ­ಯುತ್ತಿದೆ. ನಿರ್ಮಲಾತಾಯಿ ಗೋಖಲೆ ಹಾಗೂ ಅವರ ಮಗ ರಾಜೇಂದ್ರ ಗೋಖಲೆ ಅದರ ಸೂತ್ರ ಹಿಡಿದಿದ್ದಾರೆ. ಈ ಶಾಲೆಯ ಬಹುತೇಕ ಮಕ್ಕಳು ಸಮಾಜದ ತೀರ ಹಿಂದುಳಿದ ವರ್ಗಕ್ಕೆ ಸೇರಿದವರು. ಆಶ್ಚರ್ಯವೆಂದರೆ ಈ ಶಾಲೆಯಲ್ಲಿ ಮಕ್ಕಳಿಗೆ ಯಾವ ಫೀಸೂ ಇಲ್ಲ. ಬದಲಾಗಿ ಯಾರು ಯಾರೋ ದಾನಿಗಳು ಮುಂದೆ ಬಂದು ಮಕ್ಕಳ ಸಮವಸ್ತ್ರಕ್ಕೆ, ಪುಸ್ತಕ ಚೀಲಕ್ಕೆ, ಪುಸ್ತಕಗಳಿಗೆ, ಹಣ ನೀಡಿ ಹೋಗುತ್ತಾ­ರಂತೆ. ಆದರೆ ಶಾಲೆಯ ಕಟ್ಟಡಕ್ಕೆ, ಆವರಣದ ವ್ಯವಸ್ಥೆಗೆ, ಮಕ್ಕಳಿಗೆ ಇನ್ನೂ ಹೆಚ್ಚು ಅನುಕೂಲ ಮಾಡಲು ತುಂಬಾ ಜನರ ಕೈ, ಮನಸ್ಸುಗಳು ಸೇರಬೇಕು. ಹಾಗೆ ಸಹಾಯ ಹಸ್ತ ಬಂದರೆ ಆದರ್ಶವನ್ನೇ ಉಸಿರಾಗಿಟ್ಟು ಆ ತಾಯಿ ಕಟ್ಟಿದ ಈ ಸಂಸ್ಥೆ ಮತ್ತಷ್ಟು ಊರ್ಜಿತ­ವಾದೀತು. ರಾಜೇಂದ್ರ ಗೋಖಲೆ ಅವರು ಹೇಳಿದ ಒಂದು ಘಟನೆ ನನ್ನ ಮನ ಕಲಕಿತು. ಇಲ್ಲಿ ಬರುವ ಮಕ್ಕಳೆಲ್ಲ ತುಂಬ ಬಡತನದಿಂದ ಬಂದವರು. ಅವರಿಗೆ ಮಧ್ಯಾಹ್ನದ ಬಿಸಿಯೂಟ ಇಸ್ಕಾನ್‌ನಿಂದ ಬರುತ್ತದೆ. ಮೊದ­ಮೊದಲು ಗೋಖಲೆಯವರಿಗೆ ಈ ಬಿಸಿ­ಯೂಟದ ಮಹತ್ವ ತಿಳಿದಿರ­ಲಿಲ್ಲವಂತೆ. ಅದು ತರುವ ಸಂತಸದ ಆಳ ಹೊಳೆದಿ­ರಲಿಲ್ಲ. ಒಂದು ದಿನ ಹೀಗೆ ಬಿಸಿಯೂಟ ಬಡಿಸಿದ ಮೇಲೆ ಒಬ್ಬ ಬಾಲಕ ತಾನು ಹಾಕಿಸಿಕೊಂಡದ್ದರಲ್ಲಿ ಒಂದರ್ಧ ತೆಗೆದು ಮತ್ತೊಂದು ಡಬ್ಬಿ­ಯಲ್ಲಿ ಹಾಕಿಕೊಂಡ­ದ್ದನ್ನು ಇವರು ಕಂಡರು. ನಂತರ ಆ ಬಾಲಕ ಡಬ್ಬಿ­ಯನ್ನು ಹಿಡಿದುಕೊಂಡು ತನ್ನ ಮನೆ­ಯತ್ತ ಹೋಗಲು ನಡೆದ. ತಕ್ಷಣ ಅವನನ್ನು ಗೋಖಲೆ ತಡೆದರು. ಶಾಲೆಯಲ್ಲಿ ಕೊಡುವ ಊಟವನ್ನು ಮನೆಗೆ ತೆಗೆದುಕೊಂಡು ಹೋಗುತ್ತಾ­ನಲ್ಲ ಎಂದು ಕೋಪ ಬಂದು ಅವನನ್ನು ಕೇಳಿದಾಗ ಆತ ಕಣ್ಣಂಚಿನಲ್ಲಿ ನೀರು ತಂದುಕೊಂಡು ಹೇಳಿದ, ‘ಸರ್, ನನ್ನ ಅಪ್ಪ, ಅಮ್ಮ ಇಬ್ಬರೂ ಕೆಲಸಕ್ಕೆ ಹೋಗು­ತ್ತಾರೆ. ಮನೆಯಲ್ಲಿ ನನ್ನ ಪುಟ್ಟ ತಮ್ಮ ಒಬ್ಬನೇ ಇರುತ್ತಾನೆ. ಅವನಿಗೆ ಊಟವಿಲ್ಲ. ಅದಕ್ಕೇ ನನ್ನದರಲ್ಲೇ ಸ್ವಲ್ಪ ತೆಗೆದುಕೊಂಡು ಅವನಿಗಾಗಿ ಕೊಡಲು ಹೋಗುತ್ತಿದ್ದೆ’. ಅವನ ಮನೆಯ ಕಷ್ಟ ಗೋಖಲೆಯವರ ಮನಸ್ಸಿಗೆ ರಾಚಿತು. ‘ಅಯ್ಯೋ ಮಗು, ಇನ್ನಷ್ಟು ತುಂಬಿ­ಕೊಂಡು ಹೋಗು’ ಎಂದರು. ಬಡವರ, ತೀರ ಬಡವರ ಮಕ್ಕಳಿಗೂ ಒಳ್ಳೆಯ ಶಿಕ್ಷಣ ದೊರಕಬೇಕು. ಹಣ­ವಿಲ್ಲದ ಮಕ್ಕಳಿಗೆ ಆದರ್ಶದೊಂದಿಗೆ ಶಿಕ್ಷಣ ನೀಡಬೇಕೆನ್ನುವ ತುಡಿತದಿಂದ ಆ ತಾಯಿ ಭಾಗೀರಥಿಬಾಯಿ ಅವರು ಕಟ್ಟಿದ ವನಿತಾ ಸೇವಾ ಸಮಾಜದಂಥ ಅದೆಷ್ಟು ಸಂಸ್ಥೆಗಳು ನಮ್ಮ ದೇಶದಲ್ಲಿ­ವೆಯೋ? ಅವುಗಳಿಗೆಲ್ಲ ಸಹಾಯ ಮಾಡುವ ಮನಸ್ಸು ದುಡ್ಡಿರುವವರಿಗೆ ಬಂದರೆ ಅದೆಷ್ಟು ಮುಗ್ಧಮಕ್ಕಳ ಮುಖದ ಮೇಲೆ ನಗು ಮೂಡೀತೋ?
OSCAR-2019
ಕೈಲಾಸ ಮಾನಸ ಸರೋವರದ ಪ್ರಶಾಂತ ವಾತಾವರಣದ ಅನುಭವ ಪಡೆದಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಪುಣ್ಯ ಕ್ಷೇತ್ರದಲ್ಲಿ ಹಗೆತನವಿಲ್ಲ ಎಂದು ಬಣ್ಣಿಸಿದ್ದಾರೆ. ಮಾನಸ ಸರೋವರದಲ್ಲಿನ ನೀರು ಪ್ರಶಾಂತ ಹಾಗೂ ಸೌಮ್ಯ. ಸರೋವರ ಎಲ್ಲವನ್ನೂ ನೀಡುತ್ತದೆ ಹಾಗೂ ಏನನ್ನು ಕಳೆದುಕೊಳ್ಳುವುದಿಲ್ಲ. ಯಾರು ಬೇಕಾದರೂ ಅಲ್ಲಿಂದ ನೀರು ಕುಡಿಯಬಹುದು. ಇಲ್ಲಿ ಎಲ್ಲಿಯೂ ಹಗೆತನಗಳಿಲ್ಲ. ಹಾಗಾಗಿಯೇ ಭಾರತದಲ್ಲಿ ನಾವು ಈ ಜಲವನ್ನು ಪೂಜಿಸುತ್ತೇವೆ’ ಎಂದು ರಾಹುಲ್‌ ಗಾಂಧಿ ಟ್ವೀಟಿಸಿದ್ದಾರೆ.
OSCAR-2019
ಮಾನಸ ಸರೋವರ ಮತ್ತು ಕೈಲಾಸ ಪರ್ವತದ ಚಿತ್ರಗಳನ್ನು ಪ್ರಕಟಿಸಿರುವ ಅವರು, ‘ಕೈಲಾಸ ಕರೆದಾಗಲೇ ವ್ಯಕ್ತಿಯೊಬ್ಬ ಅಲ್ಲಿಗೆ ಹೋಗುತ್ತಾನೆ. ನನಗೆ ಅಂತ ಅವಕಾಶ ದೊರೆತಿರುವುದಕ್ಕೆ ಸಂತಸಗೊಂಡಿದ್ದೇನೆ ಹಾಗೂ ಈ ರಮಣೀಯ ಸೌಂದರ್ಯದ ಪಯಣದಲ್ಲಿ ಕಂಡದ್ದನ್ನು ಹಂಚಿಕೊಳ್ಳಲು ಸಾಧ್ಯವಾಗಿದೆ’ ಎಂದು ಬರೆದುಕೊಂಡಿದ್ದಾರೆ.
OSCAR-2019
ರೈಲ್ವೆ ಇಲಾಖೆ ಮೂರು ವರ್ಷದಲ್ಲಿ ವಿವಿಧ ಕಾರ್ಯಕ್ರಮಗಳ ಉದ್ಘಾಟನೆಗೆಂದು ಮಾಡಿರುವ ವಿಡಿಯೋ ಕಾನ್ಫರೆಸ್ ಗೆಂದು 13.46 ಕೋಟಿ ರೂ. ಖರ್ಚು ಮಾಡಿದೆ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ಬಹಿರಂಗಗೊಂಡಿದೆ. Read more…
OSCAR-2019
4 ವರ್ಷದಿಂದ ನಾಪತ್ತೆಯಾಗಿದ್ದ ಅಪ್ರಾಪ್ತೆ ಕಥೆ ಕೇಳಿ ದಂಗಾದ ಪೊಲೀಸ್ | Kannada Dunia | Kannada News | Karnataka News | India News ನಾಲ್ಕು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಅಪ್ರಾಪ್ತ ಬಾಲಕಿ ಮಗುವಿನೊಂದಿಗೆ ವಾಪಸ್ ಆಗಿದ್ದಾಳೆ. ಛತ್ತೀಸ್ಗಡದ ರಾಮಾನುಜ ನಗರ್ ನಲ್ಲಿ ಈ ಘಟನೆ ನಡೆದಿದೆ. ಅಪ್ರಾಪ್ತೆ ನಾಲ್ಕು ವರ್ಷಗಳ ಹಿಂದೆ ಅಪಹರಣಕ್ಕೊಳಗಾಗಿದ್ದಳು. ಪೊಲೀಸ್ ಹಾಗೂ ಸಂಬಂಧಿಕರು ಹಗಲು ರಾತ್ರಿಯೆನ್ನದೆ ಬಾಲಕಿಗಾಗಿ ಹುಡುಕಾಟ ನಡೆಸಿದ್ದರು. ಮಾಹಿತಿ ಪ್ರಕಾರ, ಕೊರಿಯ ಜಿಲ್ಲೆಯ ರಾಜಾರಾಮ್ ಪೀಡಿತೆಯನ್ನು ಅಪಹರಿಸಿದ್ದ. ಬಾಲಕಿಯನ್ನು ನಂಬಿಸಿ ಮಧ್ಯಪ್ರದೇಶದ ಶಿವಪುರ ಜಿಲ್ಲೆಗೆ ಕರೆದೊಯ್ದಿದ್ದ. ನಂತ್ರ ಅಪ್ರಾಪ್ತೆಯನ್ನು 62 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದ. ಕುಮೇರ್ ಎಂಬಾತ ಬಾಲಕಿಯನ್ನು ಗೆಸ್ಟ್ ಹೌಸ್ ನಲ್ಲಿ ಇಟ್ಟಿದ್ದನಂತೆ. ಆತ ಹಾಗೂ ಆತನ ಸ್ನೇಹಿತರು ನಿರಂತರವಾಗಿ ಅತ್ಯಾಚಾರವೆಸಗುತ್ತಿದ್ದರಂತೆ. ಹಾಡು, ನೃತ್ಯ ಮಾಡುವಂತೆ ಹೇಳುತ್ತಿದ್ದರಂತೆ. ಅಶ್ಲೀಲ ವಿಡಿಯೋ ಮಾಡಿ ಬ್ಲಾಕ್ ಮೇಲ್ ಮಾಡುತ್ತಿದ್ದರಂತೆ. ಅಕ್ಟೋಬರ್ 2014ರಲ್ಲಿ ಬಾಲಕಿಯನ್ನು ಅಪಹರಿಸಲಾಗಿತ್ತು. ಈಗ ಮಗುವಿನೊಂದಿಗೆ ಬಂದ ಬಾಲಕಿ ತನ್ನೆಲ್ಲ ಕಥೆಯನ್ನು ಪೊಲೀಸ್ ಮುಂದೆ ಹೇಳಿದ್ದಾಳೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
OSCAR-2019
ಸಾಮಾನ್ಯವಾಗಿ ಎಲ್ಲರಿಗೂ ಕೆಲಸದಲ್ಲಿ ಕೊಂಚ ವಿರಾಮ ಸಿಗಲಿ ಎಂದು ಯೋಚಿಸುತ್ತಿರುತ್ತಾರೆ. ಹಾಗೊಮ್ಮೆ ಅವರಿಗೆ ವಿಶ್ರಾಂತಿಗೆ ಸಮಯ ದೊರೆಯಿತು ಎಂದಾದರೆ ಅದನ್ನು ಎಂದಿಗೂ ತಪ್ಪಿಸಿಕೊಳ್ಳುವುದಿಲ್ಲ. ನಮ್ಮ ಅನುಕೂಲಕ್ಕೆ ತಕ್ಕಂತೆ ವಿಶ್ರಾಂತಿ ಅಥವಾ ಕಾಲಾಹರಣಕ್ಕೆ ಸಮಯ ಸಿಗಲಿಲ್ಲ ಎಂದಾದರೆ ಸಂಬಂಧಿಸಿದ ಮೇಲಾಧಿಕಾರಿಗಳಿಗೆ ಏನಾದರೂ ಸಬೂಬು ಕೊಡುವುದರ ಮೂಲಕ ವಿರಾಮವನ್ನು ಪಡೆದುಕೊಳ್ಳುವುದುಂಟು. ಆದರೆ ಕೆಲವು ವ್ಯಕ್ತಿಗಳು ತಮ್ಮ ಜೀವನದಲ್ಲಿ ಸದಾ ಕೆಲಸದಲ್ಲಿಯೇ ತಲ್ಲೀನರಾಗಿರುವುದಕ್ಕೆ ಹೆಚ್ಚು ಸಂತೋಷ ಪಡುತ್ತಾರೆ. ಅವರಿಗೆ ವಿಶ್ರಾಂತಿಯಲ್ಲಿ ಸಿಗುವ ಸಂತೋಷ ಅಥವಾ ಆರಾಮದಾಯಕ ಅನುಭವವು ಅವರು ಮಾಡುವ ಕೆಲಸದಲ್ಲಿಯೇ ದೊರೆಯುತ್ತದೆ. ಅವರು ಬಯಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಲೇ ಇರಲು ಬಯಸುತ್ತಾರೆ ಎಂದು ಹೇಳಲಾಗುವುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಚಕ್ರದ ವ್ಯಕ್ತಿಗಳು ಹೊಸ ಹೊಸ ಅನುಭವಗಳನ್ನು ಹೊಂದುವುದು, ತಮ್ಮ ಕನಸುಗಳನ್ನು ಸಾಕಾರ ಗೊಳಿಸಲು ಶ್ರಮಿಸುವುದು, ತಾವು ಮಾಡುವ ಕೆಲಸದಲ್ಲಿ ಕ್ರಿಯಾಶೀಲತೆಯನ್ನು ಅನ್ವಯ ಮಾಡುವುದು ಎಂದರೆ ಬಹಳ ಇಷ್ಟಕರವಾದ ಸಂಗತಿಯಾಗಿರುತ್ತದೆ. ಇಂತಹ ವ್ಯಕ್ತಿಗಳಿಗೆ ಬಿಡುವಿನ ಸಮಯದಲ್ಲಿ ವಿಶ್ರಾಂತಿ ಪಡೆಯುವುದರಿಂದ ಸಂತೋಷ ದೊರೆಯದು. ಬದಲಿಗೆ ಸಿಕ್ಕ ಸಮಯದಲ್ಲಿ ಇನ್ನಷ್ಟು ಶ್ರಮದಿಂದ ಕೆಲಸ ನಿರ್ವಹಿಸುವುದು ಬಹಳ ಸಂತೋಷವನ್ನು ತಂದುಕೊಡುತ್ತದೆ. ಹಾಗಾದರೆ ಆ ರಾಶಿಚಕ್ರಗಳು ಯಾವವು? ಅವರ ಕಾರ್ಯ ವೈಖರಿ ಹೇಗಿರುತ್ತದೆ? ಎನ್ನುವುದನ್ನು ತಿಳಿಯಲು ಈ ಮುಂದಿರುವ ವಿವರಣೆಯನ್ನು ಓದಿ... ಈ ರಾಶಿಯ ವ್ಯಕ್ತಿಗಳು ತಮ್ಮ ಜೀವನದಲ್ಲಿ ಸಣ್ಣ-ಪುಟ್ಟ ವಿಚಾರಗಳಿಗೂ ಹೆಚ್ಚಿನ ಸಂತೋಷವನ್ನು ವ್ಯಕ್ತಪಡಿಸುತ್ತಾರೆ. ಜೊತೆಗೆ ಜೀವನದಲ್ಲಿ ತಮ್ಮದೇ ಆದ ನಿರ್ದಿಷ್ಟ ಗುರಿಯನ್ನು ಹೊಂದಿರುತ್ತಾರೆ. ಅವರ ಕ್ರಿಯಾತ್ಮಕ ಕೆಲಸಗಳಿಂದಲೇ ಜೀವನ ಅದ್ಭುತ ಹಾಗೂ ಉತ್ಸಾಹದಿಂದ ತುಂಬಿರುತ್ತದೆ ಎಂದು ನಂಬುತ್ತಾರೆ. ಇವರು ಹೊಸ ಅನುಭವಗಳನ್ನು ಪಡೆಯುವುದು, ಹೊಸ ಜನರೊಂದಿಗೆ ಬೆರೆಯುವುದು ಹಾಗೂ ಹೊಸ ವಿಚಾರಗಳನ್ನು ತಿಳಿದುಕೊಳ್ಳುವುದರ ಮೂಲಕವೇ ತಮ್ಮ ಏಳಿಗೆಯನ್ನು ಕಾಣುತ್ತಾರೆ. ಇವರು ಇದ್ದ ಜಾಗದಲ್ಲಿಯೇ ಇದ್ದರೂ ಮನಸ್ಸಿನಲ್ಲಿ ಹೊಸ ಹೊಸ ವಿಷಯಗಳನ್ನು ಕಲೆಹಾಕುತ್ತಾ ಜೀವನವನ್ನು ಸುಧಾರಿಸುವ ಮಾರ್ಗಗಳ ಕುರಿತು ಯೋಚಿಸುತ್ತಾರೆ. ಇವರು ಅತ್ಯಂತ ಆಳವಾದ ಚಿಂತಕರು ಎಂದು ಹೇಳಲಾಗುವುದು. ಇವರು ತಮ್ಮ ಜೀವನದ ಬಗ್ಗೆ ಸಾಕಷ್ಟು ಚಿಂತನೆಯನ್ನು ನಡೆಸುತ್ತಾರೆ. ಇವರು ತಾವು ಕೆಲಸ ಮಾಡುವುದಕ್ಕಿಂತ ಇತರರು ಮಾಡಬೇಕೆಂದು ಬಯಸುತ್ತಾರೆ. ಇತರರ ಜೊತೆಗೆ ಕೈ ಜೋಡಿಸುವುದರ ಮೂಲಕ ಕ್ರಿಯಾತ್ಮಕ ಕೆಲಸಗಳನ್ನು ಪ್ರಾರಂಭಿಸುವರು. ಸೌಂದರ್ಯವನ್ನು ಇಷ್ಟಪಡುವ ಇವರು ಒಂದೇ ಜಾಗಕ್ಕೆ ಅಂಟಿಕೊಳ್ಳಲು ಬಯಸುವುದಿಲ್ಲ. ನಿರಂತರವಾಗಿ ಕಾರ್ಯನಿರತರಾಗಿದ್ದು, ಸಂಬಂಧಗಳೊಂದಿಗೆ ದೀರ್ಘ ಪಟ್ಟಿ ಹೊಂದಲು ಬಯಸುವರು. ಈ ವ್ಯಕ್ತಿಗಳು ಸದಾ ಹೊಸತನ್ನು ಹುಡುಕುತ್ತಾರೆ. ಹೊಸ ಮುಖಗಳು, ಹೊಸ ಆಲೋಚನೆಗಳು ಮತ್ತು ಸರ್ವಕಾಲಿಕವಾಗಿ ಹೊಸ ಸಂಪ್ರದಾಯ ನೀತಿಗಳನ್ನು ನೋಡಲು ಬಯಸುವರು. ಇವರು ಎಂತಹ ಸಂದರ್ಭದಲ್ಲಿದ್ದರೂ ಅಥವಾ ಪ್ರಯಾಣದಲ್ಲಿದ್ದರೂ ಅವರಿಗೆ ಯಾವುದೇ ಚಿಂತನೆಗಳಿಗೆ ಒಳಗಾಗದೆ ಹೊಸದನ್ನು ಕಲಿಯಲು ಪ್ರಯತ್ನಿಸುತ್ತಿರುತ್ತಾರೆ. ಇವರು ಖುಷಿ ಅಥವಾ ನೆಮ್ಮದಿಯನ್ನು ಹೊಂದಬೇಕು ಎಂದರೆ ಇವರಿಗೆ ನಿಯಮಿತವಾಗಿ ಹೊಸ-ಹೊಸ ಸಂಗತಿಗಳು ದೊರೆಯುತ್ತಿರಬೇಕು. ಈ ರಾಶಿಯವರು ಎಲ್ಲಾ ಸಮಯದಲ್ಲೂ ಹೆಚ್ಚು ಉತ್ಸುಕರಾಗಿ ಹಾಗೂ ಸಾಹಸಿಗರಾಗಿ ಇರುತ್ತಾರೆ. ಇವರು ಹೊಸ ಅನುಭವಗಳನ್ನು ಮತ್ತು ಸವಾಲುಗಳನ್ನು ಸ್ವೀಕರಿಸಲು ಬಯಸುತ್ತಾರೆ. ಪ್ರತಿಯೊಂದು ವಿಚಾರದಲ್ಲೂ ಅಡಗಿರುವ ಸತ್ಯವೇನು ಎನ್ನುವುದನ್ನು ತಿಳಿದುಕೊಳ್ಳುತ್ತಾರೆ. ಎಲ್ಲಾ ವಿಚಾರದಲ್ಲೂ ಧನಾತ್ಮಕ ಬದಲಾವಣೆಯನ್ನು ಕಾಣಲು ಬಯಸುವರು. ಆದರೆ ಕೆಲವೊಮ್ಮೆ ಬಹುಬೇಗ ಬೇಸರಕ್ಕೆ ಒಳಗಾಗುತ್ತಾರೆ. ಅದಕ್ಕೆ ಕಾರಣ ಅವರ ತಪ್ಪು ಕಲ್ಪನೆಗಳು ಎಂದು ಹೇಳಲಾಗುವುದು.
OSCAR-2019
ಗಣೇಶ ಚತುರ್ಥಿಗೆ ಊರಿಗೆ ಹೋಗ್ಬೇಕು ಅಂದ್ಕೊಂಡಿದೀರಾ ಹಾಗಾದ್ರೆ ಬೇಗ ಬೇಗ ಬಸ್‌ ಟಿಕೆಟ್ ಖರೀದಿಸಿ, ಸರ್ಕಾರಿ ಬಸ್‌ಗಳು ಈಗಲೇ ಬುಕಿಂಗ್... ಗಣೇಶ ಚತುರ್ಥಿಗೆ ತೆರಳಲು ಈಗಾಗಲೇ ಬೆಂಗಳೂರಿನಲ್ಲಿ ಸೀಟುಗಳನ್ನು ಬುಕ್ ಮಾಡುತ್ತಿದ್ದಾರೆ. ಕೆಎಸ್ ಆರ್ ಟಿಸಿ ಬಸ್‌ಗಳ ಟಿಕೆಟ್ ಬಹುತೇಕ... ಗಣೇಶ ಚತುರ್ಥಿ ಇನ್ನೇನು ಬಂದೇ ಬಿಟ್ಟಿದೆ, ಆದರೆ ಒಂದು ವಿಷಯವನ್ನು ಗಮನದಲ್ಲಿಡಬೇಕಾಗಿದೆ. ಈ ಬಾರಿ ನಿಮಗೆ ಮನಸ್ಸಿಗೆ ಬಂದಷ್ಟು ಎತ್ತರದ... ಪಂಚಾಂಗದ ಪ್ರಕಾರ ಹುಣ್ಣಿಮೆಯ ಅಥವಾ ಕೃಷ್ಣ ಪಕ್ಷದ ನಾಲ್ಕನೇ ದಿನದಂದು ಪ್ರತೀ ತಿಂಗಳು ಸಂಕಷ್ಟ ಚತುರ್ಥಿ ಆಚರಿಸಲಾಗುವುದು. ಇದು ಗಣಪತಿ...
OSCAR-2019
ಶುಕ್ರವಾರ ಮಧ್ಯಾಹ್ನ ನಗರದಲ್ಲಿ ಧಾರಾಕಾರ ಮಳೆ ಸುರಿಯಿತು. ಪರಿಣಾಮ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಪಾರ ಪ್ರಮಾಣದಲ್ಲಿ ಮಳೆನೀರು ಸಂಗ್ರಹಗೊಂಡಿತು. ಇದರಿಂದ ಡೆಲ್ಲಿ ಡೇರ್‌'ಡೆವಿಲ್ಸ್ ತಂಡಕ್ಕೆ ಅಭ್ಯಾಸ ನಡೆಸಲು ತೊಡಕಾಯಿತು. ತಕ್ಷಣ ಕ್ರೀಡಾಂಗಣದ ಸಿಬ್ಬಂದಿ ಸಬ್-ಏರ್ ಯಂತ್ರದ ನೆರವಿನಿಂದ ಕ್ರೀಡಾಂಗಣದಲ್ಲಿ ಸಂಗ್ರಹಗೊಂಡಿದ್ದ ನೀರನ್ನು ಹೊರ ತೆಗೆಯುವ ಕಾರ್ಯಕ್ಕೆ ಮುಂದಾದರು. ಪರಿಣಾಮ 45 ನಿಮಿಷದಲ್ಲಿ 3 ಲಕ್ಷ ಲೀಟರ್‌'ನಷ್ಟು ನೀರನ್ನು ಮೈದಾನದಿಂದ ಹೊರಕ್ಕೆ ಹಾಕಲಾಯಿತು. ಹೀಗೆ ಹೊರಬರುವ ನೀರನ್ನು ಶೇಖರಿಸುವ ವ್ಯವಸ್ಥೆಯಿದ್ದು, ಇದನ್ನು ಮರುಬಳಕೆ ಮಾಡಲಾಗುವುದು ಎಂದು ರಾಜ್ಯ ಕ್ರಿಕೆಟ್ ಸಂಸ್ಥೆ ತಿಳಿಸಿತು. ಬೆಂಗಳೂರು: ಸಬ್-ಏರ್ ಸಿಸ್ಟಂ ನೆರವಿನಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಗ್ರಹವಾಗಿದ್ದ 3 ಲಕ್ಷ ಲೀಟರ್‌'ನಷ್ಟು ಮಳೆನೀರನ್ನು ಕೇವಲ 45 ನಿಮಿಷದಲ್ಲಿ ಹೊರಹಾಕಲಾಗಿದೆ. ಹೀಗೆ ಸಬ್-ಏರ್ ವ್ಯವಸ್ಥೆಯಿಂದ ಗಂಟೆಯೊಳಗೆ ಕ್ರೀಡಾಂಗಣ ಮತ್ತೆ ಆಟಕ್ಕೆ ಲಭ್ಯವಾಯಿತು. ರಾತ್ರಿ 9 ಗಂಟೆಯ ನಂತರ ಡೆಲ್ಲಿ ತಂಡದ ಆಟಗಾರರು ಫ್ಲಡ್ ಲೈಟ್‌'ನಲ್ಲೇ ಅಭ್ಯಾಸ ನಡೆಸಿದರು. ಮಳೆ, ಆಳೆತ್ತರದ ನೀರು, ಯಾವುದನ್ನೂ ಲೆಕ್ಕಸಲಿಲ್ಲ ಈ ಹುಡುಗ. ಆದರೆ ಕೇಂದ್ರ ಹೊರತಂದ ಎನ್​ಆರ್​ಸಿ ಪಟ್ಟಿಯಲ್ಲಿ ಕಡೆಗೂ ಸಿಗಲಿಲ್ಲ ದೇಶಾಭಿಮಾನಿಗೆ ಜಾಗ. ಅಸ್ಸಾಂ (ಆಗಸ್ಟ್​ 15): ಈ ಚಿತ್ರವನ್ನು ನೋಡಿದರೆ ಎಂಥವರಿಗೂ ದೇಶದ ಮೇಲೆ ಪ್ರೇಮ ಉಕ್ಕುತ್ತದೆ. ಹೆಮ್ಮೆಯ ಭಾವ ಇಮ್ಮಡಿಯಾಗುತ್ತದೆ. ಎದೆಯ ಮಟ್ಟಕ್ಕೆ ನೀರು ನಿಂತಿದ್ದರೂ 2017ರ ಆಗಸ್ಟ್​ 18ರಂದು ಅಸ್ಸಾಂನ ಈ ಪುಟ್ಟ ಹುಡುಗರು ಧ್ವಜಾರೋಹಣ ಮಾಡಿ ದೇಶಾದ್ಯಂತ ಮಾತಾಗಿದ್ದರು. ದುರಂತವೆಂದರೆ ಈ ಚಿತ್ರದಲ್ಲಿರುವ ಮೂವರಿಗೆ ದೇಶದ ಪೌರತ್ವ ಸಿಕ್ಕರೆ ಒಬ್ಬನಿಗೆ ಮಾತ್ರ ಸಿಕ್ಕಿಲ್ಲ. ಕಳೆದ ವರ್ಷ ಮಳೆಯಿಂದ ಮುಳುಗಡೆಯಾದ ಸ್ಥಳದಲ್ಲೂ ರಾಷ್ಟ್ರ ಪ್ರೇಮ ಮೆರೆದ 9 ವರ್ಷದ ಹೈದರ್​, ಈ ವರ್ಷದ ಸ್ವಾತಂತ್ರ್ಯೋತ್ಸವದ ಮುನ್ನ ಬಿಡುಗಡೆಯಾದ ನಾಗರಿಕ ರಾಷ್ಟ್ರೀಯ ನೋಂದಣಿ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಆದರೆ ಮೇಲಿನ ಚಿತ್ರದಲ್ಲಿರುವ ಹೈದರ್​ ಕುಟುಂಬದ ಜೈರುಲ್​ ಖಾನ್​ (10 ವರ್ಷ), ಅಸ್ಸಾಂನ ದುಬ್ರಿ ಜಿಲ್ಲೆಯ ಹೈದರ್​ ಓದುತ್ತಿದ್ದ ಶಾಲೆಯ ಮುಖ್ಯ ಶಿಕ್ಷಕ ತಾಜನ್​ ಸಿಕ್ದರ್​, ಸಹಾಯಕ ಶಿಕ್ಷಕ ನ್ರಿಪನ್​ ರಬಾ ನಾಗರಿಕ ನೋಂದಣಿ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇಂಡಿಯನ್​ ಎಕ್ಸ್​ಪ್ರೆಸ್​ ವರದಿಯ ಪ್ರಕಾರ, ಹೈದರ್​ನ 12 ವರ್ಷದ ಅಣ್ಣ, 6 ವರ್ಷದ ತಂಗಿ ಮತ್ತು ತಾತ ಕೂಡ ಎನ್​ಆರ್​ಸಿಯಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಹೈದರ್​ ಹೆಸರು ಮಾತ್ರ ಪಟ್ಟಿಯಲ್ಲಿ ಸೇರಿಲ್ಲ. "ನನಗೆ ರಾಷ್ಟ್ರೀಯ ನಾಗರಿಕ ನೋಂದಣಿ ಎಂದರೇನು ಎಂಬುದು ಗೊತ್ತಿಲ್ಲ. ನನ್ನ ಸುತ್ತಮುತ್ತಲು ತಿಳಿದವರು ಏನು ಹೇಳುತ್ತಾರೋ ನಾನು ಹಾಗೆ ಮಾಡುತ್ತೇನೆ," ಎಂದು ಹೈದರ್​ ಇಂಡಿಯನ್​ ಎಕ್ಸ್​ಪ್ರೆಸ್​ ಪತ್ರಿಕೆಗೆ ದೂರವಾಣಿ ಸಂಭಾಷಣೆಯಲ್ಲಿ ಹೇಳಿದ್ದಾನೆ. ಹೈದರ್​ ನೆರೆಹೊರೆಯ ಮಂದಿ ಹೇಳುವ ಪ್ರಕಾರ, ಕೆಲವೊಮ್ಮೆ ಅವರನ್ನು ಬಾಂಗ್ಲಾದೇಶಿಗರು ಎಂಬಂತೆ ಬಿಂಬಿಸಲಾಗುತ್ತದೆ. ಆದರೆ ಅವರು ಅಪ್ಪಟ ದೇಶಪ್ರೇಮಿಗಳು ಮತ್ತು ಭಾರತೀಯರು ಎನ್ನುತ್ತಾರೆ ಹೈದರ್​ ನೆಲೆಸಿರುವ ಬರ್ಕಾಲಿಯಾ-ನಸ್ಕರಾ ಗ್ರಾಮದ ನಿವಾಸಿಯೊಬ್ಬರು. ಎನ್​ಆರ್​ಸಿ ಅಂತಿಮ ಪಟ್ಟಿಯಲ್ಲಾದರೂ ಹೈದರ್​ ಹೆಸರು ಸೇರ್ಪಡೆಯಾಗಲಿ ಎಂದು ಅವರು ಪ್ರಾರ್ಥಿಸಿದ್ದಾರೆ. ರಾಷ್ಟ್ರೀಯ ನಾಗರಿಕ ನೋಂದಣಿಯ ಅಂತಿಮ ಪಟ್ಟಿ ಇದೇ ವರ್ಷದ ಜುಲೈ 30ರಂದು ಬಿಡುಗಡೆ ಮಾಡಲಾಗಿತ್ತು. 3.29 ಕೋಟಿ ಜನರಲ್ಲಿ 2.89 ಕೋಟಿ ಜನರನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿತ್ತು. ಈ ಮೂಲಕ ಬಾಂಗ್ಲಾದೇಶದಿಂದ ಹಲವು ವರ್ಷಗಳ ಹಿಂದೆ ಅಸ್ಸಾಂಗೆ ವಲಸೆ ಬಂದವರಲ್ಲಿ ಬಹುತೇಕರು ಭಾರತೀಯ ಪೌರತ್ವವನ್ನು ಅಧಿಕೃತವಾಗಿ ಪಡೆದಿದ್ದರು. ಆದರೆ ಈ ಪಟ್ಟಿಯನ್ನು ಅವೈಜ್ಞಾನಿಕವಾಗಿ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಯಾಕೆಂದರೆ ಹೈದರ್​ ರೀತಿಯ ಸಾವಿರಾರು ನಿದರ್ಶನಗಳು ಪಟ್ಟಿಯಲ್ಲಿದ್ದವು. ಒಂದೇ ಕುಟುಂಬ ಕೆಲವರಿಗೆ ಪೌರತ್ವ ದೊರೆತರೆ ಕೆಲವರಿಗೆ ಪೌರತ್ವ ದೊರೆತಿರಲಿಲ್ಲ. ಉದಾಹರಣೆಗೆ ಗಂಡನಿಗೆ ಪೌರತ್ವ ಸಿಕ್ಕರೆ ಹೆಂಡತಿ ಪೌರತ್ವದಿಂದ ವಂಚಿತರಾಗಿದ್ದರು. 40,70,707 ಮಂದಿಯ ಹೆಸರು ಪಟ್ಟಿಯಿಂದ ಕಾಣೆಯಾಗಿದ್ದರರೆ, 37,59,630 ಜನರ ಹೆಸರುಗಳು ತಿರಸ್ಕೃತ ಗೊಂಡಿದ್ದವು. ಜತೆಗೆ ಉಳಿದ 2,48,077 ಮಂದಿಯ ಹೆಸರು ಕಾಯ್ದಿರಿಸಲಾಗಿದೆ. ಇದಕ್ಕೂ ಮುನ್ನ, 2017ರ ಡಿಸೆಂಬರ್​ 31 ಮತ್ತು 2018ರ ಜನವರಿ 1ರಂದು ಕೋರ್ಟಿನ ಆದೇಶದನ್ವಯ ಎನ್​ಆರ್​ಸಿ ಮೊದಲ ಪಟ್ಟಿ ಬಿಡುಗಡೆಯಾಗಿತ್ತು. ಅದರಲ್ಲಿ 3.29 ಕೋಟಿ ಮಂದಿ ಅಭ್ಯರ್ಥಿಗಳಲ್ಲಿ 1.9 ಕೋಟಿ ಜನರನ್ನು ಪಟ್ಟಿಯಲ್ಲಿ ಸೇರಿಸಲಾಗಿತ್ತು. ಎನ್​ಆರ್​ಸಿ ಪಟ್ಟಿಯಲ್ಲಿ ಹೈದರ್​ ರೀತಿಯ ಸಾವಿರಾರು ಜನರ ಹೆಸರು ಬಿಟ್ಟು ಹೋಗಿದೆ. ಸಣ್ಣ ವಯಸ್ಸಿನಲ್ಲೇ ದೇಶದ ಮೇಲೆ ಅಪಾರ ಅಭಿಮಾನ ತೋರಿದ್ದ ಹೈದರ್​ಗೆ ಭಾರತೀಯ ಪೌರತ್ವ ಮುಂದಾದರೂ ಸಿಗಲಿದೆಯಾ ಎಂಬುದನ್ನು ಕಾದುನೋಡಬೇಕು.
OSCAR-2019
ಮೈಸೂರು, ಏಪ್ರಿಲ್ 14: "ನಾನು ಕಾಂಗ್ರೆಸ್ ಟಿಕೇಟ್ ವಿಚಾರವಾಗಿ ಹೈಕಮಾಂಡ್ ಆದೇಶಕ್ಕೆ ಬದ್ಧನಾಗಿರುತ್ತೇನೆ. ಪಕ್ಷ ಯಾವ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಸೂಚನೇ ನೀಡುತ್ತೋ ಅಲ್ಲಿ ನಿಲ್ಲುತ್ತೇನೆ. ಒಂದು ವೇಳೆ ಟಿಕೇಟ್ ಕೊಡದಿದ್ದರೆ ಪಕ್ಷಕ್ಕಾಗಿ ದುಡಿಯಲು ಸಿದ್ಧನಿದ್ದೇನೆ ಎಂದು ಶಾಸಕ ಮತ್ತು ಲೋಕೋಪಯೋಗಿ ಸಚಿವ ಡಾ.ಹೆಚ್ .ಸಿ ಮಹದೇಪ್ಪ ಹೇಳಿದ್ದಾರೆ. ಮೈಸೂರಿನಲ್ಲಿ ಇಂದು(ಏ.14) ಪತ್ರಕರ್ತರೊಂದಿಗೆ ಮಾತನಾಡಿದ ಅವರು, "ನಾನು ಇಂತಹದ್ದೇ ಕ್ಷೇತ್ರಕ್ಕೆ ಟಿಕೇಟ್ ಕೊಡಿ ಅಂತ ಯಾವುದೇ ಅರ್ಜಿ ಹಾಕಿಲ್ಲ. ತಮ್ಮ ಮಗ ಸುನೀಲ್ ಬೋಸ್ ಜೆಡಿಎಸ್ ಸೇರುವ ಬಗ್ಗೆ ಚರ್ಚೆ ನಡೆದಿದೆ ಎಂಬುದು ಸತ್ಯಕ್ಕೆ ದೂರವಾದ ವಿಚಾರ. ಆತ ಎಂದಿಗೂ ಆ ರೀತಿ ನಿರ್ಧಾರ ಮಾಡಿಲ್ಲ" ಎಂದು ತಮ್ಮ ಹಾಗೂ ಮಗನ ಸ್ಪರ್ಧೆ ವಿಚಾರದ ಗುಟ್ಟನ್ನು ಬಿಟ್ಟುಕೊಡದೆ ಜಾಣ ಪ್ರತಿಕ್ರಿಯೆ ನೀಡಿದರು ಮಹದೇವಪ್ಪ. "ದೇಶದಲ್ಲಿ ಅಪಾಯದಲ್ಲಿರುವ ಸಂವಿಧಾನವನ್ನು ರಕ್ಷಣೆ ಮಾಡಬೇಕು. ಪ್ರಜಾಪ್ರಭುತ್ವವನ್ನು ಉಳಿಸಿ ಕೋಮು ಶಕ್ತಿಯನ್ನು ಮಟ್ಟಹಾಕಬೇಕಿದೆ. ಹಾಗಾಗಿ ಜಾತ್ಯತೀತ ಶಕ್ತಿಗಳು ಸಂಘಟನಾತ್ಮಕ ಹೋರಾಟಗಳ ಮೂಲಕ ಹೋರಾಡಬೇಕೆಂಬ ಸಿದ್ಧಾಂತವೇ ಅಂಬೇಡ್ಕರ್ ಸಿದ್ಧಾಂತ" ಎಂದು ಅಂಬೇಡ್ಕರ್ ಜಯಂತಿಯನ್ನು ನೆನಪಿಸಿಕೊಂಡರು. ಮಹದೇವಪ್ಪ ಅವರು ತಮ್ಮ ಮಗ ಸುನಿಲ್ ಬೋಸ್ ಅವರಿಗೆ ತಮ್ಮ ಟಿ ನರಸಿಪುರ ಕ್ಷೇತ್ರವನ್ನು ಬಿಟ್ಟುಕೊಟ್ಟು, ತಾವು ಬೆಂಗಳೂರಿನ ಸಿವಿ ರಾಮನ್ ನಗರದಿಂದ ಸ್ಪರ್ಧಿಸುತ್ತಾರೆ, ಈ ಸಂಬಂಧ ಹೈಕಮಾಂಡ್ ಜೊತೆ ಮಾತುಕತೆ ನಡೆಸಿದ್ದಾರೆ ಎಂಬ ವದಂತಿ ಹರಿದಾಡಿತ್ತು. ಆದರೆ ನಂತರದ ಬೆಳವಣಿಗೆಯಲ್ಲಿ ಹೈಕಮಾಂಡ್ ಶಾಸಕರ ಮಕ್ಕಳಿಗೆ ಟಿಕೇಟ್ ನೀಡಲು ಮನಸ್ಸು ಮಾಡದಿರುವುದರಿಂದ ಅವರ ನಡೆ ಬದಲಾಗಿದೆ ಎನ್ನಲಾಗಿದೆ. ಏ.14 ರಂದು ಕಾಂಗ್ರೆಸ್ ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆಯಾಗುವ ಎಲ್ಲಾ ಸಾಧ್ಯತೆಗಳಿರುವುದರಿಂದ ಯಾರ್ಯಾರಿಗೆ ಯಾವ್ಯಾವ ಕ್ಷೇತ್ರ ಎಂಬ ಕುರಿತು ಸ್ಪಷ್ಟ ಚಿತ್ರಣ ದೊರಕಲಿದೆ. hc mahadevappa karnataka assembly elections 2018 mysuru district news ಕರ್ನಾಟಕ ವಿಧಾನಸಭೆ ಚುನಾವಣೆ 2018 ತಿ ನರಸೀಪುರ ಮೈಸೂರು ಜಿಲ್ಲಾಸುದ್ದಿ
OSCAR-2019
ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ಪತ್ತಿನ ಸಹಕಾರ ಸಂಘದ ವತಿಯಿಂದ 2017-18ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಮತ್ತು ಪದವಿ ಕೋರ್ಸ್‌ಗಳಲ್ಲಿ ಶೇ 60ಕ್ಕೂ ಹೆಚ್ಚು ಅಂಕಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. 1,500ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಒಟ್ಟು ₹ 32 ಲಕ್ಷ ನಗದು ಪುರಸ್ಕಾರ ನೀಡಲಾಯಿತು. ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ಶಾಸಕಿ ಸೌಮ್ಯಾ ರೆಡ್ಡಿ, ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್.ಉಮಾಶಂಕರ್, ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಕೆ.ಆರ್.ವೇಣುಗೋಪಾಲ್, ಎಐಟಿಯುಸಿ ಅಧ್ಯಕ್ಷ ಅನಂತಸುಬ್ಬರಾವ್, ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಲದ ಅಧ್ಯಕ್ಷ ಪ್ರೊ.ಕೆ.ಎಸ್ ಶರ್ಮಾ, ಮಂಜುನಾಥ್‌ ಇದ್ದರು. ಮುಖ್ಯಮಂತ್ರಿ ಪ್ರವಾಹ ಪರಿಹಾರ ನಿಧಿಗೆ ₹ 17.97 ಲಕ್ಷ ಧನ ಸಹಾಯ ನೀಡಲಾಯಿತು.
OSCAR-2019
ರಕ್ಷಾ ಬಂಧನ ಹಾಗೂ ಗ್ರಹಣ ಒಟ್ಟಿಗೆ ಬಂದಿದೆ. ಆಗಸ್ಟ್ 7ರ ರಾತ್ರಿ 10 ಗಂಟೆ 53 ನಿಮಿಷಕ್ಕೆ ಗ್ರಹಣ ಶುರುವಾಗಲಿದೆ. ಗ್ರಹಣದ ಮಧ್ಯಕಾಲ ರಾತ್ರಿ 11 ಗಂಟೆ 50 ನಿಮಿಷ. 12 ಗಂಟೆ 49 ನಿಮಿಷಕ್ಕೆ ಗ್ರಹಣ ಮುಕ್ತಾಯವಾಗಲಿದೆ. ಶಾಸ್ತ್ರಗಳ ಪ್ರಕಾರ ಗ್ರಹಣದ ಕಾಲದಲ್ಲಿ ಕೆಲವೊಂದು ಕೆಲಸಗಳನ್ನು ಮಾಡಬಾರದು. ಈಗಿನ ಕಾಲದಲ್ಲಿ ಜನರು ಶಾಸ್ತ್ರಗಳನ್ನು ನಂಬುವುದಿಲ್ಲ. ಒಂದು ವೇಳೆ ಶಾಸ್ತ್ರಗಳನ್ನು ನಂಬುವವರು ನೀವಾಗಿದ್ದರೆ ಸಂಜೆ ಸಮಯದಲ್ಲಿ ಅಪ್ಪಿತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ. ಇದು ನಿಮ್ಮ ಮಾನಸಿಕ ಹಾಗೂ ದೈಹಿಕ ಸಮಸ್ಯೆಗೆ ಕಾರಣವಾಗುತ್ತದೆ. ಸಂಜೆ ಹೊತ್ತಿನಲ್ಲಿ ಎಣ್ಣೆಯಿಂದ ಮಸಾಜ್ ಮಾಡಿಕೊಳ್ಳಬೇಡಿ. ಇದು ಚರ್ಮಕ್ಕೆ ಸಂಬಂಧಿಸಿದ ಕೆಲ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಗರ್ಭಿಣಿಯರು ಹೆಚ್ಚಿನ ಗಮನ ನೀಡಬೇಕು. ಮನೆಯಿಂದ ಹೊರಗೆ ಹೋಗದಿರುವುದು ಬಹಳ ಒಳ್ಳೆಯದು. ಜೊತೆಗೆ ಭಗವಂತನ ಜಪ ಮಾಡಿ. ಇಲ್ಲವಾದ್ರೆ ಗರ್ಭದಲ್ಲಿರುವ ಮಗುವಿನ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆಯಿದೆ. ಗ್ರಹಣ ಕಾಲದಲ್ಲಿ ದೇವರ ಮೂರ್ತಿಯನ್ನು ಮುಟ್ಟಬೇಡಿ. ಹಾಗೆ ಚಿನ್ನವನ್ನೂ ಮುಟ್ಟಬೇಡಿ. ಆಹಾರ ತಯಾರಿಸುವ ಹಾಗೂ ತಿನ್ನುವ ಸಾಹಸ ಬೇಡ.
OSCAR-2019
ಗುಳೇದಗುಡ್ಡ,ಫೆ.7- ಬ್ಯಾಂಕಿನಿಂದ ಸಾಲ ಪಡೆದ ನೇಕಾರ ಕುಟುಂಬವೊಂದು ಸಾಲ ಬಾಕಿ ಉಳಿಸಿಕೊಂಡಿದ್ದರಿಂದ ಮನೆಯ ನೆಲೆಯನ್ನು ಕಳೆದುಕೊಳ್ಳುವ ಪ್ರಸಂಗ ಎದುರಾಗಿದೆ. ಜಗದ ಜನರ ಮಾನ ಮುಚ್ಚುವ ನೇಕಾರ ಇಂದು ತನ್ನ ಮಾನವನ್ನೇ ಹರಾಜಿಗಿಡುವ ಪರಿಸ್ಥಿತಿ ಬಂದೊದಗಿದ್ದು ವಿಪರ್ಯಾಸದ ಸಂಗತಿ.ಗುಳೇದಗುಡ್ಡದ ಚಂದ್ರಶೇಖರ ಹೊನ್ನಳ್ಳಿ ಅವರದು ನೇಕಾರಿಕೆಕುಟುಂಬ. ತಂದೆ ಟೋಪಣ್ಣ, ತಾಯಿ ಸುವರ್ಣಾ ನೇಕಾರಿಕೆ ವೃತ್ತಿ ಮಾಡುತ್ತ ಬಂದವರು. ಇಬ್ಬರು ಸಹೋದರಿಯರು ಓದಿಕೊಂಡಿದ್ದರೂ ಈ ನೇಕಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಗುಳೇದಗುಡ್ಡದ ಪರಂಪರಾಗತ ಕೈಮಗ್ಗ ನೇಕಾರಿಕೆಯಲ್ಲಿ ಖಣಗಳನ್ನು ನೇಯುತ್ತ ಬಂದವರು ಇವರ ತಂದೆ. ಕೈಮಗ್ಗಗಳು ಮೂಲೆ ಸೇರಿದ್ದರಿಂದ ಮಗ ಚಂದ್ರಶೇಖರ ಮನೆಯಲ್ಲಿ ಪವರಲೂಮ್ ಮಗ್ಗಗಳನ್ನು ಹಾಕುವ ವಿಚಾರ ಮಾಡಿದರು. ಅದಕ್ಕಾಗಿ ಬ್ಯಾಂಕ್‍ಗಳನ್ನು ಅಲೆದಾಡಿ ಕೊನೆಗೆ ಬಾಗಲಕೋಟೆಯಲ್ಲಿನ ಮಹಾರಾಷ್ಟ್ರದ ಕೊಲ್ಲಾಪೂರ ಮೂಲದ ಆರ್‍ಬಿಎಲ್ ಹಿಂದಿನ ಹೆಸರು ರತ್ನಾಕರ ಬ್ಯಾಂಕ್ ಲಿಮಿಟೆಡ್ ಬ್ಯಾಂಕ್‍ನಲ್ಲಿ ಮನೆಯನ್ನು ಆಧಾರವಾಗಿಟ್ಟುಕೊಂಡು 30-4-2015ರಂದು ಸಾಲ ಪಡೆದುಕೊಂಡರು. ಪ್ರತಿ ತಿಂಗಳ 5ನೇ ತಾರೀಖಿನಂದು 20,101 ರೂ.ನಂತೆ ಸಾಲ ಮರುಪಾವತಿ ಮಾಡಬೇಕು ಎಂದು ಬ್ಯಾಂಕ್ ತಿಳಿಸಿತ್ತು. ಸಾಲ ಪಡೆದ ಚಂದ್ರಶೇಖರ ಅವರು 8 ಪವರಲೂಮ್ ಮಗ್ಗಗಳನ್ನು ತಂದು ಮನೆಯಲ್ಲಿ ಹಾಕಿಕೊಂಡು ಮನೆಯವರೆಲ್ಲ ನೇಕಾರಿಕೆಯಲ್ಲಿ ತೊಡಗಿಕೊಂಡರು. ಇತ್ತ ಸಾಲದ ಕಂತನ್ನು ತುಂಬುತ್ತಾ ಬಂದು ಡಿಸೆಂಬರ್ 2015ರವರೆಗೆ ಸಾಲ ಮರುಪಾವತಿ ಮಾಡಿದರು. ಆದರೆ ಡಿಸೆಂಬರ್ 2015ರ ನಂತರದಲ್ಲಿ ಸಾಲದ ಕಂತನ್ನು ತುಂಬಲಿಲ್ಲ.ಹೀಗಾಗಿ ಬ್ಯಾಂಕ್ ಇವರ ಸಾಲವನ್ನು ಎನ್‍ಪಿಎಗೆ ಸೇರಿಸಿದ್ದು, ಈಗ ಮನೆಯನ್ನು ಸ್ವಾದೀನ ಪಡಿಸಿಕೊಳ್ಳವ ನೋಟಿಸು ಜಾರಿ ಮಾಡಿದೆ. ಈ ನೋಟಿಸು ಜಾರಿ ಮಾಡುವ ಮೊದಲು ಚಂದ್ರಶೇಖರ ಅವರು ಬ್ಯಾಂಕ್‍ಗೆ ದಿನಾಂಕ 23-12-2016ರಂದು ಒಂದು ಲಕ್ಷರೂಪಾಯಿಯನ್ನುಜಮೆ ಮಾಡಿದ್ದಾರೆ.ಆದರೂ 10-1-2017ರಂದು ಆರ್‍ಬಿಎಲ್ ಬ್ಯಾಂಕ್ ಸಾಲಗಾರರ ಆಸ್ತಿಯನ್ನು ಸಾಂಕೇತಿಕ ಸ್ವಾದೀನ ಸೂಚನೆಯ ಪ್ರಕಟಣೆಯನ್ನು ಪತ್ರಿಕೆಯಲ್ಲಿ ನೀಡಿದೆ.8 ಲಕ್ಷರೂ. ಸಾಲ ಇಗ 9,55,182ರೂ. ಗೆ ಬಂದಿದೆ. ಇದರಿಂದ ನೇಕಾರಿಕೆ ಕುಟುಂಬ ದಿಕ್ಕುತಪ್ಪಿದಂತಾಗಿದೆ. ಸಾಲದ ಮರುಪಾವತಿ ಅವಧಿಯನ್ನು ಇನ್ನು ಆರೇಳು ತಿಂಗಳು ಹೆಚ್ಚಿಸುವಚಿತೆ ಆರ್.ಬಿ.ಎಲ್. ಬ್ಯಾಂಕ್‍ನ ಬಾಗಲಕೋಟೆ ಶಾಖೆಗೆ ಮಾತ್ರವಲ್ಲದೇ ಹುಬ್ಬಳ್ಳಿ ಹಾಗೂ ಬೆಂಗಳೂರಿಗೂ ಕಚೇರಿಗಳಿಗೆ ಹೋಗಿ ಮನವಿ ಮಾಡಿದ್ದಾರೆ. ನಾವು ಸಾಲವನ್ನು ಮನ್ನಾ ಮಾಡಿ ಎಂದು ಬ್ಯಾಂಕ್‍ನವರಿಗೆ ಹೇಳುವುದಿಲ್ಲ. ಸಾಲ ತುಂಬಲು ನಮಗೆ ಅವಕಾಶ ನೀಡಿ ಎಂದಷ್ಟೇ ಕೇಳಿ ಕೊಳ್ಳುತ್ತಿದ್ದೇವೆ. ನೇಕಾರಿಕೆ ಮಾರುಕಟ್ಟೆ ಸಮಸ್ಯೆ ಹಾಗೂ ನಮ್ಮ ಅಜ್ಜಿಯವರಿಗೆ ಬ್ರೇನ್‍ಟೂಮರ್ ಆvದ್ದರಿಂದ ಅವರನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸಾಕಷ್ಟು ಹಣ ಖರ್ಚು ಮಾಡಿದೆ ಆದರೂ ಅವರು ತೀರಿ ಹೋದರು. ಇವೆಲ್ಲ ಅನಾನುಕೂಲತೆಯಿಂದಾಗಿ ನಾವು ಸಾಲದ ಕಂತನ್ನು ತುಂಬಲು ಸಾಧ್ಯವಾಗಲಿಲ್ಲ. ಇಂತಹ ಸಂದರ್ಭದಲ್ಲಿಯೂ ಡಿಸೆಂಬರ್ ತಿಂಗಳಲ್ಲಿ ಒಂದು ಲಕ್ಷ ಸಾಲಕ್ಕೆ ಭರಿಸಿದ್ದೇನೆ. ಆದರೂ ನಮಗೆ ಬ್ಯಾಂಕ್‍ನವರು ಸಾಲ ಮರುಪಾವತಿಗೆ ಕಾಲಾವಕಾಶ ನೀಡುತ್ತಿಲ್ಲ. ಇದರಿಂದ ಮನೆಮಂದಿ ಮಾನಸಿಕವಾಗಿ ಕುಗ್ಗಿಹೋಗಿದ್ದೇವೆ. ಬಾಂಕಿನವರ ಕಿರುಕುಳದಿಂದಾಗಿ ನನಗೆ ಹಾಗೂ ನಮ್ಮ ಕುಟುಂಬಕ್ಕೆ ಏನಾದರೂ ಅನಾಹುತವಾದರೆ ಆರ್.ಬಿ.ಎಲ್. ಬ್ಯಾಂಕ್ ಹಾಗೂ ಬ್ಯಾಂಕ್‍ನ ಅಧಿಕಾರಿಗಳು ಕಾರಣವಾಗುತ್ತಾರೆ ಎಂದು ನೋವಿನಿಂದ ಹೇಳುತ್ತಾರೆ. ಆರ್‍ಬಿಎಲ್ ಸಾಲ ವಸೂಲಿ ಅಧಿಕಾರಿ ಡ್ಯಾನಿಯಲ್ ಮಡಗುಂಡಿ ಅವರು ಮನೆಗೆ ಬಂದು ಸಾಕಷ್ಟು ಕಿರುಕುಳ ನೀಡುತ್ತಿದ್ದಾರೆ. ಬೂಟು ಹಾಕಿಕೊಂಡೇ ಮನೆಯೊಳಗೆ ಬಂದು ದಬಾಯಿಸುತ್ತಾರೆ. ಹರೆಯದ ಹೆಣ್ಣುಮಕ್ಕಳಿರುವ ನಮ್ಮ ಕುಟುಂಬ ಮಾನಸಿಕವಾಗಿ ಕಿರುಕುಳ ಅನುಭವಿಸು ವಂತಾಗಿದೆ. ನಮಗೆ ಮಾನಮರ್ಯಾದೆ ಇಲ್ಲದಂತಾಗಿದೆ. ಇದರಿಂದ ಯಾವಾಗ ನಾವು ಮುಕ್ತಿ ಸಿಗುತ್ತದೆಯೋ? ಎಚಿದು ಚಂದ್ರಶೇಖರ ಅವರ ಸಹೋದರಿ ಗಂಗಮ್ಮ ಕಣ್ಣೀರು ಹಾಕುವುದು ನೋಡಿದರೆ ಕರಳು ಚುರ್ ಎನ್ನದೇ ಇರದು. ಸಾಲ ಮರುಪಾವತಿ ಅವಧಿಯನ್ನು ಹೆಚ್ಚಿಸುವಂತೆ ಬ್ಯಾಂಕ್‍ನ ಹುಬ್ಬಳ್ಳಿ ಶಾಖೆಗೆ ಹೋದಾಗ ನಮಗೆ ಒಳಗೆ ಬೀಡಲಿಲ್ಲ. ತಾಸುಗಟ್ಟಲೇ ಹೊರೆಗೆ ನಿಲ್ಲಿಸಿದರು. ನಮ್ಮನ್ನು ನಾಯಿಯನ್ನು ನೋಡಿಕೊಂಡಂತೆ ನೋಡಿಕೊಂಡರು ಎಚಿದು ಚಂದ್ರಶೇಖರ ಅವರ ತಾಯಿ ನೋವಿನಿಂದ ಹೇಳುತ್ತಾರೆ. ನೇಕಾರಿಕೆ ಕುಟುಂಬದಿಂದ ಬಂದಿರುವ ಜಿಲ್ಲಾ ಉಸ್ತುವಾರಿ ಸಚಿವೆ ಉಮಾಶ್ರೀ, ಜವಳಿ ಸಚಿವ ರುದ್ರಪ್ಪ ಲಮಾಣಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಜಿ. ಪರಮೇಶ್ವರ ಹಾಗೂ ಕೆಎಚ್‍ಡಿಸಿ ನಿಗಮದ ಅಧ್ಯಕ್ಷ ರವೀಂದ್ರಕಲ್ಬುರ್ಗಿ, ಆರ್.ಬಿ.ಎಲ್. ಬ್ಯಾಂಕ್‍ನ ಎಂ.ಡಿ. ವಿಶ್ವವೀರ ಅಹುಜ ಅವರು ಬಡ ನೇಕಾರರ ನೆರವಿಗೆ ಬಂದು ಸಾಲ ಮರುಪಾವತಿಗೆ 6-7ತಿಂಗಳ ಹೆಚ್ಚಿನ ಕಾಲಾವಕಾಶ ನೀಡಬೇಕು ಎಂದು ಸಾಲಗಾರ ಚಂದ್ರಶೇಖರ ಮನವಿ ಮಾಡುತ್ತಾರೆ. ಚಂದ್ರಶೇಖರ ಹೊನ್ನಳ್ಳಿ ಸಾಲಗಾರ ಹಾಗೂ ಮೂವರು ಸಹ ಸಾಲರರಾಗಿ ಏಪ್ರಿಲ್ 2015ರಲ್ಲಿ ಆರ್.ಬಿ.ಎಲ್ ಬ್ಯಾಂಕ್ ಬಾಗಲಕೋಟೆ ಶಾಖೆಯಿಂದ ಸಣ್ಣ ವ್ಯಾಪರಕ್ಕಾಗಿ 8 ಲಕ್ಷ ರೂ. ಸಾಲವನ್ನು ಮನೆ ಆಸ್ತಿಯ ಮೇಲೆ ಪಡೆದುಕೊಂಡಿದ್ದಾರೆ. ತಿಂಗಳ ಸಾಲದ ಕಂತಿನಲ್ಲಿ ಡಿಸೆಂಬರ್ 2015ರ ನಚಿತರದ ಕಂತು ಕಟ್ಟಿಲ್ಲ. ಸಾಲ ಮರುಪಾವತಿಗೆ ಈಗಾಗಲೇ ಅವರಿಗೆ ಸಾಕಷ್ಟು ಸಮಯಾವಕಾಶ ನೀಡಲಾಗಿದೆ. ನಮ್ಮ ಬ್ಯಾಂಕ್‍ನ ನಿಯವ್ಮದಂತೆ ಕ್ರಮಕೈಗೊಂಡಿದ್ದೇನೆ ಅಷ್ಟೆ. ನಾನು ಸಾಲಗಾರರ ಮೇಲೆ ಯಾವುದೇ ದಬ್ಬಾಳಿಕೆ ಮಾಡಿಲ್ಲ ಎಚಿದು ಆರ್.ಬಿ.ಎಲ್ ಬ್ಯಾಂಕ್‍ನ ಸಾಲ ವಸೂಲಿ ಅಧಿಕಾರಿ ಡ್ಯಾನಿಯಲ್ ಮಡಗುಂಡಿ ಹೇಳದರು. ನೇಕಾರಿಕೆಯಲ್ಲಿನ ನಷ್ಟದಿಂದಾಗಿ ಆರ್.ಬಿ.ಎಲ್. ಬ್ಯಾಂಕ್‍ನಲ್ಲಿ ಪಡೆದಿರುವ ಸಾಲ ಉಳಿಸಿಕೊಂಡಿದ್ದೇನೆ. ಸಾಲ ಮರುಪಾವತಿಗೆ ಹೆಚ್ಚಿನ ಅವಕಾಶ ನೀಡಿ ಎಂದು ಬ್ಯಾಂಕ್‍ನವರನ್ನು ಕೇಳಿಕೊಂಡರೂ ಪ್ರಯೋಜನವಾಗಿಲ್ಲ. ಬ್ಯಾಂಕ್‍ನವರ ಕಿರುಕುಳದಿಂದಾಗಿ ನಮ್ಮ ಕುಟುಂಬ ಬದುಕುವುದು ದುಸ್ತರವಾಗಿದೆ. ನನಗೆ ಹಾಗೂ ನನ್ನ ಕುಟುಂಬಕ್ಕೆ ಏನಾದರೂ ಅನಾಹುತವಾದರೆ ಅದಕ್ಕೆ ಆರ್.ಬಿ.ಎಲ್ ಬ್ಯಾಂಕ್ ಹಾಗೂ ಅದರ ಅಧಿಕಾರಿಗಳು ನೇರ ಹೊಣೆಯಾಗುತ್ತಾರೆ. ಬೆಂಗಳೂರು, ನ.4-ಬೇಲೆಕೇರಿ ಅಕ್ರಮ ಅದಿರು ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಎಸ್‍ಐಟಿ ತನಿಖಾ ಸಂಸ್ಥೆಗೆ ವಹಿಸಿರುವುದನ್ನು ಸ್ವಾಗತಿಸುವುದಾಗಿ ಜೆಡಿಎಸ್ ಶಾಸಕ ವೈ.ಎಸ್.ವಿ.ದತ್ತ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯಮೂರ್ತಿ ಸಂತೋಷ್ ಹೆಗಡೆ ಅವರು ಲೋಕಾಯುಕ್ತರಾಗಿದ್ದಾಗ ಅಕ್ರಮ ಅದಿರು ರಫ್ತಿಗೆ ಸಂಬಂಧಿಸಿದಂತೆ ವರದಿ ನೀಡಿದ್ದರು. ಆ ವರದಿ ರಾಜ್ಯ ವಿಧಾನಮಂಡಲದ ಉಭಯ ಸದನಗಳಲ್ಲೂ ಸಾಕಷ್ಟು ಚರ್ಚೆಯಾಗಿತ್ತು. ಸಮಗ್ರ ಸಾಕ್ಷ್ಯಾಧಾರಗಳು ಇಲ್ಲ ಎಂದು ಪ್ರಕರಣಕ್ಕೆ ತೆರೆಬಿದಿತ್ತು. ಈಗ ರಾಜ್ಯ ಸರ್ಕಾರ ಅದಕ್ಕೆ ಮರುಜೀವ ನೀಡಿರುವುದು ಒಳ್ಳೆಯ ಕೆಲಸ ಎಂದರು. ಅದಿರು ರಫ್ತು ಪ್ರಕರಣದಲ್ಲಿ ಅಕ್ರಮ ನಡೆದಿರುವ ಬಗ್ಗೆ ನನಗೆ ಖಚಿತ ನಂಬಿಕೆಯಿದೆ. ಹೀಗಾಗಿ ತನಿಖೆ ನಡೆದು ಸತ್ಯಾಂಶ ಹೊರಬರಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದು ಹೇಳಿದರು. ಎಸ್‍ಐಟಿ ತನಿಖಾ ಸಂಸ್ಥೆಗೆ ವಹಿಸಿದ ಕೂಡಲೇ ಕಾಂಗ್ರೆಸ್ ರಾಜಕೀಯ ಅಸ್ತವಾಗಿ ಬಳಸುತ್ತಿದೆ ಎಂಬುದಾಗಲಿ, ಸಿಬಿಐ ತನಿಖಾ ಸಂಸ್ಥೆಗೆ ವಹಿಸಿದ ಕೂಡಲೇ ಬಿಜೆಪಿ ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ ಎಂದು ಹೇಳುವುದು ಸರಿಯಲ್ಲ. ರಾಜ್ಯದ ಸಾರ್ವಜನಿಕ ಹಿತಾಸಕ್ತಿಗೆ ಅನುಗುಣವಾಗಿ ಯಾವುದೇ ತನಿಖೆಗೆ ವಹಿಸಿದರೂ ಸ್ವಾಗತಾರ್ಹ. ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಮರುಜೀವ ದೊರೆತಿರುವಂತೆ ಅಕ್ರಮ ಅದಿರು ರಫ್ತ ಪ್ರಕರಣಕ್ಕೂ ಮರುಜೀವ ಬಂದಿರುವುದು ಸ್ವಾಗತಾರ್ಹವಾದುದು ಎಂದು ದತ್ತ ಹೇಳಿದರು. ಬೆಂಗಳೂರು,ಮಾ.4-ಇನ್ನೇನು ಬಿಜೆಪಿಯಲ್ಲಿ ಎಲ್ಲವೂ ಮುಗಿದು ನಾಯಕರೆಲ್ಲರೂ ಒಗ್ಗಟ್ಟಿನಿಂದ ಚುನಾವಣೆಗೆ ಹೋಗಲಿದ್ದಾರೆ ಎನ್ನುವಾಗಲೇ ಪುನಃ ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವೆ ಮುಸುಕಿನ ಗುದ್ದಾಟ ಆರಂಭವಾಗಿದೆ. ಶಿವಮೊಗ್ಗನಗರದಿಂದ ಯಡಿಯೂರಪ್ಪ ತಮಗೆ ಟಿಕೆಟ್ ತಪ್ಪಿಸಲು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ ಎಂಬ ಸುಳಿವು ಅರಿತಿರುವ ಈಶ್ವರಪ್ಪ, ರಾಜ್ಯಾಧ್ಯಕ್ಷರ ವಿರುದ್ದ ಎರಡನೇ ಹಂತದ ನಾಯಕರನ್ನು ಎತ್ತಿಕಟ್ಟುವ ಕೆಲಸಕ್ಕೆ ಮುಂದಾಗಿದ್ದಾರೆ. ಇದಕ್ಕೆ ಮುನ್ನುಡಿ ಎಂಬಂತೆ ಸಾಗರದಿಂದ ಯಡಿಯೂರಪ್ಪ ತಮ್ಮ ಆಪ್ತ ಮಾಜಿ ಸಚಿವ ಹರತಾಳ್ ಹಾಲಪ್ಪನಿಗೆ ಟಿಕೆಟ್ ನೀಡಲಾಗುವುದು ಎಂದು ಕಳೆದ ವಾರವೇ ಘೋಷಣೆ ಮಾಡಿದ್ದರು. ಇದನ್ನೇ ಮುಂದಿಟ್ಟುಕೊಂಡಿರುವ ಕೆ.ಎಸ್.ಈಶ್ವರಪ್ಪ , ಯಡಿಯೂರಪ್ಪ ವಿರುದ್ದ ಸಾಗರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಗೋಪಾಲ್ ಕೃಷ್ಣ ಬೇಳೂರು ಅವರನ್ನು ಎತ್ತಿಕಟ್ಟುತ್ತಿದ್ದಾರೆ. ಇನ್ನು ಹೊನ್ನಾಳಿಯಿಂದ ಬಿಎಸ್‍ವೈ ತಮ್ಮ ಬಲಗೈ ಬಂಟ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರಿಗೆ ಟಿಕೆಟ್ ಘೋಷಿಸಿದ್ದಾರೆ. ಆದರೆ ಈಶ್ವರಪ್ಪ ಈ ಕ್ಷೇತ್ರದಿಂದ ಮಾಜಿ ಸಚಿವ ಡಾ.ಡಿ.ಬಿ.ಗಂಗಪ್ಪಗೆ ಟಿಕೆಟ್ ಕೊಡಿಸಲು ಮುಂದಾಗಿದ್ದಾರೆ. ಇದೇ ರೀತಿ ತುಮಕೂರಿನಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಾಜಿ ಸಂಸದ ಜೆ.ಎಚ್.ಬಸವರಾಜ್ ಅವರ ಪುತ್ರ ಜ್ಯೋತಿ ಗಣೇಶ್‍ಗೆ ಟಿಕೆಟ್ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಇಲ್ಲಿಯೂ ಈಶ್ವರಪ್ಪ ಮಾಜಿ ಸಂಸದ ಸೊಗಡು ಶಿವಣ್ಣಗೆ ಟಿಕೆಟ್ ನೀಡಬೇಕೆಂದು ವರಿಷ್ಠರ ಮೇಲೆ ಒತ್ತಡದ ತಂತ್ರ ಅನುಸರಿಸುತ್ತಿದ್ದಾರೆ. ಎಲ್ಲೆಲ್ಲಿ ಯಡಿಯೂರಪ್ಪ ತಮ್ಮ ಆಪ್ತರಿಗೆ ಟಿಕೆಟ್ ಕೊಡಿಸಲು ಮುಂದಾಗಿದ್ದಾರೋ ಅಂತಹ ಕಡೆ ಈಶ್ವರಪ್ಪ ಪಕ್ಷ ನಿಷ್ಠರಿಗೆ ಟಿಕೆಟ್ ನೀಡಬೇಕೆಂಬ ಬೇಡಿಕೆಯನ್ನು ವರಿಷ್ಠರ ಮುಂದಿಟ್ಟಿದ್ದಾರೆ ಎನ್ನಲಾಗಿದೆ. ಯಡಿಯೂರಪ್ಪ ವಿರುದ್ದ ಪಕ್ಷ ನಿಷ್ಠರನ್ನು (ಟಿಕೆಟ್ ವಂಚಿತರಾಗುವವರನ್ನು) ಎತ್ತಿ ಕಟ್ಟಿದರೆ ಕಡೆಪಕ್ಷ ವರಿಷ್ಠರು ತಮಗೆ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಿಂದಲಾದರೂ ಟಿಕೆಟ್ ನೀಡಬಹುದೆಂಬುದು ಈಶ್ವರಪ್ಪನವರ ಲೆಕ್ಕಾಚಾರ. ಇದಕ್ಕಾಗಿಯೇ ಕಳೆದ ವಾರ ಇದ್ದಕ್ಕಿದ್ದಂತೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮುಖಂಡರ ಸಭೆ ನಡೆಸಲು ಪರೋಕ್ಷವಾಗಿ ಸೂಚನೆ ನೀಡಿದ್ದರು. ಪುನಃ ಬ್ರಿಗೇಡ್ ಚಟುವಟಿಕೆ ಆರಂಭವಾಗಬಹುದೆಂಬ ಭೀತಿಯಿಂದಾಗಿ ಬ್ರಿಗೇಡ್ ಮುಖಂಡರ ಜೊತೆ ರಾಜ್ಯ ಬಿಜೆಪಿ ಉಸ್ತುವಾರಿ ಮುರುಳೀಧರ್ ರಾವ್ ಈಶ್ವರಪ್ಪನವರ ಜೊತೆ ಮಾತುಕತೆ ನಡೆಸಿದಾಗ ಟಿಕೆಟ್ ನೀಡಬೇಕೆಂಬ ಬೇಡಿಕೆಯನ್ನು ಮುಂದಿಟ್ಟರು. ಸಮೀಕ್ಷೆ ಆಧಾರದ ಮೇಲೆ ಟಿಕೆಟ್ ನೀಡಲಾಗುತ್ತದೆ ಎಂದು ವರಿಷ್ಠರು ಪದೇ ಪದೇ ಹೇಳುತ್ತಿದ್ದರೂ ಗಲಿಬಿಲಿಗೊಂಡಿರುವ ಈಶ್ವರಪ್ಪ, ಯಡಿಯೂರಪ್ಪ ವಿರೋಧಿಗಳನ್ನು ಎತ್ತಿಕಟ್ಟುವ ಮೂಲಕ ಪಕ್ಷದಲ್ಲಿ ತಮ್ಮ ಸ್ಥಾನವನ್ನು ಭದ್ರ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಆದರೆ ಯಡಿಯೂರಪ್ಪ ಮಾತ್ರ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ವರಿಷ್ಠರು ನೀಡಿರುವ ಸೂಚನೆಯನ್ನು ಪಾಲನೆ ಮಾಡುತ್ತಿದ್ದಾರೆ. ಇದೀಗ ತ್ರಿಪುರ ರಾಜ್ಯದಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದರಿಂದ ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರಬೇಕೆಂಬುದು ವರಿಷ್ಠರ ಮಹದಾಸೆ. ಇಂಥ ಸಂದರ್ಭದಲ್ಲಿ ಈಶ್ವರಪ್ಪ ತಮ್ಮ ಹಳೇ ಹೊರಸೆಯನ್ನು ತೆಗೆದರೆ ಕೇಂದ್ರ ನಾಯಕರು ತಲೆಕೆಡಿಸಿಕೊಳ್ಳುವ ವ್ಯವದಾನದಲ್ಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಷಾ ಎಂಬ ದೈತ್ಯಗಳಿರುವಾಗ ಈಶ್ವರಪ್ಪನವರ ಬಂಡಾಯಕ್ಕೆ ಮಣಿಯುವ ಪ್ರಶ್ನೆಯಿಲ್ಲ ಎಂಬ ಸಂದೇಶವನ್ನು ತಮ್ಮ ಆಪ್ತರ ಮೂಲಕ ಬಿಎಸ್‍ವೈ ಮುಟ್ಟಿಸಿದ್ದಾರೆ.
OSCAR-2019
ಚೆನ್ನೈ: ತಮಿಳುನಾಡು ಆರೋಗ್ಯ ಸಚಿವ ಸಿ.ವಿಜಯಭಾಸ್ಕರ್‌ ಮತ್ತು ಪೊಲೀಸ್‌ ಮಹಾ ನಿರ್ದೇಶಕ ಟಿ.ಕೆ. ರಾಜೇಂದ್ರನ್‌ ಅವರ ನಿವಾಸ ಮತ್ತು ಅವರಿಗೆ ಸೇರಿದ ಇತರ ಸ್ಥಳಗಳಲ್ಲಿ ಸಿಬಿಐ ಅಧಿಕಾರಿಗಳು ಬುಧವಾರ ಶೋಧ ನಡೆಸಿದ್ದಾರೆ. ಬಹುಕೋಟಿ ಗುಟ್ಕಾ ಹಗರಣಕ್ಕೆ ಸಂಬಂಧಿಸಿ ಈ ಶೋಧ ನಡೆದಿದೆ. ನಿವೃತ್ತ ಐಪಿಎಸ್‌ ಅಧಿಕಾರಿ ಎಸ್.ಜಾರ್ಜ್‌ ಮತ್ತು ಎಐಎಡಿಎಂಕೆ ಮುಖಂಡ ಮತ್ತು ಮಾಜಿ ಸಚಿವರೊಬ್ಬರ ನಿವಾಸ ಸೇರಿ 40ಕ್ಕೂ ಹೆಚ್ಚು ಸ್ಥಳಗಳಲ್ಲಿ ಹುಡುಕಾಟ ನಡೆದಿದೆ. ಗುಟ್ಕಾ ಹಗರಣದ ಬಗ್ಗೆ ತಮಿಳುನಾಡಿನ ಜಾಗೃತ ಮತ್ತು ಭ್ರಷ್ಟಾಚಾರ ತಡೆ ನಿರ್ದೇಶನಾಲಯವು (ಡಿವಿಎಸಿ) ತನಿಖೆ ನಡೆಸುತ್ತಿತ್ತು. ಮದ್ರಾಸ್‌ ಹೈಕೋರ್ಟ್‌ ನಿರ್ದೇಶನದಂತೆ ತನಿಖೆಯನ್ನು ಸಿಬಿಐಗೆ ವರ್ಗಾಯಿಸಲಾಗಿದೆ. ಡಿಎಂಕೆ ಶಾಸಕ ಅನ್ಬಳಗನ್‌ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ್ದ ಮದ್ರಾಸ್‌ ಹೈಕೋರ್ಟ್‌ ಈ ನಿರ್ದೇಶನ ನೀಡಿತ್ತು. ಎಂಡಿಎಂ ಗುಟ್ಕಾ ಕಂಪನಿಯ ಮಾಲೀಕ ಮಾಧವ ರಾವ್‌ ಅವರ ಮನೆಯಲ್ಲಿ 2016ರ ಜುಲೈನಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಶೋಧ ನಡೆಸಿದ್ದಾಗ ಡೈರಿಯೊಂದು ಪತ್ತೆಯಾಗಿತ್ತು. ಇದರಲ್ಲಿ ವಿಜಯಭಾಸ್ಕರ್‌, ರಾಜೇಂದ್ರನ್ ಮತ್ತು ಜಾರ್ಜ್‌ ಅವರಿಗೆ ನೀಡಿದ್ದ ಲಂಚದ ಮಾಹಿತಿ ಇತ್ತು ಎಂದು ಹೇಳಲಾಗಿತ್ತು. ಗುಟ್ಕಾ ಮಾರಾಟಕ್ಕೆ ನಿಷೇಧ ಇದ್ದರೂ ಮಾರಾಟಕ್ಕೆ ಅವಕಾಶ ಕೊಟ್ಟದ್ದಕಾಗಿ ಈ ಹಣ ನೀಡಲಾಗಿದೆ ಎಂದು ಆರೋಪಿಸಲಾಗಿತ್ತು. ಪ್ರಕರಣದ ತನಿಖೆ ನಡೆಸಿದ್ದ ಡಿವಿಎಸಿ, ಕೆಳಹಂತದ ಕೆಲವು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿತ್ತು. ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಕೋರಿ ಅನ್ಬಳಗನ್‌ ಅವರು ಮದ್ರಾಸ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರು. ತನಿಖೆಯನ್ನು ಸಿಬಿಐಗೆ ಒಪ್ಪಿಸುವುದನ್ನು ತಮಿಳುನಾಡು ಸರ್ಕಾರ ಬಲವಾಗಿ ವಿರೋಧಿಸಿತ್ತು. ಭೂಗತ ಗುಟ್ಕಾ ವ್ಯವಹಾರವು ಸಮಾಜದ ವಿರುದ್ಧ ಎಸಗುತ್ತಿರುವ ಅಪರಾಧವಾಗಿದೆ. ಹಾಗಾಗಿ ಇದು ಸಿಬಿಐ ತನಿಖೆಗೆ ಅರ್ಹವಾದ ಪ್ರಕರಣ ಎಂದು ಇದೇ ಏಪ್ರಿಲ್‌ 26ರಂದು ಹೈಕೋರ್ಟ್‌ ಆದೇಶ ನೀಡಿತ್ತು. ಮಾಧವ ರಾವ್‌ ಅವರನ್ನು ಸಿಬಿಐ ಕಳೆದ ವಾರ ವಿಚಾರಣೆಗೆ ಒಳಪಡಿಸಿತ್ತು. ಅವರು ಕೊಟ್ಟ ಸುಳಿವುಗಳ ಆಧಾರದಲ್ಲಿ ಬುಧವಾರದ ಶೋಧ ಕಾರ್ಯಾಚರಣೆ ನಡೆದಿದೆ ಎನ್ನಲಾಗಿದೆ.
OSCAR-2019
ಬಾದಾಮಿ, ಏಪ್ರಿಲ್ 24: ಬಾಗಲಕೋಟೆ ಜಿಲ್ಲೆಯ ಬಾದಾಮಿ ಮದಗಜಗಳ ಕಾದಾಟಕ್ಕೆ ಸಜ್ಜಾಗಿದೆ. ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬಿಜೆಪಿಯಿಂದ ಸಂಸದ ಶ್ರೀರಾಮುಲು ಬಾದಾಮಿಯಲ್ಲಿ ನಾಮಪತ್ರ ಸಲ್ಲಿಸಿದ್ದು, ಇಬ್ಬರ ನಡುವಿನ ಹೋರಾಟಕ್ಕೆ ವೇದಿಕೆ ಸಿದ್ದವಾಗಿದೆ. ಬಿಜೆಪಿ ಐದನೇ ಪಟ್ಟಿಯಲ್ಲಿ ಬಾದಾಮಿ ಕ್ಷೇತ್ರದಲ್ಲಿ ಶ್ರೀರಾಮುಲು ಸ್ಪರ್ಧೆ ಬಗ್ಗೆ ಘೋಷಣೆ ಮಾಡಿರಲಿಲ್ಲ. ಹೀಗಿದ್ದೂ ಅವರು ನಾಮಪತ್ರ ಸಲ್ಲಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಮತ್ತು ಕರ್ನಾಟಕ ಬಿಜೆಪಿ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್, ಮುರಳೀಧರ್ ರಾವ್ ಜೊತೆಗೆ ಆಗಮಿಸಿದ ಶ್ರೀರಾಮುಲು ನಾಮಪತ್ರ ಸಲ್ಲಿಸಿದರು. ಇದಾದ ಬಳಿಕ ಬಾದಾಮಿ ಬನಶಂಕರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಾಮಪತ್ರ ಸಲ್ಲಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿದರು. ಸಚಿವ ಆರ್.ಬಿ. ತಿಮ್ಮಾಪುರ, ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ, ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ್, ಸ್ಥಳೀಯ ಶಾಸಕ ಬಿ.ಬಿ.ಚಿಮ್ಮನಕಟ್ಟಿ ಈ ಸಂದರ್ಭದಲ್ಲಿ ಹಾಜರಿದ್ದರು. ನಾಮಪತ್ರ ಸಲ್ಲಿಸಿದ ನಂತರ ಮಾತನಾಡಿದ ಸಿದ್ದರಾಮಯ್ಯ, "ಉತ್ತರ ಕರ್ನಾಟಕದಿಂದ ಸ್ಪರ್ಧಿಸುವಂತೆ ಒತ್ತಡವಿತ್ತು. ಅದರಂತೆ ಬಾದಾಮಿಯಿಂ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ," ಎಂದು ಹೇಳಿದರು. ಬಳಿಕ ಬಾದಾಮಿ ನಗರದಲ್ಲಿ ಸಿಎಂ ಭರ್ಜರಿ ರೋಡ್ ಶೋ ನಡೆಸಿದರು. ಸಾವಿರಾರು ಜನರು ನಾಡಿನ ದೊರೆಯನ್ನು ಕಣ್ತುಂಬಿಕೊಳ್ಳಲು ರಸ್ತೆಯ ತುಂಬೆಲ್ಲಾ ನೆರೆದಿದ್ದರು. badami siddaramaiah sriramulu karnataka assembly elections 2018 ಬಾದಾಮಿ ಸಿದ್ದರಾಮಯ್ಯ ಶ್ರೀರಾಮುಲು ಕರ್ನಾಟಕ ವಿಧಾನಸಭೆ ಚುನಾವಣೆ 2018
OSCAR-2019
ಬೆಂಗಳೂರು, ಜುಲೈ 1: ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ಸುಮಾರು ಒಂದು ತಿಂಗಳ ನಂತರ, ಸಚಿವರಿಗೆ ಮತ್ತು ವಿರೋಧ ಪಕ್ಷದ ನಾಯಕರಿಗೆ ನಿವಾಸ ಮಂಜೂರು ಮಾಡಿ, ಸರಕಾರ ಆದೇಶ ಹೊರಡಿಸಿದೆ. ವಿಧಾನಸಭಾ ಪ್ರತಿಪಕ್ಷದ ನಾಯಕ ಮತ್ತು ಮಾಜಿ ಸಿಎಂ ಯಡಿಯೂರಪ್ಪನವರು ಬಯಸಿದ್ದ ಬಂಗಲೆಯನ್ನು ಸರಕಾರ ನೀಡದೇ, ಪಕ್ಕದ ನಿವಾಸವನ್ನು ಅವರಿಗೆ ನೀಡಲಾಗಿದೆ. ಹಾಗಾಗಿ, ತಾನು ಸ್ವಂತ ಮನೆಯಲ್ಲೇ ಉಳಿಯುವುದಾಗಿ ಯಡಿಯೂರಪ್ಪ ಹೇಳಿದ್ದಾರೆ. ರೇಸ್ ಕೋರ್ಸ್ ರಸ್ತೆಯಲ್ಲಿರುವ ಎರಡನೇ ನಂಬರ್ ಮನೆಯನ್ನು ಯಡಿಯೂರಪ್ಪ ಬಯಸಿದ್ದರು, ಆದರೆ ಸರಕಾರ ಅದೇ ರಸ್ತೆಯ ನಾಲ್ಕನೇ ನಂಬರ್ ಮನೆಯನ್ನು ನೀಡಿದೆ. ಯಡಿಯೂರಪ್ಪ ಎರಡನೇ ನಂಬರ್ ಮನೆಯಿಂದ ಕಾರ್ಯನಿರ್ವಹಿಸಲು ಬಯಸಿದ್ದರು. ಇನ್ನು ಯು ಟಿ ಖಾದರ್, ಜಮೀರ್ ಅಹಮದ್, ಪುಟ್ಟರಂಗ ಶೆಟ್ಟಿ ಮತ್ತು ಶಿವಾನಂದ ಪಾಟೀಲ್ ಅವರಿಗೆ ಜಯಮಹಲ್ ಬಡಾವಣೆಯಲ್ಲಿ ವಸತಿಯನ್ನು ನೀಡಲಾಗಿದೆ. ಉನ್ನತ ಶಿಕ್ಷಣ ಸಚಿವ ಜಿ ಟಿ ದೇವೇಗೌಡ ಮತ್ತು ಸಾರಿಗೆ ಸಚಿವ ಡಿ ಸಿ ತಮ್ಮಣ್ಣಗೆ ಸ್ಯಾಂಕಿ ರಸ್ತೆಯಲ್ಲಿನ ಸರಕಾರೀ ಬಂಗಲೆ ನೀಡಲಾಗಿದೆ. ಡಿ ಕೆ ಶಿವಕುಮಾರ್ ಗೆ ಕ್ರೆಸೆಂಟ್ ರಸ್ತೆಯಲ್ಲಿ, ಕೆ ಜೆ ಜಾರ್ಜ್ ಮತ್ತು ರೇವಣ್ಣಗೆ ಕುಮಾರಕೃಪ ಲೇಔಟ್ ನಲ್ಲಿ ವಸತಿಯನ್ನು ನೀಡಲಾಗಿದೆ. ಆರ್ ವಿ ದೇಶಪಾಂಡೆ, ಸಾ.ರಾ. ಮಹೇಶ್, ರಮೇಶ್ ಜಾರಕಿಹೊಳಿ, ಬಂಡೆಪ್ಪ ಕಾಶೆಂಪುರ ಸೇರಿದಂತೆ ಹಲವು ಸಚಿವರಿಗೆ ನಿವಾಸ ಮಂಜೂರು ಮಾಡಿ ಸರಕಾರ ಶನಿವಾರ (ಜೂ 30) ಆದೇಶ ಹೊರಡಿಸಿದೆ. yeddyurappa hd kumaraswamy karnataka bengaluru jds congress bjp ಯಡಿಯೂರಪ್ಪ ಎಚ್ ಡಿ ಕುಮಾರಸ್ವಾಮಿ ಬೆಂಗಳೂರು
OSCAR-2019
ಜೀವನದ ಸಾರ್ಥಕತೆಯ ಬಗ್ಗೆ ಸುಮಾರು ಇಪ್ಪತ್ತು ನಿಮಿಷ ಮಾತನಾಡಿದ ಗುರು, “ನನಗ್ಗೊತ್ತು. ನಿಮ್ಮಲ್ಲಿ ನಾನು ಮಾತನಾಡಿದ್ದರ ಬಗ್ಗೆ ಇನ್ನೂ ಸಂದೇಹ ಅಥವಾ ಗೊಂದಲಗಳಿರಬಹುದು. ಯಾವಾಗ ಬೇಕಾದರೂ ನನ್ನ ಆಶ್ರಮಕ್ಕೆ ಬನ್ನಿ. ಅವನ್ನು ಪರಿಹರಿಸುವ” ಎಂದ. ಈ ಭಾಷಣವನ್ನು ಕೇಳಿಸ್ಕೊಳ್ಳುತ್ತಿದ್ದ ಮನಃಶಾಸ್ತ್ರಜ್ಞನೊಬ್ಬ, ಕಾರ್ಯಕ್ರಮ ಮುಗಿದ ನಂತರ ಗುರುವನ್ನು ಹಿಂಬಾಲಿಸಿ, ಮಾರ್ಗಮಧ್ಯದಲ್ಲಿ ಅವನನ್ನು ಸೇರಿದ. ಒಟ್ಟಿಗೆ ನಡೆಯುತ್ತಾ ಕೆಲ ವಿಷಯಗಳನ್ನು ಚರ್ಚಿಸಿ, ಕೊನೆಗೆ ಮನಃಶಾಸ್ತ್ರಜ್ಞ ಕೇಳಿದ “ನನ್ನದೊಂದು ಕೊನೆಯ ಪ್ರಶ್ನೆಯಿದೆ. ನಾನೊಬ್ಬ ಮನಃಶಾಸ್ತ್ರಜ್ಞ. ನಾನು ಓದಿರುವ ಶಾಸ್ತ್ರ ನನಗೆ ರೋಗಿಗಳ ತೊಂದರೆಗಳ ಬಗ್ಗೆ ತಿಳಿಸುತ್ತದೆ. ಉಳಿದ ಕೆಲ ವಿಷಯಗಳನ್ನು ನಾನು ಅವರನ್ನು ಪ್ರಶ್ನಿಸಿ ತಿಳಿದುಕೊಳ್ಳುತ್ತೇನೆ. ಇದರಿಂದ ನನಗೆ ಅವರ ಖಾಯಿಲೆಗಳನ್ನು ಗುಣಪಡಿಸಲು ಸಹಾಯಕವಾಗುತ್ತದೆ. ಆದರೆ ನಿಮ್ಮ ದಾರಿ ಬೇರೆಯೇ ಎಂದೆನಿಸುತ್ತದೆ ನನಗೆ. ನೀವು ಹೇಗೆ ಅವರ ತೊಂದರೆಗಳನ್ನು ಬಗೆಹರಿಸುತ್ತೀರಾ? ಹೇಗೆ ಉತ್ತರಿಸುತ್ತೀರಾ” ಝೆನ್ ಗುರು ನಿಧಾನದನಿಯಲ್ಲಿ ಹೇಳಿದ “ತೊಂದರೆಗೆ ಪರಿಹಾರ ನನ್ನ ಉತ್ತರದಲ್ಲಿರುವುದಿಲ್ಲ. ಆದರೆ ನಾನು ನನ್ನ ಬಳಿ ಬಂದವರನ್ನು ಅವರು ಪ್ರಶ್ನೆಗಳನ್ನೇ ಕೇಳಲಾಗದ ಸ್ಥಿತಿಗೆ ಕೊಂಡೊಯ್ಯುತ್ತೇನೆ ಅಷ್ಟೇ. ಸಮಸ್ಯೆಗಳಿಗೆ ಸಮಾಧಾನ ಅವಕ್ಕೆ ಉತ್ತರವಲ್ಲ……ಆ ಪ್ರಶ್ನೆಗಳೇ ಇಲ್ಲದಿರುವುದು, ಅಷ್ಟೇ” ಇವತ್ತಿನ ಕಥೆ, ಬಹುಷಃ ಎಲ್ಲರೂ ಕೇಳಿರಬಹುದಾದ ಝೆನ್ ಕಥೆ. “ಝೆನ್ ಅಂದ್ರೆ ಈ ಕಥೆ” ಅನ್ನೋವಷ್ಟರ ಮಟ್ಟಿಗೆ ಈ ಕಥೆ ಪ್ರಸಿದ್ಧ. ಇವತ್ತು ಅದನ್ನೇ ಹೇಳ್ತೀನಿ. ನಾನ್-ಇನ್ ಎಂಬ ಪ್ರಸಿದ್ಧ ಜಪಾನೀ ಝೆನ್ ಗುರುವೊಬ್ಬನಿದ್ದ. ಮೈಝೀ ಯುಗದ (1868-1912) ತತ್ವಜ್ಞಾನಿಗಳಲ್ಲಿ ಗುರುಗಳಲ್ಲಿ ಆತ ಬಹಳ ಹೆಸರುಪಡೆದವ. ಅವನಲ್ಲಿಗೆ ಬಂದವರೆಲ್ಲರೂ ಖಂಡಿತವಾಗಿಯೂ ತಮ್ಮದೇ ಆದ ಸಾಕ್ಷಾತ್ಕಾರದೊಂದಿಗೆ ಹಿಂದಿರುಗುತ್ತಿದರು ಎಂಬ ಪ್ರತೀತಿಯಿತ್ತು. ಇವನನ್ನು ಭೇಟಿಮಾಡಲು, ಒಮ್ಮೆ ಒಬ್ಬ ಧರ್ಮಶಾಸ್ತ್ರದ ವಿಶ್ವವಿದ್ಯಾನಿಲಯದ ಉಪನ್ಯಾಸಕನೊಬ್ಬ ಬಂದಿಳಿದ. ತನ್ನನ್ನು ಪರಿಚಯಿಸಿಕೊಂಡು ‘ನಾನೊಬ್ಬ ಉಪನ್ಯಾಸಕ. ಬೇರೆ ಬೇರೆ ಧರ್ಮಶಾಸ್ತ್ರಗಳನ್ನು ಕಲಿತಿದ್ದೇನೆ ಹಾಗೂ ಕಲಿಸುತ್ತಿದ್ದೇನೆ. ಈಗ ನಿಮ್ಮ ಝೆನ್ ಜ್ಞಾನವನ್ನು ಕಲಿಯಲು ಬಂದಿದ್ದೇನೆ’ ಎಂದ. ನಾನ್-ಇನ್ ತನ್ನ ಅತಿಥಿಯನ್ನು ಸ್ವಾಗತಿಸಿ, ಜಪಾನೀ ವಾಡಿಕೆಯಂತೆ, ಕುಡಿಯಲು ಟೀ ಕೊಡಲೆಂದು ಕಪ್ ತೆಗೆದು ಅವನ ಮುಂದಿಟ್ಟು, ಟೀ ಪಾತ್ರೆಯಿಂದ ಟೀ ಸುರಿಯಲಾರಂಭಿಸಿದ. ಕಪ್ ತುಂಬಿತು. ಆದರೂ ನಾನ್-ಇನ್ ಟೀ ಸುರಿಯುವುದನ್ನು ನಿಲ್ಲಿಸಲಿಲ್ಲ. ಈಗ ಕಪ್ ತುಂಬಿ ಟೀ ಚೆಲ್ಲಲಾರಂಭಿಸಿತು. ಉಪನ್ಯಾಸಕನಿಗೆ ಆಶ್ಚರ್ಯವಾದರೂ ನೋಡಿ ಸುಮ್ಮನಿದ್ದ. ಕಪ್ಪಿನಿಂದ ಹೊರಚೆಲ್ಲಿದ ಟೀ ಸಾಸರಿನಲ್ಲಿ ತುಂಬಲಾರಂಭಿಸಿತು. ಕೆಲವೇ ಹೊತ್ತಿನಲ್ಲಿ ಅಲ್ಲಿಯೂ ತುಂಬಿ ಮೇಜಿನ ಮೇಲೆ ಚೆಲ್ಲಲಾರಂಭಿಸಿತು. ಅಲ್ಲಿಯವರೆಗೂ ಸುಮ್ಮನಿದ್ದ ಉಪನ್ಯಾಸಕ, ತಡೆಯಲಾರದೆ ‘ಗುರುಗಳೇ, ಕಪ್ ತುಂಬಿದೆ. ಅದರೊಳಗೆ ಇನ್ನು ಹಿಡಿಸಲಾರದು’ ಎಂದ. ಆ ಮಾತನ್ನು ಕೇಳಿದಾಕ್ಷಣ ಟೀ ಸುರಿಯುವುದನ್ನು ನಿಲ್ಲಿಸಿ, ಪಾತ್ರೆ ಬದಿಗಿಟ್ಟು, ನಾನ್-ಇನ್ ತಲೆಯೆತ್ತಿ ಹೇಳಿದ “ಈ ಕಪ್ಪಿನಂತೆಯೇ, ನಿನ್ನ ಮನಸ್ಸು ಸಹಾ ಬೇರೆ ವಿಚಾರಗಳಿಂದ ತುಂಬಿ ತುಳುಕುತ್ತಿದೆ. ನಾನು ನಿನಗೆ ಏನೇ ಕಲಿಸಿದರೂ ಅದು ಹೊರಚೆಲ್ಲುತ್ತದೆಯೇ ಹೊರತು, ನಿನ್ನೊಳಗೆ ಹೋಗಲಾರದು. ಮೊದಲು ನಿನ್ನ ಆ ಟೀ ಕಪ್ಪನ್ನು ಖಾಲಿ ಮಾಡಿಕೊಂಡು ಬಾ. ಆಮೇಲೆ ಝೆನ್ ಕಲಿಯುವುದರ ಬಗ್ಗೆ ಯೋಚಿಸುವೆಯಂತೆ”. ಆ ಉಪನ್ಯಾಸಕನಿಗೆ ಸತ್ಯದರ್ಶನವಾಯ್ತು. ನಾನ್-ಇನ್’ಗೆ ನಮಸ್ಕರಿಸಿ ಹೊರಟುಹೋದ. ಎರಡೇ ತಿಂಗಳೊಳಗೆ ಮರಳಿಬಂದು ಅಲ್ಲಿನ ಶಿಷ್ಯನಾದ ಎಂಬ ಕಥೆಗಳಿವೆ. ಕ್ಯೋಗನ್ ಎಂಬ ಬೌದ್ಧಬಿಕ್ಕು ಇಸನ್ ಎಂಬ ಗುರುವಿನಡಿಯಲ್ಲಿ ಶಿಕ್ಷಣ ಪಡೆಯುತ್ತಿದ್ದ. ಕ್ಯೋಗನ್’ನ ಬುದ್ಧಿಮತ್ತೆ, ತಾತ್ವಿಕ ಅಲೋಚನೆಗಳು ಶಾಲೆಯಲ್ಲಿ ಪ್ರಸಿದ್ಧಿಪಡೆದಿದ್ದವು. ಕ್ಯೋಗನ್ ಆ ಪ್ರಶ್ನೆ ಕೇಳಿ ಸ್ಥಂಭೀಭೂತನಾದ. ಆತನ ಬಳಿ ಉತ್ತರವಿರಲಿಲ್ಲ. ಇಸನ್ ಸುಮ್ಮನೇ ಇಂತಹ ಪ್ರಶ್ನೆ ಕೇಳುವುದಿಲ್ಲವೆಂದು ತಿಳಿದಿದ್ದ ಆತ, ತನ್ನ ಬುದ್ಧಿಗೆ ಕೆಲಸ ಕೊಟ್ಟ. ಎಷ್ಟೇ ಆಲೋಚಿಸಿದರೂ ಅರ್ಥವುಳ್ಳ ಉತ್ತರ ಹೊಳೆಯಲಿಲ್ಲ. ಹತಾಶೆಗೊಂಡು ಇಸನ್’ನನ್ನೇ ಸಂದೇಶ ನಿವಾರಿಸುವಂತೆ ಕೇಳಿಕೊಂಡ. ಅದಕ್ಕೇ ಇಸನ್ ಹೇಳಿದ ‘ನೋಡು, ನಾನಿದಕ್ಕೆ ಉತ್ತರ ಹೇಳಿದರೆ, ಜೀವನವಿಡೀ ನನ್ನನ್ನು ದ್ವೇಷಿಸುತ್ತೀಯ. ಹಾಗಾಗಿ ನಾನಿದಕ್ಕೆ ಉತ್ತರಿಸಲಾರೆ’. ಕ್ಯೋಗನ್ನನಿಗೆ ಇದ್ದಕ್ಕಿಂದಂತೆ ತಾನೊಬ್ಬ ನಿಷ್ಪ್ರಯೋಜಕ ಎಂಬ ಭಾವನೆ ಆವರಿಸಿತು. ಇಷ್ಟು ವರ್ಷ ಸಾಧನೆ ಮಾಡಿದರೂ, ಓದಿದರೂ ಇಷ್ಟು ಸಣ್ಣ ಪ್ರಶ್ನೆಗೆ ಅರ್ಥಪೂರ್ಣ ಉತ್ತರ ಕೊಡಲು ನನಗಾಗಲಿಲ್ಲವಲ್ಲಾ ಎಂಬ ಭಾವನೆ ದಿನೇದಿನೇ ಬೆಳೆಯಲಾಂಭಿಸಿತು. ಒಂದು ದಿನ ತಾನು ಬರೆದಿಟ್ಟಿದ್ದ ಸೂತ್ರಗಳಿಗೆಲ್ಲಾ ಬೆಂಕಿಯಿಟ್ಟು, ಆಶ್ರಮವನ್ನೆ ಬಿಟ್ಟು ಹೊರಟ. ಕೆಲದಿನಗಳ ಕಾಲ ಎಲ್ಲೆಲ್ಲೋ ಅಲೆದಾಡಿ, ಕೊನೆಗೆ ಜೀರ್ಣಾವಸ್ಥೆಯಲ್ಲಿದ್ದ ದೇವಾಲಯವೊಂದರಲ್ಲಿ ನೆಲೆನಿಂತ. ಹಲವಾರುವರ್ಷಗಳ ಕಾಲ ಅದೇ ಅವನ ನೆಲೆಯಾಯಿತು. ಅಲ್ಲೇ ಇದ್ದು, ಗಂಟೆಗಟ್ಟಲೇ ಧ್ಯಾನಮಾಡುತ್ತಿದ್ದ. ಜೊತೆಗೇ ಅಲ್ಲಲ್ಲಿ ದೇವಸ್ಥಾನದ ದುರಸ್ತಿಯನ್ನೂ ಮಾಡುತ್ತಿದ್ದ. ಒಂದು ದಿನ ಹೀಗೇ ಬಾಗಿಲಬಳಿ ಗುಡಿಸುತ್ತಿರುವಾಗ, ಹೆಬ್ಬಾಗಿಲ ಕೆಳಬಾಗದಲ್ಲಿದ್ದ ಕಲ್ಲೊಂದು ಕಿತ್ತುಬಂತು. ಅದನ್ನು ಜೋರಾಗಿ ಗುಡಿಸಿ ದೂಡಿದಾಗ ಅದು ಹಾರಿಹೋಗಿ ಪಕ್ಕದಲ್ಲಿದ್ದ ಬಿದಿರಿನ ಕಾಂಡಕ್ಕೆ ಬಡಿಯಿತು……”ಟೋಕ್………” ಅಲ್ಲೆಲ್ಲಾ ಅದರದೇ ಪ್ರತಿಧ್ವನಿ ಅನುರಣಗೊಂಡಿತು. ಆ ಶಬ್ದದೊಂದಿಗೇ ಕ್ಯೋಗನ್ನನ ಮುಖದಲ್ಲಿ ಮುಗುಳ್ನಗೆ ಮೂಡಿತು. ಆ ನಗುವಿನ ಹಿಂದೆಯೇ, ಮುಖದಲ್ಲಿ ಹಿಂದೆಂದೂ ಇರದ ಕಾಂತಿಯೊಂದು ಆವರಿಸಿತು. ಎರಡು ಕ್ಷಣ ಅವಕ್ಕಾಗಿ ನಿಂತ ಕ್ಯೋಗನ್ ತಕ್ಷಣವೇ ಸಾವರಿಸಿಕೊಂಡು, ಇಸಾನ್ ಇದ್ದಿರಬಹುದಾದ ದಿಕ್ಕಿನೆಡೆಗೆ ತಿರುಗಿ ತಲೆಬಾಗಿ “ಗುರುಗಳೇ ನೀವಂದದ್ದು ಸರಿ. ಇದನ್ನೆಲ್ಲಾ ನೀವೇ ನನಗೆ ಹೇಳಿದ್ದಿದ್ದರೆ, ನಾನೇನೆಂದು ನನ್ನ ಪ್ರಶ್ನೆಗೆ ಅಂದೇ ಉತ್ತರಿಸಿದ್ದಿದ್ದರೆ, ನಾನು ಆ ಉತ್ತರವೇ ಆಗಿ ಉಳಿದಿಬಿಡುತ್ತಿದ್ದೆ. ನನ್ನನ್ನು ನಾನು ಮೀರಿ ಬೆಳೆಯುತ್ತಿರಲಿಲ್ಲ. ಆ ಉತ್ತರದೊಳಗೇ, ಅದರಲ್ಲಿದ್ದಿರಬಹುದಾದ ಕಹಿಯೊಂದಿಗೇ, ಅದನ್ನು ದೂಷಿಸುತ್ತಾ, ಅದೊಂದು ಭ್ರಾಂತಿಯೊಳಗೇ ಬದುಕಿರುತ್ತಿದ್ದೆ. ಧನ್ಯವಾದ ನಾನು ಹುಟ್ಟುವ ಮೊದಲು ಏನಾಗಿದ್ದೆ ಎಂದು ತೋರಿಸ್ಕೊಟ್ಟಿದ್ದಕ್ಕೆ. ಧನ್ಯವಾದ ನನ್ನೊಳಗಿಂದ ನನ್ನನ್ನು ಹೊರಗೆಳೆದದ್ದಕ್ಕೆ” ಎಂದು ಕೈಮುಗಿದ. ಕ್ಯೋಗನ್ ಅಲ್ಲಿಂದ ಮುಂದೆ ಸೃಜನಶೀಲ ಸಹಾನುಭೂತಿಯ ಹಾಗೂ ತೀವ್ರವಾದ ಒಳನೋಟವುಳ್ಳ ಗುರುವಾಗಿ ಬೌದ್ಧಧರ್ಮದ ಮಹಾನ್ ಸೂತ್ರಗಳನ್ನು ಬರೆದ. ತನ್ನದೇ ಆದ ವಿಶಿಷ್ಟ ಶೈಲಿಯಲ್ಲಿ ಧರ್ಮವನ್ನು ಪ್ರಸ್ತುತವಾಗಿಸಿ ಪ್ರಚುರಪಡಿಸಿದ. ಜನರಿಗೆ ತಮ್ಮನ್ನು ತಾವು ಬಿಡುಗಡೆಗೊಳಿಸುವುದರ ಬಗ್ಗೆ ತಿಳಿಸುತ್ತಾ ಹೋದ.
OSCAR-2019
ಚುನಾವಣಾ ಪ್ರಚಾರಕ್ಕೆ ರೆಡಿಯಾಗ್ತಿದೆ ಭಟ್ಟರ ಸಾಂಗ್ | Kannada Dunia | Kannada News | Karnataka News | India News ವಿಭಿನ್ನ ಶೈಲಿಯ ಹಾಡಿನ ಸಾಹಿತ್ಯದ ಮೂಲಕ ಮನೆ ಮಾತಾಗಿರುವ ನಿರ್ದೇಶಕ ಯೋಗರಾಜ್ ಭಟ್ ಅವರು ವಿಧಾನಸಭೆ ಚುನಾವಣೆ ಪ್ರಚಾರಕ್ಕಾಗಿ ವಿಶೇಷ ಹಾಡೊಂದನ್ನು ರಚಿಸಲಿದ್ದಾರೆ. ವಿಕಟಕವಿ ಯೋಗರಾಜ್ ಭಟ್ ಅವರ ಸಾಹಿತ್ಯ ಯುವಕರಿಗೆ ಅಚ್ಚುಮೆಚ್ಚು ಚುನಾವಣಾ ಆಯೋಗ ಮತದಾನದ ಅರಿವು ಮೂಡಿಸಲು ಹಾಗೂ ಮತದಾನದ ಪ್ರಮಾಣವನ್ನು ಹೆಚ್ಚಿಸಲು ವಿಶೇಷ ಹಾಡೊಂದನ್ನು ಸಿದ್ಧಪಡಿಸಿಕೊಡುವಂತೆ ಯೋಗರಾಜ್ ಭಟ್ ಅವರಿಗೆ ಹೇಳಿದ್ದು, ಭಟ್ಟರು ಇದಕ್ಕಾಗಿ ಸಿದ್ಧತೆ ನಡೆಸಿದ್ದಾರೆ. ವಿ. ಹರಿಕೃಷ್ಣ ಹಾಡಿಗೆ ಸಂಗೀತ ನೀಡಲಿದ್ದು, ಇಮ್ರಾನ್ ಸರ್ದಾರಿಯಾ ನೃತ್ಯ ಸಂಯೋಜನೆ ಮಾಡಲಿರುವ ಈ ವಿಶೇಷ ಸಾಂಗ್ ಅನ್ನು ರಾಜ್ಯದ ವಿವಿಧೆಡೆ ಚಿತ್ರೀಕರಿಸಲು ಪ್ಲಾನ್ ಮಾಡಲಾಗಿದೆ. ಹಿಂದೆ ಚುನಾವಣೆ ವೇಳೆ ಭಟ್ಟರು ರಚಿಸಿದ್ದ ಹಾಡೊಂದು ಭಾರೀ ಸಂಚಲನ ಮೂಡಿಸಿತ್ತು. ಈ ಬಾರಿ ಅವರು ರಚಿಸಲಿರುವ ಹಾಡು ಕೂಡ ಗಮನ ಸೆಳೆಯಲಿದೆ. ರಾಯಚೂರು: ರಾಯಚೂರು ಜಿಲ್ಲೆಯಲ್ಲಿ ನಡೆದ 2 ಪ್ರತ್ಯೇಕ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಲಿಂಗಸಗೂರು ತಾಲ್ಲೂಕು ಮೆದಕಿನಾಳ ಬಳಿ ಟ್ರ್ಯಾಕ್ಟರ್ ಹಾಗೂ ಬಸ್ ನಡುವೆ ಡಿಕ್ಕಿಯಾಗಿ ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ. ಮಲ್ಲಮ್ಮ, ಹುಲಿಗೆಮ್ಮ ಮೃತಪಟ್ಟವರೆಂದು ಗುರುತಿಸಲಾಗಿದೆ. 15 ಮಂದಿಗೆ ಗಂಭೀರವಾದ ಗಾಯಗಳಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ. ಸಿಂಧನೂರಿನಿಂದ ತೆರಳುತ್ತಿದ್ದ ಟ್ರ್ಯಾಕ್ಟರ್, ಎದುರಿನಿಂದ ಬಂದ ಈಶಾನ್ಯ ಸಾರಿಗೆ ಬಸ್ ವೇಗವಾಗಿದ್ದ ಕಾರಣ ನಿಯಂತ್ರಣ ತಪ್ಪಿ ಮುಖಾಮುಖಿ ಡಿಕ್ಕಿಯಾಗಿವೆ. ಮಸ್ಕಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮತ್ತೊಂದು ಘಟನೆ ಸಿಂಧನೂರು ತಾಲ್ಲೂಕಿನ ಸಾಲಗುಂದ ಬಳಿ ನಡೆದಿದೆ. ಟ್ರ್ಯಾಕ್ಟರ್ ಪಲ್ಟಿಯಾಗಿ ಹನುಮಂತಮ್ಮ, ಅಂಬಮ್ಮ ಎಂಬುವವರು ಮೃತಪಟ್ಟಿದ್ದಾರೆ. ಸಿಂಧನೂರು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
OSCAR-2019
ಸುಮಾರು ಎರಡು ಸಾವಿರ ವರ್ಷಗಳ ಭವ್ಯ ಇತಿಹಾಸವಿರುವ ಕನ್ನಡ ಸಾಹಿತ್ಯದ ಉಗಮ ತಾಳೆಗರಿಗಳ ಮೇಲೆ ಆಯಿತು. ಕನ್ನಡ ಭಾಷೆಯು ಆಧುನಿಕ ಮಾಹಿತಿ ತಂತ್ರಜ್ಞಾನದ ಅದ್ಭುತ ಕೊಡುಗೆಗಳನ್ನು ತನ್ನದಾಗಿಸಿಕೊಂಡು ಬೆಳೆಯಿತು. ಮಾಹಿತಿ ತಂತ್ರಜ್ಞಾನದ ಎಲ್ಲ ಅಂಗಗಳಲ್ಲಿ ಕನ್ನಡವನ್ನು ಅಳವಡಿಸಿ ಬಳಸಿಕೊಳ್ಳುವುದರ ಮೂಲಕ ಇದು ಸಾಧ್ಯವಾಯಿತು. ಆನ್ವಯಿಕ ತಂತ್ರಾಂಶವಿರಲಿ, ಪ್ರತಿಸ್ಪಂದನಾತ್ಮಕ ಜಾಲತಾಣವಿರಲಿ, ಕೈಯಲ್ಲಿ ಹಿಡಿದು ಕೆಲಸ ಮಾಡುವ ಟ್ಯಾಬ್ಲೆಟ್ ಇರಲಿ –ಎಲ್ಲ ಕಡೆ ಕನ್ನಡದ ಬಳಕೆ ಆಗುತ್ತಿದೆ. ಈ ಎಲ್ಲ ವಿಷಯಗಳ ಕಡೆ ಒಂದು ಪಕ್ಷಿನೋಟವನ್ನು ಈ ಭಾಷಣದಲ್ಲಿ ನೀಡಲಾಗುವುದು.
OSCAR-2019
ಉಲಾನ್‍ಬಾತರ್, ಏ.25-ಮೂಲಸೌಕರ್ಯಾಭಿವೃದ್ದಿ, ಇಂಧನ, ಸೇವೆಗಳು ಹಾಗೂ ಮಾಹಿತಿ ತಂತ್ರಜ್ಞಾನದಂಥ ಕ್ಷೇತ್ರಗಳಲ್ಲಿ ಪರಸ್ಪರ ಆರ್ಥಿಕ ಸಹಕಾರ ಬಲವರ್ಧನೆಗಾಗಿ ಭಾರತ ಮತ್ತು ಮಂಗೋಲಿಯಾ ಇಂದು ಮಹತ್ವದ ಚರ್ಚೆ ನಡೆಸಿದವು. ನವದೆಹಲಿ ಮತ್ತು ಮಂಗೋಲಿಯಾ ರಾಜಧಾನಿ ಉಲಾನ್‍ಬಾತರ್ ನಡುವೆ ನೇರ ವಿಮಾನಯಾನ ಸೇವೆ ಆರಂಭಿಸುವ ಸಾಧ್ಯತೆಗಳ ಅನ್ವೇಷಣೆ ಬಗ್ಗೆಯೂ ಉಭಯ ದೇಶಗಳು ಮಹತ್ವದ ಸಮಾಲೋಚನೆ ನಡೆಸಿವೆ. ಭಾರತ-ಮಂಗೋಲಿಯಾ ಸಹಕಾರ ಜಂಟಿ ಸಮಿತಿಯ ಆರನೇ ಅಧಿವೇಶನದ ನಂತರ ಅಲ್ಲಿನ ವಿದೇಶಾಂಗ ಸಚಿವ ಡಿ. ಸ್ಟೋಗ್‍ಬಾತರ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್, ಉಭಯ ದೇಶಗಳ ನಡುವೆ ಆರ್ಥಿಕ ಸಹಕಾರ ಬಲವರ್ಧನೆಗೆ ಹೆಚ್ಚು ಆದ್ಯತೆ ನೀಡಲಾಗಿದೆ ಎಂದರು. ಪರಸ್ಪರ ಹಿತಾಸಕ್ತಿಯ ಎಲ್ಲ ವಲಯಗಳಲ್ಲಿ ಸಹಕಾರದ ಹೊಸ ಕ್ಷೇತ್ರಗಳನ್ನು ಗುರುತಿಸಲು ಹಾಗೂ ದ್ವಿಪಕ್ಷೀಯ ವ್ಯಾಪಾ ಮತ್ತು ಬಂಡವಾಳ ಹೂಡಿಕೆಗಳನ್ನು ವೃದ್ದಿಸಲು ಮಾರ್ಗೋಪಾಯಗಳನ್ನು ಕಂಡುಕೊಳ್ಳುವ ಬಗ್ಗೆ ಚರ್ಚೆ ನಡೆಸಿದ್ದಾಗಿ ಸುಷ್ಮಾ ತಿಳಿಸಿದರು.
OSCAR-2019
ಬೆಂಗಳೂರು, ಮಾರ್ಚ್ 12 : ಆಂಧ್ರಪ್ರದೇಶದಲ್ಲಿ ಬಿಜೆಪಿ ಹಾಗೂ ಟಿಡಿಪಿ ನಡುವಿನ ಮೈತ್ರಿಯಲ್ಲಿ ಬಿರುಕು ಉಂಟಾಗಿದ್ದು, ಇದು ಕರ್ನಾಟಕ ವಿಧಾನಸಭೆ ಚುನಾವಣೆ 2018ರಲ್ಲಿ ಯಾವ ರೀತಿ ಪರಿಣಾಮ ಬೀರಲಿದೆ? ಕರ್ನಾಟಕದ ಬಳ್ಳಾರಿ, ಕೋಲಾರ, ಕಲಬುರಗಿ ಹಾಗೂ ಬೀದರ್ ನಲ್ಲಿ ತೆಲುಗು ಭಾಷಿಗರ ಸಂಖ್ಯೆ ಹೆಚ್ಚಿದೆ. ಇದಲ್ಲದೆ, ಬೆಂಗಳೂರಿನಲ್ಲೂ ತೆಲುಗು ಭಾಷಿಗರ ಮತಗಳು ಕೆಲ ಕ್ಷೇತ್ರಗಳಲ್ಲಿ ನಿರ್ಣಾಯಕವಾಗಲಿದೆ. ಹೀಗಾಗಿ, ಮತ ವಿಭಜನೆ ತಡೆಗಟ್ಟಲು ಬಿಜೆಪಿ ಯತ್ನಿಸುತ್ತಿದೆ. ರಾಜ್ಯ, ಭಾಷೆ ವಿಷಯಕ್ಕೆ ಬಂದರೆ ಅಧಿಕಾರವನ್ನು ಲೆಕ್ಕಿಸದೆ ಹೋರಾಟಕ್ಕೆ ಇಳಿಯಲು ಆಂಧ್ರಪ್ರದೇಶದ ಜನತೆ ಮುಂದಾಗಿದ್ದಾರೆ. ವಿಶೇಷ ಸ್ಥಾನಮಾನದ ನಿರೀಕ್ಷೆಯಲ್ಲಿದ್ದ ಆಂಧ್ರಪ್ರದೇಶಕ್ಕೆ ವಿಶೇಷ ಪ್ಯಾಕೇಜ್ ಭರವಸೆಯನ್ನು ಮೋದಿ ಸರ್ಕಾರ ನೀಡಿತ್ತು. ಅದರೆ, ಇದಕ್ಕೆ ಒಪ್ಪದ ತೆಲುಗು ದೇಶಂ ಪಾರ್ಟಿ ತನ್ನ ಸಚಿವರನ್ನು ಕೇಂದ್ರ ಸಂಪುಟದಿಂದ ಹೊರಕ್ಕೆ ಕರೆಸಿಕೊಂಡಿದೆ. ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ವಿಳಂಬ ಮಾಡಿದರೆ, ಇದರ ಪರಿಣಾಮ ಆಂಧ್ರದ ಮೇಲಷ್ಟೇ ಅಲ್ಲ, ಕರ್ನಾಟಕದ ಮೇಲೂ ಆಗಲಿದೆ. ಸದ್ಯ ದಕ್ಷಿಣ ಭಾರತದಲ್ಲಿ ದೊಡ್ಡ ರಾಜ್ಯವಾಗಿರುವ ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರ್ಕಾರವನ್ನು ಕೆಳಗಿಳಿಸಲು ಬಿಜೆಪಿ, ಶತಾಯಗತಾಯ ಯತ್ನಿಸುತ್ತಿದೆ. bjp tdp karnataka assembly elections 2018 telugu chandrababu naidu ಬಿಜೆಪಿ ಟಿಡಿಪಿ ಕರ್ನಾಟಕ ವಿಧಾನಸಭೆ ಚುನಾವಣೆ 2018 ಚಂದ್ರಬಾಬು ನಾಯ್ಡು
OSCAR-2019
ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಪಡೆಯುವುದು ಅಷ್ಟು ಸಲೀಸಲ್ಲ. ಕಾಂಗ್ರೆಸ್ ನ ದೊಡ್ಡ ತಲೆಗಳು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಟಿಕೆಟ್ ಆಕಾಂಕ್ಷಿಗಳನ್ನು ಸರಿಯಾಗಿ ವಿಚಾರಣೆ ನಡೆಸುತ್ತಿದ್ದಾರೆ. ಪ್ರತಿ ಆಕಾಂಕ್ಷಿಗೂ ಕನಿಷ್ಠ ಇಪ್ಪತ್ತು ಪ್ರಶ್ನೆಗಳನ್ನು ಕೇಳುತ್ತದೆ ಮಧುಸೂದನ್ ಮಿಸ್ತ್ರಿ ನೇತೃತ್ವದ ತಂಡ. ಈ ಪ್ರಕ್ರಿಯೆ ಕಠಿಣವಾಗಿಯೇ ಇರಲಿ ಎಂದು ಮಿಸ್ತ್ರಿ ಅವರಿಗೆ ಸೂಚನೆ ಸಿಕ್ಕಿದೆ. ಇವೇ ಪ್ರಶ್ನೆಗಳನ್ನು ಚುನಾವಣೆಗೆ ಸ್ಪರ್ಧೆ ಮಾಡಲಿರುವ ಹಾಲಿ ಸಚಿವರಿಗೂ ಕೇಳಲಾಗುವುದು. ಈ ಪ್ರಕ್ರಿಯೆ ಅಷ್ಟು ಸುಲಭವಾಗಿಯೂ ಇಲ್ಲ. ಜತೆಗೆ ನಿರೀಕ್ಷಿತವಲ್ಲ. ಎಲ್ಲರಿಗೂ ಎಲ್ಲ ಪ್ರಶ್ನೆಗೆ ಉತ್ತರಿಸುವುದು ಆಗುತ್ತಿಲ್ಲ. ಹಲವು ಪ್ರಶ್ನೆಗಳಿಗೆ ಅಭ್ಯರ್ಥಿಗಳು ಮೌನಕ್ಕೆ ಶರಣಾಗಿದ್ದಾರೆ. * ನಿಮ್ಮ ಶಾಸಕರ ಕೆಲಸ-ಕಾರ್ಯಕ್ಕೆ ಎಷ್ಟು ಅಂಕ ಕೊಡ್ತೀರಿ (ಎರಡನೇ ಬಾರಿಗೆ ಟಿಕೆಟ್ ಆಕಾಂಕ್ಷಿಯಾದವರಿಗೆ ಈ ಪ್ರಶ್ನೆ ಇಲ್ಲ) congress kpcc karnataka assembly elections 2018 ಕಾಂಗ್ರೆಸ್ ಕೆಪಿಸಿಸಿ ಕರ್ನಾಟಕ ವಿಧಾನಸಭೆ ಚುನಾವಣೆ 2018 ticket politics ಟಿಕೆಟ್ ರಾಜಕೀಯ
OSCAR-2019
2018ನೇ ಸಾಲಿನ ಮಹಿಳೆಯರ ಟಿ-20 ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಹರ್ಮನ್ ಪ್ರೀತ್ ಕೌರ್ ನೇತೃತ್ವದ ಭಾರತ ತಂಡ ಸೋಲಿನ ನಿರಾಸೆ ಅನುಭವಿಸಿದೆ. ಕೌಲಾಲಂಪುರದ ಕಿನ್ರಾರಾ ಅಕಾಡೆಮಿ ಓವಲ್ ಮೈದಾನದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ 3 ವಿಕೆಟ್ ಜಯ ಸಾಧಿಸಿದ ಬಾಂಗ್ಲಾದೇಶ ಚೊಚ್ಚಲ ಬಾರಿಗೆ ಏಷ್ಯಾಕಪ್ ಟ್ರೋಫಿ ಎತ್ತಿ ಹಿಡಿದಿದೆ. ಟಾಸ್ ಗೆದ್ದ ಬಾಂಗ್ಲಾದೇಶ ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟ್ ಮಾಡಿದ ಭಾರತ 20 ಓವರುಗಳಲ್ಲಿ 9 ವಿಕೆಟ್ ಕಳೆದುಕೊಂಡು 112 ರನ್ ಮೊತ್ತ ಕಲೆ ಹಾಕಿತು. ಏಕಾಂಗಿ ಹೋರಾಟ ನಡೆಸಿದ ನಾಯಕಿ ಹರ್ಮನ್ ಪ್ರೀತ್ 56 ರನ್ ಗಳಿಸಿ ಸ್ಕೋರ್ ನೂರರ ಗಡಿ ದಾಟುವಲ್ಲಿ ನೆರವಾದರು. ಗುರಿಯನ್ನು ಬೆನ್ನತ್ತಿದ ಬಾಂಗ್ಲಾದೇಶ 7 ವಿಕೆಟ್ ನಷ್ಟಕ್ಕೆ 113 ರನ್ ಸೇರಿಸಿ 20ನೇ ಓವರ್ ಕೊನೆಯ ಎಸೆತದಲ್ಲಿ ಗೆಲುವು ದಾಖಲಿಸಿತು. ನಿಗಾರ್ ಸುಲ್ತಾನಾ 27 ಹಾಗೂ ರುಮಾನಾ ಅಹ್ಮದ್ 23 ರನ್ ಬಾರಿಸಿ ಗೆಲುವಿಗೆ ಕಾರಣರಾದರು. ಬಾಂಗ್ಲಾ ಆಟಗಾರ್ತಿ ರುಮಾನಾ ಅಹ್ಮದ್ ಪಂದ್ಯ ಶ್ರೇಷ್ಟ ಪ್ರಶಸ್ರತಿ ಪಡೆದರೆ, ಭಾರತದ ನಾಯಕಿ ಹರ್ಮನ್ ಪ್ರೀತ್ ಕೌರ್ ಸರಣಿ ಶ್ರೇಷ್ಟ ಪ್ರಶ್ತಿಯನ್ನು ತಮ್ಮದಾಗಿಸಿಕೊಂಢರು.
OSCAR-2019
ಹೊಸದಿಲ್ಲಿ: ಹಿಂದೂ ಧರ್ಮದಲ್ಲಿ ಹಿಂದೂ ಪುರುಷ ಅಥವಾ ಹಿಂದೂ ಮಹಿಳೆ ಎಂಬ ಹೆಸರುಗಳು ಇಲ್ಲ. ಹಿಂದೂ ಎಂದರೆ ಹಿಂದೂ ಎಂತಲೇ ಅರ್ಥ ಎಂದು ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ಮಹಿಳೆಯರ ಪ್ರವೇಶಕ್ಕೂ ಅನುಮತಿ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆ ವೇಳೆ ಸರ್ವೋಚ್ಚ ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ದೇಗುಲಗಳಲ್ಲಿ ಆರಾಧನೆ ಮಾಡುವ ಹಕ್ಕನ್ನು ಮಹಿಳೆಯರಿಗೆ ನಿರಾಕರಿಸಿದರೆ ಸಂವಿಧಾನದಲ್ಲಿನ ಸಮಾನತೆಯ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಎಚ್ಚರಿಸಿದೆ. ಆದರೆ ಇದಕ್ಕೆ ತದ್ವಿರುದ್ಧವಾದ ವಾದ ಮಂಡಿಸಿರುವ ಶಬರಿಮಲೆ ಅಯ್ಯಪ್ಪ ದೇಗುಲ ಮಂಡಳಿ ಹಾಗೂ ಕೇರಳ ಸರಕಾರ, ಶತಮಾನಗಳಿಂದಲೂ ಮಹಿಳೆಯರಿಗೆ ಅಯ್ಯಪ್ಪ ದೇಗುಲದಲ್ಲಿ ನಿಷೇಧ ಪಾಲಿಸಿಕೊಂಡು ಬರಲಾಗಿದ್ದು, ಅದನ್ನೇ ಮುಂದುವರಿಸಿಕೊಂಡು ಹೋಗಬೇಕು. ದೇಗುಲದಲ್ಲಿರುವ ಅಯ್ಯಪ್ಪ ಬ್ರಹ್ಮಚಾರಿ. ಮಗುವಿಗೆ ಜನ್ಮನೀಡುವ ಸಾಮರ್ಥ್ಯ ಹೊಂದಿರುವ ಮಹಿಳೆಯರು ದೇಗುಲಕ್ಕೆ ಬಂದರೆ ಅಪವಿತ್ರವಾಗುತ್ತದೆ ಎಂದು ಹೇಳಿವೆ. ಆದರೆ ಈ ವಾದ ಸಂಪ್ರದಾಯ ಹಾಗೂ ಆಚರಣೆ ಆಧರಿತವಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.
OSCAR-2019
ಕೋಲಾರ: ಉದ್ಯೋಗ ಮೀಸಲಾತಿ ಯೋಜನೆಯಡಿ ಸರ್ಕಾರದಿಂದ ಬರುವ ಉಚಿತ ಲ್ಯಾಪ್‌ಟಾಪ್‌ಗ್ಳನ್ನು ವಿದ್ಯಾರ್ಥಿಗಳಾದ ನಿಮಗೆ ಸಂಸ್ಥೆ ವತಿಯಿಂದ ನೀಡಿದ್ದೇವೆ. ಇದನ್ನು ಸಮರ್ಪಕವಾಗಿ ಬಳಸಿಕೊಂಡು ಚೆನ್ನಾಗಿ... ಕೋಲಾರ: ರಾಜ್ಯದಲ್ಲಿ ನನೆಗುದಿಗೆ ಬಿದ್ದಿರುವ ರೈಲ್ವೆ ಯೋಜನೆಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿಗಳು ಕರೆದಿದ್ದ ಸಭೆಯಲ್ಲಿ ಮಾರಿಕುಪ್ಪಂ-ಕುಪ್ಪಂ ರೈಲು ಮಾರ್ಗ ಹಾಗೂ ರೈಲ್ವೆ ಕೋಚ್‌ ಕಾರ್ಖಾನೆಯ... ಕೋಲಾರ: ಪರಿಸರ ಸಂರಕ್ಷಣೆಯ ಜತೆಗೆ ಸ್ವತ್ಛತಾ ಅಭಿಯಾನದ ಮೂಲಕ ಗ್ರಾಮಗಳನ್ನು ಸ್ವತ್ಛವಾಗಿಟ್ಟುಕೊಳ್ಳಲು ಪಣ ತೊಡಬೇಕೆಂದು ವಿದ್ಯಾರ್ಥಿ ಹಾಗೂ ಯುವಜನತೆಗೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ... ಕೋಲಾರ: ನಗರದ ಕನಕನಪಾಳ್ಯದಲ್ಲಿ ಕೈಯಿಂದಲೇ ಮಲದ ಗುಂಡಿ ಸ್ವಚ್ಚ ಮಾಡಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ರಾಜ್ಯ ಮಲ ಸ್ವಚ್ಚತಾ... ಮುಳಬಾಗಿಲು: ತಾಲೂಕಿನ ಕೆ.ಬೈಯಪಲ್ಲಿ ಮತ್ತು ತಾಯಲೂರು ಹೋಬಳಿಗಳ ವಿವಿಧ ಗ್ರಾಮಗಳ ಬಳಿ ಹಲವಾರು ವರ್ಷಗಳ ಹಿಂದೆ ನಿರ್ಮಿಸಿರುವ ತಂಗುದಾಣಗಳು ಶಿಥಿಲಗೊಂಡು ಪುಂಡಪೋಕರಿಗಳ ಅನೈತಿಕ ಚಟುವಟಿಕೆಗಳ... ಮುಳಬಾಗಿಲು: ತಾಲೂಕಿನ ತೊಂಡಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಕೊರತೆಯನ್ನು ನೀಗಿಸ ಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ಮಕ್ಕಳೊಂದಿಗೆ ಸೇರಿ ಶಾಲೆಗೆ ಬೀಗ ಹಾಕಿ...
OSCAR-2019
ಬೀಜಿಂಗ್: ಇದು ಜಗತ್ತಿನಲ್ಲಿಯೇ ಅತೀ ಉದ್ದದ ಸಮುದ್ರ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬರೋಬ್ಬರಿ 55 ಕಿಲೋ ಮೀಟರ್ ಉದ್ದದ ಸೇತುವೆಯಾಗಿದ್ದು, ಎಲ್ಲರ ಹುಬ್ಬೇರಿಸುವಂತೆ...
OSCAR-2019
ಶೀರೂರು ಶ್ರೀಗಳ ಅಸಹಜ ಸಾವಿನ ಬಳಿಕ ಹುಟ್ಟಿಕೊಂಡ ವಿವಾದವನ್ನು ಬ್ರಾಹ್ಮಣರ ಮೇಲಿನ ದಾಳಿಗಳು ಎಂದು ಬಿಂಬಿಸುವ ಪ್ರಯತ್ನ ನಡೆಯುತ್ತಿದೆ. ಈ ವಿವಾದ ಬ್ರಾಹ್ಮಣರ ಸ್ವಯಂ ಕೃತವೋ ಅಥವಾ…
OSCAR-2019
`ನಾನೂ ಅಷ್ಟೇ... ಎಲ್ಲರಂತೆ ಧಾರಾಳವಾಗಿ ಹಣ ಖರ್ಚು ಮಾಡುತ್ತಿದ್ದೆ. ವಾರದ ಕೊನೆಯಲ್ಲಿ ಅನಿವಾರ್ಯವಾಗಿ ಇತರರ ಬಳಿ ಸಾಲಕ್ಕಾಗಿ ಕೈಯೊಡ್ಡಿ ನಿಲ್ಲುತ್ತಿದ್ದೆ. ಕೈತುಂಬಾ ದುಡಿಯುತ್ತಿದ್ದರೂ ಖರ್ಚಿಗೆ ಸಾಲುತ್ತಿರಲಿಲ್ಲ. ಹಣ ಎಲ್ಲಿ ಖರ್ಚಾಯಿತು ಎಂಬುದೂ ಲೆಕ್ಕಕ್ಕೆ ಸಿಗುತ್ತಿರಲಿಲ್ಲ. ವಾರ್ಷಿಕ ಮೀಟಿಂಗ್ ಒಂದರಲ್ಲಿ ಖರ್ಚು ವೆಚ್ಚದ ಪಟ್ಟಿ ಓದುತ್ತಿದ್ದಾಗ ನಾನೂ ಹೀಗೆ ಯಾಕೆ ಮಾಡಬಾರದು ಎಂಬ ಯೋಚನೆ ಹೊಳೆಯಿತು. ಅಂದಿನಿಂದಲೇ, ಅಂದರೆ 1979ರಿಂದಲೇ ಖರ್ಚು ಮಾಡಿದ ಪ್ರತಿ ಪೈಸೆಯನ್ನೂ ಪುಸ್ತಕದಲ್ಲಿ ನಮೂದಿಸುತ್ತಾ ಬಂದೆ. ಮುಂದಿನ ತಿಂಗಳು ಆ ಲೆಕ್ಕಪತ್ರಗಳನ್ನು ಪರಿಶೀಲಿಸಿದಾಗ ಅದೆಷ್ಟೋ ಖರ್ಚುಗಳು ಅನಗತ್ಯ ಎನಿಸುತ್ತಿದ್ದವು. ಅದನ್ನು ಕಡಿಮೆ ಮಾಡಿ ಆ ಮೊತ್ತವನ್ನು ಒಂದಷ್ಟು ಮಂದಿಗೆ ಕೈಲಾದ ಸಹಾಯ ಮಾಡಲು ಬಳಸಿಕೊಂಡೆ. ಆಗ ಸಿಗುತ್ತಿದ್ದ ಆತ್ಮತೃಪ್ತಿಯೇ ಬೇರೆ.~ ಹೀಗೆ ಹೇಳುವ ಪದ್ಮನಾಭನ್ ಅಯ್ಯರ್ ಅವರಿಗೆ ಈಗ 63 ವರ್ಷ. ಚೆನ್ನೈ ಬಿಟ್ಟು ಉದ್ಯಾನನಗರಿಗೆ ಬಂದದ್ದು ಆರು ವರ್ಷಗಳ ಹಿಂದೆ. 33 ವರ್ಷಗಳಲ್ಲಿ ಅವರು ಬಳಸಿದ್ದು 200 ಪುಟಗಳ ಐದು ಪುಸ್ತಕ. ಆ ಪುಸ್ತಕಗಳಲ್ಲಿ ಅಡಕವಾದ ಲೆಕ್ಕದ ಪ್ರಕಾರ ಅಂದಿನಿಂದ ಇಂದಿನವರೆಗೆ ಅವರು ಮಾಡಿರುವ ಖರ್ಚು 3.87 ಕೋಟಿ ರೂಪಾಯಿ. ಆರಂಭದ ಪುಸ್ತಕಗಳು ಜೀರ್ಣಾವಸ್ಥೆ ತಲುಪಿದ್ದರೂ ಅವುಗಳಲ್ಲಿ ಅಕ್ಷರಗಳು ಮಾತ್ರ ಇನ್ನೂ ಸ್ಪಷ್ಟವಾಗಿವೆ. ಅಕ್ಕಿ, ಬೇಳೆ ಕೊಳ್ಳಲು ಖರ್ಚು ಮಾಡಿದ 1 ಪೈಸೆ, 3 ಪೈಸೆಯ ಲೆಕ್ಕಾಚಾರಗಳು ಗತಕಾಲದ ನೆನಪನ್ನು ಬಿಚ್ಚಿಡುತ್ತವೆ. ವರ್ಷದ ಕೊನೆಗೆ ಖರ್ಚುಗಳನ್ನು ಒಟ್ಟು ಸೇರಿಸಿ ಪೈ ಚಾರ್ಟ್ ಮಾಡುತ್ತಾರೆ. ಅವುಗಳಲ್ಲಿ ಅರ್ಧಭಾಗವನ್ನು ಮನೆಯ ಖರ್ಚು ಹಾಗೂ ಆಹಾರ ಪದಾರ್ಥಗಳಿಗೆ ಹಾಕಿದ ಹಣ ಆಕ್ರಮಿಸಿರುತ್ತವೆ. `ನಾನು ಪುಸ್ತಕವನ್ನು ಮೈಕ್ರೋಸಾಫ್ಟ್ ಎಕ್ಸೆಲ್ ರೀತಿಯಲ್ಲಿ ವಿಭಜನೆ ಮಾಡಿಕೊಂಡೆ. ಮನೆ, ಮಕ್ಕಳು, ಪ್ರಯಾಣ, ಆಹಾರ, ಶಿಕ್ಷಣ, ಆರೋಗ್ಯ, ತರಕಾರಿ ಹೀಗೆ ವಿಂಗಡಿಸಿಕೊಂಡು ಆಯಾ ದಿನದ ಖರ್ಚನ್ನು ನಮೂದಿಸುತ್ತಿದ್ದೆ. ವಿದ್ಯುತ್ ಬಿಲ್ಲನ್ನು ಮನೆ ಖರ್ಚಿಗೆ ಸೇರಿದರೆ, ಹಾಲಿನ ಲೆಕ್ಕ ಆಹಾರ ಪದಾರ್ಥಗಳ ಪಟ್ಟಿಯಲ್ಲಿರುತ್ತಿತ್ತು. ಮಡದಿಯೂ ಉದ್ಯೋಗಕ್ಕೆ ಹೋಗುತ್ತಿದ್ದರಿಂದ ಆಕೆಯೂ ಪ್ರತಿನಿತ್ಯದ ಖರ್ಚಿನ ವರದಿ ಒಪ್ಪಿಸುತ್ತಿದ್ದಳು. ಭಾರತೀಯರಿಗೆ ಶೋಕಿ ಹೆಚ್ಚು. ಮನೆಯಲ್ಲಿ ಇಬ್ಬರಿದ್ದರೆ ಅವರಿಗೆ ಮೂರು ಕಾರು ಬೇಕು. ತಿಂಗಳ ಕೊನೆಗೆ ಸಿಗುವ ಆರಂಕಿ ಸಂಬಳದಲ್ಲಿ ಉಳಿತಾಯ ಮಾಡುವ ಕಾಳಜಿ ಅವರಿಗಿಲ್ಲ. ಚೀನಾದಲ್ಲಿ ಎಷ್ಟೇ ಶ್ರೀಮಂತನಾದರೂ ಸೈಕಲ್‌ನಲ್ಲೇ ಓಡಾಡುತ್ತಾನೆ. ಅದು ನಮ್ಮವರಿಗೆ ಪಾಠವಾಗಬೇಕು. ಹೀಗೆ ಬರೆದಿಡುವ ಮೂಲಕವಾದರೂ ಅನಗತ್ಯ ಖರ್ಚಿಗೆ ಕಡಿವಾಣ ಹಾಕಬಹುದು. ಉಳಿತಾಯ ಮಾಡುವ ಯೋಜನೆ ಹಾಕಿಕೊಂಡವರು ಈ ಪದ್ಧತಿ ಅನುಸರಿಸುವುದು ಒಳಿತು~ ಅಂತಾರೆ ಪದ್ಮನಾಭನ್. ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಪದ್ಮನಾಭನ್ ಅವರಿಗೆ ಪೇಂಟಿಂಗ್, ಅಂಗೈ ಮೇಲಿನ ಗೆರೆಗಳನ್ನು ನೋಡಿ ಭವಿಷ್ಯ ಹೇಳುವುದು, ಕಸೂತಿ ಕಲೆಯ ಹವ್ಯಾಸಗಳೂ ಇವೆ. ಪ್ರತಿಯೊಂದಕ್ಕೂ ಲೆಕ್ಕ ಬರೆಯುವ ಕೆಲಸ ಕಿರಿಕಿರಿಯಲ್ಲವೇ, ಸಮಯ ವ್ಯರ್ಥವಾಗುವುದಿಲ್ಲವೇ, ಇದರಿಂದ ಏನು ಸಾಧಿಸಿದಂತಾಗುತ್ತದೆ ಎಂದು ಬಹುತೇಕರು ಅವರನ್ನು ಪ್ರಶ್ನಿಸಿದ್ದಿದೆ. `ಹಳೆಯ ಲೆಕ್ಕಗಳನ್ನು ನೋಡುವಾಗ ಸಿಗುವ ಖುಷಿಯೇ ಬೇರೆ~ ಎನ್ನುವ ಪದ್ಮನಾಭನ್‌ಗೆ ತಮ್ಮ ಈ ಹವ್ಯಾಸವನ್ನು ದಾಖಲೆ ಪುಸ್ತಕಕ್ಕೆ ಸೇರಿಸುವ ಬಯಕೆಯೇನೂ ಇಲ್ಲ. ಬದುಕಿರುವವರೆಗೂ ಲೆಕ್ಕ ಬರೆಯುತ್ತಲೇ ಇರಬೇಕೆಂಬುದು ಅವರ ಇಷ್ಟವಷ್ಟೆ.
OSCAR-2019
ಟೀಂ ಇಂಡಿಯಾ ಟೆಸ್ಟ್ ಪಂದ್ಯದ ಉಪನಾಯಕ ಅಜಿಂಕ್ಯ ರಹಾನೆ ಟ್ವೀಟರ್ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಧನ್ಯವಾದ ಹೇಳಿದ್ದಾರೆ. ಮೋದಿ ಅಜಿಂಕ್ಯ ರಹಾನೆಗೆ ಪತ್ರ ಬರೆದಿದ್ದರು. ಭಾರತದ ಆಟಗಾರನಿಗೆ ಆಮಂತ್ರಣವೊಂದನ್ನು ಕಳುಹಿಸಿದ್ದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ಪತ್ರದಲ್ಲಿ ಸ್ವಚ್ಛತಾ ಹೀ ಸೇವಾ ಅಭಿಯಾನದಲ್ಲಿ ಕೈ ಜೋಡಿಸುವಂತೆ ಕೋರಿದ್ದರು. ರಹಾನೆ ಪ್ರಧಾನ ಮಂತ್ರಿ ಪತ್ರದ ಫೋಟೋವೊಂದನ್ನು ಟ್ವಿಟ್ ಮಾಡಿದ್ದಾರೆ. ಗೌರವಾನ್ವಿತ ನರೇಂದ್ರ ಮೋದಿ, ನಿಮ್ಮ ಈ ಪತ್ರದಿಂದ ನನಗೆ ಖುಷಿಯಾಗಿದೆ. ಸ್ವಚ್ಛತಾ ಹೀ ಸೇವಾ ಅಭಿಯಾನದಲ್ಲಿ ಪಾಲ್ಗೊಳ್ಳುವುದು ನನಗೆ ಗೌರವದ ವಿಷಯವೆಂದು ರಹಾನೆ ಟ್ವಿಟ್ ಮಾಡಿದ್ದಾರೆ. ದೇಶದ ಸ್ವಚ್ಛತೆ ಹಾಗೂ ನೈರ್ಮಲ್ಯ ಕಾಯ್ದುಕೊಳ್ಳಲು ಕೇಂದ್ರ ಸರ್ಕಾರ ಈ ಅಭಿಯಾನ ಶುರುಮಾಡಿದೆ. ಪ್ರಧಾನ ಮಂತ್ರಿ ನೇತೃತ್ವದಲ್ಲಿ ಸ್ವಚ್ಛತಾ ಹೀ ಸೇವಾ ಅಭಿಯಾನ ನಡೆಯುತ್ತಿದೆ. ಸೆಪ್ಟೆಂಬರ್ 15ರಿಂದ ಅಭಿಯಾನ ಶುರುವಾಗಿದ್ದು ಅಕ್ಟೋಬರ್ 2 ಗಾಂಧಿ ಜಯಂತಿಯವರೆಗೆ ಅಭಿಯಾನ ನಡೆಯಲಿದೆ. ಈ ಅಭಿಯಾನದಲ್ಲಿ ಕೈಜೋಡಿಸಲು ಪ್ರಧಾನ ಮಂತ್ರಿ ಭಾರತದ ಗಣ್ಯರಿಗೆ ಪತ್ರ ಬರೆದಿದ್ದಾರೆ. ಮದ್ಯಪಾನ ಮಾಡಿ ವಿಮಾನ ಚಾಲನೆಗೆ ಮುಂದಾಗಿದ್ದ ಇಬ್ಬರು ಪೈಲಟ್ ಗಳನ್ನು ಡಿಜಿಸಿಎ ವಿಮಾನದಿಂದ ಕೆಳಗಿಳಿಸಿದೆಯಲ್ಲದೇ ಅವರ ಪೈಲಟ್ ಪರವಾನಿಗೆಯನ್ನು ತಾತ್ಕಾಲಿಕವಾಗಿ ಅಮಾನತು ಮಾಡಿದೆ. ಮುಂಬೈನಿಂದ ಪ್ಯಾರಿಸ್ ಗೆ ತೆರಳಬೇಕಿದ್ದ Read more… ಇಸ್ಲಾಮಾಬಾದ್: ಪಾಕಿಸ್ತಾನ ಇಂಟರ್ ನ್ಯಾಷನಲ್ ಏರಲೈನ್ಸ್(ಪಿಟಿಐ)ನಲ್ಲಿ ಪೈಲೆಟ್ ಗಳಾಗಿರುವ ಅವಳಿ ಸೋದರಿಯರು ಜಂಟಿಯಾಗಿ ಬೋಯಿಂಗ್ 777 ವಿಮಾನವನ್ನು ಹಾರಿಸಿ ಇತಿಹಾಸ ನಿರ್ಮಿಸಿದ್ದಾರೆ. ಅವಳಿಗಳಾಗಿರುವ ಮರ್ಯಂ ಮಸೂದ್ ಮತ್ತು ಇರಮ್ Read more… ವಾಟ್ಸಾಪ್ ಮೆಸೇಜ್ ಗಳನ್ನು ಎಷ್ಟೋ ಬಾರಿ ಡಿಲೀಟ್ ಮಾಡಲೇಬೇಕಾದ ಅನಿವಾರ್ಯತೆ ಎದುರಾಗುತ್ತಿತ್ತು. ಫೋನ್ ನಲ್ಲಿ ಸ್ಪೇಸ್ ಇಲ್ಲದೇ ಇರೋದ್ರಿಂದ ತೀರಾ ಅಗತ್ಯ ಎನಿಸಿದ ಮೆಸೇಜ್ ಗಳನ್ನು ಕೂಡ ಡಿಲೀಟ್ Read more…
OSCAR-2019